Tag: ವಿರಾಟ್ ಕೊಯ್ಲಿ

  • ಅನುಷ್ಕಾಳನ್ನು ನೋಡಿ ನಾನು ತುಂಬಾ ನರ್ವಸ್ ಆಗಿದ್ದೆ: ವಿರಾಟ್ ಕೊಹ್ಲಿ

    ಅನುಷ್ಕಾಳನ್ನು ನೋಡಿ ನಾನು ತುಂಬಾ ನರ್ವಸ್ ಆಗಿದ್ದೆ: ವಿರಾಟ್ ಕೊಹ್ಲಿ

    ಮುಂಬೈ: ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮದುವೆ ಆಗಿ ಅನೇಕ ವರ್ಷ ಕಳೆದಿದೆ. ಆದರೆ ಇದೀಗ ಅವರು ಆಗಿರುವ ಮೊದಲ ಭೇಟಿ ಹೇಗಿತ್ತು ಎನ್ನುವ ಕುರಿತಾಗಿ ವಿರಾಟ್ ಹೇಳಿಕೊಂಡಿದಾರೆ.

    ಅನುಷ್ಕಾ ಅವರನ್ನು ಮೊದಲ ಬಾರಿ ಭೇಟಿ ಮಾಡಿದ್ದು 2013ರಲ್ಲಿ. ನಾನು ಸೆಟ್‍ನಲ್ಲಿ ಅನುಷ್ಕಾ ಅವರನ್ನು ಭೇಟಿ ಮಾಡಿದ್ದೆ. ಆಗ ತುಂಬಾನೇ ನರ್ವಸ್ ಆಗಿದ್ದೆ. ಹೀಗಾಗಿ, ಒಂದು ಜೋಕ್ ಹೇಳಿದೆ. ನನಗೆ ಏನು ಮಾಡಬೇಕು ಎಂಬುದೇ ಗೊತ್ತಿರಲಿಲ್ಲ. ಈ ಕಾರಣಕ್ಕೆ ನಾನು ಜೋಕ್ ಹೇಳಿದೆ. ಅನುಷ್ಕಾ ತುಂಬಾನೇ ಎತ್ತರವಾಗಿ ಕಾಣುತ್ತಿದ್ದರು. ಹೀಲ್ಸ್ ಹಾಕಿಕೊಂಡಿದ್ದರು. ಅವರು ತುಂಬಾನೇ ಕಾನ್ಫಿಡೆಂಟ್ ಆಗಿದ್ದರು ಎಂದು ವಿರಾಟ್ ಮೊದಲ ಭೇಟಿ ಅನುಭವ ಹಂಚಿಕೊಂಡಿದ್ದಾರೆ.

    ವಮಿಕಾ ಜನಿಸಿದ್ದು ಕುಟುಂಬಕ್ಕೆ ಖುಷಿ ತಂದಿದೆ. ಆದರೆ, ಇದನ್ನು ನೋಡೋಕೆ ಅವರ ತಂದೆ ಇಲ್ಲ ಎನ್ನುವ ವಿಚಾರ ಬೇಸರ ತರಿಸಿದೆ. ಈ ಬಗ್ಗೆ ಮಾತನಾಡಿರುವ ವಿರಾಟ್ ನಾನು ಕ್ರಿಕೆಟ್ ಆಡುವುದನ್ನು ನೋಡುವುದಕ್ಕೂ ನನ್ನ ತಂದೆ ಇಲ್ಲ. ಈಗ ನನ್ನ ಮಗಳನ್ನು ನೋಡೋಕು ನನ್ನ ತಂದೆ ಇಲ್ಲ. ನನ್ನ ಅಮ್ಮನ ಮುಖದಲ್ಲಿ ಎಲ್ಲಾ ಖುಷಿಯನ್ನು ಕಾಣುತ್ತಿದ್ದೇನೆ ಎಂದಿದ್ದಾರೆ.

     

    View this post on Instagram

     

    A post shared by Virat Kohli (@virat.kohli)

    ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮದುವೆ ಆಗಿ ಅನೇಕ ವರ್ಷ ಕಳೆದಿದೆ. ಹಲವು ವರ್ಷಗಳ ಕಾಲ ಡೇಟಿಂಗ್ ನಡೆಸುತ್ತಿದ್ದ ಈ ಜೋಡಿ 2017ರಲ್ಲಿ ಮದುವೆ ಆಗಿತ್ತು. ಈ ವರ್ಷದ ಆರಂಭದಲ್ಲಿ ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ವಿರಾಟ್ ಅನುಷ್ಕಾ ಮೊದಲ ಭೇಟಿ ಬಗ್ಗೆ ಹೇಳಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

     

    View this post on Instagram

     

    A post shared by AnushkaSharma1588 (@anushkasharma)

  • ಅವಳೇ ನನ್ನ ಶಕ್ತಿ, ನನ್ನ ಆತ್ಮೀಯ ಗೆಳತಿ: ವಿರಾಟ್ ಕೊಹ್ಲಿ

    ಅವಳೇ ನನ್ನ ಶಕ್ತಿ, ನನ್ನ ಆತ್ಮೀಯ ಗೆಳತಿ: ವಿರಾಟ್ ಕೊಹ್ಲಿ

    ನವದೆಹಲಿ: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ “ನನ್ನ ಶಕ್ತಿ, ನನ್ನ ಆತ್ಮೀಯ ಅವಳೇ” ಎಂದು ಪತ್ನಿ ಅನುಷ್ಕಾ ಅವರ ಬಗ್ಗೆ ಇನ್ ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ.

    ಕೊಹ್ಲಿ ಬುಧವಾರ ಖೇಲ್ ರತ್ನ ಪ್ರಶಸ್ತಿಯನ್ನು ಪಡೆದ ಸಂಭ್ರಮದಲ್ಲಿದ್ದರು. ಅದೇ ವೇಳೆ ಪತ್ನಿ ಅನುಷ್ಕಾ ಅವರ ಫೋಟೋವನ್ನು ಪೋಸ್ಟ್ ಮಾಡಿ ಅವರ ಬಗ್ಗೆ ಭಾವನಾತ್ಮಕ ಪದಗಳನ್ನು ಬರೆದುಕೊಂಡಿದ್ದಾರೆ.

    ಎಲ್ಲ ಅಡೆತಡೆಗಳ ನಡುವೆಯೂ ನನ್ನನ್ನು ಪ್ರೇರೇಪಿಸುವ ವ್ಯಕ್ತಿ ಅನುಷ್ಕಾ. ತನ್ನ ಜೀವನದಲ್ಲಿ ಸರಿಯಾದ ಕೆಲಸವನ್ನು ಮಾಡಲು ನನಗೆ ಮಾರ್ಗದರ್ಶನ ನೀಡುವ ವ್ಯಕ್ತಿ. ನನ್ನನ್ನು ಬದಲಿಸಿದ ವ್ಯಕ್ತಿ ಮತ್ತು ನಿಜವಾದ ಪ್ರೀತಿಯ ಅರ್ಥವನ್ನು ನನಗೆ ಅರ್ಥ ಮಾಡಿಸಿದ ಶಕ್ತಿ, ಎಲ್ಲ ಅವಳೇ ಎಂದು ಬರೆದು ಲವ್ ಎಮೋಜಿಯನ್ನು ಹಾಕಿ ತನ್ನ ಪ್ರೀತಿಯ ಭಾವನೆಯನ್ನು ಬರೆದಿದ್ದರು. ಈ ಫೋಟೋವನ್ನು 27.99 ಲಕ್ಷ ಮಂದಿ ಲೈಕ್ ಮಾಡಿದ್ದು, 15 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.

    https://www.instagram.com/p/BoL2HGuA6kQ/?hl=en&taken-by=virat.kohli

    ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರುವ ಕೊಹ್ಲಿ ಹೆಸರು ಈ ಹಿಂದೆ 2016 ಹಾಗೂ 2017 ರಲ್ಲೂ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿತ್ತು. 2017 ರಲ್ಲಿ ಕೊಹ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು.  ಖೇಲ್ ರತ್ನ ಪ್ರಶಸ್ತಿಯನ್ನು ಬುಧವಾರ ಪಡೆಯುವ ಮೂಲಕ 3ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಸದ್ಯಕ್ಕೆ ಕೊಹ್ಲಿ ವಿಶ್ರಾಂತಿಯಲ್ಲಿದ್ದು, ಅಕ್ಟೋಬರ್ 4 ರಂದು ವೆಸ್ಟ್ ಇಂಡಿಸ್ ವಿರುದ್ಧದ ಭಾರತದ ಟೆಸ್ಟ್ ಸರಣಿಗೆ ಮರಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv