Tag: ವಿವೇಕ್ ಒಬೆರಾಯ್

  • ಯಶ್ ‘ರಾಮಾಯಣ’ ಪ್ರಾಜೆಕ್ಟ್‌ನಲ್ಲಿ ವಿವೇಕ್ ಒಬೆರಾಯ್?

    ಯಶ್ ‘ರಾಮಾಯಣ’ ಪ್ರಾಜೆಕ್ಟ್‌ನಲ್ಲಿ ವಿವೇಕ್ ಒಬೆರಾಯ್?

    ರಾಕಿಂಗ್ ಸ್ಟಾರ್ ಯಶ್ (Yash) ಸಹ ನಿರ್ಮಾಣದ ‘ರಾಮಾಯಣ’ ಪ್ರಾಜೆಕ್ಟ್‌ನಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ (Vivek Oberoi) ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:ಕಾಮಾಕ್ಯ ದೇಗುಲಕ್ಕೆ ನಟಿ ಕಾರುಣ್ಯ ರಾಮ್ ಭೇಟಿ

    ‘ರಾಮಾಯಣ’ (Ramayana) ಚಿತ್ರದಲ್ಲಿ ನಟಿಸುವ ತಾರಾಗಣ ದಿನದಿಂದ ದಿನಕ್ಕೆ ಹಿರಿದಾಗುತ್ತಲೇ ಇದೆ. ಚಿತ್ರದಲ್ಲಿ ‘ರಾವಣ’ ಯಶ್‌ಗೆ ಮಡದಿಯಾಗಿ ಮಗಧೀರ ನಟಿ ಕಾಜಲ್ ಅಗರ್ವಾಲ್ ‘ಮಂಡೋರಿ’ ರೋಲ್‌ನಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಈ ಬೆನ್ನಲ್ಲೇ ವಿವೇಕ್ ಒಬೆರಾಯ್ ಕೂಡ ಯಶ್ ಜೊತೆ ತೆರೆಹಂಚಿಕೊಳ್ಳಲಿದ್ದಾರಂತೆ. ಹಾಗಂತ ಸೋಷಿಯಲ್ ಮೀಡಿಯಾದಲ್ಲಿ ಗುಸು ಗುಸು ಚರ್ಚೆ ಶುರುವಾಗಿದೆ. ಇದನ್ನೂ ಓದಿ:‘ಅನಿಮಲ್’ ನಟಿಗೆ ಬಂಪರ್ ಆಫರ್- ಪ್ರಭಾಸ್‌ಗೆ ನಾಯಕಿಯಾದ ತೃಪ್ತಿ ದಿಮ್ರಿ

    ಈ ಚಿತ್ರದಲ್ಲಿ ಶೂರ್ಪನಖಿಯ ಪತಿ ವಿದ್ಯುತ್ಜಿಹ್ವನ ಪಾತ್ರದಲ್ಲಿ ವಿವೇಕ್ ಒಬೆರಾಯ್ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಈ ಚಿತ್ರದಲ್ಲಿ ಶೂರ್ಪನಖಿ ಪಾತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ಬಣ್ಣ ಹಚ್ಚಿದ್ದಾರೆ. ಈ ನಟಿಯ ಪತಿಯ ಪಾತ್ರದಲ್ಲಿ ವಿವೇಕ್ ನಟಿಸುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜನಾ? ಈ ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಗುವವರೆಗೂ ಕಾಯಬೇಕಿದೆ.

    ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿರೋದು ಅಧಿಕೃತವಾಗಿದೆ. ಉಳಿದ ಪಾತ್ರಗಳ ಆಯ್ಕೆ ಬಗ್ಗೆ ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿ ಸಿಗಬೇಕಿದೆ.

    ರಾಮಾಯಣ ಸಿನಿಮಾವನ್ನು ಎರಡು ಭಾಗಗಳಲ್ಲಿ ತರೋದಾಗಿ ಈಗಾಗಲೇ ಚಿತ್ರತಂಡ ತಿಳಿಸಿದೆ. 2026ರಲ್ಲಿ ಸಿನಿಮಾ ರಿಲೀಸ್ ಆಗಲಿದೆ.

  • ಬಾಲಿವುಡ್ ನಟ ವಿವೇಕ್ ಒಬೆರಾಯ್ ಗೆ ಕೋಟಿ ಕೋಟಿ ವಂಚನೆ

    ಬಾಲಿವುಡ್ ನಟ ವಿವೇಕ್ ಒಬೆರಾಯ್ ಗೆ ಕೋಟಿ ಕೋಟಿ ವಂಚನೆ

    ಬಾಲಿವುಡ್ (Bollywood) ನಟ ವಿವೇಕ್ ಒಬೆರಾಯ್ ವಂಚನೆಗೆ ಒಳಗಾಗಿದ್ದಾರೆ. ಕಾರ್ಯಕ್ರಮ ಮತ್ತು ಸಿನಿಮಾಗೆ ಬಂಡವಾಳ ಹೂಡಿದೆ ಹೆಚ್ಚಿನ ಲಾಭ ಕೊಡಲಾಗುವುದು ಎಂದು ಹೇಳಿ ಬರೋಬ್ಬರಿ 1.55 ಕೋಟಿ ರೂಪಾಯಿ ವಂಚಿಸಿದ್ದಾರೆ (Fraud). ಈ ಕುರಿತು ನಟ ವಿವೇಕ್ ಅವರ ಅಕೌಂಟೆಂಟ್ ಅಂಧೇರಿಯಲ್ಲಿ(Andheri) ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ.

    ವಿವೇಕ್ ಒಬೆರಾಯ್ (Vivek Oberoi) ಅವರಿಂದ ಮೂವರು ಹಣ ಪಡೆದು ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ. ಕಾರ್ಯಕ್ರಮ ಮತ್ತು ಸಿನಿಮಾ ನಿರ್ಮಾಣದಲ್ಲಿ ಹಣ ತೊಡಗಿಸಿರುವುದಾಗಿ ಸುಳ್ಳು ಹೇಳಿದ್ದಾರೆ. ಈ ಮೂವರಲ್ಲಿ ಒಬ್ಬರು ಸಿನಿಮಾ ನಿರ್ಮಾಪಕರು ಇದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಆರೋಪಿಗಳ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಇದನ್ನೂ ಓದಿ:ಜುಲೈ 23ಕ್ಕೆ ವಿಶ್ವಕುಂದಾಪ್ರ ಕನ್ನಡ ದಿನಕ್ಕೆ ಸಿಎಂ, ರಿಷಬ್ ಶೆಟ್ಟಿ- ಪ್ರಮೋದ್ ಶೆಟ್ಟಿ ಸಾಥ್

     

    ನಟರ ಹೆಸರಿನಲ್ಲಿ ವಂಚಿಸುವ ಹಲವು ರೀತಿಯ ಪ್ರಕರಣಗಳು ದಾಖಲಾಗುತ್ತಿವೆ. ಮೊನ್ನೆಯಷ್ಟೇ ಸಲ್ಮಾನ್ ಖಾನ್ ತಮ್ಮ ನಿರ್ಮಾಣ ಸಂಸ್ಥೆಯ ಹೆಸರಿನಲ್ಲಿ ಹಲವರು ಹಣ ಮಾಡುತ್ತಿದ್ದಾರೆ. ಆಡಿಷನ್ ಮಾಡುವುದಾಗಿ ಹೇಳಿ ಹಣ ಪಡೆದು ವಂಚಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು. ವಂಚಕರ ವಿರುದ್ಧ ಕಠಿಣ ಕ್ರಮಕ್ಕೂ ಅವರು ಆಗ್ರಹಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತ್ನಿ ಜೊತೆ ವಿವೇಕ್ ಒಬೆರಾಯ್ ಔಟಿಂಗ್- ದಾಖಲಾಯ್ತು ಎಫ್‍ಐಆರ್

    ಪತ್ನಿ ಜೊತೆ ವಿವೇಕ್ ಒಬೆರಾಯ್ ಔಟಿಂಗ್- ದಾಖಲಾಯ್ತು ಎಫ್‍ಐಆರ್

    ಮುಂಬೈ: ಪತ್ನಿ ಜೊತೆ ಔಟಿಂಗ್ ಹೋಗುವಾಗ ಹೆಲ್ಮೆಟ್ ಹಾಗೂ ಮಾಸ್ಕ್ ಹಾಕದ್ದಕ್ಕೆ ನಟ ವಿವೇಕ್ ಒಬೆರಾಯ್ ವಿರುದ್ಧ ಪ್ರಕರಣ ದಾಖಲಾಗಿದ್ದು, ದಂಡ ಸಹ ವಿಧಿಸಲಾಗಿದೆ.

    ವ್ಯಾಲೆಂಟೈನ್ಸ್ ಡೇ ದಿನ ಪತ್ನಿ ಜೊತೆ ವಿವೇಕ್ ಒಬೆರಾಯ್ ಔಟಿಂಗ್ ಹೋಗಿದ್ದ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಹೆಲ್ಮೆಟ್ ಹಾಗೂ ಮಾಸ್ಕ್ ಹಾಕದಿರುವುದು ಕಂಡುಬಂದಿದೆ. ಹೀಗಾಗಿ ದಂಡ ಹಾಕಲಾಗಿದೆ.

    ಹೆಲ್ಮೆಟ್ ಹಾಕದೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿರುವುದು ಹಾಗೂ ಕೊರೊನಾ ಸಮಯದಲ್ಲಿ ಮಾಸ್ಕ್ ಧರಿಸದೇ ಸಂಚರಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದಾಗಿ ಯುವಕರನ್ನು ತಪ್ಪು ದಾರಿಗೆ ಎಳೆಯಲು ಪ್ರೋತ್ಸಾಹಿಸಿದಂತಾಗುತ್ತದೆ. ಹೀಗಾಗಿ ದಂಡ ಕಟ್ಟಬೇಕು ಎಂದು ಒತ್ತಾಯಿಸಲಾಗಿತ್ತು.

    ಇದನ್ನು ಗಮನಿಸಿದ ಮುಂಬೈ ಪೊಲೀಸರು ಕ್ರಮ ಕೈಗೊಂಡಿದ್ದು, ಇ-ಚಲನ್ ನೀಡುವ ಮೂಲಕ ದಂಡ ಹಾಕಿದ್ದಾರೆ. ಹೆಲ್ಮೆಟ್ ಧರಿಸದ್ದಕ್ಕೆ ವಿವೇಕ್ ಒಬೆರಾಯ್ ಅವರಿಗೆ 500 ರೂ.ಗಳ ದಂಡದ ಇ-ಚಲನ್‍ನ್ನು ಸ್ಯಾಂತಾಕ್ರೂಜ್ ವಿಭಾಗದ ಪೊಲೀಸರು ನೀಡಿದ್ದಾರೆ. ಶುಕ್ರವಾರ ಸಂಜೆ 7 ಗಂಟೆಗೆ ಅಸಿಸ್ಟೆಂಟ್ ಇನ್‍ಸ್ಪೆಕ್ಟರ್ ನಂದಕಿಶೋರ್ ಯಾದವ್ ಅವರು ಇ-ಚಲನ್ ನೀಡಿದ್ದಾರೆ.

    ದಂಡ ಮಾತ್ರವಲ್ಲದೆ ಮಾಸ್ಕ್ ಧರಿಸದ್ದಕ್ಕೆ ವಿವೇಕ್ ಒಬೆರಾಯ್ ವಿರುದ್ಧ ಮುಂಬೈನ ಜುಹು ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 19ರಂದು ಎಫ್‍ಐಆರ್ ಸಹ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಮಾಸ್ಕ್ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

