Tag: ವಿವಾಹ ವಾರ್ಷಿಕೋತ್ಸವ

  • ವಿವಾಹ ವಾರ್ಷಿಕೋತ್ಸವದಂದೇ ಅಪ್ಪ-ಅಮ್ಮ, ಸಹೋದರಿ ಸಾವು – ಕೊಲೆ ಸಂಶಯ

    ವಿವಾಹ ವಾರ್ಷಿಕೋತ್ಸವದಂದೇ ಅಪ್ಪ-ಅಮ್ಮ, ಸಹೋದರಿ ಸಾವು – ಕೊಲೆ ಸಂಶಯ

    ನವದೆಹಲಿ: ವಿವಾಹ ವಾರ್ಷಿಕೋತ್ಸವದಂದೇ (Wedding Anniversary) ಅಪ್ಪ-ಅಮ್ಮ ಹಾಗೂ ಸಹೋದರಿ ಸಾವನ್ನಪ್ಪಿರುವ ಘಟನೆ ದಕ್ಷಿಣ ದೆಹಲಿಯಲ್ಲಿ (South Delhi) ಬುಧವಾರ ನಡೆದಿದೆ.

    ರಾಜೇಶ್ ಕುಮಾರ್ (51), ಪತ್ನಿ ಕೋಮಲ್ (46) ಮತ್ತು ಪುತ್ರಿ ಕವಿತಾ (23) ಮೃತರು.‌ ಅಪ್ಪ-ಅಮ್ಮನಿಗೆ ವಾರ್ಷಿಕೋತ್ಸವದ ಶುಭಾಶಯ ಹೇಳಿ ವಾಕಿಂಗ್‌ಗೆ ಹೊರಟಿದ್ದೆ. ಮನೆಗೆ ವಾಪಸ್‌ ಬರುವಷ್ಟರಲ್ಲಿ ಮೂವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಅವರ ಮಗ ಅರ್ಜುನ್‌ ತಿಳಿಸಿದ್ದಾನೆ. ದೇಹದ ಮೇಲೆ ಇರಿತದ ಗಾಯದ ಗುರುತುಗಳು ಕಂಡುಬಂದಿವೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ತಟಸ್ಥ ನಿಲುವಿನ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಕುಟುಂಬದ ಮೇಲೆ ಆಕ್ರೋಶ ಇದೆ: ಯತ್ನಾಳ್

    ಪೊಲೀಸರ ಮಾಹಿತಿ ಪ್ರಕಾರ, ಮನೆಯಲ್ಲಿ ದರೋಡೆ ನಡೆದಿಲ್ಲ, ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ. ದೊಡ್ಡ ಸದ್ದು ಕೇಳಿಸಿದ ತಕ್ಷಣ ನೆರೆಯವರು ಮನೆಗೆ ಧಾವಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ವಿಜಯೇಂದ್ರ ಗುಂಪುಗಾರಿಕೆ ಮಾಡುತ್ತಿದ್ದಾರೆ, ಪಕ್ಷದ ಚೌಕಟ್ಟಿನಲ್ಲಿ ಮಾತನಾಡಿದ್ದೇನೆ: ಯತ್ನಾಳ್‌ ಚಾರ್ಜ್‌

    ಕೊಲೆಯಾಗಿರುವ ಬಗ್ಗೆ ಸಂಶಯ:
    ಇಂದು ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವ ಇತ್ತು. ಅವರಿಗೆ ಶುಭಹಾರೈಸಿ ನಾನು ಬೆಳಗ್ಗೆ ವಾಕಿಂಗ್‌ಗೆ ಹೋಗಿದ್ದೆ, ಬಂದು ನೋಡಿದಾಗ ಶವವಾಗಿ ಬಿದ್ದಿದ್ದರು. ಮೂವರ ಮೈಮೇಲೆ ಇರಿತದ ಗುರುತುಗಳಿದ್ದವು, ಎಲ್ಲೆಡೆ ರಕ್ತ ಚಿಮ್ಮಿತ್ತು ಎಂದು ಮಗ ಅರ್ಜುನ್‌ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಸಾವಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಅಪರಾಧ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರ ತಂಡಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ದೇವೇಂದ್ರ ಫಡ್ನವೀಸ್ `ಮಹಾ’ ಸಿಎಂ – ಫಡ್ನವಿಸ್‌ ರಾಜಕೀಯ ಪಥ ಹೇಗಿದೆ? 

  • ವಿವಾಹ ವಾರ್ಷಿಕೋತ್ಸವ: ಭಾವುಕ ಸಾಲುಗಳ ಬರೆದು ಪತ್ನಿಗೆ ವಿಶ್ ಮಾಡಿದ ವಿಜಯ ರಾಘವೇಂದ್ರ

    ವಿವಾಹ ವಾರ್ಷಿಕೋತ್ಸವ: ಭಾವುಕ ಸಾಲುಗಳ ಬರೆದು ಪತ್ನಿಗೆ ವಿಶ್ ಮಾಡಿದ ವಿಜಯ ರಾಘವೇಂದ್ರ

    ಇಂದು ನಟ ವಿಜಯ ರಾಘವೇಂದ್ರ (Vijaya Raghavendra) ಮತ್ತು ಸ್ಪಂದನಾ (Spandana) ಅವರ 16ನೇ ವಿವಾಹ ವಾರ್ಷಿಕೋತ್ಸವ (Wedding Anniversary). ಪ್ರತಿ ವರ್ಷವೂ ಸಂಭ್ರಮದಿಂದ ಈ ದಿನವನ್ನು ಬರಮಾಡಿಕೊಳ್ಳುತ್ತಿದ್ದರು ಈ ದಂಪತಿ. ಆದರೆ, ವಿಧಿಯಾಟ ಈ ಬಾರಿ ಬೇರೆಯೇ ಆಗಿದೆ. ಸ್ಪಂದನಾ ಹೃದಯಾಘಾತದಿಂದ ನಿಧನರಾಗಿ, ವಿಜಯ್ ಅವರ ಎದೆಯಲ್ಲಿ ಆರದ ಗಾಯ ಮಾಡಿ ಹೋಗಿದ್ದಾರೆ. ಅಗಲಿದ ಪತ್ನಿಗೆ ವಿಜಯ ರಾಘವೇಂದ್ರ ಭಾವುಕ ಸಾಲುಗಳ ಮೂಲಕ ವಿಶ್ ಮಾಡಿದ್ದಾರೆ. ಪ್ರೀತಿಸಿ ಗುರುಹಿರಿಯರ ಸಮ್ಮತಿ ಪಡೆದು ಆಗಸ್ಟ್ 26ರಂದು 2017ರಲ್ಲಿ ವಿಜಯ-ಸ್ಪಂದನಾ ಮದುವೆಯಾದವರು. ಅವರ ದಾಂಪತ್ಯಕ್ಕೆ ಪ್ರೀತಿಗೆ ಶೌರ್ಯ ಎಂಬ ಪುತ್ರ ಸಾಕ್ಷಿಯಾಗಿದ್ದಾರೆ.

    ಭಾವುಕ ಸಾಲುಗಳನ್ನು ಬರೆದು, ಅದಕ್ಕೆ ವಿಡಿಯೋ ಸ್ಪರ್ಶ ಕೂಡ ನೀಡಿರುವ ವಿಜಯ ರಾಘವೇಂದ್ರ “ಚಿನ್ನ, ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲಿ.. ಎಲ್ಲೆ ಮೀರಿ ಒಲವ ನೀಡಿದೆ ಎದೆಯ ಅಂತರಾಳದಲಿ.. ಬದುಕನ್ನು ಕಟ್ಟಿ ಸರ್ವಸ್ವವಾದೆ.. ಉಸಿರಲ್ಲಿ ಬೆರೆತು ಜೀವಂತವಾದೆ.. ಮುದ್ದಾದ ನಗುವಿನಲ್ಲಿದ್ದ ಶಕ್ತಿ ಪರ್ವತದಷ್ಟು.. ಮರೆಯದೆ ತೊರೆಯದೆ ಎದೆಗೊತ್ತಿ ಪ್ರೀತಿಸುವೆ..” ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಹರ್ಷಿಕಾ ಪೂಣಚ್ಚ- ಭುವನ್

    ಪತ್ನಿಯ ನಿಧನದಿಂದ ಮೌನಕ್ಕೆ ಶರಣಾಗಿದ್ದ ವಿಜಯ್ ಮೊನ್ನೆಯಷ್ಟೇ ಸ್ಪಂದನಾ ಬಗ್ಗೆ ಭಾವುಕರಾಗಿ ವೀಡಿಯೋ ಮೂಲಕ ಮನದಾಳದ ಭಾವನೆಗಳನ್ನ ಅಕ್ಷರ ರೂಪಕ್ಕೆ ಇಳಿಸಿದ್ದರು. ಸ್ಪಂದನಾ ನೆನಪನ್ನ ತಮ್ಮೊಳಗಿನ ಪ್ರೀತಿಯನ್ನ ಅವರು ಬಿಚ್ಚಿಟ್ಟಿದ್ದರು. ಆ ಸಾಲುಗಳು ಕೂಡ ಅನೇಕರನ್ನು ಭಾವುಕರನ್ನಾಗಿಸಿದ್ದವು.

    ಸ್ಪಂದನಾ ಹೆಸರಿಗೆ ತಕ್ಕ ಜೀವ. ಉಸಿರಿಗೆ ತಕ್ಕ ಭಾವ. ಅಳತೆಗೆ ತಕ್ಕ ನುಡಿ. ಬದುಕಿಗೆ ತಕ್ಕ ನಡೆ. ನಮಗೆಂದೇ ಮಿಡಿದ ನಿನ್ನ ಹೃದಯವ. ನಿಲ್ಲದು ನಿನ್ನೊಂದಿಗಿನ ಕಲರವ. ನಾನೆಂದೂ ನಿನ್ನವ. ಕೇವಲ ನಿನ್ನವ ಎಂದು ವಿಜಯ ರಾಘವೇಂದ್ರ ಭಾವನ್ಮಾತಕವಾಗಿ ಸಾಲುಗಳನ್ನು ಬರೆದುಕೊಂಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ಜಗ್ಗೇಶ್ ಕೊಟ್ಟ ಡಿಫರೆಂಟ್ ಗಿಫ್ಟ್

    ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ಜಗ್ಗೇಶ್ ಕೊಟ್ಟ ಡಿಫರೆಂಟ್ ಗಿಫ್ಟ್

    ಸ್ಯಾಂಡಲ್‍ವುಡ್ ನವರಸ ನಾಯಕ ಜಗ್ಗೇಶ್ ಹಾಗೂ ಪರಿಮಳ ಅವರಿಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ. ವೈವಾಹಿಕ ಜೀವನಕ್ಕೆ ಕಾಲಿಟ್ಟು 38 ವರ್ಷ ಕಳೆದಿರುವ ಸಂದರ್ಭದಲ್ಲಿ ನಟ ಜಗ್ಗೇಶ್ ಇದೇ ಸಂತಸದಲ್ಲಿ ಒಂದಷ್ಟು ಫೋಟೋಗಳನ್ನು ಕೋಲಾಜ್ ಮಾಡಿರುವ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

     

    ಜಗ್ಗೇಶ್ ಅವರು ಆಗಾಗ ಕೆಲವು ಸಂದರ್ಶಗಳಲ್ಲಿ ತಮ್ಮ ಇಂಟ್ರೆಸ್ಟಿಂಗ್ ಲವ್ ಸ್ಟೋರಿಯನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಜಗ್ಗೇಶ್ ಮನೆಯವರ ವಿರೋಧದ ನಡುವೆಯೂ ಪರಿಮಳ ಅವರ ಕೈಹಿಡಿದಿದ್ದು, ಈ ಜೋಡಿಯ ಪ್ರೇಮ್ ಕಹಾನಿ ವೆರಿ ಡಿಫರೆಂಟ್. 1984ರ ಮಾರ್ಚ್ 22ರಂದು ಸಪ್ತಪದಿ ತುಳಿದ ಜಗ್ಗೇಶ್ ಹಾಗೂ ಪರಿಮಳ ಅವರ ದಾಂಪತ್ಯಕ್ಕೆ ಇಂದಿಗೆ ಮೂರು ಮುಕ್ಕಾಲು ದಶಕ.

    ಸದ್ಯ ಈ ವಿಶೇಷ ದಿನದಂದು ಜಗ್ಗೇಶ್ ಅವರು ತಮ್ಮ ಮತ್ತು ಅವರ ಪತ್ನಿಯ ಬಾಲ್ಯದ ಫೋಟೋ, ತಮ್ಮ ವಿವಾಹದ ಫೋಟೋ, ಮಕ್ಕಳಾದ ಗುರುರಾಜ್, ಯತಿರಾಜ್ ಫೋಟೋ, ಹಿರಿಯ ಪುತ್ರ ಗುರುರಾಜ್ ವಿವಾಹದ ಫೋಟೋ, ಮೊಮ್ಮಗ ಅರ್ಜುನ್ ಸೇರಿದಂತೆ ಫ್ಯಾಮಿಲಿ ಫೋಟೋವನ್ನು ಕೋಲಾಜ್ ಮಾಡಿರುವ ವೀಡಿಯೋವನ್ನು ಪತ್ನಿಗೆ ಗಿಫ್ಟ್ ಎಂಬಂತೆ ನೀಡಿದ್ದಾರೆ. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ

    ಈ ಸುಂದರವಾದ ವೀಡಿಯೋ ಜೊತೆಗೆ ಇಂದು ಪರಿಮಳನಿಗೆ ತಾಳಿ ಕಟ್ಟಿ 38ನೆ ವರ್ಷ. ಪರಿಮಳಚಾರ್ಯರು, ಗುರುರಾಜ, ಯತಿರಾಜ ರಾಯರ ಸಂಬಂಧಿತ ನಾಮಾಂಕಿತ. ಅರ್ಜುನ, ಕೃಷ್ಣನ ಪ್ರಿಯ ಸಖ. ರಾಯರು ಕೃಷ್ಣನ ಪ್ರಿಯ ಸಖ. ಇಷ್ಟು ಹೆಸರು ದಿನ ಬಳಸಲು ರಾಯರು ನನ್ನ ಬದುಕಿಗೆ ನೀಡಿದ ದೇಣಿಗೆ. ಪರಿಮಳ ಮಡದಿ, ಗುರುರಾಜ ಯತಿರಾಜ ಮಕ್ಕಳು, ಅರ್ಜುನ ಮೂಮ್ಮಗ ಶುಭ ಮಂಗಳವಾರ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಕನ್ನಡದ ಹುಡುಗನ ಚಿತ್ರಕ್ಕೆ ಹನ್ಸಿಕಾ ಮೊಟ್ವಾನಿ ಹೀರೋಯಿನ್

  • ಚಂದನ್, ನಿವೇದಿತಾ ದಾಂಪತ್ಯಕ್ಕೆ 2 ವರ್ಷ – ಔಟ್ ಆಫ್ ಸ್ಟೇಶನ್‍ಗೆ ಹಾರಿದ ಕ್ಯೂಟ್ ಜೋಡಿ

    ಚಂದನ್, ನಿವೇದಿತಾ ದಾಂಪತ್ಯಕ್ಕೆ 2 ವರ್ಷ – ಔಟ್ ಆಫ್ ಸ್ಟೇಶನ್‍ಗೆ ಹಾರಿದ ಕ್ಯೂಟ್ ಜೋಡಿ

    ಬೆಂಗಳೂರು: ಸ್ಯಾಂಡಲ್‍ವುಡ್ ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

    ಚಂದನ್ ಹಾಗೂ ನಿವೇದಿತಾ ಗೌಡ ಆಗಾಗ ಫೋಟೋ ಹಾಗೂ ವೀಡಿಯೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಇತ್ತೀಚೆಗಷ್ಟೇ ಚಂದನ್ ಲಕ್ ಲಕ್ ಲಂಬೋರ್ಗಿನಿ ಹಾಡು ಬಿಡುಗಡೆ ಮಾಡಿದ್ದರು. ಇನ್ನೂ ಈ ಹಾಡು ಸಖತ್ ಸದ್ದು ಮಾಡಿತ್ತು. ಸದ್ಯ ಚಂದನ್ ನಿವೇದಿತಾ ಕೈ ಹಿಡಿದು ಇಂದಿಗೆ 2 ವರ್ಷ ತುಂಬಿದ್ದು, ಇದೇ ಖುಷಿಯಲ್ಲಿ ಜೋಡಿ ಔಟ್ ಆಫ್ ಸ್ಟೇಷನ್‍ನಲ್ಲಿ ಟೂರ್ ಹೊಡೆಯುತ್ತಿದ್ದಾರೆ.

    ಈ ವಿಶೇಷ ದಿನದಂದು ನಿವೇದಿತಾ ಗೌಡ ತಮ್ಮ ಮದುವೆಯ ಫೋಟೋಗಳನ್ನು ಕೊಲಾಜ್ ಮಾಡಿರುವ ಪುಟ್ಟ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಸಿಹಿ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಇನ್ನೂ ಈ ಕ್ಯೂಟ್ ಜೋಡಿಗೆ ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ: ಮತ್ತೊಬ್ಬ ರಾಜಕಾರಣಿ ಪುತ್ರ ಚಂದನವನದಲ್ಲಿ ‘ಗತವೈಭವ’ ಮಾಡಲು ಎಂಟ್ರಿ!

    ಬಿಗ್‍ಬಾಸ್ ಸೀಸನ್-5ರಲ್ಲಿ ಖ್ಯಾತಿ ಪಡೆದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ. ಬಿಗ್‍ಬಾಸ್ ಮನೆಯಿಂದ ಹೊರಬಂದ ಮೇಲೆ ಈ ಜೋಡಿ ಪ್ರೀತಿಯಲ್ಲಿ ಬಿದ್ದಿದ್ದರು. ಮೈಸೂರಿನ ದಸರಾ ಕಾರ್ಯಕ್ರಮದ ವೇಳೆ ಚಂದನ್ ನಿವೇದಿತಾ ಬಳಿ ಪ್ರೇಮ ನಿವೇದನೆ ಮಾಡಿಕೊಳ್ಳುವ ಮೂಲಕ ನಿವೇದಿತಾ ಮುಂದೆ ಮದುವೆ ಪ್ರಪೋಸಲ್ ಇಟ್ಟರು. ಈ ವೇಳೆ ಚಂದನ್ ಪ್ರೀತಿಗೆ ಮನಸೋತು ನಿವೇದಿತಾ ಗೌಡ ಕೂಡ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದರು.

    ನಂತರ 2020ರ ಫೆಬ್ರವರಿ 27ರಂದು ಮೈಸೂರಿನಲ್ಲಿ ಶುಭ ಮೂಹೂರ್ತದಲ್ಲಿ ಶುಭ ಮೂಹೂರ್ತದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಚಂದನ್ ನಿವೇದಿತರನ್ನು ವರಿಸಿದರು. ಈ ಜೋಡಿ ಮದುವೆಗೆ ಅನೇಕ ಚಿತ್ರರಂಗದ ಗಣ್ಯರು ಆಗಮಿಸಿ ಶುಭ ಕೋರಿದ್ದರು. ಇದನ್ನೂ ಓದಿ: ದೇಶ ವಿದೇಶದಲ್ಲಿ ಜೇಮ್ಸ್ ಅಬ್ಬರ ಶುರು – ಭಾರತ ಸೇರಿದಂತೆ ಒಟ್ಟು 15 ದೇಶಗಳಲ್ಲಿ ಜೇಮ್ಸ್!

  • ವಿರುಷ್ಕಾ ದಂಪತಿಗೆ 4ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

    ವಿರುಷ್ಕಾ ದಂಪತಿಗೆ 4ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

    ಮುಂಬೈ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಇಂದು ತಮ್ಮ 4ನೇ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದಾರೆ.

    ಆಗಾಗ ಸೋಶಿಯಲ್ ಮೀಡಿಯಾದಲ್ಲಿ ರೋಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಸಖತ್ ಆ್ಯಕ್ಟೀವ್ ಆಗಿರುವ ವಿರುಷ್ಕಾ ದಂಪತಿ ಅನೇಕ ಮಂದಿಗೆ ಮಾದರಿಯಾಗಿದ್ದಾರೆ. ಸದ್ಯ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ವಿರುಷ್ಕಾ ದಂಪತಿಗೆ ಹಲವಾರು ಸೆಲೆಬ್ರೆಟಿಗಳು, ಸ್ನೇಹಿತರು ಹಾಗೂ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಇದನ್ನೂ ಓದಿ: ಇವರು ಯಾರೆಂದು ಗುರುತಿಸಿ- ಹಳೇ ಫೋಟೋ ಹಂಚಿಕೊಂಡು ಹರ್ಭಜನ್ ಪ್ರಶ್ನೆ

    ಇಟಲಿಯಲ್ಲಿ ಸಪ್ತಪದಿ ತುಳಿದ ಅನುಷ್ಕಾ ಹಾಗೂ ವಿರಾಟ್ ವಿವಾಹ ಮಹೋತ್ಸವದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ವಿಶ್ ಮಾಡುವ ಮೂಲಕ ಸವಿ ನೆನಪುಗಳನ್ನು ಮೆಲುಕುಹಾಕುತ್ತಿದ್ದಾರೆ. 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗೆ 2021 ವಮಿಕಾ ಎಂಬ ಮುದ್ದಾದ ಮಗಳು ಜನಿಸಿದ್ದಾಳೆ. ಇದನ್ನೂ ಓದಿ: ಓಮಿಕ್ರಾನ್‌ ಸೋಂಕಿತನ ಪತ್ನಿ, ಬಾಮೈದುನನಿಗೂ ಸೋಂಕು- ಗುಜರಾತ್‌ನಲ್ಲಿ 3ಕ್ಕೇರಿದ ಸಂಖ್ಯೆ

     

    View this post on Instagram

     

    A post shared by AnushkaSharma1588 (@anushkasharma)

    ಇತ್ತೀಚೆಗಷ್ಟೇ ಅವಳ ಆ ಒಂದು ನಗೆ ನಮ್ಮ ಜಗತ್ತನ್ನೇ ಬದಲಿಸಿತು. ಪುಟ್ಟ ಮಗಳೇ, ನಿನ್ನ ಪ್ರೀತಿಗಾಗಿ ನಾವಿಬ್ಬರೂ ನಿನ್ನೊಟ್ಟಿಗಿರುತ್ತೇವೆ ಎಂದು 6 ತಿಂಗಳು ತುಂಬಿದ್ದ ಮಗಳಿಗೆ ವಿಶ್‌ ಮಾಡಿ ಅನುಷ್ಕಾ ಶರ್ಮಾ ಪೋಸ್ಟ್‌ ಹಾಕಿದ್ದರು. ಮತ್ತೊಂದು ಫೋಟೋದಲ್ಲಿ ವಮಿಕಾಳನ್ನು ತಮ್ಮ ಎದೆಯ ಮೇಲೆ ಮಲಗಿಸಿಕೊಂಡು ಆಕಾಶದತ್ತ ಕೈ ತೋರಿಸುತ್ತಿರುವುದನ್ನು ಕಾಣಬಹುದಾಗಿದೆ.

  • ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್‍ಗೆ 3ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

    ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್‍ಗೆ 3ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಹಾಲಿವುಡ್ ಸಿಂಗರ್ ನಿಕ್ ಜೋನಾಸ್ 3ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ.

    ಇತ್ತೀಚೆಗಷ್ಟೇ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಾಸ್‍ನಿಂದ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ ನಿಕ್ ಜೋನಾಸ್ ವರ್ಕೌಟ್ ಮಾಡುತ್ತಿದ್ದ ವೀಡಿಯೋಗೆ ರೋಮ್ಯಾಂಟಿಕ್ ಆಗಿ ಕಾಮೆಂಟ್ ಮಾಡುವ ಮೂಲಕ ಪ್ರಿಯಾಂಕಾ ಚೋಪ್ರಾ ವಿಚ್ಛೇದನ ಗಾಸಿಪ್‍ಗೆ ಬ್ರೇಕ್ ಹಾಕಿದ್ದರು. ಇದನ್ನೂ ಓದಿ: ಪತ್ನಿ ಡ್ರೆಸ್ ಸರಿಪಡಿಸೋದ್ರಲ್ಲಿ ಬ್ಯುಸಿಯಾದ ನಿಕ್ – ಪರ್ಫೆಕ್ಟ್ ಜಂಟಲ್ ಮ್ಯಾನ್ ಅಂದ ನೆಟ್ಟಿಗರು

    ಇದೀಗ ಪ್ರಿಯಾಂಕಾ ಹಾಗೂ ನಿಕ್ ಡಿಸೆಂಬರ್ 1 ರಂದು ಲಂಡನ್‍ನಲ್ಲಿ ಮದುವೆ ವಾರ್ಷಿಕೋತ್ಸವನ್ನು ಸಖತ್ ಗ್ರ್ಯಾಂಡ್ ಆಗಿ ಆಚರಿಸಿಕೊಂಡಿದ್ದಾರೆ. ಇನ್ನೂ ವೆಡ್ಡಿಂಗ್ ಆ್ಯನಿವರ್ಸರಿ ಸೆಲೆಬ್ರೆಶನ್ ವೀಡಿಯೋವನ್ನು ನಿಕ್ ಜೋನಾಸ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಫಾರ್ ಎವರ್(ಎಂದೆಂದಿಗೂ) ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ತಾಯಿಯಾಗ್ತಿದ್ದಾರಾ ಪ್ರಿಯಾಂಕಾ ಚೋಪ್ರಾ?

     

    View this post on Instagram

     

    A post shared by Nick Jonas (@nickjonas)

    ವೀಡಿಯೋದಲ್ಲಿ ಪತ್ನಿಗೆ ಇಷ್ಟವಾಗುವಂತೆ ಫಾರ್ ಎವರ್ ಜೋಡಿಸಿರುವ ಅಕ್ಷರ, ಕ್ಯಾಡಲ್ ಲೈಟ್‍ಗಳನ್ನು ಹಾಗೂ ಡೇಬಲ್ ಮೇಲೆ ಬಣ್ಣ, ಬಣ್ಣದ ಹೂವಿಗಳಿಂದ ಅಲಂಕರಿಸಿರುವುದನ್ನು ಕಾಣಬಹುದಾಗಿದೆ. ವಿಶೇಷವೆಂದರೆ ಈ ವೀಡಿಯೋದಲ್ಲಿ ಟೇಬಲ್ ಮೇಲೆ ಕುಳಿತು ಪ್ರಿಯಾಂಕಾ ಚೋಪ್ರಾ ಹಾಯ್ ಮಾಡುತ್ತಾ ಕ್ಯೂಟ್ ಆಗಿ ಸ್ಮೈಲ್ ಮಾಡಿರುವುದನ್ನು ನೋಡಬಹುದಾಗಿದೆ. ಇದನ್ನೂ ಓದಿ: ನಿಕ್ ಜೊತೆಗಿನ ವಿಚ್ಛೇದನ ಗಾಸಿಪ್​ಗೆ ಬ್ರೇಕ್ ಹಾಕಿದ ಪ್ರಿಯಾಂಕಾ ಚೋಪ್ರಾ

     

    View this post on Instagram

     

    A post shared by Priyanka (@priyankachopra)

    ಪ್ರಿಯಾಂಕಾ ಚೋಪ್ರಾ ಕೂಡ ಸೆಲೆಬ್ರೆಶನ್ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ಫೋಟೋದಲ್ಲಿ ಟೇಬಲ್ ಮೇಲೆ ನಿಮ್ಮನ್ನು ಕಂಡುಕೊಂಡೆ, ಮದುವೆಯಾದೆ, ನಿಮ್ಮನ್ನು ಉಳಿಸಿಕೊಂಡೆ ಎಂಬ ಕಾರ್ಡ್ ಇರುವುದನ್ನು ಕಾಣಬಹುದಾಗಿದೆ.

  • ರಾಯಲ್ ಆಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ನೇಹಾ, ರೋಹನ್ ಪ್ರೀತ್ ಸಿಂಗ್

    ರಾಯಲ್ ಆಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ನೇಹಾ, ರೋಹನ್ ಪ್ರೀತ್ ಸಿಂಗ್

    -ದಂಪತಿಯ ರೋಮ್ಯಾಂಟಿಕ್ ಫೋಟೋಗಳು ವೈರಲ್

    ಜೈಪುರ: ಬಾಲಿವುಡ್ ಜನಪ್ರಿಯ ಗಾಯಕಿ ನೇಹಾ ಕಕ್ಕರ್ ಮತ್ತು ಪಂಜಾಬಿ ಗಾಯಕ ರೋಹನ್ ಪ್ರೀತ್ ಸಿಂಗ್ ತಮ್ಮ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ರಾಜಸ್ಥಾನದಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ.

    Neha Kakkar

    ಅಕ್ಟೋರ್ 24ರಂದು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿರುವ ನೇಹಾ, ಪತಿ ಜೊತೆಗಿರುವ ಕೆಲವೊಂದು ರೋಮ್ಯಾಂಟಿಕ್ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ರಾಯಲ್ ಥೀಮ್‍ನಲ್ಲಿ ಅಲಂಕರಿಸಲ್ಪಟ್ಟ ದೊಡ್ಡ ದೋಯನಲ್ಲಿ ದಂಪತಿಗಳು ಕಾಲ ಕಳೆದಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ:  6 ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಪ್ರಜ್ವಲ್ ದೇವರಾಜ್

    Neha Kakkar

    ಫೋಟೋ ಜೊತೆಗೆ ನೇಹಾ, ನಮ್ಮ ಮೊದಲನೇ ವಿವಾಹ ವಾರ್ಷಿಕೋತ್ಸವ ಹೀಗಿತ್ತು. ನಮನ್ನು ವಿಶೇಷವಾಗಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಿಮ್ಮ ಆಶೀರ್ವಾದ, ಪೋಸ್ಟ್, ಸ್ಟೋರಿಗಳು, ನಿಮ್ಮ ಸಂದೇಶ, ನಿಮ್ಮ ಕರೆ ನಿಮ್ಮೆಲ್ಲರ ಪ್ರೀತಿ ನಮ್ಮನ್ನು ಸಂತಸಗೊಳಿಸಿತು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    Neha Kakkar

    ಫೋಟೋದಲ್ಲಿ ನೇಹಾ ಗುಲಾಬಿ ಬಣ್ಣದ ಸಲ್ವರ್-ಸೂಟ್‍ನಲ್ಲಿ ಕಾಣಿಸಿಕೊಂಡಿದ್ದರೆ, ರೋಹನ್ ಗುಲಾಬಿ ಬಣ್ಣದ ಪೇಟಾ ತೊಟ್ಟು ಬ್ಲೂ ಕಲರ್ ಡ್ರೆಸ್ ಧರಿಸಿ ಮಿಂಚಿದ್ದಾರೆ. ವಿಶೇಷವೆಂದರೆ ಇಬ್ಬರೂ ಲೇಕ್ ಸೈಡ್‍ನಲ್ಲಿ ಸೂರ್ಯಾಸ್ತದ ವೇಳೆ ದೊಡ್ಡ ದೋಣಿಯಲ್ಲಿ ಕೈಕೈ ಹಿಡಿದುಕೊಂಡು ರೋಮ್ಯಾಂಟಿಕ್ ಆಗಿ ಕಾಲ ಕಳೆದಿದ್ದಾರೆ. ಅಲ್ಲದೇ ಇವರ ಮುಂದೆ ಕ್ಯಾಂಡಲ್‍ ಲೈಟ್ ಡಿನ್ನರ್ ಗೆ ಸಿದ್ದಪಡಿಸಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ:  ಕೋಟೆನಾಡಿನ ರಾಜಕೀಯಕ್ಕೆ ಚಿತ್ರನಟ ಶಶಿಕುಮಾರ್ ರೀ-ಎಂಟ್ರಿ!

    ನೇಹು ದಾ ವ್ಯಾ ಹಾಡಿನ ವೀಡಿಯೋದ ಚಿತ್ರೀಕರಣದ ವೇಳೆ ನೇಹಾ ಹಾಗೂ ರೋಹನ್ ಪ್ರೀತ್ ಸಿಂಗ್ ಇಬ್ಬರಿಗೂ ಪರಿಚಯವಾಗಿ ನಂತರ ಪ್ರೀತಿಯಲ್ಲಿ ಬಿದ್ದರು, ನಂತರ ಕಳೆದ ವರ್ಷ ಈ ಜೋಡಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದನ್ನೂ ಓದಿ:  ಕುಚ್ಚಲಕ್ಕಿ ರೊಟ್ಟಿ ಮಾಡಿದ ರಾಬರ್ಟ್ ನಟಿ ಆಶಾ ಭಟ್

  • ಸುದೀಪ್ ದಂಪತಿಗೆ 20ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ – ಅಪ್ಪ, ಅಮ್ಮನಿಗೆ ಸಾನ್ವಿ ಹೇಳಿದ್ದೇನು?

    ಸುದೀಪ್ ದಂಪತಿಗೆ 20ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ – ಅಪ್ಪ, ಅಮ್ಮನಿಗೆ ಸಾನ್ವಿ ಹೇಳಿದ್ದೇನು?

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ಸುದೀಪ್ ಅವರು ಇಂದು 20ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. ವಿಶೇಷವೆಂದರೆ ಪ್ರೀತಿಯ ಅಪ್ಪ, ಅಮ್ಮಗೆ ಮಗಳು ಸಾನ್ವಿ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಕೋರಿದ್ದಾರೆ.

    sudeep priya

    ಸುದೀಪ್ ಹಾಗೂ ಪ್ರಿಯಾ 2001ರ ಅಕ್ಟೋಬರ್ 18ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2004ರಲ್ಲಿ ಈ ದಂಪತಿಗೆ ಸಾನ್ವಿ ಜನಿಸಿದರು. ಇಂದಿಗೆ ಸುದೀಪ್ ಮತ್ತು ಪ್ರಿಯಾ ಅವರು ಮದುವೆಯಾಗಿ 20 ವರ್ಷ ಕಳೆದಿದ್ದು, ಈ ಹಿನ್ನೆಲೆ ಸಾನ್ವಿ ಸೋಶಿಯಲ್ ಮೀಡಿಯಾ ಮೂಲಕ ಸುದೀಪ್ ಹಾಗೂ ಪ್ರಿಯಾಗೆ ವಿಶ್ ಮಾಡಿದ್ದಾರೆ. ಇದನ್ನೂ ಓದಿ:  ಟಾಪ್‌ಲೆಸ್ ಅವತಾರದಲ್ಲಿ ಇಷಾ ಗುಪ್ತ – ಹೆಚ್ಚಾಯ್ತು ತುಂಡೈಕ್ಳ ಎದೆ ಬಡಿತ

    ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಾನ್ವಿ ಅಪ್ಪ, ಅಮ್ಮನ ಜೊತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಕಿಚ್ಚ ದಂಪತಿಗೆ ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ಇದನ್ನೂ ಓದಿ:  ಕತ್ರಿನಾ ಜೊತೆಗೆ ವಿಕ್ಕಿ ಕೌಶಲ್ ಎಂಗೇಜ್‍ಮೆಂಟ್?

     

    View this post on Instagram

     

    A post shared by Only Sudeepism (@only_sudeepism)

    ಈ ಬಾರಿ ಕೊರೊನಾ ಇರುವ ಕಾರಣದಿಂದಾಗಿ ಮನೆಯಲ್ಲಿಯೇ ಸರಳವಾಗಿ ಸುದೀಪ್ ದಂಪತಿ ಕೇಕ್ ಕಟ್ ಮಾಡಿದ್ದು, ಇದೀಗ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  • ಅಂದು ಬೆಸ್ಟ್ ಫ್ರೆಂಡ್ ಹೆಂಡ್ತಿಯಾದ್ರು, ಇಂದು ಪತ್ನಿಯೇ ಬೆಸ್ಟ್ ಫ್ರೆಂಡ್: ರಮೇಶ್

    ಅಂದು ಬೆಸ್ಟ್ ಫ್ರೆಂಡ್ ಹೆಂಡ್ತಿಯಾದ್ರು, ಇಂದು ಪತ್ನಿಯೇ ಬೆಸ್ಟ್ ಫ್ರೆಂಡ್: ರಮೇಶ್

    ಬೆಂಗಳೂರು: ಕನ್ನಡ ಚಿತ್ರರಂಗದ ಎವರ್ ಗ್ರೀನ್ ನಟ, ನಿರ್ದೇಶಕ, ಸೃಜನ ಶೀಲ ವ್ಯಕ್ತಿ ರಮೇಶ್ ಅರವಿಂದ್. ಇತ್ತೀಚೆಗಷ್ಟೇ ತಮ್ಮ ಮಗಳ ಮದುವೆಯನ್ನು ನಟ ಅದ್ದೂರಿಯಾಗಿ ನೆರವೇರಿಸಿದ್ರು. ಇದೀಗ ಅವರು ತಮ್ಮ ವೈವಾಹಿಕ ಜೀವನದ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ.

    ಹೌದು. ಇಂದು ನಟ ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿ ತಮ್ಮ 30 ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ಇಂದು ತಮ್ಮ ಮದುವೆಯ 2 ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ವಿಶೇಷ ಸಾಲು ಕೂಡ ಬರೆದುಕೊಂಡಿದ್ದಾರೆ. ‘ಅಂದು ಬೆಸ್ಟ್ ಫ್ರೆಂಡ್ ಹೆಂಡತಿಯಾದರು, ಇಂದು ಹೆಂಡತಿಯೇ ಬೆಸ್ಟ್ ಫ್ರೆಂಡ್’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ನಟ ತಮ್ಮ ಪತ್ನಿಯನ್ನು ಒಳ್ಳೆಯ ಗೆಳತಿ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಜು.12 ರಂದು ಯಾರೂ ಮನೆಯ ಬಳಿ ಬರಬೇಡಿ: ಶಿವಣ್ಣ ಮನವಿ

    ರಮೇಶ್ ಅವರು ಜುಲೈ 7 ರಂದು 1991 ರಲ್ಲಿ ತಾವು ಪ್ರೀತಿಸಿದ ಅರ್ಚನಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಂದಿಗೆ ಅವರ ದಾಂಪತ್ಯಕ್ಕೆ 30 ವರ್ಷವಾಗಿದೆ. ಒಟ್ಟಿನಲ್ಲಿ ರಮೇಶ್ ಅರವಿಂದ್ ಪರ್ಫೆಕ್ಟ್ ನಟ, ನಿರ್ದೇಶಕ ಎನಿಸಿಕೊಂಡಂತೆ ತಮ್ಮ ವೈಯಕ್ತಿಕ ಜೀವನದಲ್ಲೂ ಪರ್ಫೆಕ್ಟ್ ಗೃಹಸ್ಥ ಎಂಬುದರಲ್ಲಿ ಎರಡು ಮಾತಿಲ್ಲ. ಕಳೆದ ಡಿಸೆಂಬರ್ ನಲ್ಲಿ ಸಹೋದ್ಯೋಗಿ ಅಕ್ಷಯ್ ಜೊತೆ ರಮೇಶ್ ಪುತ್ರಿ ನಿಹಾರಿಕಾ ಅವರ ಮದುವೆ ನೆರವೇರಿತ್ತು.

  • ಅಮಿತಾಬ್ ಬಚ್ಚನ್, ಜಯಗೆ 48ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

    ಅಮಿತಾಬ್ ಬಚ್ಚನ್, ಜಯಗೆ 48ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

    ಮುಂಬೈ: ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಜಯ ಬಚ್ಚನ್‍ಗೆ 48ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ವಿಶೇಷ ದಿನದಂದು ವಿವಾಹ ವಾರ್ಷಿಕೋತ್ಸವದ ಶುಭಾಶಯ ಕೋರಿದ ಎಲ್ಲರಿಗೂ ಅಮಿತಾಬ್ ಬಚ್ಚಬ್ ಸೋಶಿಯಲ್ ಮೀಡಿಯಾ ಮೂಲಕ ಧನ್ಯವಾದ ತಿಳಿಸಿದ್ದಾರೆ.

    ಅಮಿತಾಬ್ ಬಚ್ಚನ್‍ರವರು ತಮ್ಮ ವಿವಾಹದ ವೇಳೆ ಕ್ಲಿಕ್ಕಿಸಿದ ಫೋಟೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋದಲ್ಲಿ ಅಮಿತಾಬ್ ಬಚ್ಚನ್ ಶೇರ್ವಾನಿ ಧರಿಸಿದ್ದು, ಜಯ ಮಾಧುರಿ ಕೆಂಪು ಬಣ್ಣದ ಲೆಹೆಂಗ ತೊಟ್ಟು, ಆಭರಣಗಳನ್ನು ಧರಿಸಿ ವಿವಾಹದ ವಿಧಿಗಳನ್ನು ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಮತ್ತೊಂದರಲ್ಲಿ ಅಮಿತಾಬ್ ಬಚ್ಚನ್ ಜಯರವರ ಹಣೆಯ ಮೇಲೆ ಸಿಂಧೂರ ಇಡುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನು ಓದಿ:ಬಾಲಿವುಡ್‍ನಲ್ಲಿ 52 ವರ್ಷ ಪೂರೈಸಿದ ಬಿಗ್ ಬಿ

    ಅಮಿತಾಬ್ ಬಚ್ಚನ್ ಹಾಗೂ ಜಯ ನಡುವೆ ಜಂಜೀರ್ ಸಿನಿಮಾದ ಚಿತ್ರೀಕರಣ ವೇಳೆ ಪ್ರೀತಿ ಹುಟ್ಟಿತ್ತು. ಈ ಸಿನಿಮಾ ಬಾಲಿವುಡ್‍ನಲ್ಲಿ ಹಿಟ್ ಕೂಡ ಆಗಿತ್ತು. ಬಳಿಕ ಈ ಸಿನಿಮಾದ ಸಕ್ಸಸ್ ನಂತರ 1973 ಜೂನ್ 3ರಂದು ಈ ಜೋಡಿ ಸಪ್ತಪದಿ ತುಳಿದಿದ್ದರು.

     

    View this post on Instagram

     

    A post shared by Amitabh Bachchan (@amitabhbachchan)

    ರೀಲ್‍ನಲ್ಲಿ ಮಾತ್ರವಲ್ಲದೇ ರಿಯಲ್ ಲೈಫ್‍ನಲ್ಲಿಯೂ ಎಲ್ಲರಿಗೂ ಮಾದರಿಯಂತೆ ಇರುವ ಈ ಜೋಡಿ ಅಭಿಮಾನ್, ಚುಪ್ ಚುಪ್ ಕೆ, ಶೋಲೆ, ಕಭಿ ಖುಷಿ ಕಭಿ ಗಂ ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸಿದ್ದಾರೆ. ಅಮಿತಾಬ್ ಬಚ್ಚನ್ ದಂಪತಿಗೆ ಅಭಿಷೇಕ್ ಬಚ್ಚನ್ ಹಾಗೂ ಶ್ವೇತಾ ಬಚ್ಚನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇದನ್ನು ಓದಿ:ಹೆಸರಿಟ್ಟು ಮುದ್ದು ಮಗನನ್ನು ಪರಿಚಯಿಸಿದ ಗಾಯಕಿ ಶ್ರೇಯಾ ಘೋಷಾಲ್