Tag: ವಿವೇಕ್ ಓಬೇರಾಯ್

  • ಎಕ್ಸಿಟ್ ಪೋಲ್ ಟ್ರೋಲ್ ಫೋಟೋ ಹಂಚಿಕೊಂಡು ‘ಐಶ್’ ನೆನೆದ ವಿವೇಕ್ ಒಬೇರಾಯ್

    ಎಕ್ಸಿಟ್ ಪೋಲ್ ಟ್ರೋಲ್ ಫೋಟೋ ಹಂಚಿಕೊಂಡು ‘ಐಶ್’ ನೆನೆದ ವಿವೇಕ್ ಒಬೇರಾಯ್

    ಮುಂಬೈ: ಭಾನುವಾರ ಲೋಕಸಮರದ ಚುನಾವಣೋತ್ತರ ಸಮೀಕ್ಷೆಗಳು ಹೊರ ಬಂದಿವೆ. ಎಕ್ಸಿಟ್ ಪೋಲ್ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್, ಮೀಮ್ಸ್ ಗಳು ಸಹ ಹರಿದಾಡುತ್ತಿವೆ. ಈ ಟ್ರೋಲ್ ಗಳ ಮೂಲಕವೇ ರಾಜಕೀಯ ನಾಯಕರು ಒಬ್ಬರನ್ನೊಬ್ಬರ ಕಾಲೆಳೆಯುತ್ತಿದ್ದಾರೆ. ಈ ನಡುವೆ ಎಕ್ಸಿಟ್ ಪೋಲ್ ಟ್ರೋಲ್ ತನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ನಟ ವಿವೇಕ್ ಒಬೇರಾಯ್ ತಮ್ಮ ಮಾಜಿ ಗೆಳತಿ ಐಶ್ವರ್ಯಾ ರೈ ನೆನೆಪು ಮಾಡಿಕೊಂಡಿದ್ದಾರೆ.

    ಮಾಜಿ ವಿಶ್ವ ಸುಂದರಿ, ಬಿಗ್ ಬಿ ಮನೆಯ ಮುದ್ದು ಸೊಸೆ ಐಶ್ವರ್ಯಾ ರೈ ಹೆಸರು ಹಲವು ನಟರೊಂದಿಗೆ ತಳಕು ಹಾಕಿಕೊಂಡಿತ್ತು. ಯಶಸ್ವಿ ಸಿನಿಮಾಗಳನ್ನು ನೀಡುತ್ತಿದ್ದ ಐಶ್ವರ್ಯಾ ರೈ ಹೆಸರು ಮೊದಲಿಗೆ ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಕೇಳಿ ಬಂದಿತ್ತು. ತದನಂತರ ವಿವೇಕ್ ಒಬೇರಾಯ್ ಜೊತೆಗೆ ಕೇಳಿ ಬಂದಿತ್ತು. ಎಲ್ಲ ಗಾಸಿಪ್ ಗಳ ನಡುವೆ ಅಭಿಷೇಕ್ ಬಚ್ಚನ್ ರನ್ನು ವರಿಸುವ ಮೂಲಕ ಎಲ್ಲ ಅಂತೆ ಕಂತೆಗಳಿಗೆ ತೆರೆ ಎಳೆದಿದ್ದರು.

    ಸಲ್ಮಾನ್ ಮತ್ತು ಐಶ್ವರ್ಯ ಜೊತೆಗಿನ ಫೋಟೋ ಹಾಕಿ Opinion Poll, ವಿವೇಕ್-ಐಶ್ವರ್ಯಾ ಫೋಟೋಗೆ Exit Poll ಕೊನೆಗೆ ಅಭಿಷೇಕ್ ಬಚ್ಚನ್, ಐಶ್ವರ್ಯ ಮತ್ತು ಆರಾಧ್ಯ ಜೊತೆಗಿನ ಫೋಟೋಗೆ Result ಅಂತಾ ಬರೆಯಲಾಗಿದೆ. ಈ ಮೂರು ಫೋಟೋಗಳನ್ನು ಸೇರಿಸಿರುವ ಟ್ರೋಲ್ ವಿವೇಕ್ ಹಂಚಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    https://twitter.com/vivekoberoi/status/1130380916142907392

