Tag: ವಿರುಪಾಕ್ಷೇಶ್ವರ

  • ಬಳ್ಳಾರಿಗೆ ಹೋದ್ರೂ ಹಂಪಿ ವಿರೂಪಾಕ್ಷನ ದರ್ಶನ ಮಾಡ್ಲಿಲ್ಲ- ಮೂಢನಂಬಿಕೆ ವಿರುದ್ಧ ಗುಡುಗೋ ಸಿಎಂಗೆ ಭಯ ಶುರುವಾಯ್ತಾ?

    ಬಳ್ಳಾರಿಗೆ ಹೋದ್ರೂ ಹಂಪಿ ವಿರೂಪಾಕ್ಷನ ದರ್ಶನ ಮಾಡ್ಲಿಲ್ಲ- ಮೂಢನಂಬಿಕೆ ವಿರುದ್ಧ ಗುಡುಗೋ ಸಿಎಂಗೆ ಭಯ ಶುರುವಾಯ್ತಾ?

    ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯನವರು ವಿರುಪಾಕ್ಷೇಶ್ವರ ದೇವಾಲಯಕ್ಕೆ ಹೋಗದೆ ವಾಪಸ್ಸು ಬಂದಿರುವುದರಿಂದ ಜನರಲ್ಲಿ ಹಲವಾರು ಪ್ರೆಶ್ನೆಗಳು ಹುಟ್ಟಿಸಿದ್ದು, ಚರ್ಚೆಗೀಡಾಗಿದೆ.

    ಮೂಢ ನಂಬಿಕೆ, ಮೌಢ್ಯತೆ ವಿರುದ್ಧ ಗುಡುಗುವ ಸಿಎಂ ಅವರಿಗೆ ಮೌಢ್ಯತೆ ಕಾಡುತ್ತಿದೆಯಾ? ಮೂಢನಂಬಿಕೆ ವಿರುದ್ಧ ಕಾಯ್ದೆ ತರುವ ಸಿಎಂ ಅವರಿಗೆ ಭಯ ಶುರುವಾಯ್ತಾ? ಹಂಪಿ ಉತ್ಸವಕ್ಕೆ ಚಾಲನೆ ಕೊಟ್ಟ ಸಿಎಂ ವಿರೂಪಾಕ್ಷ ದೇವಾಲಯಕ್ಕೆ ಹೋಗಲಿಲ್ಲ ಯಾಕೆ? ಅಂತ ಹಲವಾರು ಪ್ರೆಶ್ನೆಗಳು ಇದೀಗ ಹುಟ್ಟಿಕೊಂಡಿವೆ.

    ಶುಕ್ರವಾರದಿಂದ ಶುರುವಾಗಿರುವ ಐತಿಹಾಸಿಕ ಬಳ್ಳಾರಿಯ ಹಂಪಿ ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯನವರು ಬಂದು ಕಾರ್ಯಕ್ರಮ ಉದ್ಘಾಟನೆ ಮಾಡಿದ್ರು. ಆದರೆ ಉದ್ಘಾಟನೆಯಾದ ಜಾಗದಿಂದ ಕೂಗಳತೆ ದೂರದಲ್ಲಿರೋ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಸಿಎಂ ಭೇಟಿ ನೀಡಿ ದೇವರ ದರ್ಶನವನ್ನ ಪಡೆಯಲಿಲ್ಲ.

    ಕಳೆದ ನಾಲ್ಕು ವರ್ಷದಿಂದಲೂ ಹಂಪಿ ಉತ್ಸವ ಉದ್ಘಾಟನೆಗೆ ಆಗಮಿಸಿದ್ರೂ ಸಿಎಂ ಸಿದ್ದರಾಮಯ್ಯ ವಿರುಪಾಕ್ಷೇಶ್ವರನ ದರ್ಶನ ಪಡೆದಿಲ್ಲ. ಹಿಂದೆ ಹಣಕಾಸು ಸಚಿವರಾಗಿದ್ದ ವೇಳೆಯಲ್ಲೂ ಸಹ ಎರಡು ಬಾರಿ ಬಂದಿದ್ದಾಗಲೂ ದೇವರ ದರ್ಶನ ಪಡೆದಿರಲಿಲ್ಲ.

    ವಿಜಯನಗರ ಸಾಮ್ರಾಜ್ಯ ಪತನಗೊಂಡಿದ್ದಕ್ಕೆ ವಿಜಯನಗರ ಅರಸರ ಆರಾಧ್ಯದೈವ ವಿರುಪಾಕ್ಷನ ಶಾಪವೂ ಇತ್ತಂತೆ. ಜೊತೆಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಸಹ ಶ್ರೀಕೃಷ್ಣದೇವರಾಯನ 500ನೇ ಪಟ್ಟಾಭಿಷೇಕ ಮಾಡಿಸಿದ್ರು. ಆಮೇಲೆ ರೆಡ್ಡಿ ಅಧಿಕಾರ ಕಳೆದುಕೊಂಡು ಜೈಲು ಸೇರಿದ್ರು. ವಿರೂಪಾಕ್ಷೇಶ್ವರನ ದರ್ಶನ ಮಾಡಿದ್ರೆ ಅಧಿಕಾರ ಹೊಗುತ್ತೆ ಅನ್ನೋ ನಂಬಿಕೆ ಹಲವರಲ್ಲಿದ್ದು, ಸಿಎಂ ಕೂಡ ಅದೇ ಹಾದಿಯಲ್ಲಿ ಸಾಗ್ತಿದ್ದಾರೆ ಅಂತ ಜನ ಮಾತನಾಡಿಕೊಳ್ತಿದ್ದಾರೆ.

     

  • ಹಂಪಿಯಲ್ಲಿ ವೈಭವದಿಂದ ಜರುಗಿದ ಜೋಡಿ ರಥೋತ್ಸವ- ಬೆಳಗಾವಿಯಲ್ಲಿ ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು

    ಹಂಪಿಯಲ್ಲಿ ವೈಭವದಿಂದ ಜರುಗಿದ ಜೋಡಿ ರಥೋತ್ಸವ- ಬೆಳಗಾವಿಯಲ್ಲಿ ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು

    ಬಳ್ಳಾರಿ/ಗದಗ/ಬೆಳಗಾವಿ: ಮಂಗಳವಾರದಂದು ಐತಿಹಾಸಿಕ ವಿಶ್ವ ವಿಖ್ಯಾತ ಹಂಪಿಯ ಹಂಪಮ್ಮ ವಿರುಪಾಕ್ಷೇಶ್ವರ ಹಾಗೂ ಚಂದ್ರಮೌಳೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಸಂಭ್ರಮ ಸಡಗರಿಂದ ಜರುಗಿತು.

    ಸಾಮಾನ್ಯವಾಗಿ ನಾಡಿನೆಲ್ಲೆಡೆ ಒಂದೆ ರಥವನ್ನು ಎಳೆದು ರಥೋತ್ಸವ ಆಚರಿಸಿದ್ರೆ ಹಂಪಿಯಲ್ಲಿ ಮಾತ್ರ ಜೋಡಿ ರಥೋತ್ಸವ ನಡೆಯುವುದು ವಿಶೇಷ. ರಥೋತ್ಸವದ ಅಂಗವಾಗಿ ಹಂಪಿಯ ವಿರುಪಾಕ್ಷೇಶ್ವರರಿಗೆ ವಿಶೇಷವಾದ 8 ಕೆಜಿಯ ವಜ್ರ ಖಚಿತ ಕಿರೀಟ ಧಾರಣೆ ಮಾಡಲಾಗಿತ್ತು. ಸಂಜೆ ಜರುಗಿದ ರಥೋತ್ಸವದಲ್ಲಿ ನಾಡಿನ ಲಕ್ಷಾಂತರ ಭಕ್ತರು ಭಾಗವಹಿಸಿ ರಥವನ್ನು ಎಳೆದು ವಿರುಪಾಕ್ಷೇಶ್ವರನ ದರ್ಶನ ಪಡೆದರು. ಗದಗದ ಪ್ರಸಿದ್ಧ ತೋಂಟದಾರ್ಯ ಮಠದ ಜಾತ್ರೆ ಕೂಡ ವಿಜೃಂಭಣೆಯಿಂದ ನಡೆಯಿತು.

    ಬೆಳಗಾವಿಯ ಬಸವೇಶ್ವರ ಜಾತ್ರೆಯ ರಥೋತ್ಸವದ ವೇಳೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಗೋಕಾಕ್‍ನ ಹಿರೇನಂದಿ ಗ್ರಾಮದಲ್ಲಿ ನಡೆದಿದೆ. ಜಾತ್ರೆಯ ನೂಕುನುಗಲ್ಲಿನಲ್ಲಿ ರಥದ ಚಕ್ರಕ್ಕೆ ಸಿಲುಕಿ 55 ವರ್ಷದ ಕಲಯ್ಯ ಮಠದ್ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.