Tag: ವಿರೋಧ ಪಕ್ಷ

  • ನಾಗಾಲ್ಯಾಂಡ್‌ನಲ್ಲಿ ವಿರೋಧ ಪಕ್ಷವೇ ಇಲ್ಲ

    ನಾಗಾಲ್ಯಾಂಡ್‌ನಲ್ಲಿ ವಿರೋಧ ಪಕ್ಷವೇ ಇಲ್ಲ

    ಕೊಹಿಮಾ: ನಾಗಾಲ್ಯಾಂಡ್‌ನಲ್ಲಿ (Nagaland) ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಪಿಪಿ-ಬಿಜೆಪಿ (NDPP-BJP) ಮೈತ್ರಿಕೂಟ ಬಹುಮತದೊಂದಿಗೆ ಜಯದ ನಗೆ ಬೀರಿದೆ. ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟಕ್ಕೆ ಇತರೆ ಪಕ್ಷಗಳು ಸಹ ಬೆಂಬಲ ಸೂಚಿಸಿದ್ದು, ನಾಗಾಲ್ಯಾಂಡ್‌ನಲ್ಲಿ ವಿರೋಧ ಪಕ್ಷವೇ ಇಲ್ಲದಂತಾಗಿದೆ.

    ಮಾ.2 ರಂದು ನಾಗಾಲ್ಯಾಂಡ್‌ (Nagaland Opposition) ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಯಿತು. ಸದನದ ಒಟ್ಟು ಸದಸ್ಯ ಬಲ 60. ಈ ಬಾರಿ ಚುನಾವಣೆಯಲ್ಲಿ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟ 37 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತು. ಕ್ರಮವಾಗಿ 25 ಮತ್ತು 12 ಸ್ಥಾನಗಳ ಗೆಲುವು ಸಾಧಿಸಿದವು. ಆ ಮೂಲಕ ಸರ್ಕಾರ ರಚನೆಗೆ ಸಿದ್ಧತೆ ನಡೆಸಿವೆ. ಇದನ್ನೂ ಓದಿ: ಆಪ್ ನಾಯಕ ಮನೀಶ್ ಸಿಸೋಡಿಯಾ ಜೈಲುಪಾಲು

    ಎನ್‌ಸಿಪಿ ಸೇರಿದಂತೆ ಇತರ ರಾಜಕೀಯ ಪಕ್ಷಗಳು 7 ಸ್ಥಾನಗಳನ್ನು ಗೆದ್ದಿವೆ. ಎನ್‌ಪಿಪಿ – 5, ಎಲ್‌ಜೆಪಿ (ರಾಮ್ ವಿಲಾಸ್), ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಮತ್ತು ಆರ್‌ಪಿಐ (ಅಠವಾಲೆ) – ತಲಾ 2, ಜೆಡಿ (ಯು) – 1 ಮತ್ತು ಸ್ವತಂತ್ರರು – 4. ಇದೇ ಮೊದಲ ಬಾರಿಗೆ ನಾಗಾಲ್ಯಾಂಡ್ ರಾಜ್ಯ ವಿಧಾನಸಭೆ ಚುನಾವಣೆಯು ಹಲವು ರಾಜಕೀಯ ಪಕ್ಷಗಳ ಗೆಲುವಿಗೆ ಸಾಕ್ಷಿಯಾಗಿದೆ. LJP(RV) ಮತ್ತು RPI (Athawale) ರಾಜ್ಯ ರಾಜಕಾರಣದಲ್ಲಿ ಹೊಸ ಪಕ್ಷಗಳು.

    ಎನ್‌ಡಿಪಿಪಿ-ಬಿಜೆಪಿ ಇನ್ನೂ ಸರ್ಕಾರ ರಚನೆಗೆ ಹಕ್ಕು ಮಂಡಿಸಿಲ್ಲ. ಇದರ ನಡುವೆಯೇ ಇತರ ರಾಜಕೀಯ ಪಕ್ಷಗಳಿಂದ ಬೇಷರತ್ ಬೆಂಬಲ ಪಡೆದಿವೆ. ಎಲ್‌ಜೆಪಿ (ರಾಮ್ ವಿಲಾಸ್), ಆರ್‌ಪಿಐ (ಅಠವಳೆ), ಜೆಡಿಯು ಈಗಾಗಲೇ ಮೈತ್ರಿಕೂಟಕ್ಕೆ ಅಧಿಕೃತ ಬೆಂಬಲ ವ್ಯಕ್ತಪಡಿಸಿವೆ. ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ – ಲಾಲು ಪತ್ನಿ, ಮಾಜಿ ಸಿಎಂ Rabri Devi ನಿವಾಸದ ಮೇಲೆ ಸಿಬಿಐ ದಾಳಿ

    ಮೂರನೇ ಏಕೈಕ ಅತಿ ದೊಡ್ಡ ಪಕ್ಷವಾಗಿರುವ ಎನ್‌ಸಿಪಿ, ನೆಫಿಯು ರಿಯೊ ನೇತೃತ್ವದ ಎನ್‌ಡಿಪಿಪಿಗೆ ಶನಿವಾರ ‘ಬೇಷರತ್’ ಬೆಂಬಲ ನೀಡುವ ಪತ್ರವನ್ನು ಸಲ್ಲಿಸಿದೆ. ಎಲ್ಲಾ ರಾಜಕೀಯ ಪಕ್ಷಗಳು ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟವನ್ನು ಬೆಂಬಲಿಸಿರುವುದರಿಂದ, ನಾಗಾಲ್ಯಾಂಡ್‌ನಲ್ಲಿ ಸರ್ವಪಕ್ಷ ಸರ್ಕಾರವಾಗುವ ಸಾಧ್ಯತೆ ದಟ್ಟೈಸಿದೆ.

  • ರಾಜಕೀಯದಲ್ಲಿ ಯಾರೂ ಸತ್ಯಹರಿಶ್ಚಂದ್ರ, ಧರ್ಮರಾಯ ಇಲ್ಲ- ವಿರೋಧ ಪಕ್ಷದವರಿಗೆ ಎಂಟಿಬಿ ತಿರುಗೇಟು

    ರಾಜಕೀಯದಲ್ಲಿ ಯಾರೂ ಸತ್ಯಹರಿಶ್ಚಂದ್ರ, ಧರ್ಮರಾಯ ಇಲ್ಲ- ವಿರೋಧ ಪಕ್ಷದವರಿಗೆ ಎಂಟಿಬಿ ತಿರುಗೇಟು

    ಬೆಂಗಳೂರು: ನಲವತ್ತು ವರ್ಷಗಳ ರಾಜಕೀಯದಲ್ಲಿ ಎಲ್ಲರನ್ನು ನೋಡಿದ್ದೇನೆ. ಆದರೆ ಸತ್ಯಹರಿಶ್ಚಂದ್ರ, ಧರ್ಮರಾಯ ಮತ್ತು ನಳ ಮಹಾರಾಜ ಯಾರೂ ನನ್ನ ಕಣ್ಣಿಗೆ ಬಿದ್ದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ.ನಾಗರಾಜ್ ವಿರೋಧ ಪಕ್ಷದವರ ಆರೋಪ, ಪ್ರತ್ಯಾರೋಪಗಳಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ನಂಗೇ ಪಾಠ ಹೇಳಿಕೊಡೋದಾ?, ಅಧಿಕಾರದ ಅಹಂನಿಂದ ಸುಧಾಕರ್ ಮಾತಾಡ್ತಿದ್ದಾರೆ: ಸಿದ್ದು

    ಇಂದು ಹೊಸಕೋಟೆ ತಾಲೂಕಿನ ತಾವರೆಕೆರೆಗೆ ಎಂ.ಟಿ.ಬಿ.ನಾಗರಾಜ್ ಬಾಗಿನ ಅರ್ಪಿಸಿದ್ದಾರೆ. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿರೋಧ ಪಕ್ಷದವರು ಆರೋಪಗಳು, ಪ್ರತ್ಯಾರೋಪಗಳನ್ನು ಮೀಡಿಯಾದಲ್ಲಿ ಮಾಡಿದ್ದಾರೆ. ಯಾವ ಯಾವ ಕಾಲದಲ್ಲಿ ಯಾರ‍್ಯಾರು ಮುಖ್ಯಮಂತ್ರಿಗಳಾಗಿದ್ದರು. ಯಾವ ಮುಖ್ಯಮಂತ್ರಿ ಕಾಲದಲ್ಲಿ ಎಷ್ಟೆಷ್ಟು ಹಗರಣ ಆಗಿದ್ದಾವೆ ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ರಾಜಕೀಯದಲ್ಲಿ ಯಾರೂ ಸತ್ಯಹರಿಶ್ಚಂದ್ರ, ಧರ್ಮರಾಯ ಮತ್ತು ನಳ ಮಹಾರಾಜರು ಇಲ್ಲ ಎಂದು ಹೇಳಿದರು.

    ನಲವತ್ತು ವರ್ಷಗಳ ರಾಜಕೀಯದಲ್ಲಿ ಎಲ್ಲರನ್ನು ನೋಡಿದ್ದೇನೆ. ಆದರೆ ಸತ್ಯಹರಿಶ್ಚಂದ್ರ, ಧರ್ಮರಾಯ ಮತ್ತು ನಳ ಮಹಾರಾಜ ಯಾರೂ ನನ್ನ ಕಣ್ಣಿಗೆ ಬಿದ್ದಿಲ್ಲ. ಸದ್ಯಕ್ಕೆ ಆರೋಪ, ಪ್ರತ್ಯಾರೋಪಗಳನ್ನು ಬದಿಗೊತ್ತಿ. ಇಂದು ನಾವು ಸಾವು-ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದೇವೆ. ರಾಜಕೀಯ ಮಾಡಿ, ಆದರೆ ಈ ಸಮಯದಲ್ಲಿ ಬೇಡ. ಶಾಸಕರು, ಸಚಿವರು, ಜನಪ್ರತಿನಿಧಿಗಳಾಗಲಿ ಎಲ್ಲರೂ ಆಸ್ಪತ್ರೆಗೆ ಹೋಗಬೇಕು. ಅಲ್ಲಿ ಉಸ್ತುವಾರಿ ವಹಿಸಿಕೊಂಡು ಕೊರೊನಾ ನಿಯಂತ್ರಿಸಲು ಕೆಲಸ ಮಾಡಬೇಕು ಎಂದು ಹೇಳಿದರು.

    ವಿರೋಧ ಪಕ್ಷದವರು ಹೇಳುತ್ತಿರುವುದೆಲ್ಲ ಸತ್ಯಕ್ಕೆ ದೂರವಾದ ಮಾತು. ನಮ್ಮ ಬಳಿ ಎಲ್ಲದಕ್ಕೂ ದಾಖಲಾತಿ ಇದೆ. ಆದರೆ ಈಗ ರಾಜಕೀಯ ಮಾಡುವ ಸಮಯವಲ್ಲ. ಚುನಾವಣೆ ಬರುತ್ತದೆ ಅಂದು ರಾಜಕೀಯ ಮಾಡಿ. ದೇಶದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಅಬ್ಬರಿಸುತ್ತಿದೆ. ಆದರೆ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಎಂ.ಟಿ.ಬಿ.ನಾಗರಾಜ್ ಕಿಡಿಕಾರಿದರು.

  • ಮೋದಿ ಮತ್ತೆ ಪ್ರಧಾನಿಯಾದ ತಕ್ಷಣ ಸಮ್ಮಿಶ್ರ ಸರ್ಕಾರ ಪತನ: ಶ್ರೀರಾಮುಲು

    ಮೋದಿ ಮತ್ತೆ ಪ್ರಧಾನಿಯಾದ ತಕ್ಷಣ ಸಮ್ಮಿಶ್ರ ಸರ್ಕಾರ ಪತನ: ಶ್ರೀರಾಮುಲು

    ರಾಯಚೂರು: ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆಯಲ್ಲಿ ಗೆದ್ದು ಮತ್ತೆ ಪ್ರಧಾನಿಯಾದ ತಕ್ಷಣ ಸಮ್ಮಿಶ್ರ ಸರ್ಕಾರ ಪತನವಾಗುತ್ತದೆ ಎಂದು ಶಾಸಕ ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ.

    ಜಿಲ್ಲೆಯ ಸಿಂಧನೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲವಿದ್ದು ಆಡಳಿತ ಪಕ್ಷದವರು ಸ್ಪಂದಿಸುತ್ತಿಲ್ಲ. ಜನರ ಪಾಲಿಗೆ ಸಮ್ಮಿಶ್ರ ಸರ್ಕಾರ ಸತ್ತುಹೋಗಿದೆ. ಸತ್ತು ಹೋದ ಸರ್ಕಾರವನ್ನು ಕಿತ್ತುಹಾಕಬೇಕಾದರೆ ಮೋದಿಯನ್ನು ಗೆಲ್ಲಿಸಬೇಕು. ಮೋದಿ ಮತ್ತೊಮ್ಮೆ ಪ್ರಧಾನಿಯಾದ ತಕ್ಷಣವೇ ರಾಜ್ಯದಲ್ಲಿರುವ ಸರ್ಕಾರ ಪತನವಾಗಲಿದೆ ಎಂದು ಹೇಳಿದರು.

    ಸಿಎಂ ಕುಮಾರಸ್ವಾಮಿಯವರು ಅಧಿಕಾರಕ್ಕೆ ಬರುವ ಮೊದಲು ಸಿನಿಮಾದಲ್ಲಿದ್ದರು. ಅವರು ಯಾರದ್ದೋ ಧ್ವನಿ ಮಿಮಿಕ್ರಿ ಮಾಡಿಸಿ ವಯಸ್ಸಾಗಿರುವ ಯಡಿಯೂರಪ್ಪ ಅವರನ್ನು ಕಾಡುತ್ತಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸದ ಈ ಸರ್ಕಾರ ನಮಗೇ ಬೇಕೇ ಎಂದು ಅವರು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

    ಪ್ರಾದೇಶಿಕ ಪಕ್ಷಗಳು ಮಹಾಘಟಬಂಧನ ಮಾಡಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಪ್ರಯತ್ನ ಮಾಡುತ್ತಿವೆ. ರಾಹುಲ್ ಗಾಂಧಿ ಸೇರಿ ಕೇಳಿಬರುತ್ತಿರುವ ಹೆಸರುಗಳು ಯಾವುದು ಮೋದಿಗೆ ಸಮವಲ್ಲ. ಮೋದಿಯವರ ಕಾರ್ಯಕ್ರಮಗಳನ್ನು ಪ್ರಚಾರ ಮಾಡುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಆದರೆ ಮೋದಿಯವರ ಕೆಲಸವನ್ನು ದೇಶ ಮಾತ್ರವಲ್ಲದೇ ಇಡೀ ವಿಶ್ವವೇ ಮೆಚ್ಚುತ್ತಿದೆ ಎಂದು ಹೇಳಿದ್ದಾರೆ.

    ನಮ್ಮ ಹಣೆಬರಹ ಚೆನ್ನಾಗಿರಲಿಲ್ಲ. ಆದರಿಂದ ನಮಗೆ ರಾಜ್ಯದಲ್ಲಿ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ನಮ್ಮ ಹಣೆಬರಹ ಚೆನ್ನಾಗಿದಿದ್ದರೆ ರಾಜ್ಯ ಹಾಗೂ ಕೇಂದ್ರ ಎರಡರಲ್ಲೂ ನಮ್ಮದೇ ಸರ್ಕಾರ ಇರುತ್ತಿತ್ತು. ಕೇಂದ್ರ ಸರ್ಕಾರ ಹಲವಾರು ಕಾರ್ಯಕ್ರಮ, ಯೋಜನೆಗಳನ್ನ ಜನರಿಗೆ ನೀಡಿದೆ. ಇವತ್ತಿನವರೆಗೂ ದೇಶದ ಜನ ಕಷ್ಟದಲ್ಲಿದ್ದಾರೆ ಎಂದರೆ ಅದು ಹಿಂದಿನ ಸರ್ಕಾರಗಳು ಮಾಡಿರುವ ಎಡವಟ್ಟು. ಘಟಬಂಧನ ಮೂಲಕ ಪುನಃ ದೇಶವನ್ನ ಹಾಳು ಮಾಡಲು ವಿರೋಧ ಪಕ್ಷಗಳು ಹೊರಟಿವೆ ಎಂದು ಹರಿಹಾಯ್ದರು.

    ನಾವು ಭಾಷಣ ಮಾಡುವವರು ವೋಟು ಹಾಕಿಸುವವರಲ್ಲ. ಶಕ್ತಿ ಕೇಂದ್ರದ ಪ್ರಮುಖರು ಮನಸ್ಸು ಮಾಡಿದರೆ ಐದು ಜಿಲ್ಲೆಗಳಲ್ಲಿ ಇರುವ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಬಹುದು ಎಂದು ಕಾರ್ಯಕರ್ತರನ್ನ ಶ್ರೀರಾಮುಲು ಹುರಿದುಂಬಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉತ್ತರ ಕರ್ನಾಟಕ ಅಭಿವೃದ್ಧಿಗೆ ಯಾವ ಸರ್ಕಾರ ಏನು ನೀಡಿದೆ, ಚರ್ಚೆ ನಡೆಯಲಿ: ಎಚ್‍ಡಿಕೆ

    ಉತ್ತರ ಕರ್ನಾಟಕ ಅಭಿವೃದ್ಧಿಗೆ ಯಾವ ಸರ್ಕಾರ ಏನು ನೀಡಿದೆ, ಚರ್ಚೆ ನಡೆಯಲಿ: ಎಚ್‍ಡಿಕೆ

    ಬೆಂಗಳೂರು: ಸ್ವಾತಂತ್ರ್ಯ ಬಂದ ಬಳಿಕ ಉತ್ತರ ಕರ್ನಾಟಕಕ್ಕೆ ನೀಡಿರೋ ಅನುದಾನಗಳ ಬಗ್ಗೆ ಚರ್ಚೆಗೆ ಸಿದ್ಧ ಅಂತ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

    ರಾಜ್ಯಪಾಲರ ಭಾಷಣದ ಮೇಲೆ ವಿಧಾನಸಭೆಯಲ್ಲಿ ಉತ್ತರ ನೀಡಿದ ಎಚ್‍ಡಿಕೆ, ನಾನು ಯಾವುದೋ ಒಂದು ಜಾತಿಗೆ ಸಿಎಂ ಅಲ್ಲ. ಆರು ಕೋಟಿ ಕನ್ನಡಿಗರಿಗೆ ಸಿಎಂ. ಈ ಹಿಂದೆ ಹಾಸನಕ್ಕೆ ಎಷ್ಟು ಅನುದಾನ ಕೊಟ್ಟಿದ್ದಾರೆ ಅಂತಾನೂ ಚರ್ಚೆ ನಡೆಯಲಿ. ಈ ಚರ್ಚೆ ಎರಡು ವಾರ ಬೇಕಾದರೂ ನಡೆಯಲಿ ಎಂದ ಅವರು, ವಿಭೂತಿ ಹಾಕಿಕೊಂಡು ಬಂದವ್ರಿಗೆ ಸಹಾಯ ಮಾಡಿದ್ದೇನೆ ಅಂತ ವಿಪಕ್ಷಕ್ಕೆ ತಿರುಗೇಟು ನೀಡಿದ್ರು.

    ನಾನು ವಚನಭ್ರಷ್ಟ ಅಲ್ಲ. 12 ವರ್ಷಗಳ ಹಿಂದೆ ನಾವು 38 ಮಂದಿ ಶಾಸಕರಿದ್ವಿ. ಆಗ ಯಾಕೆ 80 ಶಾಸಕರಿದ್ದ ನೀವೇ ಯಾಕೆ ನನಗೆ ಅಧಿಕಾರ ಕೊಟ್ರಿ? ಇದು 37 ಶಾಸಕರ ಸರ್ಕಾರವಲ್ಲ. 114 ಮಂದಿ ಶಾಸಕರ ಸರ್ಕಾರ. 104 ಶಾಸಕರಿದ್ದ ನಿಮಗೆ ರಾಜ್ಯಪಾಲರು ಆಹ್ವಾನ ಕೊಟ್ಟಿದ್ರು. ಆದ್ರೆ ಬಹುಮತ ಸಾಬೀತುಪಡಿಸ್ಲಿಲ್ಲ ಅಂತ ತಿರುಗೇಟು ನೀಡಿದ್ದಾರೆ.

    ನಮ್ಮ ಸಕಾರ ರಚನೆಯಾಗಿ ಕೆಲವೇ ತಿಂಗಳಾಗಿದೆ. ಮೈತ್ರಿ ಸರ್ಕಾರ ರೈತರ ಪರವಾಗಿದೆ. ಯಾರೂ ಕೂಡ ಆತ್ಮಹತ್ಯೆಗೆ ಮುಂದಾಗಬಾರದು. ಸಮ್ಮಿಶ್ರ ಸರ್ಕಾರ 5 ವರ್ಷ ಅಧಿಕಾರ ಪೂರೈಸುತ್ತೆ. ಈ ಬಗ್ಗೆ ಯಾರಿಗೂ ಭಯ, ಆತಂಕ ಬೇಡ ಅಂದ್ರು.

    ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ರಾಜ್ಯದಲ್ಲಿ ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಅಳವಡಿಕೆಗೆ ಸರ್ಕಾರ ಮುಂದಾಗಿದೆ ಅಂತ ಅವರು ಹೇಳಿದ್ರು.