Tag: ವಿರಾಜ್‌

  • ಕುವೆಂಪು ಕೃತಿಯಿಂದ ಪ್ರೇರಣೆ- ಯುವ ನಟನಿಗೆ ಸಿಂಪಲ್ ಸುನಿ ಆ್ಯಕ್ಷನ್ ಕಟ್

    ಕುವೆಂಪು ಕೃತಿಯಿಂದ ಪ್ರೇರಣೆ- ಯುವ ನಟನಿಗೆ ಸಿಂಪಲ್ ಸುನಿ ಆ್ಯಕ್ಷನ್ ಕಟ್

    ಸ್ಯಾಂಡಲ್‌ವುಡ್ ಖ್ಯಾತ ನಿರ್ದೇಶಕ ಸಿಂಪಲ್ ಸುನಿ (Simple Suni) ‘ಅವತಾರ ಪುರುಷ 2’ (Avatara Purusha 2) ಸಿನಿಮಾದ ನಂತರ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ‘ದೇವರು ರುಜು ಮಾಡಿದನು’ ಎಂಬುದು ಕುವೆಂಪು (Kuvempu) ಅವರ ಕವಿತೆ ಸಾಲು. ಈ ಸಾಲನ್ನೇ ಚಿತ್ರದ ಟೈಟಲ್ ಮಾಡಿಕೊಂಡು ಹೊಸ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದನ್ನೂ ಓದಿ:ಕಿರುತೆರೆಗೆ ಖ್ಯಾತ ಹಾಸ್ಯನಟ ನರಸಿಂಹರಾಜು ಮೊಮ್ಮಗ ಎಂಟ್ರಿ

    ಇದೊಂದು ಮ್ಯೂಸಿಕಲ್ ಲವ್ ಸ್ಟೋರಿಯಾಗಿದ್ದು, ಚಿತ್ರದ ನಾಯಕಿ ಕುವೆಂಪು ಅಭಿಮಾನಿಯಾಗಿರುತ್ತಾಳೆ. ‘ದೇವರು ರುಜು ಮಾಡಿದನು’ ಎಂಬ ಕುವೆಂಪು ಕವಿತೆಯ ಒಳಾರ್ಥ ಕಾಡುವಂತಿದೆ. ಜೀವನದಲ್ಲಿ ನಾವೆಂದುಕೊಂಡಂತೆ ನಡೆಯಲ್ಲ. ನಮಗೆ ದೇವರು ಮೊದಲೇ ಸ್ಕ್ರೀಪ್ಟ್ ಮಾಡಿರುತ್ತಾನೆ. ಅದರಲ್ಲಿ ನಾವು ನಟಿಸುತ್ತಿರುತ್ತೇವೆ. ನಾವೇನು ಬದಲಾವಣೆ ಮಾಡಲು ಹೊರಟರೂ ದೇವರ ನಿರ್ಧಾರವನ್ನು ಬದಲಿಸಲು ಸಾಧ್ಯವಿಲ್ಲ ಎಂಬುದೇ ಈ ಸಿನಿಮಾದ ಒನ್‌ಲೈನ್ ಕಥೆಯಾಗಿದೆ.

    ಕುವೆಂಪು ಅವರ ಜನಪ್ರಿಯ ಕವಿತೆ ‘ದೇವರು ಋಜು ಮಾಡಿದನು’ ಇಂದ ಸ್ಪೂರ್ತಿ ಪಡೆದು ಹೊಸ ಕತೆ ಬರೆದು ಸಿನಿಮಾ ಮಾಡುತ್ತಿರುವ ಸಿಂಪಲ್ ಸುನಿ, ತಮ್ಮ ಸಿನಿಮಾಗೆ ಅದೇ ಹೆಸರನ್ನು ಇರಿಸಿದ್ದಾರೆ. ‘ದೇವರು ರುಜು ಮಾಡಿದರು’ ಎಂದು ಸಿನಿಮಾಗೆ ಹೆಸರಿಟ್ಟಿದ್ದಾರೆ. ವಿರಾಜ್ (Viraj) ಹೆಸರಿನ ಹೊಸ ಪ್ರತಿಭೆಯನ್ನು ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಶೀಘ್ರವೇ ಪ್ರಾರಂಭ ಆಗಲಿದೆ.

