Tag: ವಿವೇಕ್ ಅಗ್ನಿಹೋತ್ರಿ

  • ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ದಿನಕ್ಕೊಂದು ರೋಚಕ ಸಂಗತಿಯನ್ನು ಹೊರ ಹಾಕುತ್ತಿದೆ. ಈ ಸಿನಿಮಾದ ಕಥೆಯಲ್ಲಿ ಅಕ್ಕಿ ಡ್ರಮ್ ನಲ್ಲಿ ಕಾಶ್ಮೀರಿ ಪಂಡಿತರೊಬ್ಬರ ಹತ್ಯ ನಡೆದ ಘಟನೆಯ ಬರುತ್ತದೆ. ಆ ‍ಘಟನೆಯು ನಡೆದದ್ದು ಕಾಶ್ಮೀರಿದ ಶ್ರೀನಗರದ ಛೋಟಾ ಬಜಾರ್ ನಲ್ಲಿ ಎನ್ನುವ ಮಾಹಿತಿ ಹೊರ ಬಿದ್ದಿದೆ.

    ಇಂಥದ್ದೊಂದು ಘಟನೆ ನಡೆದದ್ದು ಶಹೀದ್ ಬಾಲ್ ಕ್ರಿಶನ್ ಗಂಜು ಅವರ ಕುಟುಂಬದಲ್ಲಿ ಎನ್ನುವ ಮಾಹಿತಿಯನ್ನು ಸ್ವತಃ ಇವರ ಸಹೋದರಿಯೇ ಟ್ವಿಟರ್ ಖಾತೆಯಲ್ಲಿ ಖಚಿತ ಪಡಿಸಿದ್ದಾರೆ. ಅಲ್ಲದೇ, ‘ಕಾಶ್ಮೀರಿ ಪಂಡಿತ್ ನೆಟ್ ವರ್ಕ್’ ಎಂಬ ಜಾಲತಾಣದಲ್ಲಿ ಪ್ರಕಟವಾದ ಹತ್ಯೆಯಾದ ಕಾಶ್ಮೀರಿ ಪಂಡಿತರ ಪರಿಚಯದಲ್ಲೂ ಈ ಗಂಜು ಇದ್ದಾರೆ.

    ಯಾರಿದು ಬಾಲ್ ಕ್ರಿಶನ್ ಗಂಜು?
    ಕಾಶ್ಮೀರದ ಶ್ರೀನಗರದಲ್ಲಿಯ ಛೋಟಾ ಬಜಾರ್ ನಿವಾಸಿ ಶಾಹೀದ್ ಬಾಲ್ ಕ್ರಿಶನ್ ಗಂಜು. ಇವರು ಟೆಲಿಕಾಂನಲ್ಲಿ ಇಂಜಿನಿಯರ್ ಆಗಿದ್ದರು. ಶಿಬನ್ ಗುಂಜಿ ಸೇರಿದಂತೆ ಹಲವರು ನಾಲ್ಕು ಅಂತಸ್ತಿನ ಛೋಟಾ ಬಜಾರ್ ಮನೆಯಲ್ಲೇ ವಾಸವಿದ್ದರು. ಇದನ್ನೂ ಓದಿ: ಮೌಳಿಯ ರಂಗೀನ್ ಲೋಕದಲ್ಲಿ ಮಿಂದೆದ್ದ ಜನಸಾಗರ… ಒಂದೇ ವೇದಿಕೆಯಲ್ಲಿ ಸೌತ್ ಸ್ಟಾರ್ಸ್‍ಗಳ ಸಮಾಗಮ

    ಹತ್ಯೆಯಾಗಿದ್ದು ಹೇಗೆ?
    ಸಹೋದರಿ ಶಿಬನ್ ಗುಂಜಿ ಈ ಘಟನೆಯ ಕುರಿತು ಹೇಳಿಕೊಂಡಂತೆ. ಅದು 10 ಮಾರ್ಚ್ 1990ರ ಇಸವಿ. ಸುಮಾರು 32 ವರ್ಷಗಳ ಹಿಂದೆ ನಡೆದ ಘಟನೆಯಿದು. ಆಗ ಕಾಶ್ಮೀರದಲ್ಲಿ ಕರ್ಫ್ಯೂ ಹೇರಲಾಗಿತ್ತು. ಈ ಕರ್ಫ್ಯೂ ಅಂದು ಸಡಿಲಗೊಂಡಿದ್ದರಿಂದ ಎಂದಿನಂತೆ ಕೆಲಸ ಮುಗಿಸಿಕೊಂಡು ಟೆಲಿಕಾಂ ಇಂಜಿನಿಯರ್ ಆಗಿದ್ದ ಶಾಹೀದ್ ಬಾಲ್ ಕ್ರಿಶನ್ ಗಂಜು ಮನೆಗೆ ಆಗಮಿಸುತ್ತಿದ್ದರು. ಅವರ ಹಿಂದೆಯೇ ಭಯೋತ್ಪಾದಕರು ಹಿಂಬಾಲಿಸುತ್ತಿದ್ದಾರೆ ಎನ್ನುವ ಕೊಂಚ ಸುಳಿವೂ ಅವರಿಗೆ ಸಿಕ್ಕಿರಲಿಲ್ಲ. ತಮ್ಮ ಪಾಡಿಗೆ ತಾವು ನಿರಾಳವಾಗಿ ಮನೆಯತ್ತ ಹೆಜ್ಜೆ ಇಟ್ಟಿದ್ದರು. ಮುಂದೆ ಮುಂದೆ ಗಂಜು, ಹಿಂದೆಯೇ ಭಯೋತ್ಪಾದಕರು.

    ಗಂಜುಗಾಗಿ ಮನೆಯ ಬಾಗಿಲಿನಲ್ಲೇ ಕಾಯುತ್ತಿದ್ದ ಪತ್ನಿಯು, ತನ್ನ ಪತಿಯ ಹಿಂದೆ ಭಯೋತ್ಪಾದಕರು ಸದ್ದಿಲ್ಲದೇ ಬರುತ್ತಿದ್ದಾರೆ ಎನ್ನುವುದನ್ನು ಗಮನಿಸಿದರು. ತಕ್ಷಣವೇ ಪತಿಯನ್ನು ಮನೆಯೊಳಗೆ ಕರೆದುಕೊಂಡು ಬಾಗಿಲು ಹಾಕಿಕೊಂಡರು. ತಮ್ಮ ಹಿಂದೆಯೇ ಭಯೋತ್ಪಾದಕರು ಬರುತ್ತಿದ್ದಾರೆ ಎನ್ನುವ ಸುದ್ದಿಯನ್ನು ಕೇಳಿ, ಗಂಜು ಆಘಾತಕ್ಕೆ ಒಳಗಾದರು. ಭದ್ರವಾಗಿ ಬಾಗಿಲು ಹಾಕಿಕೊಂಡು, ಚಿಲಕ ಕೂಡ ಹಾಕಿದರು. ಇದನ್ನೂ ಓದಿ:  ವರ್ಷಾಂತ್ಯಕ್ಕೆ ನಿರ್ದೇಶನದ ಹೊಸ ಪಯಣ ಮಾಡಲು ರೆಡಿಯಾಗುತ್ತಿದ್ದಾರೆ ಕೃಷ್ಣ ಅಜಯ್ ರಾವ್

    ಕೊಲ್ಲಲಿಕ್ಕೆ ಬಂದಿದ್ದ ಭಯೋತ್ಪಾದಕರು ಬಾಗಿಲು ಒಡೆದರು, ಮನೆಗೆ ನುಗ್ಗಿದರು. ಮನೆಯಲ್ಲಿದ್ದವರನ್ನು ಕೊಲ್ಲುತ್ತಾ ಸಾಗಿದರು. ಈ ವೇಳೆಯಲ್ಲಿ ಭಯೋತ್ಪಾದಕರಿಂದ ತಪ್ಪಿಸಿಕೊಳ್ಳಲು ಗಂಜು ಮೂರನೇ ಮಹಡಿಯತ್ತ ಓಡಿದರು. ಎಲ್ಲಿ ತಪ್ಪಿಸಿಕೊಳ್ಳುವುದು ಅಂತ ಗೊತ್ತಾಗದೇ ಕಂಗಾಲಾದರು. ಅಲ್ಲಿಯೇ ಇದ್ದ ಅಕ್ಕಿ ತುಂಬಿದ್ದ ಡ್ರಮ್ ನೊಳಗೆ ಬಚ್ಚಿಟ್ಟುಕೊಂಡರು. ಇವರನ್ನು ಹುಡುಕ್ತಾ ಇದ್ದ ಭಯೋತ್ಪಾದಕರು ಇಡೀ ಮನೆಯನ್ನು ಧ್ವಂಸ ಮಾಡಿದರು. ಇಂಚಿಂಚು ಜಾಗ ಬಿಡದೇ ಹುಡುಕಿದರು. ಕೊನೆಗೆ ಅಕ್ಕಿ ಡ್ರಮ್ ನಲ್ಲಿ ಅವಿತು ಕುಳಿತಿದ್ದ ಗಂಜು ಕಣ್ಣೀಗೆ ಬಿದ್ದರು. ಅಕ್ಕಿ ಡಬ್ಬಿಯಲ್ಲೇ ಕೊಂದರು. ಅದೇ ಅಕ್ಕಿಯಿಂದ ಅನ್ನ ಮಾಡಿಕೊಂಡು ಅವರ ಮಕ್ಕಳೇ ತಿನ್ನಲಿ ಎಂದು ಕ್ರೂರತೆ ಮೆರೆದರು.

    ಇದು ನಿಜವಾಗಿ ನಡೆದ ಘಟನೆ ಎಂದು ಸ್ವತಃ ಗಂಜು ಅವರ ಸಹೋದರಿಯೇ ಸೋಷಿಯಲ್ ಮೀಡಿಯಾದ ಮೂಲಕ ಬರೆದುಕೊಂಡಿದ್ದಾರೆ. ಅಂದಹಾಗೆ ಈ ಗಂಜು ಅವರು ಭಯೋತ್ಪಾದಕರಿಂದ ಹತ್ಯೆಯಾಗಿ 19 ಮಾರ್ಚ್ 2022ಕ್ಕೆ 32 ವರ್ಷಗಳ ಆಗಿವೆ. ಈ ಸಂದರ್ಭದಲ್ಲಿ ಗಂಜು ಸಹೋದರಿ, ಈ ಎಲ್ಲ ವಿಷಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

  • ಉಚಿತ ಪ್ರದರ್ಶನ ನಿಲ್ಲಿಸಿ: ಬಿಜೆಪಿಗೆ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ಮನವಿ

    ಉಚಿತ ಪ್ರದರ್ಶನ ನಿಲ್ಲಿಸಿ: ಬಿಜೆಪಿಗೆ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ಮನವಿ

    ಮುಂಬೈ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಬಿಜೆಪಿ ನಾಯಕರಿಗೆ ಸಿನಿಮಾ ಉಚಿತ ಪ್ರದರ್ಶನ ನೀಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.

    ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಗ್ಗೆ ದೇಶಾದ್ಯಂತ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ. ಕಾಶ್ಮೀರದಲ್ಲಿ ಹಿಂಸೆ, ಅತ್ಯಾಚಾರಗಳನ್ನು ಅನುಭವಿಸಿ ದಕ್ಷಿಣದ ಕಡೆಗೆ ಮಹಾವಲಸೆಗೈದ ಕಾಶ್ಮೀರಿ ಪಂಡಿತರ ರಕ್ತಪಾತದ ಕಥೆ ಹೇಳುವ ಸಿನಿಮಾವನ್ನು ಸರ್ಕಾರ ಜನರಿಗೆ ತೋರಿಸಲು ತೆರಿಗೆ ಮುಕ್ತಗೊಳಿಸಿತ್ತು. ಇದನ್ನೂ ಓದಿ: ‘ದಿ ಕಾಶ್ಮೀರ್‌ ಫೈಲ್ಸ್’ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸಹಾಯ ಮಾಡುವುದಿಲ್ಲ: ಸಂಜಯ್ ರಾವತ್

    ಇದೀಗ ಭಾರೀ ಸುದ್ದಿಯಾಗುತ್ತಿರುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಜನರಿಗೆ ತೋರಿಸಲು ಹಲವು ಬಿಜೆಪಿ ನಾಯಕರು ಉಚಿತ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಆದರೆ ಬಿಜೆಪಿಯವರು ಮಾಡುತ್ತಿರುವ ಈ ಕೆಲಸಕ್ಕೆ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರೋಧ ವ್ಯಕ್ತಪಡಿಸಿದ್ದಾರೆ.

    ಹರಿಯಾಣದ ರೇವಾರಿಯಲ್ಲಿರುವ ಬಿಜೆಪಿ ನಾಯಕರೊಬ್ಬರು ಸಿನಿಮಾವನ್ನು ಉಚಿತವಾಗಿ ಜನರಿಗೆ ಪ್ರದರ್ಶಿಸಲು ಮುಂದಾಗಿದ್ದಾಗ ವಿವೇಕ್ ಅಗ್ನಿಹೋತ್ರಿ ಇದನ್ನು ವಿರೋಧಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇದರ ಬಗ್ಗೆ ಬರೆದಿರುವ ಅಗ್ನಿಹೋತ್ರಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಉಚಿತವಾಗಿ ತೋರಿಸುವುದು ಅಪರಾಧ. ಈ ರೀತಿ ಉಚಿತ ಪ್ರದರ್ಶನ ನೀಡುವುದನ್ನು ನಿಲ್ಲಿಸುವಂತೆ ನಾನು ವಿನಂತಿಸುತ್ತಿದ್ದೇನೆ. ರಾಜಕೀಯ ನಾಯಕರು ಸೃಜನಾತ್ಮಕ ವ್ಯವಹಾರಗಳನ್ನು ಗೌರವಿಸಬೇಕು. ನಿಜವಾದ ರಾಷ್ಟ್ರೀಯತೆ ಹಾಗೂ ಸಮಾಜ ಸೇವೆ ಎಂದರೆ ಕಾನೂನನ್ನು ಪಾಲಿಸುವುದು ಹಾಗೂ ಶಾಂತಿಯುತ ರೀತಿಯಲ್ಲಿ ಟಿಕೆಟ್‌ಗಳನ್ನು ಖರೀದಿಸುವುದು ಎಂದಿದ್ದಾರೆ. ಇದನ್ನೂ ಓದಿ: ಮೌಳಿಯ ರಂಗೀನ್ ಲೋಕದಲ್ಲಿ ಮಿಂದೆದ್ದ ಜನಸಾಗರ… ಒಂದೇ ವೇದಿಕೆಯಲ್ಲಿ ಸೌತ್ ಸ್ಟಾರ್ಸ್‍ಗಳ ಸಮಾಗಮ

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ 1990ರಲ್ಲಿ ಕಾಶ್ಮೀರದಲ್ಲಿ ನಡೆದ ನೈಜ ಘಟನೆಯನ್ನು ವಿವರಿಸುತ್ತದೆ. ಕಾಶ್ಮೀರಿ ಪಂಡಿತರು ಕಾಶ್ಮೀರದಲ್ಲಿ ಅನುಭವಿಸಿದ ಸಾವು-ನೋವು, ಮಹಾ ವಲಸೆ, ಭೀಕರ ಹತ್ಯೆ, ಹೃದಯ ವಿದ್ರಾವಕ ಸನ್ನಿವೇಶಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ.

  • ದಿ ಕಾಶ್ಮೀರ್ ಫೈಲ್ಸ್ ಮಾದರಿಯಲ್ಲಿ ಯಾವೆಲ್ಲ ಚಿತ್ರಗಳು ಬರಬೇಕು : ಪ್ರಕಾಶ್ ರೈ ಲಿಸ್ಟ್ ನೋಡಿ

    ದಿ ಕಾಶ್ಮೀರ್ ಫೈಲ್ಸ್ ಮಾದರಿಯಲ್ಲಿ ಯಾವೆಲ್ಲ ಚಿತ್ರಗಳು ಬರಬೇಕು : ಪ್ರಕಾಶ್ ರೈ ಲಿಸ್ಟ್ ನೋಡಿ

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಕುರಿತು ದಕ್ಷಿಣ ಭಾರತದ ಹೆಸರಾಂತ ನಟ ಪ್ರಕಾಶ್ ರೈ ಸರಣಿಯ ಟ್ವಿಟ್ ಮಾಡುತ್ತಿದ್ದಾರೆ. ಈ ಮೊದಲು ಅವರು ಸಿನಿಮಾದ ಕುರಿತಾಗಿ ಟ್ವೀಟ್ ಮಾಡಿ ‘ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಗಾಯ ಕೆದರುತ್ತಿದೆಯೋ, ವಾಸಿ ಮಾಡುತ್ತದೆಯೋ ಅಥವಾ ದ್ವೇಷವನ್ನು ಹರಡುತ್ತಿದೆಯೋ?’ ಎಂದು ಪ್ರಶ್ನೆ ಮಾಡಿದ್ದರು. ಈಗ ಯಾವೆಲ್ಲ ಫೈಲ್ಸ್ ಸಿನಿಮಾ ಆಗಬೇಕಿವೆ ಎಂದು ಸಿನಿಮಾದ ಶೀರ್ಷಿಕೆ ಸಮೇತ ಟ್ವಿಟ್ ಮಾಡಿದ್ದಾರೆ. ಅಲ್ಲದೇ ವ್ಯಂಗ್ಯವಾಗಿ “ನಿರ್ಮಾಪಕರಾಗಿ ಬದಲಾದ ಸುಪ್ರೀಮ್ ನಟರೆ, ಈ ಫೈಲ್ಸ್ ಗಳಿಗೂ ತಿರುವುಗಳನ್ನು ಕೊಟ್ಟು, ಸಿನಿಮಾ ರಿಲೀಸ್ ಮಾಡಿ” ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ : ನವೀನ್ ಸಜ್ಜು ಹೀರೋ: ಯಾರಿವ ಮುತ್ತು ವಿತ್? Exclusive Photos

    ಈ ಹಿಂದೆ ಟ್ವೀಟ್ ಮಾಡಿದ್ದಾಗ ಅದು ಸಿನಿಮಾ ತಂಡಕ್ಕೋ ಅಥವಾ ಬಿಜೆಪಿ ಪಕ್ಷಕ್ಕೋ ಎಂದು ಗೊಂದಲವಿತ್ತು. ಆದರೆ, ಇಲ್ಲಿ ಅವರು ‘ಸುಪ್ರೀಂ’ ಪದವನ್ನು ಬಳಸಿದ್ದರಿಂದ ನೇರವಾಗಿ ಪ್ರಧಾನಿ ನರೇಂದ್ರ ಮೋದಿವರಿಗೆ ಈ ಪ್ರಶ್ನೆಯನ್ನು ಕೇಳಿದ್ದಾರೆ ಎನ್ನಲಾಗುತ್ತಿದೆ.

    ಪ್ರಕಾಶ್ ರೈ ಪ್ರಕಾರ ಯಾವೆಲ್ಲ ಸಿನಿಮಾಗಳು ಬರಬೇಕು ಅಂದರೆ, ಅವರೇ ಟ್ವಿಟರ್ ಖ್ಯಾತೆಯಲ್ಲಿ ಚಿತ್ರ ಸಹಿತ ಹೇಳಿಕೊಂಡಂತೆ ‘ಗೋಧ್ರಾ ಫೈಲ್’, ‘ಡೆಲ್ಲಿ ಫೈಲ್’, ‘ಜಿಎಸ್ಟಿ ಫೈಲ್’, ‘ಡಿ ಮಾನಿಟೇಷನ್ ಫೈಲ್’, ‘ಕೋವಿಡ್ ಫೈಲ್ಸ್’, ‘ಗಂಗಾ ಫೈಲ್ಸ್’ ಹೀಗೆ ಆರು ಸಿನಿಮಾಗಳು ನಿಮ್ಮ ನಿರ್ಮಾಣದಲ್ಲಿ ಮೂಡಿ ಬರಲಿ ಎಂದು ಕೇಳಿದ್ದಾರೆ.

    ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರತಂಡವು ಈ ಸಿನಿಮಾ ನೂರು ಕೋಟಿ ಕ್ಲಬ್  ಸೇರಿರುವ ಹಿನ್ನೆಲೆಯಲ್ಲಿ ಸಂಭ್ರಮದಲ್ಲಿದೆ. ಸಕ್ಸೆಸ್ ಮೀಟ್ ಗಳನ್ನು ಆಯೋಜನೆ ಮಾಡಲಾಗುತ್ತಿದೆ. ಆದರೆ, ದಿನಗಳದಂತೆ ಈ ಸಿನಿಮಾವನ್ನು ವಿರೋಧಿಸುವವರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಅಲ್ಲದೇ, ನೇರವಾಗಿ ಸಿನಿಮಾ ತಂಡದೊಂದಿಗೆ ಸಂವಾದಿಸುವ ಬದಲು, ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಿಕೊಂಡು ಪ್ರಶ್ನೆಗಳನ್ನು ಕೇಳಲಾಗುತ್ತಿದೆ.

  • ‘ದಿ ಕಾಶ್ಮೀರ್ ಫೈಲ್ಸ್’ ಕುರಿತು ಪ್ರಕಾಶ್ ರೈ ಮಾಡಿದ ಟ್ವೀಟ್ ಗೆ ಜಗ್ಗಾಟ ಶುರು

    ‘ದಿ ಕಾಶ್ಮೀರ್ ಫೈಲ್ಸ್’ ಕುರಿತು ಪ್ರಕಾಶ್ ರೈ ಮಾಡಿದ ಟ್ವೀಟ್ ಗೆ ಜಗ್ಗಾಟ ಶುರು

    ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಬಗ್ಗೆ ಮೊದಲಿನಿಂದಲೂ ಪರ ವಿರೋಧ ಕೇಳಿ ಬರುತ್ತಿದೆ. ಅದನ್ನು ಒಂದು ಸಿನಿಮಾವಾಗಿ ತಗೆದುಕೊಂಡಿದ್ದರೆ, ಇಷ್ಟೊತ್ತಿಗೆ ನೂರಾರು ಸಿನಿಮಾಗಳಲ್ಲಿ ಅದೂ ಒಂದಾಗಿರುತ್ತಿತ್ತು. ಆದರೆ, ಧರ್ಮಾಧಾರದ ಮೇಲೆ, ಪಕ್ಷಗಳ ವಿರುದ್ಧ ಹೀಗೆ ತಮ್ಮಿಷ್ಟಕ್ಕೆ ಈ ಸಿನಿಮಾವನ್ನು ಬಳಸಿಕೊಂಡಿರುವ ಪರಿಣಾಮ, ಇವತ್ತು ಆ ಸಿನಿಮಾವನ್ನು ವಿರೋಧಿಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

    ಬಾಲಿವುಡ್ ನಟಿ , ರಾಷ್ಟ್ರ ಪ್ರಶಸ್ತಿ ವಿಜೇತೆ ಕಂಗನಾ ರಣಾವತ್ ಈ ಸಿನಿಮಾವನ್ನು ಹಿಗ್ಗಾಮುಗ್ಗ ಹೊಗಳಿದರೆ, ಹೆಸರಾಂತ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಕಾಶ್ ರೈ ಈ ಸಿನಿಮಾವನ್ನು ಬೇರೆ ರೀತಿಯಲ್ಲಿ  ತಗೆದುಕೊಂಡಿದ್ದಾರೆ. ಈ ಕುರಿತು ಅವರು ಟ್ವಿಟ್ ಮಾಡಿದ್ದು, ಅದು ಈಗ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ : ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್

    ಎಲ್ಲರಿಗೂ ಗೊತ್ತಿರುವಂತೆ ಪ್ರಕಾಶ್ ರೈ, ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರದ ವಿರುದ್ಧ ತಿರುಗಿ ಬಿದ್ದಾಗಿನಿಂದ ‘ಜಸ್ಟ್ ಆಸ್ಕಿಂಕ್’ ಎಂಬ ಹ್ಯಾಷ್ ಟ್ಯಾಗ್ ನಲ್ಲಿ ಪ್ರಶ್ನೆಗಳನ್ನು ಕೇಳುತ್ತಲೇ ಬಂದಿದ್ದಾರೆ. ಈ ಹ್ಯಾಷ್ ಟ್ಯಾಗ್ ಅಡಿಯಲ್ಲಿಯೇ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೂ ಅವರು ಪ್ರಶ್ನೆ ಮಾಡಿದ್ದಾರೆ. ಅವರು ಮಾಡಿದ ಪ್ರಶ್ನೆಗೆ ಕೆಲವರು ಮೆಚ್ಚುಗೆ ಸೂಚಿಸಿದ್ದರೆ, ಇನ್ನೂ ಕೆಲವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಕುರಿತಾಗಿ ಟ್ವೀಟ್ ಮಾಡಿರುವ ಪ್ರಕಾಶ್ ರೈ, ‘ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಗಾಯ ಕೆದರುತ್ತಿದೆಯೋ, ವಾಸಿ ಮಾಡುತ್ತದೆಯೋ ಅಥವಾ ದ್ವೇಷವನ್ನು ಹರಡುತ್ತಿದೆಯೋ?’ ಎಂದು ಕೇಳಿದ್ದಾರೆ. ಈ ಪ್ರಶ್ನೆಯನ್ನು ಕೇಳುವುದರ ಜತೆ ಜತೆಗೆ ಅವರು ಥಿಯೇಟರ್ ನಲ್ಲಿ ಜನರು ವೀಕ್ಷಿಸುತ್ತಿರುವ ಮತ್ತು ಪ್ರತಿಕ್ರಿಯೆಯ ವಿಡಿಯೋವನ್ನೂ ಅವರು ಟ್ವಿಟ್ ಮಾಡಿದ್ದಾರೆ. ಒಂದು ಕಡೆ ಈ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದು ಕಡೆ ವಿರೋಧದ ಅಲೆಯೂ ಎದ್ದಿದೆ. ಏನೇ ಆದರೂ, ಸಿನಿಮಾ 100 ಕೋಟಿ ಕ್ಲಬ್ ಸೇರುವ ಮೂಲಕ ಯಶಸ್ಸಿನ ಸಿನಿಮಾ ಪಟ್ಟಿಗೆ ಸೇರಿದೆ.

  • ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಕಂಗನಾ ಹೊಗಳಿದ್ದು ಇದಕ್ಕಾ? : ಹೊರ ಬಿತ್ತು ಹೊಸ ಸುದ್ದಿ

    ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಕಂಗನಾ ಹೊಗಳಿದ್ದು ಇದಕ್ಕಾ? : ಹೊರ ಬಿತ್ತು ಹೊಸ ಸುದ್ದಿ

    ಬಾಲಿವುಡ್ ನಟಿ, ರಾಷ್ಟ್ರ ಪ್ರಶಸ್ತಿ ವಿಜೇತ ತಾರೆ ಕಂಗನಾ ರಣಾವತ್ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಿಡುಗಡೆಯಿಂದ ಈವರೆಗೂ ಚಿತ್ರದ ಜತೆಗೆ ಇದ್ದಾರೆ. ಈ ಚಿತ್ರಕ್ಕೆ ಬಾಲಿವುಡ್ ನಟ ನಟಿಯರು ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಗರಂ ಆದರು. ಇಂತಹ ಚಿತ್ರವನ್ನು ಬೆಂಬಲಿಸಬೇಕು ಎಂದು ಅಭಿಮಾನಿಗಳಿಗೆ ಕರೆ ಕೊಟ್ಟರು. ಇಂಥದ್ದೊಂದು ಸಿನಿಮಾ ಬಂದು, ಬಾಲಿವುಡ್ ಪಾಪ ತೊಳೆಯಿತು ಎಂದು ಬರೆದುಕೊಂಡರು. ಇಷ್ಟೆಲ್ಲ ಮಾಡಿದ್ದು ಅವರು ನಿರ್ದೇಶಕ ವಿವೇಕ್ ಅಗ್ನಿಹೋತ್ರ ಅವರ ಮೇಲಿನ ಅಭಿಮಾನಕ್ಕಂತೆ. ಇದನ್ನೂ ಓದಿ : ಚಿಕ್ಕಬಳ್ಳಾಪುರದಲ್ಲಿಆರ್.ಆರ್.ಆರ್ ಮೆಗಾ ಪ್ರೀ ರಿಲೀಸ್ ಇವೆಂಟ್ : ಏನೆಲ್ಲ ವಿಶೇಷ?

    ಇದು ಬಿಟೌನ್ ಅಂಗಳದಿಂದ ಹೊರ ಬಿದ್ದಿರುವ ಮಾಹಿತಿ ಪ್ರಕಾರ ನಿರ್ದೇಶಕ ವಿವೇಕ್ ಅಗ್ನಿಹೋತ್ರ ಮತ್ತು ಕಂಗನಾ ರಣಾವತ್ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾವೊಂದು ತಯಾರಿ ಆಗಲಿದೆಯಂತೆ. ದೇಶ ಪ್ರೇಮ ಸಾರುವಂತಹ ಕಥೆಯನ್ನು ಕಂಗನಾ ಅವರಿಗಾಗಿ ನಿರ್ದೇಶಕರು ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

    ಕಾಶ್ಮೀರಿ ಪಂಡಿತರ ವಲಸೆ ಮತ್ತು ಹತ್ಯಾಕಾಂಡವನ್ನು ಆಧರಿಸಿದ ಸಿನಿಮಾ ದಿ ಕಾಶ್ಮೀರ್ ಫೈಲ್ಸ್. ಹೀಗಾಗಿ ಕಂಗನಾ ರಣಾವತ್, ಈ ಸಿನಿಮಾದ ಕುರಿತು ಅನೇಕ ಪೋಸ್ಟ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇಂಥದ್ದೊಂದು ಚಿತ್ರಕ್ಕೆ ಬೆಂಬಲವಾಗಿ ನಿಂತವರಿಗೆ ಅಭಿನಂದನೆ ಸಲ್ಲಿಸಿದ್ದರು. ನಿಲ್ಲದವರನ್ನು ಝಾಡಿಸಿದ್ದರು.  ಇದನ್ನೂ ಓದಿ : ಪುನೀತ್ ಹುಟ್ಟು ಹಬ್ಬಕ್ಕೆ ವಿಶ್ ಮಾಡದ ರಶ್ಮಿಕಾ ಮಂದಣ್ಣ ಮತ್ತೆ ನೆಟ್ಟಿಗರು ಗರಂ

    ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ನಾನಾ ರಾಜ್ಯಗಳ ಮುಖ್ಯಮಂತ್ರಿಗಳು ಈ ಸಿನಿಮಾದ ಬೆನ್ನಿಗೆ ನಿಂತರು. ಕರ್ನಾಟಕದಲ್ಲೂ ಈ ಸಿನಿಮಾದ ಹವಾ ಜೋರಾಯಿತು. ಸದ್ಯದಲ್ಲೇ ಕನ್ನಡಕ್ಕೂ ಈ ಸಿನಿಮಾ ಡಬ್ ಆಗಲಿದೆ ಎನ್ನುವ ಮಾಹಿತಿ ಇದೆ.

  • ಕನ್ನಡದಲ್ಲೂ ಬರಲಿದೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ

    ಕನ್ನಡದಲ್ಲೂ ಬರಲಿದೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ

    ವಿವಾದಿತ ಬಾಲಿವುಡ್ ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕನ್ನಡಕ್ಕೆ ಡಬ್ ಮಾಡುವ ಪ್ಲ್ಯಾನ್ ನಡೆಯುತ್ತಿದೆ. ಈ ಕುರಿತು ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಕನ್ನಡ ಅವತರಣಿಕೆಯನ್ನು ರೆಡಿ ಮಾಡಿಸಿ, ಜನರಿಗೆ ತೋರಿಸುವ ಪ್ಲ್ಯಾನ್ ಕುರಿತು ಸಿ.ಎಂ ಬಸವರಾಜ ಬೊಮ್ಮಾಯಿ ಆಪ್ತ ಸಚಿವರ ಜತೆ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.

    ಈಗಾಗಲೇ ಸಚಿವ ಸಂಪುಟದ ಸಹೋದ್ಯೋಗಿಗಳ ಜತೆ ಸಿನಿಮಾ ಮಾಡಿರುವ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ಸದಸ್ಯರಿಗೂ ಸಿನಿಮಾ ನೋಡುವಂತೆ ಮನವಿ ಮಾಡಿದ್ದರು. ಅಲ್ಲದೇ, ವಿಧಾನ ಸಭೆ ಮತ್ತು ವಿಧಾನ ಪರಿಷತ್ ನಲ್ಲೂ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡುವಂತೆ ಮನವಿ ಕೂಡ ಮಾಡಿಕೊಳ್ಳಲಾಗಿತ್ತು. ಇದೀಗ ಕರ್ನಾಟಕದ ಜನತೆಗೆ ಆ ಸಿನಿಮಾವನ್ನು ತೋರಿಸುವುದಕ್ಕಾಗಿ ಡಬ್ ಮಾಡುವ ಆಲೋಚನೆ ಮಾಡಿದೆಯಂತೆ ಕರ್ನಾಟಕದ ಭಾರತೀಯ ಜನತಾ ಪಕ್ಷ. ಇದನ್ನೂ ಓದಿ : ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್

    ಕರ್ನಾಟಕ ಸರಕಾರ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಮನರಂಜನಾ ತೆರಿಗೆಯನ್ನು ತಗೆದುಕೊಳ್ಳುತ್ತಿಲ್ಲ. ಅಲ್ಲದೇ, ಸಿನಿಮಾ ನೋಡುವಂತೆ ಪ್ರೇರೇಪಿಸುವ ಮಾತುಗಳನ್ನೂ ಆಡುತ್ತಿದೆ. ಕೆಲ ಸಚಿವರು ಮತ್ತು ಜನಪ್ರತಿನಿಧಿಗಳು ಆಯಾ ಕ್ಷೇತ್ರದಲ್ಲಿ ಈ ಸಿನಿಮಾವನ್ನು ಉಚಿತವಾಗಿ ತೋರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರೂ ಸಿನಿಮಾ ನೋಡಬೇಕು ಎನ್ನುವ ಉದ್ದೇಶ ಬಿಜೆಪಿಯದ್ದು ಎನ್ನಲಾಗುತ್ತಿದೆ.

  • ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನಿಗೆ ಜೀವ ಬೆದರಿಕೆ ‘ವೈ’ ಶ್ರೇಣಿ ಭದ್ರತೆ

    ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನಿಗೆ ಜೀವ ಬೆದರಿಕೆ ‘ವೈ’ ಶ್ರೇಣಿ ಭದ್ರತೆ

    ಭಾರತೀಯ ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಭಾರತದ ಸರಕಾರ ‘ವೈ’ ಕೆಟಗರಿ ಭದ್ರತೆ ನೀಡಲಾಗುತ್ತಿದೆ ಎಂದು ವರದಿ ಆಗಿದೆ. ಈ ಸಿನಿಮಾ ಭಾರೀ ವಿವಾದ ಎಬ್ಬಿಸಿದ್ದು, ಇದರಿಂದಾಗಿ ನಿರ್ದೇಶಕರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿರುವೆಯಂತೆ. ಈ ಹಿನ್ನೆಲೆಯಲ್ಲಿ ಭದ್ರತೆ ಕೊಡಲು ಸರಕಾರ ತೀರ್ಮಾನಿಸಿದೆ ಎಂದು ಸುದ್ದಿ ಸಂಸ್ಥೆ ಟ್ವಿಟ್ ಮಾಡಿದೆ. ಇದನ್ನೂ ಓದಿ : ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್

    ದಿ ಕಾಶ್ಮೀರ್ ಫೈಲ್ಸ್ ‍ಸಿನಿಮಾದ ಕಥೆಯು ಸತ್ಯಕ್ಕೆ ದೂರವಾಗಿದೆ ಎಂದು ಕೆಲವರು ವಾದ ಮಾಡಿದರೆ, ನೈಜ ಘಟನೆಯನ್ನೂ ಸಿನಿಮಾ ಮಾಡಿದ್ದೇನೆ ಎಂದಿದ್ದಾರೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಹಲವು ತಿಂಗಳ ಕಾಲ ಸಂಶೋಧನೆ ಮಾಡಿ, ಮಾಹಿತಿ ಕಲೆ ಹಾಕಿ ಚಿತ್ರಕಥೆ ಬರೆದಿದ್ದೇನೆ. ಇದರಲ್ಲಿ ಯಾವ ಅಂಶವೂ ಕಲ್ಪನೆಯಿಂದ ಮೂಡಿದ್ದಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ : ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್

    ಕೆಲವು ಕಡೆ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದೆ. ಇಂತಹ ಚಿತ್ರಗಳಿಂದ ಕೋಮಗಲಭೆ ಆಗುವ ಸಾಧ್ಯತೆ ಇದೆ. ಅಲ್ಲದೇ, ಜನರ ಭಾವನೆಗಳನ್ನು ಕೆರಳಿಸುವ ಪ್ರಯತ್ನವನ್ನು ಈ ಸಿನಿಮಾ ಮಾಡುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ. ಕಾಶ್ಮೀರಿ ಪಂಡಿತರ ಸಾವಿನ ಲೆಕ್ಕಾಚಾರದಲ್ಲೂ ಚರ್ಚೆ ನಡೆಯುತ್ತಿದೆ. ಗತಿಸಿರುವ ಕಾಲಕ್ಕೆ ಮತ್ತೆ ಗುದ್ದಲಿ ಹಾಕಿ, ಉತ್ಕನನ ಮಾಡುವಂತಹ ಕೆಲಸಗಳೂ ನಡೆಯುತ್ತಿವೆ. ಹೀಗಾಗಿ ನಿರ್ದೇಶಕರಿಗೆ ಭದ್ರತೆ ನೀಡಬೇಕು ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ‘ವೈ’ ಶ್ರೇಣಿ ಭದ್ರತೆ ನೀಡಲು ತೀರ್ಮಾನಿಸಿದೆ ಎನ್ನಲಾಗುತ್ತಿದೆ.

  • ದಿ ಕಾಶ್ಮೀರ್ ಫೈಲ್ಸ್ ನನ್ನದೇ ಕುಟುಂಬದ ಕಥೆಯಂತಿತ್ತು: ಸತ್ಯ ಘಟನೆ ಹಂಚಿಕೊಂಡ ಬಾಲಿವುಡ್ ನಟಿ

    ದಿ ಕಾಶ್ಮೀರ್ ಫೈಲ್ಸ್ ನನ್ನದೇ ಕುಟುಂಬದ ಕಥೆಯಂತಿತ್ತು: ಸತ್ಯ ಘಟನೆ ಹಂಚಿಕೊಂಡ ಬಾಲಿವುಡ್ ನಟಿ

    ದಿ ಕಾಶೀರ್ ಫೈಲ್ಸ್ ಸಿನಿಮಾ ಬಂದ ನಂತರ ಕಾಶ್ಮೀರಿ ಕಣಿವೆಯ ಒಂದೊಂದೇ ದುರಂತ ಕಥೆಗಳು ಆಚೆ ಬರುತ್ತಿವೆ. ಕಾಶ್ಮೀರ ಪಂಡಿತರ ವಲಸೆ ಮತ್ತು ಮಾರಣಹೋಮದ ಕಥೆಗಳನ್ನು ಸಾಮಾನ್ಯರಲ್ಲ, ಸಿಲೆಬ್ರಿಟಿಗಳು ಕೂಡ ಹೇಳಿಕೊಳ್ಳುತ್ತಿದ್ದಾರೆ. ಅದೂ, ತಮ್ಮ ಕುಟುಂಬದಲ್ಲಿ ನಡೆದ ಘಟನೆಗಳನ್ನು ಎನ್ನುವುದು ವಿಶೇಷ. ಇದನ್ನೂ ಓದಿ : ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್

    ನಾಲ್ಕು ದಿನಗಳ ಹಿಂದೆಯಷ್ಟೇ ಬಾಲಿವುಡ್ ನಟಿ ಯಾಮಿ ಗೌತಮ್ ತಮ್ಮ ಕುಟುಂಬಕ್ಕೆ ಆದ ದೌರ್ಜನ್ಯವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಇದೀಗ ಮತ್ತೋರ್ವ ಬಾಲಿವುಡ್ ನಟಿ ಸಂದೀಪ ಧರ್ ಕೂಡ ತಮ್ಮ ಜೀವನದಲ್ಲಿ ನಡೆದ ಆ ದುರಂತದ ಕಥೆಯನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಮೊದಲ ದಿನವೇ 30 ಕೋಟಿ ಕಲೆಕ್ಷನ್ – 100 ಕೋಟಿ ಕ್ಲಬ್ ಸೇರುತ್ತಾ ಜೇಮ್ಸ್..?

    ಗುಲಾಬಿ ಹೂವನ್ನು ನಾನು ಕೇಳಿದೆ

    ಎಲ್ಲಿ ನಿನ್ನ ಪರಿಮಳ ಎಂದು

    ಅದು ವಸಂತ ಮಾಸದತ್ತ ಬೆಟ್ಟು ಮಾಡಿತು…

    ನಾನು ಮತ್ತೆ ವಸಂತಕ್ಕೆ ಪ್ರಶ್ನೆ ಮಾಡಿದೆ

    ನಿನ್ನ ಹಣೆ ಮೇಲೇಕೆ ಗೆರೆಗಳು ಮೂಡಿದ್ದು? ಎಂದು

    ಅದು ದುಃಖಿಸುತ್ತಲೇ ಹೇಳಿತು

    ನನ್ನ ಗಾಯಗಳಿಗೆ ಉಪ್ಪು ಹಾಕಲಾಗಿದೆ ಎಂದು

    ನಾನು ಆ ಅರಳಿದ ತೋಟವನ್ನು ಹಾಗೆಯೇ ಬಿಟ್ಟುಬಿಟ್ಟೆ

    ಈಗ ಗುರಿ ಇಲ್ಲದೇ ಅಲೆದಾಡುತ್ತಿದ್ದೇನೆ

    ಹೀಗೆ ಭಾವನಾತ್ಮಕವಾಗಿ ಕವಿತೆಯ ಸಾಲುಗಳನ್ನು ಬರೆದುಕೊಂಡಿರುವ ಸಂದೀಪ ಧರ್, ತನ್ನ ಕುಟುಂಬಕ್ಕಾದ ತೊಂದರೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಲ್ಲದೇ, ತೊಂಬತ್ತರ ದಶಕದಲ್ಲಿ ಕಾಶ್ಮೀರದ ಶ್ರೀನಗರದಲ್ಲಿ ತಮ್ಮ ಮನೆ ಹೇಗಿತ್ತೆಂದು ಫೋಟೋವನ್ನು ಸಾಕ್ಷಿಯಾಗಿ ನೀಡಿದ್ದಾರೆ. ಇದನ್ನೂ ಓದಿ : ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್

    “ಅವರು ಹೇಳಿದರು, ಕುಟುಂಬದ ಸಮೇತ ಕಾಶ್ಮೀರ ತೊರೆಯಬೇಕೆಂದು. ರಾತ್ರೋರಾತ್ರಿ ಹೋಗುವುದು ಎಲ್ಲಿಗೆ? ಅದೂ ನಮ್ಮದೇ ನೆಲೆಬಿಟ್ಟು. ಹಿಂಸೆಗೆ ಹೊರಡಲೇಬೇಕಿತ್ತು. ಅದಕ್ಕಾಗಿ ಅಪ್ಪ ಟ್ರಕ್ ವೊಂದರ ಸಹಾಯ ಪಡೆದು. ಟ್ರಕ್ ನಲ್ಲಿ ಬಚ್ಚಿಟ್ಟುಕೊಂಡೇ ಹೋಗುವುದು ಅನಿವಾರ್ಯವಾಗಿತ್ತು. ನನ್ನ ತಂಗಿಯನ್ನು ಕಾಪಾಡಿಕೊಳ್ಳಲು ನನ್ನ ತಂದೆ ಟ್ರಕ್ ಸೀಟ್ ಕೆಳಗೆ ಬಚ್ಚಿಟ್ಟಿದ್ದರು. ಮಧ್ಯೆ ರಾತ್ರಿ ಹೀಗೆ ಹೋಗುವುದು ಎಷ್ಟು ಕಷ್ಟ ಎನ್ನುವುದನ್ನು ನಾನು ಬಲ್ಲೆ.  ದಿ ಕಾಶ್ಮೀರ್ ಫೈಲ್ಸ್ ನಲ್ಲೂ ಇಂತಹ ದೃಶ್ಯಗಳಿವೆ. ಅದನ್ನು ನೋಡಿ ನನಗೆ ಜೀವವೇ ಹೋದಂತಾಯಿತು. ತನ್ನ ತವರು ಮನೆ ಬಗ್ಗೆ ಸದಾ ನೆನಪಿಸಿಕೊಳ್ಳುತ್ತಿದ್ದ ನನ್ನ ಅಜ್ಜಿ ತೀರಿಹೋದರು. ಅದೊಂದು ನರಕಸದೃಶ್ಯ ಬದುಕು” ಎಂದು ಸಂದೀಪ ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಇಂತಹ ಚಿತ್ರವನ್ನು ಮಾಡಿ, ಜಗತ್ತಿಗೆ ಸತ್ಯವನ್ನು ತೋರಿಸಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಧನ್ಯವಾಗಳನ್ನೂ ಅವರು ತಿಳಿಸಿದ್ದಾರೆ.

  • ಅವರು ನನ್ನನ್ನು ನರೇಂದ್ರ ಮೋದಿ ಚಮಚಾ ಅಂತಾರೆ: ಪ್ರಕಾಶ್ ಬೆಳವಾಡಿ

    ಅವರು ನನ್ನನ್ನು ನರೇಂದ್ರ ಮೋದಿ ಚಮಚಾ ಅಂತಾರೆ: ಪ್ರಕಾಶ್ ಬೆಳವಾಡಿ

    ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ನಟಿಸಿದ ನಂತರ ನನ್ನನ್ನು ನರೇಂದ್ರ ಮೋದಿ ಚಮಚಾ ಎನ್ನುತ್ತಿದ್ದಾರೆ. ಸತ್ಯವನ್ನು ಒಪ್ಪಿಕೊಳ್ಳಲು ಕಷ್ಟವಾದವರು ಈ ರೀತಿ ಮಾತನಾಡುವುದು ಸಹಜ ಎಂದಿದ್ದಾರೆ ನಟ ಪ್ರಕಾಶ್ ಬೆಳವಾಡಿ.

    ಇಂದು ಮೈಸೂರಿನಲ್ಲಿ ‘ಮೈಸೂರು ಸಿನಿಮಾ ಸೊಸೈಟಿ’ ಏರ್ಪಡಿಸಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್ ಬೆಳವಾಡಿ, “ಈ ಸಿನಿಮಾ ಪ್ರಾಪಗೆಂಡಾಕೆ ಬಳಕೆ ಆಗುತ್ತಿದೆ. ಜಾತಿರಾಜಕಾರಣಕ್ಕೆ ಕಾರಣವಾಗಿದೆ. ಧರ್ಮಗಳ ನಡುವೆ ದ್ವೇಷ ಬಿತ್ತುತ್ತಿದೆ ಎಂದು ಮಾತನಾಡುತ್ತಿದ್ದಾರೆ. ಸಿನಿಮಾ ಇರುವುದೇ ಸತ್ಯ ಹೇಳುವುದಕ್ಕೆ. ಈ ಸಿನಿಮಾ ಸತ್ಯವನ್ನೇ ಹೇಳಿದೆ’ ಎಂದರು. ಇದನ್ನೂ ಓದಿ: ಮಿಸ್ ವರ್ಲ್ಡ್ 2021: ಭಾರತೀಯ ಮೂಲದ ಶ್ರೀಸೈನಿ ರನ್ನರ್ ಅಪ್, ಕರೋಲಿನಾ ಬಿಲಾವ್ಸ್ಕಾಗೆ ‘ವಿಶ್ವ ಸುಂದರಿ’ ಕಿರೀಟ

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ನಟಿಸಿದ್ದಕ್ಕಾಗಿ ಮತ್ತು ಆ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದಕ್ಕಾಗಿ ತಮ್ಮನ್ನು ನರೇಂದ್ರ ಮೋದಿ ಅವರ ಚಮಚಾ ಎಂದು ಕರೆಯುತ್ತಿರುವ ವಿಷಯವನ್ನೂ ಅವರು ಹೇಳಿಕೊಂಡರು. ಕೆಲವು ವಿಷಯಗಳನ್ನು ಮೋದಿ ಅವರನ್ನು ಬೆಂಬಲಿಸಿದ್ದು ನಿಜ ಎಂದು ಪ್ರಕಾಶ್ ಬೆಳವಾಡಿ ಒಪ್ಪಿಕೊಂಡರು. ಯಾರು ಏನು ಬೇಕಾದರೂ ಅಂದುಕೊಳ್ಳಲಿ ನಾನು ಸತ್ಯದ ಪರ ಇರುವುದಾಗಿ ಅವರು ಸ್ಪಷ್ಟ ಪಡಿಸಿದರು. ಈ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಇರದೇ ಇದ್ದರೆ ಸಿನಿಮಾ ಬಿಡುಗಡೆಯೇ ಆಗುತ್ತಿರಲಿಲ್ಲ ಎಂದರು ಪ್ರಕಾಶ್ ಬೆಳವಾಡಿ. ಇದನ್ನೂ ಓದಿ: ಜೇಮ್ಸ್ ಸಿನಿಮಾ ನೋಡೋಕೆ 10 ಅಲ್ಲ, 100 ಕಾರಣ

    ನಿರ್ದೇಶಕನಿಗೆ ಇರಬೇಕಾದ ಜವಾಬ್ದಾರಿಗಳ ಬಗ್ಗೆಯೂ ಮಾತನಾಡಿದ ಅವರು, ನಿರ್ದೇಶಕರು ಸತ್ಯದ ಪರವಾಗಿ ಕೆಲಸ ಮಾಡಬೇಕು. ಅವನು ಕಾರಕೂನನಂತೆ ಕೆಲಸ ಮಾಡಬಾರದು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಹಾಗಾಗಿ ಅವರನ್ನು ಎಲ್ಲರೂ ಅಭಿನಂದಿಸಬೇಕು ಎಂದಿದ್ದಾರೆ ಬೆಳವಾಡಿ.

  • ಅಬ್ಬಬ್ಬಾ..! 60 ಕೋಟಿ ಬಾಚಿದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ : ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ

    ಅಬ್ಬಬ್ಬಾ..! 60 ಕೋಟಿ ಬಾಚಿದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ : ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ

    ವಾದ ವಿವಾದದ ನಡುವೆಯೂ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಐದು ದಿನದಲ್ಲಿ ಬರೋಬ್ಬರಿ 60 ಕೋಟಿ ಬಾಚಿದೆ. ಈ ಮಾದರಿಯ ಸಿನಿಮಾಗಳಲ್ಲೇ ಅತೀ ಕಡಿಮೆ ಸಮಯದಲ್ಲಿ ಇಷ್ಟೊಂದು ಗಳಿಕೆ ಮಾಡಿದ ಮೊದಲ ಚಿತ್ರ  ಎಂಬ ಹೆಗ್ಗಳಿಕೆಗೂ ಕಾರಣವಾಗಿದೆ.

    ಈ ಕುರಿತು ಬಾಲಿವುಡ್ ಖ್ಯಾತ ಟ್ರೇಡ್ ಅನಾಲಿಸಿಸ್ಟ್ ಟ್ವೀಟ್ ಕೂಡ ಮಾಡಿದ್ದು, ಆಯಾ ದಿನದ ಗಳಿಕೆಯ ಲೆಕ್ಕ ಕೊಟ್ಟಿದ್ದಾರೆ. ಮೊದಲ ದಿನ 3.55 ಕೋಟಿ ರೂಪಾಯಿ ಬಾಕ್ಸ್ ಆಫೀಸಿಗೆ ಹರಿದು ಬಂದಿದ್ದರೆ, ಎರಡನೇ ದಿನದ ಗಳಿಕೆ 8.50 ಕೋಟಿ, ಮೂರನೇ ದಿನ 15.10 ಕೋಟಿ, ನಾಲ್ಕನೇ ದಿನ 15.06 ಕೋಟಿ, ಐದನೇ ದಿನಕ್ಕೆ 18 ಕೋಟಿಯ ಭರ್ಜರಿ ಕಲೆಕ್ಷನ್ ಮಾಡಿದೆ. ಇದನ್ನೂ ಓದಿ : ಶಿವರಾಜ್ ಕುಮಾರ್ ಎದುರು ಅಖಾಡಕ್ಕೆ ಇಳಿದ ಡಾಲಿ ಧನಂಜಯ್

    ಸಾಮಾನ್ಯವಾಗಿ ವೀಕೆಂಡ್ ನಲ್ಲಿ ಕಲೆಕ್ಷನ್ ಜೋರಾಗಿರುತ್ತದೆ. ಆದರೆ, ಸಾಮಾನ್ಯ ದಿನದಲ್ಲೇ ಈ ಚಿತ್ರ 18 ಕೋಟಿ ರೂಪಾಯಿ ಗಳಿಕೆ ಮಾಡುವುದರೊಂದಿಗೆ ಹೊಸ ದಾಖಲೆ ಬರೆದಿದೆ. ಈ ಮೂಲಕ ಅತೀ ಶೀಘ್ರದಲ್ಲೇ ನೂರು ಕೋಟಿ ಕ್ಲಬ್ ಗೆ ಈ ಸಿನಿಮಾ ಸೇರಲಿದೆ.

    ಅಂಥದ್ದೇನಿದೆ ಈ ಸಿನಿಮಾದಲ್ಲಿ ?

    ನಿರ್ದೇಶಕ ವಿವೇಕ್ ಅಗ್ನಿಹೋತ್ರಿ 1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧದ ಕುರಿತು ಸಿನಿಮಾ ಮಾಡಿದ್ದಾರೆ. ಅದನ್ನು ‘ದಿ ಕಾಶ್ಮೀರ್ ಫೈಲ್ಸ್’ ಹೆಸರಿನಲ್ಲಿ ಬಿಡುಗಡೆ ಮಾಡಿದ್ದಾರೆ. ಸಿನಿಮಾದ ಶೀರ್ಷಿಕೆಯೇ ಪ್ರಚುರಪಡಿಸುವಂತೆ ನರಮೇಧದ ಹಿಂದಿರುವ ಇತಿಹಾಸವನ್ನು ಬಿಚ್ಚಿಡುವಂತಹ ‘ಫೈಲ್‍’ ಇದಾಗಿದೆ. ಈ ‘ಫೈಲ್’ ನ ಪುಟಪುಟದಲ್ಲೂ ರಕ್ತಸಿಕ್ತ ಅಧ್ಯಾಯಗಳಿವೆ. ಬರೆದ ಶಾಹಿ ಕೂಡ ಕೆಂಪಾಗಿದೆ. ಇಂತಹ ಹತ್ಯಾಕಾಂಡವನ್ನು ಸಿನಿಮಿಯ ರೂಪದಲ್ಲಿ ತರದೇ, ನಡೆದ ಘಟನೆಯನ್ನು ಹಸಿಹಸಿಯಾಗಿಯೇ ತರುವ ಪ್ರಯತ್ನ ಈ ಸಿನಿಮಾದಲ್ಲಿ ಆಗಿದೆ. ಇದನ್ನೂ ಓದಿ : ಮಿಷನ್ ಇಂಪಾಸಿಬಲ್ ಚಿತ್ರದಲ್ಲಿ ರಿಷಭ್ ಶೆಟ್ಟಿ: ತಾಪ್ಸಿ ಪನ್ನು ನಾಯಕಿ

    ಸಾಮಾನ್ಯವಾಗಿ ಸಿನಿಮಾಗಳೆಂದರೆ ನಾಟಕೀಯ ನಿರೂಪಣೆಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಕಥೆಯ ಕುತೂಹಲವನ್ನು ಕಾಪಿಡಲು ಅಲ್ಲಲ್ಲಿ, ನಾಟಕೀಯ ತಿರುವುಗಳನ್ನೂ ನೀಡಲಾಗುತ್ತದೆ. ಪ್ರೇಕ್ಷಕನ ಆಸಕ್ತಿಯ ಅನುಗುಣವಾಗಿ ಪಾತ್ರಕ್ಕೆ ಹಿನ್ನೆಲೆ ಒದಗಿಸಲಾಗುತ್ತದೆ. ‘ದಿ ಕಾಶ್ಮೀರ್ ಫೈಲ್ಸ್’ ನಲ್ಲಿ ಅದ್ಯಾವ ಗೋಜಿಗೂ ನಿರ್ದೇಶಕರು ಹೋಗಿಲ್ಲ. ತಮ್ಮ ಸಂಶೋಧನೆಯಲ್ಲಿ ಕಂಡುಂಡ ಕಥನವನ್ನು ಹಾಗೆಯೇ ಬಿಚ್ಚಿಡುತ್ತಾ ಹೋಗಿದ್ದಾರೆ. ಹಾಗಾಗಿ ಚಿತ್ರದ ತುಂಬಾ ಮನಸ್ಸಿಗೆ ಘಾಸಿಯಾಗುವಷ್ಟು ಕ್ರೌರ್ಯವೇ ತುಂಬಿದೆ.  ಅದೊಂದು ಹತ್ಯಾಕಾಂಡದ ಕಥೆಯೇ ಆಗಿದ್ದರಿಂದ ತೆರೆಯ ಮೇಲೂ ಅದನ್ನೇ ಮೂಡಿಸಿದ್ದಾರೆ. ಇದನ್ನೂ ಓದಿ : ಹಿಂದಿ ಆಯ್ತು, ಇದೀಗ ಮರಾಠಿಯಲ್ಲೂ ಕನ್ನಡದ ದಿಯಾ

    ಪುಷ್ಕರ್ ನಾಥ್ ಪಂಡಿತ್ (ಅನುಪಮ್ ಖೇರ್) ಪಾತ್ರವನ್ನು ಮುಖ್ಯವಾಗಿಟ್ಟುಕೊಂಡು ಕಥೆಯನ್ನು ಹೇಳುತ್ತಾ ಸಾಗುವ ನಿರ್ದೇಶಕರು, ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಮೊಮ್ಮಗನಿಗೆ ತನ್ನ ಕುಟುಂಬದ ಇತಿಹಾಸ ಹೇಳುತ್ತಾ ಸಾಗುವ ಕಥನ ಕ್ರಮದಲ್ಲಿ ಇಡೀ ಸಿನಿಮಾ ಸಾಗುತ್ತದೆ. ಈ ಪುಷ್ಕರ್ ನಾಥ್  ಮೂಲಕ ಕಾಶ್ಮೀರಿ ಪಂಡಿತರ ಮೇಲಾದ ದಾಳಿಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಸಾಗುತ್ತಾರೆ ನಿರ್ದೇಶಕರು. ಈ ಕಥನ ಕವಲುಗಳಲ್ಲಿ ಮಾಧ್ಯಮ, ರಾಜಕಾರಣ, ಭಯೋತ್ಪಾದನೆ, ಕೋಮುಗಲಭೆ, ಮತಾಂತರ, ಎರಡು ಕೋಮಿನ ನಡುವಿನ ಸಂಘರ್ಷ ಹೀಗೆ ಸಾಕಷ್ಟು ಘಟನೆಗಳು ದೃಶ್ಯಗಳಾಗಿ ಬಂದು ಹೋಗುತ್ತವೆ. ಇದೊಂದು ಒಪ್ಪಿತ ಸಿನಿಮಾ ಮಾಧ್ಯಮವಾಗಿರುವುದರಿಂದ ನಿರ್ದೇಶಕ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡು, ಅವನದ್ದೇ ಆದ ರೀತಿಯಲ್ಲಿ ಅಂತ್ಯ ಕೊಡುತ್ತಾನೆ. ಅಲ್ಲಿಗೆ ನೋಡುಗನ ಮನಸ್ಸು ಹದಗೊಳ್ಳುವುದೇ ಬೇರೆ ರೀತಿಯಾಗಿ. ಅಷ್ಟರ ಮಟ್ಟಿಗೆ ಸಿನಿಮಾ ನೋಡುಗನ ಎದೆಯೂರಿ ಹೆಚ್ಚಿಸುತ್ತದೆ.