    ಮೋಟರ್ ವೆಹಿಕಲ್ಸ್ ಆ್ಯಕ್ಟ್‍ನ ಸೆಕ್ಷನ್ 21ರ ಅಡಿ ಸೆಕ್ಷನ್ 129/177 ಅಡಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಮಹಾರಾಷ್ಟ್ರ ಕೋವಿಡ್-19 ಮೀಶರ್ಸ್ 2020ಯ ಜುಹು ಠಾಣೆಯ ಸಬ್ ಇನ್‍ಸ್ಪೆಕ್ಟರ್ ಕಾಂಬ್ಳೆ ಅವರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಇಂದು ಪೊಲೀಸರು ವಿವೇಕ್ ಒಬೆರಾಯ್ ಅವರ ಮನೆಗೆ ಹೇಳಿಕೆ ಪಡೆಯಲು ತೆರಳಿದ್ದು, ಈ ವೇಳೆ ಅವರು ದೆಹಲಿಗೆ ತರಳಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ದಂಡ ಬಿದ್ದಿದ್ಯಾಕೆ?
    ವ್ಯಾಲೆಂಟೈನ್ಸ್ ಡೇ ದಿನ ನಟ ವಿವೇಕ್ ಒಬೆರಾಯ್ ಅವರು ಹಾರ್ಲೆ ಡೆವಿಡ್ಸನ್ ಬೈಕ್ ಮೇಲೆ ಪತ್ನಿಯನ್ನು ಕೂರಿಸಿಕೊಂಡು ತೆರಳುತ್ತಿದ್ದರು. ಈ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ಬಳಿಕ ಈ ವಿಡಿಯೋ ವೈರಲ್ ಆಗಿತ್ತು. ವ್ಯಾಲೆಂಟೈನ್ಸ್ ಡೇ ಹೇಗೆ ಆರಂಭಿಸಬೇಕು ಎನ್ನುತ್ತಲೇ ನಾನು ನನ್ನ ಪತ್ನಿ ಜಾಯ್ ರೈಡ್ ಮೂಲಕ ರಿಫ್ರೆಶ್ ಆಗುತ್ತಿದ್ದೇವೆ ಎಂದು ಬರೆದುಕೊಂಡಿದ್ದರು.

  • ಸ್ಯಾಂಡಲ್‍ವುಡ್ ಡ್ರಗ್ ಕೇಸ್ – ಬಾಲಿವುಡ್ ನಟ ವಿವೇಕ್ ಒಬೆರಾಯ್‍ಗೆ ಸಿಸಿಬಿ ಶಾಕ್

    ಸ್ಯಾಂಡಲ್‍ವುಡ್ ಡ್ರಗ್ ಕೇಸ್ – ಬಾಲಿವುಡ್ ನಟ ವಿವೇಕ್ ಒಬೆರಾಯ್‍ಗೆ ಸಿಸಿಬಿ ಶಾಕ್

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಕೇಸ್ ವಿಚಾರವಾಗಿ ಇಂದು ಬಾಲಿವುಡ್ ನಟ ವಿವೇಕ್ ಒಬೆರಾಯ್ ಮನೆ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.

    ಡ್ರಗ್ ಮಾಫಿಯಾ ಕೇಸಿನಲ್ಲಿ ಪ್ರಮುಖ ಆರೋಪಿಯಾಗಿರುವ ಆದಿತ್ಯ ಆಳ್ವಾ ನಾಪತ್ತೆಯಾಗಿದ್ದು, ಆತನನನ್ನು ವಿಚಾರಣೆಗೆ ಒಳಪಡಿಸಲು ಸಿಸಿಬಿ ಪೊಲೀಸರು ಹುಡುಕುತ್ತಿದ್ದಾರೆ. ಆರೋಪಿ ಆದಿತ್ಯ ಆಳ್ವಾ, ನಟ ವಿವೇಕ್ ಒಬೆರಾಯ್ ಅವರ ಸಂಬಂಧಿಯಾಗಿದ್ದು ಅವರ ಮನೆಯಲ್ಲಿ ಇರಬಹುದು ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆ ಇಂದು ಒಬೆರಾಯ್ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ರೇಡ್ ಮಾಡಿದ್ದಾರೆ.

    ನಾಪತ್ತೆಯಾಗಿರುವ ಆರೋಪಿ ಆದಿತ್ಯ ಆಳ್ವಾನಿಗೆ ವಿವೇಕ್ ಒಬೆರಾಯ್ ತನ್ನ ಮನೆಯಲ್ಲಿ ಆಶ್ರಯ ನೀಡಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಸರ್ಚ್ ಮಾಡಲು ಬೆಂಗಳೂರು ಸಿಸಿಬಿ ಪೊಲೀಸರು ಕೋರ್ಟಿನಿಂದ ಸರ್ಚ್ ವಾರೆಂಟ್ ಪಡೆದುಕೊಂಡಿದ್ದರು. ಈ ವಿಚಾರವಾಗಿ ನಿನ್ನೆಯೇ ಮುಂಬೈಗೆ ಸಿಸಿಬಿ ಅಧಿಕಾರಿಗಳು ಹೋಗಿದ್ದರು. ಆದರೆ ಮುಂಬೈ ಪೊಲೀಸರು ಸರಿಯಾಗಿ ಸ್ಪಂದಿಸದ ಕಾರಣ ಇಂದು ತಡವಾಗಿ ವಿವೇಕ್ ಒಬೆರಾಯ್ ಮನೆ ಮೇಲೆ ದಾಳಿ ಮಾಡಿದ್ದಾರೆ.

    ಡ್ರಗ್ಸ್ ಪ್ರಕರಣದಲ್ಲಿ ರವಿಶಂಕರ್ ಬಂಧನವಾಗುತ್ತಿದ್ದಂತೆ ಆದಿತ್ಯ ಆಳ್ವಾ ನಾಪತ್ತೆಯಾಗಿದ್ದು, ಮುಂಬೈ ಅಥವಾ ದೆಹಲಿಯಲ್ಲಿರೋ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಆದಿತ್ಯ ಆಳ್ವಾ ಮನೆಯಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ರಾಜಕಾರಣಿ ಮತ್ತು ಉದ್ಯಮಿಗಳ ಮಕ್ಕಳು ಸೇರಿದಂತೆ ಹಲವು ತಾರೆಯರು ಭಾಗಿಯಾಗುತ್ತಿದ್ದಾರೆ. ಪಾರ್ಟಿಗಳಲ್ಲಿ ಡ್ರಗ್ಸ್ ಹೊಳೆ ಹರಿಯುತ್ತಿತ್ತು ಎಂದು ತಿಳಿದು ಬಂದಿತ್ತು.

    ಯಾರು ಈ ಆದಿತ್ಯ ಆಳ್ವಾ?
    ಆದಿತ್ಯ ಆಳ್ವಾ ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ. ಆದಿತ್ಯ ಆಳ್ವಾನ ಸಹೋದರಿಯನ್ನು ನಟ ವಿವೇಕ್ ಒಬೆರಾಯ್‍ಗೆ ಮದುವೆ ಮಾಡಿಕೊಡಲಾಗಿದೆ. ಹೀಗಾಗಿ ಬಾಮೈದನ ರಕ್ಷಣೆಗಾಗಿ ನಟ ವಿವೇಕ್ ಒಬೆರಾಯ್ ನಿಂತಿರುವ ಶಂಕೆ ವ್ಯಕ್ತವಾಗಿದ್ದು, ಇಂದು ಅವರ ಮನೆಯ ಮೇಲೂ ಸಿಸಿಬಿ ದಾಳಿ ಮಾಡಿದೆ.

  • ಸ್ಯಾಂಡಲ್‌ವುಡ್‌ ಟು ಬಾಲಿವುಡ್‌ – ಆದಿತ್ಯ ಆಳ್ವ ನಾಪತ್ತೆ, ವಿವೇಕ್‌ ಒಬೆರಾಯ್‌ ಪಾರ್ಟಿ ವಿಡಿಯೋ ಔಟ್‌

    ಸ್ಯಾಂಡಲ್‌ವುಡ್‌ ಟು ಬಾಲಿವುಡ್‌ – ಆದಿತ್ಯ ಆಳ್ವ ನಾಪತ್ತೆ, ವಿವೇಕ್‌ ಒಬೆರಾಯ್‌ ಪಾರ್ಟಿ ವಿಡಿಯೋ ಔಟ್‌

    ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ದಂಧೆಯ ಒಂದೊಂದೆ ಮುಖಗಳು ಬಯಲಾಗುತ್ತಿವೆ. ಈ ಡ್ರಗ್ಸ್ ದಂಧೆಯನ್ನು ಬಗೆದಷ್ಟೂ ಮತ್ತಷ್ಟು ವಿಷಯಗಳು, ವ್ಯಕ್ತಿಗಳ ನಂಟು ಹೊರ ಬರುತ್ತಿದ್ದು, ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರ ಆದಿತ್ಯ ಆಳ್ವ ಕೂಡ ಮಾಫಿಯಾದ ಸೂತ್ರಧಾರಿ.

    ಸಿಸಿಬಿ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸ್ಯಾಂಡಲ್‌ವುಡ್‌ ಡ್ರಗ್‌ ಪ್ರಕರಣದಲ್ಲಿ ರಾಗಿಣಿ ಎರಡನೇ ಆರೋಪಿಯಾಗಿದ್ದರೆ ಆದಿತ್ಯ ಆಳ್ವ ಆರನೇ ಆರೋಪಿಯಾಗಿದ್ದಾನೆ.

    ಎಫ್‍ಐಆರ್ ದಾಖಲಾದ ಬೆನ್ನಲ್ಲೇ ಸದಾಶಿವನಗರದ ಆಳ್ವ ನಿವಾಸ ಸಂಪೂರ್ಣ ಖಾಲಿಯಾಗಿದೆ ಆದಿತ್ಯ ಆಳ್ವ ನಾಪತ್ತೆಯಾಗಿದ್ದಾನೆ. ಸಿಸಿಬಿ ತಂಡ ಈಗ ಆದಿತ್ಯ ಆಳ್ವನನ್ನು ಬಂಧಿಸಲು ಶೋಧ ಕಾರ್ಯ ನಡೆಸುತ್ತಿದೆ. ಇದನ್ನೂ ಓದಿ: ಮಾಜಿ ಸಚಿವ ಜೀವರಾಜ್‌ ಆಳ್ವ ಪುತ್ರ ಸೇರಿದಂತೆ 12 ಮಂದಿ ವಿರುದ್ಧ ಕೇಸ್‌ – ಯಾವೆಲ್ಲ ಸೆಕ್ಷನ್‌? ಶಿಕ್ಷೆ ಏನು? ಇಲ್ಲಿದೆ ಪೂರ್ಣ ವಿವರ

    ಮತ್ತೊಂದು ಕಡೆ, ಜೀವರಾಜ್ ಆಳ್ವ ಅಳಿಯನಾಗಿರುವ ಬಾಲಿವುಡ್ ನಟ ವಿವೇಕ್ ಒಬೇರಾಯ್ ಹೆಸರು ಕೂಡ ಈಗ ಥಳಕು ಹಾಕಿಕೊಂಡಿದೆ. ಶ್ರೀಲಂಕಾದ ಕ್ಯಾಸಿನೋದಲ್ಲಿ ನಡೆದ ಪಾರ್ಟಿಯಲ್ಲಿ ನಟಿ ಸಂಜನಾ ಜೊತೆ ವಿವೇಕ್ ಒಬೇರಾಯ್ ಕಾಣಿಸಿಕೊಂಡಿದ್ದಾರೆ.

    ಈ ಎಲ್ಲ ಕಾರಣಕ್ಕೆ ಸ್ಯಾಂಡಲ್‍ವುಡ್‍ನಿಂದ ಬಾಲಿವುಡ್‍ವರೆಗೆ ಡ್ರಗ್ಸ್ ಜಾಲ ಹಬ್ಬಿದ್ಯಾ? ಇನ್ನಷ್ಟು ಸ್ಟಾರ್‌ಗಳ ಮುಖವಾಡ ಬಯಲಾಗುತ್ತಾ ಎನ್ನುವುದು ಕುತೂಹಲ ಕೆರಳಿಸಿದೆ.

    ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯಿಸಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರ್ಗಿ ಈಗ ಕೇಳಿ ಬರುತ್ತಿರುವ ವ್ಯಕ್ತಿಗಳು ಈ ವ್ಯವಹಾರದಲ್ಲಿ ಬಹಳ ಸಣ್ಣವರು. ಸ್ಯಾಂಡಲ್‌ವುಡ್‌ ಮಾತ್ರವಲ್ಲ ಬಾಲಿವುಡ್‌ವರೆಗೂ ಈ ಲಿಂಕ್‌ ಹಬ್ಬಿದೆ. ಸಾಕ್ಷ್ಯಗಳು ಸರಿಯಾಗಿ ಸಿಕ್ಕಿದರೆ ದೊಡ್ಡ ದೊಡ್ಡ ವ್ಯಕ್ತಿಗಳು ಹೊರ ಬರುತ್ತಾರೆ. ಮುಂದಿನ ದಿನಗಳಲ್ಲಿ ಯಾರೆಲ್ಲ ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಎಲ್ಲ ವಿವರಗಳು ಹೊರಬರಲಿದೆ ಎಂದು ತಿಳಿಸಿದ್ದರು.