  • ಮೋದಿ ಗೆಲುವು ನಿಶ್ಚಿತ: ವಿವೇಕ್ ಓಬೇರಾಯ್

    ಮೋದಿ ಗೆಲುವು ನಿಶ್ಚಿತ: ವಿವೇಕ್ ಓಬೇರಾಯ್

    ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೆಲುವು ನಿಶ್ಚಿತ ಎಂದು ನಟ ವಿವೇಕ್ ಓಬೇರಾಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ದೆಹಲಿಯ ಇಂಡಿಯಾ ಗೇಟ್ ಬಳಿಯ ‘ಏಳು ಕ್ಷೇತ್ರ ಮೋದಿಗೆ ನೀಡಿ’ ಎಂಬ ಬಿಜೆಪಿ ಅಭಿಯಾನದಲ್ಲಿ ವಿವೇಕ್ ಓಬೇರಾಯ್ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ವಿವೇಕ್, ಭಾರತವನ್ನು ಆಳಿದ ಬಹುತೇಕ ರಾಜರು ಅಥವಾ ವಿದೇಶಿಗರು ನಮ್ಮ ದೇಶವನ್ನು ದೋಚುವ ಕೆಲಸ ಮಾಡಿದ್ದಾರೆ. ಇದೀಗ ದೇಶದ ಪ್ರತಿಯೊಬ್ಬ ನಾಗರಿಕರನು ಚೌಕಿದಾರ್ ಆಗಿದ್ದಾರೆ. ಮತ್ತೊಮ್ಮೆ ದೇಶವನ್ನು ಲೂಟಿ ಮಾಡುವವರ ಕೈಗೆ ನೀಡಲ್ಲ. ಮೋದಿ ಅವರ ಗೆಲುವು ನಿಶ್ಚಿತವಾಗಿದ್ದು, ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದರು.

    ಪಿಎಂ ನರೇಂದ್ರ ಮೋದಿ ಚಿತ್ರದಲ್ಲಿ ಪ್ರಧಾನಿ ಪಾತ್ರದಲ್ಲಿ ವಿವೇಕ್ ಓಬೇರಾಯ್ ನಟಿಸಿದ್ದಾರೆ. ಏಪ್ರಿಲ್ 11ರಂದು ಸಿನಿಮಾ ಬಿಡುಗಡೆಯಾಗಲು ಸಿದ್ಧಗೊಂಡಿತ್ತು. ಆದರೆ ಚುನಾವಣಾ ಆಯೋಗ ಸಿನಿಮಾ ಬಿಡುಗಡೆ ತಡೆ ನೀಡಿತ್ತು. ಚುನಾವಣಾ ಫಲಿತಾಂಶ ಮರುದಿನ ಮೇ 24ರಂದು ಚಿತ್ರ ಬಿಡುಗಡೆಯಾಗಲಿದೆ.

