Tag: ವಿವೇಕ್ ಒಬೇರಾಯ್

  • ಅಭಿನಂದನ್ ಕುರಿತು ಸಿನಿಮಾ ತಯಾರಿಯಲ್ಲಿ ವಿವೇಕ್ ಒಬೇರಾಯ್-ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್

    ಅಭಿನಂದನ್ ಕುರಿತು ಸಿನಿಮಾ ತಯಾರಿಯಲ್ಲಿ ವಿವೇಕ್ ಒಬೇರಾಯ್-ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್

    ಮುಂಬೈ: ನಟ ವಿವೇಕ್ ಒಬೇರಾಯ್ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಕುರಿತ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಸಂಬಂಧ ಶುಕ್ರವಾರ ಬಾಲಿವುಡ್ ಸಿನಿಮಾ ವಿಮರ್ಶಕ ತರಣ್ ಆದರ್ಶ್ ಟ್ವೀಟ್ ಮೂಲಕ ವಿಷಯವನ್ನು ರಿವೀಲ್ ಮಾಡಿದ್ದರು. ಸಿನಿಮಾ ವಿಷಯ ಹೊರ ಬೀಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಜನರು ವಿವೇಕ್ ಒಬೇರಾಯ್ ಅವರನ್ನು ಟ್ರೋಲ್ ಮಾಡಲಾರಂಭಿಸಿದ್ದಾರೆ.

    ವಿವೇಕ್ ಒಬೇರಾಯ್ ಬಾಲಕೋಟ್ ಏರ್ ಸ್ಟ್ರೈಕ್ ಕಥೆಯಾದರಿತ ಸಿನಿಮಾದಲ್ಲಿ ನಟಿಸುತ್ತಿದ್ದು, ‘ಬಾಲಕೋಟ್: ದಿ ಟ್ರ್ಯೂ ಸ್ಟೋರಿ’ ಎಂದು ಟೈಟಲ್ ಅಂತಿಮಗೊಳಿಸಲಾಗಿದೆ. ಜಮ್ಮು, ಕಾಶ್ಮೀರ, ದೆಹಲಿ ಮತ್ತು ಆಗ್ರಾದಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಈ ವರ್ಷದ ಅಂತಿಮದಲ್ಲಿ ಸಿನಿಮಾ ಶೂಟಿಂಗ್ ಆರಂಭಗೊಳ್ಳಲಿದೆ. ಹಿಂದಿ, ತಮಿಳು ಮತ್ತು ತೆಲಗು ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ತರಣ್ ಆದರ್ಶ್ ಟ್ವೀಟ್ ಮೂಲಕ ತಿಳಿಸಿದ್ದರು.

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೀವನಾಧರಿತ ಸಿನಿಮಾದಲ್ಲಿ ವಿವೇಕ್ ಒಬೇರಾಯ್ ಪ್ರಧಾನಿಗಳ ಪಾತ್ರದಲ್ಲಿ ನಟಿಸಿದ್ದರು. ಆದ್ರೆ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ಸದ್ದು ಮಾಡಲು ವಿಫಲವಾಗಿತ್ತು. ಮೋದಿಯವರ ಪಾತ್ರಕ್ಕೆ ಜೀವ ತುಂಬುವಲ್ಲಿ ವಿವೇಕ್ ಒಬೇರಾಯ್ ಯಶಸ್ವಿಯಾಗಿರಲಿಲ್ಲ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದ್ದವು. ಇದೀಗ ವಿಂಗ್ ಕಮಾಂಡರ್ ಪಾತ್ರದಲ್ಲಿ ಅಭಿನಂದನ್ ಪಾತ್ರದಲ್ಲಿ ವಿವೇಕ್ ಒಬೇರಾಯ್ ನಟಿಸಲಿದ್ದಾರೆ ಎನ್ನಲಾಗುತ್ತಿದ್ದು, ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.

    ಸಿನಿಮಾ ಕುರಿತು ಪ್ರತಿಕ್ರಿಯಿಸಿರುವ ವಿವೇಕ್ ಒಬೇರಾಯ್, ಓರ್ವ ಭಾರತೀಯ ಮತ್ತು ದೇಶಭಕ್ತನಾಗಿ ಹಾಗೂ ಸಿನಿಮಾ ಉದ್ಯಮದ ಸದಸ್ಯನಾಗಿ ಈ ರೀತಿಯ ಸಿನಿಮಾ ಮಾಡಲು ನನಗೆ ಹೆಮ್ಮೆಯಾಗುತ್ತಿದೆ. ನಮ್ಮ ಸೇನೆಯ ಶಕ್ತಿ ಮತ್ತು ಸಾಮಥ್ರ್ಯ ಬಿಂಬಿಸುವ ಸಿನಿಮಾ ಇದಾಗಿದೆ. ಅಭಿನಂದನ್ ಸೇರಿದಂತೆ ಭಾರತೀಯ ವಾಯುಸೇನೆಯ ಅಧಿಕಾರಿಗಳ ಪಾತ್ರಗಳು ಸಿನಿಮಾದ ಲೀಡ್ ನಲ್ಲಿ ಇರಲಿವೆ ಎಂದು ಹೇಳಿದ್ದಾರೆ.

    https://twitter.com/sagarcasm/status/1164791354582417409

    ಬಾಲಕೋಟ್ ಏರ್ ಸ್ಟ್ರೈಕ್ ಭಾರತೀಯ ವಾಯು ಸೇನೆ ನಡೆಸಿದ ದಾಳಿಯಲ್ಲಿ ಒಂದಾಗಿದೆ. ಪುಲ್ವಾಮಾ ದಾಳಿಯಿಂದ ಏರ್ ಸ್ಟ್ರೈಕ್ ವರೆಗಿನ ಎಲ್ಲ ವಿಷಯಗಳ ಬಗ್ಗೆ ಓದುತ್ತಾ ಬಂದಿದ್ದೇನೆ. ಈ ಸಿನಿಮಾ ಮೂಲಕ ಏರ್ ಸ್ಟ್ರೈಕ್ ದಾಳಿಯ ಸಂಪೂರ್ಣ ಮಾಹಿತಿಯನ್ನು ಚಿತ್ರದಲ್ಲಿ ನೀಡಲು ಪ್ರಯತ್ನಿಸಲಾಗುಗುವುದು ಎಂದು ವಿವೇಕ್ ತಿಳಿಸಿದ್ದಾರೆ.

    ಸಿನಿಮಾ ಘೋಷಣೆ ಬಳಿಕ ನೆಟ್ಟಿಗರು, ಚಿತ್ರದ ನಿರ್ದೇಶಕರು ವಿವೇಕ್ ಬದಲಾಗಿ ಅಕ್ಷಯ್ ಕುಮಾರ್ ಅವರನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು ಎಂದು ಸಲಹೆ ನೀಡಿದ್ದಾರೆ. ಕೆಲವರು ಅಜಯ್ ದೇವಗನ್, ಹೃತಿಕ್ ರೋಶನ್ ಅವರ ಹೆಸರನ್ನು ಸೂಚಿಸಿದ್ದಾರೆ. ಈ ಹಿಂದೆ ಉರಿ ಚಿತ್ರದಲ್ಲಿ ವಿಕ್ಕಿ ಕೌಶಲ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದರು ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    https://twitter.com/ParijatSingh23/status/1164784448690241537

  • ವಿಶ್ವಕಪ್ ಬಗ್ಗೆ ಪೋಸ್ಟ್ ಹಾಕಿ ಟ್ರೋಲ್ ಆದ ವಿವೇಕ್

    ವಿಶ್ವಕಪ್ ಬಗ್ಗೆ ಪೋಸ್ಟ್ ಹಾಕಿ ಟ್ರೋಲ್ ಆದ ವಿವೇಕ್

    ಮುಂಬೈ: ಬಾಲಿವುಡ್ ನಟ ವಿವೇಕ್ ಒಬೇರಾಯ್ ವಿಶ್ವಕಪ್ ಬಗ್ಗೆ ಜಿಫ್ ವಿಡಿಯೋ ಟ್ವೀಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಾರೆ.

    ಭಾರತ ತಂಡ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ವಿರುದ್ಧ ಸೋಲು ಕಂಡಿತ್ತು. ಈ ಬಗ್ಗೆ ವಿವೇಕ್, ಜಿಫ್ ವಿಡಿಯೋವನ್ನು ಟ್ವೀಟ್ ಮಾಡಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

    ವಿವೇಕ್ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ನೀಲಿ ಬಣ್ಣದ ಟೀ-ಶರ್ಟ್ ಧರಿಸಿ ಬರುತ್ತಿದ್ದ ವ್ಯಕ್ತಿಯನ್ನು ಯುವತಿಯೊಬ್ಬಳು ತಬ್ಬಿಕೊಳ್ಳುವ ರೀತಿ ಆತನ ಮುಂದೆ ಹೋಗುತ್ತಾಳೆ. ಬಳಿಕ ಆ ವ್ಯಕ್ತಿ ಹಿಂದೆ ಬರುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಯುವತಿ ತಬ್ಬಿಕೊಂಡಿದ್ದಾಳೆ. ಈ ವಿಡಿಯೋ ಹಾಕಿ ವಿವೇಕ್ ಅದಕ್ಕೆ, “ವಿಶ್ವಕಪ್‍ನ ಸೆಮಿಫೈನಲ್‍ನಲ್ಲಿ ಭಾರತದ ಅಭಿಮಾನಿಗಳಿಗೆ ಇದೇ ರೀತಿ ಆಗಿದೆ” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

    ವಿವೇಕ್ ಅವರ ಟ್ವೀಟ್ ನೋಡಿ ಕೆಲವರು ‘ನೀವು ನಿಮ್ಮ ವೃತ್ತಿಜೀವನದ ಆಕಾಂಕ್ಷೆಗಳ ಹಿಂದೆ ಹೊರಟಿದ್ದಾಗ ನಿಮಗೂ ಹೀಗೆ ಆಗಿದೆ. ನಿಮ್ಮ ಯಾವುದಾದರೂ ಸಿನಿಮಾ 50 ಕೋಟಿ ರೂ. ದಾಟಿದ್ದರೆ ಹೇಳಿ ನಾನು ಅದನ್ನು ವೀಕ್ಷಿಸಲು ಇಷ್ಟಪಡುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೆ ಕೆಲವರು ನಮ್ಮ ಭಾರತ ತಂಡ ಎಲ್ಲ ತಂಡದ ವಿರುದ್ಧ ಗೆಲುವು ಸಾಧಿಸಿ ಸೆಮಿ ಫೈನಲ್ ತಲುಪಿದೆ. ನಿಮ್ಮ ತರಹ ಫ್ಲಾಪ್ ಸಿನಿಮಾಗಳನ್ನು ಮಾಡಿಲ್ಲ. ಭಾರತ ತಂಡವನ್ನು ಗೌರವಿಸಿ ಎಂದು ಕಾಮೆಂಟ್ ಮಾಡಿದ್ದಾರೆ.

    ಈ ಹಿಂದೆ ವಿವೇಕ್ ಸಲ್ಮಾನ್ ಮತ್ತು ಐಶ್ವರ್ಯ ಜೊತೆಗಿನ ಫೋಟೋ ಹಾಕಿ Opinion Poll, ವಿವೇಕ್-ಐಶ್ವರ್ಯಾ ಫೋಟೋಗೆ Exit Poll ಕೊನೆಗೆ ಅಭಿಷೇಕ್ ಬಚ್ಚನ್, ಐಶ್ವರ್ಯ ಮತ್ತು ಆರಾಧ್ಯ ಜೊತೆಗಿನ ಫೋಟೋಗೆ Result ಎಂದು ಬರೆಯಲಾಗಿದೆ. ಈ ಮೂರು ಫೋಟೋಗಳನ್ನು ಸೇರಿಸಿರುವ ಟ್ರೋಲ್ ವಿವೇಕ್ ಹಂಚಿಕೊಂಡಿದ್ದರು.

  • ವಿವೇಕ್ ಒಬೇರಾಯ್ ಟ್ವೀಟ್‍ಗೆ ಸಲ್ಮಾನ್ ಮೊದಲ ಪ್ರತಿಕ್ರಿಯೆ

    ವಿವೇಕ್ ಒಬೇರಾಯ್ ಟ್ವೀಟ್‍ಗೆ ಸಲ್ಮಾನ್ ಮೊದಲ ಪ್ರತಿಕ್ರಿಯೆ

    ಮುಂಬೈ: ನಟ ವಿವೇಕ್ ಒಬೇರಾಯ್ ವಿವಾದಾತ್ಮಕ ಟ್ವೀಟ್‍ಗೆ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ತಮ್ಮ ಮೊದಲ ಪ್ರತಿಕ್ರಿಯೆಯನ್ನ ನೀಡಿದ್ದಾರೆ.

    ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಲ್ಮಾನ್ ಖಾನ್ ಅವರಿಗೆ ವಿವಾದಾತ್ಮಕ ಟ್ವೀಟ್ ಕುರಿತಾಗಿ ಮಾಧ್ಯಮಗಳು ಪ್ರಶ್ನೆ ಮಾಡಿದ್ದವು. ನನಗೆ ಬಹಳ ಕೆಲಸಗಳಿವೆ. ನಾನು ಕೆಲಸ ಮಾಡಲೇ, ಮೀಮ್ಸ್ ಗಳನ್ನು ನೋಡುತ್ತಾ ಕುಳಿತುಕೊಳ್ಳಲೇ ಎಂದು ಕಿಡಿಕಾರಿದ್ದಾರೆ.

    ಭಾರತ್ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದ ಸಲ್ಮಾನ್ ಖಾನ್, ಸಾಮಾಜಿಕ ಜಾಲತಾಣಗಳತ್ತ ನಾನು ಹೆಚ್ಚು ಗಮನ ಕೊಡಲ್ಲ. ಮೊದಲಿನಂತೆ ಸೋಶಿಯಲ್ ಮೀಡಿಯಾದಲ್ಲಿಯೂ ಹೆಚ್ಚು ಆ್ಯಕ್ಟೀವ್ ಆಗಿರಲ್ಲ. ಕಾಲಹರಣಕ್ಕಾಗಿ ಅನಾವಶ್ಯಕ ಟ್ವೀಟ್‍ಗಳನ್ನು ಮಾಡಲ್ಲ. ನನಗೆ ನನ್ನದೇ ಆದ ಕೆಲಸಗಳಿವೆ. ಕೆಲಸದತ್ತ ಗಮನ ನೀಡದೇ ಯಾರೋ ಮಾಡಿದ ಟ್ವೀಟ್ ಮತ್ತು ಮೀಮ್ಸ್ ನೋಡುತ್ತಾ ಸಮಯ ವ್ಯರ್ಥ ಮಾಡಲ್ಲ ಎಂದು ಖಡಕ್ ಮಾತನ್ನು ಆಡಿದ್ದಾರೆ.

    ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳು ಹೊರ ಬಂದ ಮರುದಿನ ವಿವೇಕ್ ಒಬೇರಾಯ್, ನಟಿ ಐಶ್ವರ್ಯಾ ರೈ ವೈವಾಹಿಕ ಪೂರ್ವ ಖಾಸಗಿ ಜೀವನವನ್ನು ಬಿಂಬಿಸುವ ಮೀಮ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಎಕ್ಸಿಟ್ ಪೋಲ್ ಮೀಮ್ ವಿವಾದಕ್ಕೆ ಕಾರಣವಾಗುತ್ತಲೇ ಸ್ಪಷ್ಟನೆ ನೀಡಿದ ವಿವೇಕ್ ಒಬೇರಾಯ್ ಕ್ಷಮೆ ಕೇಳಿ ಟ್ವೀಟ್ ಡಿಲೀಟ್ ಮಾಡಿದ್ದರು. ಈ ಮೀಮ್ ಟ್ವೀಟ್ ನಲ್ಲಿ ಐಶ್ವರ್ಯಾ ಮತ್ತು ಸಲ್ಮಾನ್ ಖಾನ್ ಜೊತೆಗಿನ ಫೋಟೋವನ್ನು ಬಳಸಿಕೊಳ್ಳಲಾಗಿತ್ತು.

  • ಎಕ್ಸಿಟ್ ಪೋಲ್ ಪೋಸ್ಟ್‌ಗೆ ಕ್ಷಮೆಯಾಚಿಸಿದ ವಿವೇಕ್ ಒಬೇರಾಯ್

    ಎಕ್ಸಿಟ್ ಪೋಲ್ ಪೋಸ್ಟ್‌ಗೆ ಕ್ಷಮೆಯಾಚಿಸಿದ ವಿವೇಕ್ ಒಬೇರಾಯ್

    ಮುಂಬೈ: ಬಾಲಿವುಡ್ ನಟ ವಿವೇಕ್ ಒಬೇರಾಯ್ ಎಕ್ಸಿಟ್ ಪೋಲ್ ಟ್ರೋಲ್‍ನ ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡು ವಿವಾದಕ್ಕೆ ಗುರಿ ಆಗಿದ್ದರು. ಈಗ ವಿವೇಕ್ ಈ ಬಗ್ಗೆ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿದ ನಟ ವಿವೇಕ್, “ಕೆಲವು ಬಾರಿ ನಾವು ಮೊದಲು ನೋಡಿದಾಗ ಅದು ನಮಗೆ ತಮಾಷೆಯಾಗಿ ಕಾಣಿಸುತ್ತದೆ. ಆದರೆ ಬೇರೆಯವರಿಗೆ ತಮಾಷೆಯಾಗಿ ಕಾಣಿಸುವುದಿಲ್ಲ. ನಾನು ಕಳೆದ 10 ವರ್ಷದಿಂದ ಮಹಿಳಾ ಶಕ್ತಿಕರಣಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಇದುವರೆಗೂ 2 ಸಾವಿರಕ್ಕೂ ಹೆಚ್ಚು ವಂಚಿತ ಮಹಿಳೆಯರನ್ನು ಸಮಾಜದ ಮುಂದೆ ತಂದಿದ್ದು, ಇಂದು ಎಲ್ಲರೂ ಸಂತೋಷದ ಜೀವನ ನಡೆಸುತ್ತಿದ್ದಾರೆ” .

    ಮತ್ತೊಂದು ಟ್ವೀಟ್‍ನಲ್ಲಿ, “ನನ್ನ ರಿಪ್ಲೈನಿಂದ ಯಾವುದಾದರೂ ಮಹಿಳೆಯರ ಭಾವನೆಗೆ ಧಕ್ಕೆ ತಂದಿದ್ದರೆ, ತಪ್ಪನ್ನು ಸುಧಾರಿಸಿಕೊಳ್ಳಲು ನನ್ನನ್ನು ಕ್ಷಮಿಸಿ ಬಿಡಿ” ಎಂದು ಬರೆದು ಟ್ವೀಟ್ ಮಾಡಿದಲ್ಲದೆ ನಾನು ಹಿಂದಿನ ಟ್ವೀಟ್ ಡಿಲೀಟ್ ಮಾಡುತ್ತಿದ್ದೇನೆ” ಎಂದು ಟ್ವೀಟ್‍ನಲ್ಲಿ ಉಲ್ಲೇಖಿಸಿದ್ದಾರೆ.

    ಬಾಲಿವುಡ್ ನಟ ವಿವೇಕ್ ಒಬೇರಾಯ್ ಸೋಮವಾರ ಮಧ್ಯಾಹ್ನ ಮಾಡಿದ್ದ ಎಕ್ಸಿಟ್ ಪೋಲ್ ಪೋಸ್ಟ್ ಟ್ವೀಟ್ ವಿವಾದಕ್ಕೆ ಕಾರಣವಾಗಿತ್ತು. ನಟಿ ಸೋನಂ ಕಪೂರ್, ಟೆನ್ನಿಸ್ ಆಟಗಾರ್ತಿ ಜ್ವಾಲಾ ಗುಟ್ಟಾ ಸೇರಿದಂತೆ ದೇಶದ ಮಹಿಳೆಯರ ಕೆಂಗಣ್ಣಿಗೆ ವಿವೇಕ್ ಟ್ವೀಟ್ ಗುರಿಯಾಗಿತ್ತು.

    ಬಿಗ್-ಬಿ ಅಮಿತಾಬ್ ಬಚ್ಚನ್ ಸೊಸೆಯಾಗಿರುವ ಐಶ್ವರ್ಯಾ ರೈ ಅವರ ವೈವಾಹಿಕ ಪೂರ್ವ ಸಂಬಂಧದ ವಿಚಾರಗಳನ್ನು ವಿವೇಕ್ ಒಬೇರಾಯ್ ಕೆಣಕ್ಕಿದ್ದು, ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿತ್ತು. 2006ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗುವ ಮೂಲಕ ಐಶ್ವರ್ಯಾ ತಮ್ಮ ಬಗ್ಗೆ ಬಾಲಿವುಡ್ ಅಂಗಳದಲ್ಲಿದ್ದ ಅಂತೆ-ಕಂತೆಗಳಿಗೆ ಪೂರ್ಣ ವಿರಾಮ ಹಾಕಿದ್ದರು. 7 ವರ್ಷದ ಮುದ್ದು ಮಗಳ ತಾಯಿಯಾಗಿರುವ ಐಶ್ವರ್ಯಾ ಯಾವುದೇ ವಿವಾದಗಳಿಗೆ ಗುರಿಯಾಗದೇ ಖಾಸಗಿ ಜೀವನದಲ್ಲಿ ಖುಷಿಯಾಗಿದ್ದಾರೆ.

    ವಿವಾದಾತ್ಮಕ ಟ್ವೀಟ್‍ನಲ್ಲಿ ಏನಿತ್ತು?
    ಸಲ್ಮಾನ್ ಮತ್ತು ಐಶ್ವರ್ಯ ಜೊತೆಗಿನ ಫೋಟೋ ಹಾಕಿ Opinion Poll, ವಿವೇಕ್-ಐಶ್ವರ್ಯಾ ಫೋಟೋಗೆ Exit Poll ಕೊನೆಗೆ ಅಭಿಷೇಕ್ ಬಚ್ಚನ್, ಐಶ್ವರ್ಯ ಮತ್ತು ಆರಾಧ್ಯ ಜೊತೆಗಿನ ಫೋಟೋಗೆ Result ಅಂತಾ ಬರೆಯಲಾಗಿದೆ. ಈ ಮೂರು ಫೋಟೋಗಳನ್ನು ಸೇರಿಸಿರುವ ಟ್ರೋಲ್ ವಿವೇಕ್ ಹಂಚಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

  • ವಿವಾದಕ್ಕೆ ಕಾರಣವಾಯ್ತು ವಿವೇಕ್ ಒಬೇರಾಯ್ ಎಕ್ಸಿಟ್ ಪೋಲ್ ಪೋಸ್ಟ್

    ವಿವಾದಕ್ಕೆ ಕಾರಣವಾಯ್ತು ವಿವೇಕ್ ಒಬೇರಾಯ್ ಎಕ್ಸಿಟ್ ಪೋಲ್ ಪೋಸ್ಟ್

    – ಒಬೇರಾಯ್ ವಿರುದ್ಧ ಸೋನಂ, ಜ್ವಾಲಾ ಗುಟ್ಟಾ ಗರಂ

    ಮುಂಬೈ: ಬಾಲಿವುಡ್ ನಟ ವಿವೇಕ್ ಒಬೇರಾಯ್ ಇಂದು ಮಧ್ಯಾಹ್ನ ಮಾಡಿದ್ದ ಎಕ್ಸಿಟ್ ಪೋಲ್ ಪೋಸ್ಟ್ ಟ್ವೀಟ್ ವಿವಾದಕ್ಕೆ ಕಾರಣವಾಗಿದೆ. ನಟಿ ಸೋನಂ ಕಪೂರ್, ಟೆನ್ನಿಸ್ ಆಟಗಾರ್ತಿ ಜ್ವಾಲಾ ಗುಟ್ಟಾ ಸೇರಿದಂತೆ ದೇಶದ ಮಹಿಳೆಯರ ಕೆಂಗಣ್ಣಿಗೆ ವಿವೇಕ್ ಟ್ವೀಟ್ ಗುರಿಯಾಗಿದೆ.

    ಮಾಜಿ ವಿಶ್ವ ಸುಂದರಿ, ಬಿಗ್ ಬಿ ಅಮಿತಾಬ್ ಬಚ್ಚನ್ ಸೊಸೆಯಾಗಿರುವ ಐಶ್ವರ್ಯಾ ರೈ ಅವರ ವೈವಾಹಿಕ ಪೂರ್ವ ಸಂಬಂಧದ ವಿಚಾರಗಳನ್ನು ವಿವೇಕ್ ಒಬೇರಾಯ್ ಕೆಣಕ್ಕಿದ್ದು, ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ. 2006ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗುವ ಮೂಲಕ ಐಶ್ವರ್ಯಾ ತಮ್ಮ ಬಗ್ಗೆ ಬಾಲಿವುಡ್ ಅಂಗಳದಲ್ಲಿ ಅಂತೆ-ಕಂತೆಗಳಿಗೆ ಪೂರ್ಣ ವಿರಾಮ ಹಾಕಿದ್ದಾರೆ. ಏಳು ವರ್ಷದ ಮುದ್ದು ಮಗಳ ತಾಯಿಯಾಗಿರುವ ಐಶ್ವರ್ಯಾ ಯಾವುದೇ ವಿವಾದಗಳಿಗೆ ಗುರಿಯಾಗದೇ ಖಾಸಗಿ ಜೀವನದಲ್ಲಿ ಖುಷಿಯಾಗಿದ್ದಾರೆ.

    ಇದೀಗ ಐಶ್ವರ್ಯಾರ ಹಳೆಯ ವಿಷಯಗಳನ್ನು ಕೆದಕಿರುವ ವಿವೇಕ್ ಒಬೇರಾಯ್ ವಿರುದ್ಧ ಮಹಾರಾಷ್ಟ್ರದ ಮಹಿಳಾ ಆಯೋಗ ಕ್ರಮಕ್ಕೆ ಮುಂದಾಗಿದೆ. ಎಕ್ಸಿಟ್ ಪೋಲ್ ಟ್ರೋಲ್ ಫೋಟೋ ಹಾಕಿಕೊಂಡಿದ್ದ ವಿವೇಕ್, ಕ್ರಿಯೇಟಿವಿಟಿ ಫೋಟೋ ಶಾಪ್. ಇದರಲ್ಲಿ ರಾಜಕೀಯ ಇಲ್ಲ. ಇಷ್ಟೇ ಬದುಕು ಎಂದು ಬರೆದುಕೊಂಡಿದ್ದರು.

