Tag: ವಿವೇಕ್ ಅಗ್ನಿಹೋತ್ರಿ

  • ಮಗಳ ಬಿಕಿನಿ ಫೋಟೋ ಕಳುಹಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ

    ಮಗಳ ಬಿಕಿನಿ ಫೋಟೋ ಕಳುಹಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ

    ಮಗೆ ಶಾರುಖ್ ಖಾನ್ ಅಭಿಮಾನಿಗಳು ಅಶ್ಲೀಲ ಸಂದೇಶ ಕಳುಹಿಸುತ್ತಿದ್ದಾರೆ ಎಂದು ಮೊನ್ನೆಯಷ್ಟೇ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಆರೋಪ ಮಾಡಿದ್ದರು. ಇದೀಗ ಅವರು ತಮಗೆ ಜೀವ ಬೆದರಿಕೆಯನ್ನೂ ಹಾಕುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ತಮ್ಮ ಮಗಳ ಬಿಕಿನಿ ಫೋಟೋ ಕಳುಹಿಸುವುದರ ಜೊತೆಗೆ ಜೀವ ಬೆದರಿಕೆಯ ಬರಹಗಳನ್ನು ಬರೆಯುತ್ತಿದ್ದಾರೆ ಎಂದು ಅವರು ಕೆಲವು ಸ್ಕ್ರೀನ್ ಶಾಟ್ ಹಾಕಿದ್ದಾರೆ.

    ಕೆಲ ಕಿಡಿಗೇಡಿಗಳು ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿರುವುದಕ್ಕೆ ಕಾರಣ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾಗೆ ಅವರು ಕೊಟ್ಟ ಪ್ರತಿಕ್ರಿಯೆ ಕಾರಣವೆಂದು ಹೇಳಲಾಗುತ್ತಿದೆ. ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದರು ಎನ್ನುವ ಕಾರಣಕ್ಕಾಗಿ ದೊಡ್ಡ ಸುದ್ದಿ ಆಗಿತ್ತು. ಹಿಂದೂಪರ ಸಂಘಟನೆಗಳು ಪ್ರತಿಭಟಿಸಿದವು. ಹಲವರು ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿದರು. ಅದೇ ರೀತಿಯ ವಿವೇಕ್ ಅಗ್ನಿಹೋತ್ರಿ ಕೂಡ ಮಾತನಾಡಿದ್ದಾರೆ.

    ಪಠಾಣ್ ಸಿನಿಮಾದಲ್ಲಿ ಕೇಸರಿ ಬಿಕಿನಿ ಮತ್ತು ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎನ್ನುವ ಕಾರಣಕ್ಕಾಗಿ ವಿವೇಕ್ ಅಗ್ನಿಹೋತ್ರಿ ಬಾಲಿವುಡ್ ಸಿನಿಮಾ ರಂಗವನ್ನು ಜರಿದಿದ್ದರು. ಅದರಲ್ಲೂ ಶಾರುಖ್ ಖಾನ್ ಅವರ ಈ ನಡೆಯನ್ನು ಖಂಡಿಸಿದ್ದರು. ಯಶಸ್ಸಿಗಾಗಿ ಇಂತಹ ಕೀಳುಮಟ್ಟಕ್ಕೆ ಇಳಿಯದಿರಲಿ ಎಂದು ಪರೋಕ್ಷವಾಗಿ ದೀಪಿಕಾ ಪಡುಕೋಣೆ ಅವರಿಗೂ ಚಾಟಿ ಬೀಸಿದ್ದರು. ವಿವೇಕ್ ಮಾತ್ರ ಹಲವರ ಕಂಗೆಣ್ಣಿಗೂ ಗುರಿಯಾಗಿತ್ತು. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    kashmir

    ವಿವೇಕ್ ಅಗ್ನಿಹೋತ್ರಿ ಅವರು ಪಠಾಣ್ ಚಿತ್ರಕ್ಕೆ ಮತ್ತು ಶಾರುಖ್ ಖಾನ್ ವಿರುದ್ಧ ಮಾತನಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಶಾರುಖ್ ಖಾನ್ ಹೆಸರಿನಲ್ಲಿ ಕಿಡಿಗೇಡಿಗಳು ವಿವೇಕ್ ಅವರಿಗೆ ಅಶ್ಲೀಲ ಸಂದೇಶವನ್ನು ಕಳುಹಿಸುತ್ತಿದ್ದಾರಂತೆ. ಮಸೆಂಜರ್ ಸೇರಿದಂತೆ ಹಲವು ಕಡೆ ಶಾರುಖ್ ಖಾನ್ ಫೋಟೋ ಇರುವಂತಹ ಫೇಕ್ ಐಡಿಗಳಿಂದ ನಿಂದನೆಯ ಮತ್ತು ಕೆಟ್ಟ ಬೈಗುಳ ಇರುವಂತಹ ಮಸೇಜ್ ಗಳನ್ನು ಕಳುಹಿಸುತ್ತಿದ್ದಾರೆ. ಈ ವಿಷಯವನ್ನು ಸ್ವತಃ ವಿವೇಕ್ ಅವರೇ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

    ವಿವೇಕ್ ಅವರಿಗೆ ರಾಶಿ ರಾಶಿ ಅಶ್ಲೀಲ ಮಸೇಜ್ ಗಳು ಬರುತ್ತಿವೆಯಂತೆ. ಇದೇ ರೀತಿ ಮುಂದುವರೆದರೆ ಸೈಬರ್ ಠಾಣೆಗೆ ದೂರು ಕೂಡ ನೀಡುತ್ತಾರಂತೆ. ತಾವು ಯಾವುದೇ ರೀತಿಯಲ್ಲಿ ಯಾರನ್ನೂ ನಿಂದಿಸಿಲ್ಲ. ತಪ್ಪನ್ನು ಖಂಡಿಸಿದ್ದೇನೆ. ಅದಕ್ಕಾಗಿ ಈ ರೀತಿ ಶಿಕ್ಷೆ ಎಂದು ಅವರು ಬರೆದುಕೊಂಡಿದ್ದಾರೆ. ಈ ನಡೆಯನ್ನು ಬಲವಾಗಿ ಖಂಡಿಸುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಸಿನಿಮಾದಲ್ಲಿ ನಾನಾ ಪಾಟೇಕರ್

    ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಸಿನಿಮಾದಲ್ಲಿ ನಾನಾ ಪಾಟೇಕರ್

    ಬಾಲಿವುಡ್ ನಟ ನಾನಾ ಪಾಟೇಕರ್, ದಿ ಕಾಶ್ಮೀರ್ ಫೈಲ್ಸ್ (The Kashmir Files) ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಬಿಟೌನ್ ನಲ್ಲಿ ದಟ್ಟವಾಗಿಯೇ ಕೇಳಿ ಬರುತ್ತಿದೆ. ಸದ್ಯ ವಿವೇಕ್ ಅಗ್ನಿಹೋತ್ರಿ ‘ದಿ ವ್ಯಾಕ್ಸಿನ್ ವಾರ್’ (The Vaccine War) ಸಿನಿಮಾ ಮಾಡುತ್ತಿದ್ದು, ಈ ಚಿತ್ರದಲ್ಲಿ ನಾಯಕನಾಗಿ ನಾನಾ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಅಧಿಕೃತವಾಗಿ ವಿವೇಕ್ ಅಗ್ನಿಹೋತ್ರಿಯಾಗಲಿ, ನಾನಾ ಪಾಟೇಕರ್ (Nana Patekar) ಆಗಲಿ ಈ ವಿಷಯವನ್ನು ಹೇಳದೇ ಇದ್ದರೂ, ಈ ಸುದ್ದಿಯಂತೂ ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿದೆ. ಇಂಥದ್ದೊಂದು ಜೋಡಿ ಒಟ್ಟಾಗಿ ಸಿನಿಮಾ ಮಾಡಲು ಸಾಧ್ಯವಾ ಎನ್ನುವ ಪ್ರಶ್ನೆ ಕೂಡ ಮೂಡಿದೆ. ಹಾಗಾಗಿ ಈ ಸುದ್ದಿ ಗಾಸಿಪ್ ಅಂತಾನೂ ಹೇಳಲಾಗುತ್ತಿದೆ.  ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    ಸಿನಿಮಾ ವಿಚಾರದಲ್ಲಿ ಅವರು ನಟ, ಇವರು ನಿರ್ದೇಶಕ. ಹೇಳುವ ಕಥೆಗೂ ಮತ್ತು ಖಾಸಗಿ ಜೀವನಕ್ಕೂ ಸಂಬಂಧವಿಲ್ಲ. ಹಾಗಾಗಿ ಒಟ್ಟಾಗಿ ಸಿನಿಮಾ ಮಾಡುವುದರಲ್ಲಿ ಯಾವುದೇ ತೊಂದರೆ ಆಗಲಾರದು. ಈ ರೀತಿಯ ಜೋಡಿಯು ಒಟ್ಟಾಗಿ ಸಿನಿಮಾ ಮಾಡಿದರೆ, ಅಲ್ಲೊಂದು ಬೇರೆ ರೀತಿಯ ಸಂದೇಶ ಕೂಡ ಹೋಗಬಹುದು ಎನ್ನುತ್ತಾರೆ ಹಲವರು. ಯಾರು ಏನೇ ಹೇಳಿದರೂ, ವಿವೇಕ್ ಸಿನಿಮಾ ಮಾಡಲು ಒಪ್ಪಿಕೊಂಡರೂ, ನಾನಾ ಇದಕ್ಕೆ ಒಪ್ಪುತ್ತಾರಾ ಕಾದು ನೋಡಬೇಕು.

    ದಿ ವ್ಯಾಕ್ಸಿನ್ ವಾರ ಸಿನಿಮಾದ ಸ್ಕ್ರಿಪ್ಟ್ ಮುಗಿದಿದೆ. ಇನ್ನಷ್ಟೇ ಚಿತ್ರತಂಡ ಶೂಟಿಂಗ್ ಗೆ ಹೊರಡಬೇಕು. ಕೋವಿಡ್ ವೇಳೆಯಲ್ಲಿ ನಡೆದ ಘಟನೆಯನ್ನೇ ಈ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ ವಿವೇಕ್. ಇದೊಂದು ದೇಶವೇ ಹೆಮ್ಮೆ ಪಡುವಂತಹ ಸಿನಿಮಾವಾಗಲಿದೆ ಎಂದು ಈ ಹಿಂದೆಯೇ ವಿವೇಕ್ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿವೇಕ್ ಅಗ್ನಿಹೋತ್ರಿಗೆ ಅಶ್ಲೀಲ ಮೆಸೇಜ್: ಶಾರುಖ್ ಖಾನ್ ಹೆಸರಿನ ಕಿಡಿಗೇಡಿಗಳಿಂದ ಕೃತ್ಯ

    ವಿವೇಕ್ ಅಗ್ನಿಹೋತ್ರಿಗೆ ಅಶ್ಲೀಲ ಮೆಸೇಜ್: ಶಾರುಖ್ ಖಾನ್ ಹೆಸರಿನ ಕಿಡಿಗೇಡಿಗಳಿಂದ ಕೃತ್ಯ

    ದಿ ಕಾಶ್ಮೀರ ಫೈಲ್ಸ್ (The Kashmir Files) ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಗೆ ಕೆಲ ಕಿಡಿಗೇಡಿಗಳು ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾರಂತೆ. ಇಂತಹ ಮಸೇಜ್ ಬರಲು ಕಾರಣ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾಗೆ ಅವರು ಕೊಟ್ಟ ಪ್ರತಿಕ್ರಿಯೆ ಕಾರಣವೆಂದು ಹೇಳಲಾಗುತ್ತಿದೆ. ಪಠಾಣ್ (Pathan) ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದರು ಎನ್ನುವ ಕಾರಣಕ್ಕಾಗಿ ದೊಡ್ಡ ಸುದ್ದಿ ಆಗಿತ್ತು. ಹಿಂದೂಪರ ಸಂಘಟನೆಗಳು ಪ್ರತಿಭಟಿಸಿದವು. ಹಲವರು ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿದರು. ಅದೇ ರೀತಿಯ ವಿವೇಕ್ ಅಗ್ನಿಹೋತ್ರಿ ಕೂಡ ಮಾತನಾಡಿದ್ದಾರೆ.

