Tag: ವಿವಾಹ ವಾರ್ಷಿಕೋತ್ಸವ

  • ಸುದೀಪ್ ದಂಪತಿಗೆ 18ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

    ಸುದೀಪ್ ದಂಪತಿಗೆ 18ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ಸುದೀಪ್ ಅವರು ಇಂದು ತಮ್ಮ 18ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

    ಸುದೀಪ್ ಹಾಗೂ ಪ್ರಿಯಾ ಅಕ್ಟೋಬರ್ 18, 2001ರಲ್ಲಿ ಮದುವೆಯಾಗಿದ್ದರು. ಇಂದಿಗೆ ಸುದೀಪ್ ಮತ್ತು ಪ್ರಿಯಾ ಅವರು ಮದುವೆಯಾಗಿ 18 ವರ್ಷಗಳು ಕಳೆದಿವೆ. ಹೀಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಇಬ್ಬರಿಗೂ ಶುಭಾಶಯ ತಿಳಿಸುತ್ತಿದ್ದಾರೆ.

    ನೆಚ್ಚಿನ ನಟ ವಿವಾಹ ವಾರ್ಷಿಕೋತ್ಸವ ಇರುವ ಹಿನ್ನೆಲೆಯಲ್ಲಿ ಸುದೀಪ್ ಅಭಿಮಾನಿಗಳ ಸಂಘಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಧ ವಿಧವಾದ ಪೋಸ್ಟರ್ ಗಳನ್ನು ಪೋಸ್ಟ್ ಮಾಡುವ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.

    ಇತ್ತೀಚೆಗಷ್ಟೆ ಪ್ರಿಯಾ ಅವರು `ಪೈಲ್ವಾನ್’ ಸಿನಿಮಾ ನೋಡಿ, ಅದರಲ್ಲಿ ಸುದೀಪ್ ಮದುವೆ ಮನೆಗೆ ಮಾಸ್ ಆಗಿ ಎಂಟ್ರಿ ಕೊಡುತ್ತಾರೆ. ಆಗ ಮದುವೆ ಹುಡುಗಿಯಾಗಿ ನಾನು ಕೂರಬೇಕಿತ್ತು ಎಂದು ತಮ್ಮ ಬಯಕೆಯನ್ನು ವ್ಯಕ್ತಪಡಿಸಿದ್ದರು.

    ಸುದೀಪ್ ಅವರು ವಿವಾಹ ವಾರ್ಷಿಕೋತ್ಸವ ಸಂಭ್ರಮ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಸುದೀಪ್ ತಮ್ಮ ಪತ್ನಿ ಪ್ರಿಯಾ ಜೊತೆಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಈ ದಂಪತಿಗೆ ಸಾನ್ವಿ ಎಂಬ ಮಗಳಿದ್ದಾಳೆ.

  • ನೀವು ನನಗೆ ಬೆಸ್ಟ್ ಗಿಫ್ಟ್ ಕೊಟ್ಟಿದ್ದೀರಿ- ಅತ್ತೆ, ಮಾವನಿಗೆ ಸಿಂಡ್ರೆಲಾ ವಿಶ್

    ನೀವು ನನಗೆ ಬೆಸ್ಟ್ ಗಿಫ್ಟ್ ಕೊಟ್ಟಿದ್ದೀರಿ- ಅತ್ತೆ, ಮಾವನಿಗೆ ಸಿಂಡ್ರೆಲಾ ವಿಶ್

    ಬೆಂಗಳೂರು: ಇಂದು ರಾಕಿಂಗ್ ಸ್ಟಾರ್ ಯಶ್ ಅವರ ತಂದೆ-ತಾಯಿ, ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಹೀಗಾಗಿ ಸೊಸೆ ರಾಧಿಕಾ ಪಂಡಿತ್ ಪ್ರೀತಿಯ ಅತ್ತೆ-ಮಾವನಿಗೆ ಶುಭಕೋರಿದ್ದಾರೆ.

