Tag: ವಿವೇಕ್

  • ನಾನು, ಸೌಜನ್ಯ ಲಿವಿಂಗ್ ಟುಗೆದರ್‌ನಲ್ಲಿ ಇರಲಿಲ್ಲ: ವಿವೇಕ್

    ನಾನು, ಸೌಜನ್ಯ ಲಿವಿಂಗ್ ಟುಗೆದರ್‌ನಲ್ಲಿ ಇರಲಿಲ್ಲ: ವಿವೇಕ್

    ಬೆಂಗಳೂರು: ಕಿರುತೆರೆ ನಟಿ ಸೌಜನ್ಯ ಅಲಿಯಾಸ್ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸವಿ ಮಾದಪ್ಪ ತಂದೆ ನಟ ವಿವೇಕ್ ವಿರುದ್ಧ ದೂರು ದಾಖಲಿಸಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿವೇಕ್, ಸಾವಿಗೆ ಕಾರಣ ಏನು ಅನ್ನೋದು ಗೊತ್ತಿಲ್ಲ. ನಾನು ಪೊಸ್ಟ್ ಮಾರ್ಟಂ ರಿಪೋರ್ಟ್ ಗಾಗಿ ಕಾಯುತ್ತಿದ್ದೇನೆ. ತನಿಖೆ ಬಳಿಕ ಸಾವಿನ ಕಾರಣ ಗೊತ್ತಾಗುತ್ತೆ. ನಾನು ಅದಕ್ಕೆ ಕಾಯುತ್ತಿದ್ದೇನೆ. ಆಕೆಯ ಹೆತ್ತವರು ಮಾತನಾಡುತ್ತಿದ್ದಾರೆ ಮಾತಾಡಲಿ ಎಂದರು. ಇದನ್ನೂ ಓದಿ: ಚಪಾತಿ, ಪಲ್ಯ ಮಾಡಿದ್ದೆ, ತಿನ್ನೋಕೆ ಮಗಳೇ ಬರಲಿಲ್ಲ- ನಟಿ ಸೌಜನ್ಯ ತಾಯಿ ಕಣ್ಣೀರು

    ನಾನು ಏನು ಮಾತನಾಡುವುದಿಲ್ಲ. ಆಕೆ ಒಂದು ವರ್ಷದಿಂದ ಪರಿಚಯ. ಮ್ಯೂಚುವಲ್ ಫ್ರೆಂಡ್‍ನಿಂದ ಪರಿಚಯವಾಗಿದ್ದೇವೆ. ಆಕೆಗೆ ಬೇಜಾರಾದಾಗ ನನಗೆ ಆಗಾಗ ಸಿಗುತ್ತಿದ್ದಳು. ತುಂಬಾ ಇನೋಸೆಂಟ್, ಒಬಿಡಿಯಂಟ್ ಆಗಿದ್ದಳು. ಸಾವಿಗೆ ಕಾರಣ ಏನು ಅನ್ನೋದು ಗೊತ್ತಿಲ್ಲ. ವಿವೇಕ್ ಆಗಿರುವ ನಾನೇ ಹೇಳುತ್ತಿದ್ದೇನೆ. ನಡೆದಿರುವ ವಿಚಾರ ನನಗೆ ಗೊತ್ತಿಲ್ಲ. ಅಪ್ಸೆಟ್ ಆಗಿದ್ಲು ನಾನು ಕೇಳಿದ್ದೆ ಅಷ್ಟೇ. ಪೊಲೀಸರು ತನಿಖೆ ನಡೆಸಿದ ಬಳಿಕ ವಿಚಾರ ಗೊತ್ತಾಗುತ್ತೆ ಕಾಯಬೇಕು ಎಂದು ತಿಳಿಸಿದರು.

