Tag: ವಿರಾಜಪೇಟೆ

  • ಕೊಡಗಿನಲ್ಲಿ ಮೃತರ ಸಂಖ್ಯೆ 7ಕ್ಕೆ ಏರಿಕೆ : ಕುಶಾಲನಗರ – ಮೈಸೂರು ಸಂಪರ್ಕ ಕಡಿತ

    ಕೊಡಗಿನಲ್ಲಿ ಮೃತರ ಸಂಖ್ಯೆ 7ಕ್ಕೆ ಏರಿಕೆ : ಕುಶಾಲನಗರ – ಮೈಸೂರು ಸಂಪರ್ಕ ಕಡಿತ

    ಮಡಿಕೇರಿ: ವರುಣನ ಅಬ್ಬರಕ್ಕೆ ಕೊಡಗಿನಲ್ಲಿ ಸಾವಿನ ಸಂಖ್ಯೆ ಏರಿಕೆಯಾಗಿದೆ. ಈವರೆಗೆ 7 ಜನರು ಮೃತಪಟ್ಟಿದ್ದು, 8 ಮಂದಿ ಕಣ್ಮರೆಯಾಗಿದ್ದಾರೆ. ಕುಶಾಲನಗರದ ಕೊಪ್ಪ ಬಳಿ ಕಾವೇರಿ ನದಿಗೆ ಕಟ್ಟಲಾದ ಸೇತುವೆ ಮುಳುಗಡೆಯಾಗಿದೆ. ಪರಿಣಾಮ ಕುಶಾಲನಗರ- ಮೈಸೂರು ಸಂಪರ್ಕಿಸುವ ಹೆದ್ದಾರಿ ಬಂದ್ ಆಗಿದೆ.

    ಚಾರ್ಮಾಡಿ ಘಾಟಿ ಈಗಾಗಲೇ ಕುಸಿದಿದೆ. ಇಂದು ಸಕಲೇಶಪುರದ ಬಳಿ ಗುಡ್ಡ ಕುಸಿದ ಪರಿಣಾಮ ಮಡಿಕೇರಿ ಮೂಲಕ ಮಂಗಳೂರಿಗೆ ಹೋಗಬಹುದಾಗಿತ್ತು. ಆದರೆ ಈಗ ಕೊಪ್ಪ ಸೇತುವೆ ಮುಳುಗಡೆಯಾಗಿದೆ. ಕೊಡಗಿನಲ್ಲಿ ಮಳೆ ಜಾಸ್ತಿ ಆಗುತ್ತಿದೆ. ಮಳೆ ನಿಂತರೆ ಮಾತ್ರ ಸೇತುವೆಯ ಮೂಲಕ ಸಂಚಾರ ಮಾಡಬಹುದಾಗಿದೆ.

    ತೋರ ಗ್ರಾಮದ ತಾಯಿ ಮಮತಾ(40) ಹಾಗೂ ಮಗಳು ಲಿಖಿತ(15) ಮೃತರು ದುರ್ದೈವಿಗಳು. ಹರೀಶ್ ಕುಟುಂಬದ ನಾಲ್ವರು, ಪ್ರಭು ಕುಟುಂಬದ ನಾಲ್ವರು ಕಣ್ಮರೆಯಾಗಿದ್ದಾರೆ. ಈವರೆಗೆ ಎನ್‍ಡಿಆರ್ ಎಫ್, ಆರ್ಮಿ, ಪೊಲೀಸ್ ತಂಡವು ತೋರ ಗ್ರಾಮದಲ್ಲಿ 300 ಕುಟುಂಬಗಳನ್ನು ರಕ್ಷಣೆ ಮಾಡಿದೆ. ಆದರೆ ಪ್ರತಿಕೂಲ ಹವಾಮಾನ ಉಂಟಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಶನಿವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗುವುದು ಅಧಿಕಾರಿಗಳು ತಿಳಿಸಿದ್ದಾರೆ.

    ಮಡಿಕೇರಿಯಲ್ಲಿ ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು, ಎಲ್ಲಾ ತಾಲೂಕು ಅಧಿಕಾರಿಗಳಿಗೆ ಪರಿಹಾರ ಕಾರ್ಯಕೈಗೊಳ್ಳಲು 1 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕುಶಾಲನಗರ ಮತ್ತು ವಿರಾಜಪೇಟೆ ಪಟ್ಟಣ ಪಂಚಾಯಿತಿಗೆ ತಲಾ 10 ಲಕ್ಷ ರೂ. ನೀಡಲಾಗಿದೆ. ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಬೋಟ್ ನಿಂದ ಜನರ ಸ್ಥಳಾಂತರಕ್ಕೆ ಸಾಧ್ಯವಾಗದಿದ್ದರೆ ಏರ್ ಲಿಫ್ಟ್ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಪರಿಹಾರ ಕಾರ್ಯ ಕೈಗೊಳ್ಳಲು 100 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದರು.

    ಜಿಲ್ಲೆಯಲ್ಲಿ ಇದುವರೆಗೂ 25 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. 604 ಕುಟುಂಬಗಳ ಒಟ್ಟು 2,136 ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. 58 ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು, 14 ಕಡೆಗಳಲ್ಲಿ ಭೂಕುಸಿತ ಮತ್ತು ಪ್ರವಾಹದಿಂದಾಗಿ ಸಾರಿಗೆ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಭಾಗಮಂಡಲದ ಸಮೀಪ ಸಂಭವಿಸಿದ ಭೂಕುಸಿತದಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿ, ಮೃತ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದರು.

  • ಬಸ್ ಚಾಲಕನ ಬೇಜವಾಬ್ದಾರಿತನಕ್ಕೆ ವ್ಯಕ್ತಿಯ 2 ಕಾಲುಗಳೇ ಮುರಿಯಿತು!

    ಬಸ್ ಚಾಲಕನ ಬೇಜವಾಬ್ದಾರಿತನಕ್ಕೆ ವ್ಯಕ್ತಿಯ 2 ಕಾಲುಗಳೇ ಮುರಿಯಿತು!

    ಮಡಿಕೇರಿ: ಬಸ್ ಇಳಿದು ನಿಂತಿದ್ದ ವ್ಯಕ್ತಿ ಮೇಲೆ ಅದೇ ಬಸ್ ಚಕ್ರ ಹರಿದು ಗಂಭೀರ ಗಾಯಗೊಂಡ ಘಟನೆ ವಿರಾಜಪೇಟೆಯ ಕಡಂಗದಲ್ಲಿ ನಡೆದಿದೆ. ಮೈಜುಂ ಎನಿಸೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    39 ವರ್ಷದ ಬಿಶಾಲ್ ಗಂಭೀರ ಗಾಯಗೊಂಡ ವ್ಯಕ್ತಿ. ಬಿಶಾಲ್ ಬಸ್ಸಿನಲ್ಲಿ ಬಂದು ಇಳಿದು ನಿಂತಿದ್ದರು. ಈ ವೇಳೆ ಅದೇ ಬಸ್ ಅವರ ಮೇಲೆ ಹರಿದಿದೆ. ಪರಿಣಾಮ ಬಿಶಾಲ್ 2 ಕಾಲುಗಳ ಮೇಲೆ ಬಸ್ ಚಕ್ರ ಹರಿದಿದ್ದು, ಕಾಲುಗಳು ಮುರಿದಿವೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಬಿಶಾಲ್ ಅವರನ್ನು ಕೂಡಲೇ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.


