Tag: ವಿಲ್ಸನ್ ಗಾರ್ಡನ್ ನಾಗ

  • ದರ್ಶನ್‌ಗೆ ರಾಜಾತಿಥ್ಯ – ಕಲಬುರಗಿ ಜೈಲಿಗೆ ವಿಲ್ಸನ್‌ ಗಾರ್ಡನ್‌ ನಾಗ ಶಿಫ್ಟ್‌

    ದರ್ಶನ್‌ಗೆ ರಾಜಾತಿಥ್ಯ – ಕಲಬುರಗಿ ಜೈಲಿಗೆ ವಿಲ್ಸನ್‌ ಗಾರ್ಡನ್‌ ನಾಗ ಶಿಫ್ಟ್‌

    ಬೆಂಗಳೂರು: ದರ್ಶನ್‌ಗೆ (Darshan) ರಾಜಾಥಿತ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಲ್ಸನ್ ಗಾರ್ಡನ್ ನಾಗನನ್ನು (Wilson Garden Naga) ಪರಪ್ಪನ ಅಗ್ರಹಾರ ಜೈಲಿನಿಂದ ಕಲಬುರಗಿ ಜೈಲಿಗೆ (Kalaburagi Jail) ಶಿಫ್ಟ್ ಮಾಡಲು ಕೋರ್ಟ್‌ ಆದೇಶ ಪ್ರಕಟಿಸಿದೆ.

    ವಿಲ್ಸನ್‌ ಗಾರ್ಡನ್‌ ನಾಗ ಸೇರಿ ಕೋಕಾ ಕೇಸ್ ಅಲ್ಲಿ ಬಂಧನ ಆಗಿದ್ದ 20 ಜನರೂ ಕೂಡ ಬೇರೆ ಬೇರೆ ಜೈಲಿಗೆ ವರ್ಗವಾಗಿದ್ದಾರೆ. ಇದನ್ನೂ ಓದಿ: Asian Champions Trophy| ಅತಿಥೇಯ ಚೀನಾಗೆ ಸೋಲು – 5ನೇ ಬಾರಿ ಭಾರತ ಚಾಂಪಿಯನ್‌

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆ ಆರೋಪಿ ನಟ ದರ್ಶನ್‌ಗೆ ರಾಜಾಥಿತ್ಯ ಕೊಟ್ಟಿದ್ದ ಆರೋಪ ವಿಲ್ಸನ್‌ ಗಾರ್ಡನ್‌ ನಾಗನ ಮೇಲಿತ್ತು. ನಾಗನ ಶಿಫ್ಟ್ ಮಾಡಲು ಜೈಲು ಅಧಿಕಾರಿಗಳು ಹಾಗೂ ಬೆಂಗಳೂರು ಪೊಲೀಸರು ಕೋರ್ಟ್ ಮೊರೆ ಹೋಗಿದ್ದರು. ಇದನ್ನೂ ಓದಿ: Asian Champions Trophy| ಅತಿಥೇಯ ಚೀನಾಗೆ ಸೋಲು – 5ನೇ ಬಾರಿ ಭಾರತ ಚಾಂಪಿಯನ್‌

    ಕಳೆದ ವರ್ಷ ಆಗಸ್ಟ್‌ನಲ್ಲಿ ಸಿದ್ದಪುರ ಮಹೇಶ್‌ನನ್ನ ನಾಗ ತಂಡ ಕೊಚ್ಚಿ ಕೊಲೆ ಮಾಡಿತ್ತು. ಪರಪ್ಪನ ಅಗ್ರಹಾರ ಜೈಲಿನಿಂದ ಹೊರಗಡೆ ಬಂದ ಕೇವಲ ಇನ್ನೂರು ಮೀಟರ್ ಅಂತರದಲ್ಲೇ ಸಿದ್ದಪುರ ಮಹೇಶನನ್ನು ಆರೋಪಿಗಳು ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಬರೋಬ್ಬರಿ ಇಪ್ಪತ್ತು ಜನರನ್ನು ಬಂಧನ ಮಾಡಲಾಗಿದೆ. ತಮ್ಮ ವಿರೋಧಿ ತಂಡಕ್ಕೆ ಟಾಂಗ್‌ ನೀಡಲು ಜೈಲಿನ ಒಳಗಡೆ ನಾಗನ ತಂಡ ಕ್ಲಿಕ್ಕಿಸಿದ ಫೋಟೋ ವೈರಲ್‌ ಆಗಿತ್ತು.