    ಈ ಕುರಿತು ಪ್ರತಿಕ್ರಿಯಿಸಿರುವ ನಟಿ ಸೋನಂ ಕಪೂರ್, ಅಸಹ್ಯ ಮತ್ತು ತೆಗಳಿಕೆಗೂ ಈ ಟ್ವೀಟ್ ಅರ್ಹವಲ್ಲ ಎಂದು ಕಿಡಿಕಾರಿದ್ದಾರೆ. ಜ್ವಾಲಾ ಗುಟ್ಟಾ ಸಹ ಇದೊಂದು ಸಂಪೂರ್ಣ ಅಸಹ್ಯಕರ ಮತ್ತು ಅಸಂಬದ್ಧವಾದ ಟ್ವೀಟ್ ಇದಾಗಿದೆ ಎಂದು ಬರೆದುಕೊಂಡಿದ್ದಾರೆ. ವಿವೇಕ್ ಟ್ವೀಟ್ ಫೋಟೋಗೆ ಎಲ್ಲಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಐಶ್ವರ್ಯಾ ಅಥವಾ ಅಭಿಷೇಕ್ ಬಚ್ಚನ್ ಈ ವಿಷಯದ ಕುರಿತಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಟ್ರೋಲ್ ಫೋಟೋದಲ್ಲಿ ಏನಿದೆ?
    ಸಲ್ಮಾನ್ ಮತ್ತು ಐಶ್ವರ್ಯ ಜೊತೆಗಿನ ಫೋಟೋ ಹಾಕಿ Opinion Poll, ವಿವೇಕ್-ಐಶ್ವರ್ಯಾ ಫೋಟೋಗೆ Exit Poll ಕೊನೆಗೆ ಅಭಿಷೇಕ್ ಬಚ್ಚನ್, ಐಶ್ವರ್ಯ ಮತ್ತು ಆರಾಧ್ಯ ಜೊತೆಗಿನ ಫೋಟೋಗೆ Result ಅಂತಾ ಬರೆಯಲಾಗಿದೆ.

    https://twitter.com/vivekoberoi/status/1130380916142907392

  • ಹ್ಯಾಟ್ರಿಕ್ ಹೀರೋ ಜತೆ ಸೂಪರ್ ಸ್ಟಾರ್ ನಾಗಾರ್ಜುನ್ ನಟಿಸಲ್ವಂತೆ..!

    ಹ್ಯಾಟ್ರಿಕ್ ಹೀರೋ ಜತೆ ಸೂಪರ್ ಸ್ಟಾರ್ ನಾಗಾರ್ಜುನ್ ನಟಿಸಲ್ವಂತೆ..!

    ಬೆಂಗಳೂರು: ಸೂರಿ ನಿರ್ದೇಶನದ ಟಗರು ಚಿತ್ರದ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೆ ಖಡಕ್ ಪೊಲೀಸ್ ಅಧಿಕಾರಿಯಾಗಿ ರುಸ್ತುಂ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವುದು ಗೊತ್ತಿರದ ವಿಚಾರವೇನಲ್ಲ. ಟಗರು ಚಿತ್ರದಲ್ಲಿ ಶಿವಣ್ಣನಿಗೆ ಡಾಲಿ ಧನಂಜಯ್, ಚಿಟ್ಟೆ ವಸಿಷ್ಠ ಸಿಂಹ ವಿಲನ್ ಗಳಾಗಿ ಠಕ್ಕರ್ ಕೊಟ್ಟಿದ್ರು. ರುಸ್ತುಂ ಚಿತ್ರದಲ್ಲಿಯೂ ವಿಲನ್ ಗಳದ್ದೇ ಹಾವಳಿಯಿದ್ದು ಶಿವಣ್ಣನಿಗೆ ಎದುರಾಳಿಯಾಗಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ನಟಿಸುತ್ತಿದ್ದಾರೆ. ಎಲ್ಲ ಅಂದುಕೊಂಡಂತಾಗಿದ್ದರೆ ತೆಲುಗಿನ ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ್ ಹಾಗೂ ಶಿವಣ್ಣನ ನಡುವಿನ ಕಾಳಗವನ್ನೇ ನೋಡಬಹುದಾಗಿತ್ತು. ಆದ್ರೆ ಅಕ್ಕಿನೇನಿ ನಾಗಾರ್ಜುನ್ ಶಿವರಾಜ್ ಕುಮಾರ್ ಜತೆ ನಟಿಸೋದಿಲ್ಲ ಅಂತಾ ಹೇಳಿದ್ದಾರಂತೆ..!