  • ಮೋದಿ ಸಿನ್ಮಾ ಬಿಡುಗಡೆಗೆ ವಿರೋಧ

    ಮೋದಿ ಸಿನ್ಮಾ ಬಿಡುಗಡೆಗೆ ವಿರೋಧ

    ಮುಂಬೈ: ಪ್ರಧಾನಿ ನರೇಂದ್ರ ಮೋದಿ ಜೀವನಾಧರಿತ ಸಿನಿಮಾ ಬಿಡುಗಡೆಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‍ಎಸ್) ವಿರೋಧ ವ್ಯಕ್ತಪಡಿಸಿದೆ. ಏಪ್ರಿಲ್-ಮೇ ತಿಂಗಳಲ್ಲಿ ದೇಶದಲ್ಲಿ ಚುನಾವಣೆ ನಡೆಯಲಿದ್ದು, ಚಿತ್ರ ಬಿಡುಗಡೆಯಾದ್ರೆ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ ಎಂದು ಹೇಳಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಎಂಎನ್‍ಎಸ್ ನಾಯಕಿ ಶಾಲಿನಿ ಠಾಕ್ರೆ, ಬಿಜೆಪಿ ತನ್ನ ಸರ್ಕಾರದ ಯೋಜನೆಗಳನ್ನು ಪ್ರಚಾರಗೊಳಿಸಲು ಸಿನಿಮಾಗಳನ್ನು ಬಳಸಿಕೊಳ್ಳುತ್ತಿದೆ. ಈ ಮೊದಲು ‘ಟಾಯ್ಲೆಟ್-ಏಕ್ ಪ್ರೇಮ್ ಕಥಾ’ ಮತ್ತು ‘ಪ್ಯಾಡ್ ಮ್ಯಾನ್’ ಸಿನಿಮಾಗಳಿಗೆ ಸರ್ಕಾರವೇ ಪ್ರಾಯೋಜಕತ್ವ ಮಾಡಿತ್ತು. ಒಂದು ವರ್ಷದ ಅವಧಿಯಲ್ಲಿಯೇ ಮತ್ತೊಂದು ಸಿನಿಮಾವನ್ನು ತೆರೆಯ ಮೇಲೆ ಬಿಜೆಪಿ ತರುತ್ತಿದೆ. ಆದ್ರೆ ನಮ್ಮ ಪಕ್ಷ ಸಿನಿಮಾ ಬಿಡುಗಡೆಗೆ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.

    ಬಿಜೆಪಿ ನಾಯಕರು ಸಿನಿಮಾಗಳ ಮೂಲಕ ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತಿದ್ದಾರೆ. ಸಿನಿಮಾ ನಿರ್ಮಾಪಕರು ಕಥೆ, ಸಂಭಾಷಣೆ ಜಾವೇದ್ ಅಖ್ತರ್ ಮತ್ತು ಸಮೀರ್ ಲೇಖನಿಯಲ್ಲಿ ಮೂಡಿ ಬಂದಿದೆ ಎಂದು ಹೇಳುತ್ತಾರೆ. ಇಬ್ಬರು ಸಾಹಿತ್ಯಗಾರರು ಮೋದಿ ಜೀವನಾಧರಿತ ಸಿನಿಮಾಗೂ ಮತ್ತು ನಮಗೂ ಸಂಬಂಧವಿಲ್ಲ ಎಂದು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಬಿಜೆಪಿ ಈ ರೀತಿ ಪ್ರಚಾರಕ್ಕಾಗಿ ಕೆಳಮಟ್ಟದ ರಾಜಕಾರಣವನ್ನು ಬಿಡಬೇಕೆಂದು ಎಂದು ಮಹಾರಾಷ್ಟ್ರ ನವನಿರ್ಮಾಣ ಚಿತ್ರಪಥ್ ಕರ್ಮಚಾರಿ ಸೇನೆ ಅಧ್ಯಕ್ಷ ಅಮೇ ಕೋಪ್ಕರ್ ಆಗ್ರಹಿಸಿದ್ದಾರೆ.

    ಮೋದಿ ಬಯೋಪಿಕ್ ಸಿನಿಮಾದಲ್ಲಿ ಪ್ರಧಾನಿಗಳ ಪಾತ್ರದಲ್ಲಿ ನಟ ವಿವೇಕ್ ಓಬೇರಾಯ್ ನಟಿಸಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಏಪ್ರಿಲ್ 12ರಂದು ಒಟ್ಟು 23 ಭಾಷೆಗಳಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಬೊಮ್ಮನ್ ಇರಾನಿ, ಮನೋಜ್ ಜೋಶಿ, ಬರ್ಖಾ ಬಿಷ್ತ, ಜರೀನಾ ವಹಾಬ್, ದರ್ಶನ್ ರಾವಲ್, ಅಕ್ಷತಾ ಆರ್.ಸಲುಜಾ, ಅಂಜನಾ ಶ್ರೀವಾತ್ಸವ, ರಾಜೇಂದ್ರ ಗುಪ್ತಾ ಮತ್ತು ಯಥೀನ್ ಸೇರಿದಂತೆ ದೊಡ್ಡ ತಾರಾಗಣವನ್ನೇ ಸಿನಿಮಾ ಒಳಗೊಂಡಿದೆ.

