Tag: ವಿವಿಐಪಿ

  • ನನ್ನನ್ನು ಅರೆಸ್ಟ್ ಮಾಡಿ, ನನಗೆ VVIP ಟ್ರೀಟ್ಮೆಂಟ್ ಬೇಕಾಗಿಲ್ಲ: ಬಿ.ಕೆ ಹರಿಪ್ರಸಾದ್

    ನನ್ನನ್ನು ಅರೆಸ್ಟ್ ಮಾಡಿ, ನನಗೆ VVIP ಟ್ರೀಟ್ಮೆಂಟ್ ಬೇಕಾಗಿಲ್ಲ: ಬಿ.ಕೆ ಹರಿಪ್ರಸಾದ್

    ಬೆಂಗಳೂರು: ಪೊಲೀಸರು ನನ್ನ ವಿಚಾರಣೆ ಮಾಡಲು ಬಂದಿದ್ದರು. ನಾನು ಕೊಟ್ಟ ಹೇಳಿಕೆ ಅಪರಾಧ ಅನ್ನೋದಾದ್ರೆ ಪೊಲೀಸ್ ಸ್ಟೇಶನ್‍ಗೆ ಕರೆದು ಅರೆಸ್ಟ್ ಮಾಡಿ ವಿಚಾರಣೆ ಮಾಡಿ ಎಂದಿದ್ದೇನೆ. ವಿವಿಐಪಿ ಟ್ರೀಟ್ಮೆಂಟ್ ನನಗೆ ಬೇಕಾಗಿಲ್ಲ, ರತ್ನಗಂಬಳಿ ಬೇಕಾಗಿಲ್ಲ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

    ಗೋಧ್ರಾ ಮಾದರಿ ಹತ್ಯಾಕಾಂಡ ನಡೆಯಬಾರದು ಎಂಬ ಹೇಳಿಕೆ ಸಂಬಂಧ ಇಂದು ಪೊಲೀಸರು ಹೇಳಿಕೆ ಪಡೆಯಲು ಬಿ.ಕೆ ಹರಿಪ್ರಸಾದ್ (B.K Hariprasad) ಇರುವ ಕುಮಾರಕೃಪಾ ಗೆಸ್ಟ್ ಹೌಸ್‍ಗೆ ತೆರಳಿದ್ದರು. ಪೊಲೀಸರು ಬಂದು ಹೋದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಬಿ.ಕೆ ಹರಿಪ್ರಸಾದ್, ಅನಂತ್ ಕುಮಾರ್ ಹೆಗಡೆ, ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ರತ್ನಗಂಬಳಿ ಹಾಕಿದ್ದಾರೆ. ಠಾಣೆಗೆ ಬರಲು ವಾರೆಂಟ್ ತಗೊಂಡು ಬನ್ನಿ ಎಂದಿದ್ದೇನೆ. ಈಗ ಯಾವ ಹೇಳಿಕೆಯನ್ನೂ ಕೊಟ್ಟಿಲ್ಲ. ನಾನು ಅಪರಾಧಿ ಅಲ್ಲ. ಪೊಲೀಸರು ಟಾರ್ಗೆಟ್ ಮಾಡಿದ್ರೆ ನಾನು ಬಗ್ಗುವವನಲ್ಲ. ನಾನು ದೇಶದಲ್ಲಿ ಓಡಾಡಿದ್ದೇನೆ. ನಾನು ಕಾಂಗ್ರೆಸ್ ನಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರದಲ್ಲಿ ನನ್ನ ಪರಿಸ್ಥಿತಿಯೇ ಈ ರೀತಿಯಾದ್ರೆ ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.

    ನಾನು ಮಂಪರು ಪರೀಕ್ಷೆಗೂ ರೆಡಿ. ನಾನು ಅಯೋಧ್ಯೆಗೆ (Ayodhya) ಹೋಗುವವರಿಗೆ ರಕ್ಷಣೆ ವಿಚಾರವಾಗಿ ಮಾತನಾಡಿರೋದು. ಹೀಗಾಗಿ ನಾನು ಅಪರಾಧಿ ಅಲ್ಲ ಎಂದು ಹರಿಪ್ರಸಾದ್ ಅವರು ಪುನರುಚ್ಛರಿಸಿದರು. ಇದನ್ನೂ ಓದಿ: ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದು ನಾನು: ಹೆಚ್.ಡಿ ದೇವೇಗೌಡ

    ಕಲ್ಲಡ್ಕ ಪ್ರಭಾಕರ್ (Kalladaka Prabhakar) ಮೇಲೆ ಯಾವುದೇ ಕೇಸ್ ಹಾಕಿಲ್ಲ, ಅನಂತ್ ಕುಮಾರ್ ಹೆಗಡೆ (Anant Kumar Hegde) ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನನ್ನ ಹೇಳಿಕೆ ಪ್ರಚೋದನೆ ಆದ್ರೆ ಕ್ರಮ ತೆಗೆದುಕೊಳ್ಳಲಿ. ನನಗೆ ರತ್ನಗಂಬಳಿ ಬೇಡ, ಯಾವುದೇ ಸಂದರ್ಭದಲ್ಲಿ ವಿಚಾರಣೆಗೆ ರೆಡಿ. ಪೊಲೀಸರ ಮೂಲಕ ಹೆದರಿಸೋದು ಭ್ರಮೆ. ನಾನು ಕಾಂಗ್ರೆಸ್ ಸರ್ಕಾರ ಅಂದ್ಕೊಡಿದ್ದೆ. ನನ್ನ ಪರಿಸ್ಥಿತಿ ಈ ರೀತಿ ಆದ್ರೆ, ಕಾರ್ಯಕರ್ತರ ಪರಿಸ್ಥಿತಿ ಏನು ಎಂಬ ಬಗ್ಗೆ ಯೋಚನೆ ಮಾಡ್ತಿದ್ದೇನೆ ಎಂದರು.

    ಸರ್ಕಾರದ ಜವಾಬ್ದಾರಿ ಬಗ್ಗೆ ಮಾತನಾಡಿದ್ದೆ ನಾನು, ನನ್ನ ತಿಳುವಳಿಕೆ, ಸಲಹೆಯನ್ನ ಬೇರೆ ರೀತಿಯಲ್ಲಿ ತೆಗೆದುಕೊಂಡ್ರೆ ನಾನು ಜವಾಬ್ದಾರನಲ್ಲ. ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ. ಸ್ಚೇಷನ್ ಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಿ ಎಂದಿದ್ದೇನೆ. ನಮ್ಮದು ಅದ್ಭುತವಾದ ಸರ್ಕಾರ ಎಂದರು.

  • VVIPಗಳಿಗೆ ಮಾತ್ರ ಹಾಸನಾಂಬೆ ದರ್ಶನಕ್ಕೆ ಅವಕಾಶ- ಭಕ್ತರ ಆಕ್ರೋಶ

    VVIPಗಳಿಗೆ ಮಾತ್ರ ಹಾಸನಾಂಬೆ ದರ್ಶನಕ್ಕೆ ಅವಕಾಶ- ಭಕ್ತರ ಆಕ್ರೋಶ

    ಹಾಸನ: ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬೆ ದೇವಾಲಯದ ಬಾಗಿಲನ್ನು ಇದೇ ಅಕ್ಟೋಬರ್ 28 ರಂದು ತೆರೆದು ನವೆಂಬರ್ 6 ರಂದು ಬಾಗಿಲು ಹಾಕಲಾಗುತ್ತದೆ. ಈ ಬಾರಿ ವಿವಿಐಪಿಗಳಿಗೆ ಮಾತ್ರ ಹಾಸನಾಂಬೆ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ತಿಳಿಸಿದ್ದಾರೆ. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.


    ಕೊರೊನಾ ಬರುವುದಕ್ಕಿಂತ ಮುಂಚೆ ಲಕ್ಷಾಂತರ ಭಕ್ತರು ಹಾಸನಾಂಬೆ ದರ್ಶನ ಪಡೆದು ಪುನೀತರಾಗುತ್ತಿದ್ದರು. ಆದರೆ ಈಗ ಕೊರೊನ ನೆಪವೊಡ್ಡಿ ಸಾರ್ವಜನಿಕರಿಗೆ ನೇರ ದರ್ಶನಕ್ಕೆ ಅವಕಾಶವಿಲ್ಲ ಎಂದು ನಿರ್ಧರಿಸಲಾಗಿದ್ದು, ಆನ್‍ಲೈನ್ ಮೂಲಕ ಮತ್ತು ಹಾಸನ ನಗರದ ಹಲವೆಡೆ ಬೃಹತ್ ಎಲ್‍ಇಡಿ ಪರದೆ ಹಾಕಿ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಹಾಗಾಗಿ ವಿವಿಐಪಿಗಳಿ ಮಾತ್ರ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುವುದು ಹಾಸನದ ಜನಸಾಮಾನ್ಯರ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಅ.28 ರಿಂದ ನ.6 ರವರೆಗೆ ಹಾಸನಾಂಬ ಬಾಗಿಲು ಓಪನ್- ಸಾರ್ವಜನಿಕರ ದರ್ಶನಕ್ಕೆ ಇಲ್ಲ ಅವಕಾಶ

    ಬಹುತೇಕ ರಾಜ್ಯದ ಎಲ್ಲ ಪ್ರಮುಖ ದೇವಾಲಯಗಳಲ್ಲೂ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ. ರಾಜಕಾರಣಿಗಳ ಕಾರ್ಯಕ್ರಮಗಳಲ್ಲಿ ಸಾವಿರಾರು ಜನ ಸೇರುತ್ತಾರೆ. ಅಲ್ಲಿ ಎಲ್ಲೂ ಕೊರೊನ ಬರೋದಿಲ್ಲ. ಆದರೆ ಹಾಸನಾಂಬೆ ದೇವಾಲಯದಲ್ಲಿ ಮಾತ್ರ ಕೊರೊನ ಬರುತ್ತ? ಹಾಸನ ಜನರಿಗೊಂದು ನ್ಯಾಯ, ವಿವಿಐಪಿಗಳಿಗೊಂದು ನ್ಯಾಯ ಮಾಡೋದು ಸರಿಯಲ್ಲ. ಹಾಸನಾಂಬೆಯ ಮಕ್ಕಳಾದ ಹಾಸನ ಜನರಿಗೆ ದೇವಿಯ ದರ್ಶನಕ್ಕೆ ಅವಕಾಶ ಇಲ್ಲ ಅನ್ನೋದಾದ್ರೆ, ಯಾವ ವಿವಿಐಪಿಗಳಿಗೂ ದರ್ಶನಕ್ಕೆ ಅವಕಾಶ ಕೊಡಬಾರದು ಎಂದು ಹಾಸನದ ಜನರು ಆಕ್ರೋಶ ಹೊರಹಾಕಿದ್ದಾರೆ.

    ಒಟ್ಟಾರೆ ವರ್ಷಕ್ಕೊಮ್ಮೆ ವಾಗಿಲು ತೆರೆಯುವ ಹಾಸನಾಂಬೆ ದೇವರ ದರ್ಶನಕ್ಕೆ ಕೇವಲ ವಿವಿಐಪಿಗಳಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸುತ್ತಿರುವುದಕ್ಕೆ ಹಾಸನ ಜನರ ತೀವ್ರ ವಿರೋಧವಿದೆ. ದೇವರ ದರ್ಶನಕ್ಕೆ ಕೊರೊನ ಅಡ್ಡಿ ಅನ್ನೋದಾದ್ರೆ ಯಾವ ವಿವಿಐಪಿಗಳಿಗೂ ದರ್ಶನ ನೀಡಬೇಡಿ ಎಂಬ ಹಾಸನ ಜನರ ಮಾತಿಗೆ ಜಿಲ್ಲೆಯಾದ್ಯಂತ ಬೆಂಬಲ ವ್ಯಕ್ತವಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಯಾವ ರೀತಿ ಸ್ಪಂದಿಸುತ್ತಾರೆ ಕಾದು ನೋಡಬೇಕಿದೆ. ಇದನ್ನೂ ಓದಿ: ಮುಡಿ ಮಾಡಿಸಿಕೊಂಡು ಬರುವ ಭಕ್ತರಿಗಿಲ್ಲ ಮಾದಪ್ಪನ ದರ್ಶನ- ಭಕ್ತರ ಆಕ್ರೋಶ

  • ಸಿಎಂಗಾಗಿ ರೋಗಿಯಿದ್ದ ಆಂಬುಲೆನ್ಸ್ ತಡೆಹಿಡಿದ ಪೊಲೀಸರು

    ಸಿಎಂಗಾಗಿ ರೋಗಿಯಿದ್ದ ಆಂಬುಲೆನ್ಸ್ ತಡೆಹಿಡಿದ ಪೊಲೀಸರು

    ಬೆಂಗಳೂರು: ಕೆಂಪು ದೀಪ ಹೋದ್ರೂ ವಿವಿಐಪಿಗಳ ಸಂಸ್ಕೃತಿಗೆ ಇನ್ನೂ ಬ್ರೇಕ್ ಬಿದ್ದಿಲ್ಲ ಎಂಬುದು ಸ್ಪಷ್ಟವಾಗಿದೆ. ಪೊಲೀಸರು ಸಿಎಂಗಾಗಿ ರೋಗಿಯಿದ್ದ  ಆಂಬುಲೆನ್ಸ್ ತಡೆ ಹಿಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಮಂಗಳವಾರ ಸಂಜೆ ಬೆಂಗಳೂರಿನ ಜೆಸಿ ರಸ್ತೆಯ ರವೀಂದ್ರ ಕಲಾಕ್ಷೇತ್ರದ ಎದುರು ಈ ಘಟನೆ ನಡೆದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಿಎಂ ಬರುವಿಕೆಗಾಗಿ ಪೊಲೀಸರು ವಾಹನಗಳನ್ನ ತಡೆ ಹಿಡಿದಿದ್ದರು. ಈ ವೇಳೆ ರೋಗಿ ಇದ್ದ ಆಂಬುಲೆನ್ಸ್ ಕೂಡ ವಾಹನಗಳ ಮಧ್ಯೆ ಸಿಲುಕಿತ್ತು. ಸುಮಾರು 10 ನಿಮಿಷ ಆಂಬುಲೆನ್ಸ್ ರಸ್ತೆಯಲ್ಲಿಯೇ ನಿಂತಿತ್ತು.

    ವಿವಿಐಪಿ ಸಂಪ್ರದಾಯಕ್ಕೆ ಬ್ರೇಕ್ ಹಾಕುವ ಸಲುವಾಗಿ ಗಣ್ಯ ವ್ಯಕ್ತಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ವಾಹನಗಳ ಮೇಲೆ ಕೆಂಪು ದೀಪ ಬಳಕೆಯನ್ನ ಕೇಂದ್ರ ಸರ್ಕಾರ ಈಗಾಗಲೇ ನಿಷೇಧಿಸಿದೆ. ಆಂಬುಲೆನ್ಸ್ ಹಾಗೂ ಅಗ್ನಿಶಮಕ ವಾಹನಗಳಂತಹ ತುರ್ತು ಸೇವೆ ಒದಗಿಸುವಂತಹ ವಾಹನಗಳು ಮಾತ್ರ ಕೆಂಪು ದೀಪ ಬಳಸಬಹುದು ಎಂದು ಹೇಳಿದೆ.