    ಸೌಜನ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಂದೆ ನಟ ವಿವೇಕ್ ಹಾಗೂ ಸವಿ ಮಾದಪ್ಪ ಪಿ.ಎ ವಿರುದ್ಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ನನ್ನ ಮಗಳ ಸಾವಿಗೆ ತೆಲುಗು ನಟ ಕಾರಣ- ಸೌಜನ್ಯ ತಂದೆ ದೂರು

    ಕನ್ನಡ ಕಿರುತೆರೆಗಳಲ್ಲಿ ನಟಿಸುತ್ತಿದ್ದ ನಟಿ ಸೌಜನ್ಯ(25) ಇಂದು ಬೆಂಗಳೂರಿನ ದೊಡ್ಡಬೆಲೆ ಗ್ರಾಮದ ಕುಂಬಳಗೋಡು ಅಪಾರ್ಟ್‍ಮೆಂಟ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸೌಜನ್ಯ ಮೂಲತಃ ಕೊಡಗು ಜಿಲ್ಲೆಯ ಕುಶಾಲನಗರದವರಾಗಿದ್ದು, ಕನ್ನಡದ ಚೌಕಟ್ಟು, ಫನ್ ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  • ಲವ್ ಯೂ ರಚ್ಚು ದುರಂತ – ಜೆಸಿಬಿ ಡ್ರೈವರ್ ಸೇರಿ ಐವರ ಮೇಲೆ FIR

    ಲವ್ ಯೂ ರಚ್ಚು ದುರಂತ – ಜೆಸಿಬಿ ಡ್ರೈವರ್ ಸೇರಿ ಐವರ ಮೇಲೆ FIR

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಂದು ದೊಡ್ಡ ಅವಘಡ ಸಂಭವಿಸಿದೆ. 2016ರಲ್ಲಿ ‘ಮಾಸ್ತಿ ಗುಡಿ’ ಸಿನಿಮಾದ ವೇಳೆ ಫೈಟರ್ ಅನಿಲ್, ಉದಯ್ ಸಾವನ್ನಪ್ಪಿದ್ದರು. ಇದೀಗ ಅಂತದ್ದೇ ಇನ್ನೊಂದು ದುರ್ಘಟನೆ ಸಂಭವಿಸಿದೆ. ಘಟನೆ ಸಂಬಂಧ ಇದೀಗ ಐವರ ವಿರುದ್ಧ ಎಫ್‍ಐಆರ್ ದಾಖಲು ಮಾಡಲಾಗಿದೆ.

    ನಿರ್ದೇಶಕ ಶಂಕರ್ ರಾಜ್, ಫೈಟ್ ಮಾಸ್ಟರ್ ವಿನೋದ್ ಹಾಗೂ ಜೆಸಿಬಿ ಡ್ರೈವರ್ ಸೇರಿ ಐವರ ಮೇಲೆ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ‘ಲವ್ ಯೂ ರಚ್ಚು’ ಶೂಟಿಂಗ್ ವೇಳೆ ಫೈಟರ್ ವಿವೇಕ್ ಹೈ ಟೆನ್ಷನ್ ವೈಯರ್ ತಗುಲಿ ಮೃತಪಟ್ಟಿದ್ದರು. ಈ ಸಂಬಂಧ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿರುವ ಪೊಲೀಸರು ಇದೀಗ ಐವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಫೈಟ್ ಮಾಸ್ಟರ್ ದು ಯಾವುದೇ ತಪ್ಪಿಲ್ಲ: ಗಾಯಾಳು ರಂಜಿತ್

    ಘಟನೆ ಸಂಬಂಧಿಸಿದಂತೆ ಸಾಹಸ ನಿರ್ದೇಶಕ ವಿನೋದ್, ಸಹ ನಿರ್ದೇಶಕ ಶಂಕರ್‍ರಾಜ್, ಜಮೀನು ಮಾಲೀಕ ಪುಟ್ಟರಾಜು, ಕ್ರೇನ್ ಚಾಲಕ ಮುನಿಯಪ್ಪ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನಿರ್ಮಾಪಕ ಗುರುದೇಶಪಾಂಡೆಗಾಗಿ ಶೋಧ ಮುಂದುವರಿದಿದೆ. ಈ ಮಧ್ಯೆ ಚಿತ್ರೀಕರಣ ನಡೆಸಲು ಪೊಲೀಸರ ಅನುಮತಿ ಪಡೆದಿರಲಿಲ್ಲ ಅಂತ ರಾಮನಗರ ಎಸ್‍ಪಿ ಗಿರೀಶ್ ಹೇಳಿದ್ದಾರೆ. ಇದನ್ನೂ ಓದಿ: ಲವ್ ಯು ರಚ್ಚು ಶೂಟಿಂಗ್ ದುರಂತ – ನಿರ್ದೇಶಕ ಸೇರಿ ನಾಲ್ವರು ಪೊಲೀಸ್ ವಶಕ್ಕೆ

    ಅವಘಡದಲ್ಲಿ ಇನ್ನೊಬ್ಬ ಫೈಟರ್ ರಂಜಿತ್ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಶೂಟಿಂಗ್ ವೇಳೆ ಫೈಟರ್ ವಿವೇಕ್ ಧರಿಸಿದ್ದ ಲೋಹದ ಹಗ್ಗ, ಹೈಟೆನ್ಶನ್ ವೈರ್ ತಗುಲಿ ಈ ದುರಂತ ಸಂಭವಿಸಿದೆ. ಗುರು ದೇಶಪಾಂಡೆ ನಿರ್ಮಾಣದ ಈ ಸಿನಿಮಾಗೆ ಫೈಟ್ ಮಾಸ್ಟರ್ ವಿನೋದ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದರು. ರಾಜರಾಜೇಶ್ವರಿ ಆಸ್ಪತ್ರೆ ಬಳಿ ಮೃತ ವಿವೇಕ್ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.  ಇದನ್ನೂ ಓದಿ: ಹೈಟೆನ್ಷನ್ ವೈರ್ ತಗುಲಿದ್ದರಿಂದ ಫೈಟರ್ ಸಾವಾಯ್ತು: ನಟ ಅಜಯ್ ರಾವ್

  • ಫೈಟ್ ಮಾಸ್ಟರ್ ದು ಯಾವುದೇ ತಪ್ಪಿಲ್ಲ: ಗಾಯಾಳು ರಂಜಿತ್

    ಫೈಟ್ ಮಾಸ್ಟರ್ ದು ಯಾವುದೇ ತಪ್ಪಿಲ್ಲ: ಗಾಯಾಳು ರಂಜಿತ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಜಯ್ ರಾವ್ ಮತ್ತು ರಚಿತಾರಾಮ್ ಅಭಿನಯದ ‘ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ನಡೆದ ಘಟನೆಗೆ ಮತ್ತೊಂದು ತಿರುವು ಸಿಕ್ಕಿದೆ.

    ಫೈಟರ್ ವಿವೇಕ್ ಜೊತೆಗೆ ಗಾಯಗೊಂಡು ಆಸ್ಪತ್ರೆಯಲ್ಲಿರುವ ರಂಜಿತ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಶೂಟಿಂಗ್ ವೇಳೆ ದುರಂತಕ್ಕೆ ಫೈಟ್ ಮಾಸ್ಟರ್ ಕಾರಣವಲ್ಲ, ಕ್ರೈನ್ ಡ್ರೈವರ್ ಮಾಡಿದ ಎಡವಟ್ಟಿನಿಂದಲೇ ಈ ದುರ್ಘಟನೆ ನಡೆದಿದೆ. ಬೆಳಗ್ಗೆ ಶೂಟಿಂಗ್ ಪ್ರಾರಂಭ ಮಾಡಿದಾಗಲೇ ಕ್ರೈನ್ ಡ್ರೈವರ್ ಮಾದೇವ್ ಕ್ರೈನ್ ಮರಕ್ಕೆ ಗುದ್ದಿದ್ದ. ಆಗ ನಾನು ಸೇರಿದಂತೆ ಅವನಿಗೆ ಸ್ವಲ್ಪ ತಿಳಿ ಹುಷಾರಪ್ಪ ಅಂತ ಹೇಳಿದ್ವಿ ಎಂದಿದ್ದಾರೆ.

    ಬಳಿಕ ಶೂಟಿಂಗ್ ಸ್ಟಾರ್ಟ್ ಮಾಡಿದ್ವಿ. ಆ ವೇಳೆ ಕ್ರೈನ್ ಹೈಟೆನ್ಷನ್ ವೈಯರ್ ಗೆ  ಟಚ್ ಮಾಡಿದ್ದ. ಆಗ ನನಗೆ ಮತ್ತು ವಿವೇಕ್‍ಗೆ ಕರೆಂಟ್ ಶಾಕ್ ಹೊಡೆದಿತ್ತು. ವಿವೇಕ್ ಗಂಭೀರವಾಗಿ ಗಾಯಗೊಂಡ ಕಣ್ಣ ಮುಂದೆಯೇ ಸಾವನ್ನಪ್ಪಿದ. ಶೂಟಿಂಗ್ ನಲ್ಲಿ ಎಲ್ಲರು ಇದ್ದರೂ, ಆದರೆ ಯಾರಿಗೂ ಏನು ಮಾಡಬೇಕು ಎಂಬುದು ತಿಳಿಯಲಿಲ್ಲ. ಯಾರೂ ಹೆಲ್ಪ್ ಕೂಡ ಮಾಡುವುದಕ್ಕೆ ಮುಂದಾಗಲಿಲ್ಲ. ಕ್ಷಣಮಾತ್ರದಲ್ಲೇ ಎಲ್ಲವೂ ನಡೆಯೋಯ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ದುರಂತ – ಹೈಟೆನ್ಷನ್ ವೈರ್ ತಗುಲಿ ಫೈಟರ್ ಸಾವು

    ಈ ಘಟನೆಗೆ ಫೈಟ್ ಮಾಸ್ಟರ್ ಕಾರಣ ಅಂತ ಹೇಳುವುದು ತಪ್ಪಾಗುತ್ತದೆ. ಅವರು ತುಂಬಾ ಕೇರ್ ಫುಲ್ ಆಗಿ ಕೆಲಸ ಮಾಡಿಸಿದ್ದರು. ಫೈಟ್ ಮಾಸ್ಟರ್ ವಿನೋದ್‍ಗೂ ಈ ಸಾವಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ರಂಜಿತ್ ಆರ್.ಆರ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.

    ಘಟನೆ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಇದನ್ನೂ ಓದಿ:ಲವ್ ಯು ರಚ್ಚು ಶೂಟಿಂಗ್ ದುರಂತ – ನಿರ್ದೇಶಕ ಸೇರಿ ನಾಲ್ವರು ಪೊಲೀಸ್ ವಶಕ್ಕೆ

  • ತಮಿಳಿನ ಹಾಸ್ಯ ನಟ ಪಾಂಡು ಕೊರೊನಾಗೆ ಬಲಿ

    ತಮಿಳಿನ ಹಾಸ್ಯ ನಟ ಪಾಂಡು ಕೊರೊನಾಗೆ ಬಲಿ

    ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ಹಾಸ್ಯ ನಟ ಪಾಂಡು ಕೊರೊನಾದಿಂದಾಗಿ ಚೆನ್ನೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.

    ಪಾಂಡು ಅವರಿಗೆ 74 ವರ್ಷ ವಯಸ್ಸಾಗಿತ್ತು. ಕೆಲ ದಿನಗಳ ಹಿಂದೆ ಪಾಂಡು ಮತ್ತು ಪತ್ನಿ ಕುಮುದಾ ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಬಳಿಕ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದಾರೆ ಎಂದು ವರದಿಯಾಗಿದೆ.

    ಪಾಂಡು ಅವರು ತಮಿಳಿನಲ್ಲಿ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದರು. ಆದರೆ ಇಂದು ಕೊರೊನಾಗೆ ಬಲಿಯಾಗಿದ್ದಾರೆ. ಇವರು ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ. ಪತ್ನಿ ಕುಮುದಾ ಅವರು ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆ ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ ಕೊರೊನಾಗೆ ಬಲಿಯಾಗಿದ್ದರು. ಆ ಬಳಿಕ ಇದೀಗ ಪಾಂಡು  ಮೃತಪಟ್ಟಿದ್ದಾರೆ. ಇದರಿಂದ ತಮಿಳು ಚಿತ್ರರಂಗಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ.

  • ತಮಿಳು ಹಾಸ್ಯ ನಟ ವಿವೇಕ್‍ಗೆ ಹೃದಯಾಘಾತ – ಆರೋಗ್ಯ ಸ್ಥಿತಿ ಗಂಭೀರ

    ತಮಿಳು ಹಾಸ್ಯ ನಟ ವಿವೇಕ್‍ಗೆ ಹೃದಯಾಘಾತ – ಆರೋಗ್ಯ ಸ್ಥಿತಿ ಗಂಭೀರ

    ಚೆನ್ನೈ: ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ವಿವೇಕ್ ಅವರಿಗೆ ಇಂದು ಎದೆನೋವು ಕಾಣಿಸಿಕೊಂಡ ಪರಿಣಾಮ ಚೆನ್ನೈನ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ವೈದ್ಯರು ಆರೋಗ್ಯ ಸ್ಥಿತಿ ಪರೀಕ್ಷಿಸಿದಾಗ ಹೃದಯಾಘಾತವಾಗಿರುವುದು ತಿಳಿದು ಬಂದಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಸ್ಥಳಿಯ ಮಾಧ್ಯಮವೊಂದು ವರದಿ ಮಾಡಿದೆ.

    ವೈದ್ಯರು ಆರೋಗ್ಯ ಪರೀಕ್ಷಿಸಿದ ನಂತರ ವಿವೇಕ್ ಅವರು ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೃದ್ರೋಗ ತಜ್ಞರ ತಂಡ ಅವರ ಆರೋಗ್ಯವನ್ನು ನಿರಂತರವಾಗಿ ಗಮನಿಸುತ್ತಿದೆ.

    ವಿವೇಕ್ ಏಪ್ರಿಲ್ 15 ರಂದು ಅವರ ಸ್ನೇಹಿತನೊಂದಿಗೆ ಚೆನ್ನೈನ ಒಮಾಂಡುರಾರ್ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ಲಸಿಕೆ ಪಡೆದಿದ್ದರು. ಲಸಿಕೆ ಪಡೆದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ವಿವೇಕ್ ಅವರು, ಎಲ್ಲರೂ ಕೂಡ ಕೋವಿಡ್ -19 ಲಸಿಕೆಗಳನ್ನು ಪಡೆಯುವಂತೆ ಮನವಿ ಮಾಡಿದ್ದರು. ಹಾಗೆ ಕೊರೊನಾದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರತಿಯೊಬ್ಬರು ಸಾಮಾಜಿಕ ಅಂತರ ಪಾಲಿಸಬೇಕೆಂದು ಜನರಿಗೆ ಕಿವಿಮಾತು ಹೇಳಿದ್ದರು.

    ವಿವೇಕ್ ಅವರು ತಮಿಳಿನ ಬಹುಬೇಡಿಕೆಯ ಹಾಸ್ಯ ನಟನಾಗಿದ್ದು, ಈಗಾಗಲೇ 220 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ವಿವೇಕ್ ಸಿನಿಮಾರಂಗಕ್ಕೆ ನೀಡಿದ ಕೊಡುಗೆಗಾಗಿ ಭಾರತ ಸರ್ಕಾರ 2009 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಇದೀಗ ಇಂಡಿಯನ್-2 ಸಿನಿಮಾದಲ್ಲಿ ನಟ ಕಮಲ್ ಹಾಸನ್ ಜೊತೆ ನಟಿಸುತ್ತಿದ್ದು, ಸದ್ಯ ಚಿತ್ರೀಕರಣ ಸ್ಥಗಿತಗೊಂಡಿದೆ.