ಮೊದಲಿನಿಂದಲೂ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡುತ್ತಾ ಬಂದಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್, ಮೊನ್ನೆಯಷ್ಟೇ ಬಾಲಿವುಡ್ ನಟ ನಟಿಯರ ಮೇಲೆ ವಾಗ್ದಾಳಿ ನಡೆಸಿದ್ದರು. ಈ ಸಿನಿಮಾದ ಬಗ್ಗೆ ಬಾಲಿವುಡ್ ಏಕೆ ಮೌನ ತಾಳಿದೆ ಎಂದು ಪ್ರಶ್ನಿಸಿದರು. ಈಗ ಈ ಸಿನಿಮಾದ ಕುರಿತು ಮತ್ತೊಂದು ವಿಡಿಯೋ ಸಂದೇಶ ರವಾನಿಸಿದ್ದಾರೆ. ಇಲ್ಲಿಯೂ ಬಾಲಿವುಡ್ ಬಗ್ಗೆಯೇ ಅವರು ಮಾತನಾಡಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ ಮತ್ತೆ ಮೆಚ್ಚುಗೆಯ ಮಾತುಗಳನ್ನು ಆಡಿದ ಕಂಗನಾ, ಈ ಸಿನಿಮಾದ ಮೂಲಕ ಬಾಲಿವುಡ್ ಮಾಡಿದ ಪಾಪ ಕಳೆದಂತಾಗಿದೆ. ಇಂತಹ ಸಿನಿಮಾ ಮಾಡಿ ವಿವೇಕ್ ಅಗ್ನಿಹೋತ್ರಿ ಅವರು ಬಾಲಿವುಡ್ ಮಾಡಿದ್ದ ಪಾಪವನ್ನು ತೊಳೆದಿದ್ದಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ ಕಂಗನಾ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್
ಈ ಸಿನಿಮಾವನ್ನು ಪ್ರತಿಯೊಬ್ಬರು ಬೆಂಬಲಿಸಬೇಕು. ಇಂತಹ ಚಿತ್ರಗಳು ಹೆಚ್ಚೆಚ್ಚು ಬರಬೇಕು. ಹಾಗಾಗಿ ಈ ಸಿನಿಮಾವನ್ನು ನಾನು ನಿರಂತರವಾಗಿ ಬೆಂಬಲಿಸುತ್ತಿದ್ದೇನೆ ಎಂದು ಕಂಗನಾ ಹೇಳಿದ್ದಾರೆ. ಅಲ್ಲದೇ, ಬಾಲಿವುಡ್ ನ ಎಲ್ಲರೂ ಈ ಸಿನಿಮಾವನ್ನು ಬೆಂಬಲಿಸಬೇಕೆಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ನಾನಾ ರಾಜ್ಯದ ಮುಖ್ಯಮಂತ್ರಿಗಳು ಈ ಸಿನಿಮಾ ಬೆನ್ನಿಗೆ ನಿಂತಿದ್ದಾರೆ. ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದ್ದಾರೆ. ವಿಶೇಷ ಪ್ರದರ್ಶನಗಳನ್ನೂ ಏರ್ಪಡಿಸುತ್ತಿದ್ದಾರೆ. ಅಲ್ಲದೇ, ಅನೇಕ ನಟ ನಟಿಯರು ಕೂಡ ಸ್ವಯಂ ಪ್ರೇರಿತರಾಗಿ ಸಿನಿಮಾ ಬಗ್ಗೆ ಪ್ರಚಾರವನ್ನೂ ಮಾಡುತ್ತಿದ್ದಾರೆ.
ಬಹು ಚರ್ಚಿತ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ತಂಡ ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತ್ತು. ಪ್ರಧಾನಿಯನ್ನು ಭೇಟಿ ಮಾಡಿದ ಬಗ್ಗೆ ನಿರ್ದೇಶಕ ವಿಕೇಕ್ ಅಗ್ನಿಹೋತ್ರಿ ಖಚಿತ ಪಡಿಸಿ, ಪ್ರಧಾನಿಗಳು ಸಿನಿಮಾ ಬಗ್ಗೆ ಉತ್ತಮ ಮಾತುಗಳನ್ನು ಆಡಿದ್ದಾರೆ ಎಂದು ಹೇಳಿದ್ದರು. ಇದೀಗ ಸ್ವತಃ ಪ್ರಧಾನಿಯವರೇ ಸಿನಿಮಾದ ಕುರಿತು ಮಾತನಾಡಿದ್ದಾರೆ.
ಇಂದು ನಡೆದ ಸಂಸದೀಯ ಮಂಡಳಿಯ ಸಭೆಯಲ್ಲಿ ಸಿನಿಮಾ ಕುರಿತು ನರೇಂದ್ರ ಮೋದಿ ಮಾತನಾಡಿದ್ದಾರೆ. ಎಲ್ಲ ಸಂಸದರೂ ಈ ಸಿನಿಮಾವನ್ನು ನೋಡಬೇಕು ಎಂದು ಹೇಳಿದ್ದಾರೆ. ಅಲ್ಲದೇ, ಇದೇ ಸಂದರ್ಭದಲ್ಲಿ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತೂ ಹೇಳಿದ್ದಾರೆ. ಇಂತಹ ಸಿನಿಮಾಗಳು ಹೆಚ್ಚೆಚ್ಚು ನಿರ್ಮಾಣಗೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್
ಸದ್ಯ ಕಾಶ್ಮೀರ ಅಲ್ಲಿನ ಹವಾಮಾನಕ್ಕೆ ಹೊಂದಿಕೊಂಡಂತೆ ತಣ್ಣಗಾಗಿದೆ. ರಾಜಕೀಯ ಮೇಲಾಟಗಳು ಗುದುಮುರುಗಿ ಕಟ್ಟಿಕೊಂಡು ಮೂಲೆ ಗುಂಪಾಗುತ್ತಿವೆ. ಇಂತಹ ಹೊತ್ತಿನಲ್ಲಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ 1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧದ ಕುರಿತು ಸಿನಿಮಾ ಮಾಡಿದ್ದಾರೆ. ಅದನ್ನು ‘ದಿ ಕಾಶ್ಮೀರ್ ಫೈಲ್ಸ್’ ಹೆಸರಿನಲ್ಲಿ ಬಿಡುಗಡೆ ಮಾಡಿದ್ದಾರೆ. ಈಗ ಸಿನಿಮಾ ಬಗ್ಗೆ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಜತೆಗೆ ವಿರೋಧ ಕೂಡ ವ್ಯಕ್ತವಾಗಿದೆ.
ಉತ್ತರ ಕನ್ನಡ ಜಿಲ್ಲೆ ಭಟ್ಕಳ್ ನಗರದಲ್ಲಿ ಭಾನುವಾರ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಪ್ರದರ್ಶನ ಮಾಡಲಿಲ್ಲ ಎನ್ನುವ ಕಾರಣಕ್ಕಾಗಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ನಗರದ ಪುಷ್ಪಾಂಜಲಿ ಥಿಯೇಟರ್ ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಬದಲು ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್’ ಚಿತ್ರ ಪ್ರದರ್ಶನಗೊಳ್ಳುತ್ತಿತ್ತು. ಅದನ್ನು ತಗೆದು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಪ್ರದರ್ಶಿಸಬೇಕೆಂದು ಪ್ರತಿಭಟನೆ ನಡೆಸಿದ್ದಾರೆ.
ಮಧ್ಯಾಹ್ನ 2.30ಕ್ಕೆ ನಡೆಯಬೇಕಿದ್ದ ರಾಧೆ ಶ್ಯಾಮ್ ಸಿನಿಮಾ ಸ್ಥಗಿತಗೊಳಿಸಿ, ಆ ವೇಳೆಯಲ್ಲಿ ದಿ ಕಾಶ್ಮೀರ್ ಫೈಲ್ಸ್ ಪ್ರದರ್ಶಿಸಬೇಕೆಂದು ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದವು. ಕೆಲ ಗಂಟೆಗಳ ಕಾಲ ಥಿಯೇಟರ್ ಮೇಲ್ವಿಚಾರಕರಿಗೂ ಮತ್ತು ಹಿಂದೂಪರ ಸಂಘಟನೆಯ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಂತರ ರಾತ್ರಿ 8.45ಕ್ಕೆ ಚಿತ್ರವನ್ನು ಪ್ರದರ್ಶಿಸಲಾಗುವುದು ಎಂದು ಮೇಲ್ವಿಚಾರಕರು ಘೋಷಿಸಿದರು. ಆನಂತರವೇ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.
ದೇಶಾದ್ಯಂತ ಈ ಸಿನಿಮಾದ ಬಗ್ಗೆ ಚರ್ಚೆ ಆಗುತ್ತಿದೆ. ಹಲವು ಕಡೆ ವಿಶೇಷ ಪ್ರದರ್ಶನಗಳನ್ನೂ ಏರ್ಪಡಿಸಲಾಗಿದೆ. ಅಲ್ಲದೇ, ಭಾನುವಾರದಿಂದ ಬಿಡುಗಡೆಯಾದ ಥಿಯೇಟರ್ ಸಂಖ್ಯೆಯೂ ಹೆಚ್ಚಾಗಿದೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದ “ದಿ ಕಾಶ್ಮೀರ್ ಫೈಲ್ಸ್” ಸಿನಿಮಾ ಭಾರೀ ಚರ್ಚೆಗೆ ಕಾರಣವಾಗಿದೆ. ರಾಜಕೀಯ ಕೆಸರಾಟಕ್ಕೂ ಕಾರಣವಾಗಿದೆ. ಕಾಶ್ಮೀರದಲ್ಲಿ ನಿಜವಾಗಿಯೂ ನಡೆದದ್ದೇ ಬೇರೆ, ಸಿನಿಮಾದಲ್ಲಿ ತೋರಿಸಿದ್ದೆ ಬೇರೆ ಎನ್ನುವ ಮಾತಿನ ಮಧ್ಯ, ನಡೆದ ಘಟನೆಯನ್ನೇ ನಿರ್ದೇಶಕರು ಸಿನಿಮಾದಲ್ಲಿ ತೋರಿಸಿದ್ದಾರೆ ಎಂದು ಹಲವು ಕ್ಷೇತ್ರಗಳ ಗಣ್ಯರು ಸಿನಿಮಾ ತಂಡದ ಬೆನ್ನಿಗೆ ನಿಂತಿದ್ದಾರೆ. ಈ ಮಧ್ಯೆ ನಟಿ ಯಾಮಿ ಗೌತಮ್ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.
ನೆನ್ನೆಯಷ್ಟೇ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್, ಬಾಲಿವುಡ್ ಕಲಾವಿದರಿಗೆ ಮಾತಿನ ಚಾಟಿ ಬೀಸಿದ್ದರು. ಬಾಲಿವುಡ್ ಏಕೆ ಮೌನವಾಗಿದೆ ಎಂದು ಪ್ರಶ್ನೆ ಮಾಡಿದ್ದರು. ಈ ಮಾತಿನ ಬೆನ್ನಲ್ಲೆ ಹೆಸರಾಂತ ನಟಿ ಯಾಮಿ ಗೌತಮ್ ಟ್ವೀಟ್ ಮಾಡಿದ್ದಾರೆ. ನಾನು ಕಾಶ್ಮೀರಿ ಪಂಡಿತನನ್ನು ಮದುವೆಯಾಗಿದ್ದೇನೆ. ಪಂಡಿತರ ನೋವನ್ನು ಹತ್ತಿರದಿಂದ ಕಂಡಿದ್ದೇನೆ. ಸತ್ಯ ಹೇಳುವುದಕ್ಕೆ 32 ವರ್ಷ ಬೇಕಾಯಿತು. ಆ ಸಿನಿಮಾದಲ್ಲಿ ಇರುವುದೆಲ್ಲ ಸತ್ಯ. ಆ ನರಮೇಧದ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇರಲಿಲ್ಲ. ಈ ಸಿನಿಮಾದ ಮೂಲಕ ನಿರ್ದೇಶಕರು ಕೊಟ್ಟಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.
Being married to a Kashmiri Pandit, I know first hand of the atrocities that this peace-loving community has gone through. But majority of the nation is still unaware. It took us 32 years and a film to get to know the truth. Please watch and support #TheKashmirFiles . ???? https://t.co/rjHmKVmiXZ
ಈ ಸಿನಿಮಾವನ್ನು ಎಲ್ಲರೂ ನೋಡಿ ಮತ್ತು ಸಪೋರ್ಟ್ ಮಾಡಿ ಎಂದು ಅವರು ನೋಡುಗರನ್ನು ಕೇಳಿಕೊಂಡಿದ್ದಾರೆ. ಹಿಂದಿಯಲ್ಲಿ ಮೂಡಿ ಬಂದಿರುವ ಈ ಸಿನಿಮಾ, ದೇಶದ ನಾನಾ ರಾಜ್ಯಗಳಲ್ಲಿ ಬಿಡುಗಡೆ ಆಗಿದೆ. ಕರ್ನಾಟಕ ರಾಜ್ಯವು ಈ ಸಿನಿಮಾಗಾಗಿ ತೆರಿಗೆ ವಿನಾಯತಿ ನೀಡಿದ್ದಾರೆ. ಅಲ್ಲದೇ ಸ್ಪೀಕರ್ ಕಾಗೇರಿ ಮಂತ್ರಿಗಳಿಗೆ ಮತ್ತು ಶಾಸಕರಿಗಾಗಿಯೇ ವಿಶೇಷ ಪ್ರದರ್ಶನವನ್ನು ಏರ್ಪಡಿಸಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾಕ್ಕೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿರುವುದನ್ನು ಕನ್ನಡ ಸಂಘಟನೆಗಳು ವಿರೋಧಿಸುತ್ತವೆ. ಸಮಾಜದ ಸ್ವಾಸ್ಥ್ಯ ಕದಡುವ ಕಿಡಿಗೇಡಿ ಸಿನಿಮಾಗಳಿಗೆ ತೆರಿಗೆ ನಿನಾಯಿತಿ ನೀಡಬಾರದು ಎಂದು ಕರ್ನಾಟಕ ರಣಧೀರ ಪಡೆ ಆಗ್ರಹಿಸಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಅಂಥದ್ದೇನಿದೆ ಸಿನಿಮಾದಲ್ಲಿ? ದಳ್ಳುರಿಯಲ್ಲಿ ದಹನದ ಕಥನ!
ದಿ ಕಾಶ್ಮೀರ್ ಫೈಲ್ ಎಂಬ ಸಿನಿಮಾ ಸಮಾಜದಲ್ಲಿ ಶಾಂತಿ ಕದಡಲು ಮಾಡಿರುವ ಹುನ್ನಾರವಷ್ಟೆ. ತೆರಿಗೆ ವಿನಾಯ್ತಿ ಘೋಷಿಸಲು ಇದು ಯಾವುದೇ ಸಾಮಾಜಿಕ, ಸಾಂಸ್ಕೃತಿಕ ಕ್ರಾಂತಿ ಸಿನಿಮಾವಲ್ಲ. ಸುಳ್ಳು ಮತ್ತು ಅತಿರಂಜಿತ ಕತೆಯನ್ನು ಭೀಬತ್ಸವಾಗಿ ತೋರಿಸಿ ಜನರ ಮಧ್ಯೆ ಅಪನಂಬಿಕೆ ಹುಟ್ಟು ಹಾಕುವ ಸಿನಿಮಾಗೆ ತೆರಿಗೆ ವಿನಾಯ್ತಿ ನೀಡುವುದು ಎಂದರೆ ಕನ್ನಡಿಗರ ತೆರಿಗೆ ಹಣಕ್ಕೆ ದೋಖಾ ಬಗೆಯುವುದು ಎಂದರ್ಥ. ಇಂತಹ ಕೃತ್ಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಮಾಡಕೂಡದು. ಇದನ್ನೂ ಓದಿ : ಉಪೇಂದ್ರ ಅವರ ಹೊಸ ಸಿನಿಮಾದ ಪೋಸ್ಟರ್ : ಅಸಲಿನಾ? ನಕಲಾ?
ಕನ್ನಡ ಚಿತ್ರೋದ್ಯಮ ಈಗ ಸಂಕಷ್ಟದಲ್ಲಿದೆ. ಕೊರೋನಾ ನಂತರ ಕನ್ನಡ ಚಿತ್ರೋದ್ಯಮದ ಸಾವಿರಾರು ಕಾರ್ಮಿಕರು ಬದುಕಿಗಾಗಿ ಪರದಾಡುತ್ತಿದ್ದಾರೆ. ಕನ್ನಡ ಚಿತ್ರೋದ್ಯಮಕ್ಕೆ ಮಿಡಿಯದ ಮುಖ್ಯಮಂತ್ರಿಗಳು ಕರ್ನಾಟಕಕ್ಕೆ ಸಂಬಂಧಪಡದ ಕಾಶ್ಮೀರ್ ಫೈಲ್ ಸಿನಿಮಾಗೆ ಯಾಕೆ ಸ್ಪಂದಿಸಿದರು ಎಂಬುದು ಎಲ್ಲರಿಗೂ ಗೊತ್ತಿದೆ. ರಾಜ್ಯ ಸರ್ಕಾರದ ಪರೋಕ್ಷ ಹೈಕಮಾಂಡ್ ಆಗಿರುವ ಆರ್ ಎಸ್ ಎಸ್ ಮನವೊಲಿಸಲು ಮುಖ್ಯಮಂತ್ರಿಗಳು ಕನ್ನಡಿಗರ ಖಜಾನೆಯನ್ನು ತೂತು ಮಾಡಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್
ಮುಖ್ಯಮಂತ್ರಿಗಳು ತಕ್ಷಣ ನಿಗೂಢ, ಅದೃಶ್ಯ ಹೈಕಮಾಂಡ್ ಮನವೊಲಿಕೆಯನ್ನು ನಿಲ್ಲಿಸಬೇಕು. ಪ್ರಜಾಸತ್ತಾತ್ಮಕವಾಗಿ ಕಾರ್ಯನಿರ್ವಹಣೆಯನ್ನು ಮುಖ್ಯಮಂತ್ರಿಗಳು ರೂಢಿಸಿಕೊಳ್ಳಬೇಕು. ಸರ್ವಜನರ ಹಿತಬಯಸುವ, ಸೌಹಾರ್ಧ ವಾತಾವರಣ ನಿರ್ಮಿಸುವ, ಸಂವಿಧಾನದ ಆಶಯದಂತೆ ನಡೆಯುವ ಸಮಾಜ ರೂಪಿಸಲು ಮುಖ್ಯಮಂತ್ರಿಗಳು ಕೆಲಸ ಮಾಡಬೇಕು. ಈ ರೀತಿ ಕಿಡಿಗೇಡಿಗಳ ಸಿನಿಮಾಕ್ಕೆ ತೆರಿಗೆ ವಿನಾಯ್ತಿ ನೀಡುವುದು ಅಕ್ಷಮ್ಯ ಎಂದು ಕರ್ನಾಟಕ ರಣಧೀರ ಪಡೆ ತಿಳಿಸಿದೆ.
‘ಸತ್ಯಕ್ಕೆ ಎರಡು ಮುಖಗಳಿರುತ್ತವೆ’ ಎನ್ನುತ್ತದೆ ಸಂಶೋಧನಾ ಪರಿಭಾಷೆ. ಯಾವುದೋ ಒಂದು ಘಟನೆ ನಡೆದಾಗ ಆ ಎರಡೂ ಮುಖಗಳೊಂದಿಗೆ ಅದು ಚಲನೆ ಪಡೆಯುತ್ತದೆ. ಬಲಾಢ್ಯತೆಯತ್ತ ಕೊನೆಗೊಳ್ಳುತ್ತದೆ. ಇದು ಸಹಜ ಪ್ರಕ್ರಿಯೆ. ಇಂತಹ ಪ್ರಕ್ರಿಯೆಯಲ್ಲೇ ಸಾಗಿ ಬಂದದ್ದು ‘ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಮತ್ತು ಮಹಾವಲಸೆಯ ಚರಮಗೀತೆ. ಇದನ್ನೂ ಓದಿ : ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಣೆಗಾಗಿ ಸದನದಲ್ಲೇ ಆಹ್ವಾನಿಸಿದ ಸ್ಪೀಕರ್ ಕಾಗೇರಿ
ಸದ್ಯ ಕಾಶ್ಮೀರ ಅಲ್ಲಿನ ಹವಾಮಾನಕ್ಕೆ ಹೊಂದಿಕೊಂಡಂತೆ ತಣ್ಣಗಾಗಿದೆ. ರಾಜಕೀಯ ಮೇಲಾಟಗಳು ಗುದುಮುರುಗಿ ಕಟ್ಟಿಕೊಂಡು ಮೂಲೆ ಗುಂಪಾಗುತ್ತಿವೆ. ಇಂತಹ ಹೊತ್ತಿನಲ್ಲಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ 1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧದ ಕುರಿತು ಸಿನಿಮಾ ಮಾಡಿದ್ದಾರೆ. ಅದನ್ನು ‘ದಿ ಕಾಶ್ಮೀರ್ ಫೈಲ್ಸ್’ ಹೆಸರಿನಲ್ಲಿ ಬಿಡುಗಡೆ ಮಾಡಿದ್ದಾರೆ.
ಸಿನಿಮಾದ ಶೀರ್ಷಿಕೆಯೇ ಪ್ರಚುರಪಡಿಸುವಂತೆ ನರಮೇಧದ ಹಿಂದಿರುವ ಇತಿಹಾಸವನ್ನು ಬಿಚ್ಚಿಡುವಂತಹ ‘ಫೈಲ್’ ಇದಾಗಿದೆ. ಈ ‘ಫೈಲ್’ ನ ಪುಟಪುಟದಲ್ಲೂ ರಕ್ತಸಿಕ್ತ ಅಧ್ಯಾಯಗಳಿವೆ. ಬರೆದ ಶಾಹಿ ಕೂಡ ಕೆಂಪಾಗಿದೆ. ಇಂತಹ ಹತ್ಯಾಕಾಂಡವನ್ನು ಸಿನಿಮಿಯ ರೂಪದಲ್ಲಿ ತರದೇ, ನಡೆದ ಘಟನೆಯನ್ನು ಹಸಿಹಸಿಯಾಗಿಯೇ ತರುವ ಪ್ರಯತ್ನ ಈ ಸಿನಿಮಾದಲ್ಲಿ ಆಗಿದೆ. ಇದನ್ನೂ ಓದಿ : ಉಪೇಂದ್ರ ಅವರ ಹೊಸ ಸಿನಿಮಾದ ಪೋಸ್ಟರ್ : ಅಸಲಿನಾ? ನಕಲಾ?
ಸಾಮಾನ್ಯವಾಗಿ ಸಿನಿಮಾಗಳೆಂದರೆ ನಾಟಕೀಯ ನಿರೂಪಣೆಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಕಥೆಯ ಕುತೂಹಲವನ್ನು ಕಾಪಿಡಲು ಅಲ್ಲಲ್ಲಿ, ನಾಟಕೀಯ ತಿರುವುಗಳನ್ನೂ ನೀಡಲಾಗುತ್ತದೆ. ಪ್ರೇಕ್ಷಕನ ಆಸಕ್ತಿಯ ಅನುಗುಣವಾಗಿ ಪಾತ್ರಕ್ಕೆ ಹಿನ್ನೆಲೆ ಒದಗಿಸಲಾಗುತ್ತದೆ. ‘ದಿ ಕಾಶ್ಮೀರ್ ಫೈಲ್ಸ್’ ನಲ್ಲಿ ಅದ್ಯಾವ ಗೋಜಿಗೂ ನಿರ್ದೇಶಕರು ಹೋಗಿಲ್ಲ. ತಮ್ಮ ಸಂಶೋಧನೆಯಲ್ಲಿ ಕಂಡುಂಡ ಕಥನವನ್ನು ಹಾಗೆಯೇ ಬಿಚ್ಚಿಡುತ್ತಾ ಹೋಗಿದ್ದಾರೆ. ಹಾಗಾಗಿ ಚಿತ್ರದ ತುಂಬಾ ಮನಸ್ಸಿಗೆ ಘಾಸಿಯಾಗುವಷ್ಟು ಕ್ರೌರ್ಯವೇ ತುಂಬಿದೆ. ಅದೊಂದು ಹತ್ಯಾಕಾಂಡದ ಕಥೆಯೇ ಆಗಿದ್ದರಿಂದ ತೆರೆಯ ಮೇಲೂ ಅದನ್ನೇ ಮೂಡಿಸಿದ್ದಾರೆ.
ಪುಷ್ಕರ್ ನಾಥ್ ಪಂಡಿತ್ (ಅನುಪಮ್ ಖೇರ್) ಪಾತ್ರವನ್ನು ಮುಖ್ಯವಾಗಿಟ್ಟುಕೊಂಡು ಕಥೆಯನ್ನು ಹೇಳುತ್ತಾ ಸಾಗುವ ನಿರ್ದೇಶಕರು, ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಮೊಮ್ಮಗನಿಗೆ ತನ್ನ ಕುಟುಂಬದ ಇತಿಹಾಸ ಹೇಳುತ್ತಾ ಸಾಗುವ ಕಥನ ಕ್ರಮದಲ್ಲಿ ಇಡೀ ಸಿನಿಮಾ ಸಾಗುತ್ತದೆ. ಈ ಪುಷ್ಕರ್ ನಾಥ್ ಮೂಲಕ ಕಾಶ್ಮೀರಿ ಪಂಡಿತರ ಮೇಲಾದ ದಾಳಿಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಸಾಗುತ್ತಾರೆ ನಿರ್ದೇಶಕರು. ಈ ಕಥನ ಕವಲುಗಳಲ್ಲಿ ಮಾಧ್ಯಮ, ರಾಜಕಾರಣ, ಭಯೋತ್ಪಾದನೆ, ಕೋಮುಗಲಭೆ, ಮತಾಂತರ, ಎರಡು ಕೋಮಿನ ನಡುವಿನ ಸಂಘರ್ಷ ಹೀಗೆ ಸಾಕಷ್ಟು ಘಟನೆಗಳು ದೃಶ್ಯಗಳಾಗಿ ಬಂದು ಹೋಗುತ್ತವೆ. ಇದೊಂದು ಒಪ್ಪಿತ ಸಿನಿಮಾ ಮಾಧ್ಯಮವಾಗಿರುವುದರಿಂದ ನಿರ್ದೇಶಕ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡು, ಅವನದ್ದೇ ಆದ ರೀತಿಯಲ್ಲಿ ಅಂತ್ಯ ಕೊಡುತ್ತಾನೆ. ಅಲ್ಲಿಗೆ ನೋಡುಗನ ಮನಸ್ಸು ಹದಗೊಳ್ಳುವುದೇ ಬೇರೆ ರೀತಿಯಾಗಿ. ಅಷ್ಟರ ಮಟ್ಟಿಗೆ ಸಿನಿಮಾ ನೋಡುಗನ ಎದೆಯೂರಿ ಹೆಚ್ಚಿಸುತ್ತದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್
ಭಯೋತ್ಪಾದಕರು ‘ಮತಾಂತರವಾಗಿ, ಸಾಯಿರು ಅಥವಾ ಓಡಿ ಹೋಗಿ’ ಎಂದು ಹೇಳುವ ಮಾತುಗಳು ಮತ್ತು ಮುಸ್ಲಿಂ ಹುಡುಗರೇ ತುಂಬಿರುವ ಗ್ಯಾಂಗ್ ನಲ್ಲಿ ಹಿಂದೂ ಹುಡುಗನೊಬ್ಬ ಕ್ರಿಕೆಟ್ ಆಡುತ್ತಾ, ಅಲ್ಲೊಂದು ರೆಡಿಯೋ, ಅದರಲ್ಲಿ ಕ್ರಿಕೆಟ್ ಕಾಮೆಂಟರಿ ಕೇಳುತ್ತಾ, ಸಡನ್ನಾಗಿ ಹಿಂದೂ ಹುಡುಗನ ಬಾಯಿಂದ ‘ಸಚಿನ್.. ಸಚಿನ್..’ ಕೂಗು. ನಂತರ ನಡೆಯೋದೆಲ್ಲ ಹಿಂಸೆ, ರಕ್ತಪಾತ, ಯುದ್ಧ, ಧರ್ಮಯುದ್ಧ. ಹೀಗೆ ಒಂದು ಕೋಮಿನ ಕ್ರೌರ್ಯವನ್ನೇ ಢಾಳಾಗಿ ತೋರಿಸುತ್ತಾ ಹೋಗಿದ್ದಾರೆ ನಿರ್ದೇಶಕರು. ಹಾಗಾಗಿ ಸಿನಿಮಾದುದ್ದಕ್ಕೂ ಅಚ್ಚರಿ ಅನಿಸುವ, ಚರ್ಚೆಗೆ ಹಚ್ಚುವ ಮತ್ತು ಭಾವುಕತೆ ಕಟ್ಟಿಕೊಡುವ ದೃಶ್ಯಗಳೇ ತುಂಬಿ ಹೋಗಿವೆ. ಇದನ್ನೂ ಓದಿ : ಇರುವೆ ಪಾತ್ರವಾಗಿ ಬಂದ ಸಂಚಾರಿ ವಿಜಯ್
ಇಡೀ ಸಿನಿಮಾ ಕಾಶ್ಮೀರಿ ಪಂಡಿತರ ದೃಷ್ಟಿಕೋನದ ಮೂಲಕವೇ ಬಿಚ್ಚಿಕೊಳ್ಳುತ್ತಾ ಹೋಗಿದ್ದರಿಂದ ಮತ್ತು ಅದನ್ನು ಭಯೋತ್ಪಾದಕರ ಚಿತ್ರಹಿಂಸೆಗೆ ನಲುಗಿ ಪ್ರಾಣಬಿಟ್ಟ ಕುಟುಂಬವೊಂದರ ಕಥೆಯ ಮೂಲಕ ಹೇಳಿದ್ದರಿಂದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಒಂದು ವರ್ಗದ ಜನಕ್ಕೆ ಇಷ್ಟವಾಗಿ ಮತ್ತು ಮತ್ತೊಂದು ವರ್ಗದ ಜನಕ್ಕೆ ಅದು ಓಲೈಕೆಯಾಗಿ ಕಾಣುವುದರಲ್ಲಿ ಅನುಮಾನವಿಲ್ಲ.
2 ಗಂಟೆ 50 ನಿಮಿಷ ಕಾಲಾವಧಿಯ ಈ ಚಿತ್ರ, ಸಿನಿಮಾದ ಸಿದ್ಧಸೂತ್ರಗಳಾಚೆ ರೂಪುಗೊಂಡಿದ್ದರಿಂದ ಒಂದಷ್ಟು ಕಡೆ ಡಾಕ್ಯುಮೆಂಟರಿ ರೂಪವಾಗಿಯೂ ಕಾಣುತ್ತದೆ. ಉಳಿದಂತೆ ಅದೊಂದು ಕಾಶ್ಮೀರ್ ಫೈಲ್ಸ್.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ತಯಾರಾದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಶ್ಮೀರ ಪಂಡಿತರ ಮಾರಣಹೋಮ ಘಟನೆ ಕುರಿತಾದ ಸಿನಿಮಾ ಇದಾಗಿದ್ದು, ಚಿತ್ರದ ಬಗ್ಗೆ ಪರ ಮತ್ತು ವಿರೋಧಗಳು ಕೇಳಿ ಬರುತ್ತಿವೆ. ಇದನ್ನೂ ಓದಿ : ‘ಪುಷ್ಪ ಪಾರ್ಟ್ 10’ ಸಿನಿಮಾಗೆ ನಟ ಮಾಸ್ಟರ್ ಆನಂದ್ ಮಗಳು ಹೀರೋಯಿನ್
ಒಂದು ಸಮುದಾಯದ ಓಲೈಕೆಗಾಗಿ ಮಾಡಿದ ಸಿನಿಮಾ ಇದು ಎಂದು ಕೆಲವರು ವಾದಿಸಿದರೆ, ಕಾಶ್ಮೀರಿ ಪಂಡಿತರ ವಸ್ತುಸ್ಥಿತಿಯ ಬಗ್ಗೆ ಮುಖಕ್ಕೆ ಹೊಡೆದಂತೆ ನಿರ್ದೇಶಕರು ಹೇಳಿದ್ದಾರೆ ಎನ್ನುವುದು ಮತ್ತೊಂದು ವಾದ. ಈ ವಾದ ವಿವಾದ ಏನೇ ಇರಲಿ, ಈ ಚಿತ್ರದಲ್ಲಿ ಕನ್ನಡದ ಹೆಸರಾಂತ ನಟ, ಪತ್ರಕರ್ತ ಪ್ರಕಾಶ್ ಬೆಳವಾಡಿ ಮಹತ್ವದ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ತಾವು ಏಕೆ ನಟಿಸಲು ಒಪ್ಪಿಕೊಂಡೆ ಅನ್ನುವ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ : ಪುನೀತ್ ಹುಟ್ಟುಹಬ್ಬಕ್ಕೆ ಹೊಸ ಸಾಂಗ್: ಒಂದಾಯಿತು ‘ಗೊಂಬೆ ಹೇಳತೈತೆ’ ಕಾಂಬಿನೇಷನ್
“ಕಾಶ್ಮೀರಿ ಪಂಡಿತರ ಮಾರಣಹೋಮ ನಡೆದಾಗ ನಾನು ಪತ್ರಕರ್ತನಾಗಿದ್ದೆ. ಆ ಸಮಯದಲ್ಲಿ ನಿಜವಾಗಿಯೂ ಅಲ್ಲಿ ಏನು ನಡೆಯಿತು ಎಂದು ತಿಳಿದಿರಲಿಲ್ಲ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನನಗೆ ಸಿನಿಮಾದ ಚಿತ್ರಕಥೆ ಕಳುಹಿಸಿದಾಗ ಗಾಬರಿ ಆಯಿತು. ತಿಳಿದುಕೊಂಡಿರುವ ಇತಿಹಾಸವೇ ಬೇರೆ, ಆಗಿರುವ ಘಟನೆಯೇ ಬೇರೆಯಾಗಿತ್ತು. ಹಾಗಾಗಿ ನಾನು ಆ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆ’ ಎಂದಿದ್ದಾರೆ ಪ್ರಕಾಶ್ ಬೆಳವಾಡಿ. ಇದನ್ನೂ ಓದಿ : ಕಿರುತೆರೆಯ ನಟ, ನಿರ್ದೇಶಕ ರವಿಕಿರಣ್ ಪುತ್ರ ಸಿನಿಮಾಗೆ ರಂಗಕ್ಕೆ ಎಂಟ್ರಿ
“ಈ ಸಮಾಜದ ಪರವಾಗಿ ನಾನು ಕಾಶ್ಮೀರಿ ಪಂಡಿತರಿಗೆ ಕ್ಷಮೆ ಕೇಳಬೇಕು. ನಾನು ಅಪರಾಧಿ ಭಾವದಲ್ಲಿದ್ದೇನೆ. ಒಬ್ಬ ಪತ್ರಕರ್ತನಾಗಿಯೂ ನನಗೆ ನಿಜವಾದ ಇತಿಹಾಸವನ್ನು ಜನರಿಗೆ ತಿಳಿಸುವುದಕ್ಕೆ ಆಗಲಿಲ್ಲ. ಆ ಅಪರಾಧಿ ಭಾವದಿಂದಲೇ ಆ ಸಿನಿಮಾದಲ್ಲಿ ನಟಿಸಿದೆ. ಈ ಸಿನಿಮಾದ ಮೂಲಕವಾದರೂ, ನನ್ನ ಅಪರಾಧಿ ಭಾವವನ್ನು ಕಡಿಮೆ ಮಾಡಿಕೊಳ್ಳುತ್ತೇನೆ’ ಎನ್ನುವುದು ಅವರ ಮಾತು. ಇದನ್ನೂ ಓದಿ : ಪೂಜಾ ಹೆಗ್ಡೆ ಅವಕಾಶ ಕಿತ್ತುಕೊಂಡ ರಶ್ಮಿಕಾ ಮಂದಣ್ಣ
ಈ ಸಿನಿಮಾದ ಮೂಲಕ 1990ರಲ್ಲಿ ನಡೆದ ಕ್ರೂರ ಘಟನೆಯ ಸತ್ಯಾಸತ್ಯತೆಯನ್ನು ತಿಳಿಸುವ ಪ್ರಯತ್ನ ಮಾಡಿದ್ದಾರಂತೆ ನಿರ್ದೇಶಕರು. ಹಲವು ವರ್ಷಗಳ ಕಾಲ ಘಟನೆಯ ಬಗ್ಗೆ ಸಂಶೋಧನೆ ಮಾಡಿ, ಸಂದರ್ಶಿಸಿ ಚಿತ್ರಕಥೆ ಹೆಣೆದಿದ್ದಾರಂತೆ. ಅನುಪಮ್ ಖೇರ್, ಪಲ್ಲವಿ ಜೋಸಿ, ಮಿಥುನ್ ಚಕ್ರವರ್ತಿ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ : ಚಕ್ಡಾ ಎಕ್ಸ್ ಪ್ರೆಸ್ ಸಿನಿಮಾಗಾಗಿ ಅನುಷ್ಕಾ ಬೌಲಿಂಗ್ ಪ್ರಾಕ್ಟಿಸ್
ಈ ಸಿನಿಮಾದ ಕುರಿತಂತೆ ಈಗಾಗಲೇ ಜಮ್ಮು ಕಾಶ್ಮೀರ ಜಿಲ್ಲಾ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಈ ಸಿನಿಮಾದಲ್ಲಿ ಸ್ಕ್ವಾಡ್ರನ್ ಲೀಡರ್ ರವಿ ಖನ್ನಾ ಅವರ ಗೌರವಕ್ಕೆ ಧಕ್ಕೆ ಆಗುವ ರೀತಿಯಲ್ಲಿ ಪಾತ್ರ ತೋರಿಸಲಾಗಿದೆ ಎಂದು ರವಿ ಖನ್ನಾ ಪತ್ನಿ ದೂರು ದಾಖಲಿಸಿದ್ದಾರೆ.