Tag: ವಿಲಿಯಮ್ಸನ್

  • ಭಾರತ-ಕಿವೀಸ್ ಸರಣಿ ಆರಂಭಕ್ಕೂ ಮುನ್ನ ಕಪ್ ಹಿಡಿದು ಹೊರಟ ವಿಲಿಯಮ್ಸನ್

    ಭಾರತ-ಕಿವೀಸ್ ಸರಣಿ ಆರಂಭಕ್ಕೂ ಮುನ್ನ ಕಪ್ ಹಿಡಿದು ಹೊರಟ ವಿಲಿಯಮ್ಸನ್

    ವೆಲ್ಲಿಂಗ್ಟನ್: ಟಿ20 ವಿಶ್ವಕಪ್ (T20 World Cup) ಸೆಮಿಫೈನಲ್‍ನಲ್ಲಿ ಸೋಲಿನ ಬಳಿಕ ನ್ಯೂಜಿಲೆಂಡ್ (New Zealand) ಮತ್ತು ಭಾರತ (India) ತಂಡ ದ್ವಿಪಕ್ಷೀಯ ಸರಣಿಗೆ ಸಿದ್ಧಗೊಂಡಿದೆ. ಕಿವೀಸ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿ ಆಡಲಿದೆ.

    ನ.18 ರಿಂದ ಟಿ20 ಸರಣಿ ಆರಂಭವಾಗುತ್ತಿದೆ. ಈ ನಡುವೆ ಸರಣಿ ಆರಂಭಕ್ಕೂ ಮೊದಲೇ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ (Kane Williamson) ಕಪ್ ಹಿಡಿದು ಹೊರಟಿದ್ದಾರೆ. ಇಂದು ಎರಡೂ ತಂಡಗಳ ನಾಯಕರಾದ ವಿಲಿಯಮ್ಸನ್ ಮತ್ತು ಹಾರ್ದಿಕ್ ಪಾಂಡ್ಯ (Hardik Pandya)  ಟಿ20 ಸರಣಿಯ ಟ್ರೋಫಿ ಜೊತೆ ಫೋಟೋ ತೆಗೆಸಿಕೊಂಡರು. ಈ ವೇಳೆ ಫೋಟೋಶೂಟ್‍ಗೂ ಮುನ್ನ ಟ್ರೋಫಿ ಗಾಳಿಗೆ ಹಾರಿದೆ. ಪಕ್ಕದಲ್ಲಿದ್ದ ವಿಲಿಯಮ್ಸನ್ ಕೂಡಲೇ ಬೀಳುತ್ತಿದ್ದ ಟ್ರೋಫಿ ಹಿಡಿದಿದ್ದಾರೆ. ಅಲ್ಲದೆ ಟ್ರೋಫಿ ಜೊತೆ ಹೊರಡಲು ಸಿದ್ಧರಾದಂತೆ ಕಂಡು ಬಂದರು. ಇದನ್ನೂ ಓದಿ: ರಿಟೈನ್ ಪಟ್ಟಿಯಲ್ಲಿ RCB ಗೇಮ್ ಪ್ಲಾನ್ – 10 ತಂಡಗಳ ರಿಟೈನ್-ರಿಲೀಸ್‌ ಲಿಸ್ಟ್

    ಈ ಮೊದಲು ಫೋಟೋಗಾಗಿ ಇಬ್ಬರು ನಾಯಕರು Crocodile Bike ನಲ್ಲಿ ಬಂದರು. ಟಿ20 ಸರಣಿಯ ಮೂರು ಪಂದ್ಯಗಳು ನ.18, 20 ಮತ್ತು 22 ರಂದು ನಡೆಯಲಿದೆ. ಟಿ20 ಸರಣಿಯಲ್ಲಿ ಟೀಂ ಇಂಡಿಯಾವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. 3 ಪಂದ್ಯಗಳ ಏಕದಿನ ಸರಣಿ ನ.25, 27 ಮತ್ತು 30 ರಂದು ನಡೆಯಲಿದ್ದು, ಟೀಂ ಇಂಡಿಯಾವನ್ನು ಶಿಖರ್ ಧವನ್ ಮುನ್ನಡೆಸಲಿದ್ದಾರೆ. ಟಿ20 ಮತ್ತು ಏಕದಿನ ತಂಡಕ್ಕೆ ಪ್ರತ್ಯೇಕ ನಾಯಕರನ್ನು ನೇಮಿಸಲಾಗಿದೆ. ಈ ಸರಣಿಯಿಂದ ರೋಹಿತ್ ಶರ್ಮಾ, ಕೊಹ್ಲಿ ಸಹಿತ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.

    ಟಿ20 ತಂಡ:
    ಹಾರ್ದಿಕ್ ಪಾಂಡ್ಯ (ನಾಯಕ), ರಿಷಬ್ ಪಂತ್, ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಕುಲ್‍ದೀಪ್ ಯಾದವ್, ಅರ್ಶ್‍ದೀಪ್ ಸಿಂಗ್, ಹರ್ಷಲ್ ಪಟೇಲ್ , ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್. ಇದನ್ನೂ ಓದಿ: ಐಪಿಎಲ್‌ಗೆ ಗುಡ್‌ಬೈ ಹೇಳಿದ್ರೂ ಮುಂಬೈ ತಂಡದಲ್ಲೇ ಇರಲಿದ್ದಾರೆ ಪೋಲಾರ್ಡ್‌

    ಏಕದಿನ ತಂಡ:
    ಶಿಖರ್ ಧವನ್ (ನಾಯಕ), ರಿಷಬ್ ಪಂತ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಶಹಬಾಜ್ ಅಹ್ಮದ್, ಯಜುವೇಂದ್ರ ಚಾಹಲ್, ಕುಲ್‍ದೀಪ್ ಯಾದವ್, ಅರ್ಶ್‍ದೀಪ್ ಸಿಂಗ್, ದೀಪಕ್ ಚಾಹರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್.

    Live Tv
    [brid partner=56869869 player=32851 video=960834 autoplay=true]

  • IPL ಮೊದಲ ಪಂದ್ಯದಲ್ಲೇ ವಿಲಿಯಮ್ಸನ್‌ಗೆ 12 ಲಕ್ಷ ದಂಡ: ಕಾರಣ ಇಷ್ಟೇ…

    IPL ಮೊದಲ ಪಂದ್ಯದಲ್ಲೇ ವಿಲಿಯಮ್ಸನ್‌ಗೆ 12 ಲಕ್ಷ ದಂಡ: ಕಾರಣ ಇಷ್ಟೇ…

    ನವದೆಹಲಿ: ಪುಣೆಯಲ್ಲಿ ನಡೆದ ಐಪಿಎಲ್ ಮ್ಯಾಚ್‌ನಲ್ಲಿ ರಾಜಾಸ್ತಾನ್‌  ರಾಯಲ್ಸ್ ವಿರುದ್ಧ ಪರಾಭವಗೊಂಡ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್‌ಗೆ 12 ಲಕ್ಷ ದಂಡ ವಿಧಿಸಲಾಗಿದೆ.

    ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ರಾಜಾಸ್ತಾನ್‌ ರಾಯಲ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರೀ ದಂಡಕ್ಕೆ ಗುರಿಯಾಗಿರುವುದು ಚರ್ಚೆಗೆ ಕಾರಣವಾಗಿದೆ. ಸೋಮವಾರ ನಡೆದ ಪಂದ್ಯದಲ್ಲಿ ಹೈದ್ರಾಬಾದ್ ತಂಡವು 61 ರನ್‌ಗಳಿಂದ ಸೋಲನ್ನು ಅನುಭವಿಸಿತು. ಆದರೆ ಹೈದ್ರಾಬಾದ್ ತಂಡವು ನಿಧಾನಗತಿಯ ಬೌಲಿಂಗ್ ರೇಟನ್ನು ನಿರ್ವಹಿಸಿದ್ದರಿಂದ ದಂಡ ವಿಧಿಸಲಾಗಿದೆ ಎಂದು IPL ಕ್ರಿಕೆಟ್ ಮಂಡಳಿ ತಿಳಿಸಿದೆ. ಇದನ್ನೂ ಓದಿ: ಲಕ್ನೋಗೆ ಲಾಕ್ ಹಾಕಿದ ಟೈಟಾನ್ಸ್ – ಗುಜರಾತ್‍ಗೆ 5 ವಿಕೆಟ್‍ಗಳ ಜಯ 

    IPL

    ಕನಿಷ್ಠ ಓವರ್ ರೇಟ್ ಅಪರಾಧಕ್ಕೆ ಸಂಬಂಧಿಸಿದಂತೆ ಐಪಿಎಲ್‌ನ ನೀತಿ ಸಂಹಿತೆಯ ಅಡಿಯಲ್ಲಿ ಇದು ತಂಡದ ಮೊದಲ ಅಪರಾಧವಾಗಿರುವುದರಿಂದ, ಸನ್‌ರೈಸರ್ಸ್ ಹೈದ್ರಾಬಾದ್ ನಾಯಕ ಕೇನ್ ವಿಲಿಯಮ್ಸನ್‌ಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದೂ ಹೇಳಿದೆ.

  • WTC ಫೈನಲ್ ಟಾಸ್ ಗೆದ್ದ ಕೇನ್ ವಿಲಿಯಮ್ಸನ್-ಬ್ಯಾಟಿಂಗ್‍ ಆರಂಭಿಸಿದ ಭಾರತ

    WTC ಫೈನಲ್ ಟಾಸ್ ಗೆದ್ದ ಕೇನ್ ವಿಲಿಯಮ್ಸನ್-ಬ್ಯಾಟಿಂಗ್‍ ಆರಂಭಿಸಿದ ಭಾರತ

    ಲಂಡನ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐತಿಹಾಸಿಕ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

    ಇಂಗ್ಲೆಂಡ್‍ನ ಸೌಥಂಪ್ಟನ್‍ನಲ್ಲಿ ನಡೆಯುತ್ತಿರುವ ಪಂದ್ಯಕ್ಕೆ ಶುಕ್ರವಾರ ಮಳೆ ಅಡ್ಡಿಯಾಗಿತ್ತು. ಹಾಗಾಗಿ ಇಂದಿನಿಂದ ಪಂದ್ಯ ಆರಂಭವಾಗಿದೆ. ಇಂದು ಟಾಸ್ ಪ್ರಕ್ರಿಯೆ ನಡೆದು ಕೇನ್ ವಿಲಿಯಮ್ಸನ್ ಭಾರತ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದ್ದಾರೆ. ಭಾರತ ಪರ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಇದನ್ನೂ ಓದಿ: 18 ವರ್ಷಗಳಿಂದ ಐಸಿಸಿ ಟೂರ್ನಿಯಲ್ಲಿ ಕೀವಿಸ್ ವಿರುದ್ಧ ಭಾರತ ಗೆದ್ದಿಲ್ಲ – ಈ ಬಾರಿ ಗೆಲುವು ಯಾರಿಗೆ?

    ಶುಕ್ರವಾರ ಪಂದ್ಯ ಆರಂಭವಾಗಬೇಕಿತ್ತು ಅದರೆ ಮಳೆಯಿಂದ ಟಾಸ್ಕ್ ಪ್ರಕ್ರಿಯೆ ನಡೆಸಲು ಸಾಧ್ಯವಾಗಿರಲಿಲ್ಲ. ಬಳಿಕ ಮಳೆ ಬಿಟ್ಟರು ಕೂಡ ಮೈದಾನ ಒದ್ದೆಯಾಗಿದ್ದರಿಂದಾಗಿ ಪಂದ್ಯವನ್ನು ಇಂದಿಗೆ ಮುಂದೂಡಲ್ಪಟ್ಟಿತ್ತು. ಇದೀಗ ವಿಶ್ವದ ಎರಡು ಬಲಾಢ್ಯ ತಂಡಗಳು ಟೆಸ್ಟ್ ವಿಶ್ವಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡುತ್ತಿವೆ.