  • EXCLUSIVE:ಆಗಿದ್ದು ಎಂಗೇಜ್‌ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಲ್ಲ: ವೈಷ್ಣವಿ

    EXCLUSIVE:ಆಗಿದ್ದು ಎಂಗೇಜ್‌ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಲ್ಲ: ವೈಷ್ಣವಿ

    ಕಿರುತೆರೆಯ ಅಗ್ನಿಸಾಕ್ಷಿ (Agnisakshi), ಬಿಗ್ ಬಾಸ್ ಹೀಗೆ ಸಾಕಷ್ಟು ಸೀರಿಯಲ್ ಮೂಲಕ ಶೋ ಮೂಲಕ ಮನೆಮಾತಾದ ವೈಷ್ಣವಿ ಅವರಿಗೆ ನಿಶ್ಚಿತಾರ್ಥ ಆಗಿದೆ ಎಂಬ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ನಿಶ್ಚಿತಾರ್ಥದ ಸುದ್ದಿ ನಿಜಾನಾ ಎಂಬುದರ ಬಗ್ಗೆ ನಟಿ ವೈಷ್ಣವಿ ಪಬ್ಲಿಕ್ ಟಿವಿ ಡಿಜಿಟಲ್‌ಗೆ ಸ್ಪಷ್ಟನೆ ನೀಡಿದ್ದಾರೆ.

    ಬಿಗ್ ಬಾಸ್ (Bigg Boss) ನಂತರ ಕಿರುತೆರೆಯಿಂದ ದೂರ ಉಳಿದಿದ್ದ ನಟಿ ಮತ್ತೆ ಹೊಸ ಧಾರಾವಾಹಿ ಮೂಲಕ ವೈಷ್ಣವಿ ಕಂಬ್ಯಾಕ್ ಆಗಿದ್ದಾರೆ. ಈ ಮಧ್ಯೆ ನಟಿಯ ಎಂಗೇಜ್‌ಮೆಂಟ್ ವಿಚಾರ ಎಲ್ಲೆಡೆ ಸದ್ದು ಮಾಡುತ್ತಿದೆ. ಈ ಕುರಿತು ನಟಿ ವೈಷ್ಣವಿ ಮೌನ ಮುರಿದಿದ್ದಾರೆ. ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಹುಡುಗನ ಕಡೆಯವರು ಬಂದು ನೋಡಿ, ಮಾತುಕತೆ ಮಾಡಿರೋದು ನಿಜಾ ಆದರೆ ಇದು ಎಂಗೇಜ್‌ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಕೊಂಡಿಲ್ಲ ಎಂದಿದ್ದಾರೆ. ಇದನ್ನೂ ಓದಿ:‘ಡವ್ ಮಾಸ್ಟರ್’ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ

    ಮನೆಯವರು ನಿರ್ಧರಿಸಿರೋದರಿಂದ ಹುಡುಗ ಕೂಡ ನನಗೆ ಹೊಸ ವ್ಯಕ್ತಿ ಆಗಿರೋದ್ರಿಂದ ನನಗೂ ಕೊಂಚ ಸಮಯಾವಕಾಶ ಬೇಕಾಗಿದೆ. ನಾನಿನ್ನೂ ಈ ಮದುವೆಗೆ ಒಪ್ಪಿಗೆ ಸೂಚಿಸಿಲ್ಲ ಎಂದು ನಟಿ ಪಬ್ಲಿಕ್ ಟಿವಿ ಡಿಜಿಟಲ್‌ಗೆ ಸ್ಪಷ್ಟನೆ ನೀಡಿದ್ದಾರೆ.

    ಇನ್ನೂ ಹುಡುಗನ ಹೆಸರು ವಿಧ್ಯಾಭರಣ, ಬೆಂಗಳೂರಿನ ಮೂಲದ ಬ್ಯುಸಿನೆಸ್‌ಮ್ಯಾನ್ ಆಗಿದ್ದಾರೆ. 2018ರಲ್ಲಿ `ವಿರಾಜ್’ ಎಂಬ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ನಟಿ ಒಪ್ಪಿ ಮುಂದುವರಿದರೆ, ಚಂದನವನದಲ್ಲಿ ಮತ್ತೊಂದು ಜೋಡಿಯ ಮದುವೆಯನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು.

    ಶೃತಿ ರಿಪ್ಪನ್‌ಪೇಟೆ, ಪಬ್ಲಿಕ್‌ ಟಿವಿ ಡಿಜಿಟಲ್‌

    Live Tv
    [brid partner=56869869 player=32851 video=960834 autoplay=true]