Tag: ವಿವೇಕ್ ಅಗ್ನಿಹೋತ್ರಿ

  • ‘ಈಗಲೂ ನಾನು ಗೋಮಾಂಸ ತಿನ್ನುತ್ತೇನೆ’ ಎಂದಿರುವ ದಿ ಕಾಶ್ಮೀರ್ ಫೈಲ್ಸ್  ನಿರ್ದೇಶಕನ ವಿಡಿಯೋ ವೈರಲ್

    ‘ಈಗಲೂ ನಾನು ಗೋಮಾಂಸ ತಿನ್ನುತ್ತೇನೆ’ ಎಂದಿರುವ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನ ವಿಡಿಯೋ ವೈರಲ್

    ಗೋಮಾಂಸ (Beef) ತಿನ್ನುವ ವಿಚಾರವಾಗಿ ಬ್ರಹ್ಮಾಸ್ತ್ರ (Brahmastra) ಸಿನಿಮಾದ ನಟ ರಣಬೀರ್ ಕಪೂರ್ ಅವರನ್ನು ದೇವಸ್ಥಾನದ ಒಳಗೆ ಬಿಡಲಿಲ್ಲ ಎನ್ನುವ ವಿಚಾರ ಸಖತ್ ಸದ್ದು ಮಾಡಿತ್ತು. ಸಿನಿಮಾ ಬಿಡುಗಡೆಗೂ ಮುನ್ನ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಲು ಹೊರಟಿದ್ದ ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ ಅವರನ್ನು ದೇವಸ್ಥಾನದ ಒಳಗೆ ಹೋಗದಂತೆ ಭಜರಂಗ ದಳದ ಕಾರ್ಯಕರ್ತರು ತಡೆದಿದ್ದರು. ಅಲ್ಲದೇ, ಬ್ರಹ್ಮಾಸ್ತ್ರ ಸಿನಿಮಾ ಬಾಯ್ಕಾಟ್ (Boycott) ಅಭಿಯಾನ ಕೂಡ ಆರಂಭಿಸಿದ್ದಾರೆ. ಇದನ್ನೂ ಓದಿ:ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎದುರು ಅಬ್ಬರಿಸಲಿದ್ದಾರೆ ಸಂಜಯ್ ದತ್

    ರಣಬೀರ್ ಕಪೂರ್ ಈ ಹಿಂದೆ ಹೇಳಿದ್ದ ವಿಡಿಯೋದಲ್ಲಿ ಗೋಮಾಂಸ ತಿನ್ನುವ ವಿಚಾರ ಪ್ರಸ್ತಾಪ ಆಗಿತ್ತು. ಅದನ್ನೇ ಇಟ್ಟುಕೊಂಡು ಹಿಂದೂಪರ ಸಂಘಟನೆಗಳು ಪ್ರತಿಭಟಿಸಿದ್ದವು. ಇದೀಗ ಇಂಥದ್ದೇ ಸಂಕಷ್ಟಕ್ಕೆ ಸಿಲುಕಿದ್ದಾರೆ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files)  ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri). ಈ ಹಿಂದೆ ಅವರು ಸಂದರ್ಶನವೊಂದರಲ್ಲಿ ‘ನಾನು ಈ ಹಿಂದೇನೂ ಗೋಮಾಂಸ ತಿನ್ನುತ್ತಿದ್ದೆ, ಈಗಲೂ ತಿನ್ನುತ್ತೇನೆ’ ಎಂದು ಹೇಳಿರುವ ಮಾತಿನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದಾ ಹಿಂದೂಪರ ಯೋಚನೆ ಮಾಡುವ ವಿವೇಕ್ ಬಗ್ಗೆ ಭಜರಂಗ ದಳ ಯಾಕೆ ಸುಮ್ಮನಿದೆ ಎಂದು ಹಲವರು ಪ್ರಶ್ನಿಸಿದ್ದಾರೆ.

    ಗೋಮಾಂಸ ತಿನ್ನುತ್ತೇನೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿರುವ ವಿವೇಕ್ ಅಗ್ನಿಹೋತ್ರಿ ಸಿನಿಮಾಗಳನ್ನು ಬಹಿಷ್ಕರಿಸಬೇಕು ಮತ್ತು ಅವರನ್ನೂ ಯಾವುದೇ ದೇವಸ್ಥಾನದ ಒಳಗೆ ಬಿಡಕೂಡದು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ರಣಬೀರ್ ಪರ ನಿಂತಿದ್ದ ಸಾಕಷ್ಟು ಅಭಿಮಾನಿಗಳು ಈ ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ. ಕೇವಲ ರಣಬೀರ್ ಗಷ್ಟೇ ಈ ಬಿಸಿ ತಾಗಬಾರದು, ವಿವೇಕ್ ಅಗ್ನಿಹೋತ್ರಿ ಮೇಲೂ ಕ್ರಮ ಆಗಬೇಕು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

    kashmir

    ಸೋಷಿಯಲ್ ಮೀಡಿಯಾದಲ್ಲಿ ವಿವೇಕ್ ಅಗ್ನಿಹೋತ್ರಿ ಅವರ ವಿಡಿಯೋ ವೈರಲ್ ಆಗುತ್ತಿದ್ದರೂ, ಆ ಕುರಿತು ವಿವೇಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಹಿಂದೂಪರ ಸಂಘಟನೆಗಳ ಸದಸ್ಯರ ಹಾಗೂ ರಣಬೀರ್ ಕಪೂರ್ ಅಭಿಮಾನಿಗಳ ಮಧ್ಯೆ ಕಾಮೆಂಟ್ ಗಳ ಯುದ್ಧವೇ ಶುರುವಾಗಿದೆ. ಪರ ವಿರೋಧದ ಸಾಕಷ್ಟು ಸಂದೇಶಗಳು ಬರುತ್ತಿವೆ.

    Live Tv
    [brid partner=56869869 player=32851 video=960834 autoplay=true]

  • ದೋಬಾರಾ ಸಿನಿಮಾ ಆಸ್ಕರ್‌ಗೆ ಕಳುಹಿಸಿ: ಅನುರಾಗ್ ಕಶ್ಯಪ್‌ಗೆ ವ್ಯಂಗ್ಯ ಮಾಡಿದ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ

    ದೋಬಾರಾ ಸಿನಿಮಾ ಆಸ್ಕರ್‌ಗೆ ಕಳುಹಿಸಿ: ಅನುರಾಗ್ ಕಶ್ಯಪ್‌ಗೆ ವ್ಯಂಗ್ಯ ಮಾಡಿದ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಆಸ್ಕರ್ ಪ್ರಶಸ್ತಿಗೆ ಕಳುಹಿಸುವ ವಿಚಾರದಲ್ಲಿ ನಿರ್ದೇಶಕ ಅನುರಾಗ್ ಕಶ್ಯಪ್ ಆಡಿದ ಮಾತಿಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಿರುಗೇಟು ಕೊಟ್ಟಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಆಸ್ಕರ್ ಗೆ ಹೋಗುವ ಅರ್ಹತೆ ಇಲ್ಲ ಎಂದು ಹೇಳಿರುವ ಅನುರಾಗ್ ಕಶ್ಯಪ್ ನಿರ್ದೇಶನದ ದೋಬಾರಾ ಸಿನಿಮಾವನ್ನೇ ಕಳುಹಿಸಿ ಎಂದು ಟಾಂಗ್ ಕೊಟ್ಟಿದ್ದಾರೆ.

    ನಿನ್ನೆಯಷ್ಟೇ ಅನುರಾಗ್ ಕಶ್ಯಪ್ ನಿರ್ದೇಶನದ, ತಾಪ್ಸಿ ಪನ್ನು ನಟನೆಯ ದೋಬಾರಾ ಸಿನಿಮಾ ಬಿಡುಗಡೆ ಆಗಿದ್ದು, ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿದೆ. ಥಿಯೇಟರ್ ಖಾಲಿ ಖಾಲಿ ಹೊಡೆಯುತ್ತಿವೆ ಎಂದು ರಿಪೋರ್ಟ್ ಆಗಿದೆ. ಹಾಗಾಗಿಯೇ ವಿವೇಕ್ ಅಗ್ನಿಹೋತ್ರಿ ವ್ಯಂಗ್ಯವಾಗಿಯೇ ಇಂತಹ ಸಿನಿಮಾವನ್ನು ಆಸ್ಕರ್ ಗೆ ಕಳುಹಿಸಿ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು

    ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಸಮಾಜದಲ್ಲಿ ದ್ವೇಷವನ್ನು ಬಿತ್ತುತ್ತಿದೆ. ಕಲಾತ್ಮಕ ಯಾವುದೇ ಅಂಶಗಳು ಇಲ್ಲದ ಸಿನಿಮಾ ಇದಾಗಿದೆ. ಹಾಗಾಗಿ ಇಂತಹ ಸಿನಿಮಾವನ್ನು ಆಸ್ಕರ್ ಗೆ ಕಳುಹಿಸಿದರೆ, ದೇಶದ ಮಾನ ಹರಾಜಾಗುತ್ತದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಇಂತಹ ಸಿನಿಮಾಗಳು ದೇಶದಲ್ಲಿ ನಿರ್ಮಾಣ ಆಗುವುದೇ ತಲೆತಗ್ಗಿಸುವಂಥದ್ದು ಎಂದು ಹೇಳಿದ್ದರು. ಕಶ್ಯಪ್ ಮಾತು ಭಾರೀ ಚರ್ಚೆಗೆ ಕಾರಣವಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ದಿ ಕಾಶ್ಮೀರ್ ಫೈಲ್ಸ್ ಬದಲು ಆರ್.ಆರ್.ಆರ್ ಸಿನಿಮಾ ಆಸ್ಕರ್ ಗೆ ಕಳುಹಿಸಿ: ಮತ್ತೆ ತಿವಿದ ಅನುರಾಗ್ ಕಶ್ಯಪ್

    ದಿ ಕಾಶ್ಮೀರ್ ಫೈಲ್ಸ್ ಬದಲು ಆರ್.ಆರ್.ಆರ್ ಸಿನಿಮಾ ಆಸ್ಕರ್ ಗೆ ಕಳುಹಿಸಿ: ಮತ್ತೆ ತಿವಿದ ಅನುರಾಗ್ ಕಶ್ಯಪ್

    ಗತ್ತಿನ ಅತೀ ದೊಡ್ಡ ಸಿನಿಮಾ ಪ್ರಶಸ್ತಿ ಆಸ್ಕರ್ ಗೆ ಭಾರತದಿಂದ ಯಾವ ಸಿನಿಮಾವನ್ನು ಕಳುಹಿಸಬೇಕು ಎಂಬ ಚರ್ಚೆ ನಡೆದಿದೆ. ಈವರೆಗೂ ಬಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿರುವ ಮತ್ತು ದೇಶದ ಗಮನ ಸೆಳೆದಿರುವ ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನೇ ಆಸ್ಕರ್ ರೇಸ್ ನಲ್ಲಿ ಬಿಡಬೇಕು ಎನ್ನುವುದು ಹಲವರ ಅಭಿಪ್ರಾಯವಾಗಿದೆ. ಆದರೆ, ನಿರ್ದೇಶಕ ಅನುರಾಗ್ ಕಶ್ಯಪ್ ಅದನ್ನು ವಿರೋಧಿಸಿದ್ದಾರೆ. ಆಸ್ಕರ್ ಗೆ ಹೋಗುವಂತಹ ಯಾವ ಅರ್ಹತೆನೂ ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗೆ ಇಲ್ಲ ಎಂದು ಹೇಳುವ ಮೂಲಕ ವಿವಾದ ಕಿಡಿ ಹೊತ್ತಿಸಿದ್ದಾರೆ.

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಕುರಿತು ಕೆನಡಾ ಸಿನಿಮಾ ನಿರ್ದೇಶಕ ಡಿಲನ್ ಮೋಹನ್ ಗ್ರೇ ಕೂಡ ಪ್ರತಿಕ್ರಿಯಿಸಿದ್ದು, ಈ ಸಿನಿಮಾವನ್ನು ಆಸ್ಕರ್ ಗೆ ಕಳುಹಿಸಿದರೆ ಭಾರತದ ಗೌರವ ಹೊರಟು ಹೋಗುತ್ತದೆ ಎಂದು ಹೇಳಿದ್ದರು. ಈ ಪ್ರತಿಕ್ರಿಯೆಯನ್ನು ಕೊಡುವುದಕ್ಕೆ ಕಾರಣ ಇದೇ ಅನುರಾಗ್ ಕಶ್ಯಪ್ ಅವರ ಟ್ವಿಟ್ ಎನ್ನುವುದು ವಿಶೇಷ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಮ್ಮ ಭಾರತವನ್ನು ಪ್ರತಿನಿಧಿಸಿ, ಆಸ್ಕರ್ ಗೆ ಹೋಗಬಾರದು ಎಂದು ಕಶ್ಯಪ್ ಹೇಳಿದ್ದಾರೆ. ಅದರ ಬದಲಿಗೆ ಆರ್.ಆರ್.ಆರ್ ಸಿನಿಮಾ ಕಳುಹಿಸಿ ಎಂದಿದ್ದಾರೆ. ಇದನ್ನೂ ಓದಿ: ದುಬಾರಿ ಮೊತ್ತದ ಕಾರು ಖರೀದಿಸಿದ `ಬಿಗ್ ಬಾಸ್’ ಖ್ಯಾತಿಯ ಅನುಪಮಾ ಗೌಡ

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕುರಿತು ಮೊದಲಿನಿಂದಲೂ ಕೆಲವರು ಆಕ್ಷೇಪ ವ್ಯಕ್ತ ಪಡಿಸುತ್ತಲೇ ಬಂದಿದ್ದಾರೆ. ಆದರೂ, ಸಿನಿಮಾ ಗೆದ್ದಿದೆ. ಬಾಕ್ಸ್ ಆಫೀಸಿನಲ್ಲಿ 200 ಕೋಟಿಗೂ ಅಧಿಕ ಹಣ ಮಾಡಿದೆ. ಅಲ್ಲದೇ, ಅನೇಕರು ಈ ಸಿನಿಮಾ ಮೆಚ್ಚಿ ಮಾತನಾಡಿದ್ದಾರೆ. ಹಿಂದಿಯಲ್ಲಿ ಮಾತ್ರವಲ್ಲ, ನಾನಾ ಭಾಷೆಗಳಿಗೂ ಈ ಸಿನಿಮಾ ಡಬ್ ಆಗಿ ರಿಲೀಸ್ ಕೂಡ ಆಗಿದೆ. ಇದೀಗ ಆಸ್ಕರ್ ವಿಷಯದಲ್ಲಿ ಸಿನಿಮಾ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ವಾತಂತ್ರ್ಯ ದಿನಾಚರಣೆ : ಇಂದು ಕಿರುತೆರೆಯಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ

    ಸ್ವಾತಂತ್ರ್ಯ ದಿನಾಚರಣೆ : ಇಂದು ಕಿರುತೆರೆಯಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ

    ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿ ಮಾಡಿದ್ದ, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಇಂದು ಝೀ ವಾಹಿನಿಯಲ್ಲಿ ಪ್ರಸಾರಕಾಣಲಿದೆ. ಮಧ್ಯಾಹ್ನ ಮೂರು ಗಂಟೆಗೆ ಪ್ರಸಾರವಾಗಲಿರುವ ಈ ಸಿನಿಮಾ ದೇಶಾದ್ಯಂತ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಅಲ್ಲದೇ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿತ್ತು.

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ, ಈ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಉತ್ತರ ಪ್ರದೇಶ್, ಗುಜರಾತ್, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಸಿನಿಮಾಗೆ ತೆರಿಗೆ ವಿನಾಯತಿ ನೀಡುವ ಮೂಲಕ, ಹೆಚ್ಚೆಚ್ಚು ಜನರಿಗೆ ತಲುಪಿಸಲಾಯಿತು. ಅಲ್ಲದೇ, ಈ ಸಿನಿಮಾದ ಕುರಿತು ಪರ ಮತ್ತು ವಿರೋಧದ ಮಾತುಗಳು ಕೂಡ ಕೇಳಿ ಬಂದವು. ಇದನ್ನೂ ಓದಿ:ಗಂಟಲು ನೋವಿನ ಔಷಧಿ ವಿಚಾರಕ್ಕೆ ಸೋನು ಕಾಲೆಳೆದ ಕಿಚ್ಚ ಸುದೀಪ್

    ಕಾಶ್ಮೀರ ಪಂಡಿತರ ಹತ್ಯೆಯನ್ನು ಪ್ರಮುಖವಾಗಿಟ್ಟುಕೊಂಡು ಬಂದಿರುವ ಈ ಸಿನಿಮಾದಲ್ಲಿ ಕನ್ನಡಿಗ ಪ್ರಕಾಶ್ ಬೆಳವಾಡಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಎನ್ನುವುದು ವಿಶೇಷ. ಥಿಯೇಟರ್ ನಲ್ಲಿ ಕೇವಲ ಹಿಂದಿಯಲ್ಲಿ ಮಾತ್ರ ಈ ಸಿನಿಮಾ ಬಿಡುಗಡೆ ಆಗಿತ್ತು. ಇದೀಗ ಕನ್ನಡವೂ ಸೇರಿದಂತೆ ಹಲವು ಭಾಷೆಗಳಿಗೆ ಈ ಚಿತ್ರ ಡಬ್ ಆಗಿದೆ. ಝೀ ಕನ್ನಡದಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕನ್ನಡದಲ್ಲೇ ಪ್ರಸಾರವಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ತನಗೇನಾದರೂ ಆದರೆ, ಅದಕ್ಕೆ ನಾನಾ ಪಾಟೇಕರ್ ಕಾರಣ ಎಂದ ಮೀಟೂ ಹುಡುಗಿ ತನುಶ್ರೀ

    ತನಗೇನಾದರೂ ಆದರೆ, ಅದಕ್ಕೆ ನಾನಾ ಪಾಟೇಕರ್ ಕಾರಣ ಎಂದ ಮೀಟೂ ಹುಡುಗಿ ತನುಶ್ರೀ

    ಬಾಲಿವುಡ್ ನಲ್ಲಿ ಮೀಟೂ ಭಯ ಹುಟ್ಟಿಸಿದ್ದ ನಟಿ ತನುಶ್ರೀ ದತ್ತ, ಮತ್ತೆ ಈ ವಿಷಯವನ್ನು ನೆನಪಿಸಿದ್ದಾರೆ. ಹಾರ್ನ್, ಓಕೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ತಾವು ನಾನಾ ಪಾಟೇಕರ್ ಜೊತೆ ನಟಿಸುವಾಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಹೇಳಿಕೊಂಡಿದ್ದರು. ಆ ದೌರ್ಜನ್ಯ ಆಗಿದ್ದು ನಾನಾ ಅವರಿಂದ ಎಂದು ದೂರು ದಾಖಲಿಸಿದ್ದರು.

    ಇದೀಗ ಮತ್ತೆ ತನುಶ್ರೀ ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಂದು ನಾನಾ ಪಾಟೇಕರ್ ವಿರುದ್ಧ ಮೀಟೂ ಆರೋಪ ಮಾಡಿದ್ದೆ. ನನಗೆ ಏನಾದರೂ ಪ್ರಾಣಹಾನಿಯಾದರೆ, ಅದಕ್ಕೆ ನಾನಾ ಕಾರಣ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ಬಾಲಿವುಡ್ ಮಾಫಿಯಾ ಬಗ್ಗೆಯೂ ಮಾತನಾಡಿರುವ ಅವರು, ಸುಶಾಂತ್ ಸಿಂಗ್ ಸಾವಿನಲ್ಲಿ ಕೇಳಿ ಬಂದ ಹೆಸರುಗಳೇ ಬಾಲಿವುಡ್ ಮಾಫಿಯಾದಲ್ಲಿ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ರು ಶ್ವೇತಾ ಶ್ರೀವಾಸ್ತವ್

    ಬಾಲಿವುಡ್ ಮಾಫಿಯಾ ಕುರಿತು ಹೆಚ್ಚಿನ ಮಾಹಿತಿಯನ್ನೂ ಹಂಚಿಕೊಂಡಿರುವ ತನುಶ್ರೀ, ‘ಈ ಮಾಫಿಯಾದಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಯಾರ ಸಿನಿಮಾ ನೋಡಬೇಕು, ಯಾವ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡಬೇಕು, ಯಾರನ್ನು ಪ್ರೀತಿಸಬೇಕು, ಯಾರನ್ನು ದ್ವೇಷಿಸಬೇಕು ಹೀಗೆ ಎಲ್ಲವನ್ನೂ ಈ ಮಾಫಿಯಾ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ. ಅವರಿಂದಾಗಿ ತಾನು ಎಷ್ಟು ಕಷ್ಟಗಳನ್ನು ಅನುಭವಿಸಿದ್ದೇನೆ ಎಂದೂ ಹೇಳಿದ್ದಾರೆ.

    ತನುಶ್ರೀ ಕೇವಲ ನಾನಾ ಪಾಟೇಕರ್ ಮೇಲಷ್ಟೇ ಆರೋಪ ಮಾಡಿಲ್ಲ. ಎರಡು ವರ್ಷಗಳ ಹಿಂದೆ ದಿ ಕಾಶ್ಮೀರ್ ಫೈಲ್ಸ್  ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮೇಲೆಯೂ ಆರೋಪ ಮಾಡಿದ್ದರು. ಸಹನಟನ ಜೊತೆ ಬೆತ್ತಲೆಯಾಗಿ ನೃತ್ಯ ಮಾಡಲು ಅವರು ನನಗೆ ಪ್ರಚೋದಿಸಿದ್ದರು ಎಂದು ಹೇಳಿಕೆ ನೀಡಿದ್ದರು. ಈ ವಿಷಯ ಕೂಡ ಬಿಟೌನ್ ನಲ್ಲಿ ಭಾರೀ ಸದ್ದು ಮಾಡಿತ್ತು.

    Live Tv
    [brid partner=56869869 player=32851 video=960834 autoplay=true]

  • ಜೀವ ಬೆದರಿಕೆ ಆತಂಕ ಹಂಚಿಕೊಂಡ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ಅಗ್ನಿಹೋತ್ರಿ

    ಜೀವ ಬೆದರಿಕೆ ಆತಂಕ ಹಂಚಿಕೊಂಡ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ಅಗ್ನಿಹೋತ್ರಿ

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ನಿರಂತರವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿವೆಯಂತೆ. ಜೀವ ಬೆದರಿಕೆಯ ಕಾರಣದಿಂದಾಗಿ ಅವರಿಗೆ ಒಂಟಿಯಾಗಿ ತಿರುಗಾಡುವುದಕ್ಕೆ ಕಷ್ಟವಾಗಿದೆಯಂತೆ. ಅಲ್ಲದೇ, ಅವರ ಕುಟುಂಬವನ್ನೂ ಭೇಟಿ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ವಿವೇಕ್ ತಿಳಿಸಿದ್ದಾರೆ. ಮನೆಯಿಂದ ಹೊರಗೆ ಕಾಲಿಡಲು ತಮಗೆ ಭಯವಾಗುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ರಿಲೀಸ್ ಆದ ದಿನದಿಂದ ಬೆದರಿಕೆಗಳು ಬರುತ್ತಿದ್ದು, ಕೆಲವು ಬೆದರಿಕೆಗಳು ಮತ್ತಷ್ಟು ಆತಂಕವನ್ನು ಸೃಷ್ಟಿ ಮಾಡಿವೆ ಎಂದಿದ್ದಾರೆ. ಹಲವು ದಿನಗಳಿಂದ ಅವರು ಕುಟುಂಬದೊಂದಿಗೆ ಇರಲು ಸಾಧ್ಯವಾಗುತ್ತಿಲ್ಲವಂತೆ. ಇದೆಲ್ಲವೂ ಕಾಶ್ಮೀರ್ ಫೈಲ್ಸ್ ಸಿನಿಮಾ ಮಾಡಿದ್ದರ ಪ್ರತಿಕ್ರಿಯೆ ಎಂದು ತಿಳಿಸಿದ್ದಾರೆ. ತಮಗಷ್ಟೇ ಅಲ್ಲ ಸಿನಿಮಾ ಮಾಡಿದ ಕಲಾವಿದರಿಗೂ ಇಂತಹ ಬೆದರಿಕೆ ಕರೆಗಳು ಬಂದಿವೆ ಎಂದೂ ಅವರು ತಿಳಿಸಿದ್ದರೆ. ಇದನ್ನೂ ಓದಿ:ಬನ್ಸಾಲಿ ನಿರ್ದೇಶನದಲ್ಲಿ ಬಹುಭಾಷಾ ನಟಿ ಅದಿತಿ ರಾವ್

    ಕಾಶ್ಮೀರಿ ಪಂಡಿತರ ಹತ್ಯಾಕಾಂಡವನ್ನು ಆಧರಿಸಿದ ಸಿನಿಮಾ ಮಾಡಿರುವ ವಿವೇಕ್ ಅಗ್ನಿಹೋತ್ರಿ, ಮಾರಣ ಹೋಮಕ್ಕೆ ಕಾರಣರಾದವರ ಬಣ್ಣವನ್ನು ಬಯಲು ಮಾಡಿದ್ದಾರೆ. ಕಾಶ್ಮೀರಿ ಪಂಡಿತರ ಸಾವಿಗೆ ಕಾರಣ ಯಾರು ಎನ್ನುವುದನ್ನು ದಾಖಲೆ ಸಮೇತ ವಿವರಿಸಿದ್ದಾರೆ. ಇದೇ ಕಾರಣಕ್ಕಾಗಿಯೇ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿದ್ದಾರೆ.  ಈ ಕುರಿತು ಅವರು ಪೊಲೀಸ್ ಇಲಾಖೆಗೂ ಕೂಡ ದೂರು ದಾಖಲಿಸಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ಖಾನ್  ಇರುವವರೆಗೂ ಬಾಲಿವುಡ್ ಮುಳುಗ್ತಾನೆ ಇರುತ್ತೆ : ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಶಾಕಿಂಗ್ ಟ್ವಿಟ್

    ಖಾನ್ ಇರುವವರೆಗೂ ಬಾಲಿವುಡ್ ಮುಳುಗ್ತಾನೆ ಇರುತ್ತೆ : ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಶಾಕಿಂಗ್ ಟ್ವಿಟ್

    ಬಾಲಿವುಡ್ ಅಂದಾಕ್ಷಣ ತಕ್ಷಣ ನೆನಪಾಗುವ ಹೆಸರು ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್. ಇವರನ್ನು ಬಾಲಿವುಡ್ ಬಾಕ್ಸ್ ಆಫೀಸ್ ಅಂತಾನೇ ಕರೆಯುತ್ತಾರೆ. ಶಾರುಖ್ ಖಾನ್ ಅವರನ್ನು ಬಾಲಿವುಡ್ ಬಾದ್ ಶಾ ಎಂದು ಕರೆದರೆ, ಸಲ್ಮಾನ್ ಖಾನ್ ಅವರನ್ನು ಕಿಂಗ್ಸ್ ಎಂದು ಅಭಿಮಾನದಿಂದ ಕೊಂಡಾಡುತ್ತಾರೆ. ಸುಲ್ತಾನ್, ಕಿಂಗ್, ಬಾದ್ ಶಾ ಈ ರೀತಿಯಲ್ಲಿ ಅಭಿಮಾನಿಗಳು ಅಭಿಮಾನದಿಂದ ಈ ಮೂವರು ನಟರನ್ನು ಕರೆಯುತ್ತಾರೆ. ಇವರಿಗೆ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಟಾಂಗ್ ಕೊಟ್ಟಿದ್ದಾರೆ.

    ಮಾಧ್ಯಮವೊಂದರ ಟ್ವಿಟ್ ಗೆ ಪ್ರತಿಕ್ರಿಯೆ ನೀಡಿರುವ ಅವರು, ಬಾಲಿವುಡ್ ನಲ್ಲಿ ಸುಲ್ತಾನ್, ಕಿಂಗ್, ಬಾದ್ ಶಾ ಸಂಸ್ಕೃತಿ ಇರುವತನಕ ಈ ಸಿನಿಮಾ ರಂಗ ಮುಳುಗುತ್ತಲೇ ಇರುತ್ತದೆ ಎಂದು ಚಾಟಿ ಬೀಸಿದ್ದಾರೆ. ನೇರವಾಗಿ ಖಾನ್ ಗಳ ಹೆಸರು ಹೇಳದೇ ಇದ್ದರೂ, ಅವರನ್ನು ಕರೆಯುವ ಹೆಸರಿನಿಂದಲೇ ಕಾಲೆಳೆದಿದ್ದಾರೆ. ಮೂವರು ಇರುವತನಕ ಬಾಲಿವುಡ್ ಉದ್ಧಾರವಾಗಲ್ಲ ಎನ್ನುವ ಅರ್ಥದಲ್ಲಿ ಅವರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ರಿಲೀಸ್ ಆದಾಗ, ಬಾಲಿವುಡ್ ಸ್ಟಾರ್ ನಟರು ಆ ಸಿನಿಮಾವನ್ನು ಒಪ್ಪಿಕೊಳ್ಳಲಿಲ್ಲ ಎನ್ನುವ ಕೋಪ ಅವರಲ್ಲಿದೆ. ಕಂಗನಾ ರಣಾವತ್ ಹೊರತುಪಡಿಸಿ ಯಾರೂ ಮೊದ ಮೊದಲು ಧ್ವನಿ ಎತ್ತಲಿಲ್ಲ. ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆಯೇ ಸಿನಿಮಾಗಳ ಬಗ್ಗೆ ಒಬ್ಬೊಬ್ಬರಾಗಿ ಮಾತನಾಡಲು ಶುರು ಮಾಡಿದರು. ಹೀಗಾಗಿ ಆ ಕೋಪದಲ್ಲೇ ವಿವೇಕ್ ಅಗ್ನಿಹೋತ್ರಿ ಖಾನ್ ಗಳ ಕುರಿತು ಈ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಹಾರಾಷ್ಟ್ರ ಸರ್ಕಾರ ಬದಲಾವಣೆ- ಬಾಲಿವುಡ್‌ನಲ್ಲಿ ಕಿತ್ತಾಟ ಶುರು

    ಮಹಾರಾಷ್ಟ್ರ ಸರ್ಕಾರ ಬದಲಾವಣೆ- ಬಾಲಿವುಡ್‌ನಲ್ಲಿ ಕಿತ್ತಾಟ ಶುರು

    ಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಬದಲಾಗುತ್ತಿದ್ದಂತೆಯೇ ಬಾಲಿವುಡ್ ಕೆಲ ನಟಿಯರು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ಅಲ್ಲದೇ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ಈ ವಿವಾದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಮಹಾರಾಷ್ಟ್ರ ಸರಕಾರದ ಪತನ ಮತ್ತು ಹೊಸ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಬಾಲಿವುಡ್ ನಲ್ಲೂ ಕಿತ್ತಾಟ ಶುರುವಾಗಿದೆ.

    ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಉದ್ಭವ್ ಠಾಕ್ರೆ ರಾಜೀನಾಮೆ ನೀಡಿ, ಇದೀಗ ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರ ಕುರಿತಾಗಿಯೇ ಬಾಲಿವುಡ್ ನಲ್ಲಿ ಪರ ವಿರೋಧದ ಮಾತು ಕೇಳಿ ಬಂದಿವೆ. ಹೊಸ ಮುಖ್ಯಮಂತ್ರಿಯನ್ನು ಕಂಗನಾ ರಣಾವತ್ ಸ್ವಾಗತಿಸಿದ್ದರೆ, ನಿರ್ಗಮಿಸಿರುವ ಉದ್ಭವ್ ಠಾಕ್ರೆ ಬೆಂಬಲಕ್ಕೆ ದಿಯಾ ಮಿರ್ಜಾ ನಿಂತಿದ್ದಾರೆ. ಈ ಇಬ್ಬರ ನಡೆಗೂ ಪರ ವಿರೋಧ ವ್ಯಕ್ತವಾಗುತ್ತಿದೆ. ಇದನ್ನೂ ಓದಿ:ಅನಾಥ ಮಹಿಳೆಗೆ ಮನೆ ಕಟ್ಟಿಸಿಕೊಟ್ಟ ಕಿಚ್ಚ ಸುದೀಪ್

    ಉದ್ಭವ್ ಠಾಕ್ರೆ ಅವರನ್ನು ದಿಯಾ ಮಿರ್ಜಾ ಮನಸಾರೆ ಹೊಗಳಿದ್ದಾರೆ. ಮುಂದಿನ ದಿನಗಳು ನಿಮಗೆ ಹೊಸ ಭರವಸೆ ಮತ್ತು ಚೈತನ್ಯವನ್ನು ನೀಡಲಿವೆ. ಮತ್ತೆ ನೀವು ಈ ರಾಜ್ಯವನ್ನು ಆಳುತ್ತೀರಿ ಎಂದು ಹೇಳಿದ್ದಾರೆ. ಈ ಮಾತಿಗೆ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವ್ಯಂಗ್ಯವಾಡಿದ್ದಾರೆ. ಯಾವ ರಾಜ್ಯ, ಯಾವ ರಾಜ? ಎಂದು ಪರೋಕ್ಷವಾಗಿಯೇ ಉದ್ಭವ್ ಠಾಕ್ರೆ ಅವರನ್ನು ಕಾಲೆಳೆದಿದ್ದಾರೆ.

    Live Tv

  • ಸೈನ್ ಲಾಂಗ್ವೇಜ್ ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ರಿಲೀಸ್

    ಸೈನ್ ಲಾಂಗ್ವೇಜ್ ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ರಿಲೀಸ್

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಭಾರತೀಯ ಬಹುತೇಕ ಭಾಷೆಗಳಲ್ಲಿ ಬಿಡುಗಡೆಯಾಗಿ ಕೋಟಿ ಕೋಟಿ ಜನರನ್ನು ತಲುಪಿದೆ. ಇದೇ ಮೊದಲ ಬಾರಿಗೆ ವಿಶೇಷ ಚೇತನರಿಗಾಗಿ ಸೈನ್ ಲಾಂಗ್ವೇಜ್ ನಲ್ಲಿ ಸಿನಿಮಾ ಬಿಡುಗಡೆ ಆಗಿದೆ. ಕಿವಿ ಕೇಳದವರಿಗೆ ಮತ್ತು ಮಾತು ಬಾರದವರಿಗಾಗಿ ಈ ಪ್ರಯೋಗವನ್ನು ಮಾಡಿದ್ದಾರೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಹಾಗಾಗಿ ಈ ಸಿನಿಮಾ ಎಲ್ಲರಿಗೂ ತಲುಪಿದಂತಾಗಿದೆ ಎಂದಿದ್ದಾರೆ ನಿರ್ದೇಶಕರು.

    ದಿ ಕಾಶ್ಮೀರ ಫೈಲ್ಸ್ ಮೊದಲು ಹಿಂದಿಯಲ್ಲಿ ಬಿಡುಗಡೆ ಆಗಿತ್ತು. ನಾನಾ ರಾಜ್ಯಗಳಲ್ಲಿ ರಿಲೀಸ್ ಆಗಿ ಯಶಸ್ಸು ಗಳಿಸಿತ್ತು. ಬಾಕ್ಸ್ ಆಫೀಸಿನಲ್ಲಿ ಭರ್ಜರಿಗೆ ಗೆಲುವು ಸಾಧಿಸಿತ್ತು. ಅನೇಕ ರಾಜ್ಯಗಳಲ್ಲಿ ಈ ಸಿನಿಮಾಗೆ ತೆರಿಗೆ ವಿನಾಯತಿ ಘೋಷಣೆ ಮಾಡುವ ಮೂಲಕ ಎಲ್ಲರಿಗೂ ತಲುಪುವಂತೆ ಆಯಾ ರಾಜ್ಯ ಸರಕಾರಗಳು ಕ್ರಮ ತಗೆದುಕೊಂಡಿದ್ದವು. ಇದೀಗ ವಿಶೇಷ ಚೇತನರಿಗೂ ಈ ಸಿನಿಮಾ ತಲುಪಿಸುವ ಕೆಲಸ ಆಗಿದೆ. ಇದನ್ನೂ ಓದಿ:ಬಾಮೈದನಿಂದಲೇ ಸ್ಯಾಂಡಲ್‌ವುಡ್ ನಟ ಸತೀಶ್ ಬರ್ಬರ ಹತ್ಯೆ?

    ಕಾಶ್ಮೀರದಲ್ಲಿ ಪಂಡಿತರ ಮೇಲಿನ ನರಮೇಧದ ಕುರಿತಾಗಿ ಈ ಸಿನಿಮಾ ಮಾಡಿದ್ದು, ಪಂಡಿತರ ಮೇಲಿನ ಹತ್ಯೆಯನ್ನು ಎಳೆಎಳೆಯಾಗಿ ಈ ಸಿನಿಮಾ ಬಿಚ್ಚಿಟ್ಟಿತ್ತು. ಹಾಗಾಗಿ ಕೆಲ ದೇಶಗಳಲ್ಲಿ ಈ ಸಿನಿಮಾ ರಿಲೀಸ್ ಮಾಡಲು ಅಡೆತಡೆಗಳು ಎದುರಾದವು. ಇದೆಲ್ಲವನ್ನೂ ಎದುರಿಸಿಕೊಂಡೇ ಸಿನಿಮಾ ಗೆದ್ದಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದೆ.

    Live Tv

  • ದಿ ಕಾಶ್ಮೀರ್ ಫೈಲ್ಸ್ 2 ಬರುತ್ತಾ? ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಉತ್ತರವೇನು?

    ದಿ ಕಾಶ್ಮೀರ್ ಫೈಲ್ಸ್ 2 ಬರುತ್ತಾ? ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಉತ್ತರವೇನು?

    ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ದೇಶಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. 1990ರ ಕಾಶ್ಮೀರಿ ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ಹತ್ಯೆಯನ್ನು ಆಧರಿಸಿದ ಸಿನಿಮಾ ಇದಾಗಿದ್ದರಿಂದ ಚಿತ್ರಕ್ಕೆ ಭಾರೀ ಬೆಂಬಲ ಕೂಡ ವ್ಯಕ್ತವಾಯಿತು. ಹಲವು ರಾಜ್ಯಗಳು ಈ ಚಿತ್ರಕ್ಕೆ ತೆರಿಗೆ ವಿನಾಯತಿ ಘೋಷಣೆ ಮಾಡಿ, ಜನರೂ ನೋಡುವಂತೆ ಮಾಡಿದರು. ಹೀಗಾಗಿ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಈ ಸಿನಿಮಾ ರಿಲೀಸ್ ಆಯಿತು. ಇದನ್ನೂ ಓದಿ : ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾ ಸೋಲು : ಹೊಣೆಹೊತ್ತು ಹಣ ಮರಳಿಸಿದ್ರಾ ನಿರ್ದೇಶಕ ಶಿವ

    ಸಿಂಗಪುರ್ ಸೇರಿದಂತೆ ಹಲವು ರಾಷ್ಟ್ರಗಳು ಈ ಸಿನಿಮಾವನ್ನು ತಮ್ಮ ದೇಶದಲ್ಲಿ ರಿಲೀಸ್ ಮಾಡದಂತೆ ನಿರ್ಬಂಧ ಹೇರಿದವು. ಅಲ್ಲದೇ, ವಿವೇಕ್ ಅಗ್ನಿಹೋತ್ರಿ ಅವರ ಭಾಷಣಕ್ಕೂ ಅಡೆತಡೆ ಮಾಡಲಾಯಿತು. ಇವೆಲ್ಲವೂ ನಡೆಯುತ್ತಿರುವ ಸಂದರ್ಭದಲ್ಲಿ ವಿವೇಕ್ ಅವರಿಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ ಅಭಿಮಾನಿಗಳು.  ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ಪಾರ್ಟ್ 2 ಆಗಿ ಮೂಡಿ ಬರಲಿದೆಯಾ? ಎನ್ನುವ ಪ್ರಶ್ನೆಗೆ ವಿವೇಕ್ ಅಗ್ನಿಹೋತ್ರಿ ಉತ್ತರಿಸಿದ್ದಾರೆ. ಇದನ್ನೂ ಓದಿ : ನಿಖಿಲ್ ಕುಮಾರ್ ಸ್ವಾಮಿ ಪುತ್ರನಿಗೆ ಇಟ್ಟ ಹೆಸರೇನು? ಆ ಹೆಸರಿನ ಅರ್ಥ ಏನು?

    ಈಗಾಗಲೇ ಫೈಲ್ಸ್ ಸರಣಿಯ ಚಿತ್ರಗಳನ್ನು ಮಾಡುತ್ತಾ ಬಂದಿದ್ದಾರೆ ವಿವೇಕ್. ದಿ ಕಾಶ್ಮೀರ್ ಫೈಲ್ಸ್ ನಂತರ, ದಿ ಡೆಲ್ಲಿ ಫೈಲ್ಸ್ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾವನ್ನೇ ಮುಂದುವರೆದ ಭಾಗ ಎಂದುಕೊಳ್ಳಿ ಎಂದು ಉತ್ತರಿಸಿದ್ದಾರೆ. ಅಂದರೆ, ಕಾಶ್ಮೀರಿ ಪಂಡಿತರ ಹತ್ಯೆಯ ಸಿನಿಮಾ ಇದಲ್ಲವಾದರೂ, ಡೆಲ್ಲಿ ಫೈಲ್ಸ್ ನಲ್ಲೂ ಹತ್ಯಾಕಾಂಡವೇ ಪ್ರಧಾನ ಕಥೆಯಾಗಿ ಮೂಡಿ ಬರಲಿದೆಯಂತೆ.