ಭಾರತದಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿದೆ. ಬಾಕ್ಸ್ ಆಫೀಸಿನಲ್ಲೂ ಕೂಡ ಕೋಟಿ ಕೋಟಿ ಲೂಟಿ ಮಾಡಿದೆ. ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಈ ಚಿತ್ರಕ್ಕಾಗಿ ತೆರಿಗೆ ವಿನಾಯತಿ ಘೋಷಣೆ ಮಾಡಿದ್ದವು. ಅಲ್ಲದೇ ಕರ್ನಾಟಕ ಸರ್ಕಾರದ ಹಲವು ಮಂತ್ರಿಗಳು ಈ ಸಿನಿಮಾದ ವಿಶೇಷ ಪ್ರದರ್ಶನ ಕೂಡ ಏರ್ಪಡಿಸಿದ್ದರು. ಆದರೆ ಹಲವು ದೇಶಗಳಲ್ಲಿ ಈ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ.
ಈ ಹಿಂದೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಸಿಂಗಪುರ್ ಬ್ಯಾನ್ ಮಾಡಿತ್ತು. ಇದರ ಬೆನ್ನಲ್ಲೇ ಅರಬ್ ದೇಶಗಳು ಕೂಡ ಈ ಸಿನಿಮಾವನ್ನು ತಮ್ಮ ಪ್ರಜೆಗಳಿಗೆ ತೋರಿಸಲು ಹಿಂದೇಟು ಹಾಕಿವೆ. ಅಲ್ಲದೇ, ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಕೂಡ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಭಾಷಣಗಳಿಗೆ ಬ್ರೇಕ್ ಹಾಕಿವೆ. ಈ ಕುರಿತು ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಿಡಿಕಾರಿದ್ದಾರೆ. ಇನ್ನೂ ಓದಿ : ಪಠ್ಯ ಪುಸ್ತಕ ಪರಿಷ್ಕರಣೆ ಆಕ್ರೋಶ ಹೊರ ಹಾಕಿದ ನಟ ಚೇತನ್ : ಗಾಂಧಿ, ನೆಹರು ನಮ್ ವಿರೋಧಿಗಳು ಎಂದ ನಟ
ಸತ್ಯವನ್ನು ಹೇಳುವುದೇ ತಪ್ಪು ಅನ್ನುವಂತಾಗಿದೆ. ಕಾಶ್ಮೀರಿ ಪಂಡಿತರ ಹತ್ಯೆಯನ್ನು ಈ ಸಿನಿಮಾದಲ್ಲಿ ತೋರಿಸಿದ್ದೇನೆ. ಕಾಶ್ಮೀರಿ ಪಂಡಿತರಿಗೆ ಆದ ಅನ್ಯಾಯವನ್ನು ಚಿತ್ರದಲ್ಲಿ ತೆರೆದಿಟ್ಟಿದ್ದೇನೆ. ಹಾಗಾಗಿ ಈ ಸಿನಿಮಾವನ್ನು ಬೇರೆ ಬೇರೆ ದೇಶಗಳಲ್ಲಿ ತೋರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದು ಭಾರತದ ಹೆಸರನ್ನು ಕೆಡಿಸುವ ಹುನ್ನಾರ ಎಂದು ಅವರು ಮಾತನಾಡಿದ್ದಾರೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಅಂದುಕೊಂಡಂತೆ ಆಗಿದ್ದರೆ ನಿನ್ನೆ ಇಂಗ್ಲೆಂಡಿನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಭಾಷಣ ಮಾಡಬೇಕಿತ್ತು. ಅದಕ್ಕಾಗಿ ವಿಶ್ವವಿದ್ಯಾಲಯವು ಅವರನ್ನು ಆಹ್ವಾನಿಸಿತ್ತು. ಕೊನೆ ಕ್ಷಣದಲ್ಲಿ ಅಗ್ನಿಹೋತ್ರಿ ಭಾಷಣವನ್ನು ರದ್ದು ಮಾಡುವ ಮೂಲಕ ಅವಮಾನಿಸಲಾಗಿದೆ ಎಂದು ಸ್ವತಃ ವಿವೇಕ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ವಿವೇಕ್ ಅಗ್ನಿಹೋತ್ರಿ, ‘ಹಿಂದೂ ಧ್ವನಿಯನ್ನು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಹತ್ತಿಕ್ಕುವಂತಹ ಕೆಲಸವಾಗಿದೆ. ಅವರು ಕೊನೆ ಕ್ಷಣದಲ್ಲಿ ನನ್ನ ಕಾರ್ಯಕ್ರಮವನ್ನೇ ರದ್ದುಗೊಳಿಸಿದ್ದಾರೆ. ಈ ಮೂಲಕ ಅವರು ಅಲ್ಪಸಂಖ್ಯಾತರಾಗಿರುವ ಹಿಂದೂ ಜನಾಂಗೀಯ ಹತ್ಯೆ ಮತ್ತು ಹಿಂದೂ ವಿದ್ಯಾರ್ಥಿಗಳ ಹಕ್ಕುಗಳನ್ನು ಮೊಟಕುಗೊಳಿಸಿದ್ದಾರೆ. ನನ್ನ ಭಾಷಣ ರದ್ದಾಗುವುದಕ್ಕೆ ಕಾರಣ, ಅಲ್ಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದವರು ಪಾಕಿಸ್ತಾನಿ ಮೂಲದವರು. ಈ ಕಷ್ಟದ ಹೋರಾಟದಲ್ಲಿ ನೀವು ನನ್ನನ್ನು ಬೆಂಬಲಿಸಿ’ ಎಂದು ಬರೆದುಕೊಂಡಿದ್ದಾರೆ ಮತ್ತು ವಿಡಿಯೋ ಸಂದೇಶ ರವಾನಿಸಿದ್ದಾರೆ. ಅಲ್ಲದೇ ವಿಶ್ವ ವಿದ್ಯಾಲಯದ ವಿರುದ್ಧ ಕಾನೂನು ಮೊಕದ್ದಮೆ ಹೂಡವುದಾಗಿಯೂ ಅವರು ತಿಳಿಸಿದ್ದಾರೆ. ಇದನ್ನೂ ಓದಿ : ನಟ ಚೇತನ್ ಇಂದು ಕೋರ್ಟಿಗೆ ಹಾಜರ್
ನನ್ನ ನಿಲುವನ್ನು ಮಾತಿನ ಮೂಲಕ ಹೇಳುವುದಕ್ಕಾಗಿ ಕಾತುರತೆಯಿಂದ ಕಾಯುತ್ತಿದ್ದೆ. ಆದರೆ, ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ನನ್ನಿಂದಾಗಿ ಅವರ ಧ್ವನಿ ದೊಡ್ಡದಾಗುತ್ತದೆ ಎನ್ನುವ ಭಯವೂ ಅದರಲ್ಲಿ ಇರಬೇಕು ಎಂದೂ ಅಗ್ನಿಹೋತ್ರಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದೊಂದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿಣಾವ ಎಂದೂ ಅವರು ಆರೋಪಿಸಿದ್ದಾರೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಥಿಯೇಟರ್ ನಲ್ಲಿ ಹಲವು ದಾಖಲೆಗಳನ್ನು ಬರೆದಿತ್ತು. ಅತೀ ಕಡಿಮೆ ವೆಚ್ಚದಲ್ಲಿ ತಯಾರಾಗಿದ್ದ ಈ ಚಿತ್ರವು ದಾಖಲೆಯ ರೀತಿಯಲ್ಲಿ ಬಾಕ್ಸ್ ಆಫೀಸಿನಲ್ಲಿ ಕಮಾಲ್ ಮಾಡಿತ್ತು. ಇದೀಗ ಓಟಿಟಿಯಲ್ಲೂ ಸಿನಿಮಾ ರಿಲೀಸ್ ಆಗಿದ್ದು, ಅಲ್ಲಿಯೂ ಕೂಡ ಸಖತ್ ಸದ್ದು ಮಾಡಿದೆ. ಇದನ್ನೂ ಓದಿ : ಯಶ್ ಆಸೆ ಈಡೇರಿಸುತ್ತಾರಾ ತಮಿಳಿನ ಖ್ಯಾತ ನಿರ್ದೇಶಕ ಶಂಕರ್
ಜೀ 5 ಓಟಿಟಿ ವೇದಿಯಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿದ್ದು, ವಾರಾಂತ್ಯಕ್ಕೆ 90 ಲಕ್ಷ ಜನರು ಈ ಸಿನಿಮಾವನ್ನು ವೀಕ್ಷಿಸಿದ್ದಾರಂತೆ. 3 ಕೋಟಿ ನಿಮಿಷ ವೀಕ್ಷಣೆ ಪಡೆದಿದೆ ಎನ್ನಲಾಗುತ್ತಿದೆ. ಈ ಓಟಿಟಿ ವೇದಿಕೆಯಲ್ಲಿ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ವೀಕ್ಷಣೆ ಪಡೆದ ಮೊದಲ ಸಿನಿಮಾ ಇದಾಗಿದೆಯಂತೆ. ಇದನ್ನೂ ಓದಿ : ಪ್ರಾದೇಶಿಕ ಭಾಷಾ ಮಹತ್ವ ಪ್ರಧಾನಿ ಮೋದಿ ಮಾತಿಗೆ ಸಂತಸ ವ್ಯಕ್ತ ಪಡಿಸಿದ ಕಿಚ್ಚ ಸುದೀಪ್
ವಿವೇಕ್ ಅಗ್ನಿಹೋತ್ರಿ ಈ ಸಿನಿಮಾದ ನಿರ್ಮಾಣಕ್ಕೆ ಮುಂದಾದಾಗ ಹಾಕಿಕೊಂಡ ಬಜೆಟ್ ಕೇಲವ ಹತ್ತು ಕೋಟಿಯಂತೆ. ಆನಂತರ 15 ಕೋಟಿ ಖರ್ಚಾಗಿದೆ. ಆದರೆ, ಥಿಯೇಟರ್ ನಿಂದ ಬಂದದ್ದು, 250 ಕೋಟಿಗೂ ಹೆಚ್ಚು. ಅಲ್ಲದೇ, ಓಟಿಟಿ ಕೂಡ ಕೋಟಿ ಕೋಟಿ ಲೆಕ್ಕದಲ್ಲೇ ಹಕ್ಕುಗಳನ್ನು ಖರೀದಿಸಿದೆ. ಹೀಗಾಗಿ ಈ ಮಾದರಿಯ ಸಿನಿಮಾಗಳಲ್ಲಿ ಅತೀ ಹೆಚ್ಚು ಸಂಪಾದಿಸಿದ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದನ್ನೂ ಓದಿ : ನಾಲ್ಕೈದು ವರ್ಷ ಪ್ರಶಾಂತ್ ನೀಲ್ ತೆಲುಗಿನಲ್ಲೇ ಲಾಕ್ : ಮತ್ತೆ ರಕ್ತದ ಹಿಂದೆ ಬಿದ್ದ ಕೆಜಿಎಫ್ ಡೈರೆಕ್ಟರ್
ಥಿಯೇಟರ್ನಲ್ಲಿ ಈ ಸಿನಿಮಾ ರಿಲೀಸ್ ಆದಾಗ, ಕೇವಲ ಹಿಂದಿ ಭಾಷೆಯಲ್ಲಿ ಮಾತ್ರ ಬಿಡುಗಡೆ ಆಗಿತ್ತು. ಓಟಿಟಿಯಲ್ಲಿ ತೆಲುಗು, ತಮಿಳು, ಹಿಂದಿ, ಕನ್ನಡ, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಹಾಗಾಗಿ ನೋಡುಗರ ಸಂಖ್ಯೆ ಸಹಜವಾಗಿ ಹೆಚ್ಚಾಗಿದೆ.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಸಿಂಗಪೂರನಲ್ಲಿ ಬ್ಯಾನ್ ಮಾಡಿರುವ ವಿಚಾರ ನಿನ್ನೆಯಿಂದ ನಾನಾ ರೂಪ ಪಡೆದುಕೊಳ್ಳುತ್ತಿದೆ. ಬ್ಯಾನ್ ಮಾಡಿರುವ ಸುದ್ದಿಯನ್ನು ಶಶಿ ತರೂರು ಟ್ವಿಟ್ ಮಾಡಿದ್ದರು. ಇದೊಂದು ಸರಕಾರಿ ಪ್ರಯೋಜಿತ ಸಿನಿಮಾ ಎಂದು ಟೀಕಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್ ಕೂಡ ಶಶಿ ತರೂರ್ ಗೆ ಚಾಟಿ ಬೀಸಿದ್ದರು. ಇದೀಗ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ಕಿಡಿಕಾರಿದ್ದಾರೆ. ಇದನ್ನೂ ಓದಿ : ಮಗುವಿಗಾಗಿ ಪ್ಲ್ಯಾನ್ ಮಾಡಿದ್ದಾರಂತೆ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್
ದಿ ಕಾಶ್ಮೀರ್ ಫೈಲ್ಸ್ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಂಡಿದೆ. ಇದೀಗ ಓಟಿಟಿಯಲ್ಲೂ ಪ್ರರ್ದಶನಕ್ಕೆ ಸಿದ್ಧವಾಗಿದೆ. ಈ ಹೊತ್ತಿನಲ್ಲಿ ಸಿನಿಮಾವನ್ನು ಸಿಂಗಾಪೂರನಲ್ಲಿ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿತ್ತು ಚಿತ್ರತಂಡ. ಸಿಂಗಾಪೂರನಲ್ಲಿ ಪ್ರದರ್ಶನವಾಗಬೇಕಾದರೆ, ಅಲ್ಲಿಯೂ ಸೆನ್ಸಾರ್ ಆಗಬೇಕು. ಆಗ ಈ ಸಿನಿಮಾ ಸಿಂಗಾಪೂರನಲ್ಲಿ ಪ್ರದರ್ಶನಕ್ಕೆ ಯೋಗ್ಯವಾಗಿಲ್ಲ ಎಂದು ಅಭಿಪ್ರಾಯ ಪಟ್ಟಿತ್ತು. ಅದನ್ನೇ ಶಶಿ ತರೂರು ಟ್ವಿಟ್ ಮಾಡಿದ್ದರು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ವಿವಾದ : ಶಶಿ ತರೂರು ಮತ್ತು ಅನುಪಮ್ ಖೇರ್ ಜಟಾಪಟಿ
ಶಶಿ ತರೂರು ಟ್ವಿಟ್ ಗೆ ಪ್ರತಿಕ್ರಿಯೆ ನೀಡಿರುವ ವಿವೇಕ್ ಅಗ್ನಿಹೋತ್ರಿ,, ‘ಶಶಿ ತರೂರು ಸದಾ ತಪ್ಪು ಹುಡುಕುವ ಒಬ್ಬ ಮೂರ್ಖ. ದೂರುವುದೇ ಚಟ ಮಾಡಿಕೊಂಡಿದ್ದಾರೆ. ಇವರಿಂದ ಇನ್ನೇನು ನಿರೀಕ್ಷಿಸುವುದಕ್ಕೆ ಸಾಧ್ಯ?’ ಎಂದು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ‘ಶಶಿ ತರೂರು ಪತ್ನಿ ಕಾಶ್ಮೀರಿ ಎನ್ನುವುದು ನಿಜವಾದರೆ, ಅವರ ಗೌರವಕ್ಕಾದರೂ ಒಳ್ಳೆಯದನ್ನು ಯೋಚಿಸಿ’ ಎಂದು ಸಲಹೆಯನ್ನೂ ಅವರು ನೀಡಿದ್ದಾರೆ. ಇದನ್ನೂ ಓದಿ : ಜ್ಯೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿ ನಾರಾಯಣ್ ನಿಧನ
ಸಿಂಗಪೂರ ಸಿನಿಮಾ ಕಾನೂನು ಬಗ್ಗೆಯೂ ವಿವರಿಸಿರುವ ವಿವೇಕ್ ಅಗ್ನಿಹೋತ್ರಿ, ‘ಅದೊಂದು ಪುರಾತನ, ಅತೀ ಹಿಂದುಳಿದ ಸೆನ್ಸಾರ್ ಬೋರ್ಡ್. ಇನ್ನೂ ಪುರಾತನ ಆಲೋಚನೆಗಳನ್ನೇ ಮುಂದುವರೆಸಿಕೊಂಡು ಹೋಗುತ್ತಿದೆ. ಅದು ಅಪ್ ಗ್ರೇಡ್ ಆಗಬೇಕು’ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಸಂಸತ್ ಸದಸ್ಯ ಶಶಿ ತರೂರ್ ನಿನ್ನೆಯಷ್ಟೇ ‘ದಿ ಕಾಶ್ಮೀರ್ ಫೈಲ್ಸ್’ ಕುರಿತಾಗಿ ಟ್ವಿಟ್ ವೊಂದನ್ನು ಮಾಡಿದ್ದರು. ನ್ಯೂಸ್ ಚಾನೆಲ್ ವೊಂದರ ವರದಿಯನ್ನು ಲಿಂಕ್ ಮಾಡಿ, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಸಿಂಗಪುರದಲ್ಲಿ ಬ್ಯಾನ್ ಮಾಡಲಾಗಿದೆ. ಭಾರತದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ಪ್ರಯೋಜಿತ ಸಿನಿಮಾ ದಿ ಕಾಶ್ಮೀರ್ ಫೈಲ್ಸ್’ ಎಂದು ಬರೆದುಕೊಂಡಿದ್ದರು. ಈ ಟ್ವಿಟ್ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ಶ್ವಾನ ನಿಧನ
ಈ ಟ್ವಿಟ್ ಗೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ನಟಿಸಿರುವ ಅನುಪಮ್ ಖೇರ್ ತೀವ್ರ ತರಹದಲ್ಲಿ ಪ್ರತಿಕ್ರಿಯೆ ನೀಡಿದ್ದರು. ತರೂರು ಅವರ ದಿವಂಗತ ಪತ್ನಿ ಸುನಂದಾ ಪುಷ್ಕರ್ ಅವರು ಈ ಹಿಂದೆ ಟ್ವಿಟ್ ಮಾಡಿದ್ದ ಪೋಸ್ಟ್ ವೊಂದನ್ನು ಟ್ಯಾಗ್ ಮಾಡಿ, ಮಡಿದ ಪತ್ನಿಗೋಸ್ಕರವಾದರೂ ಶಶಿ ತರೂರು, ನಿರ್ಭಾವುಕತೆಯನ್ನು ಬಿಡಬೇಕಿತ್ತು. ತರೂರು ಪತ್ನಿ ಮೂಲತಃ ಕಾಶ್ಮೀರಿ. ಹಾಗಾಗಿ ಈ ಸಿನಿಮಾ ಬಗ್ಗೆ ಸಂವೇದನಾಶೀಲತೆ ತೋರಬೇಕಿತ್ತು ಎಂದು ಅನುಪಮ್ ಖೇರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಟ್ವಿಟ್ ಗಳು ಈಗ ಜಟಾಪಟಿಗೆ ಕಾರಣವಾಗಿವೆ.
ಯಾವುದೋ ಒಂದು ದೇಶ ಕಾಶ್ಮೀರ್ ಫೈಲ್ಸ್ ಅನ್ನು ಬ್ಯಾನ್ ಮಾಡಿದೆ ಎಂದ ಮಾತ್ರಕ್ಕೆ ಅದು ಜಗತ್ತಿನ ಗೆಲುವು ಎನ್ನುವಂತೆ ತರೂರು ಸಂಭ್ರಮಿಸುತ್ತಿದ್ದಾರೆ. ಇದು ದುರಂತ ಎನ್ನುವ ಅರ್ಥದಲ್ಲಿ ಅನುಪಮ್ ಖೇರ್ ಬರೆದುಕೊಂಡಿದ್ದಕ್ಕೆ, ಶಶಿ ತರೂರು ಕೂಡ ಅಷ್ಟೇ ಖಾರವಾಗಿಯೇ ಮತ್ತೊಂದು ಟ್ವಿಟ್ ಮಾಡಿದ್ದಾರೆ. ವಿನಾಕಾರಣ ನನ್ನ ದಿವಗಂತ ಪತ್ನಿಯನ್ನು ಎಳೆದು ತಂದಿರುವುದು ಅವರ ನಿರ್ಲಜ್ಜೆತನ ತೋರಿಸುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ. ನಾನು ಯಾವುದೇ ಕಾಮೆಂಟ್ ಸೇರಿಸದೆ, ವರದಿಯಾದ ಸುದ್ದಿಯನ್ನು ಮಾತ್ರ ಪೋಸ್ಟ್ ಮಾಡಿದ್ದೇನೆ ಎಂದು ಸಮಜಾಯಿಸಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ
ತಮ್ಮ ದಿವಗಂತ ಪತ್ನಿಯ ಊರಿಗೂ ಹೋಗಿದ್ದ ವಿಷಯವನ್ನೂ ಪ್ರಸ್ತಾಪಿಸಿರುವ ತರೂರು, ಸುನಂದಾ ಮನೆಯ ಅಕ್ಕಪಕ್ಕದವರನ್ನು ಮಾತನಾಡಿಸಿದ್ದೆ. ಅಲ್ಲಿ ಹಿಂದೂ ಮತ್ತು ಮುಸಲ್ಮಾನರು ಒಟ್ಟಾಗಿಯೇ ಇದ್ದರು. ಈಗ ಏನೇ ಹೇಳಿದರೂ, ನನ್ನ ಮಾತುಗಳನ್ನು ಅನುಮೋದಿಸುವುದಕ್ಕೆ ಸುನಂದಾ ಇಲ್ಲವೆಂದೂ ಅವರು ಮತ್ತೊಂದು ಫೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಅನುಪಮ್ ಖೇರ್ ಮತ್ತು ತರೂರ್ ಟ್ವಿಟ್ ಗಳು ಈಗ ಭಾರೀ ಸದ್ದು ಮಾಡುತ್ತಿವೆ. ದಿ ಕಾಶ್ಮೀರ್ ಫೈಲ್ಸ್ ಕುರಿತು ಹೆಮ್ಮೆಯಿಂದ ಅನುಪಮ್ ಖೇರ್ ಮಾತನಾಡುತ್ತಿದ್ದರೆ, ಶಶಿ ತರೂರು ಸಿನಿಮಾ ಬಗ್ಗೆ ಕಾಮೆಂಟ್ ಮಾಡದೇ ಸುದ್ದಿಯನ್ನು ಮಾತ್ರ ಪೋಸ್ಟ್ ಮಾಡಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ, ಅದೊಂದು ಆಡಳಿತ ಸರಕಾರದ ಕೃಪಾಪೋಷಿತ ಸಿನಿಮಾ ಎನ್ನುವುದನ್ನು ಒಪ್ಪಿಕೊಳ್ಳಬೇಕಾದ ಕಟುಸತ್ಯ ಎಂದೂ ಹೇಳಿದ್ದಾರೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ
ಸಿಂಗಪೂರ ಸಿನಿಮಾ ಕಾನೂನಿನ ಅಂಶಗಳಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಾರದೇ ಇರುವ ಕಾರಣಕ್ಕಾಗಿ ಸಿಂಗಾಪೂರದಲ್ಲಿ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ. ಇದೊಂದು ಹಿಂಸೆಯನ್ನು ಪ್ರಚೋದಿಸುವಂತಹ ಸಿನಿಮಾವಾಗಿದ್ದರಿಂದ ಪ್ರದರ್ಶನಕ್ಕೆ ಯೋಗ್ಯವಾಗಿಲ್ಲ ಎಂದು ಅಲ್ಲಿ ಪ್ರಸಾರ ಖಾತೆಯು ತಿಳಿಸಿದೆ ಎಂದು ಸುದ್ದಿಯಾಗಿದೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದ ‘ದಿ ಕಾಶ್ಮೀರ್ ಫೈಲ್ಸ್’ ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿತ್ತು. ದೇಶಕ್ಕೆ ದೇಶವೇ ಈ ಸಿನಿಮಾದ ಬೆನ್ನಿಗೆ ನಿಂತಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ನಾನಾ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಈ ಸಿನಿಮಾದ ಬಗ್ಗೆ ಒಲವು ತೋರಿ, ತೆರಿಗೆ ವಿನಾಯಿತಿಯನ್ನೂ ಘೋಷಣೆ ಮಾಡಿದ್ದರು. ಹೀಗಾಗಿ ದೇಶಾದ್ಯಂತ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿತು. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ಶ್ವಾನ ನಿಧನ
ಇದೀಗ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಸಿಂಗಾಪುರದಲ್ಲಿ ಪ್ರದರ್ಶಿಸಲು ಚಿತ್ರತಂಡ ನಿರ್ಧರಿಸಿತ್ತು. ಆದರೆ, ಅದಕ್ಕೆ ಇನ್ಫೋಕಾಮ್ ಮಿಡಿಯಾ ಡೆವಲಪ್ ಮೆಂಟ್ ಅಥಾರಿಟಿ, ಸಂಸ್ಕೃತಿ, ಸಮುದಾಯ ಮತ್ತು ಯುವ ಸಚಿವಾಲಯ ಹಾಗೂ ಗೃಹ ಸಚಿವಾಲಯ ಇದಕ್ಕೆ ಸಮ್ಮತಿ ಸೂಚಿಸಿಲ್ಲ ಎಂದು ಹೇಳಲಾಗುತ್ತಿದೆ. ಈ ಸಿನಿಮಾವನ್ನು ಅಧಿಕಾರಿಗಳು ಮೌಲ್ಯಮಾಪನ ಮಾಡಲಾಗಿದ್ದು, ಇದು ಪ್ರದರ್ಶನಕ್ಕೆ ಯೋಗ್ಯವಾದ ಚಿತ್ರವಲ್ಲ ಎಂಬ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಪ್ರದರ್ಶನಕ್ಕೆ ನಿರಾಕರಿಸಲಾಗಿದೆ ಎನ್ನುವ ಮಾಹಿತಿ ಇದೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ವರ್ಗೀಕರಣ ಮಾರ್ಗಸೂಚಿಯನ್ನೂ ಮೀರಿದೆ. ಏಕಮುಖವಾಗಿ ಚಿತ್ರೀಕರಿಸಲಾಗಿದೆ. ಅಲ್ಲದೇ, ಪ್ರಚೋದನಕಾರಿ ಆಗುವಂತಹ ಸಾಕಷ್ಟು ಅಂಶಗಳನ್ನು ಈ ಸಿನಿಮಾ ಹೊಂದಿದೆ. ಸಂಘರ್ಷಕ್ಕೆ ಕಾರಣವಾಗುವ ಅಂಶಗಳು ಈ ಸಿನಿಮಾದಲ್ಲಿ ಇರುವುದರಿಂದ ಚಿತ್ರ ಪ್ರದರ್ಶನಕ್ಕೆ ನಿರಾಕರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ ಎಂದು ವರದಿಗಳು ಬಹಿರಂಗವಾಗಿವೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ
1990ರಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದ ಹಿಂದೂಗಳ ಮಾರಣಹೋಮ ಕುರಿತಾದ ಸಿನಿಮಾ ಇದಾಗಿದೆ. ಕಾಶ್ಮೀರಿ ಪಂಡಿತರ ಹತ್ಯೆಯನ್ನು ಪ್ರಮುಖವಾಗಿ ಇಟ್ಟುಕೊಂಡು ತಯಾರಿಸಲಾದ ಚಿತ್ರ ಇದಾಗಿದ್ದು, ಇದೊಂದು ನೈಜಘಟನೆಯನ್ನು ಆಧರಿಸಿದ ಚಿತ್ರವೆಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ಹೀಗಾಗಿಯೇ ಸಿಂಗಾಪುರ ದೇಶದ ಸಿನಿಮಾ ನಿಯಮಾವಳಿಗಳಿಗೆ ಈ ಚಿತ್ರ ವಿರುದ್ಧವಾಗಿದೆ ಎಂದು ವರದಿ ನೀಡಲಾಗಿದೆಯಂತೆ.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೈಜ ಘಟನೆಯನ್ನು ಆಧರಿಸಿದ ಚಿತ್ರವಾದರೂ, ವಿಕಿಪೀಡಿಯಾ ಬೇರೆ ರೀತಿಯಲ್ಲೇ ಸಿನಿಮಾವನ್ನು ಬಿಂಬಿಸಲಾಗಿದೆ. ಅದೊಂದು ಕಾಲ್ಪನಿಕ ಕಥೆ ಎಂದು ಬರೆಯಲಾಗಿದೆ. ಹಾಗಾಗಿ ಜ್ಯಾತ್ಯಾತೀತ ನಿಲುವಿನ ಉಲ್ಲಂಘನೆಯಾಗಿದೆ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಿಡಿಕಾರಿದ್ದಾರೆ. ವಿದೇಶಿ ಪತ್ರಕರ್ತರು ಕೂಡ ಸಿನಿಮಾದ ಬಗ್ಗೆ ಸಲ್ಲದ ಪ್ರಚಾರ ಮಾಡುತ್ತಿರುವುದಕ್ಕೂ ಅವರು ಆಕ್ಷೇಪನೆ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ : ಬೆಳ್ಳಿತೆರೆಯಲ್ಲಿ ಕಾಯಕಯೋಗಿ ಬಸವಣ್ಣ: ಯಾರೆಲ್ಲ ಪಾತ್ರ ಮಾಡಿದ್ದಾರೆ ಗೊತ್ತಾ?
‘ವಿಕಿಪೀಡಿಯಾವನ್ನು ಜಗತ್ತಿನ ವಿಶ್ವಕೋಶ ಎಂದು ಕರೆಯಲಾಗುತ್ತಿದೆ. ಆದರೆ, ಅದು ತಪ್ಪು ಸಂದೇಶಗಳನ್ನು ರವಾನಿಸಲಾಗುತ್ತಿದೆ. ದಿ ಕಾಶ್ಮೀರ್ ಫೈಲ್ಸ್ ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎಂದು ನಾನು ಹಲವು ಬಾರಿ ಹೇಳಿದ್ದೇನೆ. ಅದಕ್ಕೆ ಪೂರಕ ಸಾಕ್ಷ್ಯವನ್ನು ಒದಗಿಸಿದ್ದೇನೆ. ಆದರೂ, ವಿಕಿಪೀಡಿಯಾದಲ್ಲಿ ಅದು ಕಾಲ್ಪನಿಕ ಕಥೆ ಎಂದು ಉಲ್ಲೇಖಿಸಲಾಗಿದೆ. ಇದು ಉದ್ದೇಶ ಪೂರ್ವಕವಾಗಿ ಆಗಿರುವ ಪ್ರಮಾದ’ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ
ಇಡೀ ದೇಶವೇ ಸಿನಿಮಾದ ಬಗ್ಗೆ ಕೊಂಡಾಡಿದೆ. ಬಾಕ್ಸ್ ಆಫೀಸಿನಲ್ಲಿ ದಾಖಲೆಯ ರೀತಿಯಲ್ಲಿ ಹಣ ಮಾಡಿದೆ. ದೇಶದ ಜನರು ಸಿನಿಮಾ ಬೆನ್ನಿಗೆ ನಿಂತು, ಆಗಿರುವ ಘಟನೆಯನ್ನು ಖಂಡಿಸಿದ್ದಾರೆ. ಇಷ್ಟಾದರೂ ವಿಕಿಪೀಡಿಯಾ ಈ ಸಿನಿಮಾದ ಬಗ್ಗೆ ಬೇರೆಯ ರೀತಿಯಲ್ಲೇ ಬಿಂಬಿಸಲು ಪ್ರಯತ್ನ ಮಾಡುತ್ತಿದೆ. ಯಾಕೆ ಹೀಗೆ? ಜ್ಯಾತ್ಯಾತೀಯ ನಿಲುವು ಅಂದರೆ ಇದೇನಾ ಎಂದು ಅಗ್ನಿಹೋತ್ರಿ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ
ವಿದೇಶಿ ಪತ್ರಕರ್ತರೊಂದಿಗೆ ಪತ್ರಿಕಾಗೋಷ್ಠಿ ಆಯೋಜನೆ ಮಾಡಿದ್ದೆ. ವಿದೇಶಿ ಪತ್ರಕರ್ತರ ಸಂಘಕ್ಕೂ ಈ ವಿಷಯ ತಿಳಿಸಿದ್ದೆ. ಏಕಾಏಕಿ ಗೋಷ್ಠಿಯನ್ನು ಅವರು ರದ್ದು ಮಾಡಿದ್ದಾರೆ. ಇದರ ಹಿಂದಿರುವ ಉದ್ದೇಶವನ್ನೂ ಅವರು ಹೇಳಲಿಲ್ಲ. ಏನೇ ಆದರೂ, ಮೆ. 5ಕ್ಕೆ ಪತ್ರಿಕಾಗೋಷ್ಠಿಯನ್ನು ನಡೆಸುತ್ತೇನೆ. ಯಾವುದೇ ಕಾರಣಕ್ಕೂ ಈ ವಿಷಯದ ಕುರಿತು ನಾನು ಹಿಂದೇಟು ಹಾಕಲಾರೆ ಎಂದಿದ್ದಾರೆ ವಿವೇಕ್ ಅಗ್ನಿಹೋತ್ರಿ.
ಕೇವಲ ಹಿಂದಿಯಲ್ಲಿ ಮಾತ್ರ ರಿಲೀಸ್ ಆಗಿದ್ದ ದಿ ಕಾಶ್ಮೀರಿ ಫೈಲ್ಸ್ ಸಿನಿಮಾ, ಇದೀಗ ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಡಬ್ ಆಗಿ ಜೀ 5 ಓಟಿಸಿಯಲ್ಲಿ ರಿಲೀಸ್ ಆಗುತ್ತಿದೆ. ಕಾಶ್ಮೀರ ಪಂಡಿತರ ಮೇಲಾದ ದೌರ್ಜನ್ಯ, ನಿರಾಶ್ರಿತರ ಹತ್ಯೆ ಕುರಿತು ತಯಾರಿಸಿದ್ದ ಈ ಸಿನಿಮಾ ಬಾಕ್ಸಾಫೀಸ್‌ನ್ನು ಕೊಳ್ಳೆ ಹೊಡೆದಿತ್ತು. ಇದನ್ನೂ ಓದಿ : ಪುನೀತ್‌ಗೆ ಅವಮಾನ: ತಿರುಪತಿ ತಿರುಮಲ ದೇವಸ್ಥಾನಕ್ಕೆ ಅಭಿಮಾನಿಗಳು ಮುತ್ತಿಗೆ
ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜಕೀಯ ನಾಯಕರು, ಸೆಲೆಬ್ರಿಟಿಗಳು, ಜನಸಾಮಾನ್ಯರು ಸಿನಿಮಾ ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಷ್ಟೆಲ್ಲಾ ಸಂಚಲನ ಸೃಷ್ಟಿಸಿದ್ದ ಕಾಶ್ಮೀರ್ ಫೈಲ್ಸ್ ಸಿನಿಮಾ ಮೇ 13ಕ್ಕೆ ಜೀ5 ಒಟಿಟಿಯಲ್ಲಿ ಪ್ರಿಮಿಯರ್ ಆಗಲಿದೆ. ಇದನ್ನೂ ಓದಿ : ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್
ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಅತಿರಥ ಮಹಾರಥ ತಾರಬಳಗ ನಟಿಸಿದ್ದರು. ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ ಮತ್ತು ದರ್ಶನ್ ಕುಮಾರ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದರು. ಇದನ್ನೂ ಓದಿ : ವಾಮನ ತೆಕ್ಕೆಗೆ ತುಳುನಾಡ ಬೆಡಗಿ ರಚನಾ ರೈ
1991ರ ಸಮಯದಲ್ಲಿ ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯೆ ಹಾಗೂ ವಲಸೆಯನ್ನು ಸಿನಿಮಾವನ್ನು ಕಟ್ಟಿಕೊಡಲಾಗಿತ್ತು. ಹೀಗಾಗಿ ಈ ಸಿನಿಮಾ ಬಗ್ಗೆ ವಿರೋಧವೂ ವ್ಯಕ್ತವಾಗಿತ್ತು. ವಿರೋಧ ನಡುವೆಯೂ ಕಾಶ್ಮೀರ್ ಫೈಲ್ಸ್ ಗೆಲುವಿನ ನಗೆ ಬೀರಿತ್ತು. ಬಾಲಿವುಡ್ ನಲ್ಲಿ ತಯಾರಾಗಿದ್ದ ಈ ಸಿನಿಮಾ ಕೇವಲ ಹಿಂದಿ ಭಾಷೆಯಲ್ಲಿ ತೆರೆಗೆ ಬಂದಿತ್ತು. ಆದ್ರೇ ಜೀ 5 ಒಟಿಟಿಯಲ್ಲಿ ನಾಲ್ಕು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಸಿನಿಮಾ ಒಟಿಟಿಯಲ್ಲಿ ಪ್ರದರ್ಶನ ಕಾಣಲಿದೆ.
ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ನಂತರ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದು, ಈ ಚಿತ್ರಕ್ಕೆ ಅವರು ‘ದಿ ಡೆಲ್ಲಿ ಫೈಲ್ಸ್’ ಎಂದು ಹೆಸರಿಟ್ಟಿದ್ದಾರೆ. ಈ ಸಿನಿಮಾ ಘೋಷಣೆ ಆಗುತ್ತಿದ್ದಂತೆಯೇ ಮಹಾರಾಷ್ಟ್ರ ಸಿಖ್ ಅಸೋಷಿಯೇಷನ್ ನಿರ್ದೇಶಕರ ವಿರುದ್ಧ ಕಿಡಿಕಾರಿದೆ. ಇಂತಹ ದ್ವೇಷದ ಕಥೆಗಳನ್ನು ಇಟ್ಟುಕೊಂಡು ನಿರ್ದೇಶಕರು ದುಡ್ಡು ಮಾಡುತ್ತಿದ್ದಾರೆ. ಸಮಾಜದಲ್ಲಿ ಮತ್ತಷ್ಟು ದ್ವೇಷ ಬಿತ್ತುತ್ತಿದ್ದಾರೆ ಎಂದು ಅಸೋಷಿಯೇಷನ್ ಆಪಾದನೆ ಮಾಡಿದೆ. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ‘ದಿ ಡೆಲ್ಲಿ ಫೈಲ್ಸ್’ ಸಿನಿಮಾದಲ್ಲಿ ಯಾವ ರೀತಿಯ ಕಥೆಯನ್ನು ಹೇಳುತ್ತಿದ್ದಾರೆ ಎಂದು ಈವರೆಗೂ ಬಹಿರಂಗ ಪಡಿಸಲಿಲ್ಲ. ಆದರೆ, ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎಂದು ಹೇಳಿಕೊಂಡಿದ್ದಾರೆ. ಡೆಲ್ಲಿಗೂ ಚೆನ್ನೈಗೂ ನಂಟಿದೆ ಎಂದು ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ಇದು ಸಿಖ್ ನರಮೇಧದ ಕಥೆ ಎಂದು ಊಹಿಸಲಾಗುತ್ತಿದೆ. ಹೀಗಾಗಿಯೇ ಸಿಖ್ ಸಂಘ ಈ ಸಿನಿಮಾಗೆ ವಿರೋಧ ವ್ಯಕ್ತ ಪಡಿಸಿದೆ. ಇದನ್ನೂ ಓದಿ : ಗಮನ ಸೆಳೆದ ‘ಒಂದಂಕೆ ಕಾಡು’ ಮೋಷನ್ ಪೋಸ್ಟರ್
ಸಮಾಜದಲ್ಲಿ ಈಗಾಗಲೇ ಧರ್ಮ ಧರ್ಮಗಳ ನಡುವೆ ದ್ವೇಷದ ಭಾವನೆಗಳನ್ನು ಹಂಚಲಾಗುತ್ತಿದೆ. ಧ್ರುವೀಕರಣದಲ್ಲಿ ಕೆಲಸಗಳು ಮಾನ ಸಂಬಂಧಗಳನ್ನೇ ಹಾಳು ಮಾಡುತ್ತಿವೆ. ಶಾಂತಿಯನ್ನು ಸ್ಥಾಪಿಸಬೇಕಾದ ಇಂತಹ ಸಮಯದಲ್ಲಿ ವಿವೇಕ್ ಅಗ್ನಿಹೋತ್ರಿ ಅವರು ದುಡ್ಡಿಗಾಗಿ ಜನರ ನಡುವೆ ದ್ವೇಷದ ಭಾವನೆಗಳನ್ನು ಬಿತ್ತುತ್ತಿದ್ದಾರೆ. ಇದರಿಂದಾಗಿ ಮತ್ತಷ್ಟು ಮನಸ್ಸುಗಳು ಹಾಳಾಗುತ್ತವೆ. ಹಾಗಾಗಿ ‘ದಿ ಡೆಲ್ಲಿ ಫೈಲ್ಸ್’ ಸಿನಿಮಾವನ್ನು ವಿರೋಧಿಸುವುದಾಗಿ ಮಹಾರಾಷ್ಟ್ರ ಸಿಖ್ ಅಸೋಷಿಯೇಷನ್ ಪತ್ರಿಕಾ ಪ್ರಕಟನೆಯನ್ನು ಹೊರಡಿಸಿದೆ. ಇದನ್ನೂ ಓದಿ : Love…ಲಿ ಅಂತಿದ್ದಾರೆ ಆಂಗ್ರಿ ಯಂಗ್ ಮ್ಯಾನ್ ವಸಿಷ್ಠ ಸಿಂಹ: ಚಿಟ್ಟೆ ನ್ಯೂ ಲುಕ್ ಹೇಗಿದೆ ಗೊತ್ತಾ?
ಈಗಾಗಲೇ ವಿವೇಕ್ ಅಗ್ನಿಹೋತ್ರಿ ಅವರು ‘ದಿ ತಾಷ್ಕೆಂಟ್ ಫೈಲ್ಸ್’ ಮತ್ತು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗಳ ಮೂಲಕ ಜನಾಂಗದ ಮಧ್ಯೆ ಮನಸ್ತಾಪಗಳನ್ನು ತಂದಿಟ್ಟಿದ್ದಾರೆ. ಆದ ಘಟನೆಗಳನ್ನು ನೆನಪಿಸುವುದಕ್ಕಿಂತ ಸಮಾಜದಲ್ಲಿ ಶಾಂತಿಯನ್ನು ಸ್ಥಾಪಿಸುವಂತಹ ಸಿನಿಮಾಗಳನ್ನು ಮಾಡಲಿ. ಸೃಜನಶೀಲ ಮಾಧ್ಯಮ ದುರಂತಗಳಿಗೆ ಬಳಕೆ ಆಗಬಾರದು. ದುಡ್ಡು ಮಾಡುವುದಕ್ಕಾಗಿ ಈ ರೀತಿಯ ಸಿನಿಮಾಗಳನ್ನು ಮಾಡಬಾರದು ಎಂದು ಪತ್ರದಲ್ಲಿ ಬರೆದಿದೆ ಸಿಖ್ ಅಸೋಷಿಯೇನ್.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಐವತ್ತು ದಿನಗಳ ದಾಟಿ ಮುನ್ನುಗ್ಗುತ್ತಿರುವ ಈ ಸಂದರ್ಭದಲ್ಲಿ ಹೊಸ ಸುದ್ದಿಯೊಂದನ್ನು ಕೊಟ್ಟಿದೆ. ಕೇವಲ ಹಿಂದಿಯಲ್ಲಿ ಮಾತ್ರ ರಿಲೀಸ್ ಆಗಿದ್ದ ಈ ಸಿನಿಮಾ ಇದೀಗ ಇತರ ಭಾಷೆಗಳಿಗೂ ಡಬ್ ಆಗಿದೆ. ಹಿಂದಿ ಅರ್ಥ ಆಗದೇ ಇರುವವರು ಈಗ ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ತಮ್ಮದೇ ಭಾಷೆಯಲ್ಲಿ ನೋಡಬಹುದು. ಇದನ್ನೂ ಓದಿ : ಮಗನೊಂದಿಗೆ ನಿಖಿಲ್ ಕುಮಾರ್ ಸ್ವಾಮಿ ಜಾಲಿ ಟ್ರೀಪ್
ಕಾಶ್ಮೀರ ಪಂಡಿತರ ಹತ್ಯಾಕಾಂಡದ ಘಟನೆಯನ್ನು ಇಟ್ಟುಕೊಂಡು ಮಾಡಿರುವ ಈ ಸಿನಿಮಾ ದೇಶಾದ್ಯಂತ ಸಾಕಷ್ಟು ಸಂಚಲನ ಮೂಡಿಸಿತ್ತು. ಸ್ವತಃ ಕೇಂದ್ರ ಸರಕಾರವೇ ಈ ಸಿನಿಮಾದ ಬೆನ್ನಿಗೆ ನಿಂತು ಜನರಿಗೆ ತಲುಪವಲ್ಲಿ ಸಹಕರಿಸಿತ್ತು. ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳು ಈ ಸಿನಿಮಾಗೆ ತೆರಿಗೆ ವಿನಾಯತಿ ಘೋಷಣೆ ಮಾಡಿದ್ದವು. ಅಲ್ಲದೇ, ಕೆಲ ಸಂಘಟನೆಗಳು ಕೂಡ ಸ್ವಯಂ ಪ್ರೇರಿತರಾಗಿ ಈ ಸಿನಿಮಾವನ್ನು ಜನರಿಗೆ ತೋರಿಸಿದರು. ಈಗ ಮತ್ತಷ್ಟು ಜನರಿಗೆ ಅವರದ್ದೇ ಭಾಷೆಯಲ್ಲಿ ತೋರಿಸಲು ಚಿತ್ರತಂಡ ಮುಂದಾಗಿದೆ. ಇದನ್ನೂ ಓದಿ : ಜೇಮ್ಸ್ ಟೀಮ್ ಮೊದಲೇ ಈ ಕೆಲಸ ಮಾಡಬೇಕಿತ್ತು : ನಟ ಶಿವರಾಜ್ ಕುಮಾರ್
ಹೌದು, ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬರುತ್ತಿದೆ. ಆದರೆ, ಈ ಸಿನಿಮಾ ಥಿಯೇಟರ್ ಬರುವುದಿಲ್ಲ. ಜೀ 5 ಓಟಿಟಿ ವೇದಿಕೆಯಲ್ಲಿ ಈ ಡಬ್ ಆದ ದಿ ಕಾಶ್ಮೀಪ್ ಫೈಲ್ ಸಿನಿಮಾವನ್ನು ನೋಡಬಹುದಾಗಿದೆ. ಸ್ವತಃ ಜೀ 5 ಸೋಷಿಯಲ್ ಮೀಡಿಯಾದ ಮೂಲಕ ಈ ಸುದ್ದಿಯನ್ನು ನೋಡುಗರಿಗೆ ನೀಡಿದೆ. ಇದನ್ನೂ ಓದಿ : ಜೋಗಿ ಪ್ರೇಮ್ ಹೊಸ ಸಿನಿಮಾ ಘೋಷಣೆ : ಧ್ರುವ ಸರ್ಜಾ ಹೀರೋ, ಏ.24 ಮುಹೂರ್ತ
ಕನ್ನಡದ ಹೆಸರಾಂತ ನಿರ್ದೇಶಕ ಪ್ರಕಾಶ್ ಬೆಳವಾಡಿ ಸೇರಿದಂತೆ ಬಾಲಿವುಡ್ ನ ಅನೇಕ ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ಇದೊಂದು ನೈಜ ಘಟನೆಯನ್ನು ಆಧರಿಸಿದ ಸಿನಿಮಾವಾಗಿದ್ದರಿಂದ, ಕರ್ನಾಟಕ ಸರಕಾರ ಕೂಡ ಚಿತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿತ್ತು. ಅಲ್ಲದೇ, ಕರ್ನಾಟಕ ಬಿಜೆಪಿ ಈ ಸಿನಿಮಾವನ್ನು ಡಬ್ ಮಾಡಿ ಕನ್ನಡಕ್ಕೆ ತರುವ ಪ್ರಯತ್ನಕ್ಕೂ ಮುಂದಾಗಿತ್ತು. ಆದರೆ, ಜಿ 5 ಈ ಕೆಲಸವನ್ನು ಮಾಡಿದೆ.