Tag: ವಿವೇಕ್ ಅಗ್ನಿಹೋತ್ರಿ

  • ‘ದಿ ವ್ಯಾಕ್ಸಿನ್ ವಾರ್’ ಚಿತ್ರವನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

    ‘ದಿ ವ್ಯಾಕ್ಸಿನ್ ವಾರ್’ ಚಿತ್ರವನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

    ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ ಮೂಲಕ ಸಂಚಲನ ಸೃಷ್ಟಿಸಿದ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ (The Vaccine War) ಸಿನಿಮಾ ಸೆ.28ಕ್ಕೆ ರಿಲೀಸ್‌ ಆಗಿದೆ. ಕೆಲದಿನಗಳ ಹಿಂದೆ ಸಿನಿಮಾ ನೋಡಿ ಸುಧಾಮೂರ್ತಿ ಅವರು ಮೆಚ್ಚುಗೆ ಸೂಚಿಸಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ಅವರು ‘ದಿ ವ್ಯಾಕ್ಸಿನ್ ವಾರ್’ ಚಿತ್ರವನ್ನ ಹಾಡಿ ಹೊಗಳಿದ್ದಾರೆ.

    ಜೋಧ್‌ಪುರ್‌ನಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿ, ಭಾಷಣದ ಮಧ್ಯೆಯೇ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾವನ್ನು ಪ್ರಶಂಸಿದರು. ಈ ಸಿನಿಮಾ ಒಂದು ಇತ್ತೀಚೆಗೆ ಬಂದಿದೆ ಎಂದು ನಾನು ಕೇಳ್ಪಟ್ಟೆ. ಭಾರತದಲ್ಲಿ ಕೋವಿಡ್ ವಿರುದ್ಧ ಹೋರಾಟಕ್ಕೆ ನಮ್ಮ ವಿಜ್ಞಾನಿಗಳು ಹಗಲು-ರಾತ್ರಿ ಪಟ್ಟ ಶ್ರಮ. ಅದರಲ್ಲಿ ನಮ್ಮ ಮಹಿಳಾ ವಿಜ್ಞಾನಿಗಳು ಮಾಡಿರುವ ಸಾಧನೆಯನ್ನು ‘ದಿ ವ್ಯಾಕ್ಸಿನ ವಾರ್’ ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಲಾಗಿದೆ ಎಂದು ಪ್ರಧಾನಿ ಮೋದಿ (Narendra Modi) ಅವರು ಮಾತನಾಡಿದ್ದಾರೆ. ಇದನ್ನೂ ಓದಿ:ರಾಮ್ ಪೋತಿನೇನಿ ಜೊತೆ ಅನುಪಮಾ ಪರಮೇಶ್ವರನ್ ಮದುವೆ

    ನಮ್ಮ ವಿಜ್ಞಾನಿಗಳು ಇಷ್ಟು ಅದ್ಭುತವಾದ ಕಾರ್ಯ ಮಾಡಿದ್ದಾರೆ ಎಂದು ಆ ಸಿನಿಮಾ ನೋಡಿದ ಬಳಿಕ ಪ್ರತಿ ಭಾರತೀಯನಿಗೂ ಹೆಮ್ಮೆ ಎನಿಸುತ್ತಿದೆ. ಚಂದ್ರಯಾನ ನಡೆಯುತ್ತದೆ, ನಮ್ಮ ವಿಜ್ಞಾನಿಗಳ ಬಗ್ಗೆ ಗೌರವ ಹೆಚ್ಚುತ್ತದೆ. ವ್ಯಾಕ್ಸಿನ್ ನಿರ್ಮಾಣ ಆಗುತ್ತದೆ ನಮ್ಮ ವಿಜ್ಞಾನಿಗಳಿಗೆ ಗೌರವ ಸಂದಾಯವಾಗುತ್ತದೆ. ದೇಶದ ಯುವಕರು ವಿಜ್ಞಾನಿಗಳ ಬಗ್ಗೆ ವಿಜ್ಞಾನದ ಬಗ್ಗೆ ಆಕರ್ಷಿತರಾಗುತ್ತಿದ್ದಾರೆ ಎಂದಿದ್ದಾರೆ.

    ಸಿನಿಮಾ ನಿರ್ಮಿಸಿದ ಇಡೀ ತಂಡಕ್ಕೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ಸಿನಿಮಾ ಮೂಲಕ ನೀವು ದೇಶದ ವಿಜ್ಞಾನಿಗಳು- ವಿಜ್ಞಾನಕ್ಕೆ ಮಹತ್ವ ನೀಡಿದ್ದೀರಿ. ಈ ನಿಮ್ಮ ಕಾರ್ಯವು ಮುಂಬರುವ ಪೀಳಿಗೆಗೆ ಉಪಯುಕ್ತವಾಗಲಿದೆ ಎಂದಿದ್ದಾರೆ. ಈ ಹಿಂದೆ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೂ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದರು.

    ‘ದಿ ವ್ಯಾಕ್ಸಿನ್ ವಾರ್’ ಚಿತ್ರದಲ್ಲಿ ಪಲ್ಲವಿ ಜೋಶಿ, ‘ಕಾಂತಾರ’ (Kantara) ನಟಿ ಸಪ್ತಮಿ ಗೌಡ(Saptami Gowda), ಅನುಪಮ್ ಖೇರ್ ಸೇರಿದಂತೆ ಹಲವರು ನಟಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿ ವ್ಯಾಕ್ಸಿನ್ ವಾರ್ ಕಲೆಕ್ಷನ್ ಏರಿಕೆ: ನಿರ್ಮಾಪಕರ ಪ್ಲ್ಯಾನ್ ಸಕ್ಸಸ್

    ದಿ ವ್ಯಾಕ್ಸಿನ್ ವಾರ್ ಕಲೆಕ್ಷನ್ ಏರಿಕೆ: ನಿರ್ಮಾಪಕರ ಪ್ಲ್ಯಾನ್ ಸಕ್ಸಸ್

    ಬಾಕ್ಸ್ ಆಫೀಸಿನಲ್ಲಿ ಕುಂಟುತ್ತಾ ಸಾಗುತ್ತಿದ್ದ ‘ದಿ ವ್ಯಾಕ್ಸಿನ್ ವಾರ್ ‘ ಸಿನಿಮಾದ ಕಲೆಕ್ಷನ್ ರವಿವಾರ ದಿಢೀರ್‍ ನೆ ಏರಿಕೆಯಾಗಿದೆ. ರವಿವಾರವಷ್ಟೇ 2.20 ಕೋಟಿ ರೂಪಾಯಿ ಮೊತ್ತ ಬಾಕ್ಸ್ ಆಫೀಸಿಗೆ ಹರಿದು ಬಂದಿದೆ ಎಂದು ಅಂದಾಜಿಸಲಾಗಿದೆ. ಅಲ್ಲಿಗೆ ದಿ ವ್ಯಾಕ್ಸಿನ್ ವಾರ್ ಸಿನಿಮಾ ಒಟ್ಟು 5.70 ಕೋಟಿ ರೂಪಾಯಿಗೆ ಈವರೆಗೂ ಗಳಿಕೆ ಮಾಡಿದೆ.

    ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನ ಮಾಡಿರುವ ದಿ ವ್ಯಾಕ್ಸಿನ್ ವಾರ್ (The Vaccine War) ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಬಾಕ್ಸ್ ಆಫೀಸಿನಲ್ಲಿ (Box Office) ಈ ಸಲವೂ ನಿರ್ದೇಶಕ ವಿವೇಕ್ ಭರ್ಜರಿ ಬ್ಯಾಟಿಂಗ್ ಮಾಡಲಿದ್ದಾರೆ ಎನ್ನುವ ನಿರೀಕ್ಷೆಯೂ ಇತ್ತು. ಸಾಲು ಸಾಲು ರಜೆಗಳು ಕೂಡ ಬಂದಿದ್ದರಿಂದ ಕೋಟಿ ಕೋಟಿ ಕಲೆಕ್ಷನ್ ಹರಿದು ಬರಲಿದೆ ಎಂದು ನಂಬಲಾಗಿತ್ತು. ಆದರೆ, ಈ ನಂಬಿಕೆಯೆಲ್ಲ ಹುಸಿಯಾಗಿತ್ತು.

    ಸಿನಿ ಪಂಡಿತರ ಲೆಕ್ಕಾಚಾರದಂತೆ ಮೊದಲ ದಿನದ ಕಲೆಕ್ಷನ್ (Collection) 1.30 ಕೋಟಿ ರೂಪಾಯಿ ಮಾಡಿತ್ತು. ಎರಡನೇ ದಿನದಿಂದ ಕಲೆಕ್ಷನ್ ಏರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಆ ಮ್ಯಾಜಿಕ್ ನಡೆದಿಲ್ಲ. ಮೂರು ದಿನದ ಒಟ್ಟು ಕಲೆಕ್ಷನ್ 3.25 ಕೋಟಿಯಷ್ಟು ಕಲೆಕ್ಷನ್ ಆಗಿದೆ. ರವಿವಾರ ಮತ್ತು ಸೋಮವಾರ ರಜೆ ಇರುವುದರಿಂದ ಈ ದಿನದಂದು ಒಂದು ಟಿಕೆಟ್ ಕೊಂಡರೆ ಮತ್ತೊಂದು ಟಿಕೆಟ್ ಉಚಿತ ಎಂದು ಚಿತ್ರತಂಡ ಘೋಷಣೆ ಮಾಡಿತ್ತು. ಈ ಘೋಷಣೆಯೇ ಕೆಲಸ ಮಾಡಿದೆ. ಇದನ್ನೂ ಓದಿ:ಸಂಯುಕ್ತಾ ಬಟ್ಟೆಗೆ ನೆಗೆಟಿವ್ ಕಾಮೆಂಟ್ಸ್, ತಿರುಗೇಟು ನೀಡಿದ ಕಿಶನ್ ಬಿಳಗಲಿ

    ದಿ ಕಾಶ್ಮೀರ್ ಫೈಲ್ಸ್ ಮೊದಲ ಚಿತ್ರದ ಕಲೆಕ್ಷನ್ 3.55 ಕೋಟಿ ರೂಪಾಯಿ ಆಗಿತ್ತು. ಈ ಸಿನಿಮಾಗೆ ದಿ ವ್ಯಾಕ್ಸಿನ್ ವಾರ್ ಹೋಲಿಸಿದರೆ ಗಳಿಕೆಯಲ್ಲಿ ತೀರಾ ಕಡಿಮೆ ಅನಿಸುತ್ತದೆ. ದಿ ಕಾಶ್ಮೀರ್ ಫೈಲ್ಸ್ ಒಟ್ಟಾರೆ ಗಳಿಕೆ 250 ಕೋಟಿ ರೂಪಾಯಿ ದಾಟಿತ್ತು. ದಿ ವ್ಯಾಕ್ಸಿನ್ ವಾರ್ ಎಷ್ಟು ಗಳಿಸುತ್ತದೆ ಎನ್ನುವ ಕುತೂಹಲ ಮೂಡಿದೆ.

    ದಿ ಕಾಶ್ಮೀರ್ ಫೈಲ್ಸ್ ನಲ್ಲಿ ಕಾಶ್ಮೀರಿ ಪಂಡಿತರ ಹತ್ಯೆಯ ಕುರಿತಾಗಿ ಕಥೆ ಹೇಳಿದ್ದ ನಿರ್ದೇಶಕರು ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ಏನನ್ನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಕ್ಯೂರಿಯಾಸಿಟಿ ಎಲ್ಲರದ್ದಾಗಿತ್ತು. ಅದಕ್ಕೀಗ ಉತ್ತರವೂ ಸಿಕ್ಕಿದೆ. ಈ ಕುರಿತಾಗಿ ಮಾಧ್ಯಮಗಳ ಜೊತೆ ಮಾತನಾಡಿದ ವಿವೇಕ್ ಅಗ್ನಿಹೋತ್ರಿ, ಕೋವಿಡ್‍ ದಿನಗಳ ಕಥೆ ಸಿನಿಮಾದಲ್ಲಿದೆ ಎಂದು ಹೇಳಲಾಗುತ್ತಿದ್ದು, ವ್ಯಾಕ್ಸಿನ್ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಅಲ್ಲದೇ, ನೂರಕ್ಕೂ ನೂರರಷ್ಟು ಸತ್ಯ ಘಟನೆಗಳನ್ನೇ ಆಧರಿಸಿ ತಯಾರಾದ ಚಿತ್ರವೆಂದಿದ್ದಾರೆ ಅಗ್ನಿಹೋತ್ರಿ. ಅಷ್ಟೂ ಕಥೆಯಲ್ಲಿ ನೈಜ ಘಟನೆಗಳನ್ನೇ ಆಧರಿಸಿ ಚಿತ್ರಕಥೆ ಹೆಣೆಲಾಗಿದೆ ಎನ್ನುವುದು ನಿರ್ದೇಶಕರ ಮಾತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿ ವ್ಯಾಕ್ಸಿನ್ ವಾರ್ : ಉಚಿತ ಟಿಕೆಟ್ ಘೋಷಣೆ ಮಾಡಿದ ಟೀಮ್

    ದಿ ವ್ಯಾಕ್ಸಿನ್ ವಾರ್ : ಉಚಿತ ಟಿಕೆಟ್ ಘೋಷಣೆ ಮಾಡಿದ ಟೀಮ್

    ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನ ಮಾಡಿರುವ ದಿ ವ್ಯಾಕ್ಸಿನ್ ವಾರ್ (The Vaccine War) ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಬಾಕ್ಸ್ ಆಫೀಸಿನಲ್ಲಿ (Box Office) ಈ ಸಲವೂ ನಿರ್ದೇಶಕ ವಿವೇಕ್ ಭರ್ಜರಿ ಬ್ಯಾಟಿಂಗ್ ಮಾಡಲಿದ್ದಾರೆ ಎನ್ನುವ ನಿರೀಕ್ಷೆಯೂ ಇತ್ತು. ಸಾಲು ಸಾಲು ರಜೆಗಳು ಕೂಡ ಬಂದಿದ್ದರಿಂದ ಕೋಟಿ ಕೋಟಿ ಕಲೆಕ್ಷನ್ ಹರಿದು ಬರಲಿದೆ ಎಂದು ನಂಬಲಾಗಿತ್ತು. ಆದರೆ, ಈ ನಂಬಿಕೆಯೆಲ್ಲ ಹುಸಿಯಾಗಿದೆ.

    ಸಿನಿ ಪಂಡಿತರ ಲೆಕ್ಕಾಚಾರದಂತೆ ಮೊದಲ ದಿನದ ಕಲೆಕ್ಷನ್ (Collection) 1.30 ಕೋಟಿ ರೂಪಾಯಿ ಮಾಡಿತ್ತು. ಎರಡನೇ ದಿನದಿಂದ ಕಲೆಕ್ಷನ್ ಏರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಆ ಮ್ಯಾಜಿಕ್ ನಡೆದಿಲ್ಲ. ಮೂರು ದಿನದ ಒಟ್ಟು ಕಲೆಕ್ಷನ್ 3.25 ಕೋಟಿಯಷ್ಟು ಕಲೆಕ್ಷನ್ ಆಗಿದೆ. ರವಿವಾರ ಮತ್ತು ಸೋಮವಾರ ರಜೆ ಇರುವುದರಿಂದ ಈ ದಿನದಂದು ಒಂದು ಟಿಕೆಟ್ ಕೊಂಡರೆ ಮತ್ತೊಂದು ಟಿಕೆಟ್ ಉಚಿತ ಎಂದು ಚಿತ್ರತಂಡ ಘೋಷಣೆ ಮಾಡಿದೆ.

    ದಿ ಕಾಶ್ಮೀರ್ ಫೈಲ್ಸ್ ಮೊದಲ ಚಿತ್ರದ ಕಲೆಕ್ಷನ್ 3.55 ಕೋಟಿ ರೂಪಾಯಿ ಆಗಿತ್ತು. ಈ ಸಿನಿಮಾಗೆ ದಿ ವ್ಯಾಕ್ಸಿನ್ ವಾರ್ ಹೋಲಿಸಿದರೆ ಗಳಿಕೆಯಲ್ಲಿ ತೀರಾ ಕಡಿಮೆ ಅನಿಸುತ್ತದೆ. ದಿ ಕಾಶ್ಮೀರ್ ಫೈಲ್ಸ್ ಒಟ್ಟಾರೆ ಗಳಿಕೆ 250 ಕೋಟಿ ರೂಪಾಯಿ ದಾಟಿತ್ತು. ದಿ ವ್ಯಾಕ್ಸಿನ್ ವಾರ್ ಎಷ್ಟು ಗಳಿಸುತ್ತದೆ ಎನ್ನುವ ಕುತೂಹಲ ಮೂಡಿದೆ.

    ದಿ ಕಾಶ್ಮೀರ್ ಫೈಲ್ಸ್ ನಲ್ಲಿ ಕಾಶ್ಮೀರಿ ಪಂಡಿತರ ಹತ್ಯೆಯ ಕುರಿತಾಗಿ ಕಥೆ ಹೇಳಿದ್ದ ನಿರ್ದೇಶಕರು ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ಏನನ್ನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಕ್ಯೂರಿಯಾಸಿಟಿ ಎಲ್ಲರದ್ದಾಗಿತ್ತು. ಅದಕ್ಕೀಗ ಉತ್ತರವೂ ಸಿಕ್ಕಿದೆ.

    ಈ ಕುರಿತಾಗಿ ಮಾಧ್ಯಮಗಳ ಜೊತೆ ಮಾತನಾಡಿದ ವಿವೇಕ್ ಅಗ್ನಿಹೋತ್ರಿ, ಕೋವಿಡ್‍ ದಿನಗಳ ಕಥೆ ಸಿನಿಮಾದಲ್ಲಿದೆ ಎಂದು ಹೇಳಲಾಗುತ್ತಿದ್ದು, ವ್ಯಾಕ್ಸಿನ್ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಅಲ್ಲದೇ, ನೂರಕ್ಕೂ ನೂರರಷ್ಟು ಸತ್ಯ ಘಟನೆಗಳನ್ನೇ ಆಧರಿಸಿ ತಯಾರಾದ ಚಿತ್ರವೆಂದಿದ್ದಾರೆ ಅಗ್ನಿಹೋತ್ರಿ. ಅಷ್ಟೂ ಕಥೆಯಲ್ಲಿ ನೈಜ ಘಟನೆಗಳನ್ನೇ ಆಧರಿಸಿ ಚಿತ್ರಕಥೆ ಹೆಣೆಲಾಗಿದೆ ಎನ್ನುವುದು ನಿರ್ದೇಶಕರ ಮಾತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ದಿ ವ್ಯಾಕ್ಸಿನ್ ವಾರ್’ ಮೊದಲ ದಿನದ ಗಳಿಕೆ 1 ಕೋಟಿ ರೂಪಾಯಿ

    ‘ದಿ ವ್ಯಾಕ್ಸಿನ್ ವಾರ್’ ಮೊದಲ ದಿನದ ಗಳಿಕೆ 1 ಕೋಟಿ ರೂಪಾಯಿ

    ದಿ ಕಾಶ್ಮೀರ್ ಫೈಲ್ಸ್ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ನಿನ್ನೆಯಷ್ಟೇ ರಿಲೀಸ್ ಆಗಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿದ್ದು, ನಿರೀಕ್ಷೆ ಮಾಡಿದಷ್ಟು ಪ್ರತಿಕ್ರಿಯೆ ಸಿಕ್ಕಿಲ್ಲ. ಹಾಗಾಗಿ ಸಿನಿ ಪಂಡಿತರ ಲೆಕ್ಕಾಚಾರದಂತೆ ಒಂದು ದಿನದ ಕಲೆಕ್ಷನ್ (Collection) 1.30 ಕೋಟಿ  ರೂಪಾಯಿ ಮಾಡಿದೆ. ಮುಂದಿನ ದಿನಗಳಲ್ಲಿ ಇದು ಹೆಚ್ಚಾಗುತ್ತದಾ ಕಾದು ನೋಡಬೇಕಿದೆ.

    ದಿ ಕಾಶ್ಮೀರ್ ಫೈಲ್ಸ್ ಮೊದಲ ಚಿತ್ರದ ಕಲೆಕ್ಷನ್ 3.55 ಕೋಟಿ ರೂಪಾಯಿ ಆಗಿತ್ತು. ಈ ಸಿನಿಮಾಗೆ ದಿ ವ್ಯಾಕ್ಸಿನ್ ವಾರ್ ಹೋಲಿಸಿದರೆ ಗಳಿಕೆಯಲ್ಲಿ ತೀರಾ ಕಡಿಮೆ ಅನಿಸುತ್ತದೆ. ದಿ ಕಾಶ್ಮೀರ್ ಫೈಲ್ಸ್  ಒಟ್ಟಾರೆ ಗಳಿಕೆ 250 ಕೋಟಿ ರೂಪಾಯಿ ದಾಟಿತ್ತು. ದಿ ವ್ಯಾಕ್ಸಿನ್ ವಾರ್ ಎಷ್ಟು ಗಳಿಸುತ್ತದೆ ಎನ್ನುವ ಕುತೂಹಲ ಮೂಡಿದೆ.

    ನೈಜ ಘಟನೆ ಆಧರಿಸಿದ ಸಿನಿಮಾ

    ದಿ ಕಾಶ್ಮೀರ್ ಫೈಲ್ಸ್ ನಲ್ಲಿ ಕಾಶ್ಮೀರಿ ಪಂಡಿತರ ಹತ್ಯೆಯ ಕುರಿತಾಗಿ ಕಥೆ ಹೇಳಿದ್ದ ನಿರ್ದೇಶಕರು ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ಏನನ್ನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಕ್ಯೂರಿಯಾಟಿಸಿ ಎಲ್ಲರದ್ದಾಗಿತ್ತು. ಅದಕ್ಕೀಗ ಉತ್ತರವೂ ಸಿಕ್ಕಿದೆ.

    ಈ ಕುರಿತಾಗಿ ಮಾಧ್ಯಮಗಳ ಜೊತೆ ಮಾತನಾಡಿದ ವಿವೇಕ್ ಅಗ್ನಿಹೋತ್ರಿ, ಕೋವಿಡ್‍ ದಿನಗಳ ಕಥೆ ಸಿನಿಮಾದಲ್ಲಿದೆ ಎಂದು ಹೇಳಲಾಗುತ್ತಿದ್ದು, ವ್ಯಾಕ್ಸಿನ್ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಅಲ್ಲದೇ, ನೂರಕ್ಕೂ ನೂರರಷ್ಟು ಸತ್ಯ ಘಟನೆಗಳನ್ನೇ ಆಧರಿಸಿ ತಯಾರಾದ ಚಿತ್ರವೆಂದಿದ್ದಾರೆ ಅಗ್ನಿಹೋತ್ರಿ. ಅಷ್ಟೂ ಕಥೆಯಲ್ಲಿ ನೈಜ ಘಟನೆಗಳನ್ನೇ ಆಧರಿಸಿ ಚಿತ್ರಕಥೆ ಹೆಣೆಲಾಗಿದೆ ಎನ್ನುವುದು ನಿರ್ದೇಶಕರ ಮಾತು.

    ಮೊನ್ನೆಯಷ್ಟೇ ತಮ್ಮ ಹೊಸ ಸಿನಿಮಾ ‘ದಿ ವ್ಯಾಕ್ಸಿನ್ ವಾರ್’ (The Vaccine War) ಅನ್ನು ಕನ್ನಡದ ಸಿಲೆಬ್ರಿಟಿಗಳಿಗೆ ಪ್ರದರ್ಶನ ಏರ್ಪಡಿಸಿದ್ದರು ವಿವೇಕ್ ಅಗ್ನಿಹೋತ್ರಿ. ಈ ಸಂದರ್ಭದಲ್ಲಿ ಸಹಜವಾಗಿಯೇ ಅವರಿಗೊಂದು ಪ್ರಶ್ನೆ ತೂರಿ ಬಂತು. ನೀವು ವಿವಾದಕ್ಕಾಗಿ (Controversy) ಸಿನಿಮಾ ಮಾಡುತ್ತೀರಿ ಎಂದು ಪ್ರಶ್ನೆ ಮುಂದಿಡಲಾಗಿತ್ತು.

    ಈ ಪ್ರಶ್ನೆಗೆ ಉತ್ತರಿಸಿದ ವಿವೇಕ್ ಅಗ್ನಿಹೋತ್ರಿ. ‘ನಾನು ವಿವಾದಕ್ಕಾಗಿ ಸಿನಿಮಾ ಮಾಡುವುದಿಲ್ಲ. ಹಾಗೆ ಮಾಡುವುದೇ ಆಗಿದ್ದರೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಪಾರ್ಟ್ 2 ಮಾಡುತ್ತಿದ್ದೆ. ಒಳ್ಳೆಯ ಉದ್ದೇಶ ಇಟ್ಟುಕೊಂಡು ಸಿನಿಮಾ ಮಾಡುವೆ. ಅದನ್ನು ವಿವಾದ ಮಾಡಲಾಗುತ್ತಿದೆ. ನನ್ನ ಉದ್ದೇಶ ನಿಜ ಸಂಗತಿಯನ್ನು ಹೇಳುವುದು ಅಷ್ಟೇ ಆಗಿದೆ’ ಎಂದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ದಿ ವ್ಯಾಕ್ಸಿನ್ ವಾರ್’ ನೂರಕ್ಕೆ ನೂರರಷ್ಟು ನೈಜ ಘಟನೆ ಆಧರಿಸಿದ ಸಿನಿಮಾ: ಅಗ್ನಿಹೋತ್ರಿ

    ‘ದಿ ವ್ಯಾಕ್ಸಿನ್ ವಾರ್’ ನೂರಕ್ಕೆ ನೂರರಷ್ಟು ನೈಜ ಘಟನೆ ಆಧರಿಸಿದ ಸಿನಿಮಾ: ಅಗ್ನಿಹೋತ್ರಿ

    ದಿ ಕಾಶ್ಮೀರ್ ಫೈಲ್ಸ್  (The Kashmir Files) ಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ  (Vivek Agnihotri) ದಿ ವ್ಯಾಕ್ಸಿನ್ ವಾರ್ ಸಿನಿಮಾ ಮಾಡಿದ್ದು, ಸದ್ಯದಲ್ಲೇ ಆ ಚಿತ್ರ ಬಿಡುಗಡೆ ಆಗುತ್ತಿದೆ. ಜೊತೆಗೆ ಈ ಸಿನಿಮಾ ಬಿಡುಗಡೆಗೂ ಮುನ್ನ ಸಾಕಷ್ಟು ಕುತೂಹಲ ಮೂಡಿಸಿದೆ. ದಿ ಕಾಶ್ಮೀರ್ ಫೈಲ್ಸ್ ನಲ್ಲಿ ಕಾಶ್ಮೀರಿ ಪಂಡಿತರ ಹತ್ಯೆಯ ಕುರಿತಾಗಿ ಕಥೆ ಹೇಳಿದ್ದ ನಿರ್ದೇಶಕರು ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ಏನನ್ನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಕ್ಯೂರಿಯಾಟಿಸಿ ಎಲ್ಲರದ್ದು.

    ಈ ಕುರಿತಾಗಿ ಮಾಧ್ಯಮಗಳ ಜೊತೆ ಮಾತನಾಡಿದ ವಿವೇಕ್ ಅಗ್ನಿಹೋತ್ರಿ, ಕೋವಿಡ್‍ ದಿನಗಳ ಕಥೆ ಸಿನಿಮಾದಲ್ಲಿದೆ ಎಂದು ಹೇಳಲಾಗುತ್ತಿದ್ದು, ವ್ಯಾಕ್ಸಿನ್ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಅಲ್ಲದೇ, ನೂರಕ್ಕೂ ನೂರರಷ್ಟು ಸತ್ಯ ಘಟನೆಗಳನ್ನೇ ಆಧರಿಸಿ ತಯಾರಾದ ಚಿತ್ರವೆಂದಿದ್ದಾರೆ ಅಗ್ನಿಹೋತ್ರಿ. ಅಷ್ಟೂ ಕಥೆಯಲ್ಲಿ ನೈಜ ಘಟನೆಗಳನ್ನೇ ಆಧರಿಸಿ ಚಿತ್ರಕಥೆ ಹೆಣೆಲಾಗಿದೆ ಎನ್ನುವುದು ನಿರ್ದೇಶಕರ ಮಾತು. ಇದನ್ನೂ ಓದಿ:ಹೆಣ್ಣು ಮಗುವಿಗೆ ತಂದೆಯಾದ ‘ಬಿಗ್ ಬಾಸ್’ ಖ್ಯಾತಿಯ ರಾಹುಲ್ ವೈದ್ಯ

    ಮೊನ್ನೆಯಷ್ಟೇ ತಮ್ಮ ಹೊಸ ಸಿನಿಮಾ ‘ದಿ ವ್ಯಾಕ್ಸಿನ್ ವಾರ್’ (The Vaccine War) ಅನ್ನು ಕನ್ನಡದ ಸಿಲೆಬ್ರಿಟಿಗಳಿಗೆ ಪ್ರದರ್ಶನ ಏರ್ಪಡಿಸಿದ್ದರು ವಿವೇಕ್ ಅಗ್ನಿಹೋತ್ರಿ. ಈ ಸಂದರ್ಭದಲ್ಲಿ ಸಹಜವಾಗಿಯೇ ಅವರಿಗೊಂದು ಪ್ರಶ್ನೆ ತೂರಿ ಬಂತು. ನೀವು ವಿವಾದಕ್ಕಾಗಿ (Controversy) ಸಿನಿಮಾ ಮಾಡುತ್ತೀರಿ ಎಂದು ಪ್ರಶ್ನೆ ಮುಂದಿಡಲಾಗಿತ್ತು.

    ಈ ಪ್ರಶ್ನೆಗೆ ಉತ್ತರಿಸಿದ ವಿವೇಕ್ ಅಗ್ನಿಹೋತ್ರಿ. ‘ನಾನು ವಿವಾದಕ್ಕಾಗಿ ಸಿನಿಮಾ ಮಾಡುವುದಿಲ್ಲ. ಹಾಗೆ ಮಾಡುವುದೇ ಆಗಿದ್ದರೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಪಾರ್ಟ್ 2 ಮಾಡುತ್ತಿದ್ದೆ. ಒಳ್ಳೆಯ ಉದ್ದೇಶ ಇಟ್ಟುಕೊಂಡು ಸಿನಿಮಾ ಮಾಡುವೆ. ಅದನ್ನು ವಿವಾದ ಮಾಡಲಾಗುತ್ತಿದೆ. ನನ್ನ ಉದ್ದೇಶ ನಿಜ ಸಂಗತಿಯನ್ನು ಹೇಳುವುದು ಅಷ್ಟೇ ಆಗಿದೆ’ ಎಂದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿವಾದ ಮಾಡುವುದಕ್ಕೆ ಸಿನಿಮಾ ಮಾಡಲ್ಲ : ನಿರ್ದೇಶಕ ವಿವೇಕ್ ಅಗ್ನಿಹೋತ್ರಿ

    ವಿವಾದ ಮಾಡುವುದಕ್ಕೆ ಸಿನಿಮಾ ಮಾಡಲ್ಲ : ನಿರ್ದೇಶಕ ವಿವೇಕ್ ಅಗ್ನಿಹೋತ್ರಿ

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಮೂಲಕ ಭಾರತೀಯ ಸಿನಿಮಾ ರಂಗದಲ್ಲೇ ಸಂಚಲನ ಸೃಷ್ಟಿ ಮಾಡಿದ್ದ ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಮೊನ್ನೆಯಷ್ಟೇ ತಮ್ಮ ಹೊಸ ಸಿನಿಮಾ ‘ದಿ ವ್ಯಾಕ್ಸಿನ್ ವಾರ್’ (The Vaccine War) ಅನ್ನು ಕನ್ನಡದ ಸಿಲೆಬ್ರಿಟಿಗಳಿಗೆ ಪ್ರದರ್ಶನ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಸಹಜವಾಗಿಯೇ ಅವರಿಗೊಂದು ಪ್ರಶ್ನೆ ತೂರಿ ಬಂತು. ನೀವು ವಿವಾದಕ್ಕಾಗಿ (Controversy) ಸಿನಿಮಾ ಮಾಡುತ್ತೀರಿ ಎಂದು ಪ್ರಶ್ನೆ ಮುಂದಿಡಲಾಗಿತ್ತು.

    ಈ ಪ್ರಶ್ನೆಗೆ ಉತ್ತರಿಸಿದ ವಿವೇಕ್ ಅಗ್ನಿಹೋತ್ರಿ. ‘ನಾನು ವಿವಾದಕ್ಕಾಗಿ ಸಿನಿಮಾ ಮಾಡುವುದಿಲ್ಲ. ಹಾಗೆ ಮಾಡುವುದೇ ಆಗಿದ್ದರೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಪಾರ್ಟ್ 2 ಮಾಡುತ್ತಿದ್ದೆ. ಒಳ್ಳೆಯ ಉದ್ದೇಶ ಇಟ್ಟುಕೊಂಡು ಸಿನಿಮಾ ಮಾಡುವೆ. ಅದನ್ನು ವಿವಾದ ಮಾಡಲಾಗುತ್ತಿದೆ. ನನ್ನ ಉದ್ದೇಶ ನಿಜ ಸಂಗತಿಯನ್ನು ಹೇಳುವುದು ಅಷ್ಟೇ ಆಗಿದೆ’ ಎಂದರು.

    ಇತ್ತೀಚೆಗಷ್ಟೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಬಿಡುಗಡೆಯಾದ ಟ್ರೈಲರ್ (Trailer) ನಲ್ಲಿ ಹಲವಾರು ವಿಷಯಗಳನ್ನು ಹೇಳಿದ್ದಾರೆ ನಿರ್ದೇಶಕರು. ಈ ಚಿತ್ರದಲ್ಲಿ ಕನ್ನಡದ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ (Saptami Gowda) ಕೂಡ ನಟಿಸಿದ್ದು, ಈ ಸಿನಿಮಾದಲ್ಲಿ ಅವರು ವಿಜ್ಞಾನಿ ಪಾತ್ರವನ್ನು ನಿರ್ವಹಿಸಿದ್ದಾರೆ.

    ಅಗಸ್ಟ್ ತಿಂಗಳಲ್ಲಿ ಟೀಸರ್ ರಿಲೀಸ್ ಆಗಿತ್ತು. ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಕುರಿತ ಪ್ರಯೋಗದ ದೃಶ್ಯದೊಂದಿಗೆ ಆರಂಭವಾಗುವ ಟೀಸರ್ ನಲ್ಲಿ ಭಾರತೀಯ ವಿಜ್ಞಾನಿಗಳು ವ್ಯಾಕ್ಸಿನ್‌ ಗಾಗಿ ಪಟ್ಟ ಶ್ರಮವನ್ನು ಟೀಸರ್ ನಲ್ಲಿ ಕಟ್ಟಿಕೊಡಲಾಗಿತ್ತು. ಅಲ್ಲದೇ ಕುತೂಹಲ ಮೂಡಿಸುವಂತಹ ಸಾಕಷ್ಟು ಸಂಗತಿಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿತ್ತು.

    ಕೋವಿಡ್ ವ್ಯಾಕ್ಸಿನ್ ಸುತ್ತ ಸಾಗುವ ಕಥೆಯಲ್ಲಿ ಪಲ್ಲವಿ ಜೋಶಿ, ಅನುಪಮ್ ಖೇರ್, ನಾನಾ ಪಾಟೇಕರ್ ಮತ್ತು ಕಾಂತಾರ ಸಿನಿಮಾ ಖ್ಯಾತಿಯ ಸಪ್ತಮಿ ಗೌಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕಾಶ್ಮೀರಿ ಫೈಲ್ಸ್​ ನಿರ್ಮಾಪಕ ಅಭಿಷೇಕ್​ ಅಗರ್ವಾಲ್ ಬಂಡವಾಳ ಹೂಡಿದ್ದು, ಐ ಆ್ಯಮ್ ಬುದ್ಧ ಸಹಯೋಗದಲ್ಲಿ ಪಲ್ಲವಿ ಜೋಶಿ ಕೂಡ ಸಿನಿಮಾಕ್ಕೆ ಹಣ ಹಾಕಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟ ನಾಸಿರುದ್ಧೀನ್ ಶಾ ಭಯೋತ್ಪಾದಕರ ಬೆಂಬಲಿಗ : ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಕಟುನುಡಿ

    ನಟ ನಾಸಿರುದ್ಧೀನ್ ಶಾ ಭಯೋತ್ಪಾದಕರ ಬೆಂಬಲಿಗ : ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಕಟುನುಡಿ

    ಬಾಲಿವುಡ್ ಖ್ಯಾತನಟ ನಾಸಿರುದ್ಧೀನ್ ಶಾ ವಿರುದ್ಧ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಕಟುನುಡಿಗಳನ್ನು ಆಡಿದ್ದಾರೆ. ಹಿರಿಯ ನಟನನ್ನು ಅಗ್ನಿಹೋತ್ರಿ ಭಯೋತ್ಪಾದಕರ ಬೆಂಬಲಿಗರಿಗೆ ಹೋಲಿಸಿದ್ದಾರೆ.  ತಮ್ಮ ಸಿನಿಮಾಗಳ ಬಗ್ಗೆ ನಾಸಿರುದ್ಧೀನ್ ಆಡಿದ ಮಾತುಗಳಿಗೆ ತಿರುಗೇಟು ನೀಡಿದ್ದಾರೆ.

    ಸನ್ನಿ ಡಿಯೋಲ್ ನಟನೆಯ ‘ಗದರ್ 2’ (Gadar 2) ಸಿನಿಮಾ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಜನಮನ್ನಣೆ ಗಳಿಸಿದೆ. ಹೀಗಿರುವಾಗ ಗದರ್ 2 ಮತ್ತು ದಿ ಕಾಶ್ಮೀರ್ ಫೈಲ್ಸ್ (The Kashmir Files) ನಂತಹ ಯಶಸ್ಸಿ ಚಿತ್ರಗಳ ಬಗ್ಗೆ ಬಾಲಿವುಡ್‌ನ ಖ್ಯಾತ ನಟ ನಸೀರುದ್ದೀನ್ ಶಾ (Naseeruddin Shah)  ಟೀಕಿಸಿದ್ದರು. ಈ ರೀತಿಯ ಸಿನಿಮಾಗಳು ಸಮಾಜಕ್ಕೆ ಹಾನಿಕರ ಎಂದು ಮಾತನಾಡಿದ್ದರು. ಇದನ್ನೂ ಓದಿ:‘ಬ್ಯಾಡ್ ಮ್ಯಾನರ್ಸ್’ ಚಿತ್ರಕ್ಕೆ ಮಾಸ್ ಹಾಡು ಬರೆದ ಜಯಂತ್ ಕಾಯ್ಕಿಣಿ

    ಇತ್ತೀಚಿನ ಸಂದರ್ಶನವೊಂದರಲ್ಲಿ ಸನ್ನಿ ಡಿಯೋಲ್ (Sunny Deol) ನಟನೆಯ ಗದರ್ 2 (Gadar 2) ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅತಿಯಾದ ದೇಶಪ್ರೇಮ ಅಪಾಯಕಾರಿ. ಸಿನಿಮಾದ ಜನಪ್ರಿಯತೆ ಅನ್ನೋದು ಇದರಿಂದಲೇ ಪ್ರೇರಿತಗೊಂಡಿದೆ. ಇಂದು ನಿಮ್ಮ ದೇಶವನ್ನು ಪ್ರೀತಿಸಿದರೆ ಸಾಕಾಗುವುದಿಲ್ಲ, ಕಾಲ್ಪನಿಕ ಶತ್ರುಗಳನ್ನು ಸೃಷ್ಟಿಸಿಕೊಳ್ಳಬೇಕು. ದಿ ಕೇರಳ ಸ್ಟೋರಿ, ಗದರ್ 2 ಚಿತ್ರಗಳು ಸಾಕಷ್ಟು ಹಾನಿಕರ. ನಾನು ಆ ಚಿತ್ರಗಳನ್ನು ನೋಡಿಲ್ಲ. ಆದರೆ, ಅವು ಯಾವ ವಿಚಾರದ ಬಗ್ಗೆ ಇದೆ ಅನ್ನೋದು ಗೊತ್ತಿದೆ ಎಂದಿದ್ದಾರೆ.

    ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಕೂಡ ಬಾಕ್ಸ್ ಆಫೀಸ್‌ನಲ್ಲಿ ಕಮಾಯಿ ಮಾಡಿತ್ತು. ಕೇರಳದ ಯುವತಿಯರನ್ನು ಮತಾಂತರ ಮಾಡಿ ಉಗ್ರ ಸಂಘಟನೆಗೆ ಅವರನ್ನು ಸೇರಿಸುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಇದು ನೈಜ ಘಟನೆ ಆಧಾರಿತ ಎಂದು ತಂಡ ಹೇಳಿಕೊಂಡಿತ್ತು. ಅಂದು ಚಿತ್ರವನ್ನು ನಸೀರುದ್ದೀನ್ ಶಾ (Naseeruddin Shah) ಟೀಕಿಸಿದ್ದರು.

    ‘ಗದರ್ 2’ ಚಿತ್ರದ ಕಥೆಯೂ ಭಾರತ – ಪಾಕಿಸ್ತಾನ ಕುರಿತು ಒಳಗೊಂಡ ಕಥೆಯಾಗಿದೆ. ಮಗನ ರಕ್ಷಣೆಗೆ ಪಾಕಿಸ್ತಾನಕ್ಕೆ ತೆರಳುವ ತಂದೆಯಾಗಿ ಸನ್ನಿ ಡಿಯೋಲ್ ಕಾಣಿಸಿಕೊಳ್ಳುತ್ತಾರೆ. ನಾಯಕಿಯಾಗಿ ಅಮೀಷಾ ಪಟೇಲ್ ನಟಿಸಿದ್ದಾರೆ. ಅಂದಹಾಗೆ ಇತ್ತೀಚಿಗೆ ಚಿತ್ರತಂಡ ಸಕ್ಸಸ್ ಪಾರ್ಟಿ ಕೂಡ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ದಿ ವ್ಯಾಕ್ಸಿನ್ ವಾರ್’ ಟ್ರೈಲರ್ ಔಟ್: ವಿಜ್ಞಾನಿಯಾದ ಕಾಂತಾರ ಚೆಲುವೆ

    ‘ದಿ ವ್ಯಾಕ್ಸಿನ್ ವಾರ್’ ಟ್ರೈಲರ್ ಔಟ್: ವಿಜ್ಞಾನಿಯಾದ ಕಾಂತಾರ ಚೆಲುವೆ

    ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ (The Vaccine War) ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಬಿಡುಗಡೆಯಾದ ಟ್ರೈಲರ್ (Trailer) ನಲ್ಲಿ ಹಲವಾರು ವಿಷಯಗಳನ್ನು ಹೇಳಿದ್ದಾರೆ ನಿರ್ದೇಶಕರು. ಈ ಚಿತ್ರದಲ್ಲಿ ಕನ್ನಡದ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ (Saptami Gowda) ಕೂಡ ನಟಿಸಿದ್ದು, ಈ ಸಿನಿಮಾದಲ್ಲಿ ಅವರು ವಿಜ್ಞಾನಿ ಪಾತ್ರವನ್ನು ನಿರ್ವಹಿಸಿದ್ದಾರೆ.

    ಅಗಸ್ಟ್ ತಿಂಗಳಲ್ಲಿ ಟೀಸರ್ ರಿಲೀಸ್ ಆಗಿತ್ತು. ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಕುರಿತ ಪ್ರಯೋಗದ ದೃಶ್ಯದೊಂದಿಗೆ ಆರಂಭವಾಗುವ ಟೀಸರ್ ನಲ್ಲಿ ಭಾರತೀಯ ವಿಜ್ಞಾನಿಗಳು ವ್ಯಾಕ್ಸಿನ್‌ ಗಾಗಿ ಪಟ್ಟ ಶ್ರಮವನ್ನು ಟೀಸರ್ ನಲ್ಲಿ ಕಟ್ಟಿಕೊಡಲಾಗಿತ್ತು. ಅಲ್ಲದೇ ಕುತೂಹಲ ಮೂಡಿಸುವಂತಹ ಸಾಕಷ್ಟು ಸಂಗತಿಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿತ್ತು. ಇದನ್ನೂ ಓದಿ:ಲೋಕೇಶ್ ಕನಗರಾಜ್ ಜೊತೆ ರಜನಿಗೆ ಮುನಿಸಿಲ್ಲ : ಹೊಸ ಸಿನಿಮಾ ಘೋಷಣೆ

    ಕೋವಿಡ್ ವ್ಯಾಕ್ಸಿನ್ ಸುತ್ತ ಸಾಗುವ ಕಥೆಯಲ್ಲಿ ಪಲ್ಲವಿ ಜೋಶಿ, ಅನುಪಮ್ ಖೇರ್, ನಾನಾ ಪಾಟೇಕರ್ ಮತ್ತು ಕಾಂತಾರ ಸಿನಿಮಾ ಖ್ಯಾತಿಯ ಸಪ್ತಮಿ ಗೌಡ (Saptami Gowda)ಪ್ರಮುಖ ಪಾತ್ರಗಳಲ್ಲಿದ್ದಾರೆ. ಕಾಶ್ಮೀರಿ ಫೈಲ್ಸ್​ ನಿರ್ಮಾಪಕ ಅಭಿಷೇಕ್​ ಅಗರ್ವಾಲ್ ಬಂಡವಾಳ ಹೂಡಿದ್ದು, ಐ ಆ್ಯಮ್ ಬುದ್ಧ ಸಹಯೋಗದಲ್ಲಿ ಪಲ್ಲವಿ ಜೋಶಿ ಕೂಡ ಸಿನಿಮಾಕ್ಕೆ ಹಣ ಹಾಕಿದ್ದಾರೆ.

    ಸೆಪ್ಟಂಬರ್​ 28ರಂದೇ ‘ದಿ ವ್ಯಾಕ್ಸಿನ್​ ವಾರ್’ ಚಿತ್ರ 11 ಭಾಷೆಯಲ್ಲಿ ತೆರೆ ಕಾಣಲಿದೆ. ಇದೇ ದಿನ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬೋದ ಸಲಾರ್ ಸಿನಿಮಾ ಕೂಡ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಆ ದಿನಾಂಕವನ್ನು ಮುಂದೂಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಪ್ತಮಿ ಗೌಡ ನಟನೆಯ ‘ವ್ಯಾಕ್ಸಿನ್ ವಾರ್’ ಚಿತ್ರದ ಟೀಸರ್ ರಿಲೀಸ್

    ಸಪ್ತಮಿ ಗೌಡ ನಟನೆಯ ‘ವ್ಯಾಕ್ಸಿನ್ ವಾರ್’ ಚಿತ್ರದ ಟೀಸರ್ ರಿಲೀಸ್

    ‘ದಿ ಕಾಶ್ಮೀರ್ ಫೈಲ್ಸ್’ ಬಳಿಕ ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನದಲ್ಲಿ ತಯಾರಾಗಿರುವ ‘ದಿ ವ್ಯಾಕ್ಸಿನ್ ವಾರ್’ (Vaccine War) ಸಿನಿಮಾದ ಟೀಸರ್ (Teaser) ಹಾಗೂ ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಸ್ವಾತಂತ್ರ್ಯ ದಿನದ ಅಂಗವಾಗಿ ರಿಲೀಸ್ ಆಗಿದ್ದ ಟೀಸರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ‌.

    ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಕುರಿತ ಪ್ರಯೋಗದ ದೃಶ್ಯದೊಂದಿಗೆ ಆರಂಭವಾಗುವ ಟೀಸರ್ ನಲ್ಲಿ ಭಾರತೀಯ ವಿಜ್ಞಾನಿಗಳು ವ್ಯಾಕ್ಸಿನ್‌ ಗಾಗಿ ಪಟ್ಟ ಶ್ರಮವನ್ನು ಟೀಸರ್ ನಲ್ಲಿ ಕಟ್ಟಿಕೊಡಲಾಗಿದೆ. ಅಲ್ಲದೇ ಕುತೂಹಲ ಮೂಡಿಸುವಂತಹ ಸಾಕಷ್ಟು ಸಂಗತಿಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಇದನ್ನೂ ಓದಿ:ಪಡ್ಡೆಹುಡುಗರ ರಾಣಿ ಶ್ರೀಲೀಲಾ ಅಭಿಮಾನಿಗಳಿಗೆ ಗುಡ್‌ ನ್ಯೂಸ್

    ಕೋವಿಡ್ ವ್ಯಾಕ್ಸಿನ್ ಸುತ್ತ ಸಾಗುವ ಕಥೆಯಲ್ಲಿ ಪಲ್ಲವಿ ಜೋಶಿ, ಅನುಪಮ್ ಖೇರ್, ನಾನಾ ಪಾಟೇಕರ್ ಮತ್ತು ಕಾಂತಾರ ಸಿನಿಮಾ ಖ್ಯಾತಿಯ ಸಪ್ತಮಿ ಗೌಡ (Saptami Gowda)ಪ್ರಮುಖ ಪಾತ್ರಗಳಲ್ಲಿದ್ದಾರೆ. ಕಾಶ್ಮೀರಿ ಫೈಲ್ಸ್​ ನಿರ್ಮಾಪಕ ಅಭಿಷೇಕ್​ ಅಗರ್ವಾಲ್ ಬಂಡವಾಳ ಹೂಡಿದ್ದು, ಐ ಆ್ಯಮ್ ಬುದ್ಧ ಸಹಯೋಗದಲ್ಲಿ ಪಲ್ಲವಿ ಜೋಶಿ ಕೂಡ ಸಿನಿಮಾಕ್ಕೆ ಹಣ ಹಾಕಿದ್ದಾರೆ.

    ಸೆಪ್ಟಂಬರ್​ 28ರಂದೇ ‘ದಿ ವ್ಯಾಕ್ಸಿನ್​ ವಾರ್’ ಚಿತ್ರ 11 ಭಾಷೆಯಲ್ಲಿ ತೆರೆ ಕಾಣಲಿದೆ. ಇದೇ ದಿನ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬೋದ ಸಲಾರ್ ಸಿನಿಮಾ ಕೂಡ ಬಿಡುಗಡೆಯಾಗಲಿದೆ. ಒಂದೇ ದಿನಕ್ಕೆ ನಿರೀಕ್ಷೆ ಮೂಡಿಸುವಂತಹ ಎರಡು ಚಿತ್ರಗಳು ರಿಲೀಸ್ ಆಗುತ್ತಿದ್ದು, ಪ್ರೇಕ್ಷಕರು ಕಾಯುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಭಾಸ್ ಮೆಗಾಸ್ಟಾರ್, ಹೋಲಿಕೆ ಮಾಡಬೇಡಿ ಎಂದು ವಿನಂತಿಸಿದ ವಿವೇಕ್ ಅಗ್ನಿಹೋತ್ರಿ

    ಪ್ರಭಾಸ್ ಮೆಗಾಸ್ಟಾರ್, ಹೋಲಿಕೆ ಮಾಡಬೇಡಿ ಎಂದು ವಿನಂತಿಸಿದ ವಿವೇಕ್ ಅಗ್ನಿಹೋತ್ರಿ

    ತೆಲುಗು ನಟ ಪ್ರಭಾಸ್ (Prabhas) ವಿರುದ್ಧ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರಂತರ ದಾಳಿ ಮಾಡುತ್ತಿದ್ದರು. ವಿವೇಕ್ ಮಾತುಗಳನ್ನು ಪ್ರಭಾಸ್ ಅಭಿಮಾನಿಗಳು ಶಾಂತ ಚಿತ್ತದಿಂದಲೇ ಸ್ವೀಕರಿಸಿದ್ದರು. ಪ್ರಭಾಸ್ ಸಿನಿಮಾ ವಿರುದ್ಧ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ವ್ಯಾಕ್ಸಿನ್ ವಾರ್ ಸಿನಿಮಾ ರಿಲೀಸ್ ಆಗಲಿದೆ ಎನ್ನುವ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಪ್ರಭಾಸ್ ಅಭಿಮಾನಿಗಳು ತೊಡೆತಟ್ಟಿದರು.

    ವಿವೇಕ್ ಅಗ್ನಿಹೋತ್ರಿ ವಿರುದ್ಧ ಪ್ರಭಾಸ್ ಅಭಿಮಾನಿಗಳು ತಿರುಗಿ ಬೀಳುತ್ತಿದ್ದಂತೆಯೇ ವಿವೇಕ್ ಎಚ್ಚೆತ್ತುಕೊಂಡಿದ್ದಾರೆ. ‘ದಯವಿಟ್ಟು ಈ ವಿಚಾರದಲ್ಲಿ ನನ್ನನ್ನು ಬಿಟ್ಟುಬಿಡಿ. ಪ್ರಭಾಸ್ ಸಿನಿಮಾ ವಿರುದ್ಧ ನನ್ನ ಸಿನಿಮಾ ರಿಲೀಸ್ ಮಾಡುತ್ತೇನೆ ಎಂದು ನಾನು ಹೇಳಲೇ ಇಲ್ಲ. ಅದು ಸುಳ್ಳು ಸುದ್ದಿ. ಪ್ರಭಾಸ್ ದೊಡ್ಡ ನಟರು. ಅವರು ದೊಡ್ಡ ದೊಡ್ಡ ಸಿನಿಮಾಗಳನ್ನು ಮಾಡುತ್ತಾರೆ. ನನ್ನ ಸಿನಿಮಾಗಳಲ್ಲಿ ಸ್ಟಾರ್ ಇರುವುದಿಲ್ಲ. ಬಜೆಟ್ ಕೂಡ ಕಡಿಮೆ. ಈ ವಿಚಾರದಲ್ಲಿ ನನ್ನನ್ನು ಎಳೆಯಬೇಡಿ’ ಎಂದು ಸೋಷಿಯಲ್ ಮೀಡಿಯಾದಲ್ಲಿ ವಿವೇಕ್ ಬರೆದುಕೊಂಡಿದ್ದಾರೆ.

    ದಿ ಕಾಶ್ಮೀರ್ ಫೈಲ್ಸ್ ಕುರಿತಾಗಿ ಮತ್ತೊಂದು ಡಾಕ್ಯುಮೆಂಟರಿ ಮಾಡಿ, ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) , ಆ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ನೆಟ್ಟಿಗರೊಬ್ಬರು ‘ನಿಮಗೆ ತಾಕತ್ತಿದ್ದರೆ ಮಣಿಪುರ ಫೈಲ್ಸ್ (Manipur Files) ಮಾಡಿ’ ಎಂದು ಸವಾಲು ಹಾಕಿದ್ದಾರೆ. ಆ ಸವಾಲಿನ ಪೋಸ್ಟ್ ಗೆ ವಿವೇಕ್ ಉತ್ತರವನ್ನೂ ನೀಡಿದ್ದಾರೆ. ಇದನ್ನೂ ಓದಿ:‘ಬಿಗ್ ಬಾಸ್ ಶೋ’ ಸೆನ್ಸಾರ್ ಕುರಿತು ಹೈಕೋರ್ಟ್ ಕಳವಳ

    kashmir

    ‘ನನ್ನ ಮೇಲೆ ವಿಶ್ವಾಸವಿಟ್ಟಿದ್ದಕ್ಕೆ ಧನ್ಯವಾದಗಳು. ಎಲ್ಲವನ್ನೂ ನಾನೇ ಏಕೆ ಮಾಡಬೇಕು ಎಂದು ಬಯಸುತ್ತೀರಿ? ಚಿತ್ರೋದ್ಯಮದಲ್ಲಿ ಬೇರೆ ಯಾರೂ ಇಲ್ಲವೆ?’ ಎಂದು ಪ್ರಶ್ನೆ ಮಾಡಿದ್ದಾರೆ. ಎಲ್ಲವನ್ನೂ ನಾನೇ ಮಾಡಬೇಕು ಎಂದು ಕೇಳುವುದು ತಪ್ಪು ಎನ್ನುವಂತೆ ಅವರು ನೆಟ್ಟಿಗರಿಗೆ ಉತ್ತರ ನೀಡಿದ್ದಾರೆ.

    ಬಾಲಿವುಡ್‌ನಲ್ಲಿ (Bollywood) ಹೊಸ ಅಲೆ ಸೃಷ್ಟಿಸಿದ ಸಿನಿಮಾ ಅಂದರೆ ಅದು ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ. 2022ರಲ್ಲಿ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ವಿವೇಕ್ ಅಗ್ನಿಹೋತ್ರಿ ನಿರ್ದೇಶದ ಸಿನಿಮಾ ಸೌಂಡ್ ಮಾಡಿತ್ತು. ಈ ಚಿತ್ರದ ನಿರ್ದೇಶಕ ಫ್ಯಾನ್ಸ್ ಮತ್ತೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈ ಬಾರಿ ಅವರು ಮತ್ತೊಂದು ‘ದಿ ಕಾಶ್ಮೀರ್ ಫೈಲ್ಸ್’ ಜೊತೆ ಬರೋದಾಗಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇನ್ನೂ ಎಲ್ಲೂ ಹೇಳಿರದ ಸಾಕಷ್ಟು ವಿಚಾರಗಳನ್ನ ಒಟಿಟಿ ಮೂಲಕ ತೋರಿಸಲು ನಿರ್ದೇಶಕರು ಮುಂದಾಗಿದ್ದಾರೆ.