Tag: ವಿವಾಹ

  • ಇರಾನ್ ನಾಯಕನ ಪುತ್ರಿಯ ವಿವಾಹದಲ್ಲಿಲ್ಲ ಹಿಜಾಬ್ – ವೀಡಿಯೋ ವೈರಲ್, ನೆಟ್ಟಿಗರಿಂದ ಆಕ್ರೋಶ

    ಇರಾನ್ ನಾಯಕನ ಪುತ್ರಿಯ ವಿವಾಹದಲ್ಲಿಲ್ಲ ಹಿಜಾಬ್ – ವೀಡಿಯೋ ವೈರಲ್, ನೆಟ್ಟಿಗರಿಂದ ಆಕ್ರೋಶ

    ಟೆಹ್ರಾನ್: ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ನೇತೃತ್ವದ ಕಟ್ಟಾ ಇಸ್ಲಾಮಿಕ್ ಆಡಳಿತವು ಇದೀಗ ಹೊಸ ವಿವಾದಕ್ಕೆ ಸಿಲುಕಿಕೊಂಡಿದೆ. ಖಮೇನಿಯ ಆಪ್ತ ಸಹಾಯಕ ಶಮ್ಖಾನಿ (Ali Shamkhani) ಪುತ್ರಿಯ ವಿವಾಹದಲ್ಲಿ (Wedding) ವಧು ಹಾಗೂ ಆಕೆಯ ತಾಯಿ ಹಿಜಾಬ್ (Hijab) ಧರಿಸದೇ ಕಾಣಿಸಿಕೊಂಡಿದ್ದು ವಿವಾದಕ್ಕೀಡಾಗಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    2024ರಲ್ಲಿ ಟೆಹ್ರಾನ್‌ನ ಐಷಾರಾಮಿ ಹೋಟೆಲ್‌ನಲ್ಲಿ ಈ ಮದುವೆ ನಡೆದಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಸದ್ದು ಮಾಡುತ್ತಿದೆ. ಹಿಜಾಬ್ ಧರಿಸುವುದು ಮಹಿಳೆಯ ಕರ್ತವ್ಯ ಎಂದು ಪ್ರತಿಪಾದಿಸುವ ಖಮೇನಿ ಆಪ್ತನ ಮಗಳ ಮದುವೆಯಲ್ಲೇ ನಿಯಮ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮೂಲಕ ಇರಾನ್‌ನಲ್ಲಿ ಹಿಜಾಬ್ ವಿರುದ್ಧದ ಹೋರಾಟವನ್ನು ಬಲವಂತವಾಗಿ ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಮ್ಖಾನಿ ಮುಖವಾಡ ಕಳಚಿ ಬಿದ್ದಿದೆ. ಇದನ್ನೂ ಓದಿ: ಚಿತ್ರದುರ್ಗ| ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ಶಿಕ್ಷಕ ಜೈಲುಪಾಲು

    ಹಿಜಾಬ್ ಕಡ್ಡಾಯಗೊಳಿಸುವ ಕಾನೂನು ತೆರವುಗೊಳಿಸುವಂತೆ ಇರಾನ್‌ನಾದ್ಯಂತ ಮಹಿಳೆಯರು 2022ರಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಈ ವೇಲೆ ಶಮ್ಖಾನಿ ರಾಷ್ಟ್ರೀಯ ಭದ್ರತಾ ಮಂಡಳಿಯ ನಾಯಕತ್ವ ವಹಿಸಿದ್ದರು. ಅಲ್ಲದೇ ಪ್ರತಿಭಟನೆಯಲ್ಲಿ ತೊಡಗಿದ್ದ ಮಹಿಳೆಯರನ್ನು ಹಿಂಸಿಸಲಾಗಿತ್ತು. ಆದರೆ ಶಮ್ಖಾನಿ ಪುತ್ರಿಯ ವಿವಾಹದಲ್ಲಿ ವಧು ಹಾಗೂ ಆಕೆಯ ತಾಯಿ ಹಿಜಾಬ್ ಧರಿಸದೇ ಇರುವುದು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಇದನ್ನೂ ಓದಿ: ರಷ್ಯಾದಿಂದ ಶೀಘ್ರದಲ್ಲೇ ಇನ್ನಷ್ಟು S-400 ಭಾರತಕ್ಕೆ – 10,000 ಕೋಟಿ ಡೀಲ್‌ ಫೈನಲ್‌

    ವೀಡಿಯೋದಲ್ಲಿ ಶಮ್ಖಾನಿ ಪುತ್ರಿ ಬಿಳಿಬಣ್ಣದ ಸ್ಟಾçಪ್‌ಲೆಸ್ ಉಡುಗೆಯನ್ನು ಧರಿಸಿದ್ದು, ಪತ್ನಿ ನೀಲಿ ಬಣ್ಣದ ವೆಸ್ಟರ್ನ್ ಶೈಲಿಯ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಹಿಜಾಬ್ ಕಡ್ಡಾಯ ನಿಯಮವನ್ನು ದಶಕಗಳಿಂದ ಒತ್ತಾಯವಾಗಿ ಹೇರಲಾಗುತ್ತಿರುವ ಇರಾನ್‌ನಲ್ಲಿ ಈ ವೀಡಿಯೋ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: H-1ಬಿ ವೀಸಾ ಶುಲ್ಕ ಹೆಚ್ಚಳ – ವಾಸ್ತವ್ಯ ಅವಧಿ ವಿಸ್ತರಣೆ ಕೋರಿದ ಅರ್ಜಿಗಳಿಗೆ ಅನ್ವಯಿಸಲ್ಲ

    ಇನ್ನು ಈ ಕುರಿತು ಇರಾನ್‌ನಿಂದ ಗಡಿಪಾರಾದ ಮಹಿಳಾ ಪರ ಹೋರಾಟಗಾರ್ತಿ ಮಸಿಹ್ ಅಲಿನೆಜಾದ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಇರಾನ್‌ನ ಉನ್ನತ ನಾಯಕರಲ್ಲಿ ಒಬ್ಬರಾದ ಶಮ್ಖಾನಿ ಅವರ ಮಗಳು ಸ್ಟಾçಪ್‌ಲೆಸ್ ಉಡುಗೆಯಲ್ಲಿ ಅದ್ಧೂರಿ ವಿವಾಹ ಮಾಡಿಕೊಂಡಿದ್ದಾರೆ. ಕೂದಲು ತೋರಿಸಿದ್ದಕ್ಕಾಗಿ ಅದೇ ಇರಾನ್‌ನಲ್ಲಿ ಸಾಮಾನ್ಯ ಮಹಿಳೆಯರನ್ನು ಹೊಡೆದು ಕೊಲ್ಲಲಾಯಿತು. ಇದನ್ನೇ ಬೂಟಾಟಿಕೆ ಎನ್ನುವುದು. ಇತರ ಹೆಣ್ಣುಮಕ್ಕಳಿಗೆ ಹೇಗಿರಬೇಕೆಂದು ಬೋಧಿಸುತ್ತಾರೆ. ಇವರ ಹೆಣ್ಣುಮಕ್ಕಳು ಡಿಸೈನರ್ ಉಡುಗೆ ಧರಿಸಿ ಓಡಾಡುತ್ತಾರೆ. ಗುಂಡು, ಲಾಠಿ ಪ್ರಹಾರ, ಜೈಲುಶಿಕ್ಷೆಯ ಮೂಲಕ ಇಸ್ಲಾಮಿಕ್ ಮೌಲ್ಯಗಳನ್ನು ಹೇರುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ತುಮಕೂರು | ಕೆರೆಗೆ ಬಿದ್ದು ತಂದೆ, ಮಗಳು ಸೇರಿ ಮೂವರು ಸಾವು

  • ಖ್ಯಾತ ಗಾಯಕಿ ಜೊತೆ 2ನೇ ಮದ್ವೆಗೆ ಸಜ್ಜಾದ ರಘು ದೀಕ್ಷಿತ್;‌ ಅಕ್ಟೋಬರ್ ಅಂತ್ಯದಲ್ಲೇ ಮದುವೆ!

    ಖ್ಯಾತ ಗಾಯಕಿ ಜೊತೆ 2ನೇ ಮದ್ವೆಗೆ ಸಜ್ಜಾದ ರಘು ದೀಕ್ಷಿತ್;‌ ಅಕ್ಟೋಬರ್ ಅಂತ್ಯದಲ್ಲೇ ಮದುವೆ!

    ಸಂಗೀತ ನಿರ್ದೇಶಕ ರಘು ದೀಕ್ಷಿತ್ (Raghu Dixit) ಅವರು ಗಾಯಕಿ ಹಾಗೂ ಕೊಳಲು ವಾದಕಿ ವಾರಿಜಾಶ್ರೀ (Varijashree) ಅವರ ಜೊತೆ ಸಪ್ತಪದಿ ತುಳಿಯಲಿದ್ದಾರೆ.

    ಸ್ವತಃ ರಘು ದೀಕ್ಷಿತ್ ಅವರೇ ಈ ಬಗ್ಗೆ ಹೇಳಿಕೊಂಡಿದ್ದಾರೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಎರಡೂ ಮನೆಯವರ ಒಪ್ಪಿಗೆ ಮೇರೆಗೆ ವಿವಾಹ ಬಂಧನಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ತಿಂಗಳ ಕೊನೆಯಲ್ಲಿ ಇಬ್ಬರು ಮದುವೆ ಆಗಲಿದ್ದಾರೆ.ಇದನ್ನೂ ಓದಿ: ಒಂದು ತಿಂಗಳಿಗೆ ನಿವೇದಿತಾ ಖರ್ಚು ಕೇಳಿದ್ರೆ ಶಾಕ್ ಆಗ್ತೀರಿ!

    ನನ್ನ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ನನ್ನ ಜೀವನದಲ್ಲಿ ನಾನು ನಿರೀಕ್ಷೆ ಮಾಡಿರದ ಆಕಸ್ಮಿಕ ತಿರುವು ಇದು. ನನ್ನ ಮತ್ತು ವಾರಿಜಾಶ್ರೀ ಅವರ ಪ್ರೀತಿಗೆ ವಾರಿಜಾಶ್ರೀ ಅವರ ಪೋಷಕರು ಒಪ್ಪಿಗೆ ಸೂಚಿಸಿದ್ದಾರೆ. ಸದ್ಯ ನಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಹೊರಟಿದ್ದೇವೆ ಎಂದಿದ್ದಾರೆ ರಘು ದೀಕ್ಷಿತ್.

    ವಾರಿಜಾಶ್ರೀ ಹಾಗೂ ರಘು ದೀಕ್ಷಿತ್ ಇಬ್ಬರು `ಸಾಕು ಇನ್ನೂ ಸಾಕು’ ಎನ್ನುವ ಆಲ್ಬಂಗೆ ಕೆಲಸ ಮಾಡುವ ಮೂಲಕ ಪರಸ್ಪರ ಪರಿಚಯವಾದರು. ಅಲ್ಲಿಂದ ಮುಂದೆ ಇಬ್ಬರು ಸ್ನೇಹಿತರಾಗಿ ಸಾಕಷ್ಟು ವಿಡಿಯೋ ಸಾಂಗ್ ಆಲ್ಬಂಗಳಿಗೆ ಕೆಲಸ ಮಾಡಿದ್ದಾರೆ.

    ಈ ಮೊದಲು ರಘು ದೀಕ್ಷಿತ್ ಅವರು ನೃತ್ಯ ಕಲಾವಿದೆ ಮಯೂರಿ ಅವರನ್ನು ಮದುವೆಯಾಗಿದ್ದರು. ಕೆಲವು ವರ್ಷಗಳ ಹಿಂದೆ ಮಯೂರಿ ಅವರೊಂದಿಗೆ ವಿಚ್ಛೇದನ ಪಡೆದುಕೊಂಡಿದ್ದ ರಘು ದೀಕ್ಷಿತ್ ಇದೀಗ ವಾರಿಜಾಕ್ಷಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.ಇದನ್ನೂ ಓದಿ: ಮುತ್ತಿನಿಂದಲೇ ರವಿಕೆ ಮಾಡಿಸಿಕೊಂಡ ಬ್ಯೂಟಿ ಪ್ರಣೀತಾ

  • ಮರ್ಯಾದಾ ಹತ್ಯೆ| ಜೋಡಿಯನ್ನು ಕೊಲೆಗೈದ ನಾಲ್ವರಿಗೆ ಮರಣದಂಡನೆ

    ಮರ್ಯಾದಾ ಹತ್ಯೆ| ಜೋಡಿಯನ್ನು ಕೊಲೆಗೈದ ನಾಲ್ವರಿಗೆ ಮರಣದಂಡನೆ

    ಗದಗ: ಜೋಡಿ ಕೊಲೆ ಮಾಡಿದ್ದ ನಾಲ್ವರು ಅಪರಾಧಿಗಳಿಗೆ ಜಿಲ್ಲಾ ನ್ಯಾಯಾಲಯ (Gadag District Court) ಮರಣದಂಡನೆ ಶಿಕ್ಷೆ (Death Sentence) ವಿಧಿಸಿ ಆದೇಶ ನೀಡಿದೆ.

    ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ಅನ್ಯ ಜಾತಿಯ ರಮೇಶ್ ಮಾದರ ಮತ್ತು ಗಂಗಮ್ಮ ಅವರು ಪ್ರೀತಿಸಿ ಮದುವೆಯಾಗಿದ್ದರು. ಕುಟುಂಬಸ್ಥರ ವಿರೋಧ ನಡುವೆ ಗಂಗಮ್ಮ ಪ್ರೀತಿಸಿ ಅಂತರಜಾತಿ ವಿವಾಹ (Marriage) ಆಗಿದ್ದಕ್ಕೆ ಗಂಗಮ್ಮ ಸಂಬಂಧಿಕರು ಕೊಲೆ ಮಾಡಿದ್ದರು.

    2019 ರಲ್ಲಿ ಗಂಗಮ್ಮ ಸಂಬಂಧಿಕರು ಲಕ್ಕಲಕಟ್ಟಿ ಗ್ರಾಮದಲ್ಲಿ ರಮೇಶ್ ಹಾಗೂ ಗಂಗಮ್ಮಳನ್ನು ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ (Case) ದಾಖಲಾಗಿತ್ತು.

     

    ತನಿಖೆ ನಡೆಸಿದ ಪೊಲೀಸರು ಶಿವಪ್ಪ ರಾಠೋಡ್, ರವಿಕುಮಾರ ರಾಠೋಡ್, ರಮೇಶ್ ರಾಠೋಡ್ ಹಾಗೂ ಬಸ್ ಡ್ರೈವರ್ ಆಗಿದ್ದ ಪರಶುರಾಮ್ ರಾಠೋಡ್ ಮೇಲೆ ಐಪಿಸಿ ಸೆಕ್ಷನ್ 427, 449, 302, 506(2) ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಇದನ್ನೂ ಓದಿ: ಚಂಡೀಗಢ ಮೇಯರ್‌ ಚುನಾವಣೆ ಗೆದ್ದ ಬಿಜೆಪಿ; ಎಎಪಿ-ಕಾಂಗ್ರೆಸ್‌ ಮೈತ್ರಿಗೆ ಮುಖಭಂಗ

    ವಿಚಾರಣೆ ವೇಳೆ ನಾಲ್ವರ ಮೇಲಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್‌ ಮರಣದಂಡನೆ ಶಿಕ್ಷೆ ವಿಧಿಸಿದೆ.

  • ವಿವಾಹೇತರ ಸಂಬಂಧಕ್ಕೆ ಡೇಟಿಂಗ್‌ ಆಪ್‌ ಬಳಕೆ – ದೇಶದಲ್ಲೇ ಬೆಂಗಳೂರು ನಂ.1

    ವಿವಾಹೇತರ ಸಂಬಂಧಕ್ಕೆ ಡೇಟಿಂಗ್‌ ಆಪ್‌ ಬಳಕೆ – ದೇಶದಲ್ಲೇ ಬೆಂಗಳೂರು ನಂ.1

    ನವದೆಹಲಿ: ಇಂದು ಅಕ್ರಮ ಸಂಬಂಧಗಳು ವೈವಾಹಿಕ ಜೀವನವನ್ನು ಹಾಳು ಮಾಡುತ್ತಿರುವ ಸಮಯದಲ್ಲೇ ವಿವಾಹೇತರ ಸಂಬಂಧ (Extra Marital Relationship) ಬೆಸೆಯುವ ಗ್ಲೀಡನ್ (Gleeden) ಆ್ಯಪ್‌ನಲ್ಲಿ 30 ಲಕ್ಷಕ್ಕೂ ಹೆಚ್ಚು ಭಾರತೀಯರು (Indians) ನೊಂದಾಯಿಸಿಕೊಂಡಿದ್ದು ಅದರಲ್ಲೂ ಬೆಂಗಳೂರು (Bengaluru) ಮೊದಲ ಸ್ಥಾನದಲ್ಲಿದೆ.

    ವಿಶ್ವದ ಅತಿದೊಡ್ಡ ವಿವಾಹೇತರ ಡೇಟಿಂಗ್ (Dating Application) ಪ್ಲಾಟ್‌ಫಾರ್ಮ್‌ ಗ್ಲೀಡನ್ ಬಿಡುಗಡೆ ಮಾಡಿರುವ ವರದಿಯಂತೆ 2024 ರಲ್ಲಿ ಅಪ್ಲಿಕೇಶನ್ ತನ್ನ ಬಳಕೆದಾರರ ಸಂಖ್ಯೆಯಲ್ಲಿ 270% ರಷ್ಟು ಏರಿಕೆ ಕಂಡಿದೆ. ಹೊಸ ಬಳಕೆದಾರರ ಪೈಕಿ 128% ರಷ್ಟು ಮಂದಿ ಮಹಿಳೆಯರೇ ಆಗಿದ್ದಾರೆ. ಒಟ್ಟು ಬಳಕೆದಾರರ ಪೈಕಿ  40% ರಷ್ಟು ಮಂದಿ 30 ರಿಂದ 45 ವಯಸ್ಸಿನ ವಿವಾಹಿತ ಸ್ತ್ರೀಯರಿದ್ದಾರೆ ಎಂದು ತಿಳಿಸಿದೆ.

    AI ಚಿತ್ರ

    ಎಲ್ಲಿ ಎಷ್ಟು?
    ಗ್ಲೀಡನ್‌ ಬಳಕೆದಾರರ ಸಂಖ್ಯೆಯಲ್ಲಿ ಬೆಂಗಳೂರು 20% ಬಳಕೆದಾರರನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಮುಂಬೈ(19%), ಕೋಲ್ಕತ್ತಾ (18%), ದೆಹಲಿ (15%) ಇದೆ. ಬಳಕೆದಾರರ ಪೈಕಿ 58% ರಷ್ಟು ಮಂದಿ ಮಹಿಳೆಯರಿದ್ದಾರೆ. ಇವರು ಸುಮಾರು 45 ನಿಮಿಷಗಳ ಕಾಲ ಈ ಆ್ಯಪ್​​ನಲ್ಲಿ ಸಮಯ ಕಳೆಯುತ್ತಿದ್ದಾರೆ. ಎಲ್ಲಾ ವಯಸ್ಸಿನ ಪುರುಷರು ಮತ್ತು ಮಹಿಳೆಯರು ಈ ಅಪ್ಲಿಕೇಶನ್​ ಬಳಸುತ್ತಿದ್ದಾರೆ.

    ಮೆಟ್ರೋ ನಗರಗಳು ಗರಿಷ್ಠ ಬಳಕೆದಾರರನ್ನು ಹೊಂದಿದ್ದರೂ ಭೋಪಾಲ್, ವಡೋದರಾ ಮತ್ತು ಕೊಚ್ಚಿಯಂತಹ ಸಣ್ಣ ನಗರಗಳಿಂದ ಬಳಕೆದಾರರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ವರದಿ ತಿಳಿಸಿದೆ. ಮುಂದಿನ ದಿನಗಳಲ್ಲಿ ಗ್ಲೀಡನ್ ಭಾರತದಲ್ಲಿ 50 ಲಕ್ಷ ಗ್ರಾಹಕರನ್ನು ತಲುಪುವ ಗುರಿಯನ್ನು ಹಾಕಿಕೊಂಡಿದೆ. ಇದನ್ನೂ ಓದಿ: ಭವ್ಯಾ ಮೇಲೆ ನಿಜವಾಗಲೂ ಲವ್ ಆಗಿದ್ಯಾ?- ತ್ರಿವಿಕ್ರಮ್ ಹೇಳೋದೇನು?

    ಭಾರತದಲ್ಲಿ ಮದುವೆ ತನ್ನದೇ ಆದ ಪಾವಿತ್ರ್ಯತೆ ಇದೆ. ಕುಟುಂಬ ವ್ಯವಸ್ಥೆಗೂ ಗೌರವ ಇದೆ. ಈ ರೀತಿಯ ಸಂಸ್ಕೃತಿ ಹೊಂದಿರುವ ಭಾರತದಲ್ಲಿ ಈ ಬೆಳವಣಿಗೆಯ ಬಗ್ಗೆ ಗ್ಲೀಡನ್‌ನ ಭಾರತದ ವ್ಯವಸ್ಥಾಪಕಿ ಸಿಬಿಲ್ ಶಿಡ್ಡೆಲ್ ಪ್ರತಿಕ್ರಿಯಿಸಿ, ಭಾರತದಲ್ಲಿ 3 ಮಿಲಿಯನ್‌ ಬಳಕೆದಾರರನ್ನು ತಲುಪಿರುವುದು ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಾಗುತ್ತಿರುವ ಬದಲಾವಣೆಗೆ ಸಾಕ್ಷಿ. ಮಹಿಳಾ ಬಳಕೆದಾರರ ಹೆಚ್ಚುತ್ತಿರುವ ಆಸಕ್ತಿಯು ಇಂದಿನ ಜಗತ್ತಿನಲ್ಲಿ ಸುರಕ್ಷತೆ ಮತ್ತು ಆಯ್ಕೆಯ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡುವ ವೇದಿಕೆಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.

     

  • ಮದುವೆಗೂ ಮುನ್ನ ಭಾವಿ ಪತ್ನಿ ಸಂದರ್ಶನ ಮಾಡಿದ್ದ ಕೃಷ್ಣ!

    ಮದುವೆಗೂ ಮುನ್ನ ಭಾವಿ ಪತ್ನಿ ಸಂದರ್ಶನ ಮಾಡಿದ್ದ ಕೃಷ್ಣ!

    ಮಂಡ್ಯದವರಾದ (Mandya) ಎಸ್‌ಎಂ ಕೃಷ್ಣ (SM Krishna) ಅವರು ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೂಡುಮಲ್ಲಿಗೆ ಗ್ರಾಮದ ಪ್ರೇಮಾ ಅವರನ್ನು 1966 ಏ.29 ರಂದು ವಿವಾಹವಾದರು. ಆದರೆ ಎಸ್‌ಎಂಕೆ ಅವರು ಮದುವೆಗೂ ಮುನ್ನ ಭಾವಿ ಪತ್ನಿಯ ಸಂದರ್ಶನ ಮಾಡಿದ್ದರು.ಇದನ್ನೂ ಓದಿ: ತಿಮ್ಮಪ್ಪನ ಹುಂಡಿಗೆ ವಾಚ್ ಹಾಕಿ ಬಂದ ಮೇಲೆ ಕೇಂದ್ರಮಂತ್ರಿಯಾಗಿದ್ದ ಎಸ್‌ಎಂಕೆ!

    ಮೊದಲ ಬಾರಿಗೆ ಪ್ರೇಮಾ ಅವರನ್ನು ನೋಡಲು ಬಂದಾಗ, ಎಸ್‌ಎಂಕೆ ಕೇವಲ ಅವರನ್ನು ನೋಡಲು ಬಂದಿಲ್ಲ ನಾನು ಅವರ ಜೊತೆ ಮಾತನಾಡಬೇಕು ಎಂದು ಹೆಣ್ಣಿನ ಕುಟುಂಬಕ್ಕೆ ತಿಳಿಸಿದ್ದರು. ಅನುಮತಿ ಪಡೆದು ಬಳಿಕ ಅವರೊಟ್ಟಿಗೆ ಮಾತನಾಡಿದ್ದರು. ತಾವು ಏನು ಓದಿದ್ದೀರಿ? ಯಾವ ಪುಸ್ತಕ ಓದಿದ್ದೀರಿ? ನಾನು ಎಂಎಲ್‌ಎ ಅಂತಾ ಗೊತ್ತಾ? ಅದರಲ್ಲೂ ವಿರೋಧಪಕ್ಷದ ಎಂಎಲ್‌ಎ ಎಂಬುದು ಗೊತ್ತಾ? ಹೀಗೆ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಆ ಸಮಯದಲ್ಲಿಯೇ ಪ್ರೇಮಾ ಅವರೂ ಕೂಡ ಅಷ್ಟೇ ಬೋಲ್ಡ್ ಆಗಿ ಉತ್ತರ ನೀಡಿದ್ದರು. ತಮ್ಮ ವಿಚಾರವನ್ನು ಪೇಪರ್‌ನಲ್ಲಿ ಓದಿದ್ದೇನೆ. ತಮ್ಮ ಭಾಷಣಗಳಿಂದ ತಮ್ಮ ಬಗ್ಗೆ ಅಭಿಮಾನ ಹೊಂದಿರುವುದಾಗಿಯೂ ಪ್ರತಿಕ್ರಿಯಿಸಿದ್ದರು.

    ಆಗ ಕೃಷ್ಣ ಅವರು ತಾವು ವಿರೋಧ ಪಕ್ಷದಲ್ಲಿರುವುದಾಗಿ ತಿಳಿಸಿ, ಹೋರಾಟವೇ ನನ್ನ ಮುಖ್ಯ ಗುರಿಯಾಗಿದೆ. ಜೀವನದಲ್ಲಿ ಸುಖ ಎನ್ನುವುದನ್ನು ನೀವು ಯಾವ ಪ್ರಮಾಣದಲ್ಲಿ ಬಯಸುವಿರೋ ಅದು ನಿಮಗೆ ಸಿಗದೇ ಹೋಗಬಹುದು. ನಾನು ಸದಾ ಹೋರಾಟದ ಗುಂಗಿನಲ್ಲೇ ಇರುತ್ತೇನೆ. ನಮ್ಮ ಸಂಸಾರದ ವಿಚಾರಗಳು ಅಪ್ರಸ್ತುತ ಆಗಬಹುದು. ಕೆಲವು ಬಾರಿ ಜೈಲಿಗೂ ಹೋಗಬಹುದು. ಇದನ್ನೆಲ್ಲಾ ಯೋಚನೆ ಮಾಡಿ ನನ್ನ ಜೊತೆ ಬಾಳ್ವೆ ನಡೆಸಬೇಕಾಗುತ್ತದೆ ಎಂದು ಹೇಳಿ, ನೀವು ಇದಕ್ಕೆಲ್ಲಾ ಸಿದ್ಧರಿದ್ದೀರಾ ಎಂದು ಪ್ರಶ್ನೆ ಮಾಡಿದ್ದರಂತೆ. ಕೃಷ್ಣ ಅವರಿಗೆ ಮನಸೋತಿದ್ದ ಪ್ರೇಮಾ ಅವರು ಎಲ್ಲಾ ಪ್ರಶ್ನೆಗಳಿಗೂ ಸಮರ್ಥವಾಗಿ ಉತ್ತರ ನೀಡಿದರು. ಮುಂದೆ ಪ್ರೇಮಾ ಕೃಷ್ಣ (Prema Krishna) ಅವರು ಕೃಷ್ಣರವರ ರಾಜಕೀಯ ಜೀವನದಲ್ಲಿ ಬೆಂಗಾವಲಾಗಿ ನಿಂತಿದ್ದು ಇತಿಹಾಸವೇ ಹೌದು.ಇದನ್ನೂ ಓದಿ: ಇಂದು ಸಂಜೆ ಹುಟ್ಟೂರಿನಲ್ಲಿ ಎಸ್‌ಎಂಕೆ ಅಂತ್ಯಕ್ರಿಯೆ – ಏನೇನು ಸಿದ್ಧತೆ ನಡೆದಿದೆ?

  • ಆನ್‌ಲೈನ್‌ನಲ್ಲೇ ಪಾಕ್ ಯುವತಿಯನ್ನು ವರಿಸಿದ ಬಿಜೆಪಿ ಕಾರ್ಪೊರೇಟರ್ ಮಗ

    ಆನ್‌ಲೈನ್‌ನಲ್ಲೇ ಪಾಕ್ ಯುವತಿಯನ್ನು ವರಿಸಿದ ಬಿಜೆಪಿ ಕಾರ್ಪೊರೇಟರ್ ಮಗ

    ಲಕ್ನೋ: ಬಿಜೆಪಿ ಕಾರ್ಪೊರೇಟರ್ (BJP Corporator) ಮಗ ಆನ್‌ಲೈನ್‌ನಲ್ಲಿ (Online) ಪಾಕಿಸ್ತಾನಿ (Pakistan) ಹುಡುಗಿಯನ್ನು ವರಿಸಿದ ಘಟನೆ ಉತ್ತರ ಪ್ರದೇಶದ (Uttar Pradesh) ಜೌನ್‌ಪುರ್ ಜಿಲ್ಲೆಯಲ್ಲಿ ನಡೆದಿದೆ.

    ‘ನಿಕಾಹ್’ ಮೂಲಕ ಪಾಕ್ ಯುವತಿಯೊಂದಿಗೆ ವಿವಾಹ ನೆರವೇರಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಪೊರೇಟರ್ ತಹಸೀನ್ ಶಾಹಿದ್ ಅವರು ತಮ್ಮ ಹಿರಿಯ ಮಗ ಮೊಹಮ್ಮದ್ ಅಬ್ಬಾಸ್ ಹೈದರ್‌ಗೆ ಲಾಹೋರ್ ನಿವಾಸಿ ಆಂಡ್ಲೀಪ್ ಜಹ್ರಾ ಅವರೊಂದಿಗೆ ವಿವಾಹ ನಿಶ್ಚಯಿಸಿದ್ದರು. ಪಾಕಿಸ್ತಾನ ಮತ್ತು ಭಾರತದ ನಡುವೆ ನಡೆಯುತ್ತಿರುವ ರಾಜಕೀಯ ಉದ್ವಿಗ್ನತೆಯಿಂದಾಗಿ ವೀಸಾಗೆ ಅರ್ಜಿ ಸಲ್ಲಿಸಿದರೂ ವರನಿಗೆ ವೀಸಾ ಸಿಕ್ಕಿರಲಿಲ್ಲ. ಇದನ್ನೂ ಓದಿ: ಮುಡಾ ಮೇಲಿನ ಇ.ಡಿ ದಾಳಿ ಅಂತ್ಯ – ಸತತ 29 ಗಂಟೆ ಅಧಿಕಾರಿಗಳಿಗೆ ಡ್ರಿಲ್‌

    ಈ ಬೆನ್ನಲ್ಲೇ ವಧುವಿನ ತಾಯಿ ರಾಣಾ ಯಾಸ್ಮಿನ್ ಜೈದಿ ಅನಾರೋಗ್ಯಕ್ಕೆ ಒಳಗಾಗಿ ಪಾಕಿಸ್ತಾನದ ಐಸಿಯುಗೆ ದಾಖಲಾದರು. ಈ ಹಿನ್ನೆಲೆ ಮದುವೆ ಸಮಾರಂಭವನ್ನು ಆನ್‌ಲೈನ್‌ನಲ್ಲಿ ನಡೆಸಲು ಶಾಹಿದ್ ನಿರ್ಧರಿಸಿದ್ದಾರೆ. ಲಾಹೋರ್‌ನ ವಧುವಿನ ಕುಟುಂಬದವರು ಹಾಗೂ ವರನ ಕುಟುಂಬಸ್ಥರು ‘ನಿಕಾಹ್’ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಚನ್ನಪಟ್ಟಣ ಮೈತ್ರಿ ಟಿಕೆಟ್ ಆಯ್ಕೆ ಕಗ್ಗಂಟು – ದೋಸ್ತಿ ನಾಯಕರಲ್ಲಿ ಮೂಡದ ಒಮ್ಮತದ ನಿರ್ಧಾರ

    ಶಿಯಾ ಧಾರ್ಮಿಕ ಮುಖಂಡ ಮೌಲಾನಾ ಮಹ್ಫೂಜುಲ್ ಹಸನ್ ಖಾನ್ ಈ ಬಗ್ಗೆ ಪ್ರತಿಕ್ರಿಯಿಸಿ, ಇಸ್ಲಾಂನಲ್ಲಿ ‘ನಿಕಾಹ್’ಗೆ ಮಹಿಳೆಯ ಒಪ್ಪಿಗೆ ಅತ್ಯಗತ್ಯ. ಎರಡೂ ಕಡೆಯ ಮೌಲಾನಾಗಳು ಒಟ್ಟಾಗಿ ಸಮಾರಂಭವನ್ನು ನಡೆಸಿದಾಗ ಆನ್‌ಲೈನ್ ‘ನಿಕಾಹ್’ ಸಾಧ್ಯ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ನಿಷೇಧಿತ ಡ್ರಗ್ಸ್‌ ಪತ್ತೆ – ಮಲಯಾಳಂ ನಟಿ ಬಂಧನ

  • ಮುಸ್ಲಿಂ-ಹಿಂದೂ ವಿವಾಹ ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಮಾನ್ಯವಲ್ಲ: ಮಧ್ಯಪ್ರದೇಶ ಹೈಕೋರ್ಟ್

    ಮುಸ್ಲಿಂ-ಹಿಂದೂ ವಿವಾಹ ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಮಾನ್ಯವಲ್ಲ: ಮಧ್ಯಪ್ರದೇಶ ಹೈಕೋರ್ಟ್

    ಭೋಪಾಲ್: ಮುಸ್ಲಿಂ ಪುರುಷ ಮತ್ತು ಹಿಂದೂ ಮಹಿಳೆಯ ನಡುವಿನ ವಿವಾಹವು ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಮಾನ್ಯವಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ (Madhyapradesh Highcourt) ಮಹತ್ವದ ತೀರ್ಪು ನೀಡಿದೆ.

    1954ರ ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ಅಂತರ್ ಧರ್ಮೀಯ ವಿವಾಹವನ್ನು (Inter-faith Marriage) ಮಾನ್ಯ ಮಾಡಿ ಪೊಲೀಸ್ ರಕ್ಷಣೆಗಾಗಿ ಸಲ್ಲಿಸಲಾದ ಮನವಿ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ನ್ಯಾಯಮೂರ್ತಿ ಗುರ್ಪಾಲ್ ಸಿಂಗ್ ಅಹ್ಲುವಾಲಿಯಾ ಅವರ ಪೀಠವು, ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ವಿವಾಹವಾಗಿದ್ದರೂ ಮುಸ್ಲಿಂ ಪುರುಷ (Muslim Man) ಮತ್ತು ಹಿಂದೂ ಮಹಿಳೆಯ (Hindu Woman) ನಡುವಿನ ವಿವಾಹವನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ ಎಂದು ತಿಳಿಸಿದೆ.

    ಮೇ 27 ರಂದು ಹೈಕೋರ್ಟ್ ನೀಡಿದ ಆದೇಶದಲ್ಲಿ ಮಹಮ್ಮದೀಯ ಕಾನೂನಿನ ಪ್ರಕಾರ, ವಿಗ್ರಹಾರಾಧಕ ಅಥವಾ ಅಗ್ನಿಯನ್ನು ಪೂಜಿಸುವ ಯುವತಿಯೊಂದಿಗೆ ಮುಸ್ಲಿಂ ಯುವಕನ ವಿವಾಹವು ಮಾನ್ಯವಲ್ಲ. ದಂಪತಿ ವಿಶೇಷ ವಿವಾಹ ಕಾಯಿದೆಯಡಿಯಲ್ಲಿ ವಿವಾಹವನ್ನು ನೋಂದಾಯಿಸಿದರೂ ಸಹ ಇದು ಅಮಾನ್ಯ (ಫಾಸಿದ್) ಮದುವೆಯಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಸಿಕ್ಕಿಂನಿಂದ 150 ಕಿಮೀ ದೂರದ ಗಡಿಯಲ್ಲಿ ಚೀನಾ ಅತ್ಯಾಧುನಿಕ ಫೈಟರ್ ಜೆಟ್ ನಿಯೋಜನೆ!

    ಮುಸ್ಲಿಂ ಪುರುಷ ಮತ್ತು ಹಿಂದೂ ಮಹಿಳೆ ದಂಪತಿ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಕೋರ್ಟ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಮಹಿಳೆಯ ಮನೆಯವರು ಅಂತರ್ ಧರ್ಮೀಯ ಸಂಬಂಧವನ್ನು ವಿರೋಧಿಸಿದ್ದರು. ಯಾಕೆಂದರೆ ಮದುವೆಯಾದರೆ ಸಮಾಜದಿಂದ ಬಹಿಷ್ಕಾರ ಹಾಕುತ್ತಾರೆ ಎಂಬ ಆತಂಕ ಅವರಲ್ಲಿತ್ತು.

    ದಂಪತಿ ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಮದುವೆಯಾಗಲು ಬಯಸಿದ್ದರು. ಆದರೆ ಇಬ್ಬರೂ ಧರ್ಮ ಬದಲಾಯಿಸಲು ತಯಾರಿಲ್ಲ. ಹೀಗಾಗಿ ಮಹಿಳೆ ಹಿಂದೂ ಧರ್ಮ ಹಾಗೂ ಪುರುಷ ಮುಸ್ಲಿಂ ಧರ್ಮ ಮುಂದುವರಿಸಲಿದ್ದಾರೆ ಎಂದು ವಕೀಲರು ಕೋರ್ಟ್‍ಗೆ ತಿಳಿಸಿದರು. ಅಲ್ಲದೇ ವಿಶೇಷ ವಿವಾಹ ಕಾಯ್ದೆಯ ಅಡಿ ವಿವಾಹ ನೋಂದಣಿ ಮಾಡಿಕೊಳ್ಳಲು ಹೋಗುವಾಗ ದಂಪತಿಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ವಾದಿಸಿದರು.

    ನಾವಿಬ್ಬರು ಧರ್ಮವನ್ನು ಬದಲಾಯಿಸಲು ಸಿದ್ಧರಿಲ್ಲ. ಆದರೆ ಮದುವೆಯನ್ನು ಮಾನ್ಯಗೊಳಿಸಬೇಕೆಂದು ದಂಪತಿ ಸಲ್ಲಿಸಿದ್ದ ಮನವಿಯನ್ನು ಕೋರ್ಟ್ ವಜಾಗೊಳಿಸಿದೆ. ವಿಶೇಷ ವಿವಾಹ ಕಾಯ್ದೆಯಡಿ ವಿವಾಹವನ್ನು ಧಾರ್ಮಿಕ ವಿಧಿಗಳನ್ನು ಮಾಡದಿದ್ದಕ್ಕಾಗಿ ಪ್ರಶ್ನಿಸಲಾಗದಿದ್ದರೂ, ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಈ ವಿವಾಹವು ಮಾನ್ಯವಾಗುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

  • ಯುವತಿಯ ಶೋಕಿ ಜೀವನ: ಚಿನ್ನದ ಸರಕ್ಕಾಗಿ ಮನೆ ಮಾಲೀಕರನ್ನೇ ಹತ್ಯೆಗೈದ ರೀಲ್ಸ್ ರಾಣಿ!

    ಯುವತಿಯ ಶೋಕಿ ಜೀವನ: ಚಿನ್ನದ ಸರಕ್ಕಾಗಿ ಮನೆ ಮಾಲೀಕರನ್ನೇ ಹತ್ಯೆಗೈದ ರೀಲ್ಸ್ ರಾಣಿ!

    – ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕು ಜೀವ ಬಲಿ

    ಬೆಂಗಳೂರು: ನೇಹಾ ಹೀರೇಮಠ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ (Hubballi) ಮತ್ತೊಂದು ಕಗ್ಗೊಲೆ ನಡೆದಿದೆ. ಅಲ್ಲದೇ ಬುಧವಾರ (ಇಂದು) ಒಂದೇ ದಿನ ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ವಿವಿಧೆಡೆ ಹತ್ಯೆ ಹಾಗೂ ಆತ್ಮಹತ್ಯೆ ಪ್ರಕರಣಗಳು ನಡೆದಿವೆ.

    ಬೆಂಗಳೂರಿನ ಕೆಂಗೇರಿಯಲ್ಲಿ (Bengaluru Kengeri) ಚಿನ್ನದಾಸೆ, ಸಾಲ ತೀರಸಲು ಹಾಗೂ ತನ್ನ ಪ್ರಿಯಕರನಿಗೆ ಹಣ ಕೊಡಬೇಕೆಂಬ ಕಾರಣಕ್ಕೆ ಯುವತಿಯೊಬ್ಬಳು ಮನೆ ಮಾಲಕಿಯನ್ನೇ ಹತ್ಯೆ ಮಾಡಿದ್ದಾಳೆ. 24 ವರ್ಷ ಮೋನಿಕಾ ಹೆರಸಿನ ಯುವತಿ ಸಾಲ ತೀರಿಸಲು ಹಾಗೂ ಶೋಕಿ ಜೀವನ ನಡೆಸಲು ಬಾಡಿಗೆ ಪಡೆದುಕೊಂಡಿದ್ದ ಮನೆಯ ಮಾಲಕಿಯನ್ನೇ ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಳೆದ ಮೂರು ತಿಂಗಳ ಹಿಂದಯಷ್ಟೇ ಗುರುಮೂರ್ತಿ ಎಂಬುವವರ ಮನೆಯಲ್ಲಿ ಬಾಡಿಗೆಗೆ ಬಂದಿದ್ದಳು. ತನ್ನ ಪ್ರಿಯಕರನನ್ನ ಗಂಡ ಎಂದು ಹೇಳಿ ಬಾಡಿಗೆ ಮನೆ ಮಾಡಿಕೊಂಡಿದ್ದಳು. ಸದ್ಯ ಮಾಲಕಿಯನ್ನು ಹತ್ಯೆಗೈದ ಮೋನಿಕಾ ಕೆಂಗೇರಿ ಪೊಲೀಸರ ಅತಿಥಿಯಾಗಿದ್ದಾಳೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್‌: ಜಾರ್ಖಂಡ್‌ನ ಕಾಂಗ್ರೆಸ್‌ ಸಚಿವ ಅಲಂಗೀರ್ ಆಲಂ ಬಂಧನ!

    ಮತ್ತೊಂದು ಪ್ರಕರಣದಲ್ಲಿ ಎಲೆಕ್ಟಾçನಿಕ್ ಸಿಟಿಯ ಖಾಸಗಿ ಕಾಲೇಜಿನ (Private College) 5ನೇ ಮಹಡಿಯಿಂದ ಬಿದ್ದು ಆಂಧ್ರ ಮೂಲದ ವಿದ್ಯಾರ್ಥಿ ಕರಸಾಲ ರಾಹುಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳವಾರ ಕಂಪ್ಯೂಟರ್ ಸೈನ್ಸ್ 5ನೇ ಸೆಮಿಸ್ಟರ್ ಪರೀಕ್ಷೆ ಬರೆಯಲು ತಡವಾಗಿ ಬಂದಿದ್ದಕ್ಕೆ ತನ್ನನ್ನು ನಿಂದಿಸಿದ್ದಾರೆ ಅಂತ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.

    ಅತ್ತ, ವಿಜಯಪುರದಲ್ಲಿ 4 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ನವಜೋಡಿಯೊಂದು ಆತ್ಮಹತ್ಯೆಗೆ ಶರಣಾಗಿದೆ. ಮನೋಜ್‌ಕುಮಾರ ಪೋಳ – ರಾಖಿ ನೇಣಿಗೆ ಶರಣಾದ ದಂಪತಿ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಸಹೋದರಿಯರ ಮುಂದೆಯೇ ಯುವತಿಯ ಭೀಕರ ಹತ್ಯೆ – ಸಹಪಾಠಿಯಿಂದಲೇ ಕೃತ್ಯ

  • ತಾಳಿ ಕಟ್ಟುವ ಮುನ್ನ ಓಡೋಡಿ ಬಂದು ಮತದಾನ ಮಾಡಿದ ವರ

    ತಾಳಿ ಕಟ್ಟುವ ಮುನ್ನ ಓಡೋಡಿ ಬಂದು ಮತದಾನ ಮಾಡಿದ ವರ

    ಚಾಮರಾಜನಗರ: ತಾಳಿ ಕಟ್ಟುವ ಮುನ್ನ ಓಡೋಡಿ ಬಂದು ವರ (Groom) ಮತದಾನ (Voting) ಮಾಡಿದ ಘಟನೆ ಚಾಮರಾಜನಗರ (Chamarajanagar) ತಾಲೂಕಿನ ಸಂತೇಮರಳ್ಳಿಯಲ್ಲಿ ನಡೆದಿದೆ.

    ವಿವಾಹಕ್ಕೂ (Marriage) ಮೊದಲು ವರ ಚೇತನ್ ಮತಗಟ್ಟೆ ಸಂಖ್ಯೆ 60ರಲ್ಲಿ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಇಂದು ದೀಪಿಕಾ ಎಂಬ ವಧು ಜೊತೆ ವರ ಚೇತನ್ ಅವರ ವಿವಾಹ ನಿಗದಿಯಾಗಿತ್ತು. 9 ಗಂಟೆಗೆ ಧಾರಾ ಮುಹೂರ್ತ ಇದ್ದ ಹಿನ್ನೆಲೆ ಅದಕ್ಕೂ ಮೊದಲು ವರ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ 9.21% ಮತದಾನ – ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ವೋಟ್‌

    ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಚೇತನ್, ನನ್ನ ಹಕ್ಕನ್ನು ನಾನು ಚಲಾಯಿಸಲು ಬಂದಿದ್ದೇನೆ. ಮತದಾನ ನಮ್ಮೆಲ್ಲರ ಆದ್ಯ ಕರ್ತವ್ಯ. ಯಾರೂ ಕೂಡ ಮತದಾನದಿಂದ ವಂಚಿತರಾಗಬಾರದು. ತಾಳಿ ಕಟ್ಟುವ ಮುನ್ನ ಬಂದು ಮತದಾನ ಮಾಡಿ ನನ್ನ ಹಕ್ಕು ಚಲಾಯಿಸಿದ್ದೇನೆ ಎಂದರು. ಇದನ್ನೂ ಓದಿ: ಹಸೆಮಣೆ ಏರುವ ಮುನ್ನ ಮದುಮಗಳಿಂದ ಮೊದಲ ಮತದಾನ

  • NRIಗಳ ನಡುವಿನ ವಿವಾಹಗಳನ್ನು ಭಾರತದಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು: ಕಾನೂನು ಆಯೋಗ ಶಿಫಾರಸು

    NRIಗಳ ನಡುವಿನ ವಿವಾಹಗಳನ್ನು ಭಾರತದಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು: ಕಾನೂನು ಆಯೋಗ ಶಿಫಾರಸು

    ನವದೆಹಲಿ: ಸುಳ್ಳು ಆಶ್ವಾಸನೆಗಳು, ತಪ್ಪು ನಿರೂಪಣೆ ಮತ್ತು ವಿಚ್ಛೇದನದಂತಹ ಅಭ್ಯಾಸಗಳನ್ನು ತಡೆಯಲು ಎನ್‌ಆರ್‌ಐಗಳು (NRI) ಮತ್ತು ಭಾರತೀಯ ನಾಗರಿಕರ ನಡುವಿನ ಎಲ್ಲಾ ವಿವಾಹಗಳನ್ನು ಭಾರತದಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು ಎಂದು ಕಾನೂನು ಆಯೋಗವು (Law Commission) ಶುಕ್ರವಾರ ಶಿಫಾರಸು ಮಾಡಿದೆ.

    ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ, ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ನೇತೃತ್ವದ ಕಾನೂನು ಆಯೋಗವು, ಅನಿವಾಸಿ ಭಾರತೀಯರು ಮದುವೆಯಾಗುವ ಮೋಸದ ವಿವಾಹಗಳು ಹೆಚ್ಚುತ್ತಿರುವ ಘಟನೆಯು ಆತಂಕಕಾರಿ ಪ್ರವೃತ್ತಿಯಾಗಿದೆ. ಈ ನಡುವೆ ವಿವಾಹಗಳು ಮೋಸಗೊಳಿಸುವಂತಿವೆ, ಭಾರತೀಯ ಸಂಗಾತಿಗಳನ್ನು ವಿಶೇಷವಾಗಿ ಮಹಿಳೆಯರನ್ನು ಅನಿಶ್ಚಿತ ಪರಿಸ್ಥಿತಿಗಳಲ್ಲಿ ಇರಿಸುತ್ತಿವೆ ಎಂದಿದೆ. ಇಂತಹ ಪರಿಸ್ಥಿತಿಗಳನ್ನು ನಿಯಂತ್ರಿಸುವ ದೃಷ್ಟಿಯಿಂದ ಅನಿವಾಸಿ ಭಾರತೀಯರು/ಒಸಿಐಗಳು ಮತ್ತು ಭಾರತೀಯ ನಾಗರಿಕರ ನಡುವಿನ ಎಲ್ಲಾ ವಿವಾಹಗಳನ್ನು ಭಾರತದಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕೆಂದು ಆಯೋಗವು ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಆಸ್ಪತ್ರೆಗೆ ದಾಖಲು

    ಹೊಸ ಕಾನೂನು ವಿಚ್ಛೇದನ, ಸಂಗಾತಿಯ ನಿರ್ವಹಣೆ, ಮಕ್ಕಳ ಪಾಲನೆ ಮತ್ತು ಪೋಷಣೆ, ಎನ್‌ಆರ್‌ಐಗಳು ಮತ್ತು ಒಸಿಐಗಳ ಮೇಲೆ ಸಮನ್ಸ್, ವಾರಂಟ್‌ಗಳು ಅಥವಾ ನ್ಯಾಯಾಂಗ ದಾಖಲೆಗಳನ್ನು ಪೂರೈಸುವ ನಿಬಂಧನೆಗಳನ್ನು ಒಳಗೊಂಡಿರಬೇಕು. ವೈವಾಹಿಕ ಸ್ಥಿತಿಯನ್ನು ಘೋಷಿಸುವುದು, ಸಂಗಾತಿಯ ಪಾಸ್‌ಪೋರ್ಟ್ ಅನ್ನು ಇನ್ನೊಂದಕ್ಕೆ ಲಿಂಕ್ ಮಾಡುವುದು ಮತ್ತು ಇಬ್ಬರ ಪಾಸ್‌ಪೋರ್ಟ್ಗಳಲ್ಲಿ ವಿವಾಹ ನೋಂದಣಿ ಸಂಖ್ಯೆಯನ್ನು ನಮೂದಿಸುವುದನ್ನು ಕಡ್ಡಾಯಗೊಳಿಸಲು ಪಾಸ್‌ಪೋರ್ಟ್ ಕಾಯ್ದೆ, 1967ರಲ್ಲಿ ಅಗತ್ಯ ತಿದ್ದುಪಡಿಗಳನ್ನು ಪರಿಚಯಿಸುವ ಅಗತ್ಯವಿದೆ ಎಂದು ಕಾನೂನು ಸಮಿತಿ ಶಿಫಾರಸು ಮಾಡಿದೆ. ಇದನ್ನೂ ಓದಿ: ಪ್ರತಿಭಟನಾ ನಿರತರ ಮೇಲೆ ಮತ್ತೆ ಅಶ್ರುವಾಯು ದಾಳಿ – ಹೃದಯಾಘಾತದಿಂದ ರೈತ ಸಾವು!

    ಅದೇ ರೀತಿ ಮದುವೆಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ದೇಶೀಯ ನ್ಯಾಯಾಲಯಗಳು ನ್ಯಾಯವ್ಯಾಪ್ತಿಯನ್ನು ಹೊಂದಿರಬೇಕು. ವಿವಾಹಗಳಲ್ಲಿ ಉದ್ಭವಿಸುವ ವಿವಾದಗಳು ಸಾಮಾನ್ಯವಾಗಿ ವಿವಾದಗಳ ನ್ಯಾಯಯುತ ಮತ್ತು ನ್ಯಾಯಯುತ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಕಾನೂನು ವ್ಯವಸ್ಥೆಯ ಮಧ್ಯಪ್ರವೇಶದ ಅಗತ್ಯವಿರುತ್ತದೆ ಎಂದು ಸಮಿತಿಯ ವರದಿಯಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಚುನಾವಣಾ ಬಾಂಡ್ ರದ್ದು; ಮೋದಿ ಭ್ರಷ್ಟ ನೀತಿಗಳಿಗೆ ಮತ್ತೊಂದು ಉದಾಹರಣೆ ಎಂದ ರಾಹುಲ್ ಗಾಂಧಿ