    ಪಠಾಣ್ ಸಿನಿಮಾದಲ್ಲಿ ಕೇಸರಿ ಬಿಕಿನಿ ಮತ್ತು ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎನ್ನುವ ಕಾರಣಕ್ಕಾಗಿ ವಿವೇಕ್ ಅಗ್ನಿಹೋತ್ರಿ ಬಾಲಿವುಡ್ ಸಿನಿಮಾ ರಂಗವನ್ನು ಜರಿದಿದ್ದರು. ಅದರಲ್ಲೂ ಶಾರುಖ್ ಖಾನ್ (Shah Rukh Khan) ಅವರ ಈ ನಡೆಯನ್ನು ಖಂಡಿಸಿದ್ದರು. ಯಶಸ್ಸಿಗಾಗಿ ಇಂತಹ ಕೀಳುಮಟ್ಟಕ್ಕೆ ಇಳಿಯದಿರಲಿ ಎಂದು ಪರೋಕ್ಷವಾಗಿ ದೀಪಿಕಾ ಪಡುಕೋಣೆ ಅವರಿಗೂ ಚಾಟಿ ಬೀಸಿದ್ದರು. ವಿವೇಕ್ ಮಾತ್ರ ಹಲವರ ಕಂಗೆಣ್ಣಿಗೂ ಗುರಿಯಾಗಿತ್ತು. ಇದನ್ನೂ ಓದಿ: ‘ಬಿಗ್ ಬಾಸ್’ ಫಿನಾಲೆ ವೇದಿಕೆಯ ಮೇಲೆ ಕಣ್ಣೀರಿಟ್ಟಿ ಸುದೀಪ್

    ವಿವೇಕ್ ಅಗ್ನಿಹೋತ್ರಿ ಅವರು ಪಠಾಣ್ ಚಿತ್ರಕ್ಕೆ ಮತ್ತು ಶಾರುಖ್ ಖಾನ್ ವಿರುದ್ಧ ಮಾತನಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಶಾರುಖ್ ಖಾನ್ ಹೆಸರಿನಲ್ಲಿ ಕಿಡಿಗೇಡಿಗಳು ವಿವೇಕ್ ಅವರಿಗೆ ಅಶ್ಲೀಲ ಸಂದೇಶವನ್ನು ಕಳುಹಿಸುತ್ತಿದ್ದಾರಂತೆ. ಮಸೆಂಜರ್ ಸೇರಿದಂತೆ ಹಲವು ಕಡೆ ಶಾರುಖ್ ಖಾನ್ ಫೋಟೋ ಇರುವಂತಹ ಫೇಕ್ ಐಡಿಗಳಿಂದ ನಿಂದನೆಯ ಮತ್ತು ಕೆಟ್ಟ ಬೈಗುಳ ಇರುವಂತಹ ಮಸೇಜ್ ಗಳನ್ನು ಕಳುಹಿಸುತ್ತಿದ್ದಾರೆ. ಈ ವಿಷಯವನ್ನು ಸ್ವತಃ ವಿವೇಕ್ ಅವರೇ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

    ವಿವೇಕ್ ಅವರಿಗೆ ರಾಶಿ ರಾಶಿ ಅಶ್ಲೀಲ ಮಸೇಜ್ ಗಳು ಬರುತ್ತಿವೆಯಂತೆ. ಇದೇ ರೀತಿ ಮುಂದುವರೆದರೆ ಸೈಬರ್ ಠಾಣೆಗೆ ದೂರು ಕೂಡ ನೀಡುತ್ತಾರಂತೆ. ತಾವು ಯಾವುದೇ ರೀತಿಯಲ್ಲಿ ಯಾರನ್ನೂ ನಿಂದಿಸಿಲ್ಲ. ತಪ್ಪನ್ನು ಖಂಡಿಸಿದ್ದೇನೆ. ಅದಕ್ಕಾಗಿ ಈ ರೀತಿ ಶಿಕ್ಷೆ ಎಂದು ಅವರು ಬರೆದುಕೊಂಡಿದ್ದಾರೆ. ಈ ನಡೆಯನ್ನು ಬಲವಾಗಿ ಖಂಡಿಸುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ವೈ’ ಭದ್ರತೆಯಲ್ಲಿ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನ ವಾಕಿಂಗ್

    ‘ವೈ’ ಭದ್ರತೆಯಲ್ಲಿ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನ ವಾಕಿಂಗ್

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಕೇಂದ್ರ ಸರಕಾರ ‘ವೈ’ ಶ್ರೇಣಿಯ ಭದ್ರತೆಯನ್ನು ನೀಡಿದೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಂದ ನಂತರ ಅವರ ಜೀವಕ್ಕೆ ಅಪಾಯವಿದೆ ಎನ್ನುವ ಕಾರಣಕ್ಕಾಗಿ ಈ ಭದ್ರತೆಯನ್ನು ನೀಡಲಾಗಿದ್ದು, ವಿವೇಕ್ ಎಲ್ಲಿಗೆ ಹೋದರೂ ಹಿಂದೆಯೇ ಭದ್ರತಾ ಸಿಬ್ಬಂದಿ ಹೋಗುತ್ತದೆ. ಇಂಥದ್ದೊಂದು ವಿಡಿಯೋವನ್ನು ಸ್ವತಃ ವಿವೇಕ್ ಅಗ್ನಿಹೋತ್ರಿ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ವಿವೇಕ್ ಅಗ್ನಿಹೋತ್ರಿ ಮನೆಯಿಂದ ಆಚೆ ಕಾಲಿಟ್ಟರೆ, ಅವರು ಎಲ್ಲಿಗೆ ಹೋದರೂ, ಹಿಂದೆಯೇ ಭದ್ರತಾ ಸಿಬ್ಬಂದಿ ಹೋಗಲೇಬೇಕು. ಹಾಗಾಗಿ ವಿವೇಕ್ ವಾಕಿಂಗ್ ಮಾಡುವಾಗಲೂ ಅವರು ಜೊತೆಯಲ್ಲೇ ಇದ್ದಾರೆ. ಆ ವಿಡಿಯೋವನ್ನು ವಿವೇಕ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ಹಲವರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಇವರಿಗೆ ‘ವೈ’ ಭದ್ರತೆ ಕೊಡುವುದಕ್ಕೆ ಅಂತಹ ಘನಂದಾರಿ ಕೆಲಸವನ್ನು ಏನು ಮಾಡಿದ್ದಾರೆ ಎಂದು ಕೇಳಿದ್ದಾರೆ.

    ಇನ್ನೂ ಕೆಲವರು ನಮ್ಮ ತೆರಿಗೆ ಹಣ ಎಲ್ಲಿ ಖಾಲಿ ಆಗುತ್ತಿದೆ ಅಂತ ಕಣ್ತುಂಬಿಕೊಳ್ಳಿ. ಜನರ ತೆರಿಗೆ ಹಣದಲ್ಲಿ ಇಂಥವರು ಭದ್ರತೆ ಇಟ್ಟುಕೊಂಡು ಶೋಕಿ ಮಾಡುತ್ತಾರೆ ಎಂದು ಕಾಲೆಳೆದಿದ್ದಾರೆ. ಈ ಕುರಿತು ವಿವೇಕ್ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದರೂ, ಭದ್ರತೆಯೊಂದಿಗೆ ವಾಕ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ಅನೇಕ ರೀತಿಯಲ್ಲಿ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ‘ಪುಷ್ಪಾ 2’ ಟೀಮ್ ಸೇರಿಕೊಂಡ ನಟಿ ಸಾಯಿ ಪಲ್ಲವಿ: ರಶ್ಮಿಕಾ ಮಂದಣ್ಣ ಪಾತ್ರವೇನು?

    kashmir

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ರಿಲೀಸ್ ನಂತರ ವಿವೇಕ್ ಅಗ್ನಿಹೋತ್ರಿ ಕುರಿತಾಗಿ ಅನೇಕರು ಪರ ಮತ್ತು ವಿರೋಧದ ಮಾತುಗಳನ್ನು ಆಡಿದ್ದರು. ಇನ್ನೂ ಈ ಸಿನಿಮಾ ಬಗ್ಗೆ ಚರ್ಚೆ ಆಗುತ್ತಲೇ . ಕೆಲವರು ಸೋಷಿಯಲ್ ಮೀಡಿಯಾ ಮೂಲಕ ವಿವೇಕ್ ಅವರಿಗೆ ಬೆದರಿಕೆಯನ್ನೂ ಹಾಕಿದ್ದರು. ಈ ಎಲ್ಲವನ್ನೂ ಪರಿಗಣಿಸಿ ಕೇಂದ್ರ ಸರಕಾರ ಅವರಿಗೆ ವೈ ಶ್ರೇಣಿಯ ಭದ್ರತೆಯನ್ನು ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕಸ ಎಂದ ನಿರ್ದೇಶಕನಿಗೆ ವಿವೇಕ್ ಅಗ್ನಿಹೋತ್ರಿ ಸೌಮ್ಯ ಉತ್ತರ

    ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕಸ ಎಂದ ನಿರ್ದೇಶಕನಿಗೆ ವಿವೇಕ್ ಅಗ್ನಿಹೋತ್ರಿ ಸೌಮ್ಯ ಉತ್ತರ

    ಬಾಲಿವುಡ್ ನ ಹೆಸರಾಂತ ಕಲಾತ್ಮಕ ಸಿನಿಮಾಗಳ ನಿರ್ದೇಶಕ ಸಯಿದ್ ಅಖ್ತರ್ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಬಗ್ಗೆ ಕಟುವಾಗಿ ಟೀಕೆ ಮಾಡಿದ್ದರು. ಈ ಸಿನಿಮಾವನ್ನು ಅವರು ಕಸಕ್ಕೆ ಹೋಲಿಸಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ನಿನ್ನೆಯಿಂದ ಇದು ಚರ್ಚೆ ಆಗುತ್ತಿದ್ದರೂ, ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಟ್ವಿಟ್ಟರ್ ಮೂಲಕ ಉತ್ತರಿಸಿರುವ ವಿವೇಕ್, ‘ಸಯಿದ್ ಅಖ್ತರ್ ಸರ್, ನಮಸ್ಕಾರ್. ದೆಹಲಿ ಫೈಲ್ಸ್ ಮುಗಿದ ನಂತರ ಮತ್ತೆ ಭೇಟಿ ಆಗೋಣ’ ಎಂದಷ್ಟೇ ಹೇಳಿ ಕೈ ತೊಳೆದುಕೊಂಡಿದ್ದಾರೆ.

    ಬಾಲಿವುಡ್ ಸಿನಿಮಾ ರಂಗ ಕಂಡ ಪ್ರತಿಭಾವಂತ ನಿರ್ದೇಶಕ ಸಯಿದ್ ಅಖ್ತರ್. ಸಾಕಷ್ಟು ಕಲಾತ್ಮಕ ಸಿನಿಮಾಗಳನ್ನು ಕೊಟ್ಟಿರುವ ಹೆಗ್ಗಳಿಕೆ ಇವರದ್ದು. ಅಲ್ಲದೇ, ಟೆಲಿವಿಷನ್ ಕ್ಷೇತ್ರದಲ್ಲೂ ಸಾಕಷ್ಟು ಕೆಲಸ ಮಾಡಿದ್ದಾರೆ. ಹಿರಿಯ ನಿರ್ದೇಶಕರು ಕೂಡ. ಹಾಗಾಗಿ ವಿವೇಕ್ ಅಗ್ನಿಹೋತ್ರಿ ಸೌಮ್ಯವಾಗಿಯೇ ಉತ್ತರವನ್ನು ಕೊಟ್ಟಿದ್ದಾರೆ. ಸದ್ಯ ‘ದಿ ದೆಹಲಿ ಫೈಲ್ಸ್’ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾ ಮುಗಿದ ನಂತರ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ 150 ಕೋಟಿಗೂ ಅಧಿಕ ಗಳಿಕೆ ಮಾಡಿದ ‘ಅವತಾರ್ 2’ ಸಿನಿಮಾ

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಮರೆತು, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತೊಂದು ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಈಗಾಗಲೇ ಹೊಸ ಸಿನಿಮಾದ ಕೆಲಸವನ್ನೂ ಅವರು ಶುರು ಮಾಡಿದ್ದಾರೆ. ಆದರೆ, ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗೆಗಿನ ಕೆಲವರ ಅಸಮಾಧಾನ ಮಾತ್ರ ಇನ್ನೂ ನಿಂತಿಲ್ಲ. ಗೋವಾದಲ್ಲಿ ನಡೆದ ಚಿತ್ರೋತ್ಸವದಲ್ಲಿ ಜ್ಯೂರಿಯಾಗಿದ್ದ ನಡಾವ್ ಕಟು ಟೀಕೆ ಮಾಡಿದ್ದರು. ಅದು ಸಾಕಷ್ಟು ಚರ್ಚೆಯನ್ನೂ ಹುಟ್ಟುಹಾಕಿತ್ತು.

    ನಿರ್ದೇಶಕ ಸಯಿದ್ ಅಖ್ತರ್ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಒಂದು ಕಸ ಎಂದು ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ‘ಕಾಶ್ಮೀರದಲ್ಲಿ ಕಾಶ್ಮೀರ ಪಂಡಿತರ ಮೇಲೆ ಹಲ್ಲೆ ಆಗಿದ್ದು, ಮಾರಣಹೋಮ ನಡೆದಿದ್ದು ಎಲ್ಲವೂ ನಿಜ. ಅದನ್ನು ನಾನು ಸುಳ್ಳು ಅಂತ ಹೇಳಲಾರೆ. ಪಂಡಿತರ ರೀತಿಯಲ್ಲೇ ಮುಸ್ಲಿಂ ಜನರದ್ದು ಹತ್ಯೆಯಾಗಿದೆ. ಅವರೂ ಕಿರುಕುಳವನ್ನೂ ಅನುಭವಿಸಿದ್ದಾರೆ. ಆದರೆ, ಈ ಸಿನಿಮಾದಲ್ಲಿ ಅದನ್ನು ತೋರಿಸಿಲ್ಲ. ಸತ್ಯವನ್ನು ಮುಚ್ಚಿಟ್ಟು ತಮಗೆ ತೋಚಿದಂತೆ ಸಿನಿಮಾ ಮಾಡಿದ್ದಾರೆ. ಹಾಗಾಗಿ ಅದು ಕಸ ಎಂದು ನನಗೆ ಅನಿಸಿದೆ’ ಎಂದಿದ್ದರು.

    Live Tv
    [brid partner=56869869 player=32851 video=960834 autoplay=true]

  • ನನ್ನ ಪಾಲಿಗೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕಸ: ನಿರ್ದೇಶಕ ಸಯಿದ್ ಅಖ್ತರ್

    ನನ್ನ ಪಾಲಿಗೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕಸ: ನಿರ್ದೇಶಕ ಸಯಿದ್ ಅಖ್ತರ್

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಮರೆತು, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತೊಂದು ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಈಗಾಗಲೇ ಹೊಸ ಸಿನಿಮಾದ ಕೆಲಸವನ್ನೂ ಅವರು ಶುರು ಮಾಡಿದ್ದಾರೆ. ಆದರೆ, ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗೆಗಿನ ಕೆಲವರ ಅಸಮಾಧಾನ ಮಾತ್ರ ಇನ್ನೂ ನಿಂತಿಲ್ಲ. ಗೋವಾದಲ್ಲಿ ನಡೆದ ಚಿತ್ರೋತ್ಸವದಲ್ಲಿ ಜ್ಯೂರಿಯಾಗಿದ್ದ ನಡಾವ್ ಕಟು ಟೀಕೆ ಮಾಡಿದ್ದರು. ಅದು ಸಾಕಷ್ಟು ಚರ್ಚೆಯನ್ನೂ ಹುಟ್ಟುಹಾಕಿತ್ತು. ಇದೀಗ ಬಾಲಿವುಡ್ ನಿರ್ದೇಶಕರೊಬ್ಬರು ಈ ಸಿನಿಮಾದ ಬಗ್ಗೆ ಮತ್ತೊಂದು ಟೀಕೆ ಮಾಡಿದ್ದಾರೆ.

    ಬಾಲಿವುಡ್ ನಲ್ಲಿ ಅನೇಕ ಕಲಾತ್ಮಕ ಸಿನಿಮಾಗಳನ್ನು ಮಾಡಿರುವ, ಮತ್ತು ಪ್ಯಾರಲಲ್ ಸಿನಿಮಾಗಳ ಮೂಲಕವೇ ಗುರುತಿಸಿಕೊಂಡಿರುವ ನಿರ್ದೇಶಕ ಸಯಿದ್ ಅಖ್ತರ್ ಈ ಸಿನಿಮಾದ ಕುರಿತು ಕಾಮೆಂಟ್ ಮಾಡಿದ್ದು, ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಒಂದು ಕಸ ಎಂದು ಹೇಳಿಕೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ಈ ಸಿನಿಮಾ ನನ್ನ ಪಾಲಿಗೆ ಕಸದ ರೀತಿ ಎಂದು ಹೇಳಿದ್ದಾರೆ. ಈ ಮಾತು ಕೂಡ ವಿವಾದಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಪುನೀತ್ ಬಯೋಗ್ರಫಿ ‘ನೀನೇ ರಾಜಕುಮಾರ’ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ ಕುಮಾರ

    ಕಾಶ್ಮೀರದಲ್ಲಿ ಕಾಶ್ಮೀರ ಪಂಡಿತರ ಮೇಲೆ ಹಲ್ಲೆ ಆಗಿದ್ದು, ಮಾರಣಹೋಮ ನಡೆದಿದ್ದು ಎಲ್ಲವೂ ನಿಜ. ಅದನ್ನು ನಾನು ಸುಳ್ಳು ಅಂತ ಹೇಳಲಾರೆ. ಪಂಡಿತರ ರೀತಿಯಲ್ಲೇ ಮುಸ್ಲಿಂ ಜನರದ್ದು ಹತ್ಯೆಯಾಗಿದೆ. ಅವರೂ ಕಿರುಕುಳವನ್ನೂ ಅನುಭವಿಸಿದ್ದಾರೆ. ಆದರೆ, ಈ ಸಿನಿಮಾದಲ್ಲಿ ಅದನ್ನು ತೋರಿಸಿಲ್ಲ. ಸತ್ಯವನ್ನು ಮುಚ್ಚಿಟ್ಟು ತಮಗೆ ತೋಚಿದಂತೆ ಸಿನಿಮಾ ಮಾಡಿದ್ದಾರೆ. ಹಾಗಾಗಿ ಅದು ಕಸ ಎಂದು ನನಗೆ ಅನಿಸಿದೆ ಎಂದು ಅಖ್ತರ್ ಹೇಳಿದ್ದಾರೆ.

    ಅಖ್ತರ್ ಹೇಳಿಕೆ ಕುರಿತಾಗಿ ಈವರೆಗೂ ವಿವೇಕ್ ಅಗ್ನಿಹೋತ್ರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಸಿನಿಮಾ ಪ್ರೇಮಿಗಳು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅಖ್ತರ್ ಅಭಿಮಾನಿಗಳು ಕೂಡ ಕಾಮೆಂಟ್ ಮಾಡುತ್ತಿದ್ದು, ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಎಲ್ಲ ಸತ್ಯವನ್ನೂ ತೋರಿಸಬೇಕಿತ್ತು. ಆ ಕೆಲಸವನ್ನು ಅವರು ಮಾಡಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ನಿರ್ದೇಶಕರನ್ನು ಕಿತ್ತಾಡುವಂತೆ ಮಾಡಿದ ‘ಕಾಂತಾರ’, ‘ಕೆಜಿಎಫ್’

    ಬಾಲಿವುಡ್ ನಿರ್ದೇಶಕರನ್ನು ಕಿತ್ತಾಡುವಂತೆ ಮಾಡಿದ ‘ಕಾಂತಾರ’, ‘ಕೆಜಿಎಫ್’

    ನ್ನಡದ ಸೂಪರ್ ಹಿಟ್ ಎರಡು ಚಿತ್ರಗಳು ಬಾಲಿವುಡ್ ನ ನಿರ್ದೇಶಕರನ್ನು ಕಿತ್ತಾಡುವಂತೆ ಮಾಡಿವೆ. ಕೆಜಿಎಫ್ 2 ಮತ್ತು ಕಾಂತಾರ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಹೊತ್ತಿನಲ್ಲಿ ಬಾಲಿವುಡ್ ಖ್ಯಾತ ನಿರ್ದೇಶಕರಾದ ಅನುರಾಗ್ ಕಶ್ಯಪ್ ಮತ್ತು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಬಿಡುವಿಲ್ಲದಂತೆ ಸೋಷಿಯಲ್ ಮೀಡಿಯಾ ಮೂಲಕ ಒಬ್ಬರಿಗೊಬ್ಬರು ಕೆಸರೆರೆಚಿಕೊಳ್ಳುತ್ತಿದ್ದಾರೆ. ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ.

    ಸಂವಾದ ಕಾರ್ಯಕ್ರಮವೊಂದರಲ್ಲಿ ಅನುರಾಗ್ ಕಶ್ಯಪ್ ದಕ್ಷಿಣದ ಸಿನಿಮಾಗಳ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. ಕೆಜಿಎಫ್ 2 ಮತ್ತು ಕಾಂತಾರ ರೀತಿಯ ಚಿತ್ರಗಳು ಸಿನಿಮಾ ರಂಗವನ್ನು ಮುಗಿಸಲಿವೆ ಎನ್ನುವಂತೆ ಹೇಳಿಕೆ ನೀಡಿದ್ದರು. ಬಾಲಿವುಡ್ ಸದ್ಯ ಹಿಂದುಳಿಯುವುದಕ್ಕೆ ಕಾರಣ ಇಂಥದ್ದೇ ಚಿತ್ರಗಳು ಎಂದು ಹೇಳಿದ್ದರು. ಈ ಮಾತಿಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಅದರಂತೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕರು ಕೂಡ ಅನುರಾಗ್ ಮಾತಿಗೆ ಗರಂ ಆಗಿದ್ದರು. ಇದನ್ನೂ ಓದಿ: ದೀಪಿಕಾ ದಾಸ್‌ಗೆ ಚಿನ್ನದ ಚೈನ್, ಮನಸ್ಸು ಆಫರ್ ಮಾಡಿದ ಗುರೂಜಿ

    ಅನುರಾಗ್ ಮಾತನ್ನು ನಾನು ಒಪ್ಪುವುದಿಲ್ಲ. ಅವರು ಈ ರೀತಿಯಲ್ಲಿ ಮಾತನಾಡಬಾರದಿತ್ತು. ಮಾತನಾಡುವವರು ಸಿನಿಮಾ ಮಾಡಿ ತೋರಿಸಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದರು. ಇದಕ್ಕೆ ತಿರುಗೇಟು ಕೊಟ್ಟಿದ್ದ ಅನುರಾಗ್, ದಿ ಕಾಶ್ಮೀರ್ ಫೈಲ್ಸ್ ನಿಮ್ಮಂತೆಯೇ ಸುಳ್ಳು ಹೇಳುತ್ತಿದೆ. ಅಲ್ಲಿರುವುದು ಎಲ್ಲವೂ ಸುಳ್ಳು ಎಂದು ಹೇಳುವ ಮೂಲಕ ಉರಿವ ಬೆಂಕಿಗೆ ತುಪ್ಪ ಸುರಿದಿದ್ದರು. ಈ ಬರಹ ವಿವೇಕ್ ಅಗ್ನಿಹೋತ್ರಿಯನ್ನು ಕೆಣುಕುವಂತೆ ಮಾಡಿತ್ತು.

    ದಿ ಕಾಶ್ಮೀರ್ ಫೈಲ್ಸ್ ಬಗ್ಗೆ ಕಾಮೆಂಟ್ ಮಾಡಿದ್ದ ಅನುರಾಗ್ ಕಶ್ಯಪ್ ಗೆ ಮತ್ತೆ ತಿರುಗೇಟು ನೀಡಿರುವ ವಿವೇಕ್, ‘ನಾನು ಮಾಡಿದ ಸಿನಿಮಾದಲ್ಲಿ ಯಾವುದು ತಪ್ಪು, ಯಾವುದನ್ನು ಸುಳ್ಳು ಹೇಳಿದ್ದೇನೆ ಅಂತ ಸಾಬೀತು ಪಡಿಸಿ. ನಾನು ಸುಳ್ಳು ಹೇಳಿದ್ದೇನೆ, ನನ್ನ ಸಂಶೋಧನೆ ತಪ್ಪು ಅಂತ ಸಾಬೀತು ಮಾಡಿದರೆ, ನಾನು ಈ ರೀತಿಯ ಚಿತ್ರಗಳನ್ನೇ ಮಾಡುವುದಿಲ್ಲ’ ಎಂದು ಮತ್ತೆ ಬರೆದಿದ್ದಾರೆ.  ಅನುರಾಗ್ ಹೇಳಿದ ಮಾತು, ಇದೀಗ ವೈಯಕ್ತಿಕವಾಗಿ ತಿರುಗಿಕೊಂಡು ದಿನಕ್ಕೊಂದು ತಿರುವುದು ಪಡೆದುಕೊಳ್ಳುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ‘ಕಾಂತಾರ’ ಬಗ್ಗೆ ರಿಷಬ್ ಮೌನ: ಬಾಲಿವುಡ್ ನಿರ್ದೇಶಕರ ಕಿತ್ತಾಟ

    ‘ಕಾಂತಾರ’ ಬಗ್ಗೆ ರಿಷಬ್ ಮೌನ: ಬಾಲಿವುಡ್ ನಿರ್ದೇಶಕರ ಕಿತ್ತಾಟ

    ಕಾಂತಾರ ಸಿನಿಮಾ ಬಿಡುಗಡೆಯಾದ ದಿನದಿಂದ ಈವರೆಗೂ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿ ಮಾಡುತ್ತಲೇ ಇದೆ. ಅದರಲ್ಲಿ ವಿವಾದಗಳು ಕೂಡ ಸೇರಿಕೊಂಡಿವೆ. ಮಳೆ ನಿಂತರೂ ಮಳೆ ಹನಿ ನಿಲ್ಲುವುದಿಲ್ಲ ಎನ್ನುವಂತೆ ಕಾಂತಾರ ಬಗ್ಗೆ ರಿಷಬ್ ಮೌನಕ್ಕೆ ಜಾರಿದ್ದಾರೆ. ಆದರೆ, ಬಾಲಿವುಡ್ ನ ಇಬ್ಬರು ನಿರ್ದೇಶಕರು ಮಾತ್ರ ಒಬ್ಬರನ್ನೊಬ್ಬರು ಕಾಲೆಳೆದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಕಿತ್ತಾಟ ಶುರು ಮಾಡಿದ್ದಾರೆ.

    ಕನ್ನಡ ಚಿತ್ರೋದ್ಯಮದಲ್ಲಿ ಕಾಂತಾರ 2 ಸಿನಿಮಾ ಬಗ್ಗೆ ಮಾತುಗಳು ಶುರುವಾಗಿದ್ದರೆ, ಬಾಲಿವುಡ್ ನಲ್ಲಿ ಕಾಂತಾರ ಸಿನಿಮಾದ ಬಗ್ಗೆಯೂ ಇನ್ನೂ ಚರ್ಚೆ ಶುರುವಾಗಿದೆ. ಸದ್ಯಕ್ಕೆ ಕಾಂತಾರ 2 ಸಿನಿಮಾ ಮಾಡುವುದಿಲ್ಲ ಎಂದು ರಿಷಬ್ ಶೆಟ್ಟಿ ಹೇಳುವ ಮೂಲಕ ಮೌನಕ್ಕೆ ಜಾರಿದ್ದಾರೆ. ಆದರೆ, ಬಾಲಿವುಡ್ ನಿರ್ದೇಶಕರಾದ ಅನುರಾಗ್ ಕಶ್ಯಪ್ ಮತ್ತು ದಿ ಕಾಶ್ಮೀರ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ‘ಕಾಂತಾರ’ದ ವಿಚಾರವಾಗಿಯೇ ಸಾಮಾಜಿಕ ಜಾಲತಾಣದಲ್ಲಿ ರಾಡಿ ಎಬ್ಬಿಸಿದ್ದಾರೆ. ಇದನ್ನೂ ಓದಿ: ಪರಪುರುಷನನ್ನು ಮನೆಗೆ ಕರೆತರುತ್ತಿದ್ದರು, ಚಿತ್ರಹಿಂಸೆ ನೀಡುತ್ತಿದ್ದರು: ಖ್ಯಾತನಟಿ ಅಭಿನಯ ಅತ್ತಿಗೆ ಕಣ್ಣೀರು

    ಗೆದ್ದ ಚಿತ್ರಗಳ  ಅನುಕರಣೆ ಮಾದರಿಯಾದದ್ದು ಅಲ್ಲ, ಗೆದ್ದ ಚಿತ್ರಗಳ ಫಾರ್ಮುಲಾಗಳ ಹಿಂದೆ ಬಿದ್ದ ಬಾಲಿವುಡ್ ಅವನತಿಯತ್ತ ಸಾಗುತ್ತಿದೆ. ಹಾಗಾಗಿ ಕಾಂತಾರ, ಪುಷ್ಪ, ಕೆಜಿಎಫ್ 2 ರೀತಿಯ ಸಿನಿಮಾಗಳನ್ನು ಅನುಕರಿಸದಂತೆ ಅನುರಾಗ್ ಕಶ್ಯಪ್ ಸಂವಾದವೊಂದರಲ್ಲಿ ಹೇಳಿದ್ದರು. ಅವರ ಮಾತಿನ ಹಿಂದಿನ ಉದ್ದೇಶ ಗೆದ್ದ ಚಿತ್ರಗಳ ಮಾದರಿಯನ್ನು ಅನುಸರಿಸದೇ ಹೊಸ ರೀತಿಯ ಚಿತ್ರಗಳನ್ನು ಮಾಡಬೇಕು ಎನ್ನುವುದಾಗಿತ್ತು. ಆದರೆ, ವಿವೇಕ್ ಅಗ್ನಿಹೋತ್ರಿ ಅದನ್ನು ಅರ್ಥ ಮಾಡಿಕೊಳ್ಳದೇ ಇನ್ನೇನೊ ಕಾಮೆಂಟ್ ಮಾಡಿ ಚರ್ಚೆಗೆ ತಿದಿ ಒತ್ತಿದ್ದಾರೆ.

    ಅನುರಾಗ್ ಕಶ್ಯಪ್ ಅವರ ಮಾತನ್ನು ನಾನು ಒಪ್ಪುವುದಿಲ್ಲ. ಬಾಲಿವುಡ್ ಹಿನ್ನೆಡೆಗೆ ಅದು ಕಾರಣವಲ್ಲ ಎಂದು ಟಾಂಗ್ ನೀಡಿರುವ ವಿವೇಕ್ ಅಗ್ನಿಹೋತ್ರಿ, ಫಾಲೋವರ್ಸ್ ನಿಂದಲೇ ಪಾಠ ಮಾಡಿಸಿಕೊಂಡಿದ್ದಾರೆ. ಅನುರಾಗ್ ಹೇಳಿದ್ದನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಹೆಡ್ ಲೈನ್ ನೋಡಿ ಕನ್ಫ್ಯೂಸ್ ಮಾಡಿಕೊಂಡಿರುವ ವಿವೇಕ್, ಈ ಮೂಲಕ ನೆಟ್ಟಿಗರ ತಮಾಷೆಯ ವಸ್ತುವಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಹೊಸ ಸಿನಿಮಾಗೆ ನೆಗೆಟಿವ್ ಕಾಮೆಂಟ್ ಕಾಟ

    ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಹೊಸ ಸಿನಿಮಾಗೆ ನೆಗೆಟಿವ್ ಕಾಮೆಂಟ್ ಕಾಟ

    ಭಾರತೀಯ ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತೊಂದು ಹೊಸ ಸಿನಿಮಾ ಘೋಷಣೆ ಮಾಡಿದ್ದರು. ಈ ಸಿನಿಮಾದ ಶೂಟಿಂಗ್ ಅನ್ನು ಸದ್ದಿಲ್ಲದೇ ಶುರು ಮಾಡಿದ್ದಾರೆ. ಈ ಚಿತ್ರಕ್ಕೆ ‘ದಿ ವ್ಯಾಕ್ಸಿನ್ ವಾರ್’ ಎಂದು ಹೆಸರಿಟ್ಟಿದ್ದು ಕೋವಿಡ್ ವೇಳೆಯಲ್ಲಿ ಭಾರತದಲ್ಲಿ ಎಲ್ಲರಿಗೂ ವ್ಯಾಕ್ಸಿನ್ ಸಿಗುವಂತೆ ಮಾಡಿದ ಸಾಹಸಗಾಥೆಯೇ ಸಿನಿಮಾವಂತೆ.