  • ದೀದಿಯನ್ನು ಸದ್ದಾಂ ಹುಸೇನ್‍ಗೆ ಹೋಲಿಸಿದ ವಿವೇಕ್ ಓಬೇರಾಯ್!

    ದೀದಿಯನ್ನು ಸದ್ದಾಂ ಹುಸೇನ್‍ಗೆ ಹೋಲಿಸಿದ ವಿವೇಕ್ ಓಬೇರಾಯ್!

    ನವದೆಹಲಿ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಇರಾಕಿ ಸರ್ವಾಧಿಕಾರಿ ಸದ್ದಾಂ ಹುಸೇನ್ ರೀತಿ ವರ್ತಿಸುತ್ತಿದ್ದಾರೆ ಎಂದು ಬಾಲಿವುಡ್ ನಟ ವಿವೇಕ್ ಓಬೇರಾಯ್ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ.

    ದೀದಿ ಕೈಯಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಅವರು ಸರ್ವಾಧಿಕಾರಿ ರೀತಿ ವರ್ತಿಸುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಅವರನ್ನು ವಿವೇಕ್ ಸದ್ದಾಂ ಹುಸೇನ್ ಅವರಿಗೆ ಹೋಲಿಕೆ ಮಾಡಿದ್ದಾರೆ. ಈ ಹಿಂದೆ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರು ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದೂ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ವಿವೇಕ್ ಪ್ರತಿಕ್ರಿಯಿಸಿ ಒಬ್ಬ ಹಿರಿಯ ನಟ ಹಾಗೂ ರಾಜಕಾರಣಿಯಾಗಿ ಈ ರೀತಿ ಹೇಳಿಕೆಗಳನ್ನು ನೀಡಿವುದು ಶೋಭೆಯಲ್ಲ. ಇದು ತಪ್ಪು ಎಂದು ಕಿಡಿಕಾರಿದ್ದರು. ಇದಾದ ಬಳಿಕ ಈಗ ದೀದಿಗೆ ಸಖತ್ ಟಾಂಗ್ ಕೊಟ್ಟು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:ಸ್ವತಂತ್ರ ಭಾರತದ ಮೊದಲ ಉಗ್ರ `ಹಿಂದೂ’: ಕಮಲ್ ಹಾಸನ್

    ಟ್ವೀಟ್‍ನಲ್ಲಿ ಏನಿದೆ?
    ಗೌರವಾನುತ ಮಹಿಳೆ ದೀದಿ ಅವರು ಸದ್ದಾಂ ಹುಸೇನ್ ರೀತಿ ಏಕೆ ವರ್ತಿಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ವಿಪರ್ಯಾಸವೆಂದರೆ ಸರ್ವಾಧಿಕಾರಿ ರೀತಿ ಆಡುತ್ತಿರುವ ದೀದಿಯಿಂದಲೇ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಮೊದಲು ಪ್ರಿಯಾಂಕಾ ಶರ್ಮಾ ಈಗ ತಜೀಂದ್ರಬಗ್ಗಾ. ಇಲ್ಲಿ ದೀದಿಗಿರಿ ನಡೆಯಲ್ಲ ಎಂದು ಬರೆದು ಬಂಗಾಳವನ್ನು ರಕ್ಷಿಸಿ ಪ್ರಜಾಪ್ರಭುತ್ವವನ್ನು ರಕ್ಷಿಸಿ, ಫ್ರೀ ತಜೀಂದ್ರಬಗ್ಗಾ ಎಂದು ಹ್ಯಾಷ್‍ಟ್ಯಾಗ್ ಹಾಕಿ ಟ್ವೀಟ್ ಮಾಡಿದ್ದಾರೆ.

    ಮಂಗಳವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ನಡೆಸುತ್ತಿದ್ದ ಸಂದರ್ಭದಲ್ಲಿ ಕೋಲ್ಕತ್ತಾದಲ್ಲಿ ಭಾರೀ ಹಿಂಸಾಚಾರ ನಡೆದಿತ್ತು. ರ‍್ಯಾಲಿಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಟ್ವೀಟ್ ಮಾಡಿ ಈ ಬಗ್ಗೆ ಬಿಜೆಪಿಯ ಐಟಿ ಸೆಲ್ಸ್ ಮುಖ್ಯಸ್ಥ ಅಮಿತ್ ಮಾಳ್ವಿಯಾ ಹಲವಾರು ಬಿಜೆಪಿ ನಾಯಕರನ್ನು ಬಂಧಿಸಿರುವುದನ್ನು ದೃಢಪಡಿಸಿದ್ದು, ಈ ವಿಚಾರ ರಾಜಕೀಯವಾಗಿ ಪ್ರೇರೆಪಿಸಲ್ಪಟ್ಟಿದೆ ಮತ್ತು ಕಾನೂನು ಬಾಹಿರವೆಂದು ಆರೋಪಿಸಿದ್ದಾರೆ.

  • ವಿವೇಕ್ ಒಬೆರಾಯ್ ಜೊತೆಗಿನ ಫೋಟೋ ರಚಿತಾ ಫೇವರಿಟ್!

    ವಿವೇಕ್ ಒಬೆರಾಯ್ ಜೊತೆಗಿನ ಫೋಟೋ ರಚಿತಾ ಫೇವರಿಟ್!

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಯಶಸ್ಸಿನ ನಾಗಾಲೋಟದಲ್ಲಿರೋ ನಟಿ ರಚಿತಾ ರಾಮ್. ಕಮರ್ಶಿಯಲ್ ಚಿತ್ರಗಳಲ್ಲಿಯೂ ಭಾರೀ ಬೇಡಿಕೆ ಹಿಂದಿರೋ ಘಳಿಗೆಯಲ್ಲಿಯೇ ಭಿನ್ನ ಬಗೆಯ ಚಿತ್ರಗಳಲ್ಲಿಯೂ ನಟಿಸುತ್ತಿರುವ ರಚಿತಾ ರಾಮ್‍ಗೆ ಇದೀಗ ತಾವೇ ನಟಿಸಿರೋ ಚಿತ್ರವೊಂದರ ಸೀನು ಮತ್ತು ಫೋಟೋವೊಂದು ತುಂಬಾ ಫೇವರಿಟ್ ಆಗಿದೆ. ಮತ್ತದನ್ನು ರಚಿತಾ ಖುಷಿಯಿಂದಲೇ ಹೇಳಿಕೊಂಡಿದ್ದಾರೆ.

    ಬಹುಶಃ ಡಬ್ಬಿಂಗ್ ಹಂತದಲ್ಲಿ ಸೆರೆ ಹಿಡಿದ ಚಿತ್ರವೊಂದನ್ನು ರಚಿತಾ ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರು ಮಾಡಿದ್ದಾರೆ. ಜೊತೆಗೆ ಇದು ತುಂಬಾ ಮುದ್ದು ಮುದ್ದಾಗಿರುವ, ತನಗೆ ತುಂಬಾ ಇಷ್ಟವಾದ ಫೋಟೋ ಅಂತಲೂ ರಚಿತಾ ಹೇಳಿಕೊಂಡಿದ್ದಾರೆ.

    ಇದು ರಚಿತಾ ರಾಮ್ ನಟಿಸಿರೋ ರುಸ್ತುಂ ಚಿತ್ರದ ದೃಶ್ಯ. ಡಬ್ಬಿಂಗ್ ಹಂತದಲ್ಲಿ ರಚಿತಾ ಸೆರೆ ಹಿಡಿದಿರೋ ಈ ಚಿತ್ರದಲ್ಲಿ ವಿವೇಕ್ ಒಬೆರಾಯ್ ರಚಿತಾ ಕೆನ್ನೆ ಸವರಿ ಮುದ್ದು ಮಾಡುತ್ತಿರೋವಂಥಾ ರೊಮ್ಯಾಂಟಿಕ್ ಸೀನಿದೆ. ಇದು ಇದುವರೆಗಿನ ಅಷ್ಟೂ ಚಿತ್ರಗಳಲ್ಲಿ ರಚಿತಾಗೆ ತುಂಬಾ ಹಿಡಿಸಿರೋ ಚಿತ್ರವಂತೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv