Tag: ವಿರಾಟ್‌ ಕೊಹ್ಲಿ ಫ್ಯಾನ್ಸ್‌

  • ಮೈದಾನಕ್ಕೆ ನುಗ್ಗಿ ವಿರಾಟ್‌ ಪಾದ ಮುಟ್ಟಿ‌, ಅಪ್ಪಿಕೊಂಡ – ಭದ್ರತೆ ಉಲ್ಲಂಘಿಸಿದ ಕೊಹ್ಲಿ ಅಪ್ಪಟ ಅಭಿಮಾನಿಗೆ ಸಂಕಷ್ಟ

    ಮೈದಾನಕ್ಕೆ ನುಗ್ಗಿ ವಿರಾಟ್‌ ಪಾದ ಮುಟ್ಟಿ‌, ಅಪ್ಪಿಕೊಂಡ – ಭದ್ರತೆ ಉಲ್ಲಂಘಿಸಿದ ಕೊಹ್ಲಿ ಅಪ್ಪಟ ಅಭಿಮಾನಿಗೆ ಸಂಕಷ್ಟ

    ಇಂದೋರ್‌: ಟೀಂ ಇಂಡಿಯಾ ಮತ್ತು ಅಫ್ಘಾನಿಸ್ತಾನ (Ind vs Afg) ನಡುವಿನ 2ನೇ ಟಿ20 ಪಂದ್ಯದ ವೇಳೆ ಇಂದೋರ್‌ನ ಹೋಳ್ಕರ್‌ ಮೈದಾನದಲ್ಲಿ ಭದ್ರತೆ ಉಲ್ಲಂಘಿಸಿದ ಕ್ರಿಕೆಟಿಗ ವಿರಾಟ್‌ ಕೊಹ್ಲಿ (Virat Kohli) ಅವರ ಅಪ್ಪಟ ಅಭಿಮಾನಿಗೆ ಸಂಕಷ್ಟ ಎದುರಾಗಿದೆ.

    ಪಂದ್ಯದಲ್ಲಿ ಅಫ್ಘಾನಿಸ್ತಾನದ ಇನ್ನಿಂಗ್ಸ್‌ ವೇಳೆ ಕೊಹ್ಲಿಯ ಅಪ್ಪಟ ಅಭಿಮಾನಿಯೊಬ್ಬ (Virat Kohli Fan) ಭದ್ರತೆ ಉಲ್ಲಂಘಿಸಿ ಮೈದಾನಕ್ಕೆ ಹಾರಿಬಂದು ಕೊಹ್ಲಿಯನ್ನು ಭೇಟಿಯಾಗಿದ್ದಾನೆ.‌ ಓಡಿಬಂದು ಬೌಂಡರಿ ಲೈನ್‌ ಬಳಿ ನಿಂತಿದ್ದ ಕೊಹ್ಲಿಯ ಪಾದಮುಟ್ಟಿದ್ದಾನೆ, ಬಳಿಕ ಅಪ್ಪಿಗೊಂಡು ಭಾವುಕನಾಗಿದ್ದಾನೆ. ಮೈದಾನಕ್ಕೆ ನುಗ್ಗಿದ ಅಭಿಮಾನಿಯನ್ನು ಮಧ್ಯಪ್ರದೇಶ ಪೊಲೀಸರು (MadhyaPradesh Police) ವಶಕ್ಕೆ ಪಡೆದಿದ್ದಾರೆ. ಯುವಕನನ್ನು ತುಕೋಗಂಜ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಇದನ್ನೂ ಓದಿ: ಆಫ್ಘನ್ ತಂಡದ ವಿರುದ್ಧ ಭಾರತ ಗೆಲುವು – ಜೈಸ್ವಾಲ್, ದುಬೆ ಅರ್ಧ ಶತಕ

    ಟಿಕೆಟ್‌ ಖರೀದಿಸಿ ಪಂದ್ಯ ವೀಕ್ಷಿಸಲು ಬಂದಿದ್ದ ಯುವಕ ನರೇಂದ್ರ ಹಿರ್ವಾನಿ ಗೇಟ್‌ ಮೂಲಕ ಮೈದಾನಕ್ಕೆ ನುಗ್ಗಿದ್ದಾನೆ. ಯುವಕನು ಕೊಹ್ಲಿಯ ಅಪ್ಪಟ ಅಭಿಮಾನಿಯಾಗಿದ್ದು, ಹಿರಿಯ ಆಟಗಾರನನ್ನು ಭೇಟಿಯಾಗಬೇಕೆಂಬ ಆಸೆಯಿಂದ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದು ಮೈದಾನ ಪ್ರವೇಶಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಯುವಕನ ವಿಚಾರಣೆ ನಡೆಸಲಾಗುತ್ತಿದ್ದು, ವಿಚಾರಣೆ ಮುಗಿದ ಬಳಿಕ ಬಳಿಕ ಮುಂದಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ – ಯುಪಿ ಮೂಲದ ಹೊಸ ಆಟಗಾರನಿಗೆ ಚಾನ್ಸ್

    ಭಾರತಕ್ಕೆ ಸರಣಿ ಜಯ: ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ ಗೆದ್ದುಕೊಂಡಿದೆ. ಆರಂಭಿಕ ಎರಡು ಪಂದ್ಯಗಳನ್ನು ಗೆದ್ದು ಸರಣಿ ತನ್ನದಾಗಿಸಿಕೊಂಡಿರುವ ಭಾರತ, ತವರಿನಲ್ಲೇ ವೈಟ್‌ವಾಶ್‌ ಮಾಡುವ ಗುರಿ ಹೊಂದಿದೆ. ಭಾನುವಾರ ಇಂದೋರ್‌ನ ಹೋಳ್ಕರ್‌ ಮೈದಾನದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿತು.

    ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡವು ಗುಲ್ಬದೀನ್ ನಯೀಬ್ ಅವರ ಅರ್ಧಶತಕದ ನೆರವಿನಿಂದ 20 ಓವರ್​​​ಗಳಲ್ಲಿ 172 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನತ್ತಿದ್ದ ಭಾರತ ಯಶಸ್ವಿ ಜೈಸ್ವಾಲ್‌, ಶಿವಂ ದುಬೆ ಸ್ಫೋಟಕ ಅರ್ಧಶತಕಗಳ ನೆರವಿನಿಂದ 15.4 ಓವರ್‌ಗಳಲ್ಲೇ 173 ರನ್‌ ಗಳಿಸಿ ಗೆಲುವು ಸಾಧಿಸಿತು. ಇದನ್ನೂ ಓದಿ: ಆಫ್ಘನ್ ತಂಡದ ವಿರುದ್ಧ ಭಾರತ ಗೆಲುವು – ಜೈಸ್ವಾಲ್, ದುಬೆ ಅರ್ಧ ಶತಕ

  • ಎಲ್ಲಿ ಹೋಯ್ತು ಬಾಬರ್‌ನ ಬೆಂಕಿ ಬ್ಯಾಟಿಂಗ್? – ಮತ್ತೆ ಗಂಭೀರ್ ಕೆಣಕಿದ ಕೊಹ್ಲಿ ಫ್ಯಾನ್ಸ್

    ಎಲ್ಲಿ ಹೋಯ್ತು ಬಾಬರ್‌ನ ಬೆಂಕಿ ಬ್ಯಾಟಿಂಗ್? – ಮತ್ತೆ ಗಂಭೀರ್ ಕೆಣಕಿದ ಕೊಹ್ಲಿ ಫ್ಯಾನ್ಸ್

    ಮುಂಬೈ: ಕೆಲ ದಿನಗಳ ಹಿಂದೆಯಷ್ಟೇ ಕೊಹ್ಲಿ ಫ್ಯಾನ್ಸ್‌ (Virat Kohli Fans) ಕೆಣಕಿ ಟೀಕೆಗೆ ಗುರಿಯಾಗಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್‌ ಗಂಭಿರ್‌ (Gautam Gambhir), ಮತ್ತೆ ಮತ್ತೆ ಕೊಹ್ಲಿ ಅಭಿಮಾನಿಗಳಿಂದಲೇ ಟೀಕೆಗೆ ಗುರಿಯಾಗುತ್ತಿದ್ದಾರೆ.

    ಭಾರತದ ಪೂರ್ಣ ಆತಿಥ್ಯದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಬಾಬರ್‌ ಆಜಂ ಬೆಂಕಿ ಬ್ಯಾಟಿಂಗ್‌ ಪ್ರದರ್ಶನ ನೀಡ್ತಾರೆ ಎಂದಿದ್ದ ಗೌತಮ್‌ ಗಂಭೀರ್‌ ಅವರನ್ನು ಕೊಹ್ಲಿ ಫ್ಯಾನ್ಸ್‌ ಹಿಗ್ಗಾಮುಗ್ಗ ಟ್ರೋಲಿಗೆಳೆದಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ್‌ ಜಿಂದಾಬಾದ್‌ ಅನ್ನದೇ ಇನ್ನೇನು ಹೇಳ್ಬೇಕು? – ಪೊಲೀಸ್‌ ಅಧಿಕಾರಿ ಜೊತೆ ಪಾಕ್‌ ಅಭಿಮಾನಿ ವಾಗ್ವಾದ

    ಇತ್ತೀಚೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾ (Pakistan – Sri Lanka) ಆತಿಥ್ಯದಲ್ಲಿ ನಡೆದ ಏಕದಿನ ಏಷ್ಯಾ ಕಪ್‌ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ್ದ ಬಾಬರ್‌ ಆಜಂ ಟೂರ್ನಿಯಲ್ಲಿ 207 ರನ್‌ ಬಾರಿಸಿದ್ದರು. ಆ ಮೂಲಕ ಟೂರ್ನಿಯಲ್ಲಿ ಅತಿಹೆಚ್ಚು ರನ್‌ ಗಳಿಸಿದ 4ನೇ ಆಟಗಾರ ಹಾಗೂ ಪಾಕ್‌ ಪರ ಅತಿಹೆಚ್ಚು ರನ್‌ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ರು.

    ಏಷ್ಯಾಕಪ್‌ ಟೂರ್ನಿ ಬಳಿಕ ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌, ವಿಶ್ವಕಪ್‌ ಮಹಾ ಟೂರ್ನಿಯಲ್ಲಿ ಪಾಕ್‌ ತಂಡದ ನಾಯಕ ಬಾಬರ್ ಆಜಂ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಟಾಪ್ ಸ್ಕೋರರ್ ಆಗಿ ಹೊರಹೊಮ್ಮುತ್ತಾರೆ ಎಂದು ಭವಿಷ್ಯ ನುಡಿದಿದ್ರು.

    ಬಾಬರ್ ಆಜಂ ವಿಶ್ವಕಪ್ ಟೂರ್ನಿಯಲ್ಲಿ ಬೆಂಕಿಯಂತಹ ಬ್ಯಾಟಿಂಗ್ ಪ್ರದರ್ಶಿಸುತ್ತಾರೆ. ನಾನು ಹಲವು ಬ್ಯಾಟರ್‌ಗಳು ಉತ್ತಮ ಬ್ಯಾಟಿಂಗ್ ಮಾಡುವುದನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್ ಹಾಗೂ ಜೋ ರೂಟ್ ಅವರು ಕೂಡ ಆ ಸ್ಥಾನದಲ್ಲಿದ್ದಾರೆ ಎಂಬುದು ನನ್ನ ಆಲೋಚನೆ. ಆದ್ರೆ ಬಾಬರ್ ಆಜಂಗೆ ಇವರೆಲ್ಲರನ್ನೂ ಮೀರಿಸುವಂತಹ ಸಾಮರ್ಥ್ಯವಿದೆ ಅಂತಾ ಕೊಂಡಾಡಿದ್ದರು. ಇದನ್ನೂ ಓದಿ: World Cup 2023: ಒಂದೇ ಓವರ್‌ನಲ್ಲಿ 24 ರನ್‌ ಚಚ್ಚಿಸಿಕೊಂಡು ಕೆಟ್ಟ ದಾಖಲೆ ಬರೆದ ಹ್ಯಾರಿಸ್‌ ರೌಫ್‌

    ಬಾಬರ್‌ ಆಜಂ ಕಳೆದ 4 ಪಂದ್ಯಗಳಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದು, ಶತಕ ಸಿಡಿಸುವಲ್ಲಿ ವಿಫಲರಾಗಿದ್ದಾರೆ. ಆರಂಭಿಕ ಪಂದ್ಯದಲ್ಲಿ ನೆದರ್ಲೆಂಡ್‌ ವಿರುದ್ಧ ಕೇವಲ 5 ರನ್‌, ಶ್ರೀಲಂಕಾ ವಿರುದ್ಧ 10 ರನ್‌, ಟೀಂ ಇಂಡಿಯಾ ವಿರುದ್ಧ 50 ರನ್‌ ಗಳಿಸಿದ್ರೆ, ಆಸೀಸ್‌ ವಿರುದ್ಧ ಕೇವಲ 18 ರನ್‌ ಸೇರಿ ಒಟ್ಟು 83 ರನ್‌ ಗಳಿಸಿದ್ದಾರೆ. ಇದನ್ನೂ ಓದಿ: World Cup 2023: ಸ್ಪಿನ್‌ ದಾಳಿಗೆ ಮಕಾಡೆ ಮಲಗಿದ ಪಾಕ್‌ – ಆಸೀಸ್‌ಗೆ 62 ರನ್‌ ಭರ್ಜರಿ ಜಯ, ಪಾಕ್‌ಗೆ ಹೀನಾಯ ಸೋಲು

    ಇದರಿಂದ ಗೌತಮ್‌ ಗಂಭೀರ್‌ ಅವರನ್ನ ತರಾಟೆಗೆ ತೆಗೆದುಕೊಂಡಿರುವ ಅಭಿಮಾನಿಗಳು ಕೊಹ್ಲಿ ಫ್ಯಾನ್ಸ್‌ ಪೇಜ್‌ನಲ್ಲಿ, 4 ಪಂದ್ಯಗಳಲ್ಲಿ ಒಂದು ಶತಕ ಸಿಡಿಸುವುದಿರಲಿ. ನಾಲ್ಕು ಪಂದ್ಯಗಳ ಒಟ್ಟು ಸ್ಕೋರ್‌ ಸೇರಿಸಿದ್ರೂ ಶತಕ ಬರುತ್ತಿಲ್ಲವಲ್ಲ ಎಂದು ಟೀಕಿಸಿದ್ದಾರೆ. ಅಲ್ಲದೇ ಕೊಹ್ಲಿ ಚಿತ್ರಗಳಿಗೆ ಬಾಬರ್‌ ಆಜಂ ಮುಖದ ಚಿತ್ರ ಹಾಕಿ ಟ್ರೋಲ್‌ ಮಾಡಿದ್ದಾರೆ. ಆದ್ರೆ ಗೌತಮ್‌ ಗಂಭೀರ್‌ ಇದಕ್ಕೆ ಯಾವ್ದೇ ಪ್ರತಿಕ್ರಿಯೆ ನೀಡಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]