    ಅಕ್ಕಿನೇನಿ ರಿಜೆಕ್ಟ್ ಮಾಡೋದಕ್ಕೆ ಕಾರಣವೇನು?
    ಶಿವಣ್ಣ ಮೊದಲೇ ಮಾಸ್ ಹೀರೋ. ಅಲ್ಲದೇ ರುಸ್ತುಂ ಹೇಳಿ ಕೇಳಿ ಮಾಸ್ ಎಂಟರ್ ಟೈನಿಂಗ್ ಸಿನಿಮಾ. ಆಕ್ಷನ್ ಓರಿಯೆಂಟೆಡ್ ಸಿನಿಮಾ ಕೂಡ. ಶಿವಣ್ಣ ಖಡಕ್ಕಾಗಿ ತಮ್ಮ ಖದರ್ ತೋರಿಸ್ತಾರೆ ಅನ್ನೋದು ಎಲ್ಲರಿಗೂ ತಿಳಿದ ವಿಚಾರ. ಹಾಗಿರೋವಾಗ ಅವರ ಎದುರಿಗೆ ತೊಡೆ ತಟ್ಟಿ ನಿಲ್ಲೋ ವಿಲನ್ ಅವರಿಗೆ ಸರಿ ಸಮನಾಗಿ ಇರಬೇಕಲ್ವಾ. ಯಾರೋ ನಟಿಸಿದ್ರೆ ಆ ಪಾತ್ರಕ್ಕೆ ತೂಕ ಇರೋದಿಲ್ಲ ಅಂದರಂತೆ.

    ನಿರ್ದೇಶಕ ರವಿ ವರ್ಮ ಏನ್ ಹೇಳ್ತಾರೆ..?
    ಈ ಮೊದಲು ರುಸ್ತುಂ ನಿರ್ದೇಶಕ ರವಿ ವರ್ಮ ಶಿವಣ್ಣನಿಗೆ ಎದುರಾಳಿಯಾಗಿ ನಾಗಾರ್ಜುನ ಮ್ಯಾಚ್ ಆಗ್ತಾರೆ ಅಂತ ಯೋಚಿಸಿ ಅವರನ್ನು ಅಪ್ರೋಚ್ ಮಾಡಿದ್ದಂತೆ. ಪ್ರಾರಂಭದಲ್ಲಿ ಖಂಡಿತಾ ಮಾಡ್ತೀನಿ ಅಂತ ನಾಗಾರ್ಜುನ್, ಆಮೇಲೆ ಪಾತ್ರದ ಆಳ ತಿಳಿದ ಮೇಲೆ ನಟಿಸಲು ನೋ ಎಂದಿದ್ದಾರಂತೆ. ಆಮೇಲೆ ಅನಿಲ್ ಕಪೂರ್ ಸೆಲೆಕ್ಟ್ ಮಾಡಿದ್ರೂ ಕಾರಣಾಂತರಗಳಿಂದ ಅವರೂ ರಿಜೆಕ್ಟ್ ಆಗಿ ಅಂತಿಮವಾಗಿ ವಿವೇಕ್ ಒಬೇರಾಯ್ ಅವರನ್ನು ಫೈನಲ್ ಮಾಡಲಾಗಿದೆಯಂತೆ.

  • ಶಿವಣ್ಣನ ಬಗ್ಗೆ ವಿವೇಕ್ ಒಬೇರಾಯ್ ಹೇಳಿದ್ದೇನು?

    ಶಿವಣ್ಣನ ಬಗ್ಗೆ ವಿವೇಕ್ ಒಬೇರಾಯ್ ಹೇಳಿದ್ದೇನು?

    ಬೆಂಗಳೂರು: ಶಿವರಾಜ್‍ಕುಮಾರ್ ಅಭಿನಯದ ರುಸ್ತುಂ ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ನಟಿಸಿದ್ದಾರೆ. ಇದು ಕೆಲ ದಿನಗಳ ಹಿಂದೆಯೇ ಜಾಹೀರಾಗಿರುವ ವಿಚಾರ. ಇದೀಗ ಅತಿಥಿ ಪಾತ್ರದಲ್ಲಿ ವಿವೇಕ್ ತಮ್ಮ ಭಾಗದ ಚಿತ್ರೀಕರಣವನ್ನೂ ಮುಗಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಮತ್ತು ತಮ್ಮ ವರ್ಷಾಂತರಗಳ ನಂಟಿನ ಬಗ್ಗೆ ಇಂಟರೆಸ್ಟಿಂಗ್ ಆದ ವಿಚಾರವನ್ನೂ ಅವರು ಹೇಳಿಕೊಂಡಿದ್ದಾರೆ!

    ರುಸ್ತುಂ ಚಿತ್ರದ ಮೂಲಕ ಮೊದಲ ಸಲ ವಿವೇಕ್ ಒಬೇರಾಯ್ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಆದರೆ ಶಿವರಾಜ್ ಕುಮಾರ್ ಅವರ ಜೊತೆ ನಟಿಸೋ ಆಫರ್ ಅವರಿಗೆ ಸಿಕ್ಕಿದ್ದದ್ದು ಇದೇ ಮೊದಲ ಸಲವಲ್ಲ. ಯಾಕೆಂದರೆ ದಶಕಗಳ ಹಿಂದೆಯೇ ಅಂಥಾದ್ದೊಂದು ಆಫರ್ ಖುದ್ದು ಶಿವಣ್ಣನ ಕಡೆಯಿಂದಲೇ ಅವರಿಗೆ ಬಂದಿತ್ತಂತೆ.

    ಶಿವರಾಜ್ ಕುಮಾರ್ ಅವರನ್ನು ವಿವೇಕ್ ಒಬೇರಾಯ್ ಮುಂಬೈನ ಫ್ಯಾಮಿಲಿ ಪ್ರೋಗ್ರಾಂ ಒಂದರಲ್ಲಿ ಭೇಟಿ ಮಾಡಿದ್ದು ವರ್ಷಾಂತರಗಳ ಹಿಂದೆ. ಆಗ ವಿವೇಕ್ ಗೆ ಹದಿನೇಳು ವರ್ಷ. ಆಗ ವಿವೇಕ್ ಅವರನ್ನು ಶಿವಣ್ಣನ ಜೊತೆ ಯಾರೋ ಮಾತಾಡಿಸಿದ್ದರಂತೆ. ಚೂಟಿಯಾಗಿದ್ದ ಇವರನ್ನು ತಮ್ಮ ಚಿತ್ರದಲ್ಲಿ ನಟಿಸುವಂತೆ ಖುದ್ದು ಶಿವಣ್ಣನೇ ಹೇಳಿದ್ದರಂತೆ. ಅದಾದ ನಂತರ ವಿವೇಕ್ ಒಬೇರಾಯ್ ನಾಯಕ ನಟನಾಗಿ ಬಾಲಿವುಡ್‍ನಲ್ಲಿಯೂ ಮಿಂಚಿದ್ದರು. ಅವರು ಕನ್ನಡ ಚಿತ್ರಗಳಲ್ಲಿ ನಟಿಸೋ ಬಗ್ಗೆ ಆಗಾಗ ಗುಲ್ಲೇಳುತ್ತಿದ್ದವಾದರೂ ಅದಕ್ಕೆ ಅವಕಾಶ ಕೂಡಿ ಬಂದಿರಲಿಲ್ಲ.

    ಆದರೆ ಇದೀಗ ದಶಕಗಳ ಹಿಂದೆ ತಮ್ಮೊಂದಿಗೆ ನಟಿಸುವಂತೆ ಹೇಳಿದ್ದ ಅದೇ ಶಿವಣ್ಣನ ಜೊತೆ ನಟಿಸೋ ಮೂಲಕವೇ ವಿವೇಕ್ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ರುಸ್ತುಂ ಸೆಟ್ಟಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನೂ ಭೇಟಿಯಾದ ಸಂದರ್ಭದಲ್ಲಿ ವಿವೇಕ್ ಒಬೇರಾಯ್ ಈ ರಸವತ್ತಾದ ವಿಚಾರವನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹುತಾತ್ಮ ಯೋಧರ ಕುಟುಂಬಕ್ಕೆ 25 ಫ್ಲಾಟ್‍ಗಳನ್ನು ನೀಡಿದ ನಟ ವಿವೇಕ್ ಒಬೆರಾಯ್!

    ಹುತಾತ್ಮ ಯೋಧರ ಕುಟುಂಬಕ್ಕೆ 25 ಫ್ಲಾಟ್‍ಗಳನ್ನು ನೀಡಿದ ನಟ ವಿವೇಕ್ ಒಬೆರಾಯ್!

    ಥಾಣೆ: ಬಾಲಿವುಡ್ ನಟ ವಿವೇಕ್ ಓಬೆರಾಯ್ ಅವರ ಕರ್ಮ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಹುತಾತ್ಮ ಸಿಆರ್‍ಪಿಎಫ್ ಯೋಧರ ಕುಟುಂಬಸ್ಥರಿಗೆ 25  ಫ್ಲಾಟ್‍ ಗಳನ್ನು ನೀಡಿದೆ.

    ಈ ಬಗ್ಗೆ ಕಂಪನಿ ವತಿಯಿಂದ ಹುತಾತ್ಮ ಯೋಧರ ಸಂಬಂಧಿಕರಿಗೆ ಪತ್ರ ಬರೆಯಲಾಗಿದೆ. ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಯೋಧರ ಕುಟುಂಬಸ್ಥರಿಗೆ  ಫ್ಲಾಟ್‍ ಗಳನ್ನು ನೀಡುವುದಾಗಿ ಪತ್ರದಲ್ಲಿ ಹೇಳಲಾಗಿದೆ. ಇದರಲ್ಲಿ 4 ಫ್ಲಾಟ್‍ಗಳನ್ನು ಈಗಾಗಲೇ ಯೋಧರ ಕುಟುಂಬಕ್ಕೆ ನೀಡಿರುವುದಾಗಿ ವರದಿಯಾಗಿದೆ.

    ಫ್ಲಾಟ್ ನೀಡಲಾಗಿರುವ ಯೋಧರ ಕುಟುಂಬಗಳ ಪಟ್ಟಿಯನ್ನು ಸಂಸ್ಥೆ ಬಿಡುಗಡೆ ಮಾಡಿದ್ದು, ಉಳಿದ ಯೋಧರ ಕುಟುಂಬಕ್ಕೆ ಶೀಘ್ರದಲ್ಲಿಯೇ ಫ್ಲಾಟ್‍ಗಳನ್ನು ಹಸ್ತಾಂತರ ಮಾಡಲಾಗುತ್ತದೆ ಎನ್ನಲಾಗಿದೆ.

    ಇತ್ತೀಚೆಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ 12 ಹುತಾತ್ಮ ಯೋಧರ ಕುಟುಂಬಸ್ಥರಿಗೆ ರೂ.1.08 ಕೋಟಿ ರೂ. ನೆರವು ನೀಡಿದ್ದರು.

    2017ರ ಮಾರ್ಚ್ 11 ರಂದು ಛತ್ತೀಸ್‍ಘಡದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರ ದಾಳಿಗೆ 219 ಬೆಟಾಲಿಯನ್‍ಗೆ ಸೇರಿದ ಸುಮಾರು 25 ಮಂದಿ ಯೋಧರು ಹುತಾತ್ಮರಾಗಿದ್ದರು.