Tag: ವಿರಾಟ್ ಪರ್ವಂ

  • ‘ಜೈ ಶ್ರೀರಾಮ್’ ಎಂದು ಕೊಲ್ಲುವ ಮಾತಿನ ವಿವಾದ: ನಟಿ ಸಾಯಿ ಪಲ್ಲವಿ ಬಂಧನಕ್ಕೆ ಹೆಚ್ಚಿದ ಒತ್ತಡ

    ‘ಜೈ ಶ್ರೀರಾಮ್’ ಎಂದು ಕೊಲ್ಲುವ ಮಾತಿನ ವಿವಾದ: ನಟಿ ಸಾಯಿ ಪಲ್ಲವಿ ಬಂಧನಕ್ಕೆ ಹೆಚ್ಚಿದ ಒತ್ತಡ

    ರಡ್ಮೂರು ದಿನಗಳಿಂದ ನಟಿ ಸಾಯಿ ಪಲ್ಲವಿ ಆಡಿದ ಮಾತಿನ ಹಿನ್ನೆಲೆಯಲ್ಲಿ ಹೈದರಾಬಾದ್ ಸೇರಿದಂತೆ ಹಲವು ಕಡೆ ದೂರು ದಾಖಲಾಗಿವೆ. ಅವರು ಕೋಮು ಗಲಭೆ ಹೆಚ್ಚುವಂತಹ ಮಾತುಗಳನ್ನು ಆಡಿದ್ದರಿಂದ ಮತ್ತು ಗೋವು ಕಳ್ಳರಿಗೆ ಕಾಶ್ಮೀರಿ ಪಂಡಿತರ ಹತ್ಯೆಯನ್ನು ಹೋಲಿಸಿ ಮಾತನಾಡಿದ್ದಕ್ಕಾಗಿ ಕೂಡಲೇ ಬಂಧಿಸಬೇಕು ಎಂದು ಹೈದರಾಬಾದ್ ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ. ಈಗಾಗಲೇ ಹೈದರಾಬಾದ್ ನಲ್ಲಿ ದೂರು ಕೂಡ ದಾಖಲಾಗಿದೆ.

    ಕರ್ನಾಟಕದಲ್ಲೂ ಈ ಕಾವು ಮುಂದುವರಿದಿದೆ. ಯಾರೂ ದೂರು ದಾಖಲಿಸದೇ ಇದ್ದರೂ, ಸೋಷಿಯಲ್ ಮೀಡಿಯಾಗಳಲ್ಲಿ ಮಾತ್ರ ಅಬ್ಬರ ಜೋರಾಗಿದೆ. ಕೆಲ ಸಿನಿಮಾ ನಟ, ನಟಿಯರು ಮತ್ತು ನಿರ್ದೇಶಕರು ಸಾಯಿ ಪಲ್ಲವಿ ಪರ ನಿಂತಿದ್ದರೆ, ಹಿಂದೂಪರ ಸಂಘಟನೆಯ ಸದಸ್ಯರು ಸಾಯಿ ಪಲ್ಲವಿ ವಿರೋಧಿಸಿ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಸಾಯಿ ಪಲ್ಲವಿ ಮಾತನಾಡಿದ್ದು ಸರಿಯೇ ಇರಬಹುದು. ಆದರೆ ಅವರು ಹೋಲಿಕೆ ಮಾಡಿದ್ದು ಸರಿಯಿಲ್ಲ ಎನ್ನುವ ಮತ್ತೊಂದು ವರ್ಗ ಕೂಡ ಹುಟ್ಟಿಕೊಂಡಿದೆ. ಇದನ್ನೂ ಓದಿ:ಬುದ್ದಿಜೀವಿ ವಲಯಕ್ಕೆ ನಟ ಚೇತನ್ ‘ಚಮಚ’ ಅಂದಿದ್ದು ಯಾಕೆ ಮತ್ತು ಯಾರಿಗೆ?

    ಮಾಧ್ಯಮವೊಂದರ ಸಂದರ್ಶನದಲ್ಲಿ ‘ಕಾಶ್ಮೀರ ಪಂಡಿತರ ಹತ್ಯೆ ಮತ್ತು ಜೈ ಶ್ರೀರಾಮ್ ಎಂದು ಹೇಳುತ್ತಾ ಗೋ ಸಾಗಾಣಿ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿ ಮೇಲಿನ ಹಲ್ಲೆ ಎರಡೂ ಒಂದೇ ಅನಿಸುತ್ತಿದೆ. ಧರ್ಮದ ಹೆಸರಿನಲ್ಲಿ ನಡೆಯುವ ಹತ್ಯೆಗಳನ್ನು ಖಂಡಿಸಬೇಕು’ ಎಂದು ಸಾಯಿ ಪಲ್ಲವಿ ಮಾತನಾಡಿದ್ದರು. ನಾನು ಸಮಸಮಾಜದ ಕನಸು ಕಂಡಿರುವ ಹುಡುಗಿ. ನಾನು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ. ಜಾತಿ, ಧರ್ಮಗಳ ಬಡಿದಾಟಕ್ಕೂ ನಾನು ಸಿದ್ಧಳಿಲ್ಲ. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದಲೇ ಬದುಕಬೇಕು. ಧರ್ಮಗಳ ಕಚ್ಚಾಟ ಏಕೆ? ಯಾರದೋ ಲಾಭಕ್ಕಾಗಿ ಆಗುತ್ತಿರುವ ದಾಳಿಯಿದು ಅಂತ ನನಗೆ ಅನಿಸುತ್ತಿದೆ ಎಂದು ಸಾಯಿ ಪಲ್ಲವಿ ಮಾತನಾಡಿದ್ದಾರೆ.

    Live Tv

  • ಜೈ ಶ್ರೀರಾಮ್ ಎಂದು ಮುಸ್ಲಿಂ ಹತ್ಯೆ ವಿವಾದ : ಸಾಯಿ ಪಲ್ಲವಿ ವಿರುದ್ಧ ದೂರು

    ಜೈ ಶ್ರೀರಾಮ್ ಎಂದು ಮುಸ್ಲಿಂ ಹತ್ಯೆ ವಿವಾದ : ಸಾಯಿ ಪಲ್ಲವಿ ವಿರುದ್ಧ ದೂರು

    ಮಾಧ್ಯಮವೊಂದರ ಸಂದರ್ಶನದಲ್ಲಿ ‘ಕಾಶ್ಮೀರ ಪಂಡಿತರ ಹತ್ಯೆ ಮತ್ತು ಜೈ ಶ್ರೀರಾಮ್ ಎಂದು ಹೇಳುತ್ತಾ ಗೋ ಸಾಗಾಣಿ ಮಾಡುತ್ತಿದ್ದು ಮುಸ್ಲಿಂ ಹತ್ಯೆ ಎರಡೂ ಒಂದೇ ಅನಿಸುತ್ತಿದೆ. ಧರ್ಮದ ಹೆಸರಿನಲ್ಲಿ ನಡೆಯುವ ಹತ್ಯೆಗಳನ್ನು ಖಂಡಿಸಬೇಕು’ ಎಂದು ಹೇಳಿಕೆ ನೀಡಿದ್ದ ದಕ್ಷಿಣದ ತಾರೆ ಸಾಯಿ ಪಲ್ಲವಿ ವಿರುದ್ಧ ದೂರು ದಾಖಲಾಗಿದೆ. ಕಾಶ್ಮೀರಿ ಪಂಡಿತರ ಹತ್ಯೆಗೆ ಗೋವು ಕಳ್ಳಸಾಗಾಣಿಕೆಯನ್ನು ಹೋಲಿಸಿರುವುದು ಸರಿಯಲ್ಲ ಎಂದು ವಾದ ನಡೆದಿದೆ.

    ಮೊನ್ನೆ ಇಂಥದ್ದೊಂದು ಹೇಳಿಕೆಯನ್ನು ಸಾಯಿ ಪಲ್ಲವಿ ಕೊಡುತ್ತಿದ್ದಂತೆಯೇ ಎಲ್ಲಡೆ ಆಕ್ರೋಶ ವ್ಯಕ್ತವಾಯಿತು. ಸಾಯಿ ಮಾತಿಗೆ ಪರ ವಿರೋಧ ವ್ಯಕ್ತವಾಯಿತು. ಕಳ್ಳಸಾಗಾಣಿಕೆದಾರನಿಗೆ ಕಾಶ್ಮೀರಿ ಪಂಡಿತರ ಹತ್ಯೆಯನ್ನು ಹೋಲಿಸಿದ್ದಕ್ಕಾಗಿ ಭಜರಂಗ ದಳದ ನಾಯಕರು, ಹೈದರಾಬಾದ್ ನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಶಿವಣ್ಣ – ತಲೈವಾ ಸಿನಿಮಾಗೆ `ಜೈಲರ್’ ಟೈಟಲ್ ಫಿಕ್ಸ್

    ನಾನು ಸಮಸಮಾಜದ ಕನಸು ಕಂಡಿರುವ ಹುಡುಗಿ. ನಾನು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ. ಜಾತಿ, ಧರ್ಮಗಳ ಬಡಿದಾಟಕ್ಕೂ ನಾನು ಸಿದ್ಧಳಿಲ್ಲ. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದಲೇ ಬದುಕಬೇಕು. ಧರ್ಮಗಳ ಕಚ್ಚಾಟ ಏಕೆ? ಯಾರದೋ ಲಾಭಕ್ಕಾಗಿ ಆಗುತ್ತಿರುವ ದಾಳಿಯಿದು ಅಂತ ನನಗೆ ಅನಿಸುತ್ತಿದೆ ಎಂದು ಸಾಯಿ ಪಲ್ಲವಿ ಮಾತನಾಡಿದ್ದಾರೆ. ಇವರ ಮಾತಿಗೆ ಕೆಲವರು ಮೆಚ್ಚಿಕೊಂಡರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

    Live Tv

  • ಬೈಕಾಟ್ ಸಾಯಿ ಪಲ್ಲವಿ ಫಿಲ್ಮ್ : ಇಂದು ವಿರಾಟ ಪರ್ವಂ ರಿಲೀಸ್

    ಬೈಕಾಟ್ ಸಾಯಿ ಪಲ್ಲವಿ ಫಿಲ್ಮ್ : ಇಂದು ವಿರಾಟ ಪರ್ವಂ ರಿಲೀಸ್

    ಕ್ಷಿಣದ ಖ್ಯಾತತಾರೆ ಸಾಯಿ ಪಲ್ಲವಿ ಮತ್ತು ರಾಣಾ ದಗ್ಗುಬಾಟಿ ಕಾಂಬಿನೇಷನ್ ನ ತೆಲುಗು ಸಿನಿಮಾ ‘ವಿರಾಟ ಪರ್ವಂ’ ಇಂದು ಬಿಡುಗಡೆ ಆಗಿದೆ. ಇದೊಂದು ನಕ್ಸಲ್ ಹಿನ್ನೆಲೆಯಾಗಿಟ್ಟುಕೊಂಡು ಮಾಡಿರುವ ಸಿನಿಮಾ. ನಕ್ಸಲ್ ಹೋರಾಟದಲ್ಲಿ ಭಾಗಿಯಾದ ಇಬ್ಬರು ಪ್ರೇಮಿಗಳ ಕಥನ ಮತ್ತು ಶೋಷಿತ ಸಮಾಜಕ್ಕಾಗಿ ಅವರು ಮಾಡುವ ತ್ಯಾಗವನ್ನು ತೋರಿಸುವ ಚಿತ್ರ ಇದಾಗಿದ್ದು, ಈ ಸಿನಿಮಾವನ್ನು ಬೈಕಾಟ್ ಮಾಡುವುದಾಗಿ ಹಿಂದೂಪರ ಸಂಘಟನೆಗಳು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿವೆ.

    ಈ ಸಿನಿಮಾ ಬೈಕಾಟ್ ಮಾಡುವುದಕ್ಕೆ ಕಾರಣ, ಸಿನಿಮಾದ ಕಂಟೆಂಟ್ ಅಲ್ಲ. ಬದಲಿಗೆ ಈ ಚಿತ್ರದಲ್ಲಿ ನಟಿಸಿದ ನಾಯಕಿ ಸಾಯಿ ಪಲ್ಲವಿ ಅವರ ಹೇಳಿಕೆ. ಮಾಧ್ಯಮವೊಂದರ ಸಂದರ್ಶನದಲ್ಲಿ ಅವರು ಮಾತನಾಡುತ್ತಾ, ‘ಕಾಶ್ಮೀರದಲ್ಲಿ ನಡೆದ ಪಂಡಿತರ ನರಮೇಧ ಮತ್ತು ಲಾಕ್‌ಡೌನ್‌ ವೇಳೆಯಲ್ಲಿ ಗೋವನ್ನು ತಗೆದುಕೊಂಡು ಹೋಗುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬನ ಮೇಲೆ ಜೈ ಶ್ರೀರಾಮ್ ಎಂದು ಕೂಗುತ್ತಾ ಮಾಡಿದ ಹತ್ಯೆ ಎರಡೂ ಒಂದೇ. ಧರ್ಮದ ಹೆಸರಿನಲ್ಲಿ ಮಾಡುವ ಹತ್ಯೆಯನ್ನು ಸಹಿಸಿಕೊಳ್ಳಬಾರದು’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯೇ ಸಿನಿಮಾ ಬೈಕಾಟ್‌ಗೆ ಕಾರಣವಾಗಿದೆ. ಇದನ್ನೂ ಓದಿ : ಜೈ ಶ್ರೀರಾಮ್ ಎನ್ನುತ್ತಾ ಮುಸ್ಲಿಮರನ್ನು ಹತ್ಯೆ ಮಾಡುವುದು, ಕಾಶ್ಮೀರ ಪಂಡಿತರ ಹತ್ಯೆಗೆ ಸಮ: ಸಾಯಿ ಪಲ್ಲವಿ ವೀಡಿಯೋ ವೈರಲ್

    ನಾನು ಸಮಸಮಾಜದ ಕನಸು ಕಂಡಿರುವ ಹುಡುಗಿ. ನಾನು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ. ಜಾತಿ, ಧರ್ಮಗಳ ಬಡಿದಾಟಕ್ಕೂ ನಾನು ಸಿದ್ಧಳಿಲ್ಲ. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದಲೇ ಬದುಕಬೇಕು. ಧರ್ಮಗಳ ಕಚ್ಚಾಟ ಏಕೆ? ಯಾರದೋ ಲಾಭಕ್ಕಾಗಿ ಆಗುತ್ತಿರುವ ದಾಳಿಯಿದು ಅಂತ ನನಗೆ ಅನಿಸುತ್ತಿದೆ ಎಂದು ಸಾಯಿ ಪಲ್ಲವಿ ಮಾತನಾಡಿದ್ದಾರೆ. ಇವರ ಮಾತಿಗೆ ಕೆಲವರು ಮೆಚ್ಚಿಕೊಂಡರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

    Live Tv

  • ‘ಜೈ ಶ್ರೀರಾಮ್’ ಎನ್ನುತ್ತಾ ಮುಸ್ಲಿಂ ಹತ್ಯೆ ವಿಚಾರ: ಸಾಯಿ ಪಲ್ಲವಿ ಬೆಂಬಲಕ್ಕೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ

    ‘ಜೈ ಶ್ರೀರಾಮ್’ ಎನ್ನುತ್ತಾ ಮುಸ್ಲಿಂ ಹತ್ಯೆ ವಿಚಾರ: ಸಾಯಿ ಪಲ್ಲವಿ ಬೆಂಬಲಕ್ಕೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ

    ನಾನು ನ್ಯೂಟ್ರಲ್ ಕುಟುಂಬದಲ್ಲಿ ಜನಿಸಿದವಳು. ಮಾನವತಾವಾದವನ್ನ ಕಲಿತಿದ್ದೇನೆ. ಯಾರು ದಮನಿತರೋ ಅವರನ್ನ ರಕ್ಷಿಸಬೇಕೆಂದು ಕಲಿತಿದ್ದೇನೆ. ನಾನು ಬಲ ಪಂಕ್ತಿ ಎಡ ಪಂಕ್ತಿ ಬಗ್ಗೆ ಕೇಳಿದ್ದೇನೆ. ಆದರೆ ಯಾರದು ಸರಿ, ಯಾರದು ತಪ್ಪು ಅಂತ ನನಗೆ ಇನ್ನೂ ಸರಿಯಾಗಿ ಗೊತ್ತಿಲ್ಲ. ಕಾಶ್ಮೀರಿ ಫೈಲ್ಸ್ ನೋಡಿದಾಗ  ಅದರಲ್ಲಿ ಕಾಶ್ಮೀರಿ ಪಂಡಿತರನ್ನು ಅಮಾನುಶವಾಗಿ ಸಾಯಿಸಲಾಯಿತು ಎಂದಿದೆ. ಆದರೆ ಇತ್ತೀಚೆಗೆ ಒಂದು ಘಟನೆ ನೋಡಿದಾಗ ಓರ್ವ ಮುಸ್ಲಿಂ ಡ್ರೈವರ್ ಹಸುಗಳನ್ನ ಸಾಗಿಸುತ್ತಿದ್ದಾಗ ಆತನ ಮೇಲೆ ಗುಂಪೊಂದು ಎಗರಿಬಿದ್ದು ಹೊಡೆದು ಬಡಿದು ಜೈ ಶ್ರೀರಾಮ್ ಎಂದು ಹೇಳಿಸಲಾಯಿತು. ಈ ಎರಡು ಘಟನೆ ನೋಡಿದಾಗ ಯಾವ ನಿರ್ಧಾರಕ್ಕೆ ಬರಲಾಗುತ್ತದೆ ಹೇಳಿ? ಎಂದು ಹೇಳುವ ಮೂಲಕ ಭಾರೀ ವಿವಾದ ಸೃಷ್ಟಿಸಿಕೊಂಡಿದ್ದಾರೆ ದಕ್ಷಿಣದ ಖ್ಯಾತ ನಟಿ ಸಾಯಿ ಪಲ್ಲವಿ.

    ವಿರಾಟ ಪರ್ವಂ ಸಿನಿಮಾದ ಪ್ರಚಾರದ ವೇಳೆ ನಡೆದಿದೆ ಎನ್ನಲಾದ ಸಂದರ್ಶನದಲ್ಲಿ ಅವರು ಈ ರೀತಿಯ ಮಾತುಗಳನ್ನು ಆಡಿದ್ದಾರೆ. ಆ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ಸದಾ ತುಳಿತಕ್ಕೊಳಗಾದವರನ್ನ ರಕ್ಷಿಸಬೇಕು. ಸತ್ಯ ಯಾವುದರ ಕಡೆ ಇದೆ ? ಬಲದ ಕಡೆಯಾ ಎಡದ ಕಡೆಗಾ ? ನಾನು ಈ ವಿಚಾರದಲ್ಲಿ ತುಂಬಾ ನ್ಯೂಟ್ರಲ್ ಎಂದೂ ವೀಡಿಯೋದಲ್ಲಿ ಹೇಳಿದ್ದಾರೆ. ಸಾಯಿ ಪಲ್ಲವಿ ಅವರ ಈ ವಿಚಾರವನ್ನು ನಟಿ, ಮಾಜಿ ಸಂಸದೆ ರಮ್ಯಾ ಬೆಂಬಲಿಸಿದ್ದಾರೆ. ಸಾಯಿ ಪಲ್ಲವಿಗೆ ಸತ್ಯವನ್ನ ಮಾತನಾಡುವ ಶಕ್ತಿ ಇದೆ ಎಂದು ಬರೆದು, ಚಪ್ಪಾಳೆ ಚಿನ್ಹೆ ಮೂಲಕ ಬೆಂಬಲಕ್ಕೆ ನಿಂತಿದ್ದಾರೆ. ಇದನ್ನೂ ಓದಿ : ಜೈ ಶ್ರೀರಾಮ್ ಎನ್ನುತ್ತಾ ಮುಸ್ಲಿಮರನ್ನು ಹತ್ಯೆ ಮಾಡುವುದು, ಕಾಶ್ಮೀರ ಪಂಡಿತರ ಹತ್ಯೆಗೆ ಸಮ: ಸಾಯಿ ಪಲ್ಲವಿ ವೀಡಿಯೋ ವೈರಲ್

    ನಾನು ಸಮಸಮಾಜದ ಕನಸು ಕಂಡಿರುವ ಹುಡುಗಿ. ನಾನು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ. ಜಾತಿ, ಧರ್ಮಗಳ ಬಡಿದಾಟಕ್ಕೂ ನಾನು ಸಿದ್ಧಳಿಲ್ಲ. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದಲೇ ಬದುಕಬೇಕು. ಧರ್ಮಗಳ ಕಚ್ಚಾಟ ಏಕೆ? ಯಾರದೋ ಲಾಭಕ್ಕಾಗಿ ಆಗುತ್ತಿರುವ ದಾಳಿಯಿದು ಅಂತ ನನಗೆ ಅನಿಸುತ್ತಿದೆ ಎಂದು ಸಾಯಿ ಪಲ್ಲವಿ ಮಾತನಾಡಿದ್ದಾರೆ. ಇವರ ಮಾತಿಗೆ ಕೆಲವರು ಮೆಚ್ಚಿಕೊಂಡರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

    Live Tv

  • ಜೈ ಶ್ರೀರಾಮ್ ಎನ್ನುತ್ತಾ ಮುಸ್ಲಿಮರನ್ನು ಹತ್ಯೆ ಮಾಡುವುದು, ಕಾಶ್ಮೀರ ಪಂಡಿತರ ಹತ್ಯೆಗೆ ಸಮ:  ಸಾಯಿ ಪಲ್ಲವಿ ವೀಡಿಯೋ ವೈರಲ್

    ಜೈ ಶ್ರೀರಾಮ್ ಎನ್ನುತ್ತಾ ಮುಸ್ಲಿಮರನ್ನು ಹತ್ಯೆ ಮಾಡುವುದು, ಕಾಶ್ಮೀರ ಪಂಡಿತರ ಹತ್ಯೆಗೆ ಸಮ: ಸಾಯಿ ಪಲ್ಲವಿ ವೀಡಿಯೋ ವೈರಲ್

    ಕ್ಷಿಣದ ಖ್ಯಾತ ತಾರೆ ಸಾಯಿ ಪಲ್ಲವಿ ನಟನೆಯ ವಿರಾಟ ಪರ್ವಂ ಸಿನಿಮಾ ದೇಶದಾದ್ಯಂತ ರಿಲೀಸ್ ಆಗುತ್ತಿದೆ. ಈ ಸಮಯದಲ್ಲಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಸಾಯಿ ಪಲ್ಲವಿ, ಸಮಾಜದಲ್ಲಿ ನಡೆಯುತ್ತಿರುವ ಕೋಮು ದಳ್ಳುರಿಯ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ‘ದಿ ಕಾಶ್ಮೀರ್‌ ಫೈಲ್ಸ್’ ಸಿನಿಮಾದ ಕಥಾವಸ್ತುವಾಗಿರುವ ಕಾಶ್ಮೀರಿ ಪಂಡಿತರ ಹತ್ಯೆಯನ್ನು ಮುಸ್ಲಿಂ ಡ್ರೈವರ್ ಒಬ್ಬರ ಹತ್ಯೆಗೆ ಹೋಲಿಸಿ ಪರ ಮತ್ತು ವಿರೋಧಕ್ಕೆ ಕಾರಣವಾಗಿದ್ದಾರೆ.

    ಸಂದರ್ಶನವೊಂದರಲ್ಲಿ ಅವರು ಮಾತನಾಡುತ್ತಾ, ‘ನಾನು ಎಡ ಮತ್ತು ಬಲ ಅಂತ ಕೇಳಿದ್ದೇನೆ. ಆದರೆ ಎರಡರ ಬಗ್ಗೆಯೂ ನನಗೆ ಆಳವಾದ ಜ್ಞಾನವಿಲ್ಲ. ಆದರೆ ನಾನು ಮನುಷ್ಯತ್ವದ ಪರ ಮಾತನಾಡುತ್ತೇನೆ. ನನ್ನ ಮನೆಯಲ್ಲಿ ಕಲಿಸಿದ್ದು ನ್ಯೂಟ್ರಲ್ ನಿಯಮ. ಹಾಗಾಗಿ ಕಾಶ್ಮೀರದಲ್ಲಿ ಪಂಡಿತರ ಹತ್ಯೆಯನ್ನು ಹೇಗೆ ಧಾರ್ಮಿಕ ದೃಷ್ಟಿಕೋನದಿಂದ ನೋಡಲಾಯಿತೋ, ಹಾಗೆಯೇ ಲಾಕ್‌ಡೌನ್‌ ಸಮಯದಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ಮುಸ್ಲಿಂ ಟೆಂಪೋ ಟ್ರೈವರ್‌ ಮೇಲೆ ಜೈ ಶ್ರೀರಾಮ್ ಎಂದು ಹೇಳುತ್ತಾ ಕೊಚ್ಚಿಕೊಂದ ಘಟನೆಯನ್ನೂ ನಾನು ಹಾಗೆಯೇ ನೋಡಬೇಕಾಗುತ್ತದೆ. ಎರಡು ಹತ್ಯೆಯೂ ಒಂದೇ’ ಎಂದು ಹೇಳಿದ್ದಾರೆ. ಈ ಮಾತು ಇದೀಗ ವೈರಲ್ ಆಗುತ್ತಿದೆ. ಇದನ್ನೂ ಓದಿ: ಅಮ್ಮ ಅಂತಾ ಎಷ್ಟೇ ಹೇಳಿಕೊಟ್ಟರೂ ಕೊನೆಗೆ ಅಪ್ಪ ಎಂದು ಕರೆದ ರಾಯನ್

    ನಾನು ಸಮಸಮಾಜದ ಕನಸು ಕಂಡಿರುವ ಹುಡುಗಿ. ನಾನು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ. ಜಾತಿ, ಧರ್ಮಗಳ ಬಡಿದಾಟಕ್ಕೂ ನಾನು ಸಿದ್ಧಳಿಲ್ಲ. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದಲೇ ಬದುಕಬೇಕು. ಧರ್ಮಗಳ ಕಚ್ಚಾಟ ಏಕೆ? ಯಾರದೋ ಲಾಭಕ್ಕಾಗಿ ಆಗುತ್ತಿರುವ ದಾಳಿಯಿದು ಅಂತ ನನಗೆ ಅನಿಸುತ್ತಿದೆ ಎಂದು ಸಾಯಿ ಪಲ್ಲವಿ ಮಾತನಾಡಿದ್ದಾರೆ. ಇವರ ಮಾತಿಗೆ ಕೆಲವರು ಮೆಚ್ಚಿಕೊಂಡರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

    Live Tv