Tag: ವಿವಾಹಿತ

  • ಅಪ್ರಾಪ್ತ ಬಾಲಕಿಯ ರೇಪ್ – ಮುಸ್ಲಿಂ ಧರ್ಮಕ್ಕೆ ಮತಾಂತರವಾದ್ರೆ ಮದುವೆ ಆಗ್ತೇನೆ ಎಂದ ಕೀಚಕ

    ಅಪ್ರಾಪ್ತ ಬಾಲಕಿಯ ರೇಪ್ – ಮುಸ್ಲಿಂ ಧರ್ಮಕ್ಕೆ ಮತಾಂತರವಾದ್ರೆ ಮದುವೆ ಆಗ್ತೇನೆ ಎಂದ ಕೀಚಕ

    ಮಂಡ್ಯ: ಮುಸ್ಲಿಂ ವಿವಾಹಿತನೋರ್ವ ಹಿಂದೂ ಧರ್ಮದ ಬಾಲಕಿಯ ಅಶ್ಲೀಲ ವೀಡಿಯೋ ಚಿತ್ರಿಸಿ, ಬಳಿಕ ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ವೆಸಗಿದ್ದಾನೆ. ಅಲ್ಲದೇ ತನ್ನ ಧರ್ಮಕ್ಕೆ ಮತಾಂತರವಾದರೆ ಮದುವೆಯಾಗುವ ಆಸೆಯನ್ನು ತೋರಿಸಿದ್ದಾನೆ.

    ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಇತ್ತೀಚಿಗೆ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಒಂದೂವರೆ ತಿಂಗಳ ಹಿಂದೆಯಷ್ಟೇ ಮಳವಳ್ಳಿಯಲ್ಲಿ (Malavalli) ಟ್ಯೂಷನ್ ಮಾಸ್ಟರ್ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದಿದ್ದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಆ ಕೃತ್ಯದಿಂದ ಮನೆ ಪಾಠಕ್ಕೆ ಹೆಣ್ಣು ಮಕ್ಕಳನ್ನು ಕಳುಹಿಸುವುದು ಹೇಗಪ್ಪ ಎಂಬ ಭಯ ಪೋಷಕರಲ್ಲಿ ಮೂಡಿಸಿದೆ. ಈ ಘಟನೆ ಜನರ ಮನಸ್ಸಿನಲ್ಲಿ ಮಾಸುವ ಮುನ್ನವೇ ಮುಸ್ಲಿಂ ವಿವಾಹಿತನೊಬ್ಬ ಹಿಂದೂ ಧರ್ಮದ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ, ತನ್ನ ಧರ್ಮಕ್ಕೆ ಮತಾಂತರವಾದರೆ ಮದುವೆಯಾಗುವುದಾಗಿ ಆಸೆ ತೋರಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಅಸ್ಸಾಂ, ಮೇಘಾಲಯ ಗಡಿಯಲ್ಲಿ ಮರ ಕಳ್ಳಸಾಗಣೆ – ಘರ್ಷಣೆಯಲ್ಲಿ ಅರಣ್ಯ ಸಿಬ್ಬಂದಿ ಸೇರಿ 6 ಸಾವು

    ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ (Nagamangala) ಈ ಘಟನೆ ನಡೆದಿದ್ದು, ಆರೋಪಿಯನ್ನು 25 ವರ್ಷದ ಯೂನಸ್ ಫಾಷ ಎಂದು ಗುರುತಿಸಲಾಗಿದೆ. ಎದುರು ಮನೆಯಲ್ಲೇ ವಾಸವಿದ್ದ ಬಾಲಕಿಯ ಸ್ನೇಹ ಸಂಪಾದಿಸಿದ್ದ ಯೂನಸ್ ಪಾಷ, ಹೆತ್ತವರಿಗೆ ತಿಳಿಯದಂತೆ ಮೊಬೈಲ್ ಕೊಡಿಸಿದ್ದ. ಬಳಿಕ ವೀಡಿಯೋ ಕಾಲ್‍ನಲ್ಲಿ ಬಾಲಕಿಯನ್ನು ಪುಸಲಾಯಿಸಿ ಬೆತ್ತಲೆ ವೀಡಿಯೋ ರೆಕಾರ್ಡ್ ಮಾಡಿಕೊಂಡಿದ್ದ. ಆ ವೀಡಿಯೋವನ್ನು ಸೋಷಿಯಲ್ ಮೀಡಿಯಾಗೆ ಅಪ್‍ಲೋಡ್ ಮಾಡುವ ಬೆದರಿಕೆಯೊಡ್ಡಿದ್ದಲ್ಲದೇ, ಮುಸ್ಲಿಂ ಧರ್ಮಕ್ಕೆ ಮತಾಂತರವಾದರೆ ಮದುವೆಯಾಗುವ ಆಸೆಯನ್ನು ತೋರಿಸಿ ನವೆಂಬರ್ 11ರಂದು ಅತ್ಯಾಚಾರ ಮಾಡಿದ್ದಾನೆ.

    ಬಾಲಕಿಯ ತಂದೆ ನವೆಂಬರ್ 8 ರಂದು ಶಿರಡಿಗೆ ಹೋಗಿದ್ದರು. ಈ ವೇಳೆ ತಾಯಿಯೊಂದಿಗೆ ಅಜ್ಜಿ ಮನೆಗೆ ಹೋಗಿದ್ದ ಬಾಲಕಿಗೆ ನಿದ್ರೆ ಮಾತ್ರೆಯನ್ನು ಪುಡಿ ಮಾಡಿ ನೀಡಿದ್ದ ಕಾಮುಕ ಯೂನಸ್, ನವೆಂಬರ್ 11ರ ರಾತ್ರಿ ಸಾಂಬಾರಿಗೆ ಹಾಕಿಸಿದ್ದ. ಬಳಿಕ ಮನೆಯೊಳಗೆ ಬಂದು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆದಾದ ಬಳಿಕ ಬಾಲಕಿಯ ನಡುವಳಿಕೆಯಲ್ಲಾದ ಬದಲಾವಣೆ ಗಮನಿಸಿದ ಪೋಷಕರು ವಿಚಾರಿಸಿದಾಗ ಅತ್ಯಾಚಾರ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ 19ರಂದು ಬಾಲಕಿಯ ತಂದೆ ದೂರು ನೀಡಿದ್ದು, ಸದ್ಯ ಪೊಲೀಸರು ಯೂನಸ್ ಪಾಷನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ದೊಡ್ಡ ಅನಾಹುತ ತಪ್ಪಿಸಿದ್ದಕ್ಕೆ ದೇವರಿಗೆ ಧನ್ಯವಾದ: ADGP ಅಲೋಕ್ ಕುಮಾರ್

    ಒಟ್ಟಾರೆ ಮಂಡ್ಯದಲ್ಲಿ ದಿನೇ ದಿನೇ ಅಪ್ರಾಪ್ತರ ಮೇಲಿನ ಕ್ರೌರ್ಯಗಳು ಹೆಚ್ಚಾಗುತ್ತಿದ್ದು, ಮುಗ್ದ ಬಾಲಕಿಯನ್ನು ಪುಸಲಾಯಿಸಿ ಬೆತ್ತಲೆ ವೀಡಿಯೋ ಮಾಡಿದ್ದಲ್ಲದೇ ಹೆದರಿಸಿ ಅತ್ಯಾಚಾರ ವೆಸಗಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೋಷಕರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಅಲ್ಲದೇ ಲವ್ ಜಿಹಾದ್ ಆರೋಪವೂ ಕೇಳಿಬಂದಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಿ ಕಾಮುಕನಿಗೆ ಶಿಕ್ಷೆ ಕೊಡಿಸಬೇಕೆಂಬ ಕೂಗು ಹೆಚ್ಚಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬ್ರೇಕಪ್ ಮಾಡಿದಳೆಂದು ಗರ್ಲ್‍ಫ್ರೆಂಡ್ ಕೊಲೆಗೈದ ವಿವಾಹಿತ!

    ಬ್ರೇಕಪ್ ಮಾಡಿದಳೆಂದು ಗರ್ಲ್‍ಫ್ರೆಂಡ್ ಕೊಲೆಗೈದ ವಿವಾಹಿತ!

    ನವದೆಹಲಿ: ಯುವತಿಯೊಬ್ಬಳನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 29 ವರ್ಷದ ವಿವಾಹಿತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ರೋಹಿತ್ ಗುಪ್ತಾ ಹಾಗೂ ಮೃತ ದುರ್ದೈವಿಯನ್ನು ಸಲ್ಮಾ ಎಂದು ಗುರುತಿಸಲಾಗಿದೆ. ಈತ ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಯುವತಿ ಕರೋಲ್ ಭಾಗ್‍ನಲ್ಲಿ ಬ್ಯೂಟಿ ಪಾರ್ಲರ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು.

    ರೋಹಿತ್ ಮೃತ ಯುವತಿ ಜೊತೆ ಸಂಬಂಧ ಹೊಂದಿದ್ದನು. ಆದರೆ ಇದೀಗ ಆಕೆಯ ಜೊತೆಗಿನ ಸಂಬಂಧ ಬೇರ್ಪಟ್ಟಿದೆ. ಹೀಗಾಗಿ ಹತಾಶೆಗೊಂಡ ರೋಹಿತ್ ಯುವತಿಯನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ. ಇದನ್ನೂ ಓದಿ: ಕಣ್ಣಾಮುಚ್ಚಾಲೆ ಆಡುವಾಗ ತಲೆಗೆ ಲಿಫ್ಟ್ ಬಡಿದು ಬಾಲಕಿ ಸಾವು

    ಅಕ್ಟೋಬರ್ 28ರಂದು ಜೆಜೆ ಕಾಲೋನಿಯಲ್ಲಿ ಯುವತಿಯೊಬ್ಬಳು ಸಾವಿಗೀಡಾಗಿರುವ ವಿಚಾರವೊಂದು ಪೊಲೀಸರಿಗೆ ತಿಳಿಯುತ್ತಿದೆ. ಆ ಬಳಿಕ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ದೌಡಾಯಿಸಿದಾಗ ಶೂಟೌಟ್‍ಗೊಳಗಾದ ಸ್ಥಿತಿಯಲ್ಲಿ ಪತ್ತೆಯಾದಳು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಆಕೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ತಕ್ಷಣವೇ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇತ್ತ ಆರೋಪಿಗಳ ಪತ್ತೆಗಾಗಿ ಸಿಸಿಟಿವಿ (CCTV) ಕ್ಯಾಮೆರಾಗಳ ಪರಿಶೀಲನೆ ನಡೆಸಲಾಗಿದೆ. ಅಲ್ಲದೆ ವಿವಿಧ ಸ್ಥಳಗಳು ಮತ್ತು ಸಂಭವನೀಯ ಅಡಗುತಾಣಗಳಲ್ಲಿ ದಾಳಿ ನಡೆಸಲಾಯಿತು. ವಿವರವಾದ ತನಿಖೆಯ ನಂತರ, ಆರೋಪಿಯನ್ನು ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಬಂಧಿಸಲಾಯಿತು. ಇದನ್ನೂ ಓದಿ: ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    ನಿರಂತರ ವಿಚಾರಣೆಯ ವೇಳೆ, ಅವನು ಸಾವಿಗೀಡಾದ ಯುವತಿಯೊಂದಿಗೆ ಸಂಬಂಧ ಹೊಂದಿದ್ದನೆಂದು ಬಹಿರಂಗಪಡಿಸಿದನು. ಆಕೆ ನನ್ನ ಜೊತೆ ಬ್ರೇಕಪ್ ಮಾಡಿಕೊಂಡಿದ್ದರಿಂದ ಹತಾಶೆಗೊಂಡು ಕೊಲೆ ಮಾಡಲು ನಿರ್ಧರಿಸಿದನು. ಅಪರಾಧ ಎಸಗಿದ ಬಳಿಕ ಬೇರೆ ಬೇರೆ ಹೊಟೇಲ್‍ಗಳಲ್ಲಿ ತಲೆಮರೆಸಿಕೊಂಡಿದ್ದ. ಆತ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಸ್ಥಳ ಬದಲಿಸುತ್ತಿದ್ದನು. ಕೊಲೆಗೆ ಬಳಸಲಾದ ಆಯುಧವನ್ನು ಚರಂಡಿಗೆ ಎಸೆದಿರುವುದಾಗಿ ತಿಳಿದುಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಮಂಗಳಮುಖಿಯನ್ನು ಪ್ರೀತಿಸಿ, ಪತ್ನಿಯ ಸಮ್ಮುಖದಲ್ಲಿಯೇ ಮದ್ವೆಯಾದ ವಿವಾಹಿತ

    ಮಂಗಳಮುಖಿಯನ್ನು ಪ್ರೀತಿಸಿ, ಪತ್ನಿಯ ಸಮ್ಮುಖದಲ್ಲಿಯೇ ಮದ್ವೆಯಾದ ವಿವಾಹಿತ

    ಭುವನೇಶ್ವರ್: ಓಡಿಶಾದ(Odisha) ಕಲಹಂಡಿ ಜಿಲ್ಲೆಯಲ್ಲಿ ವಿವಾಹಿತನೊಬ್ಬ ತನ್ನ ಪತ್ನಿಯ(Wife) ಸಮ್ಮುಖದಲ್ಲಿ ಮಂಗಳಮುಖಿಯನ್ನು ವಿವಾಹವಾಗಿದ್ದಾನೆ.

    ಕಲಹಂಡಿಯ ದೇಪುರ್ ಎಂಬ ಪುಟ್ಟ ಗ್ರಾಮದ ಸಂಗೀತಾ ತೃತೀಯ ಲಿಂಗಿಯಾಗಿದ್ದು(Trans Woman), ಈಕೆಯನ್ನು ಫಕೀರ್ ನಿಯಾಲ್ ಎಂಬಾತ ಸಾಂಪ್ರದಾಯಿಕವಾಗಿ ಮದುವೆ ಆಗಿದ್ದಾನೆ.

    5 ವರ್ಷಗಳ ಹಿಂದೆ ಫಕೀರ್ ಮಹಿಳೆಯೊಬ್ಬಳನ್ನು ಮದುವೆಯಾಗಿದ್ದ. ದಂಪತಿಗೆ 2 ವರ್ಷದ ಮಗುವಿದೆ. ಆದರೆ ಕಳೆದ ಒಂದು ವರ್ಷದಿಂದ ಹಿಂದೆ ತೃತೀಯ ಲಿಂಗಿ ಸಮೂದಾಯಕ್ಕೆ ಸೇರಿದ್ದ ಸಂಗೀತಾಳೊಂದಿಗೆ ಫಕೀರ್ ದೈಹಿಕ ಸಂಬಂಧವನ್ನು ಬೆಳೆಸಿಕೊಂಡಿದ್ದ. ಸ್ವಲ್ಪ ದಿನಗಳ ಬಳಿಕ ಈ ಸಂಬಂಧವು ಫಕೀರನ ಪತ್ನಿಗೆ ತಿಳಿದಿದೆ. ಇದನ್ನೂ ಓದಿ: ಓದಲು ಇಷ್ಟವಿಲ್ಲವೆಂದು ಮೂವರು ನಾಪತ್ತೆ- ವಾರವಾದರೂ ಪತ್ತೆಯಾಗದ ಹೆಣ್ಣು ಮಕ್ಕಳನ್ನು ನೆನೆದು ಪೋಷಕರು ಕಣ್ಣೀರು

    ಫಕೀರ್‍ನ ಪತ್ನಿಯು ಇದನ್ನು ವಿರೋಧಿಸದೇ ಅಥವಾ ಯಾವುದೇ ಅಸಮಾಧಾನವನ್ನು ವ್ಯಕ್ತಪಡಿಸದೇ ತನ್ನ ಪತಿಯೊಂದಿಗೆ ಚರ್ಚೆ ನಡೆಸಿದ್ದಾಳೆ. ನಂತರ ಅವರಿಬ್ಬರು ಮದುವೆ ಆಗಲು ಒಪ್ಪಿಗೆಯನ್ನು ಸೂಚಿಸಿದ್ದಾಳೆ.

    ಮಂಗಳಮುಖಿಯರ ಸಮುದಾಯವು ಅನುಸರಿಸುವ ಪದ್ಧತಿಗಳ ಪ್ರಕಾರವೇ ಶಾಸ್ತ್ರೋಕ್ತವಾಗಿ ಫಕೀರ್ ಮತ್ತು ಸಂಗೀತಾ ಅವರ ವಿವಾಹವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಫಕೀರನ ಪತ್ನಿಯೇ ಉಪಸ್ಥಿತಳಿದ್ದು, ಕಾರ್ಯಕ್ರಮಕ್ಕೆ ಸಕಲ ವ್ಯವಸ್ಥೆ ಕಲ್ಪಿಸಿದಳು. ಇದನ್ನೂ ಓದಿ: ಕೇಂದ್ರದ ನಿರ್ಧಾರವನ್ನು ತುಂಬು ಹೃದಯದಿಂದ ಸ್ವಾಗತಿಸಿ ಸಿದ್ದರಾಮಯ್ಯ

    Live Tv
    [brid partner=56869869 player=32851 video=960834 autoplay=true]

  • ಮಕ್ಕಳನ್ನು ಬಿಟ್ಟು ತನ್ನೊಂದಿಗೆ ಬರಲು ಒಪ್ಪದ ಗೃಹಿಣಿಯನ್ನು ಕೊಲೆಗೈದ ವಿವಾಹಿತ!

    ಮಕ್ಕಳನ್ನು ಬಿಟ್ಟು ತನ್ನೊಂದಿಗೆ ಬರಲು ಒಪ್ಪದ ಗೃಹಿಣಿಯನ್ನು ಕೊಲೆಗೈದ ವಿವಾಹಿತ!

    – ಮಹಿಳೆಯನ್ನು ಅಡ್ಡಗಟ್ಟಿ ಕೊಚ್ಚಿ ಕೊಂದ

    ಹಾಸನ: ಮದುವೆಯಾಗುವಂತೆ ಪೀಡಿಸಿ ಗೃಹಿಣಿಯನ್ನು ಕೊಲೆಗೈದ ಘಟನೆಯೊಂದು ಹಾಸನ ತಾಲೂಕಿನ ಚಿಕ್ಕ ಬೂವನಹಳ್ಳಿ ಬಳಿ ನಡೆದಿದೆ.

    ಗಾಯತ್ರಿ (30) ಕೊಲೆಯಾದ ಮಹಿಳೆ. ಈ ವಿವಾಹಿತ ಮಹಿಳೆಯನ್ನು ಮದುವೆಯಾಗುವಂತೆ ಒತ್ತಾಯಿಸಿ ಮಂಜುನಾಥ್ ಬೆನ್ನು ಬಿದ್ದಿದ್ದ. ಮಕ್ಕಳನ್ನು ಬಿಟ್ಟು ತನ್ನೊಟ್ಟಿಗೆ ಬರುವಂತೆ ಒತ್ತಡ ಹಾಕಿದ್ದನು. ಆದರೆ ಇದಕ್ಕೆ ಗಾಯತ್ರಿ ಒಪ್ಪಲಿಲ್ಲ. ಇದರಿಂದ ಸಿಟ್ಟಿಗೆದ್ದ ಮಂಜುನಾಥ್ ಕೆಲಸಕ್ಕೆ ಹೋಗಿದ್ದ ಗಾಯತ್ರಿಯನ್ನು ಅಡ್ಡಗಟ್ಟಿ ಕೊಚ್ಚಿ ಕೊಂದಿದ್ದಾನೆ.

    ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಂಜುನಾಥ್ ನನ್ನ ಪೊಲೀಸರು ಬಂಧಿಸಿದ್ದಾರೆ. ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅತ್ತೆ, ಮಾವ, ಪತ್ನಿ, ಪ್ರಿಯಕರನೇ ಕಾರಣ – ಸೆಲ್ಫಿ ವೀಡಿಯೋ ಮಾಡಿ ವಿವಾಹಿತ ಆತ್ಮಹತ್ಯೆ

    ಅತ್ತೆ, ಮಾವ, ಪತ್ನಿ, ಪ್ರಿಯಕರನೇ ಕಾರಣ – ಸೆಲ್ಫಿ ವೀಡಿಯೋ ಮಾಡಿ ವಿವಾಹಿತ ಆತ್ಮಹತ್ಯೆ

    ತುಮಕೂರು: ಪತ್ನಿ ಅತ್ತೆ ಹಾಗೂ ಮಾವನ ಕಿರುಕುಳದಿಂದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ತುರುವೇಕೆರೆ ತಾಲೂಕು ರಂಗನಹಳ್ಳಿ ಬೋವಿ ಕಾಲೋನಿಯಲ್ಲಿ ನಡೆದಿದೆ.

    ಲೋಕೇಶ್ (30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಸೆಲ್ಫಿ ವೀಡಿಯೋ ಮಾಡಿ ಕೀಟನಾಶಕ ಸೇವಿಸಿ ಆತ್ಮಹತೆಗೆ ಶರಣಾಗಿದ್ದಾನೆ. ಈ ಘಟನೆ ನವೆಂಬರ್ 15 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ವೀಡಿಯೋದಲ್ಲಿ ಲೋಕೇಶ್ ಹೇಳಿದ್ದೇನು..?
    ನನ್ನ ಸಾವಿಗೆ ಹೆಂಡತಿ ಹೇಮಾ, ಅತ್ತೆ ಧನಲಕ್ಷಿ, ಮಾವ ರಾಜು ಹಾಗೂ ಹೆಂಡತಿಯ ಪ್ರಿಯಕರ ಚೇತನ್ ಕಾರಣ. ಪ್ರತಿ ನಿತ್ಯ ಬ್ಲಾಕ್ ಮೇಲ್, ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ನಾವು ಹೇಗೆ ಬದುಕಲಿ ಎಂದು ಲೋಕೇಶ್ ಅಳಲು ತೋಡಿಕೊಂಡಿದ್ದಾನೆ.

    ವಿಡಿಯೋ ಮಾಡಿಟ್ಟು ಲೋಕೇಶ್ ಕೀಟನಾಶಕ ಸೇವಿಸಿದ್ದಾನೆ. ಈ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆದರೆ ಪೊಲೀಸರು ಪ್ರಕರಣದ ತನಿಖೆಯನ್ನೇ ಮಾಡುತ್ತಿಲ್ಲ ಅಂತ ಮೃತನ ಸಂಬಂಧಿಕರು ಆರೋಪ ಮಾಡುತ್ತಿದ್ದಾರೆ.

  • ವಿವಾಹಿತ ಶಿಕ್ಷಕನಿಂದ ಪ್ರೀತಿ ನಾಟಕ- ಶಿಕ್ಷಕಿ ಆತ್ಮಹತ್ಯೆ

    ವಿವಾಹಿತ ಶಿಕ್ಷಕನಿಂದ ಪ್ರೀತಿ ನಾಟಕ- ಶಿಕ್ಷಕಿ ಆತ್ಮಹತ್ಯೆ

    ಹಾಸನ: ವಿವಾಹಿತ ಶಿಕ್ಷಕನೋರ್ವ ಪ್ರೀತಿಯ ನಾಟಕವಾಡಿದ ಕಾರಣ ಮೋಸ ಹೋದ ಶಿಕ್ಷಕಿಯೊಬ್ಬರು ವಿಷ ಸೇವಿಸಿ ಆಹ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿಯನ್ನು ರಾಣಿ ಎಂದು ಗುರುತಿಸಲಾಗಿದೆ. ರಾಣಿಯ ಸಹೋದ್ಯೋಗಿ ಧನಂಜಯ್ ಮೋಸ ಮಾಡಿದ ಶಿಕ್ಷಕ. ಈ ಹಿಂದೆಯೇ ಬೇರೆ ಯುವತಿಯ ಜೊತೆ ಮದುವೆಯಾಗಿದ್ದ ಧನಂಜಯ್, ನಾನು ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ ರಾಣಿಯನ್ನು ಪ್ರೇಮದ ಬಲೆಗೆ ಬೀಳಿಸಿಕೊಂಡಿದ್ದಾನೆ.

    ರಾಣಿ ಮತ್ತು ಧನಂಜಯ್ ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ, ಮಲ್ಲಂದೂರಿನ ಫ್ರೌಢಶಾಲೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ತನಗೆ ಮದುವೆಯಾಗಿರುವುದನ್ನು ಮುಚ್ಚಿಟ್ಟ ಶಿಕ್ಷಕ ಧನಂಜಯ್, ಸಹೋದ್ಯೋಗಿ ಶಿಕ್ಷಕಿ ರಾಣಿ ಜೊತೆ ಪ್ರೀತಿ ನಾಟಕವಾಡಿ ಸಂಬಂಧ ಬೆಳೆಸಿದ್ದ. ಅಲ್ಲದೆ ರಾಣಿಯಿಂದ ಲಕ್ಷಗಟ್ಟಲೆ ಹಣ ಪಡೆದು ವಂಚಿಸಿದ್ದಾನೆ ಎಂದು ಶಿಕ್ಷಕಿ ರಾಣಿ ಸಹೋದರ ರಾಕೇಶ್ ಆರೋಪ ಮಾಡಿದ್ದಾರೆ.

    ತದನಂತರ ಶಿಕ್ಷಕಿ ರಾಣಿ ಹಾಸನ ಜಿಲ್ಲೆಗೆ ವರ್ಗಾವಣೆಯಾಗಿದ್ದಾಳೆ. ಈ ವೇಳೆ ರಾಣಿಗೆ ಧನಂಜಯ್ ಮದುವೆ ವಿಚಾರ ತಿಳಿದು ಬಂದಿದೆ. ಆಗ ರಾಣಿ ಮತ್ತು ಧನಂಜಯನ ನಡುವೆ ಜಗಳವಾಗಿದೆ. ಈ ಜಗಳದ ವಿಡಿಯೋ ಕೂಡ ರಾಣಿ ಸಹೋದರ ಬಯಲು ಮಾಡಿದ್ದು, ತನಗಾಗಿರುವ ನೋವನ್ನು ಹೇಳಿಕೊಂಡು ನನ್ನ ಜೀವನ, ನನ್ನ ಮನಸ್ಸನ್ನು ಹಾಳು ಮಾಡಿದೆ ಎಂದು ಮೋಸ ಮಾಡಿದ ಸಹೋದ್ಯೋಗಿ ಶಿಕ್ಷಕನನ್ನು ರಾಣಿ ಬೈದಿದ್ದಾರೆ. ಎಲ್ಲ ದಾಖಲೆಯೊಂದಿಗೆ ನಿನ್ನ ಮನೆಗೆ ಬರುತ್ತೇನೆ, ಎಲ್ಲವನ್ನೂ ಬಯಲು ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದುಕೊಂಡಿದ್ದಾರೆ.

    ಇದಾದ ನಂತರ ನೊಂದ ಶಿಕ್ಷಕಿಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಗ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಣಿ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ಇತ್ತ ನ್ಯಾಯಕ್ಕಾಗಿ ರಾಣಿ ಸಹೋದರ ಕಾನೂನು ಹೋರಾಟ ಮಾಡುತ್ತಿದ್ದಾರೆ. ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಈ ಪ್ರಕರಣದಲ್ಲಿ ಪೊಲೀಸರೇ ತನ್ನ ತಂಗಿ ಸಾವಿಗೆ ಕಾರಣವಾದ ಶಿಕ್ಷಕ ಧನಂಜಂಯ್ ಗೆ ಸಹಾಯ ಮಾಡುತ್ತಿದ್ದಾರೆಂದು ರಾಣಿ ಸಹೋದರ ರಾಕೇಶ್ ಗಂಭೀರ ಆರೋಪ ಮಾಡಿದ್ದಾರೆ.

  • ಪ್ರೀತಿ ನಿರಾಕರಿಸಿದ್ದಕ್ಕೆ ತಾಯಿ, ಮಗಳ ಮೇಲೆ ಹಲ್ಲೆ ನಡೆಸಿದ ವಿವಾಹಿತ

    ಪ್ರೀತಿ ನಿರಾಕರಿಸಿದ್ದಕ್ಕೆ ತಾಯಿ, ಮಗಳ ಮೇಲೆ ಹಲ್ಲೆ ನಡೆಸಿದ ವಿವಾಹಿತ

    – ಯುವತಿಯ ಕೈ, ಕಾಲು ಮುರಿದ ಗೂಂಡಾ ಪ್ರೇಮಿ

    ಯಾದಗಿರಿ: ಪ್ರೀತಿ ನಿರಾಕರಿಸಿದ್ದಕ್ಕೆ ಮಗಳು ಮತ್ತು ತಾಯಿಯ ಮೇಲೆ ವಿವಾಹಿತ ಗೂಂಡಾ ಪ್ರೇಮಿಯೊಬ್ಬ ಹಾಡಹಗಲೇ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಯಾದಗಿರಿ ನಗರದ ಸುಭಾಷ್ ವೃತ್ತದಲ್ಲಿ ನಡೆದಿದೆ.

    ಮುದ್ನಾಳ ದೊಡ್ಡ ತಾಂಡಾದ ನಿವಾಸಿ ಆನಂದ ಹಲ್ಲೆ ನಡೆಸಿದ ಗೂಂಡಾ ಪ್ರೇಮಿ. ಕಲಬುರಗಿ ಜಿಲ್ಲೆಯ ಮಳಖೇಡದ ನಿವಾಸಿ ಬೇಬಿಬಾಯಿ ಹಾಗೂ ಮಗಳು ಪ್ರಿಯಾಂಕಾ ಹಲ್ಲೆಗೊಳಗಾಗಿದ್ದಾರೆ. ಮಳಖೇಡದಿಂದ ಖಾಸಗಿ ಕೆಲಸಕ್ಕೆಂದು ಪ್ರಿಯಾಂಕಾ ತಮ್ಮ ತಾಯಿಯ ಜೊತೆ ಯಾದಗಿರಿಗೆ ಬಂದಿದ್ದರು. ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವಾಗ ಕಂಪೂಟರ್ ಕೇಂದ್ರಕ್ಕೆ ನುಗ್ಗಿದ ಆನಂದ್ ಮತ್ತು ಅವನ ಕುಟುಂಬಸ್ಥರು ಏಕಾಏಕಿ ಪ್ರಿಯಾಂಕಾ ಹಾಗೂ ಆಕೆಯ ತಾಯಿ ಮೇಲೆ ಹಲ್ಲೆ ಮಾಡಿದ್ದಾರೆ.

    ಹೆಣ್ಣುಮಕ್ಕಳು ಅಂತ ನೋಡದೆ ಕಬ್ಬಿಣದ ರಾಡ್‍ನಿಂದ ಮನಸೋಯಿಚ್ಛೆ ಥಳಿಸಿದ ಆನಂದ ಮತ್ತು ಕುಟುಂಬಸ್ಥರು, ಪ್ರಿಯಾಂಕಾಳ ಕಾಲು ಮತ್ತು ಕೈ ಮುರಿದಿದ್ದಾರೆ. ಆನಂದಗೆ ಈಗಾಗಲೇ ಮದುವೆಯಾಗಿದ್ದರೂ ಪ್ರಿಯಾಂಕಾಳನ್ನು ಪ್ರೀತಿ ಮಾಡುವಂತೆ ಕಿರುಕುಳ ಕೊಡುತ್ತಿದ್ದ ಎನ್ನಲಾಗಿದೆ.

    ಆನಂದನ ಕಿರುಕುಳಕ್ಕೆ ಬೇಸತ್ತು ಪ್ರಿಯಾಂಕಾ ಕುಟುಂಬಸ್ಥರು ಈಗಾಗಲೇ ಮಳಖೇಡ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರಂತೆ. ಹೀಗಾಗಿ ಇದರಿಂದ ಆನಂದ ಪ್ರಿಯಾಂಕಾ ಕುಟುಂಬಸ್ಥರ ಮೇಲೆ ದ್ವೇಷ ಇಟ್ಟುಕೊಂಡಿದ್ದನು. ಬೇಬಿಬಾಯಿ, ಪ್ರಿಯಾಂಕಾ ಮಂಗಳವಾರ ಯಾದಗಿರಿ ಬಂದಿದ್ದನ್ನು ತಿಳಿದ ಆನಂದ ಮತ್ತು ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮಹಿಳಾ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಇಡ್ಲಿ ಆಸೆ ತೋರಿಸಿ 5ರ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ವಿವಾಹಿತ

    ಇಡ್ಲಿ ಆಸೆ ತೋರಿಸಿ 5ರ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ವಿವಾಹಿತ

    ಚಾಮರಾಜನಗರ: ವಿವಾಹಿತನೊಬ್ಬ ಇಡ್ಲಿ ಆಸೆ ತೋರಿಸಿ 5 ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿದ ಪೈಶಾಚಿಕ ಕೃತ್ಯ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದಿದೆ.

    ಹನೂರು ತಾಲೂಕಿನ ಬಸವರಾಜು (35) ಅತ್ಯಾಚಾರ ಎಸಗಿದ ಆರೋಪಿ. ಬಸವರಾಜು ಸೋಮವಾರ ಕೃತ್ಯ ಎಸಗಿದ್ದಾನೆ. ಆರೋಪಿಯನ್ನು ಪೊಲೀಸು ಬಂಧಿಸಿದ್ದು, ವಿಚಾರಣೆ ನಡೆದುತ್ತಿದ್ದಾರೆ. ಇದನ್ನೂ ಓದಿ: ಆಟವಾಡುತ್ತಿದ್ದ 7ರ ಬಾಲೆಯನ್ನ ಕೊಟ್ಟಿಗೆಗೆ ಹೊತ್ತೊಯ್ದು ರೇಪ್

    ಬಾಲಕಿ ಸೋಮವಾರ ಬೆಳಗ್ಗೆ ಮನೆಯ ಮುಂದೆ ಆಟವಾಡುತ್ತಿತ್ತು. ಈ ವೇಳೆ ಅಲ್ಲಿಗೆ ಬಂದ ಬಸವರಾಜು ಇಡ್ಲಿ ಕೊಡಿಸುವುದಾಗಿ ಮಗುವನ್ನು ಮನೆಗೆ ಕರೆದುಕೊಂಡು ಹೋಗಿದ್ದ. ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿ, ಮನೆಯಿಂದ ಹೊರಗೆ ಕಳುಹಿಸಿದ್ದಾನೆ.

    ಆರೋಪಿಯ ಪೈಶಾಚಿಕ ಕೃತ್ಯದಿಂದ ಅಸ್ವಸ್ಥಗೊಂಡಿದ್ದ ಬಾಲಕಿ ಮನೆಗೆ ಬಂದು ಮಲಗಿದ್ದಳು. ಇದನ್ನು ಗಮನಿಸಿದ ಪೋಷಕರು ವಿಚಾರಸಿದಾಗ ಬಾಲಕಿ ಘಟನೆಯನ್ನು ವಿವರಿಸಿದ್ದಾರೆ. ತಕ್ಷಣವೇ ಪೋಷಕರು ಆರೋಪಿಯನ್ನು ಹಿಡಿದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಗ್ರಾಮಕ್ಕೆ ಕೊಳ್ಳೇಗಾಲ ಡಿವೈಎಸ್‍ಪಿ ನವೀನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಬಸವರಾಜು ವಿರುದ್ಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

  • ಪತ್ನಿ, ಮಕ್ಕಳನ್ನು ಬಿಟ್ಟು ಲವರ್ ಜೊತೆಗೆ ಆತ್ಮಹತ್ಯೆಗೆ ಶರಣಾದ

    ಪತ್ನಿ, ಮಕ್ಕಳನ್ನು ಬಿಟ್ಟು ಲವರ್ ಜೊತೆಗೆ ಆತ್ಮಹತ್ಯೆಗೆ ಶರಣಾದ

    ಹೈದರಾಬಾದ್: ಪತ್ನಿ ಇಬ್ಬರು ಮಕ್ಕಳನ್ನು ಬಿಟ್ಟು ಪ್ರೀತಿ ಹಿಂದೆಬಿದ್ದ ವ್ಯಕ್ತಿಯೊಬ್ಬ ತನ್ನ ಲವರ್ ಜೊತೆಗೂಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ಇಂದು ನಡೆದಿದೆ.

    ಪೆದ್ದಪಲ್ಲಿ ಜಿಲ್ಲೆಯ ಗೋದಾವರಿಖನಿ ಪಟ್ಟಣದ ತಿಲಕ್‍ನಗರದ ನಿವಾಸಿ ವೆಂಕಟೇಶ್ (30), ಜೈಪೂರ್ ತಾಲೂಕಿನ ಮಂದಮರ್ರಿ ನಿವಾಸಿ ಶ್ರೀವಿದ್ಯಾ (18) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಮಂಚಿರ್ಯಾಲ ಜಿಲ್ಲೆಯ ರಸೂಲ್‍ಪಲ್ಲಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಘಟನೆ ನಡೆದಿದೆ.

    ಮೃತ ಶ್ರೀವಿದ್ಯಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ವೆಂಕಟೇಶ್‍ಗೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಶ್ರೀವಿದ್ಯಾ ಇತ್ತೀಚೆಗೆ ಗೋದಾವರಿಖನಿಯ ಸೋದರ ಮಾವನ ಮನೆಗೆ ಹೋಗಿದ್ದಾಗ ವೆಂಕಟೇಶ್‍ನನ್ನು ನೋಡಿದ್ದಳು. ಕೆಲ ದಿನಗಳ ನಂತರ ವೆಂಕಟೇಶ್ ಸಂಬಂಧಿಯೊಬ್ಬರ ಮದುವೆಗಾಗಿ ಮಂದಮರಿಗೆ ಹೋಗಿದ್ದ. ಈ ವೇಳೆ ಶ್ರೀವಿದ್ಯಾ ಮತ್ತೆ ಭೇಟಿಯಾಗಿದ್ದಳು. ಆಗ ಆಕೆಯ ಫೋನ್ ನಂಬರ್ ಪಡೆದಿದ್ದ ವೆಂಕಟೇಶ್ ಆಗಾಗ ಮೆಸೇಜ್ ಹಾಗೂ ಕಾಲ್ ಮಾಡುತ್ತಿದ್ದ.

    ವೆಂಕಟೇಶ್ ಹಾಗೂ ಶ್ರೀವಿದ್ಯಾ ಮಧ್ಯದ ಸ್ನೇಹ ಪ್ರೇಮವಾಗಿ ತಿರುಗಿತ್ತು. ಆದರೆ ಇದಕ್ಕೆ ಪೋಷಕರು ವಿರೋಧ ವ್ಯಕ್ತವಾಗಿತ್ತು. ಇದರಿಂದ ಮನನೊಂದ ಪ್ರೇಮಿಗಳು ಮನೆ ಬಿಟ್ಟು ಬಂದಿದ್ದರು. ಮಂಚಿರ್ಯಾಲ ಜಿಲ್ಲೆಯ ರಸೂಲ್‍ಪಲ್ಲಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಬೆಳಗ್ಗೆ 6 ಗಂಟೆಗೆ ವಿಷ ಸೇವಿಸಿದ್ದರು. ಪ್ರೇಮಿಗಳು ಬಿದ್ದು ಒದ್ದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದರು.

    ವೆಂಕಟೇಶ್ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದ. ಶ್ರೀವಿದ್ಯಾ ಉಸಿರಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿದ್ದರು. ಆದರೆ ಮಾರ್ಗ ಮಧ್ಯದಲ್ಲೇ ಶ್ರೀವಿದ್ಯಾ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ವಿವಾಹಿತನೊಂದಿಗೆ ಅಪ್ರಾಪ್ತೆಯ ಪ್ರೀತಿ ಪ್ರೇಮ – ರೈಲಿಗೆ ತಲೆ ಕೊಟ್ಟು ಪ್ರಾಣ ಬಿಟ್ಟ ಪ್ರೇಮಿಗಳು!

    ವಿವಾಹಿತನೊಂದಿಗೆ ಅಪ್ರಾಪ್ತೆಯ ಪ್ರೀತಿ ಪ್ರೇಮ – ರೈಲಿಗೆ ತಲೆ ಕೊಟ್ಟು ಪ್ರಾಣ ಬಿಟ್ಟ ಪ್ರೇಮಿಗಳು!

    ಚಿಕ್ಕಬಳ್ಳಾಪುರ: ವಿವಾಹಿತನೊಂದಿಗೆ ಪ್ರೀತಿ ಪ್ರೇಮ ಎಂದು ಸುತ್ತಾಡಿದ ಅಪ್ರಾಪ್ತ ಬಾಲಕಿಯೊಬ್ಬಳು ಕೊನೆಗೆ ಆತನೊಂದಿಗೆ ರೈಲಿಗೆ ತಲೆ ಕೊಟ್ಟು ಪ್ರಾಣ ಬಿಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ಮಹದೇಶ್ವರ ಬಡಾವಣೆ ಬಳಿ ನಡೆದಿದೆ.

    ಮೃತರು ವರವಣಿ ಗ್ರಾಮದ ಹರ್ಷಿಣಿ(17)(ಹೆಸರು ಬದಲಾಯಿಸಲಾಗಿದೆ) ಹಾಗೂ ಗೌರಿಬಿದನೂರು ನಗರದ ಹೂವಿನ ವ್ಯಾಪಾರಿ ರವಿಕುಮಾರ್(30) ಎಂದು ತಿಳಿದುಬಂದಿದೆ. ಅಂದಹಾಗೆ ಮೂಲತಃ ಮಂಡ್ಯ ಕಡೆಯವಳಾದ ಬಾಲಕಿ ವರವಣಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದು, ಗೌರಿಬಿದನೂರು ನಗರದಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ ರವಿಕುಮಾರ್ ಜೊತೆ ಪ್ರೇಮಾಂಕುರವಾಗಿದೆ.

    ಕಳೆದ 20 ದಿನಗಳ ಹಿಂದೆ ರವಿಕುಮಾರ್ ಹಾಗೂ ಹರ್ಷಿಣಿ ತಮ್ಮ ಮನೆಗಳನ್ನು ಬಿಟ್ಟು ನಾಪತ್ತೆಯಾಗಿದ್ದರು. ಹೀಗಾಗಿ ಹರ್ಷಿಣಿ ಕಡೆಯವರು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಬಾಲಕಿ ಯುವತಿ ಅಪಹರಣ ಆಗಿದ್ದಾಳೆ ಎಂದು ದೂರು ದಾಖಲಿಸಿದ್ದರು. ಆದರೆ ಇಂದು ಇಬ್ಬರ ಮೃತದೇಹಗಳು ರೈಲ್ವೇ ಹಳಿಗಳ ಮೇಲೆ ಪತ್ತೆಯಾಗಿದ್ದು, ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಇಬ್ಬರು ಮದುವೆಯಾಗಿ ವಾಪಸ್ ಆದ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv