Tag: ವಿವಿಪುರಂ

  • ಕಳ್ಳತನಕ್ಕಿಳಿದು ಸಿಕ್ಕಿಬಿದ್ದ ಸೈಕಲ್‍ನಲ್ಲೇ ದೇಶ ಸುತ್ತಿ HIV ಬಗ್ಗೆ ಜಾಗೃತಿ ಮೂಡಿಸ್ತಿದ್ದ ವ್ಯಕ್ತಿ

    ಕಳ್ಳತನಕ್ಕಿಳಿದು ಸಿಕ್ಕಿಬಿದ್ದ ಸೈಕಲ್‍ನಲ್ಲೇ ದೇಶ ಸುತ್ತಿ HIV ಬಗ್ಗೆ ಜಾಗೃತಿ ಮೂಡಿಸ್ತಿದ್ದ ವ್ಯಕ್ತಿ

    ಬೆಂಗಳೂರು: ಸೈಕಲ್‍ನಲ್ಲೇ ದೇಶ ಸುತ್ತಿ ಹೆಚ್‍ಐವಿ (HIV Awareness) ಬಗ್ಗೆ ಜಾಗೃತಿ ಮೂಡಿಸ್ತಾ ಇದ್ದ ವ್ಯಕ್ತಿ ಈಗ ಕಳ್ಳತನದ ಹಾದಿ ಹಿಡಿದಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ಹೌದು ಒಂದು ಕಾಲದಲ್ಲಿ ಗಿನ್ನೀಸ್ ದಾಖಲೆಯ ವೀರ ಕಳ್ಳತನ ಕೇಸ್‍ನಲ್ಲಿ ಅಂದರ್ ಆಗಿದ್ದಾನೆ. ವಿವಿ ಪುರಂ ಪೊಲೀಸರು (VV Puram Police) ವಾಸವಿ ದೇವಸ್ಥಾನದ ವಿಗ್ರಹ ಕಳವು ಆರೋಪದಲ್ಲಿ ರವಿ ಎಂಬಾತನ ಬಂಧಿಸಿದ್ದು, ಈತ 2000 ದಿಂದ 2006ರವೆರಗೂ ಸೈಕಲ್‍ನಲ್ಲೇ ದೇಶ ಸುತ್ತಿ ಹೆಚ್‍ಐವಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದ. ಇದಕ್ಕೆ ಪ್ರತಿಯಾಗಿ 2016ರಲ್ಲಿ ಮಹಾರಾಷ್ಟ್ರ (Maharastra Govt)  ಸರ್ಕಾರ ಈತನಿಗೆ ಬೈಕೊಂದನ್ನು ಗಿಫ್ಟ್ ಆಗಿ ನೀಡಿತ್ತು.

    ಒಟ್ಟು 33 ರಾಜ್ಯಗಳನ್ನು ಸುತ್ತಿ ಗಿನ್ನೀಸ್ ದಾಖಲೆ ಮಾಡಿದ್ದ ರವಿ ಈಗ ಕಳ್ಳತನದ ಕೇಸ್‍ನಲ್ಲಿ ಅಂದರ್ ಆಗಿದ್ದಾನೆ. ದೇವರ ಬೆಳ್ಳಿ ವಿಗ್ರಹ ಕದ್ದು ಮಾರಾಟಕ್ಕೆ ಯತ್ನಿಸಿದ್ದಾನೆ. ದೇವಸ್ಥಾನದಲ್ಲಿ ವಿಗ್ರಹ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸುಮಾರು 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ಬಳಿಕ ರವಿ ಅರೆಸ್ಟ್ ಆಗಿದ್ದಾನೆ. ಇದನ್ನೂ ಓದಿ: ಅನ್ನಭಾಗ್ಯದ ಹಣ ವರ್ಗಾವಣೆ – ಷರತ್ತು ವಿಧಿಸಿದ ಸರ್ಕಾರ

    ಕಳವು ಸಂಬಂಧ ದೇವಸ್ಥಾನದ ಆಡಳಿತ ಮಂಡಳಿ ವಿವಿಪುರಂ ಪೊಲೀಸ್ ಠಾಣೆಯಲ್ಲಿ (VV Puram Police Station) ಕೇಸ್ ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ತೀವ್ರ ಶೋಧ ನಡೆಸಿ ರವಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಜೀವನ ನಡೆಸಲು ಕಷ್ಟ ಅಂತ ವಿಗ್ರಹ ಕದ್ದೆ ಎಂದಿದ್ದಾನೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಸಿಬಿ ದಾಳಿ- ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದ ಕಂಪ್ಯೂಟರ್ ಆಪರೇಟರ್

    ಎಸಿಬಿ ದಾಳಿ- ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದ ಕಂಪ್ಯೂಟರ್ ಆಪರೇಟರ್

    ಚಿತ್ರದುರ್ಗ: ಕಂಪ್ಯೂಟರ್ ಆಪರೇಟರ್ ಲಂಚ ಸ್ವೀಕರಿಸುವ ವೇಳೆ ಎಸಿಬಿ ಕೈಗೆ ಸಿಕ್ಕಿಬಿದ್ದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಿವಿಪುರ ಗ್ರಾಮಪಂಚಾಯ್ತಿಯಲ್ಲಿ ನಡೆದಿದೆ.

    ಹಳ್ಳಿಗಾಡಲ್ಲಿ ದುಡಿಮೆ ಇಲ್ಲದ ಕೈಗಳಿಗೆ ಕೆಲಸ ನೀಡಲು ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ತಂದಿದೆ. ಆದರೆ ಕೆರೆ ಹೂಳೆತ್ತುವ ಕಾಮಗಾರಿಯ ಹಣ ಬಿಡುಗಡೆ ಮಾಡಲು ಸಹ ಲಂಚ ಪಡೆಯುತಿದ್ದ ಕಂಪ್ಯೂಟರ್ ಆಪರೇಟರ್ ನರೇಂದ್ರಬಾಬು ಎಸಿಬಿ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಇದನ್ನೂ ಓದಿ: ಮಾಲೀಕನನ್ನು ಚಿರತೆ ಬಾಯಿಂದ ತಪ್ಪಿಸಿದ ಶ್ವಾನ

    ವಿವಿಪುರದಲ್ಲಿ ಯೋಜನೆಯ ಹಣ ಬಿಡುಗಡೆ ಮಾಡಲು ಓಂಕಾರಪ್ಪ ಎಂಬವರ ಬಳಿ ಗ್ರಾಮಪಂಚಾಯ್ತಿ ಕಂಪ್ಯೂಟರ್ ಆಪರೇಟರ್ ನರೇಂದ್ರಬಾಬು 5000 ರೂ. ಲಂಚ ಕೇಳಿದ್ದರು. ಆಗ ನೊಂದ ಓಂಕಾರಪ್ಪ ಎಸಿಬಿ ಅಧಿಕಾರಿಗಳ ಮೊರೆ ಹೋಗಿದ್ದರು. ಈ ವೇಳೆ ಗ್ರಾಮಪಂಚಾಯ್ತಿ ಕಚೇರಿ ಮೇಲೆ ದಿಢೀರ್ ದಾಳಿ ನಡೆಸಿ, ಕಾರ್ಯಾಚರಣೆ ನಡೆಸುವಾಗ ಎಸಿಬಿ ಬಲೆಗೆ ನರೆಂದ್ರಬಾಬು ಬಿದ್ದಿದ್ದಾರೆ.

    ಎಸಿಬಿ ಪಿ.ಐ.ಪ್ರವೀಣ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಓಂಕಾರಪ್ಪ ಬಳಿ 5000 ರೂ. ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ನರೇಂದ್ರಬಾಬು ಸಿಕ್ಕಿಬಿದ್ದು, ಇಂಗು ತಿಂದ ಮಂಗನಂತಾಗಿದ್ದಾರೆ. ಇದನ್ನೂ ಓದಿ: 10 ಮಂದಿ ದರೋಡೆಕೋರರನ್ನು ಬಂಧಿಸಿದ ಶಿರಾಳಕೊಪ್ಪ ಪೊಲೀಸರು

  • ಬೈಕ್‍ನಲ್ಲಿ ಬಂದು ಮೊಬೈಲ್ ಎಗರಿಸುತ್ತಿದ್ದ ಖತರ್ನಾಕ್ ಕಳ್ಳರು ಅಂದರ್

    ಬೈಕ್‍ನಲ್ಲಿ ಬಂದು ಮೊಬೈಲ್ ಎಗರಿಸುತ್ತಿದ್ದ ಖತರ್ನಾಕ್ ಕಳ್ಳರು ಅಂದರ್

    – ಬಂಧಿತರಿಂದ 3.5 ಲಕ್ಷ ರೂ. ಮೌಲ್ಯದ 20 ಮೊಬೈಲ್, ಬೈಕ್ ವಶ

    ಬೆಂಗಳೂರು: ಬೈಕ್‍ನಲ್ಲಿ ಬಂದು ಮೊಬೈಲ್‍ಗಳನ್ನ ಎಗರಿಸುತ್ತಿದ್ದ ಖತರ್ನಾಕ್ ಕಳ್ಳರನ್ನು ವಿವಿಪುರಂ ಪೊಲೀಸರು ಬಂಧಿಸಿದ್ದಾರೆ.

    ನಗರದ ಸಯ್ಯದ್ ಇರ್ಪಾನ್ (20) ಹಾಗೂ ಮಹಮ್ಮದ್ ಅರ್ಬಾಜ್ (21) ಬಂಧಿತ ಆರೋಪಿಗಳು. ಬಂಧಿತರಿಂದ 3.5 ಲಕ್ಷ ರೂ. ಮೌಲ್ಯದ 20 ಮೊಬೈಲ್ ಹಾಗೂ ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಆರೋಪಿಗಳಾದ ಸಯ್ಯದ್ ಹಾಗೂ ಮಹಮ್ಮದ್ ವಿವಿಪುರಂ, ಮಕ್ಕಳ ಕೂಟ ಸೇರಿದಂತೆ ವಿವಿಧೆಡೆ ಮೊಬೈಲ್ ದೋಚುತ್ತಿದ್ದರು. ಮೊಬೈಲ್ ಕಳ್ಳರ ಹಾವಳಿಯಿಂದಾಗಿ ಠಾಣೆಗೆ ಒಂದಲ್ಲಾ ಒಂದು ದೂರು ಬರುತ್ತಲೇ ಇತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ವಿವಿಪುರಂ ಪೊಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆ ಕಾರ್ಯಚರಣೆ ನಡೆಸಿದ್ದರು.

    ಒಂದು ತಿಂಗಳು ಕಳೆದರೂ ಪೊಲೀಸರಿಗೆ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಎರಡು ದಿನಗಳ ಹಿಂದೆಯಷ್ಟೇ ಮನೋಜ್ ಎಂಬ ಯುವಕನಿಂದ ಆರೋಪಿಗಳು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಪೊಲೀಸ್ ಠಾಣೆಗೆ ದೂರಿ ನೀಡಿದ್ದ ಮನೋಜ್, ಕಳ್ಳರು ಮೊಬೈಲ್ ಎಗರಿಸಿದ್ದ ಸ್ಥಳದಲ್ಲಿನ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಪೊಲೀಸರಿಗೆ ನೀಡಿದ್ದರು.

    ಸಿಸಿಟಿವಿ ಕ್ಯಾಮೆರಾ ದೃಶ್ಯವನ್ನು ಆಧಾರವಾಗಿಟ್ಟುಕೊಂಡು ತನಿಖೆ ಮುಂದುವರಿಸಿದ ಪೊಲೀಸರ ಕೈಗೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಬಳಿಕ ಬಂಧಿತರಿಂದ 20 ಮೊಬೈಲ್ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವಿವಿಪುರಂ ಪೊಲೀಸರು, ಆರೋಪಿಗಳು ಈ ಹಿಂದೆ ಎಲ್ಲೇಲ್ಲಿ ಕಳ್ಳತ ಎಗಿದ್ದರು ಎನ್ನುವ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.