  • ಮೋದಿ ಬಯೋಪಿಕ್ ಸಿನ್ಮಾ ಶೂಟಿಂಗ್ ನಲ್ಲಿ ಗಾಯಗೊಂಡ ವಿವೇಕ್ ಓಬೇರಾಯ್

    ಮೋದಿ ಬಯೋಪಿಕ್ ಸಿನ್ಮಾ ಶೂಟಿಂಗ್ ನಲ್ಲಿ ಗಾಯಗೊಂಡ ವಿವೇಕ್ ಓಬೇರಾಯ್

    ಮುಂಬೈ: ಪ್ರಧಾನಿ ನರೇಂದ್ರ ಮೋದಿ ಜೀವನಾಧರಿತ ಸಿನಿಮಾ ಶೂಟಿಂಗ್ ವೇಳೆ ನಟ ವಿವೇಕ್ ಓಬೇರಾಯ್ ಗಾಯಗೊಂಡಿದ್ದಾರೆ.

    ಉತ್ತರಾಖಂಡನ ಉತ್ತರಕಾಶಿ ಜಿಲ್ಲೆಯ ಹರ್ಷಿಲ್ ಕಣಿವೆಯಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಶನಿವಾರದ ಚಿತ್ರೀಕರಣದ ವೇಳೆ ವಿವೇಕ್ ಓಬೇರಾಯ್ ತಮ್ಮ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಕಾಲಿಗೆ ಮರದ ಚೂಪಾದ ಕಟ್ಟಿಗೆ ಚುಚ್ಚಿದ್ದರಿಂದ ಹೊಲಿಗೆ ಹಾಕಲಾಗಿದ್ದು, ವಿವೇಕ್ ಆರೋಗ್ಯವಾಗಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

    ಹರ್ಷಿಲ್ ಪ್ರದೇಶದಲ್ಲಿ ಮೋದಿಯವರ ರಾಜಕೀಯ ಮುನ್ನದ ದಿನಗಳನ್ನು ಚಿತ್ರೀಕರಿಸಲಾಗಿತ್ತು. ಗಂಗಾ ಘಾಟ್ ಬಳಿಯ ಧರಲಿ ಎಂಬ ಗ್ರಾಮದಲ್ಲಿ ಹಿಮದ ಮೇಲೆ ಮೋದಿ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಕೆಲ ದೃಶ್ಯಗಳ ಚಿತ್ರೀಕರಣ ನಡೆದಿತ್ತು. ಬರಿಗಾಲಿನಲ್ಲಿ ನಡೆಯುತ್ತಿದ್ದ ವೇಳೆ ವಿವೇಕ್ ಅವರಿಗೆ ಕಟ್ಟಿಗೆ ತುಂಡು ಚುಚ್ಚಿದೆ.

    ಓಮುಂಗ್ ಕುಮಾರ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಪ್ರಧಾನಿಗಳ ಪಾತ್ರದಲ್ಲಿ ವಿವೇಕ್ ಓಬೇರಾಯ್ ನಟಿಸುತ್ತಿದ್ದಾರೆ. ಮೇರಿಕೋಮ್ ಮತ್ತು ಸರ್ಬಜಿತ್ ಸೂಪರ್ ಹಿಟ್ ಸಿನಿಮಾಗಳನ್ನು ಓಮುಂಗ್ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv