Tag: ವಿರೇನ್ ಕೇಶವ್

  • ನಟ ವಿರೇನ್ ಕೇಶವ್‌ಗೆ ಚಲನಚಿತ್ರೋತ್ಸವದ ‘ಅತ್ಯುತ್ತಮ ನಟ’ ಪ್ರಶಸ್ತಿ

    ನಟ ವಿರೇನ್ ಕೇಶವ್‌ಗೆ ಚಲನಚಿತ್ರೋತ್ಸವದ ‘ಅತ್ಯುತ್ತಮ ನಟ’ ಪ್ರಶಸ್ತಿ

    ವ ಕರ್ನಾಟಕ ಚಲನಚಿತ್ರ ಅಕಾಡೆಮಿ ಧಾರವಾಡ ಇವರು ಆಯೋಜಿಸಿರುವ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ 2022ರಲ್ಲಿ, ಡಾ. ಶಿವಪ್ಪ ನಿರ್ಮಾಣದಲ್ಲಿ ತಯಾರಾದ  “ಕಾಕ್ಟೈಲ್” ಚಲನಚಿತ್ರವನ್ನು ವೀಕ್ಷಿಸಿ, ಈ ಚಲನಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಿರುವ ವಿರೇನ್ ಕೇಶವ್ ಅವರಿಗೆ ಮೊಟ್ಟ ಮೊದಲ ಬಾರಿಗೆ ” ಅತ್ಯುತ್ತಮ ನಾಯಕ ನಟ ” ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

    ವಿರೇನ್ ಕೇಶವ್ ಅವರಿಗೆ ಬಾಲ್ಯದಿಂದಲೂ ಕಲೆ, ಸಾಹಿತ್ಯ, ನಾಟಕ ಅಭಿನಯದಲ್ಲಿ ಆಸಕ್ತಿ ಇದ್ದುದರಿಂದ ತಮ್ಮ ಎಂ.ಬಿ.ಎ ಶಿಕ್ಷಣವನ್ನು ಮುಗಿಸಿ ಮುಂಬೈನಲ್ಲಿರುವ ಅನುಪಮ್ ಖೇರ್ ಅವರ ನಟನಾ ಸಂಸ್ಥೆಯಲ್ಲಿ ನಟನೆಯಲ್ಲಿ ತರಬೇತಿಯನ್ನು ಪಡೆದು, ಒಬ್ಬ ಪರಿಪೂರ್ಣ ನಟನಾಗಲು ಬೇಕಾಗಿರುವ ಎಲ್ಲಾ ಕಲೆಗಳನ್ನು ಸಿದ್ಧಿಸಿಕೊಂಡಿರುವ ಒಬ್ಬ ಸುಂದರ ಸ್ತುರದ್ರೂಪಿ ಕಲಾವಿದ ವಿರೇನ್ ಕೇಶವ್.  ಖ್ಯಾತ ಚಲನಚಿತ್ರ ನಟಿ ಪ್ರಿಯಾಂಕ ಉಪೇಂದ್ರ ಈ ಪ್ರಶಸ್ತಿಯನ್ನು ನೀಡಿ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಸ್ಲಿಮ್ ಆಗಿ ಹೊಸ ಲುಕ್‌ನಲ್ಲಿ ಮಿಂಚಿದ ವಿಜಯ್ ಸೇತುಪತಿ

    ಪ್ರಸ್ತುತ ಚಲನಚಿತ್ರವನ್ನು ವಿಜಯಲಕ್ಷ್ಮಿ ಕಂಬೈನ್ಸ್‍ನಲ್ಲಿ ಡಾ. ಶಿವಪ್ಪ ನಿರ್ಮಾಣ ಮಾಡಿದ್ದು, ಶ್ರೀರಾಮ್ ನಿರ್ದೇಶನ ಮಾಡಿದ್ದಾರೆ. ನಾಯಕನಟನಾಗಿ ಪ್ರತಿಭಾವಂತ ಹುಡುಗ ವಿರೇನ್ ಕೇಶವ್, ನಾಯಕಿಯಾಗಿ ಚರಿಷ್ಮಾ ನಟಿಸಿದ್ದಾರೆ. ಮುಖ್ಯ ತಾರಾಗಣದಲ್ಲಿ ಶೋಭರಾಜ್, ರಮೇಶ್ ಪಂಡಿತ್, ಮಹಾಂತೇಶ್ , ಶಿವಮಣಿ, ಕರಿಸುಬ್ಬು, ಚಂದ್ರಕಲಾ ಮೋಹನ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಲನಚಿತ್ರವನ್ನು  ಕೆ.ಆರ್.ಜಿ ಸ್ಟುಡಿಯೋಸ್ ಇವರು ಬಿಡುಗಡೆ ಮಾಡುತ್ತಿದ್ದು, ಮುಂಬೈನ ಖ್ಯಾತ ಗಾಯಕ ಅರ್ಮಾನ್ ಮಲಿಕ್ ಅವರು ಹಾಡಿರುವ ಹಾಡು ಈಗಾಗಲೇ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ವಿರೇನ್ ನಟನೆಯ ‘ಕಾಕ್ಟೈಲ್’ ಫಸ್ಟ್ ಲುಕ್ ಗೆ ಪ್ರೇಕ್ಷಕ ಫಿದಾ

    ವಿರೇನ್ ನಟನೆಯ ‘ಕಾಕ್ಟೈಲ್’ ಫಸ್ಟ್ ಲುಕ್ ಗೆ ಪ್ರೇಕ್ಷಕ ಫಿದಾ

    ಡಾ.ಶಿವಪ್ಪ ನಿರ್ಮಾಣದ, ವಿಜಯಲಕ್ಷೀ ಕಂಬೈನ್ಸ್ ಬ್ಯಾನರ್‌ನಲ್ಲಿ ವಿನೂತನ ಆವಿಷ್ಕಾರದ ’ಕಾಕ್ಟೈಲ್’ ಸಿನಿಮಾದ ಚಿತ್ರೀಕರಣವು ಮುಗಿದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇದೆ ಸಿನಿಮಾ ತಂಡ. ಇದರ ಭಾಗವಾಗಿ ಚಂದನವನದ ಶೋ ಮ್ಯಾನ್ ಎಂದೇ ಖ್ಯಾತರಾದ ಜೋಗಿ ಪ್ರೇಮ್ ಮೋಷನ್ ಈ ಸಿನಿಮಾದ ಪೋಸ್ಟರ್‌ನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಈಗಾಗಲೇ ಸಿನಿರಸಿಕರಿಂದ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗೊಂಡು ಪ್ರಶಂಸೆಗೆ ಪಾತ್ರವಾಗಿದೆ.

    ಶ್ರೀರಾಮ್ ಕಥೆ,ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಹೊಸ ಪ್ರತಿಭೆಗಳಾದ ವಿರೇನ್ ಕೇಶವ್ ನಾಯಕ, ಚರಿಷ್ಮಾ ನಾಯಕಿ.   ಇವರೊಂದಿಗೆ ಶೋಭರಾಜ್, ರಮೇಶ್‌ಪಂಡಿತ್, ಮಹಾಂತೇಶ್ ಹಿರೇಮಠ್, ಶಿವಮಣಿ, ಚಂದ್ರಕಲಾಮೋಹನ್, ಕರಿಸುಬ್ಬು, ಮುಂತಾದವರ ತಾರಗಣವಿದೆ. ಇದನ್ನೂ ಓದಿ:ಬಾರ್ಸಿಲೋನದಲ್ಲಿ ನಯನತಾರಾ- ವಿಘ್ನೇಶ್ ಶಿವನ್ ದಂಪತಿ

    ಹೃದಯಶಿವ-ಸಿರಾಜ್‌ಮಿಜಾರ್ ಸಾಹಿತ್ಯದ ಗೀತೆಗಳಿಗೆ ಅರ್ಮಾನ್‌ಮಲ್ಲಿಕ್, ಅನುರಾಧಭಟ್ ಧ್ವನಿ ನೀಡಿದ್ದು, ಲೋಕಿತವಸ್ಯ ಸಂಗೀತ ಸಂಯೋಜಿಸಿದ್ದಾರೆ. ರವಿವರ್ಮ(ಗಂಗು) ಛಾಯಾಗ್ರಹಣ, ಮೋಹನ್.ಬಿ.ರಂಗಕಹಳೆ ಸಂಕಲನ, ನರಸಿಂಹ ಸಾಹಸ, ಸುನಿಲ್ ನೃತ್ಯವಿದೆ. ಇದೊಂದು ಸೆಸ್ಪೆನ್ಸ್ ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟರಿ ಕಥೆಯನ್ನು ಹೊಂದಿದೆ. ಒಂದೇ ಹೆಸರಿನ ಮತ್ತು ವಯಸ್ಸಿನ ಹಲವು ಹುಡುಗಿಯರ ಸರಣಿ ಕೊಲೆಯ ಸುತ್ತ ಚಿತ್ರದ ಕಥೆ ಸಾಗುತ್ತದೆ. ಆದರೆ ಕ್ಲೈಮಾಕ್ಸ್‌ದಲ್ಲಿ ಬೇರೆಯದೆ ವಿಷಯಗಳು ತೆರೆದುಕೊಳ್ಳುತ್ತದೆ. ಅನೇಕ ಅಂಶಗಳನ್ನು ಬೆರೆಸಿ ಕಾಕ್ಟೇಲ್ ಪಾನೀಯದ ರೀತಿಯಲ್ಲಿ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ. ಗಣೇಶನ ಹಬ್ಬಕ್ಕೆ ಟೀಸರ್ ಬಿಡುಗಡೆಯಾಗಲಿದೆ.

    Live Tv
    [brid partner=56869869 player=32851 video=960834 autoplay=true]