  • ಪರಪ್ಪನ ಅಗ್ರಹಾರಕ್ಕೆ ಏಕಾಏಕಿ ಸಿಸಿಬಿ ದಾಳಿ: 18 ಮೊಬೈಲ್, ಮಾದಕ ವಸ್ತು, ಹಣ ಸೀಜ್

    ಪರಪ್ಪನ ಅಗ್ರಹಾರಕ್ಕೆ ಏಕಾಏಕಿ ಸಿಸಿಬಿ ದಾಳಿ: 18 ಮೊಬೈಲ್, ಮಾದಕ ವಸ್ತು, ಹಣ ಸೀಜ್

    – ವಿಲ್ಸನ್‌ಗಾರ್ಡನ್ ನಾಗನದ್ದು ಸೇರಿದಂತೆ 18 ಮೊಬೈಲ್ ಸೀಜ್
    – ಡಿಸಿಪಿ ಸ.ರಾ ಫಾತಿಮಾ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಪೊಲೀಸರಿಂದ ದಾಳಿ

    ಬೆಂಗಳೂರು: ದರ್ಶನ್ (Actor Darshan) ರಾಜಾತಿಥ್ಯ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿಗೆ (Parappana Agrahara Jail) ಪೊಲೀಸರು ಏಕಾಏಕಿ ದಾಳಿ ನಡೆಸಿದ್ದು, ಮೊಬೈಲ್ ಸೇರಿದಂತೆ ಮಾದಕ ವಸ್ತು ಹಾಗೂ ಹಣವನ್ನು ವಶಕ್ಕೆ ಪಡೆದಿದ್ದಾರೆ.

    ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದಿದ್ದ ದರ್ಶನ್ ಹಾಗೂ ವಿಲ್ಸನ್‌ಗಾರ್ಡನ್ ನಾಗನ ಫೋಟೋ ವೈರಲ್ ಆದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಪೊಲೀಸರು ಹದ್ದಿನ ಕಣ್ಣಿದ್ದರು. ಜೊತೆಗೆ ಜೈಲಾಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಆದರೆ ಇದೀಗ ಏಕಾಏಕಿ ದಾಳಿ ನಡೆಸಿದ್ದಾರೆ.ಇದನ್ನೂ ಓದಿ: Breaking – ಸಿಎಂ ಹುದ್ದೆಗೆ ರಾಜೀನಾಮೆ ಘೋಷಿಸಿದ ಅರವಿಂದ್‌ ಕೇಜ್ರಿವಾಲ್‌!

    ಪರಪ್ಪನ ಅಗ್ರಹಾರ ಜೈಲಿನ ಮೇಲೆ ಆಗ್ನೇಯ ಪೊಲೀಸರಿಂದ ದಾಳಿ ನಡೆದಿದ್ದು, ರಾತ್ರಿ ಏಕಾಏಕಿ ಡಿಸಿಪಿ ಸರಾ ಫಾತಿಮಾ (DCP Sarah Fathima) ನೇತೃತ್ವದಲ್ಲಿ 50ಕ್ಕೂ ಹೆಚ್ಚು ಪೊಲೀಸರಿಂದ ದಾಳಿ ನಡೆಸಲಾಗಿದೆ. ಜೈಲಿನಲ್ಲಿ ಮೊಬೈಲ್ ಬಳಕೆಗೆ ಬಲವಾದ ಪುರಾವೆಗಳು ಲಭ್ಯವಾಗಿದ್ದು, ಜೈಲಾಧಿಕಾರಿಗಳ ಕಳ್ಳಾಟ ಮುಂದುವರೆದಿರುವುದು ದಾಳಿ ವೇಳೆ ಸಾಬೀತಾಗಿದೆ.

    ಕುಖ್ಯಾತ ರೌಡಿ ವಿಲ್ಸನ್‌ಗಾರ್ಡನ್ ನಾಗನ (Wilson Garden Naga) ಬ್ಯಾರಕ್ ಅಕ್ಕಪಕ್ಕದಲ್ಲಿ ಮೊಬೈಲ್‌ಗಳು ಪತ್ತೆಯಾಗಿದ್ದು, ಸುಮಾರು 17 ಆಂಡ್ರಾಯ್ಡ್ ಫೋನ್‌ಗಳು ಸಿಕ್ಕಿವೆ. ವಿಲ್ಸನ್ ಗಾರ್ಡನ್ ನಾಗನ ಮೊಬೈಲ್ ಸೇರಿದಂತೆ ಸಹಚರರ ಸುಮಾರು 18 ಮೊಬೈಲ್ ಸೀಜ್ ಮಾಡಿದ್ದಾರೆ. ಜೊತೆಗೆ ಮಾದಕ ವಸ್ತು ಹಾಗೂ ಹಣವನ್ನು ವಶಕ್ಕೆ ಪಡೆದಿದ್ದಾರೆ. ಇದನ್ನು ಕಂಡು ಖುದ್ದು ಪೊಲೀಸರೇ ಶಾಕ್ ಆಗಿದ್ದಾರೆ. ಇಷ್ಟೆಲ್ಲಾ ಇದ್ದರೂ ವಿಲ್ಸನ್‌ಗಾರ್ಡನ್ ನಾಗನನ್ನು ಬೇರೆ ಕಡೆ ಏಕೆ ವರ್ಗಾವಣೆ ಮಾಡಲಿಲ್ಲ. ಅವನ ಹಿಂದೆ ಯಾರಿದ್ದಾರೆ? ಅವನಿಗೆ ಇಲಾಖೆಯಲ್ಲಿ ಇಷ್ಟೊಂದು ಪ್ರಭಾವವಿದೇಯಾ? ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.ಇದನ್ನೂ ಓದಿ: ಶಾಸಕ ಮುನಿರತ್ನ ಬಂಧನ ಪ್ರಕರಣ – ತಪ್ಪು ಮಾಡಿರೋದು ಸಾಮಾನ್ಯ ವ್ಯಕ್ತಿಯಲ್ಲ ಒಬ್ಬ ಮಾಜಿ ಮಂತ್ರಿ: ಡಿಕೆ ಸುರೇಶ್‌

  • Bengaluru | ನಟ ದರ್ಶನ್‌ಗೆ ಜೈಲಲ್ಲಿ ರೌಡಿಗಳ ನಂಟು – ದರ್ಶನ್‌ ಮೇಲೆ‌ ಮತ್ತೆರಡು ಎಫ್‌ಐಆರ್‌!

    Bengaluru | ನಟ ದರ್ಶನ್‌ಗೆ ಜೈಲಲ್ಲಿ ರೌಡಿಗಳ ನಂಟು – ದರ್ಶನ್‌ ಮೇಲೆ‌ ಮತ್ತೆರಡು ಎಫ್‌ಐಆರ್‌!

    – ಮೋಸ್ಟ್‌ ವಾಂಟೆಡ್‌ಗಳಿರುವ ಹಿಂಡಲಗಾ ಜೈಲಿಗೆ ದರ್ಶನ್‌ ಶಿಫ್ಟ್‌ ಮಾಡಲು ಚಿಂತನೆ
    – ದರ್ಶನ್ ಸೇರಿ ನಾಲ್ವರ ಬಾಡಿವಾರೆಂಟ್‌ಗೆ ಅರ್ಜಿ

    ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಹಾಗೂ ವಿಲ್ಸನ್ ಗಾರ್ಡನ್ ನಾಗನಿಗೆ ರಾಜಾತಿಥ್ಯ ವಿಚಾರವಾಗಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ 3 ಎಫ್‌ಐಆರ್‌ಗಳು ದಾಖಲಾಗಿವೆ. ಕೇಂದ್ರ ಕಾರಾಗೃಹಗಳ ಉಪನಿರ್ದೇಶಕರಾದ ಎಂ. ಸೋಮಶೇಖರ್ ರಿಂದ ದೂರು ನೀಡಲಾಗಿದ್ದು, ಮೂರು ಪ್ರಕರಣಗಳಲ್ಲಿ ಎರಡರಲ್ಲಿ ದರ್ಶನ್ ಎ1 ಆರೋಪಿಯನ್ನಾಗಿಸಲಾಗಿದೆ‌. 3ನೇ ಎಫ್ಐಆರ್ ಜೈಲು ಅಧಿಕಾರಿಗಳ ಮೇಲಾಗಿದ್ದು, ದರ್ಶನ್‌ಗೆ ಮತ್ತೆ ಸಂಕಷ್ಟ ಶುರುವಾಗಿದೆ.

    ಏನೇನು ಪ್ರಕರಣ – ಯಾರು ಆರೋಪಿ?
    1) ಕಾರಾಗೃಹ U/s. 42 ಅಕ್ಟ್ ಅಡಿ ಯಲ್ಲಿ ಒಂದು ಎಫ್‌ಐಆರ್‌
    A1- ದರ್ಶನ್
    A2- ನಾಗರಾಜ್
    A3-ವಿಲ್ಸನ್ ಗಾರ್ಡನ್ ನಾಗ
    A4-ಕುಳ್ಳ ಸೀನಾ.

    2) ಮತ್ತೊಂದು ಕಾರಾಗೃಹ U/s. 42 ಅಕ್ಟ್ ಅಡಿ ಯಲ್ಲಿ ಒಂದು ಎಫ್‌ಐಆರ್‌
    A1-ದರ್ಶನ್
    A2-ಧರ್ಮ
    A3-ಸತ್ಯ

    3)U/S 42, 54 (1(A) Prisons Act & 238, 323 BNS ಅಕ್ಟ್ ಅಡಿ ಎಫ್‌ಐಆರ್‌
    A1-ಸುದರ್ಶನ್ ಕೆ.ಎಸ್.
    A2-ಮುಜೀಬ್
    A3-ಪರಮೇಶ ನಾಯಕ್ ಲಮಾಣಿ
    A4- ಕೆ ಬಿ ರಾಯಮನೆ

    ಸಿಸಿಬಿ ದಾಳಿ; ಹಿಂದಿನ ರಾತ್ರಿಯೇ ಮಾಹಿತಿ ಸೋರಿಕೆ:
    ಇನ್ನೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ. ವೇಲು ಎಂಬಾತನ ಮೊಬೈಲ್‌ನಿಂದ ದರ್ಶನ್‌ ಜೈಲಿನಲ್ಲಿ ದರ್ಬಾರ್‌ ನಡೆಸುತ್ತಿರೋ ಫೋಟೋ ಸೋರಿಕೆ ಆಗಿತ್ತು, ಧರ್ಮ ಎಂಬಾತ ಮೊಬೈಲ್‌ನಿಂದ ದರ್ಶನ್‌ ವೀಡಿಯೋ ಕಾಲ್‌ ಮಾಡಿ ಮಾತನಾಡಿದ್ದರು. ಇಷ್ಟೆಲ್ಲಾ ಆಗಿದ್ದರೂ ಸಿಸಿಬಿ ಅಧಿಕಾರಿಗಳ ಕೈಗೆ ಯಾವುದೇ ಮೊಬೈಲ್‌ ಸಿಕ್ಕಿಲ್ಲ ಅಂತ ಅಧಿಕಾರಿಗಳು, ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಅಲ್ಲದೇ ಸಿಸಿಬಿ ದಾಳಿ ನಡೆಯುತ್ತೆ ಅಂತ ಹಿಂದಿನ ರಾತ್ರಿಯೇ ಮಾಹಿತಿ ಸೋರಿಕೆಯಾಗಿತ್ತು ಎಂದೂ ಮೂಲಗಳು ತಿಳಿಸಿವೆ.

    ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲು ಚಿಂತನೆ:
    ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ದರ್ಶನ್ ರನ್ನ ಮಂಗಳವಾರ ಅಥವಾ ಬುಧವಾರ ರಾತ್ರಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲು ಜೈಲಾಧಿಕಾರಿಗಳು ಚರ್ಚೆ ಮಾಡ್ತಿದ್ದಾರೆ. ನಟೋರಿಯಸ್ ರೌಡಿ ನಾಗನ ಜೊತೆಗಿರೋ ಫೋಟೋ ವೈರಲ್ ಆದ ಬೆನ್ನಲ್ಲೇ ಇಂಥದ್ದೊಂದು ನಿರ್ಧಾರಕ್ಕೆ ಬರಲಾಗಿದೆಯಂತೆ. ನೂರು ವರ್ಷಗಳ ಇತಿಹಾಸ ಇರುವ ಈ ಜೈಲಿನಲ್ಲಿ ಮರಣದಂಡನೆಗೆ ಗುರಿಯಾಗಿರೋ ಖೈದಿಗಳು ಇದ್ದಾರೆ. ನಟೋರಿಯಸ್ ರೌಡಿಗಳು, ಸಮಾಜಘಾತಕರು, ದೇಶದ್ರೋಹಿಗಳು, ವಿಕೃತ ಕಾಮಿಗಳು ಇರುವಂತ ಜೈಲಿಗೆ ದರ್ಶನ್ ಅವರನ್ನ ಶಿಫ್ಟ್ ಮಾಡಲಾಗ್ತಿದೆ. ಖುದ್ದು ಸಿಎಂ ಸಿದ್ದಾರಮಯ್ಯ ಅವರೇ ದರ್ಶನ್ ಅಂಡ್ ಗ್ಯಾಂಗ್ ಅನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡುವಂತೆ ಆದೇಶ ನೀಡಿದ್ದಾರೆ. ಮೋಸ್ಟ್ ವಾಟೆಂಡ್ ಕ್ರಿಮಿನಲ್ ಇರುವಂಥ ಜೈಲು ಇದಾಗಿದ್ದು, ದರ್ಶನ್ ಗೆ ಶಿಫ್ಟ್ ಮಾಡುವ ಮೂಲಕ, ಈಗಿನಿಂದಲೇ ಶಿಕ್ಷೆ ಕೊಡೋಕೆ ಸಿದ್ಧತೆ ನಡೆದಿದೆ.

    ದರ್ಶನ್ ಸೇರಿ ನಾಲ್ವರ ಬಾಡಿವಾರೆಂಟ್‌ಗೆ ಅರ್ಜಿ:
    ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ದರ್ಶನ್ ಸೇರಿ ನಾಲ್ವರ ಬಾಡಿವಾರೆಂಟ್‌ಗೆ ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ. ಸೋಮವಾರ ಸಂಜೆ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿರುವ ಪೊಲೀಸರು ಮಂಗಳವಾರ (ಆ.27) ಕೋರ್ಟ್‌ ಗಮನಕ್ಕೆ ತಂದು ಬಾಡಿವಾರೆಂಟ್ ಗೆ ಪಡೆಯಲು ತಯಾರಿ ನಡೆಸಿದ್ದಾರೆ. ಮಂಗಳವಾರ ಸಂಜೆಯೇ ದರ್ಶನ್‌ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.

  • ದರ್ಶನ್ ಜೊತೆ ಜೈಲಲ್ಲಿ ಪೋಸ್ ಕೊಟ್ಟ ರೌಡಿಶೀಟರ್ ನಾಗ ಧರಿಸಿದ್ದ ಟಿ-ಶರ್ಟ್ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಾ!

    ದರ್ಶನ್ ಜೊತೆ ಜೈಲಲ್ಲಿ ಪೋಸ್ ಕೊಟ್ಟ ರೌಡಿಶೀಟರ್ ನಾಗ ಧರಿಸಿದ್ದ ಟಿ-ಶರ್ಟ್ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಾ!

    ಬೆಂಗಳೂರು: ಕೊಲೆ ಆರೋಪಿ ದರ್ಶನ್‌ಗೆ (Darshan) ರಾಜಾತಿಥ್ಯ ನೀಡಲಾಗುತ್ತಿದೆ ಎನ್ನುವ ಫೋಟೋ ವೈರಲ್‌ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಜೈಲಲ್ಲಿ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗನ (Wilson Garden Naga) ರಾಯಲ್ ಲೈಫ್ ಒಂದೊಂದಾಗಿ ತೆರೆದುಕೊಳ್ತಿದೆ.

    ಬ್ರಾಂಡೆಡ್ ಬಟ್ಟೆ, ಬ್ರ್ಯಾಂಡೆಡ್ ಶೂ, ರುಚಿಯಾದ ಊಟ, ಕೈಯಲ್ಲಿ ಮೊಬೈಲ್, ಐಷಾರಾಮಿ ವೆಸ್ಟರ್ನ್ ಟಾಯ್ಲೆಟ್, ಹೈಟೇಕು ಹಾಸಿಗೆ, ಜಿಮ್ ಉಪಕರಣ, ಹೀಗೆ ಒಂದಾ ಎರಡಾ? ನಾಗನ ಐಷಾರಾಮಿ ಬ್ಯಾರಕ್ ನೋಡಿ ಸಿಸಿಬಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಇದನ್ನೂ ಓದಿ: ದರ್ಶನ್‍ಗೆ ಜೈಲಲ್ಲಿ ರಾಜಾತಿಥ್ಯ | ಸಿಎಂ- ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ: ಪ್ರಲ್ಹಾದ್ ಜೋಶಿ

    ʻದಾಸʼನ ಜೊತೆ ಕುಳಿತು ಹರಟೆ ಹೊಡೆದಿದ್ದ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ ಧರಿಸಿದ್ದ ಬಾಲ್ಮೈನ್ ಟಿ-ಶರ್ಟ್ (T Shirt) ಬೆಲೆಯೇ 15-20 ಸಾವಿರ ರೂ. ಇದೆ ಎನ್ನಲಾಗಿದೆ. ದುಬೈ ಸೇರಿದಂತೆ ಫಾರಿನ್ ಕಾಸ್ಟ್ಲಿ ಬ್ರ್ಯಾಂಡ್ ಟಿ-ಶರ್ಟ್‌ಗಳನ್ನ ನಾಗ ಧರಿಸ್ತಿದ್ದಾನೆ. ಇದಲ್ಲದೇ ಬ್ಯಾರಕ್‌ನಲ್ಲಿ ಐದಾರು ಜೊತೆ ಬ್ರ್ಯಾಂಡೆಡ್ ಶೂ, ಕೆಜಿಗಟ್ಟಲೆ ಡ್ರೈಫ್ರೂಟ್ಸ್, ಫ್ರೂಟ್ಸ್ ಕಂಡು ಸಿಸಿಬಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಇದನ್ನೂ ಓದಿ: ಟಾರ್ಚ್ ಹಾಕಿ ತಡಕಾಡೋದು ಸಿಎಂಗೆ ಶೋಭೆಯಲ್ಲ – ಶಿಶುಪಾಲನಂತೆ ತಪ್ಪಿನ ಮೇಲೆ ತಪ್ಪು ಮಾಡ್ತಿದ್ದೀರಿ: ಹೆಚ್‌ಡಿಕೆ ಎಚ್ಚರಿಕೆ

    ಇನ್ನೂ ನಾಗನ ಬ್ಯಾರಕ್‌ನಿಂದ ದಾಸನಿಗೆ ಊಟ ಹೋಗ್ತಿರೊ ಆರೋಪದ ನಡುವೆಯೇ ಫೋಟೊ ವೈರಲ್ ಆಗಿದೆ. ಇಷ್ಟಾದ್ರು ಖತರ್ನಾಕ್ ರೌಡಿಗಳನ್ನ ಶಿಫ್ಟಿಂಗ್ ಮಾಡ್ತಿಲ್ಲ. ಪರಪ್ಪನ ಅಗ್ರಹಾರ ಜೈಲಿಂದ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡುವಂತೆ ಪೊಲೀಸ್‌ ಆಯುಕ್ತ ದಯಾನಂದ್ ಪತ್ರ ಕೂಡ ಬರೆದಿದ್ದರು. ಜೈಲಲ್ಲಿದ್ದಕೊಂಡೇ ಲಿಟಿಗೇಷನ್ ಪ್ರಾಪರ್ಟಿ ಸೇರಿದಂತೆ ಬೆದರಿಕೆ ಕಾಲ್ ಮಾಡ್ತಿರುವ ರೌಡಿಶೀಟರ್‌ಗಳ ವಿರುದ್ಧ ಕ್ರಮ ಆಗ್ತಿಲ್ಲ ಅನ್ನೋದಂತು ಸತ್ಯ. ಇದನ್ನೂ ಓದಿ: ರಾಜ್ಯದ ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಆಧಾರ್, ಪ್ಯಾನ್, ಪಾಸ್‌ಪೋರ್ಟ್ ಕಡ್ಡಾಯ: ಕೃಷ್ಣಭೈರೇಗೌಡ

  • ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ: ಶೀಘ್ರವೇ ದರ್ಶನ್ ಬೇರೆ ಜೈಲಿಗೆ ಶಿಫ್ಟ್?

    ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ: ಶೀಘ್ರವೇ ದರ್ಶನ್ ಬೇರೆ ಜೈಲಿಗೆ ಶಿಫ್ಟ್?

    ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ (Parappana Agrahara Jail) ದರ್ಶನ್ (Actor Darshan) ಮತ್ತು ವಿಲ್ಸನ್ ಗಾರ್ಡನ್ ನಾಗನ ಫೋಟೋ ವೈರಲ್ ಆದ ಬೆನ್ನಲ್ಲೇ ಇಬ್ಬರು ಬೇರೆ ಕಡೆ ಶಿಫ್ಟ್ ಆಗುವ ಸಾಧ್ಯತೆಯಿದೆ.

    ಮೂಲಗಳ ಪ್ರಕಾರ ಎರಡು ದಿನಗಳ ಒಳಗಡೆ ಬಳ್ಳಾರಿ (Ballary) ಅಥವಾ ಬೆಳಗಾವಿ (Belagavi) ಜೈಲಿಗೆ ದರ್ಶನ್ ಅವರನ್ನು ಸ್ಥಳಾಂತರ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಇಬ್ಬರನ್ನು ಸ್ಥಳಾಂತರ ಮಾಡುವ ಸಂಬಂಧ ಅಧಿಕಾರಿಗಳು ಸಭೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ – 7 ಮಂದಿ ಅಮಾನತು

    ಫೋಟೋ ವೈರಲ್ ಆದ ಬೆನ್ನಲ್ಲೇ ಸರ್ಕಾರ ಈಗಾಗಲೇ 7 ಮಂದಿಯನ್ನು ಅಮಾನತು ಮಾಡಿದೆ.

    ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್ (Parameshwar) ಜೈಲಿನಲ್ಲಿ ಈ ರೀತಿ ನಡೆಯಬಾರದು. 7 ಜನ ಭಾಗಿಯಾಗಿದ್ದಾರೆ ಅಂತ ವರದಿ ಬಂದ ಮೇಲೆ ಕ್ರಮ ತೆಗೆದುಕೊಂಡಿದೆ. ಎಲ್ಲಾ ಜೈಲುಗಳಲ್ಲಿ ಜಾಮರ್, ಕ್ಯಾಮೆರಾ ಹಾಕಿದರೂ ಹೀಗೆ ಆಗುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

    ಜೈಲು ಅಧಿಕಾರಿಗಳಾದ ಶರಣ ಬಸವ ಅಮೀನ್‌ಗಡ್, ಪ್ರಭು ಎಸ್. ಖಂಡೇಲ್‌ವಾಲ್, ಅಸಿಸ್ಟೆಂಟ್ ಜೈಲರ್ಸ್ ಎಲ್.ಎಸ್. ತಿಪ್ಪೇಸ್ವಾಮಿ, ಶ್ರೀಕಾಂತ್ ತಲವಾರ್, ಹೆಡ್ ವಾರ್ಡರ್ಸ್ ವೆಂಕಪ್ಪ ಕೊರ್ಟಿ, ಸಂಪತ್ ಕುಮಾರ್ ಕಡಪಟ್ಟಿ, ವಾರ್ಡರ್ ಬಸಪ್ಪ ತೇಲಿ ಅವರನ್ನು ಅಮಾನತು ಮಾಡಲಾಗಿದೆ.ಇದನ್ನೂ ಓದಿ: ಕಿಲ್ಲಿಂಗ್ ಸ್ಟಾರ್ ಬಿಂದಾಸ್ ಲೈಫ್- ಜೈಲು ನಿಯಮ ಏನು ಹೇಳುತ್ತೆ?

    ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ಹಾಗೂ ರೌಡಿಗಳ ಜೊತೆ ಫೋಟೊ ವೈರಲ್ ಬೆನ್ನಲ್ಲೇ ಆಂತರಿಕ ತನಿಖೆಗೆ ಕಾರಾಗೃಹಗಳ ಡಿ.ಜಿ ಮಾಲಿನಿ ಕೃಷ್ಣಮೂರ್ತಿ (DG Malini Krishnamurthy) ಆದೇಶ ನೀಡಿದ್ದಾರೆ. ರಾಜಾತಿಥ್ಯ ನೀಡಿದ ವಿಚಾರ ಹಾಗೂ ರೌಡಿಗಳ ಜೊತೆ ಇರಲು ಬಿಟ್ಟಿದ್ದು ಯಾರು? ಅನ್ನೋದನ್ನು ಜೈಲಿಗೆ ತೆರಳಿ ಪರಿಶೀಲನೆ ನಡೆಸಿ ವರದಿ ನೀಡಲು ಸೂಚನೆ ನೀಡಲಾಗಿದೆ.

  • ನಾಗ ಯಾರು, ತಿಮ್ಮ ಯಾರು, ಬೊಮ್ಮಾ ಯಾರು ನನಗೆ ಗೊತ್ತಿಲ್ಲ: ಸೋಮಣ್ಣ ಸ್ಪಷ್ಟನೆ

    ನಾಗ ಯಾರು, ತಿಮ್ಮ ಯಾರು, ಬೊಮ್ಮಾ ಯಾರು ನನಗೆ ಗೊತ್ತಿಲ್ಲ: ಸೋಮಣ್ಣ ಸ್ಪಷ್ಟನೆ

    ಬೆಂಗಳೂರು: ವಿಲ್ಸನ್ ಗಾರ್ಡನ್ ನಾಗ (Wilson Garden Naga) ಯಾರು ಅಂತಾನೇ ನಮಗೆ ಗೊತ್ತಿಲ್ಲ. ನಾನು ಅವನನ್ನು ಭೇಟಿ ಆಗಿಲ್ಲ ಅಂತ ವಸತಿ ಸಚಿವ ಸೋಮಣ್ಣ (V.Somanna) ಸ್ಪಷ್ಟಪಡಿಸಿದ್ದಾರೆ.

    ನಿನ್ನೆ ರಾತ್ರಿ ಸಚಿವ ಸೋಮಣ್ಣರನ್ನು ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ ಭೇಟಿ ಮಾಡಿದ್ದ ಎಂಬ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಸೋಮಣ್ಣ, ನನಗೆ ವಿಲ್ಸನ್ ಗಾರ್ಡನ್ ನಾಗ ಯಾರು ಅಂತ ಗೊತ್ತೇ ಇಲ್ಲ. ನಾನು ನಾಗನನ್ನು ಭೇಟಿಯಾಗಿಲ್ಲ. ಒಂದೇ ಒಂದೂ ನಿಮಿಷವೂ ನಾನು ಅವನನ್ನು ನೋಡಿಲ್ಲ. ನಿತ್ಯ ಸಾವಿರಾರು ಜನರು ನನ್ನ ಭೇಟಿಗೆ ಬರುತ್ತಾರೆ. ನಾಗ ಯಾರು, ತಿಮ್ಮ ಯಾರು ಬೊಮ್ಮಾ ಯಾರು ನನಗೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: ನಾವು ಯಾವುದೇ ರೌಡಿಗಳನ್ನು ಸೇರಿಸಿಕೊಂಡಿಲ್ಲ, ಪ್ರೋತ್ಸಾಹ ನೀಡಿಲ್ಲ: ಬೊಮ್ಮಾಯಿ

    ನನ್ನ ಜೀವನ ತೆರದ ಪುಸ್ತಕ. ನಾನು ಯಾವತ್ತು ಬೇರೆ ಕೆಲಸಗಳನ್ನು ಮಾಡಿಲ್ಲ. 55 ವರ್ಷಗಳಿಂದ ನಾನು ರಾಜಕೀಯ ಮಾಡ್ತಿದ್ದೇನೆ. 11 ಚುನಾವಣೆ ಎದುರಿಸಿದ್ದೇನೆ. ಯಾರು ಬರುತ್ತಾರೆ ಯಾರು ಹೋಗುತ್ತಾರೆ ನನಗೆ ಗೊತ್ತಿರಲ್ಲ. ಉತ್ತಮವಾಗಿ ಜೀವನ ಮಾಡಿಕೊಂಡು ಬಂದಿದ್ದೇನೆ. ನನ್ನ ವಯಸ್ಸಿಗೆ ಬೆಲೆ ಕೊಡಬೇಕು. ಹೀಗೆಲ್ಲ ಮಾಡಿದ್ರೆ ಮಾನಸಿಕವಾಗಿ ನನಗೆ ನೋವಾಗುತ್ತೆ. ಯಾವುದೇ ವ್ಯವಹಾರ ನನಗೆ ವಿಲ್ಸನ್ ಗಾರ್ಡನ್ ನಾಗನ ಜೊತೆ ಇಲ್ಲ. ನಾನು ಅವರನ್ನು ನೋಡಿಯೂ ಇಲ್ಲ. ಮಾತು ಆಡಿಸಿಲ್ಲ. ವಿಲ್ಸನ್ ಗಾರ್ಡನ್ ನಾಗ ಯಾರು ಅಂತಾನೂ ನನಗೆ ಗೊತ್ತಿಲ್ಲ ಅಂತ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಬೆಂಗ್ಳೂರಿನ ಇತಿಹಾಸದಲ್ಲೇ ಫಸ್ಟ್ ಟೈಮ್ ಎಸ್‍ಪಿ ರೋಡ್ ಬಂದ್ – ಡಿ.13ಕ್ಕೆ ವಿಧಾನಸೌಧಕ್ಕೆ ವರ್ತಕರ ಮೆರವಣಿಗೆ

    Live Tv
    [brid partner=56869869 player=32851 video=960834 autoplay=true]