Tag: ವಿವೇಕ್ ಅಗ್ನಿಹೋತ್ರಿ

  • ಕಾಶ್ಮೀರಿ ಪಂಡಿತ್ ಸಮುದಾಯವನ್ನು ಅವಮಾನಿಸೋದು ನನ್ನ ಉದ್ದೇಶವಲ್ಲ: ನಡಾವ್ ಲಾಪಿಡ್

    ಕಾಶ್ಮೀರಿ ಪಂಡಿತ್ ಸಮುದಾಯವನ್ನು ಅವಮಾನಿಸೋದು ನನ್ನ ಉದ್ದೇಶವಲ್ಲ: ನಡಾವ್ ಲಾಪಿಡ್

    ತ್ತೀಚೆಗೆ ಗೋವಾ ಸಿನಿಮೋತ್ಸವದಲ್ಲಿ ಜ್ಯೂರಿಯಾಗಿದ್ದ ನಡಾವ್ ಲಾಪಿಡ್ (Nadav Lapid) `ಕಾಶ್ಮೀರ್ ಫೈಲ್ಸ್’ (The Kashmir Files) ಚಿತ್ರದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ನಡಾವ್ ವಿರುದ್ಧ ವಿರೋಧ ವ್ಯಕ್ತವಾಗಿದ್ದ ಬೆನ್ನಲ್ಲೇ ಈಗ ನಡಾವ್ ಕ್ಷಮೆ ಕೇಳಿದ್ದಾರೆ.

    `ಕಾಶ್ಮೀರಿ ಫೈಲ್ಸ್’ ಸಿನಿಮಾ ಅಶ್ಲೀಲ ಪ್ರಚಾರದ ಸಿನಿಮಾ ಎಂದು ಹೇಳಿಕೆ ನೀಡುವ ಮೂಲಕ ಅನೇಕರ ಕೆಂಗಣ್ಣಿಗೆ ನಡಾವ್ ಲಾಪಿಡ್ ಗುರಿಯಾಗಿದ್ದರು. ಬಳಿಕ ಈ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ನಡಾವ್ ಹೇಳಿಕೆಗೆ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದರು. ಈಗ ಕಾಶ್ಮೀರಿ ಪಂಡಿತ್ ಸಮುದಾಯವನ್ನು ಅವಮಾನಿದೋದು ನನ್ನ ಉದ್ದೇಶವಲ್ಲ ಕ್ಷಮಿಸಿ ಎಂದು ನಡಾವ್ ಪ್ರತಿಕ್ರಿಯೆ ನೀಡಿದ್ದಾರೆ.

    kashmirನಾನು ಯಾರನ್ನು ಅವಮಾನಿಸಲು ಬಯಸಲಿಲ್ಲ. ಯಾವುದೇ ಸಮುದಾಯವನ್ನು ದೂಷಿಸುವುದು ನನ್ನ ಗುರಿಯಾಗಿರಲಿಲ್ಲ ಎಂದು ತಪ್ಪು ಗ್ರಹಿಕೆಗೆ ಕ್ಷಮಿಸಿ ಎಂದು ನಡಾವ್ ಚಿತ್ರತಂಡಕ್ಕೆ ಮತ್ತು ಇಡೀ ಕಾಶ್ಮೀರಿ ಸಮುದಾಯಕ್ಕೆ ಕ್ಷಮೆ ಕೋರಿದ್ದಾರೆ. ಇದನ್ನೂ ಓದಿ: ಸಮಂತಾ ಬದಲು ಶ್ರೀದೇವಿ ಪುತ್ರಿಯನ್ನ ಕರೆತಂದ `ಪುಷ್ಪ 2′ ಟೀಮ್

    ಗೋವಾದಲ್ಲಿ ನಡೆದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸೋಮವಾರ (ನ.28) ಅದ್ದೂರಿಯಾಗಿ ನಡೆದಿತ್ತು. ಮುಕ್ತಾಯ ಸಮಾರಂಭದಲ್ಲಿ ತೀರ್ಪುಗಾರರ ಮುಖ್ಯಸ್ಥರಾಗಿದ್ದ ಇಸ್ರೇಲ್‌ನ ಖ್ಯಾತ ನಿರ್ದೇಶಕ ನಡಾವ್ ಲಾಪಿಡ್ ದಿ ಕಾಶ್ಮಿರ್ ಫೈಲ್ಸ್ ಸಿನಿಮಾ ವಿರುದ್ಧ ಅಸಮಾಧಾನ ಹೊರಹಾಕಿದರು. ʻಕಾಶ್ಮೀರ ಫೈಲ್ಸ್ʼ ಸಿನಿಮಾ ವೀಕ್ಷಿಸಿ ತುಂಬಾ ಡಿಸ್ಟರ್ಬ್ ಆಗಿದ್ದೀವಿ. ಇದೊಂದು ಅಶ್ಲೀಲ ಪ್ರಚಾರದ ಸಿನಿಮಾ. ಇಂಥ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾ ವಿಭಾಗಕ್ಕೆ ಈ ಸಿನಿಮಾ ಸೂಕ್ತವಲ್ಲ ಎಂದು ಭಾಸವಾಯಿತು ಎಂದು ಹೇಳುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ದಿ ಕಾಶ್ಮೀರ್ ಫೈಲ್ಸ್ ಸುಳ್ಳು ಸಿನಿಮಾ ಎಂದು ಸಾಬೀತು ಪಡಿಸಿದರೆ ಚಿತ್ರರಂಗ ಬಿಡುತ್ತೇನೆ: ಅಗ್ನಿಹೋತ್ರಿ

    ದಿ ಕಾಶ್ಮೀರ್ ಫೈಲ್ಸ್ ಸುಳ್ಳು ಸಿನಿಮಾ ಎಂದು ಸಾಬೀತು ಪಡಿಸಿದರೆ ಚಿತ್ರರಂಗ ಬಿಡುತ್ತೇನೆ: ಅಗ್ನಿಹೋತ್ರಿ

    ಸಿನಿಮಾ ರಿಲೀಸ್ ಆದ ದಿನದಿಂದ ಈವರೆಗೂ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ಒಂದಿಲ್ಲೊಂದು ವಿವಾದ ಕೇಳಿ ಬರುತ್ತಲೇ ಇದೆ. ಅದರಲ್ಲಿ ಈ ಬಾರಿ ಗಂಭೀರವಾದ ಆರೋಪಗಳನ್ನು ಈ ಚಿತ್ರದ ಮೇಲೆ ಹೊರೆಸಲಾಗಿದೆ. ಅದರಲ್ಲೂ ಗೋವಾದಲ್ಲಿ ನಡೆದ ಪ್ರತಿಷ್ಠಿತ ಭಾರತೀಯ ಚಲನಚಿತ್ರ ಚಿತ್ರೋತ್ಸವದಲ್ಲಿ ಮಾಡಿದ ಆರೋಪವೊಂದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರೋತ್ಸವದ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಸಿನಿಮಾ ನೋಡಿದ್ದ ವಿದೇಶಿ, ಚಿತ್ರ ನಿರ್ದೇಶಕ ನದಾಲ್ ಈ ಸಿನಿಮಾದ ಬಗ್ಗೆ ಹಲವು ಆರೋಪಗಳನ್ನು ಮಾಡಿದ್ದಾರೆ.

    ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರಶಸ್ತಿ ವಿಭಾಗದ ಜ್ಯೂರಿಯಾಗಿದ್ದ ಇಸ್ರೇಲಿ ನಿರ್ದೇಶಕ ನದಾಲ್, ಭಾರತದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕುರಿತು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದು, ಇಂತಹ  ಅಶ್ಲೀಲ, ಕೆಟ್ಟ ಸಿನಿಮಾವನ್ನು ನಾನು ಯಾವತ್ತೂ ಜ್ಯೂರಿಯಾಗಿ ನೋಡಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಅವರ ಈ ಮಾತಿಗೆ ಪರ ವಿರೋಧ ಕೂಡ ವ್ಯಕ್ತವಾಗಿದೆ. ನದಾಲ್ ಮಾತಿಗೆ ಕೆಲವರು ಆಕ್ಷೇಪನೆ ವ್ಯಕ್ತ ಪಡಿಸಿದ್ದರೆ, ಬಾಲಿವುಡ್ ನಟಿ ಸ್ವರ ಭಾಸ್ಕರ್ ಇಸ್ರೇಲಿ ನಿರ್ದೇಶಕನ ಪರವಾಗಿ ನಿಂತಿದ್ದಾರೆ. ಇದನ್ನೂ ಓದಿ: ಸಿನಿಮಾ ಸೋಲಿನ ಬೆನ್ನಲ್ಲೇ ಐಟಂ ಡ್ಯಾನ್ಸ್‌ಗೆ ಓಕೆ ಎಂದ ರಶ್ಮಿಕಾ ಮಂದಣ್ಣ

    ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಸ್ವರ, ‘ಸತ್ಯ ಏನು ಅನ್ನುವುದು ಸ್ಪಷ್ಟವಾಗಿ ಜಗತ್ತಿಗೆ ಅರ್ಥವಾಗಿದೆ’ ಎಂದು ಬರೆದುಕೊಂಡಿದ್ದಾರೆ. ಸ್ವರ ಭಾಸ್ಕರ್ ಮಾತಿಗೂ ಕೆಲವರು ಆಕ್ಷೇಪ ವ್ಯಕ್ತ ಪಡಿಸಿದ್ದರೆ, ಇನ್ನೂ ಕೆಲವರು ಸ್ವರ ಪರವಾಗಿಯೇ ಮಾತನಾಡಿದ್ದಾರೆ. ಹಾಗಾಗಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಮತ್ತೊಂದು ರೌಂಡಿನ ಚರ್ಚೆಗೆ ಕಾರಣವಾಗಿದೆ.

    ಇಷ್ಟೆಲ್ಲ ರಾದ್ಧಾಂತ ಆದ ಬೆನ್ನಲ್ಲೇ ಈ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ ನೀಡಿದ್ದು, ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿಯ ಅಂಶಗಳು ಸುಳ್ಳು ಎಂದು ಯಾರಾದರೂ ಸಾಬೀತು ಪಡಿಸಿದರೆ ನಾನು ಸಿನಿಮಾ ರಂಗದಲ್ಲೇ ಇರುವುದಿಲ್ಲ ಎಂದು ಹೇಳಿದ್ದಾರೆ. ಹಾಗಂತ ಬಹಿರಂಗವಾಗಿಯೇ ಅವರು ಆಹ್ವಾನ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಶ್ಮೀರ್‌ ಫೈಲ್ಸ್‌ ಕಾಲ್ಪನಿಕ ಅಂತಾ ಸಾಬೀತುಪಡಿಸಿದ್ರೆ, ಸಿನಿಮಾ ಮಾಡೋದನ್ನೇ ಬಿಡ್ತೀನಿ- ವಿವೇಕ್ ಅಗ್ನಿಹೋತ್ರಿ

    ಕಾಶ್ಮೀರ್‌ ಫೈಲ್ಸ್‌ ಕಾಲ್ಪನಿಕ ಅಂತಾ ಸಾಬೀತುಪಡಿಸಿದ್ರೆ, ಸಿನಿಮಾ ಮಾಡೋದನ್ನೇ ಬಿಡ್ತೀನಿ- ವಿವೇಕ್ ಅಗ್ನಿಹೋತ್ರಿ

    ತ್ತೀಚೆಗೆ ಗೋವಾ ಸಿನಿಮೋತ್ಸವದಲ್ಲಿ ಜ್ಯೂರಿ ಕಮಿಟಿ ಅಧ್ಯಕ್ಷ ನಡಾವ್ ಲಪಿಡ್(Nadav Lapid) `ದಿ ಕಾಶ್ಮೀರಿ ಫೈಲ್ಸ್’ (The Kashmir Files) ಸಿನಿಮಾ ಬಗ್ಗೆ ಅವಹೇಳನಕಾರಿ ಹೇಳಿಕೆಯೊಂದನ್ನ ಕೊಟ್ಟಿದ್ದರು. ಇದೊಂದು ಪ್ರಚಾರದ, ಅಶ್ಲೀಲ ಸಿನಿಮಾ ಎಂದು ನಡಾವ್ ಕಿಡಿಕಾರಿದ್ದರು. ಇದೀಗ ನಡಾವ್ ಹೇಳಿಕೆಗೆ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ರಿಯಾಕ್ಟ್ ಮಾಡಿದ್ದಾರೆ. ನಮ್ಮ ಚಿತ್ರದಲ್ಲಿ ಯಾವುದೇ ದೃಶ್ಯ ಕಾಲ್ಪನಿಕ ಅಂತಾ ಸಾಬೀತಾದ್ರೆ ತಾವು ಸಿನಿಮಾ ಮಾಡುವುದನ್ನೇ ಬಿಟ್ಟು ಬಿಡ್ತೀನಿ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ.

    ನಡಾವ್ ಹೇಳಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ನಡಾವ್‌ಗೆ ಟಕ್ಕರ್ ಕೊಡುವಂತಹ ವೀಡಿಯೊವೊಂದನ್ನ ವಿವೇಕ್ ಶೇರ್ ಮಾಡಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್ ವಿರುದ್ಧ ಮಾತನಾಡಿದ ನಡಾವ್ ಲಪಿಡ್ ಮನಸ್ಥಿತಿ ಬಗ್ಗೆ ವಿವೇಕ್ ಅಗ್ನಿಹೋತ್ರಿ ಟೀಕೆ ಮಾಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಜಪಾನ್ ನಲ್ಲಿ ಕುತ್ಕೊಂಡು ತನಗೀಗ 40 ವರ್ಷ ಎಂದು ಘೋಷಿಸಿಕೊಂಡ ರಮ್ಯಾ

    ಜ್ಯೂರಿ ಕಮಿಟಿಯ ಅಧ್ಯಕ್ಷ ಆ ರೀತಿ ಹೇಳಿಕೆ ನೀಡಿದ್ದು ನನಗೆ ಹೊಸದೇನೂ ಅನಿಸುತ್ತಿಲ್ಲ. ಭಯೋತ್ಪಾದಕ ಸಂಘಟನೆಗಳು, ಅರ್ಬನ್ ನಕ್ಸಲರು, ತುಕ್ಡೆ ತುಕ್ಡೆ ಗ್ಯಾಂಗ್ ಸದಸ್ಯರು ಮೊದಲಿನಿಂದಲೂ ಇದನ್ನೇ ಹೇಳುತ್ತಾ ಬಂದಿದ್ದಾರೆ. ಆದರೆ ಆಶ್ಚರ್ಯ ಎನಿಸಿದ್ದು ಏನೆಂದರೆ, ಭಾರತ ಸರ್ಕಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವ ವಿಚಾರಕ್ಕೆ ಬೆಂಬಲ ನೀಡಲಾಯಿತು. ಭಾರತದ ಕೆಲವು ಜನರೇ ಆ ವಿಚಾರವನ್ನು ದೇಶ ವಿರೋಧಿಯಾಗಿ ಬಳಸಿಕೊಂಡಿದ್ದಾರೆ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.

    ನಾಲ್ಕು ವರ್ಷದ ಹಿಂದೆ ನಾನು ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕಾಗಿ ಅಧ್ಯಯನ ಶುರುಮಾಡಿದಾಗ ಅದನ್ನು ಪ್ರಚಾರ ಎಂದು ಹೇಳಿದ್ದು ಇದೇ ಜನರು. 700 ಜನರು ಸಂದರ್ಶನ ನಡೆಸಿ ಈ ಸಿನಿಮಾ ಮಾಡಲಾಯ್ತು. ಆ 700 ಜನರ ಕುಟುಂಬದವರ ಮೇಲೆ ಕೊಲೆ-ಅತ್ಯಾಚಾರ ಆಗಿದ್ದು ಅಶ್ಲೀಲ ಮತ್ತು ಪ್ರಚಾರವೇ ಇಂದಿಗೂ ಆ ನೆಲದಲ್ಲಿ ಹಿಂದೂಗಳನ್ನು ಆರಿಸಿ ಕೊಲ್ಲಲಾಗುತ್ತಿದೆ. ಕಾಶ್ಮೀರದಲ್ಲಿ ಹತ್ಯಾಕಾಂಡ ಆಗಿರಲೇ ಇಲ್ಲ ಎಂದು ಆಗಾಗ ಈ ವಿಚಾರ ಚರ್ಚೆ ಆಗುತ್ತಲೇ ಇರುತ್ತದೆ. ಹಾಗಾದರೆ ನಮ್ಮ ಚಿತ್ರದಲ್ಲಿ ಯಾವುದೇ ದೃಶ್ಯ ಕಾಲ್ಪನಿಕ ಅಂತಾ ಸಾಬೀತಾದ್ರೆ ತಾವು ಸಿನಿಮಾ ಮಾಡುವುದನ್ನೇ ಬಿಟ್ಟು ಬಿಡ್ತೀನಿ ಎಂದು ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಸವಾಲು ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಕಾಶ್ಮೀರ್ ಫೈಲ್ಸ್’ ಅಶ್ಲೀಲ ಚಿತ್ರ ಎಂದ ನಿರ್ದೇಶಕನ ವಿರುದ್ಧ ಕಿಡಿಕಾರಿದ ಇಸ್ರೇಲ್ ರಾಯಭಾರಿ

    `ಕಾಶ್ಮೀರ್ ಫೈಲ್ಸ್’ ಅಶ್ಲೀಲ ಚಿತ್ರ ಎಂದ ನಿರ್ದೇಶಕನ ವಿರುದ್ಧ ಕಿಡಿಕಾರಿದ ಇಸ್ರೇಲ್ ರಾಯಭಾರಿ

    `ಕಾಶ್ಮೀರ್ ಫೈಲ್ಸ್’ (The Kashmir Files) ತೆರೆಕಂಡ ದಿನದಿಂದಲೂ ಸಖತ್ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ನಡೆದ ಪ್ರತಿಷ್ಠಿತ ಚಲನಚಿತ್ರೋತ್ಸವದಲ್ಲಿ ಕಲಾತ್ಮಕ ಸ್ಪರ್ಧಾ ವಿಭಾಗಕ್ಕೆ ಈ ಸಿನಿಮಾ ಸೂಕ್ತವಲ್ಲ ಎಂದು ಭಾಸವಾಯಿತು ಎಂದು ನದಾವ್‌ ಹೇಳಿಕೆ ನೀಡಿದ್ದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಇಸ್ರೇಲ್ ರಾಯಭಾರಿ ನಾರ್ ಗಿಲೋನ್ (naor gilon ನದಾವ್ ತರಾಟೆಗೆ ತೆಗೆದುಕೊಂಡಿದ್ದಾರೆ.

    kashmir

    ಗೋವಾದಲ್ಲಿ ನಡೆದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸೋಮವಾರ (ನವೆಂಬರ್ 28) ಅದ್ದೂರಿಯಾಗಿ ನಡೆದಿತ್ತು. ಮುಕ್ತಾಯ ಸಮಾರಂಭದಲ್ಲಿ ತೀರ್ಪುಗಾರರ ಮುಖ್ಯಸ್ಥರಾಗಿದ್ದ ಇಸ್ರೇಲ್‌ನ ಖ್ಯಾತ ನಿರ್ದೇಶಕ ನದಾವ್ ಲಾಪಿಡ್ ದಿ ಕಾಶ್ಮಿರ್ ಫೈಲ್ಸ್ ಸಿನಿಮಾ ವಿರುದ್ಧ ಅಸಮಾಧಾನ ಹೊರಹಾಕಿದರು. `ಕಾಶ್ಮೀರ ಫೈಲ್ಸ್’ ಸಿನಿಮಾ ವೀಕ್ಷಿಸಿ ತುಂಬಾ ಡಿಸ್ಟರ್ಬ್ ಆಗಿದ್ದೀವಿ. ಇದೊಂದು ಅಶ್ಲೀಲ ಪ್ರಚಾರದ ಸಿನಿಮಾ. ಇಂಥ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾ ವಿಭಾಗಕ್ಕೆ ಈ ಸಿನಿಮಾ ಸೂಕ್ತವಲ್ಲ ಎಂದು ಭಾಸವಾಯಿತು ಎಂದು ಹೇಳುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಬಯೋಪಿಕ್‌ನಲ್ಲಿ ತಮಿಳು ನಟ ವಿಜಯ್ ಸೇತುಪತಿ

    ವಿವಾದದ ಬೆನ್ನಲ್ಲೇ ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ನಾರ್ ಗಿಲೋನ್, ನಿರ್ದೇಶಕ ನದಾವ್ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ. ಇಂಥ ಹೇಳಿಕೆಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದ್ದಾರೆ.

    ನಾನು ನದಾವ್ ಹೇಳಿಕೆಗಳನ್ನು ಖಂಡಿಸುತ್ತೇನೆ. ಇದರಲ್ಲಿ ಯಾವುದೇ ಸಮರ್ಥನೆ ಇಲ್ಲ. ಇಲ್ಲಿ ಕಾಶ್ಮೀರ ಸಮಸ್ಯೆಯ ಸೂಕ್ಷ್ಮತೆಯನ್ನು ತೋರಿಸುತ್ತದೆ ಎಂದು ಹೇಳಿದರು. ಭಾರತೀಯ ಸಂಸ್ಕೃತಿಯಲ್ಲಿ ಅತಿಥಿಯನ್ನು ದೇವರಂತೆ ಕಾಣುತ್ತಾರೆ. ಜ್ಯೂರಿ ಮುಖ್ಯಸ್ಥರಾಗಿ ಎಂದು ಭಾರತ ನೀಡಿದ ಆಹ್ವಾನ ಮತ್ತು ನಂಬಿಕೆ, ಗೌರವ, ಆತ್ಮೀಯ ಆತಿಥ್ಯವನ್ನು ದುರುಪಯೋಗ ಪಡಿಸಿಕೊಂಡಿದ್ದೀರಿ ಎಂದು ನದಾವ್ ಅವರನ್ನು ತರಾಟೆ ತೆಗೆದುಕೊಂಡರು ಇಸ್ರೇಲ್ ರಾಯಭಾರಿ ನಾರ್ ಗಿಲೋನ್.

    Live Tv
    [brid partner=56869869 player=32851 video=960834 autoplay=true]

  • ಕನ್ನಡದಲ್ಲೂ ಮೂಡಿ ಬರಲಿದೆ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಹೊಸ ಸಿನಿಮಾ

    ಕನ್ನಡದಲ್ಲೂ ಮೂಡಿ ಬರಲಿದೆ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಹೊಸ ಸಿನಿಮಾ

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಮೂಲಕ ಸಂಚಲನವನ್ನೇ ಸೃಷ್ಟಿ ಮಾಡಿದ್ದ  ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri), ಇದೀಗ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ಆ ಸಿನಿಮಾಗೆ ‘ದಿ ವ್ಯಾಕ್ಸಿನ್ ವಾರ್’ (The Vaccine War) ಎಂದು ಹೆಸರಿಟ್ಟಿದ್ದಾರೆ. ಈ ಸಿನಿಮಾ ಕನ್ನಡದಲ್ಲೂ ನಿರ್ಮಾಣವಾಗುತ್ತಿರುವುದು ವಿಶೇಷ. ದಿ ಕಾಶ್ಮೀರ್ ಫೈಲ್ಸ್ ಈ ಹಿಂದೆ ಕೇವಲ ಹಿಂದಿಯಲ್ಲಿ ಮಾತ್ರ ಮೂಡಿ ಬಂದಿತ್ತು. ಆನಂತರ ಓಟಿಟಿಯಲ್ಲಿ ಕನ್ನಡಕ್ಕೆ ಡಬ್ ಮಾಡಲಾಗಿತ್ತು. ಇದೀಗ ಹಿಂದಿ, ತಮಿಳು, ತೆಲುಗು ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ.

    ಕೊರೋನಾ ಸಮಯದಲ್ಲಿ ವ್ಯಾಕ್ಸಿನ್ ಏನೆಲ್ಲ ಆವಾಂತರ ಸೃಷ್ಟಿ ಮಾಡಿತು ಎನ್ನುವ ಅರಿವು ಬಹುತೇಕರಿಗಿದೆ. ಈ ವ್ಯಾಕ್ಸಿನ್ ಏನೆಲ್ಲ ಕೆಲಸ ಮಾಡಿತು ಎಂದು ಕಂಡವರು ಇದ್ದಾರೆ. ವ್ಯಾಕ್ಸಿನ್ ಮಾಫಿಯಾ ಬಗ್ಗೆಯೂ ಹಲವು ಅನುಮಾನಗಳು ವ್ಯಕ್ತವಾದವು. ಹೀಗಾಗಿಯೇ ವ್ಯಾಕ್ಸಿನ್ ಸುತ್ತ ಕಥೆಯನ್ನು ಬರೆದಿರುವ ವಿವೇಕ್, ವ್ಯಾಕ್ಸಿನ್ ಸಾಧಕ ಬಾಧಕಗಳ ಬಗ್ಗೆಯೇ ಸಿನಿಮಾ ಮಾಡುತ್ತಿದ್ದಾರಂತೆ. ಇದನ್ನೂ ಓದಿ:ಸಮಂತಾ ಬಾಳಲ್ಲಿ ಆಶಾಕಿರಣ: ನಾಗ ಚೈತನ್ಯ ಮನಸ್ಸು ಮಾಡಲಿ ಎಂದು ಫ್ಯಾನ್ಸ್

    ದಿ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾ ತಯಾರಿ ವೇಳೆಯಲ್ಲೇ ವ್ಯಾಕ್ಸಿನ್ ಬಗ್ಗೆ ಸಂಶೋಧನೆ ಮಾಡಿದ್ದರಂತೆ ವಿವೇಕ್. ಕೋವಿಡ್ ಕಾರಣದಿಂದಾಗಿ ಕಾಶ್ಮೀರ್ ಫೈಲ್ಸ್ ಶೂಟಿಂಗ್ ಮುಂದೂಡಲ್ಪಟ್ಟಾಗ  ವ್ಯಾಕ್ಸಿನ್ ಹಿಂದೆ ಬಿದ್ದಿದ್ದರಂತೆ. ತಮ್ಮ ಸಂಶೋಧನೆಯಲ್ಲಿ ಕಂಡ  ಅನುಭವಗಳನ್ನು ಈ ಸಿನಿಮಾದಲ್ಲಿ ಅವರು ಅಳವಡಿಸಿಕೊಂಡಿದ್ದಾರಂತೆ. ವ್ಯಾಕ್ಸಿನ ತಯಾರಿಕೆಯಲ್ಲಿ ಗೆದ್ದಿರುವ ವಿಜ್ಞಾನಿಗಳ ಶ್ರಮ, ಅದನ್ನು ಅಷ್ಟೇ ವೇಗವಾಗಿ ತಲುಪಿಸಿದ ರೋಚಕ ಕಥೆಯೂ ಈ ಸಿನಿಮಾದಲ್ಲಿ ಇರಲಿದೆಯಂತೆ.

    kashmir

    ತಮ್ಮದೇ ಬ್ಯಾನರ್ ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ವಿವೇಕ್, ಪತ್ನಿ ನಟಿ ಪಲ್ಲವಿ ಜೋಷಿ ಅವರೇ ಈ ಚಿತ್ರದ ನಿರ್ಮಾಪಕರು ಎಂದು ಘೋಷಣೆ ಮಾಡಿದ್ದಾರೆ. ತಾರಾಗಣದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಕೊಟ್ಟಿಲ್ಲವಾದರೂ, ಶೀಘ್ರದಲ್ಲೇ ಎಲ್ಲ ವಿಷಯವನ್ನೂ ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • Breaking – ವ್ಯಾಕ್ಸಿನ್ ಮೇಲೆ ಸಿನಿಮಾ ಮಾಡಲಿದ್ದಾರೆ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್

    Breaking – ವ್ಯಾಕ್ಸಿನ್ ಮೇಲೆ ಸಿನಿಮಾ ಮಾಡಲಿದ್ದಾರೆ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, (Vivek Agnihotri) ಇದೀಗ ತಮ್ಮ ಹೊಸ ಸಿನಿಮಾವನ್ನು ಘೋಷಿಸಿದ್ದು, ಈ ಸಿನಿಮಾ ವ್ಯಾಕ್ಸಿನ್ ವಾರ್ ಮೇಲೆ ಇರಲಿದೆಯಂತೆ. ಹಾಗಾಗಿಯೇ ಈ ಚಿತ್ರಕ್ಕೆ ಅವರು ‘ದಿ ವ್ಯಾಕ್ಸಿನ್ ವಾರ್’ (The Vaccine War) ಎಂದು ಹೆಸರಿಟ್ಟಿದ್ದಾರೆ. ಹಿಂದಿ, ಕನ್ನಡ, ತಮಿಳು, ತೆಲುಗು ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬರುತ್ತಿರುವುದು ವಿಶೇಷ.

    kashmir

    ಕೊರೋನಾ ಸಮಯದಲ್ಲಿ ವ್ಯಾಕ್ಸಿನ್ ಏನೆಲ್ಲ ಆವಾಂತರ ಸೃಷ್ಟಿ ಮಾಡಿತು ಎನ್ನುವ ಅರಿವು ಬಹುತೇಕರಿಗಿದೆ. ಈ ವ್ಯಾಕ್ಸಿನ್ ಏನೆಲ್ಲ ಕೆಲಸ ಮಾಡಿತು ಎಂದು ಕಂಡವರು ಇದ್ದಾರೆ. ವ್ಯಾಕ್ಸಿನ್ ಮಾಫಿಯಾ ಬಗ್ಗೆಯೂ ಹಲವು ಅನುಮಾನಗಳು ವ್ಯಕ್ತವಾದವು. ಹೀಗಾಗಿಯೇ ವ್ಯಾಕ್ಸಿನ್ ಸುತ್ತ ಕಥೆಯನ್ನು ಬರೆದಿರುವ ವಿವೇಕ್, ವ್ಯಾಕ್ಸಿನ್ ಸಾಧಕ ಬಾಧಕಗಳ ಬಗ್ಗೆಯೇ ಸಿನಿಮಾ ಮಾಡುತ್ತಿದ್ದಾರಂತೆ. ಇದನ್ನೂ ಓದಿ:ಮುತ್ತೆತ್ತರಾಯನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‍ಕುಮಾರ್

    ದಿ ಕಾಶ್ಮೀರ್ ಫೈಲ್ಸ್  (The Kashmir Files) ಸಿನಿಮಾ ತಯಾರಿ ವೇಳೆಯಲ್ಲೇ ವ್ಯಾಕ್ಸಿನ್ ಬಗ್ಗೆ ಸಂಶೋಧನೆ ಮಾಡಿದ್ದರಂತೆ ವಿವೇಕ್. ಕೋವಿಡ್ ಕಾರಣದಿಂದಾಗಿ ಕಾಶ್ಮೀರ್ ಫೈಲ್ಸ್ ಶೂಟಿಂಗ್ ಮುಂದೂಡಲ್ಪಟ್ಟಾಗ  ವ್ಯಾಕ್ಸಿನ್ ಹಿಂದೆ ಬಿದ್ದಿದ್ದರಂತೆ. ತಮ್ಮ ಸಂಶೋಧನೆಯಲ್ಲಿ ಕಂಡ  ಅನುಭವಗಳನ್ನು ಈ ಸಿನಿಮಾದಲ್ಲಿ ಅವರು ಅಳವಡಿಸಿಕೊಂಡಿದ್ದಾರಂತೆ. ವ್ಯಾಕ್ಸಿನ ತಯಾರಿಕೆಯಲ್ಲಿ ಗೆದ್ದಿರುವ ವಿಜ್ಞಾನಿಗಳ ಶ್ರಮ, ಅದನ್ನು ಅಷ್ಟೇ ವೇಗವಾಗಿ ತಲುಪಿಸಿದ ರೋಚಕ ಕಥೆಯೂ ಈ ಸಿನಿಮಾದಲ್ಲಿ ಇರಲಿದೆಯಂತೆ.

    ತಮ್ಮದೇ ಬ್ಯಾನರ್ ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ವಿವೇಕ್, ಪತ್ನಿ ನಟಿ ಪಲ್ಲವಿ ಜೋಷಿ ಅವರೇ ಈ ಚಿತ್ರದ ನಿರ್ಮಾಪಕರು ಎಂದು ಘೋಷಣೆ ಮಾಡಿದ್ದಾರೆ. ತಾರಾಗಣದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಕೊಟ್ಟಿಲ್ಲವಾದರೂ, ಶೀಘ್ರದಲ್ಲೇ ಎಲ್ಲ ವಿಷಯವನ್ನೂ ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಕಾಂತಾರ’ ನೋಡಿ ರಿಷಬ್‌ಗೆ ಹ್ಯಾಟ್ಸ್ ಆಫ್ ಎಂದ ವಿವೇಕ್ ಅಗ್ನಿಹೋತ್ರಿ

    `ಕಾಂತಾರ’ ನೋಡಿ ರಿಷಬ್‌ಗೆ ಹ್ಯಾಟ್ಸ್ ಆಫ್ ಎಂದ ವಿವೇಕ್ ಅಗ್ನಿಹೋತ್ರಿ

    ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ `ಕಾಂತಾರ’ (Kantara Film) ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ರಾರಾಜಿಸುತ್ತಿದೆ. ಇದೀಗ `ದಿ ಕಾಶ್ಮೀರ್ ಫೈಲ್ಸ್’ (The Kashmir Files) ನಿರ್ದೇಶಕ ವಿವೇಕ್ ಅಗ್ನಿಹೋತ್ರಿ `ಕಾಂತಾರ’ ಸಿನಿಮಾ ನೋಡಿ, ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    90ರ ದಶಕದ ಕಾಶ್ಮೀರಿ ಪಂಡಿತರ ಕಥೆಯನ್ನ ತೆರೆಯ ಮೇಲೆ ತೋರಿಸಿ, ಅಪಾರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದ `ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ `ಕಾಂತಾರ’ ಚಿತ್ರವನ್ನು ನೋಡಿ ಹೊಗಳಿದ್ದಾರೆ. ರಿಷಬ್ ಶೆಟ್ಟಿಯ (Rishab Shetty) ಬೆನ್ನು ತಟ್ಟಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.

    `ಕಾಂತಾರ’ ಸಿನಿಮಾ ನೋಡಿ ಬಂದೆ. ಇದೊಂದು ಅದ್ಭುತ ಅನುಭವ ಕೊಟ್ಟ ಚಿತ್ರ. ಈ ರೀತಿಯ ಚಿತ್ರವನ್ನು ನೀವು ನೋಡಿರುವುದಿಲ್ಲ. ನಾನಂತೂ ಈ ರೀತಿಯ ಸಿನಿಮಾವನ್ನು ನೋಡಿರಲಿಲ್ಲ. ರಿಷಬ್ ಶೆಟ್ಟಿಗೆ ಹ್ಯಾಟ್ಸ್ ಆಫ್. ರಿಷಬ್ ನೀವು ಅದ್ಭುತ ಕೆಲಸ ಮಾಡಿದ್ದೀರಿ. ನಾನು ನಿಮಗೆ ಕರೆ ಮಾಡಿ ಮಾತನಾಡುತ್ತೇನೆ. ಇದನ್ನೂ ಓದಿ:ಚೇತನ್ ಹೇಳಿಕೆ ಬಗ್ಗೆ ಏನೂ ಹೇಳಲ್ಲ: ರಿಷಬ್ ಶೆಟ್ಟಿ

    ನನ್ನ ಅನುಭವವನ್ನು ಹಂಚಿಕೊಳ್ಳದೇ ಇರಲು ಸಾಧ್ಯವಾಗಲಿಲ್ಲ. ಕಲೆ, ಜಾನಪದ ವಿಚಾರಗಳು ಸಿನಿಮಾದಲ್ಲಿ ಅಡಗಿದೆ. ಸಿನಿಮಾದ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ನಿಮ್ಮ ಬಳಿ ಇರುವುದು ಅದೆಂತಹ ಎನರ್ಜಿ. ನಾನು ಈವರೆಗೆ ನೋಡಿಲ್ಲ. ರಿಷಬ್ ಶೆಟ್ಟಿ ಮಾಡಿದ ಮಾಸ್ಟರ್‌ಪೀಸ್ ಈ ಸಿನಿಮಾದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಹಾಡಿ ಹೊಗಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 18 ಕೋಟಿ ದುಬಾರಿ ಬೆಲೆಯ ಮನೆ ಖರೀದಿಸಿದ  ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ

    18 ಕೋಟಿ ದುಬಾರಿ ಬೆಲೆಯ ಮನೆ ಖರೀದಿಸಿದ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ

    ದಿ ಕಾಶ್ಮೀರ್ ಫೈಲ್ಸ್ (The Kashmir Files) ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮೊದ ಮೊದಲು ಸಿನಿಮಾ ಕಾರಣದಿಂದಾಗಿ ಹೆಚ್ಚು ಸುದ್ದಿಯಲ್ಲಿದ್ದರು. ಆನಂತರ ಬಾಲಿವುಡ್ ಸಿನಿಮಾಗಳ ಅನೇಕ ಸ್ಟಾರ್ ನಟರನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟು ಸುದ್ದಿಯಾದರು. ಇತ್ತೀಚೆಗಷ್ಟೇ ದನದ ಮಾಂಸದ ವಿಚಾರಕ್ಕೂ ಅವರು ಟೀಕೆಗೆ ಗುರಿಯಾದರು. ಇದೀಗ ಅಭಿಮಾನಿಗಳಿಗೆ ಸಿಹಿ ಸುದ್ದಿಕೊಟ್ಟಿದ್ದಾರೆ. ದುಬಾರಿ ಮನೆ ಖರೀದಿಸುವ ಮೂಲಕ ಚರ್ಚೆಗೆ ಕಾರಣರಾಗಿದ್ದಾರೆ.

    ವಿವೇಕ್ ಅಗ್ನಿಹೋತ್ರಿ (Vivek Agnihotri) ಮತ್ತು ಪಲ್ಲವಿ ಜೋಷಿ ದಂಪತಿ ಮುಂಬೈನ (Mumbai) ವೆರ್ಸೋವಾದಲ್ಲಿ ದುಬಾರಿ ಫ್ಲ್ಯಾಟ್ ಖರೀದಿ ಮಾಡಿದ್ದು ಈ ಫ್ಲ್ಯಾಟ್ ಗೆ 17.90 ಕೋಟಿ ಎಂದು ಹೇಳಲಾಗುತ್ತಿದೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಹಿಟ್ ಬಳಿಕ ಈ ಪ್ರಮಾಣದ ದುಬಾರಿ ಕಾರು ಖರೀದಿ ಮಾಡಿದ್ದಾರೆ ಎನ್ನುವುದೇ ಚರ್ಚೆಗೆ ಕಾರಣವಾಗಿದೆ. ಹಾಗೂ ನೆಟ್ಟಿಗರ ಕಣ್ಣು ಕುಕ್ಕಿದೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಜೊತೆ ಲಿಪ್‌ಲಾಕ್ ಕಾರಣಕ್ಕಾಗಿ ಟ್ರೋಲ್ ಆದ ಬಗ್ಗೆ ರಶ್ಮಿಕಾ ಮಾತು

    ಮೂಲಗಳ ಪ್ರಕಾರ ವಿವೇಕ್ ಖರೀದಿಸಿರುವ ಫ್ಲ್ಯಾಟ್ (Flat) 3258 ಚದರ ಅಡಿ ವಿಸ್ತೀರ್ಣದಲ್ಲಿದೆಯಂತೆ. ಈ ಫ್ಯ್ಲಾಟ್ ನಲ್ಲಿ ಸುಮಾರು ಮೂರು ಕಾರ್ ಪಾರ್ಕಿಂಗ್ ಕೂಡ ಅವಕಾಶ ನೀಡಲಾಗಿದೆ. ಸ್ಟ್ಯಾಂಪ್ ಡ್ಯೂಟಿಗೆಂದೇ 1.07 ಕೋಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂಬೈನ ಎಕ್ಸ್ಟಸಿ ಪ್ರೈವೇಟ್ ಜೋಷಿ ಅನ್ನುವವರಿಂದ ಇದನ್ನು ಖರೀದಿಸಿದ್ದಾರೆ ಎನ್ನುವುದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ. ತಮ್ಮ ಬದುಕಿನಲ್ಲಿ ಘಟಿಸುವ ಎಲ್ಲ ವಿಷಯವನ್ನೂ ಸೋಷಿಯಲ್ ಮೀಡಿಯಾದ ಮೂಲಕ ಹಂಚಿಕೊಳ್ಳುವ ವಿವೇಕ್, ಈ ಕುರಿತು ಏನೂ ಹೇಳಿಲ್ಲ.

    ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿ ಬಂದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬರೋಬ್ಬರಿ 252 ಕೋಟಿ ರೂಪಾಯಿಯನ್ನು ಕಲೆ ಹಾಕಿತ್ತು. ಕಾಶ್ಮೀರ ಪಂಡಿತರ ಹತ್ಯೆಯನ್ನು ಆಧಾರವಾಗಿ ಇಟ್ಟುಕೊಂಡು ತಯಾರಿಸಲಾದ ಸಿನಿಮಾಗೆ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ತೆರಿಗೆ ವಿನಾಯತಿಯನ್ನು ಘೋಷಿಸಿದ್ದವು.


    Live Tv

    [brid partner=56869869 player=32851 video=960834 autoplay=true]

  • ಪತ್ನಿ ಜೊತೆ ಸೆಕ್ಸ್ ಎಂಜಾಯ್ ಮಾಡ್ತೀನಿ, ಕರಣ್ ಜೋಹಾರ್ ರೀತಿ ಅಲ್ಲ: ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಟಾಂಗ್

    ಪತ್ನಿ ಜೊತೆ ಸೆಕ್ಸ್ ಎಂಜಾಯ್ ಮಾಡ್ತೀನಿ, ಕರಣ್ ಜೋಹಾರ್ ರೀತಿ ಅಲ್ಲ: ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಟಾಂಗ್

    ಬಾಲಿವುಡ್ ನಿರ್ದೇಶಕ ಕರಣ್ ಜೋಹಾರ್ (Karan Johar) ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದ ಬಗ್ಗೆ ದಿ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೆಂಡ ಕಾರಿದ್ದಾರೆ. ಅಂತಹ ಸೆಕ್ಸ್ ಆಧರಿಸಿದ ಕಾರ್ಯಕ್ರಮಕ್ಕೆ ನನ್ನನ್ನು ಕರೆಯುವುದೂ ಇಲ್ಲ, ನಾನು ಹೋಗುವುದೂ ಇಲ್ಲ ಎಂದು ಹೇಳಿದ್ದಾರೆ. ಕರಣ್ ಜೋಹಾರ್ ಕೇಳುವ ಪ್ರಶ್ನೆಗಳಿಗೂ ಆಕ್ಷೇಪ ವ್ಯಕ್ತಪಡಿಸಿರುವ ಅಗ್ನಿಹೋತ್ರಿ (Vivek Agnihotri) ಕಾರ್ಯಕ್ರಮಕ್ಕೆ ಹೋಗುವವರ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.

    ಕಾಫಿ ವಿತ್ ಕರಣ್ (Koffee With Karan) ಕಾರ್ಯಕ್ರಮಕ್ಕೆ ಹೋಗುವುದು ಎಂದರೆ ನಮ್ಮ ಮರ್ಯಾದೆಯನ್ನು ನಾವೇ ಕಳೆದುಕೊಂಡಂತೆ. ನಮ್ಮ ಸೆಕ್ಸ್ ಲೈಫ್ ಹೇಳಿಕೊಳ್ಳುವುದಕ್ಕೆ ಅಲ್ಲಿಗೆ ಹೋಗಬೇಕಾ? ಅದು ಹೇಳಿಕೊಳ್ಳುವಂತಹ ವಿಷಯವಾ? ಡೇಟಿಂಗ್, ಲವ್, ಬ್ರೇಕ್ ಅಪ್, ಸೆಕ್ಸ್ ಬರೀ ಇದರ ಸುತ್ತಲೇ ಇಡೀ ಕಾರ್ಯಕ್ರಮ ರೂಪುಗೊಂಡಿರುತ್ತದೆ. ಅದೊಂದು ರೀತಿಯಲ್ಲಿ ಅಸಹ್ಯ ಅನಿಸುವಂಥದ್ದು ಎಂದಿದ್ದಾರೆ ವಿವೇಕ್. ಇದನ್ನೂ ಓದಿ:ಲಾಡ್ಜ್ ಕೋಣೆಯಲ್ಲಿ ಶವವಾಗಿ ಪತ್ತೆಯಾದ ನಟಿ ಆಕಾಂಕ್ಷಾ ಮೋಹನ್

    ನನ್ನ ಲೈಫ್ ಸೆಕ್ಸ್ ಸುತ್ತ ಇಲ್ಲ. ನಾನು ಮಾಡಬೇಕಿರುವ ಕೆಲಸ ತುಂಬಾ ಇದೆ. ಸೆಕ್ಸ್ ಅನ್ನುವುದು ತುಂಬಾ ಮಹತ್ವವಾದದ್ದು ಏನೂ ಇಲ್ಲ. ನಾನು ಸೆಕ್ಸ್ (Sex) ಅನ್ನು ನನ್ನ ಹೆಂಡತಿ ಜೊತೆ ಎಂಜಾಯ್ ಮಾಡುತ್ತೇನೆ. ಕರಣ್ ಜೋಹಾರ್ ತರಹ ಅಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ. ಇಂತಹ ಕಾರಣಗಳಿಗಾಗಿಯೇ ನಾನು ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಹೋಗಲಾರೆ ಎಂದು ಹೇಳಿದ್ದಾರೆ ಅಗ್ನಿಹೋತ್ರಿ.

    ಕರಣ್ ಜೋಹಾರ್ ನಿರ್ಮಾಣದ ಬ್ರಹ್ಮಾಸ್ತ್ರ ಸಿನಿಮಾ ಬಗ್ಗೆ ಅಗ್ನಿಹೋತ್ರಿ ಕಾಮೆಂಟ್ ಮಾಡಿದ್ದರು. ಬೈಕಾಟ್ ಬ್ರಹ್ಮಾಸ್ತ್ರಕ್ಕೆ ಪರೋಕ್ಷೆವಾಗಿ ಇವರು ಬೆಂಬಲ ಸೂಚಿಸಿದ್ದರು. ಕಂಗನಾ ರಣಾವತ್ ಮಾತಿಗೆ ಬೆಂಬಲವನ್ನೂ ಸೂಚಿಸಿದ್ದರು. ನಂತರ ಬ್ರಹ್ಮಾಸ್ತ್ರಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ನನ್ನನ್ನು ಬಿಟ್ಟು ಬಿಡಿ ಎಂದು ನೆಟ್ಟಿಗರನ್ನು ಕೇಳಿದ್ದರು. ಇದೀಗ ಮತ್ತೆ ಕರಣ್ ಬಗ್ಗೆ ಗುಡುಗಿದ್ದಾರೆ. ಸೆಕ್ಸ್ ವಿಚಾರ ಇಟ್ಕೊಂಡು ತಿವಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಕನಸೆಲ್ಲ ನುಚ್ಚುನೂರು: ಮೌನವೇ ಲೇಸು ಅಂತಿದ್ದಾರೆ ಫ್ಯಾನ್ಸ್

    ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಕನಸೆಲ್ಲ ನುಚ್ಚುನೂರು: ಮೌನವೇ ಲೇಸು ಅಂತಿದ್ದಾರೆ ಫ್ಯಾನ್ಸ್

    ಬಾಲಿವುಡ್ (Bollywood) ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅಂದುಕೊಂಡ ಕನಸುಗಳೆಲ್ಲ ಹಳ್ಳ ಹಿಡಿಯುತ್ತಿವೆ. ದಿ ಕಾಶ್ಮೀರ್ ಫೈಲ್ಸ್ ಗೆಲುವು ಅವರಿಗೆ ದುಡ್ಡು ಮಾತ್ರ ತಂದುಕೊಟ್ಟಿದೆ. ಉಳಿದಂತೆ ಎಲ್ಲ ಕೆಲಸಗಳು ಅಂದುಕೊಂಡಂತೆ ನಡೆಯುತ್ತಿಲ್ಲ. ಹಾಗಾಗಿ ಸ್ವಲ್ಪ ದಿನ ಸುಮ್ಮನೆ ಇರಿ ಎನ್ನುತ್ತಿದ್ದಾರೆ ಅಭಿಮಾನಿಗಳು. ಏನೂ ಮಾತನಾಡದೇ ಸುಮ್ಮನಿದ್ದರೆ ಎಲ್ಲವೂ ಅಂದುಕೊಂಡಂತೆ ಆಗುತ್ತವೆ ಎಂದು ಅಭಿಮಾನಿಗಳು ಸಲಹೆ ನೀಡಿದ್ದಾರಂತೆ.

    ಭಾರತದಲ್ಲಿ ಸಿನಿಮಾ ಸಕ್ಸಸ್ ಆದರೂ, ಬೇರೆ ದೇಶಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಆಗದಂತೆ ತಡೆಯಲಾಯಿತು. ಅಲ್ಲದೇ, ವಿಶ್ವವಿದ್ಯಾಲಯವೊಂದರಲ್ಲಿ ಸಿನಿಮಾ ಬಗ್ಗೆ ಮಾತನಾಡಬೇಕಿದ್ದ ವಿವೇಕ್ ಅವರ ಭಾಷಣವನ್ನೇ ರದ್ದುಗೊಳಿಸಲಾಯಿತು. ಇದಕ್ಕೆಲ್ಲ ಕಾರಣ ಅವರು ಆಡುತ್ತಿರುವ ಮಾತುಗಳು ಎನ್ನಲಾಗುತ್ತಿದೆ. ಅಲ್ಲದೇ, ಬಾಲಿವುಡ್ ಸಿನಿಮಾ ರಂಗದ ಮೇಲೆ ಸಲ್ಲದ ಆರೋಪಗಳನ್ನೂ ಅವರು ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೂ ಅವರಿಗೆ ತೊಂದರೆ ಆಗುತ್ತಿವೆಯಂತೆ. ಇದನ್ನೂ ಓದಿ:ನೆಗೆಟಿವ್ ಕಾಮೆಂಟ್ ಗೆ ಹೆದರಲ್ಲ, ತುಂಬಾ ಜನ ನನ್ನನ್ನು ಪ್ರೀತಿಸ್ತಾರೆ ಎಂದ ಸೋನು ಶ್ರೀನಿವಾಸ್ ಗೌಡ

    ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ (Brahmastra) ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ವಿವೇಕ್ ಅಗ್ನಿಹೋತ್ರಿ ಮೊನ್ನೆಯಷ್ಟೇ ಅವಮಾನ ಅನುಭವಿಸಿದ್ದಾರೆ. ಈ ವಿವಾದದಲ್ಲಿ ನಾನಿಲ್ಲವೆಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು ದೂರವೇ ಉಳಿದರು. ಇನ್ಮುಂದೆ ಬಾಕ್ಸ್ ಆಫೀಸ್ ವಿಚಾರವನ್ನು ನಾನು ಮಾತನಾಡಲಾರೆ ಎಂದೂ ಅವರು ಹೇಳಿದ್ದಾರೆ. ಇದೀಗ ಮತ್ತೊಂದು ಹೊಡೆತ ಅವರಿಗೆ ಬಿದ್ದಿದೆ.

    ಸೋಷಿಯಲ್ ಮೀಡಿಯಾದಲ್ಲಿ ದಿ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾವನ್ನು ಆಸ್ಕರ್ (Oscar) ಪ್ರಶಸ್ತಿಗಾಗಿ ಕಳುಹಿಸಿ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದರು. ಈ ಸಿನಿಮಾದ ಬಗ್ಗೆ ಕ್ಯಾಂಪೇನ್ ಕೂಡ ಮಾಡಲಾಗಿತ್ತು. ಬಹುತೇಕ  ಇದೇ ಸಿನಿಮಾ ರೇಸ್ ನಲ್ಲಿ ಇರುತ್ತದೆ ಎಂದೂ ನಂಬಲಾಗಿತ್ತು. ಆದರೆ, ವಿವೇಕ್ ಆಡಿದ ಮಾತುಗಳಿಂದಾಗಿ ಆಸ್ಕರ್ ಅಂಗಳಕ್ಕೆ ಹೋಗಲು ಸಿನಿಮಾ ಸಾಧ್ಯವಾಗಿಲ್ಲ ಎನ್ನುತ್ತಿವೆ ಮೂಲಗಳು. ವಿದೇಶಿ ನೆಲದಲ್ಲಿ ಈ ರೀತಿಯ ಸಿನಿಮಾಗಳಿಗೆ ಎನ್ ಕ್ರೇಜ್ ಮಾಡುವುದಿಲ್ಲ ಎಂಬ ಅಭಿಪ್ರಾಯ ಬಂದಿರುವ ಹಿನ್ನೆಲೆಯಲ್ಲಿ ಕಳುಹಿಸಲು ಸಾಧ್ಯವಾಗಿಲ್ಲ ಎನ್ನುವುದು ಸದ್ಯಕ್ಕಿರುವ ಸುದ್ದಿ.

     

    Live Tv
    [brid partner=56869869 player=32851 video=960834 autoplay=true]