    ನಟಿ ರಾಧಿಕಾ ಪಂಡಿತ್ ಅವರು ತಮ್ಮ ಅತ್ತೆ-ಮಾವನ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷವಾಗಿ ವಿಶ್ ಮಾಡಿದ್ದಾರೆ. ಶನಿವಾರ ರಾತ್ರಿಯೇ ಯಶ್ ಮತ್ತು ರಾಧಿಕಾ ಕೇಕ್ ತಂದು ಕಟ್ ಮಾಡಿಸಿ ಆಚರಿಸಿದ್ದಾರೆ. ಯಶ್ ಅವರ ಅಪ್ಪ ತಮ್ಮ ಪತ್ನಿಗೆ ಕೇಕ್ ತಿನ್ನಿಸುತ್ತಿರುವ ಫೋಟೋವನ್ನು ತೆಗೆದು ಅದನ್ನು ಫೇಸ್‍ಬುಕ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಸ್ಯಾಂಡಲ್ ವುಡ್ ಸಿಂಡ್ರೆಲಾ ಪೋಸ್ಟ್ ಮಾಡಿ ಶುಭ ಹಾರೈಸಿದ್ದಾರೆ.

    ಪೋಸ್ಟ್ ನಲ್ಲೇನಿದೆ?
    “ನನ್ನ ಪ್ರೀತಿಯ ಅತ್ತೆ-ಮಾವನಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು. ನನ್ನ ಜೀವನದಲ್ಲಿ ನಿಮ್ಮಿಬ್ಬರನ್ನು ಪಡೆದಿರುವುದಕ್ಕೆ ತುಂಬಾ ಸಂತೋಷವಾಗಿದೆ. ನೀವು ನನಗೆ ಕೊಟ್ಟಿರುವ ಉತ್ತಮ ಉಡುಗೊರೆಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು. ನಿಮ್ಮ ಮಗನೇ ನನಗೆ ಪ್ರಪಂಚ” ಎಂದು ಬರೆದು ವಿಶ್ ಮಾಡಿದ್ದಾರೆ.

    ರಾಧಿಕಾ ಅವರು ವಿಶ್ ಮಾಡಿ ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಯಶ್ ಪೋಷಕರಿಗೆ ಶುಭಾಶಯವನ್ನು ಕೋರುತ್ತಿದ್ದಾರೆ.

    https://www.instagram.com/p/BwNSl4OBIYq/

  • ಅನುಷ್ಕಾ ಬಂದ ಮೇಲೆ ನಾನು ಹೇಗೆ ಬದಲಾದೆ – ಪತ್ನಿಯನ್ನು ಹೊಗಳಿದ ಕೊಹ್ಲಿ

    ಅನುಷ್ಕಾ ಬಂದ ಮೇಲೆ ನಾನು ಹೇಗೆ ಬದಲಾದೆ – ಪತ್ನಿಯನ್ನು ಹೊಗಳಿದ ಕೊಹ್ಲಿ

    ಮೆಲ್ಬರ್ನ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇಂದು ತಮ್ಮ ಮೊದಲನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ವಿರಾಟ್ ತಮ್ಮ ಪತ್ನಿಯ ಬಗ್ಗೆ ಪ್ರೀತಿಯ ಮಾತುಗಳನ್ನು ಆಡಿದ್ದಾರೆ.

    ವಿರಾಟ್ ಹಾಗೂ ಅನುಷ್ಕಾ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಸ್ಟ್ರೇಲಿಯಾದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಆಡಮ್ ಗಿಲ್‍ಕ್ರಿಸ್ಟ್ ಅವರು ವಿರಾಟ್ ಕೊಹ್ಲಿಯನ್ನು ಸಂದರ್ಶನ ಮಾಡಿದರು. ಈ ಸಂದರ್ಶನದಲ್ಲಿ ವಿರಾಟ್ ತಮ್ಮ ಪತ್ನಿ ಅನುಷ್ಕಾ ಬಗ್ಗೆ ಮಾತನಾಡಿದ್ದಾರೆ.

    ನಾನು ನನ್ನ ಪತ್ನಿಯನ್ನು ಭೇಟಿ ಮಾಡಿದ್ದಾಗ ನಾನು ಬದಲಾಗಲು ಶುರು ಮಾಡಿದೆ. ನಾನು ಉತ್ತರ ಭಾರತದ ವಿಭಿನ್ನ ಹಿನ್ನೆಲೆಯಿಂದ ಬಂದಿದ್ದೇನೆ. ಸಮಾಜದ ಇತರೆ ಕ್ಷೇತ್ರಗಳಲ್ಲಿ ಅಥವಾ ಇನ್ನೊಬ್ಬರ ಜೀವನದಲ್ಲಿ ಏನಾಗುತ್ತಿದೆ ಎಂಬುದು ನನಗೆ ಗೊತ್ತಿರಲಿಲ್ಲ. ಆಕೆಯ ಜೀವನವು ಕೂಡ ತುಂಬ ವಿಭಿನ್ನವಾಗಿತ್ತು. ತನ್ನ ಸ್ವಂತ ಸವಾಲುಗಳಿಂದ ಆಕೆ ಬಂದಿದ್ದಳು ಎಂದು ವಿರಾಟ್ ಹೇಳಿದರು.

    ನನ್ನನ್ನು ನಾನು ನೋಡಿಕೊಳ್ಳಲು ಅದ್ಭುತವೆನ್ನಿಸುತ್ತಿದೆ. ನಾನು ಯೋಚಿಸುವ ರೀತಿಯಲ್ಲಿ ಎಷ್ಟು ವಿಭಿನ್ನವಾದ ವಿಷಯಗಳಿದ್ದವು. ಅನುಷ್ಕಾಳನ್ನು ಭೇಟಿಯಾಗುವ ಮೊದಲು ನಾನು ಪ್ರಾಕ್ಟಿಕಲ್ ಆಗಿ ಇರಲಿಲ್ಲ. ನಂತರ ಆಕೆ ನನ್ನನ್ನು ಬದಲಾಯಿಸಿದ್ದಳು. ನಾನು ಅನುಷ್ಕಾಳಿಂದ ಬಹಳ ವಿಷಯ ಕಲಿತ್ತಿದ್ದೇನೆ. ನೀವು ಪರಸ್ಪರ ಬೆಳೆಯಲು ಸಹಾಯ ಮಾಡಬೇಕು. ಹಾಗೆಯೇ ಅನುಷ್ಕಾ ನನ್ನನ್ನು ಬೆಳೆಸಲು ಸಾಕಷ್ಟು ಸಹಾಯ ಮಾಡಿದ್ದಾಳೆ ಎಂದು ವಿರಾಟ್ ಸಂದರ್ಶನದಲ್ಲಿ ಹೇಳಿದರು.

    ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಆಡುತ್ತಿದೆ. ಇತ್ತ ಅನುಷ್ಕಾ ತನ್ನ ಮುಂಬರುವ ಆನಂದ್ ಎಲ್ ರೈ ನಿರ್ದೇಶನದ ‘ಝೀರೋ’ ಚಿತ್ರವನ್ನು ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದು, ಇದರ ನಡುವೆಯೇ ಅನುಷ್ಕಾ ತಮ್ಮ ಪತಿ ಜೊತೆ ಮೊದಲ ವಿವಾಹ ವಾಷಿಕೋತ್ಸವ ಆಚರಿಸಲು ಆಸ್ಟ್ರೇಲಿಯಾಗೆ ತೆರಳಿದ್ದಾರೆ. ವಿರಾಟ್ ಪಂದ್ಯ ಮುಗಿದ ಬಳಿಕ ತನ್ನ ಪತ್ನಿ ಅನುಷ್ಕಾ ಜೊತೆ ಒಟ್ಟಿಗೆ ಊಟ ಮಾಡಿದ್ದಾರೆ.

    ಅನುಷ್ಕಾ ಹಾಗೂ ನಾನು ಮುಂಬೈನಲ್ಲಿ ವಾಸಿಸುತ್ತಿದ್ದೇವೆ. ಆದರೆ ಇದು ಸ್ವಲ್ಪ ಕಷ್ಟವಾಗಿದೆ. ಏಕೆಂದರೆ ನಾವಿಬ್ಬರು ಹೆಚ್ಚು ಕಾಲ ಕಳೆಯಲು ಸಮಯ ಸಿಗುವುದಿಲ್ಲ. ನಮ್ಮಿಬ್ಬರಿಗೂ ಒಟ್ಟಿಗೆ ಕಾಲ ಕಳೆಯಲು ಸಮಯ ಸಿಕ್ಕರೆ ನಾವು ಮನೆಯಲ್ಲೇ ಕಾಲ ಕಳೆಯುತ್ತೇವೆ ಎಂದು ಗಿಲ್‍ಕ್ರಿಸ್ಟ್ ನಡೆಸಿದ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ತಮ್ಮ ಪತ್ನಿ ಹಾಗೂ ದಾಂಪತ್ಯ ಜೀವನದ ಬಗ್ಗೆ ಮಾತನಾಡಿದ್ದಾರೆ.

    https://twitter.com/AnushkaSFanCIub/status/1072085087259451393

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುದೀಪ್ ದಂಪತಿಯ ಅಪರೂಪದ ಫೋಟೋ

    ಸುದೀಪ್ ದಂಪತಿಯ ಅಪರೂಪದ ಫೋಟೋ

    ಬೆಂಗಳೂರು: ಇತ್ತೀಚೆಗೆ ನಟ ಸುದೀಪ್ ಕುಟುಂಬ ಮೆಗಸ್ಟಾರ್ ಚಿರಂಜೀವಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಆ ಫೋಟೋಗಳು ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿತ್ತು. ಈಗ ಸುದೀಪ್ ಮತ್ತು ಪತ್ನಿ ಪ್ರಿಯಾ ಸುದೀಪ್ ಒಟ್ಟಿಗಿನ ಫೋಟೋವೊಂದು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿದೆ.

    ಇದೇ ತಿಂಗಳು 18 ಆಯುಧ ಪೂಜೆಯ ದಿನ ಸುದೀಪ್ ಮತ್ತು ಪ್ರಿಯಾ ಅವರು ಮದುವೆಯಾದ ದಿನವಾಗಿದ್ದು, ಅವರ ಮದುವೆ ವಾರ್ಷಿಕೋತ್ಸವ ಇತ್ತು. ಮದುವೆಯಾಗಿ 17 ವರ್ಷವಾಗಿದ್ದು, ಸಂಬಂಧಿಕರು, ಸ್ನೇಹಿತರ, ಅಭಿಮಾನಿಗಳು ಅವರ ಮದುವೆಯ ಶುಭಾಶಯವನ್ನು ಕೋರಿದ್ದಾರೆ.

    ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯವನ್ನು ಕೋರಿದ್ದ ಎಲ್ಲರಿಗೂ ಪ್ರಿಯಾ ಅವರು ಪತಿಯೊಂದಗಿನ ಸುಂದರ ಫೋಟೋವನ್ನು ಹಾಕಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ನಟ ಪ್ರದೀಪ್ ಬೋಗಾಡಿ ಅವರು ಸುದೀಪ್ ಮತ್ತು ಪ್ರಿಯಾ ಅವರು ಒಟ್ಟಿಗೆ ಇರುವ ಫೋಟೋವನ್ನು ಹಾಕಿ ಶುಭಾಶಯವನ್ನು ತಿಳಿಸಿದ್ದರು. ಅವರು ಪೋಸ್ಟ್ ಮಾಡಿದ್ದ ಫೋಟೋವನ್ನೇ ಪ್ರಿಯಾ ಅವರು ಪೋಸ್ಟ್ ಮಾಡಿ ಧನ್ಯವಾದವನ್ನು ತಿಳಿಸಿದ್ದಾರೆ.

    ಇತ್ತೀಚೆಗೆ ಸುದೀಪ್ ಅವರು ಕುಟುಂಬದವರ ಜೊತೆ ಸಾಕಷ್ಟು ಸಮಯವನ್ನು ಕಳೆಯುತ್ತಿದ್ದಾರೆ. ಶುಕ್ರವಾರವಷ್ಟೆ ‘ದ ವಿಲನ್’ ಸಿನಿಮಾ ರಿಲೀಸ್ ಆಗಿದ್ದು, ಪ್ರಿಯಾ ಅವರು ಥಿಯೇಟರ್ ಗೆ ಹೋಗಿ ಸಿನಿಮಾವನ್ನು ನೋಡಿ ನಿರ್ದೇಶಕ ಪ್ರೇಮ್, ಎನರ್ಜಿಟಿಕ್ ಶಿವಣ್ಣ ಮತ್ತು ನಮ್ಮ ಪ್ರೀತಿ ಹೀರೋ ಸುದೀಪ್ ಸೇರಿದಂತೆ ಚಿತ್ರತಂಡಕ್ಕೆ ಧನ್ಯವಾದಗಳು. ಅಭಿಮಾನಿಗಳು ಸಿನಿಮಾ ಬಿಡುಗಡೆಯನ್ನು ಒಂದು ಹಬ್ಬದಂತೆ ಆಚರಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದರು.

    ಸದ್ಯಕ್ಕೆ ಸುದೀಪ್ ತೆಲುಗಿನ ‘ಸೈರ ನರಸಿಂಹ ರೆಡ್ಡಿ’, ‘ಪೈಲ್ವಾನ್’ ಸಿನಿಮಾವನ್ನು ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv