Tag: ವಿಲೀಂಗ್

  • ವಿಕೆಂಡ್ ಮಸ್ತಿಯಲ್ಲಿ ವೀಲಿಂಗ್, ಸ್ಟಂಟ್ ಮಾಡ್ತಿದ್ದ 30 ಬೈಕ್‍ಗಳು ಜಪ್ತಿ

    ವಿಕೆಂಡ್ ಮಸ್ತಿಯಲ್ಲಿ ವೀಲಿಂಗ್, ಸ್ಟಂಟ್ ಮಾಡ್ತಿದ್ದ 30 ಬೈಕ್‍ಗಳು ಜಪ್ತಿ

    ಬೆಂಗಳೂರು: ಹೆಬ್ಬಾಳ ಸಂಚಾರಿ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ವಿಕೆಂಡ್ ಮಸ್ತಿಯಲ್ಲಿ ವೀಲಿಂಗ್, ಸ್ಟಂಟ್ ಮಾಡುತ್ತಿದ್ದ ಮೂವತ್ತು ಬೈಕ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ವಿಕೆಂಡ್ ಮಸ್ತಿ ಎಂದು ಯುವಕರು ಹೆಬ್ಬಾಳ, ಏರ್ ಪೊರ್ಟ್ ರೋಡ್ ನಾಗವಾರ ರಿಂಗ್ ರಸ್ತೆಯಲ್ಲಿ ವೀಲಿಂಗ್ ಹಾಗೂ ಸ್ಟಂಟ್ ಮಾಡುತ್ತಿದ್ದರು. ಹೀಗಾಗಿ ಹೆಬ್ಬಾಳ ಸಂಚಾರಿ ಪೊಲೀಸರು 30 ಬೈಕ್‍ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

    ಯುವಕರು ವೀಲಿಂಗ್ ಹಾಗೂ ಸ್ಟಂಟ್ ಮಾಡುತ್ತಿರುವುದನ್ನು ತಡೆಯಲು ಹೆಬ್ಬಾಳ ಸಂಚಾರಿ ಪೊಲೀಸರು ವಿಕೆಂಡ್‍ನಲ್ಲಿ ವಿಶೇಷ ಕಾರ್ಯಚಾರಣೆ ನಡೆಸಿದ್ದರು. ಬೈಕ್ ಸ್ಟಂಟ್ ಹಾಗೂ ವಿಲೀಂಗ್ ಮಾಡಲು ಕಾಲೇಜಿನ ಯುವಕರು ಬೈಕ್‍ಗಳನ್ನು ಮಾಡಿಫೈ ಮಾಡಿಸಿ ಸ್ಟಂಟ್ ಮಾಡುತ್ತಿದ್ದರು.

    ಪೊಲೀಸರು ಕಾರ್ಯಚರಣೆ ನಡೆಸಿದ್ದಾಗ ಬೈಕ್ ಸವಾರರು ಯಾವುದೇ ದಾಖಲಾತಿಗಳನ್ನು ಹೊಂದಿರಲಿಲ್ಲ. ಸದ್ಯ ಪೊಲೀಸರು ಬೈಕ್ ಜಪ್ತಿ ಪಡೆದುಕೊಂಡು ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಟ್ವಿಟ್ಟರ್‌ನಿಂದ ವೀಲಿಂಗ್ ನಡೆಸಿದ್ದ ಬೆಂಗಳೂರಿನ ಇಬ್ಬರು ಯುವಕರು ಅರೆಸ್ಟ್!

    ಟ್ವಿಟ್ಟರ್‌ನಿಂದ ವೀಲಿಂಗ್ ನಡೆಸಿದ್ದ ಬೆಂಗಳೂರಿನ ಇಬ್ಬರು ಯುವಕರು ಅರೆಸ್ಟ್!

    ಬೆಂಗಳೂರು:ನಗರದ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಯುವಕರಿಬ್ಬರು ಟ್ವಿಟ್ಟರ್ ಬಳಕೆದಾರಿಂದಾಗಿ ಅರೆಸ್ಟ್ ಆಗಿದ್ದಾರೆ.

    ಹೆಗಡೆ ನಗರದಲ್ಲಿ ಇಬ್ಬರು ಯುವಕರು ಡಿಯೋದಲ್ಲಿ ವೀಲಿಂಗ್ ಮಾಡುತ್ತಿದ್ದರು. ಇಬ್ಬರು ವೀಲಿಂಗ್ ಮಾಡುತ್ತಿದ್ದ ದೃಶ್ಯವನ್ನು ನರಸಿಂಹ ಮೂರ್ತಿ ಸೆರೆ ಹಿಡಿದು ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಟ್ವಿಟ್ಟರ್ ನಲ್ಲಿ ಟ್ಯಾಗ್ ಮಾಡಿ ಇವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದರು.

    ಹೆಗಡೆ ನಗರದಲ್ಲಿ ಸಂಜೆ 5 ಗಂಟೆಯ ವೇಳೆ ಇವರು ಬೈಕಿನಲ್ಲಿ ವೀಲಿಂಗ್ ಮಾಡುತ್ತಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗಮನಿಸಿ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಹಿತೇಂದ್ರ ಉತ್ತರ ವಲಯದ ಡಿಸಿಪಿಗೆ ಟ್ಯಾಗ್ ಮಾಡಿ ಕೂಡಲೇ ಕ್ರಮಕೈಗೊಳ್ಳಿ ಎಂದು ಸೂಚಿಸಿದ್ದರು.

    ಈ ಸೂಚನೆ ಬಂದ ಕೂಡಲೇ ಹೆಬ್ಬಾಳ ಟ್ರಾಫಿಕ್ ಪೊಲೀಸರು, ವೀಲಿಂಗ್ ನಡೆಸಿದ್ದ ಇಬ್ಬರನ್ನು ಬಂಧಿಸಲಾಗಿದೆ, ಡಿಯೋವನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಂಗಳವಾರ ಟ್ವೀಟ್ ಮಾಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿ ಕ್ರಮಕೈಗೊಂಡ ಬೆಂಗಳೂರು ಸಂಚಾರ ಪೊಲೀಸರ ಕ್ರಮಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

    https://twitter.com/murthycool/status/1014141528376258561

    https://twitter.com/hebbaltrafficps/status/1026447046251819008