Tag: ವಿವಾಹ ವಾರ್ಷಿಕೊತ್ಸವ

  • ಚುನಾವಣೆ ನಂತರ ಪತ್ನಿ ಜೊತೆ ಅರ್ಧಶತಕ ಬಾರಿಸಿದ ಖರ್ಗೆ!

    ಚುನಾವಣೆ ನಂತರ ಪತ್ನಿ ಜೊತೆ ಅರ್ಧಶತಕ ಬಾರಿಸಿದ ಖರ್ಗೆ!

    ಕಲಬುರಗಿ: ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಎಲೆಕ್ಷನ್ ಮೂಡ್ ನಿಂದ ಆನಿವರ್ಸರಿ ಮೂಡ್‍ಗೆ ತೆರಳಿದ್ದಾರೆ.

    ಮಲ್ಲಿಕಾರ್ಜುನ್ ಖರ್ಗೆ ಚುನಾವಣೆ ಬಳಿಕ ಕುಟುಂಬದೊಂದಿಗೆ ತಮ್ಮ 50ನೇ ವರ್ಷದ ಮದುವೆಯ ಸಂಭ್ರಮಾಚರಣೆ ಮಾಡಿಕೊಳ್ಳುತ್ತಿದ್ದಾರೆ. ಕಲಬುರಗಿಯ ಲುಂಬಿನಿ ನಿವಾಸದಲ್ಲಿ ಖರ್ಗೆ ಮದುವೆ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದಾರೆ.

    ಮಲ್ಲಿಕಾರ್ಜುನ್ ಖರ್ಗೆ ಹಾಗೂ ತನ್ನ ಪತ್ನಿ ರಾಧಾಬಾಯಿ 50ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಈ ವಿವಾಹ ವಾರ್ಷಿಕೋತ್ಸವದಲ್ಲಿ ಪುತ್ರ ಪ್ರಿಯಾಂಕ್ ಖರ್ಗೆ ಹಾಗೂ ಅಫಜಲ್ ಪುರ ಕಾಂಗ್ರೆಸ್ ಅಭ್ಯರ್ಥಿ ಎಂ.ವೈ ಪಾಟೀಲ್ ಕೂಡ ಭಾಗಿಯಾಗಿದ್ದಾರೆ.

    ಸಮೀಕ್ಷೆಗಳೆಲ್ಲವು ಸುಳ್ಳಾಗಲಿವೆ. ಸಮೀಕ್ಷೆಗಳ ಮೇಲೆ ನನಗೆ ನಂಬಿಕೆಯಿಲ್ಲ. ನಮ್ಮದೇ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದೆ ಬರುತ್ತದೆ. 120ಕ್ಕೂ ಅಧಿಕ ಸ್ಥಾನ ಗೆಲ್ಲುತ್ತೇವೆ. ಅತಂತ್ರ ಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಅಧಿಕಾರಕ್ಕೆ ಏರಿದರೆ ಸಿಎಂ ಯಾರಾಗುತ್ತಾರೆ ಎಂದು ಕೇಳಿದ್ದಕ್ಕೆ, ಸಿಎಂ ಅಭ್ಯರ್ಥಿ ಬಗ್ಗೆ ನಾ ಕಮೆಂಟ್ ಮಾಡಲ್ಲ, ಹೈ ಕಮಾಂಡ್ ನಿರ್ಧರಿಸುತ್ತದೆ ಎಂದು ಉತ್ತರಿಸಿದರು.