Tag: ವಿವೇಕ್‌ ರಾಮಸ್ವಾಮಿ

  • ಬರಿಗಾಲಲ್ಲಿ ವಿವೇಕ್ ರಾಮಸ್ವಾಮಿ – ಸಾಮಾಜಿಕ ಜಾಲತಾಣದಲ್ಲಿ ವಿವಾದ, ಚರ್ಚೆ

    ಬರಿಗಾಲಲ್ಲಿ ವಿವೇಕ್ ರಾಮಸ್ವಾಮಿ – ಸಾಮಾಜಿಕ ಜಾಲತಾಣದಲ್ಲಿ ವಿವಾದ, ಚರ್ಚೆ

    ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕ ರಾಜಕಾರಣಿ ವಿವೇಕ್ ರಾಮಸ್ವಾಮಿ (Vivek Ramaswamy) ಸಂದರ್ಶನವೊಂದರಲ್ಲಿ ಚಪ್ಪಲಿ (Barefoot) ಇಲ್ಲದೇ ಪಾಲ್ಗೊಂಡಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಹಳೇಯ ಸಂದರ್ಶನವೊಂದರಲ್ಲಿ ವಿವೇಕ್ ರಾಮಸ್ವಾಮಿ ಚಪ್ಪಲಿ, ಸಾಕ್ಸ್ ಹಾಕದೇ ಬರಿಗಾಲಲ್ಲಿ ಕುಳಿತಿರುವ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕ ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ. ವಿವೇಕ್ ರಾಮಸ್ವಾಮಿ ಅಮೆರಿಕಾ ವಿರೋಧಿ, ಮೊಂಡ, ಅಸಭ್ಯಕರ ವ್ಯಕ್ತಿ, ನಾಗರಿಕತೆ ಇಲ್ಲದವನು ಎಂದೆಲ್ಲಾ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಟೀಕೆ ಮಾಡಿದ್ದಾರೆ. ಇದನ್ನೂ ಓದಿ: ವಿಧಾನಸೌಧ ಆವರಣದಲ್ಲಿ ಪುಸ್ತಕ ಮೇಳ ವೀಕ್ಷಿಸಿದ ರಾಜ್ಯಪಾಲರು

    ಆದರೆ ಭಾರತೀಯ ಸಂಸ್ಕೃತಿ ಬಗ್ಗೆ ಅರಿವು ಇರುವವರು ಮಾತ್ರ ವಿವೇಕ್ ರಾಮಸ್ವಾಮಿ ಪರ ಬ್ಯಾಟ್ ಬೀಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಪರ ಬ್ಯಾಟ್ ಬೀಸಿದ ರಮ್ಯಾ

  • ಅಮೆರಿಕ ಅಧ್ಯಕ್ಷೀಯ ರೇಸ್‌ನಿಂದ ಹೊರಗುಳಿದ ಭಾರತೀಯ ಮೂಲದ ವಿವೇಕ್‌ – ಟ್ರಂಪ್‌ಗೆ ಬೆಂಬಲ

    ಅಮೆರಿಕ ಅಧ್ಯಕ್ಷೀಯ ರೇಸ್‌ನಿಂದ ಹೊರಗುಳಿದ ಭಾರತೀಯ ಮೂಲದ ವಿವೇಕ್‌ – ಟ್ರಂಪ್‌ಗೆ ಬೆಂಬಲ

    ನವದೆಹಲಿ: ಭಾರತೀಯ-ಅಮೆರಿಕನ್ ವಾಣಿಜ್ಯೋದ್ಯಮಿ ವಿವೇಕ್ ರಾಮಸ್ವಾಮಿ (Vivek Ramaswamy) ಅವರು ಯುಎಸ್ ಅಧ್ಯಕ್ಷೀಯ (US Presidential Election) ರೇಸ್‌ನಿಂದ ಹೊರಗುಳಿದಿದ್ದಾರೆ. ಇದೇ ವರ್ಷ ಯುಎಸ್‌ ಅಧ್ಯಕ್ಷೀಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

    ಅಯೋವಾ ರಿಪಬ್ಲಿಕನ್ ಸಭೆ ನಂತರ ಡೊನಾಲ್ಡ್ ಟ್ರಂಪ್‌ಗೆ (Donald Trump) ತಮ್ಮ ಬೆಂಬಲ ಘೋಷಿಸಿದ್ದಾರೆ. ರಾಮಸ್ವಾಮಿ ಅವರು ಫೆಬ್ರವರಿ 2023 ರಲ್ಲಿ ಯುಎಸ್‌ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿ ಎನ್ನುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದರು. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು – ಪಾಕಿಸ್ತಾನದಲ್ಲಿ 1 ಮೊಟ್ಟೆಯ ಬೆಲೆ 33 ರೂ. – ಈರುಳ್ಳಿ ಪ್ರತಿ ಕೆಜಿಗೆ 250 ರೂ.

    ತಮ್ಮ ನಿಲುವುಗಳ ಮೂಲಕ ರಿಪಬ್ಲಿಕನ್‌ ಮತದಾರರು ಮತ್ತು ಬೆಂಬಲಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಅವರ ಪ್ರಚಾರ ಕಾರ್ಯತಂತ್ರವು ಮಾಜಿ ಅಧ್ಯಕ್ಷ ಟ್ರಂಪ್ ಅವರ ನೀತಿಯನ್ನು ನಿಕಟವಾಗಿ ಪ್ರತಿಬಿಂಬಿಸುತ್ತದೆ. ಹಿಂದಿನ ಚುನಾವಣೆಗಳಲ್ಲಿ ಟ್ರಂಪ್ ಅವರನ್ನು ಯಶಸ್ಸಿನತ್ತ ಮುನ್ನಡೆಸಿದ್ದ ಸಂಪ್ರದಾಯವಾದಿ ವಲಯದ ಗಮನ ಸೆಳೆಯಲು ರಾಮಸ್ವಾಮಿ ಪ್ರಯತ್ನಿಸಿದ್ದರು.

    ಓಹಿಯೋ ಮೂಲದ ರಾಮಸ್ವಾಮಿ, ಕೇರಳದಿಂದ ವಲಸೆ ಹೋಗಿದ್ದ ಕುಟುಂಬವೊಂದರ ಪುತ್ರ. ಟ್ರಂಪ್ ಅವರ ಖ್ಯಾತಿಯಿಂದ ಹೆಚ್ಚು ಪ್ರಾಬಲ್ಯ ಹೊಂದಿರುವ ರಿಪಬ್ಲಿಕನ್ ಕ್ಷೇತ್ರದಲ್ಲಿ ಅನಿರೀಕ್ಷಿತ ಸ್ಪರ್ಧಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಇದನ್ನೂ ಓದಿ: ಮೇಯರ್‌ ಚುನಾವಣೆ : ಮಾಲ್ಡೀವ್ಸ್‌ ಆಡಳಿತ ಪಕ್ಷಕ್ಕೆ ಹೀನಾಯ ಸೋಲು – ಭಾರತದ ಪರ ಪಕ್ಷಕ್ಕೆ ಭರ್ಜರಿ ಜಯ

    ಅಯೋವಾದಲ್ಲಿ ರಾಮಸ್ವಾಮಿ ಅವರ ವಿರುದ್ಧದ ಅಲೆಯಿದೆ. ಅಯೋವಾದಲ್ಲಿ ಇವರು ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಸುಮಾರು 7.7% ಮತಗಳನ್ನು ಪಡೆದಿದ್ದಾರೆ.

  • ಅಮೆರಿಕ ಹಿಂದೂ ಅಧ್ಯಕ್ಷರನ್ನು ಒಪ್ಪಿಕೊಳ್ಳುತ್ತಾ? – ಪ್ರಶ್ನೆಗೆ ಹಿಂದೂ ಧರ್ಮದ ಮೌಲ್ಯ ತಿಳಿಸಿದ ವಿವೇಕ್‌

    ಅಮೆರಿಕ ಹಿಂದೂ ಅಧ್ಯಕ್ಷರನ್ನು ಒಪ್ಪಿಕೊಳ್ಳುತ್ತಾ? – ಪ್ರಶ್ನೆಗೆ ಹಿಂದೂ ಧರ್ಮದ ಮೌಲ್ಯ ತಿಳಿಸಿದ ವಿವೇಕ್‌

    ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಭಾರತ ಮೂಲದ ವಿವೇಕ್‌ ರಾಮಸ್ವಾಮಿ (Vivek Ramaswamy) ಹಿಂದೂ ಧರ್ಮದ ಸಾರ್ವತ್ರಿಕ ಮೌಲ್ಯಗಳ ಬಗ್ಗೆ ಮಾತನಾಡಿದ್ದಾರೆ.

    ಅಮೆರಿಕದ ಸಿಎನ್‌ಎನ್‌ ಟೌನ್‌ ಹಾಲ್‌ನಲ್ಲಿ ವಿವೇಕ್‌ ಮಾತನಾಡುತ್ತಿದ್ದಾಗ, ಅಮೆರಿಕ (America) ಹಿಂದೂ ಅಧ್ಯಕ್ಷರನ್ನು ಒಪ್ಪಿಕೊಳ್ಳಬಹುದೇ ಎಂಬ ಪ್ರಶ್ನೆ ಕೇಳಿಬಂತು. ಅದಕ್ಕೆ ವಿವೇಕ್‌ ಪ್ರತಿಕ್ರಿಯಿಸಿ, ನನ್ನದು ‘ನಕಲಿ ಮತಾಂತರ’ ಅಲ್ಲ, ನಾನು ಹಿಂದೂ (Hinduism). ರಾಜಕೀಯ ವೃತ್ತಿಜೀವನವನ್ನು ಹೆಚ್ಚಿಸಲು ಸುಳ್ಳು ಹೇಳುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ, ಹಿಂದೂ ಧರ್ಮ ಮತ್ತು ಕ್ರಿಶ್ಚಿಯನ್ ಧರ್ಮ ಒಂದೇ ಸಮಾನ ಮೌಲ್ಯವನ್ನು ಹೇಳುತ್ತವೆ ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ಹಮಾಸ್ ಉಗ್ರರು ಅವಿತುಕೊಳ್ಳುತ್ತಿದ್ದ ಸುರಂಗಗಳಿಗೆ ಸಮುದ್ರದ ನೀರು ಹರಿಸಿದ ಇಸ್ರೇಲ್

    ನಾನು ನಕಲಿ ಮತಾಂತರ ಆಗಬಹುದು. ಆದರೆ ಅದನ್ನು ನಾನು ಮಾಡುವುದಿಲ್ಲ. ನನ್ನ ನಂಬಿಕೆಯ ಬಗ್ಗೆ ನಿಮಗೆ ಹೇಳುತ್ತೇನೆ. ನನ್ನ ಪಾಲನೆ ಸಾಕಷ್ಟು ಸಾಂಪ್ರದಾಯಿಕವಾಗಿತ್ತು. ಮದುವೆಗಳು ಪವಿತ್ರವೆಂದು ನನ್ನ ಪೋಷಕರು ನನಗೆ ಹೇಳುತ್ತಿದ್ದರು. ಕುಟುಂಬಗಳು ಸಮಾಜದ ಮೂಲಾಧಾರವಾಗಿದೆ ಎಂದು ತಿಳಿಸಿದ್ದಾರೆ.

    ದೇವರು ಎಂಬುದು ಸತ್ಯ. ದೇವರ ಹೆಸರನ್ನು ವ್ಯರ್ಥವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಹೆತ್ತವರನ್ನು ಗೌರವಿಸಿ. ಕೊಲ್ಲಬೇಡಿ, ಸುಳ್ಳು ಹೇಳಬೇಡಿ, ಮೋಸ ಮಾಡಬೇಡಿ, ಕದಿಯಬೇಡಿ. ವ್ಯಭಿಚಾರ ಮಾಡಬೇಡಿ, ಆಸೆಪಡಬೇಡ. ನಾವು ಒಂದೇ ಮೌಲ್ಯವನ್ನು ಸಾಮಾನ್ಯವಾಗಿ ಹಂಚಿಕೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಪಾಕ್ ಠಾಣೆ ಮೇಲೆಯೇ ಉಗ್ರರ ದಾಳಿ – 23 ಪೊಲೀಸರ ದುರ್ಮರಣ

    ನನ್ನ ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ, ಪ್ರತಿಯೊಬ್ಬ ವ್ಯಕ್ತಿಯು ಒಂದು ಕಾರಣಕ್ಕಾಗಿ ಇಲ್ಲಿದ್ದಾನೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ದೇವರು ಪ್ರತಿಯೊಬ್ಬರೊಳಗೂ ಇದ್ದಾನೆ. ದೇವರು ನಮ್ಮ ಮೂಲಕ ವಿವಿಧ ರೀತಿಯಲ್ಲಿ ಕೆಲಸ ಮಾಡಿದರೂ, ನಾವು ಎಲ್ಲರೂ ಸಮಾನರು ಎಂದು ಹೇಳಿದ್ದಾರೆ.

    ಅಕ್ರಮ ವಲಸಿಗರಿಗೆ ಜನ್ಮಸಿದ್ಧ ಪೌರತ್ವವನ್ನು ನಿಷೇಧಿಸುವ ಕರೆಯನ್ನು ರಾಮಸ್ವಾಮಿ ಪುನರುಚ್ಚರಿಸಿದ್ದಾರೆ. ಕಾನೂನು ಉಲ್ಲಂಘಿಸುವವರಿಗೆ ನಾವು ಬಹುಮಾನ ನೀಡಬಾರದು ಎಂದು ಪ್ರತಿಪಾದಿಸಿದ್ದಾರೆ. ಇದೇ 2024 ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ವಿವೇಕ್‌ ರಾಮಸ್ವಾಮಿ ಸ್ಪರ್ಧಿಸಲಿದ್ದಾರೆ. ಇದನ್ನೂ ಓದಿ: ಮೋದಿಯನ್ನ ಹೆಸರಿಸಬಹುದು ಅಂತ ಊಹಿಸೋಕು ಸಾಧ್ಯವಿಲ್ಲ – ಹಾಡಿ ಹೊಗಳಿದ ಪುಟಿನ್‌

    1985ರ ಆಗಸ್ಟ್ 9 ರಂದು ಜನಿಸಿದ್ದ ವಿವೇಕ್‌ ರಾಮಸ್ವಾಮಿ ನೈಋತ್ಯ ಓಹಿಯೋದ ಮೂಲದವರು. ಅವರ ತಾಯಿ ಜೆರಿಯಾಟ್ರಿಕ್ ಮನೋವೈದ್ಯರಾಗಿದ್ದರು. ಅವರ ತಂದೆ ಜನರಲ್ ಎಲೆಕ್ಟ್ರಿಕ್‌ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಪೋಷಕರು ಕೇರಳದಿಂದ ಅಮೆರಿಕಗೆ ವಲಸೆ ಹೋಗಿದ್ದರು.

  • ಯುಎಸ್‌ ಅಧ್ಯಕ್ಷೀಯ ಸ್ಥಾನಕ್ಕೆ ಭಾರತೀಯ ಅಮೆರಿಕನ್‌ ಸ್ಪರ್ಧೆ – ಎಲೋನ್‌ ಮಸ್ಕ್‌ ಶ್ಲಾಘನೆ

    ಯುಎಸ್‌ ಅಧ್ಯಕ್ಷೀಯ ಸ್ಥಾನಕ್ಕೆ ಭಾರತೀಯ ಅಮೆರಿಕನ್‌ ಸ್ಪರ್ಧೆ – ಎಲೋನ್‌ ಮಸ್ಕ್‌ ಶ್ಲಾಘನೆ

    ವಾಷಿಂಗ್ಟನ್‌: ಭಾರತೀಯ ಅಮೆರಿಕನ್‌ ಶಾಸಕ ವಿವೇಕ್‌ ರಾಮಸ್ವಾಮಿ (Vivek Ramaswamy) ಅವರು ಅಮೆರಿಕ ಅಧ್ಯಕ್ಷ (US Presidential Candidate) ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ವಿವೇಕ್‌ ಬಗ್ಗೆ ಟ್ವಿಟ್ಟರ್‌ ಮಾಲೀಕ ಎಲೋನ್‌ ಮಸ್ಕ್‌ (Elon Musk) ಶ್ಲಾಘನೆಯ ಮಾತುಗಳನ್ನಾಡಿದ್ದಾರೆ.

    ರಿಪಬ್ಲಿಕನ್ ನಾಯಕ ವಿವೇಕ್‌, ಮಾಜಿ ಫಾಕ್ಸ್ ನ್ಯೂಸ್ ಆ್ಯಂಕರ್ ಟಕರ್ ಕಾರ್ಲ್‌ಸನ್‌ಗೆ ನೀಡಿದ ಸಂದರ್ಶನದ ವೀಡಿಯೋವನ್ನು ಎಲೋನ್‌ ಮಸ್ಕ್‌ ತಮ್ಮ ಟ್ವೀಟ್‌ ಖಾತೆಯಲ್ಲಿ (ಎಕ್ಸ್‌) ಹಂಚಿಕೊಂಡಿದ್ದಾರೆ. ‘ಅವರು (ವಿವೇಕ್‌) ಅತ್ಯಂತ ಭರವಸೆಯ ಅಭ್ಯರ್ಥಿ’ ಎಂದು ಮಸ್ಕ್ ಹೇಳಿದ್ದಾರೆ. ಇದನ್ನೂ ಓದಿ: 21 ಚರ್ಚ್‌ಗಳನ್ನು ಧ್ವಂಸಗೊಳಿಸಿದ 600 ಜನರ ಮೇಲೆ ಕೇಸ್ – 135 ಆರೋಪಿಗಳನ್ನು ಬಂಧಿಸಿದ ಪಾಕ್ ಪೊಲೀಸರು

    ಕೇರಳದಿಂದ ಅಮೆರಿಕಗೆ ವಲಸೆ ಬಂದಿದ್ದ ಭಾರತೀಯ ದಂಪತಿ ಪುತ್ರ ವಿವೇಕ್‌ ರಾಮಸ್ವಾಮಿ. ಹಾರ್ವರ್ಡ್ ಮತ್ತು ಯೇಲ್ ವಿಶ್ವವಿದ್ಯಾನಿಲಯಗಳಿಂದ ಪದವಿ ಪಡೆದ ಟೆಕ್-ಉದ್ಯಮಿಯಾಗಿದ್ದರು.

    ವಿವೇಕ್‌ ರಾಮಸ್ವಾಮಿ, ನಿಕ್ಕಿ ಹ್ಯಾಲಿ ಮತ್ತು ಹರ್ಷವರ್ಧನ್ ಸಿಂಗ್ ಅವರು ಜನವರಿಯಲ್ಲಿ ನಡೆಯಲಿರುವ ಯುಎಸ್‌ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಭಾರತೀಯ ಅಮೆರಿಕನ್‌ ನಾಯಕರು. ಇದನ್ನೂ ಓದಿ: ಲ್ಯಾಂಡಿಂಗ್ ವೇಳೆ ಲಘು ವಿಮಾನ ಪತನ – 10 ಮಂದಿ ದುರ್ಮರಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]