Tag: ವಿಲೇವಾರಿ

  • ಎಲೆಕ್ಟ್ರಾನಿಕ್ ತ್ಯಾಜ್ಯ ಸಂಗ್ರಹಿಸಲು, ಮರುಬಳಕೆ ಮಾಡಲು ನೋಯ್ಡಾದಲ್ಲಿ ಹೊಸ ಅಭಿಯಾನ

    ಲಕ್ನೋ: ಎಲೆಕ್ಟ್ರಾನಿಕ್ ತ್ಯಾಜ್ಯ ಅಥವಾ ಇ-ವೇಸ್ಟ್ ನಿಯಂತ್ರಿಸುವ ಬಗ್ಗೆ ದೇಶ-ವಿದೇಶಗಳಲ್ಲಿ ಹೊಸ ಹೊಸ ಕ್ರಮಗಳನ್ನು ಜಾರಿಗೊಳಿಸುತ್ತಲೇ ಇವೆ. ಇದೀಗ ನೋಯ್ಡಾ ಪ್ರಾಧಿಕಾರ ಸೋಮವಾರ ನಗರಾದ್ಯಂತ ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಮರುಬಳಕೆ ಮಾಡುವ ಉದ್ದೇಶದಿಂದ ಹೊಸ ಅಭಿಯಾನವನ್ನು ಪ್ರಾರಂಭಿಸಿದೆ.

    ಎಲೆಕ್ಟ್ರಾನಿಕ್ ರಿಪೇರಿಗಳಂತಹ ಅಂಗಡಿ ಹಾಗೂ ನಗರಾದ್ಯಂತ ವಸತಿ ಪ್ರದೇಶಗಳಿಂದ ಇ-ತ್ಯಾಜ್ಯವನ್ನು ಸಂಗ್ರಹಿಸಲು ಹಾಗೂ ವಿಲೇವಾರಿ ಮಾಡಲು 2 ಏಜೆನ್ಸಿಗಳನ್ನು ಸ್ಥಾಪಿಸಲಾಗಿದೆ.

    ಇ-ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಹಲವು ಪ್ರಯತ್ನಗಳು ನಡೆಯುತ್ತಿದೆ. ಇ-ತ್ಯಾಜ್ಯ ಮರುಬಳಕೆದಾರರೊಂದಿಗೆ ಒಪ್ಪಂದ ಮಾಡಿಕೊಂಡಿರುವ 2 ಏಜೆನ್ಸಿಗಳ ಮೂಲಕ ನಗರದ ವಸತಿ ಪ್ರದೇಶಗಳಿಂದ ಇ-ತ್ಯಾಜ್ಯವನ್ನು ಸಂಗ್ರಹಿಸಿ ಮರುಬಳಕೆ ಮಾಡಲಾಗುತ್ತಿದೆ ಎಂದು ನೋಯ್ಡಾ ಪ್ರಾಧಿಕಾರದ ಸಿಇಒ ರಿತು ಮಹೇಶ್ವರಿ ತಿಳಿಸಿದ್ದಾರೆ. ಇದನ್ನೂ ಓದಿ: ಸೂಪರ್ ಹೀರೋ ರೂಪತಾಳಿದ ಚರಣ್‍ಜಿತ್ ಸಿಂಗ್ ಚನ್ನಿ

    ಆನ್‌ಲೈನ್ ಟ್ರಾಕಿಂಗ್ ಮೂಲಕ ಇ-ತ್ಯಾಜ್ಯ ಮರುಬಳಕೆ:
    ಇ-ತ್ಯಾಜ್ಯ ಸಂಗ್ರಹಣೆಗೆ ಇ-ಬಿನ್‌ಗಳ ಬಳಕೆ ಮಾಡುವ ಪ್ರಯತ್ನ ನಡೆಯುತ್ತಿದೆ. ಇ-ತ್ಯಾಜ್ಯವನ್ನು ಆನ್‌ಲೈನ್ ಟ್ರಾಕಿಂಗ್ ಸಿಸ್ಟಮ್ ಮೂಲಕ ಮರುಬಳಕೆ ಮಾಡಲಾಗುವುದು. ಇದು ಸ್ವಯಂ ಸಮರ್ಥನೀಯ ಮಾದರಿಯಾಗಿದೆ ಎಂದು ರಿತು ತಿಳಿಸಿದ್ದಾರೆ.

    ಇ-ತ್ಯಾಜ್ಯ ವಿಲೇವಾರಿ ಏಕೆ ಅಗತ್ಯ:
    ಸದ್ಯದ ಪರಿಸ್ಥಿತಿಯಲ್ಲಿ ಇ-ತ್ಯಾಜ್ಯದ ಬಗ್ಗೆ ಗಮನ ಹರಿಸುವುದು ಅತೀ ಅಗತ್ಯ. ಸರಳವಾಗಿ ಹೇಳುವುದಾದರೆ ಇ-ತ್ಯಾಜ್ಯಗಳು ಮುಖ್ಯವಾಗಿ ಫೋನ್, ಲ್ಯಾಪ್‌ಟಾಪ್, ಹಾರ್ಡ್ ಡ್ರೈವ್, ವಯರ್‌ಗಳು ಹೀಗೆ ಮೊದಲಾದವುಗಳೇ ಆಗಿವೆ. ಅವುಗಳು ಕೆಲಸಕ್ಕೆ ಬಾರದ ಸಮಯದಲ್ಲಿ ಇ-ವೇಸ್ಟ್‌ಗಳಾಗಿ ಪರಿವರ್ತನೆ ಹೊಂದುತ್ತದೆ. ಇದನ್ನೂ ಓದಿ: ಆತ್ಮನಿರ್ಭರ್ ಭಾರತಕ್ಕೆ ಹೊಸ ರೂಪ ನೀಡಿದ ದೆಹಲಿ ಮೆಟ್ರೋ

    ಇವುಗಳಲ್ಲಿನ ವಿಷಕಾರಿ ರಾಸಾಯನಿಕಗಳಿಂದ ಭಾರೀ ಅಪಾಯಗಳಾಗುವ ಸಾಧ್ಯತೆ ಇದೆ. ಜೊತೆಗೆ ಪರಿಸರ ಮಾಲಿನ್ಯವೂ ಆಗುವುದರಿಂದ ಇವುಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು ಅಗತ್ಯ.

  • ಸೇನಾ ಶಸ್ತ್ರಾಸ್ತ್ರ ಸಂಗ್ರಹಾಲಯದಲ್ಲಿ ಬಾಂಬ್ ಸ್ಫೋಟ 6 ಮಂದಿ ಸಾವು, 10ಕ್ಕೂ ಹೆಚ್ಚು ಮಂದಿ ಗಂಭೀರ

    ಸೇನಾ ಶಸ್ತ್ರಾಸ್ತ್ರ ಸಂಗ್ರಹಾಲಯದಲ್ಲಿ ಬಾಂಬ್ ಸ್ಫೋಟ 6 ಮಂದಿ ಸಾವು, 10ಕ್ಕೂ ಹೆಚ್ಚು ಮಂದಿ ಗಂಭೀರ

    ಮುಂಬೈ: ಮಹಾರಾಷ್ಟ್ರದ ವಾರ್ಧಾ ಬಳಿಯಿರುವ ಸೇನಾ ಶಸ್ತ್ರಾಸ್ತ್ರ ಸಂಗ್ರಹಾಲಯ ಪುಲ್‍ಗಾಂವ್ ನಲ್ಲಿ ನಡೆದ ಸ್ಫೋಟದಿಂದಾಗಿ 6 ಮಂದಿ ಸಾವನ್ನಪ್ಪಿ 10 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಪುಲ್‍ಗಾಂವ್ ನಲ್ಲಿ ಸಂಭವಿಸಿದ ಸ್ಫೋಟದಿಂದಾಗಿ, ಶಸ್ತ್ರಾಸ್ತ್ರ ಕಾರ್ಖಾನೆಯ ಸಿಬ್ಬಂದಿ ಸೇರಿದಂತೆ 5 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಇವರಲ್ಲಿ 4 ಮಂದಿ ಸ್ಥಳದಲ್ಲೇ ಮೃತಪಟ್ಟರೇ, ಇನ್ನಿಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆ. ಇವರಲ್ಲದೇ 11 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

    ಮಧ್ಯಪ್ರದೇಶದ ಕಮಾರಿಯಾ ಶಸ್ತ್ರಾಸ್ತ್ರ ಕಾರ್ಖಾನೆಯಿಂದ 23 ಎಂಎಂ ಫಿರಂಗಿಗಳನ್ನು ವಾರ್ಧಾ ಬಳಿಯಿರುವ ಪುಲ್‍ಗಾಂವ್ ನ ಪ್ರದೇಶದಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು. ಮಂಗಳವಾರ ಬೆಳಗ್ಗೆ 7.15ರ ಸುಮಾರಿಗೆ ಕಾರ್ಮಿಕನ ಕೈಯಿಂದ ಬಿದ್ದ ಫಿರಂಗಿಯೊಂದು ಏಕಾಏಕಿ ಸ್ಫೋಟಗೊಂಡಿದ್ದರಿಂದ ಅವಘಡ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ನಿಖಿಲ್ ಪಿಂಗ್‍ಕಲ್ ಹೇಳಿದ್ದಾರೆ.

    ಈ ಬಗ್ಗೆ ಸೇನಾ ಅಧಿಕಾರಿಗಳು ಮಾತನಾಡಿ, ಕಮಾರಿಯಾ ಶಸ್ತ್ರಾಸ್ತ್ರ ಕಾರ್ಖಾನೆಯಿಂದ ತಂದಿದ್ದ ಫಿರಂಗಿಗಳನ್ನು ಕಂಟ್ರಾಕ್ಟರ್ ಹಾಗೂ ಕಾರ್ಮಿಕರ ನೆರವಿನಿಂದ ಪುಲ್‍ಗಾಂವ್ ಪ್ರದೇಶದಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು. ಈ ವೇಳೆ ಅವಧಿ ಮುಗಿದ ಶೆಲ್ ವೊಂದು ಸ್ಫೋಟಗೊಂಡಿದೆ ಎಂದು ತಿಳಿಸಿದ್ದಾರೆ.

    ಪುಲ್‍ಗಾಂವ್ ಶಸ್ತ್ರಾಸ್ತ್ರ ಸಂಗ್ರಹಾಲಯ ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ಯುದ್ಧ ಸಾಮಗ್ರಿ ಸಂಗ್ರಹಾಲಯವಾಗಿದೆ. 2016ರಲ್ಲಿಯೂ ಇದೇ ಪುಲ್‍ಗಾಂವ್ ಸೇನಾ ಸಂಗ್ರಹಾಲಯದಲ್ಲಿ ಇಂತಹುದೇ ದುರ್ಘಟನೆ ಸಂಭವಿಸಿ 16 ಮಂದಿ ಸಾವಿಗೀಡಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಆದೇಶ ಪಾಲಿಸದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಗರಂ

    ಆದೇಶ ಪಾಲಿಸದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಗರಂ

    ನವದೆಹಲಿ: ಆದೇಶ ಪಾಲನೆ ಮಾಡದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಗರಂ ಆಗಿದ್ದು, ಕೂಡಲೇ ಕಾರ್ಯಪ್ರವೃತ್ತರಾಗಿ ಕೆಲಸ ಆರಂಭಿಸುವಂತೆ ಖಡಕ್ ಎಚ್ಚರಿಕೆ ನೀಡಿದೆ.

    ನಗರದ ಬಾಗಲೂರು ಬಳಿ ಕಸ ವಿಲೇವಾರಿ ಮಾಡುತ್ತಿದ್ದ ಬಿಬಿಎಂಪಿ ವಿರುದ್ಧ ನ್ಯಾಯಾಲಯಕ್ಕೆ ಸ್ಥಳೀಯರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ವೇಳೆ ಅಧಿಕಾರಿಗಳ ನಡೆಯನ್ನು ಹಸಿರು ನ್ಯಾಯಾಧಿಕರಣ ಪ್ರಶ್ನಿಸಿ ತರಾಟೆಗೆ ತಗೆದುಕೊಂಡಿದೆ.

    ಬಾಗಲೂರಿನಲ್ಲಿ ಬಿಬಿಎಂಪಿ ಡಂಪ್ (ವಿಲೇವಾರಿ) ಮಾಡಿದ್ದ ಎಲ್ಲ ಕಸವನ್ನು ಹೊರ ತೆಗೆದು, ಬೇರೆಡೆ ಸ್ಥಳಾಂತರ ಮಾಡುವಂತೆ ಹಿಂದೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಸೂಚಿಸಿತ್ತು. ಆದರೆ ಬಿಬಿಎಂಪಿ ಮಾತ್ರ ಇದುವರೆಗೂ ಏನು ಕ್ರಮ ಕೈಗೊಂಡಿಲ್ಲ ಅಂತಾ ಅರ್ಜಿದಾರ ಶ್ರೀನಿವಾಸ ಪರ ವಕೀಲರು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಪರ ವಕೀಲರು ಈಗಾಗಲೇ ಬಾಗಲೂರಿನಲ್ಲಿ ಕಸ ವಿಲೇವಾರಿ ನಿಲ್ಲಿಸಲಾಗಿದೆ. ಐದು ತಿಂಗಳಿನಿಂದ ಕಸ ತೆಗೆಯುವ ಕೆಲಸ ಮಾಡಲಾಗುತ್ತಿದ್ದು, ಶೀಘ್ರವೇ ಬಯೋ ಮೈನಿಂಗ್ ಮುಗಿಸುತ್ತೇವೆ ಅಂತಾ ವಾದ ಮಂಡಿಸಿದರು.

    ಬಿಬಿಎಂಪಿ ಪರ ವಕೀಲರು ಮಂಡಿಸಿದ ವಾದವನ್ನು ನ್ಯಾ.ಆದರ್ಶ ಕುಮಾರ್ ಗೊಯಲ್ ನೇತೃತ್ವದ ಪೀಠವು ಪರಿಗಣಿಸಲಿಲ್ಲ. ‘ನೀವು ಪದೇ ಪದೇ ಇದನ್ನೇ ಹೇಳುತ್ತಿರುವಿರಿ. ನಿಮಗೆ ಕೆಲಸ ಮಾಡಿ ಅಂತಾ ಎಷ್ಟು ಸಲ ಹೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿತು.

    ಕಸದ ರಾಶಿಯಿಂದ ಮಿಥೇನ್ ಉತ್ಪತ್ತಿಯಾಗಿ ಬೆಂಕಿ ತಗಲುವ ಸಾಧ್ಯತೆ ಇದೆ. ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣ ಬಯೋ ಮೈನಿಂಗ್ ಆಗಬೇಕು ಎಂದು ಬಿಬಿಎಂಪಿಗೆ ಆದೇಶಿಸಿದ ನ್ಯಾ.ಆದರ್ಶ ಕುಮಾರ್ ಗೊಯಲ್ ನೇತೃತ್ವದ ಪೀಠವು ಅಕ್ಟೋಬರ್ 8ಕ್ಕೆ ವಿಚಾರಣೆ ಮುಂದೂಡಿತು.