    ಈ ಸಿನಿಮಾವನ್ನು 2024ರ ಲೋಕಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ನಿರ್ಮಾಣ ಮಾಡಲಾಗುತ್ತಿದೆ ಎನ್ನುವ ಆರೋಪವನ್ನೂ ಕೆಲವರು ಮಾಡುತ್ತಿದ್ದಾರೆ. ಇದು ಸಿನಿಮಾವಲ್ಲ ಬಿಜೆಪಿಯ ಪ್ರಚಾರದ ತಂತ್ರ ಎಂದೂ ಕೆಲವರು ಕಾಮೆಂಟ್ ಮಾಡಿದ್ದಾರೆ. ಹೀಗಾಗಿ ವಿವೇಕ್ ಅಗ್ನಿಹೋತ್ರಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ನೆಗೆಟಿವ್ ಕಾಮೆಂಟ್ ಗಳನ್ನು ಎದುರಿಸುತ್ತಿದ್ದಾರೆ. ಬರುತ್ತಿರುವ ಸಂದೇಶಗಳನ್ನು ಅವರು ಮೌನವಾಗಿಯೇ ಸ್ವೀಕರಿಸುತ್ತಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಮಾಜಿ ಸಿಎಂ ಮೊಮ್ಮಗನ ಜೊತೆ ಮಾಲ್ಡೀವ್ಸ್‌ಗೆ ಹಾರಿದ ಜಾನ್ವಿ

    ದಿ ಕಾಶ್ಮೀರ ಫೈಲ್ಸ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಗಳಿಕೆ ಮಾಡುವುದರ ಜೊತೆ ಜೊತೆಗೆ ಸಂಚಲವನ್ನೇ ಸೃಷ್ಟಿ ಮಾಡಿತ್ತು. ಸಾಕಷ್ಟು ಪರ ವಿರೋಧ ಚರ್ಚೆಗಳು ಕೂಡ ನಡೆದಿವೆ. ಬಿಜೆಪಿ ಆಡಳಿತ ಇರುವ ನಾನಾ ರಾಜ್ಯಗಳಲ್ಲಿ ಟ್ಯಾಕ್ಸ್ ಫ್ರಿ ಕೂಡ ಘೋಷಣೆ ಮಾಡಲಾಗಿತ್ತು. ಅಲ್ಲದೇ ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿಯ  ಅನೇಕ ಮುಖಂಡರ ಈ ಸಿನಿಮಾವನ್ನು ಬುಕ್ ಮಾಡಿ ಉಚಿತವಾಗಿ ತೋರಿಸಿದ್ದರು. ಈ ಕಾರಣದಿಂದಾಗಿ ವಿವೇಕ್ ಅವರ ಹೊಸ ಸಿನಿಮಾಗೆ ಈ ಪ್ರಮಾಣದಲ್ಲಿ ಕಾಮೆಂಟ್ ಹರಿದು ಬರುತ್ತಿವೆ.

    Live Tv
    [brid partner=56869869 player=32851 video=960834 autoplay=true]

  • ನ್ಯಾಯಾಂಗ ನಿಂದನೆ ಪ್ರಕರಣ: ಕ್ಷಮೆ ಕೇಳಿದ ಕಾಶ್ಮೀರ್ ಫೈಲ್ಸ್ ನಿರ್ದೇಶಕ

    ನ್ಯಾಯಾಂಗ ನಿಂದನೆ ಪ್ರಕರಣ: ಕ್ಷಮೆ ಕೇಳಿದ ಕಾಶ್ಮೀರ್ ಫೈಲ್ಸ್ ನಿರ್ದೇಶಕ

    ನ್ಯಾಯಾಂಗ ನಿಂದನೆ ಆರೋಪಕಕ್ಕೆ ಸಂಬಂಧಿಸಿದಂತೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ದೆಹಲಿ ಹೈಕೋರ್ಟಿಗೆ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಕ್ಷಮೆ ಕುರಿತಂತೆ ತಮ್ಮ ವಕೀಲರ ಮೂಲಕ ಅವರು ಅಫಿಡವಿಟ್ ಸಲ್ಲಿಸಿದ್ದಾರೆ. ಈ ಹಿಂದೆ ವಿವೇಕ್ ಟ್ವೀಟ್ ಒಂದನ್ನು ಮಾಡಿದ್ದರು. ಆ ಟ್ವೀಟ್‍ ನಲ್ಲಿ ನ್ಯಾಯಾಂಗ ನಿಂದನೆ ಮಾಡಿದ್ದರು.  ಈ ಸಂಬಂಧವಾಗಿ ನ್ಯಾಯಾಲಯವು ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿಕೊಂಡಿತ್ತು.

    2018ರಲ್ಲಿ ಭೀಮಾ ಕೋರೆಗಾಂವ್ ಪ್ರಕಣದಲ್ಲಿ ಸಾಮಾಜಿಕ ಕಾರ್ಯಕರ್ತ ಗೌತಮ್ ನವಲಖ ಅವರಿಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ, ನ್ಯಾಯಮೂರ್ತಿಗಳಾದ ಎಸ್.ಮುರುಳೀಧರ್ ಅವರ ಮೇಲೆ ಪಕ್ಷಪಾತದ ಆರೋಪ ಹೊರಿಸುವ ರೀತಿಯಲ್ಲಿ ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದರು. ಆ ಟ್ವೀಟ್ ಅನ್ನು ಸ್ವತಃ ಟ್ವಿಟರ್ ಸಂಸ್ಥೆಯೇ ಡಿಲೀಟ್ ಮಾಡಿತ್ತು. ಇದನ್ನೂ ಓದಿ: ಪ್ರೀ ವೆಡ್ಡಿಂಗ್ ಪಾರ್ಟಿಯಲ್ಲಿ ಮಿಂಚಿದ `ಬಿಂದಾಸ್’ ನಟಿ ಹನ್ಸಿಕಾ ಮೋಟ್ವಾನಿ

    kashmir

    ವಕೀಲರ ಮೂಲಕ ಈ ಹಿಂದಿನ ಟ್ವೀಟ್ ಅನ್ನು ತಗೆದುಹಾಕಿದ್ದೇವೆ ಎಂದು ವಿವೇಕ್ ಅಗ್ನಿಹೋತ್ರಿ ಹೇಳುವ ಪ್ರಯತ್ನ ಮಾಡಿದ್ದರು. ಆದರೆ, ಟ್ವಿಟರ್ ಸಂಸ್ಥೆಯೇ ಅದನ್ನು ತಗೆದುಹಾಕಿದ್ದು ಎಂದು ವಾದಿಸಲಾಗಿತ್ತು. ಅಲ್ಲದೇ, ಖುದ್ದಾಗಿ ವಿವೇಕ್ ಅಗ್ನಿಹೋತ್ರಿ ನ್ಯಾಯಾಲಯದ ಮುಂದೆ ಹಾಜರು ಕೂಡ ಆಗಿರಲಿಲ್ಲ. ಇದೆಲ್ಲವನ್ನೂ ಪರಿಗಣಿಸಿರುವ ನ್ಯಾಯಾಲಯವು 2023 ಮಾರ್ಚ್ 16ರಂದು ಕೋರ್ಟಿಗೆ ಖುದ್ದಾಗಿ ಹಾಜರಿರಬೇಕು ಎಂದು ಆದೇಶಿಸಿದೆ.

    Live Tv
    [brid partner=56869869 player=32851 video=960834 autoplay=true]