    ಹಿಂದಕ್ಕೆ ನೋಡದೆ ರಿವರ್ಸ್ ತೆಗೆದ ಬಸ್ ಚಾಲಕನ ಬೇಜವಾಬ್ದಾರಿತನವೇ ಘಟನೆಗೆ ಕಾರಣ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾ ಏಸ್ ಮೇಲೆ ಮರಬಿದ್ದು ಓರ್ವ ಸಾವು, ಮೂವರ ಸ್ಥಿತಿ ಗಂಭೀರ

    ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾ ಏಸ್ ಮೇಲೆ ಮರಬಿದ್ದು ಓರ್ವ ಸಾವು, ಮೂವರ ಸ್ಥಿತಿ ಗಂಭೀರ

    ಮಡಿಕೇರಿ: ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನದ ಮೇಲೆ ಮರ ಬಿದ್ದ ಪರಿಣಾಮ ಕಾರ್ಮಿಕನೊಬ್ಬ ಮೃತಪಟ್ಟ ದುರ್ಘಟನೆ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ತಿತಿಮತಿ ಸಂಪರ್ಕ ರಸ್ತೆಯ ಹೊಸಳ್ಳಿ ಬಳಿ ನಡೆದಿದೆ.

    ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಗ್ರಾಮದ ಪಂಚವಳ್ಳಿ ನಿವಾಸಿ ರಾಜು (36) ಮೃತ ಕಾರ್ಮಿಕ. ಚಾಲಕ ಸ್ವಾಮಿ ಹಾಗೂ ಜೊತೆಯಲ್ಲಿದ್ದ ಸುನೀಲ್ (28) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಕಾರ್ಮಿಕರು ಪಾಲಿಬೆಟ್ಟ ಹೊಸಳ್ಳಿ ಪ್ರದೇಶದ ತೋಟದ ಕೆಲಸ ಮುಗಿಸಿ, ಪಿರಿಯಾಪಟ್ಟಣ ಸಮೀಪದ ಅನುಗೋಡುವಿನ ತಮ್ಮ ಊರಿಗೆ ಟಾಟ ಏಸ್ ವಾಹನದಲ್ಲಿ ತೆರಳುತ್ತಿದ್ದರು. ವಾಹನದಲ್ಲಿ ಸುಮಾರು 13 ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಪಾಲಿಬೆಟ್ಟ ತಿತಿಮತಿ ಸಂಪರ್ಕ ರಸ್ತೆಯ ಹೊಸಳ್ಳಿ ಬಳಿ ಬರುತ್ತಿದ್ದ ಟಾಟಾ ಏಸ್ ಮೇಲೆ ಮರ ಬಿದ್ದಿದ್ದು, ಚಾಲಕನ ಸಮೀಪವೇ ಕುಳಿತ್ತಿದ್ದ ರಜು ತಲೆಯ ಭಾಗಕ್ಕೆ ಮರ ಬಿದ್ದ ಪರಿಣಾಮ ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಭಾಗದಲ್ಲಿ ಕುಳಿತ್ತಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ. ಇವರು ದುಬಾರೆ ಎಸ್ಟೇಟ್‍ನ ಕಾರ್ಮಿಕರಾಗಿದ್ದು, ಅನುಗೋಡು ನಿವಾಸಿಗಳಾಗಿದ್ದಾರೆ.

    ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಸ್ವಾಮಿ, ಸುನೀಲ್ ಹಾಗೂ ಮತ್ತೊಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಉಳಿದಂತೆ ಸಣ್ಣ ಪುಟ್ಟ ಗಾಯವಾಗಿರುವ ಕಾರ್ಮಿಕರನ್ನು ಸಿದ್ದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಸಿದ್ದಾಪುರ ಪೊಲೀಸ್ ಠಾಣೆ ಎಸ್‍ಐ ಸುಬ್ರಹ್ಮಣಿ ಮತ್ತು ಸಿಬ್ಬಂದಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ: ಮನವೊಲಿಸಲು ತೆರಳಿದ್ದ ತಹಶೀಲ್ದಾರ್ ಗೆ ತರಾಟೆ

    ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ: ಮನವೊಲಿಸಲು ತೆರಳಿದ್ದ ತಹಶೀಲ್ದಾರ್ ಗೆ ತರಾಟೆ

    ಮಡಿಕೇರಿ: ಚುನಾವಣೆ ಬಹಿಷ್ಕರಿಸಿದ ಗ್ರಾಮಕ್ಕೆ ಮತದಾನ ಮಾಡುವಂತೆ ಮನವೊಲಿಸಲು ತೆರಳಿದ್ದ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ.

    ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಡಿಗೋಡು ಗ್ರಾಮದ ಜನರು ಸಿಟ್ಟಾಗಿ ತಹಶೀಲ್ದಾರ್ ಅವರನ್ನು ಪ್ರಶ್ನಿಸಿದ್ದಾರೆ.

    ಬಹಿಷ್ಕಾರ ಯಾಕೆ?
    ಗ್ರಾಮದಲ್ಲಿ ಮೂಲ ಸೌಕರ್ಯಗಳಿಲ್ಲ. ನದಿ ದಡದಲ್ಲಿ ವಾಸವಾಗಿರುವ ನೂರಾರು ಕುಟುಂಬಗಳು ಗ್ರಾಮವನ್ನು ಅಭಿವೃದ್ಧಿ ಪಡಿಸುವಂತೆ ಕಳೆದ ಹಲವು ವರ್ಷಗಳಿಂದಲೂ ಜಿಲ್ಲಾಡಳಿತವನ್ನು ಒತ್ತಾಯಿಸಿ ನಿರಂತರ ಪ್ರತಿಭಟನೆ ಮಾಡುತಿದ್ದರು. ಆದರೆ ಗ್ರಾಮಸ್ಥರ ಪ್ರತಿಭಟನೆಗೆ ಯಾರೂ ಕ್ಯಾರೇ ಎಂದಿರಲಿಲ್ಲ.

    ಪ್ರತಿಭಟನೆ ಮಾಡಿದರೂ ಯಾರು ನಮ್ಮ ಸಮಸ್ಯೆಗೆ ಸ್ಪಂದಿಸದ ಕಾರಣ ಗ್ರಾಮಸ್ಥರು ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ಎಚ್ಚರಿಕೆಯನ್ನು ಒಂದು ತಿಂಗಳ ಹಿಂದೆ ನೀಡಿದ್ದರು. ಆದರೂ ಜಿಲ್ಲಾಡಳಿತದ ಅಧಿಕಾರಿಗಳು ಗ್ರಾಮದತ್ತ ತಿರುಗಿ ನೋಡಿರಲಿಲ್ಲ. ನಿನ್ನೆ ಸಂಜೆ ತಹಸೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದರು. ಮತದಾನ ಮಾಡುವಂತೆ ಮನವೊಲಿಸಲು ಮುಂದಾದಾಗ ಗ್ರಾಮಸ್ಥರು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

  • ಕರುನಾಡಿನ ಕಾಶ್ಮೀರದಲ್ಲಿ ಬಿಸಿಯೇರಿಸಿದೆ ಪಾಲಿಟಿಕ್ಸ್..!

    ಕರುನಾಡಿನ ಕಾಶ್ಮೀರದಲ್ಲಿ ಬಿಸಿಯೇರಿಸಿದೆ ಪಾಲಿಟಿಕ್ಸ್..!

    ಕಾಫಿ ಘಮದ ನಡುವೆ ಕರಿ ಮೆಣಸಿನ ಘಾಟು. ಮಡಿಕೇರಿಯ ಚಳಿಗೆ ಇವೆರಡು ಡೆಡ್ಲಿ ಕಾಂಬಿನೇಶನ್ನು..! ಅರೆ ಮಲೆನಾಡು ಹಾಗೂ ಮಲೆನಾಡು ಪ್ರದೇಶ ಹೊಂದಿರೋ ಕೂರ್ಗ್ ಪ್ರವಾಸಿಗರ ಎವರ್ ಗ್ರೀನ್ ಹಾಟ್ ಸ್ಪಾಟ್..!ಎತ್ತ ನೋಡಿದ್ರೂ ಸದಾ ಹಿಮದ ಹೊದಿಕೆಯೇ ಆವರಿಸಿ ಶ್ವೇತ ಸುಂದರಿಯಂತೆ ಕಾಣೋ ಕರುನಾಡ ಕಾಶ್ಮೀರ ನಿತ್ಯ ಸುಮಂಗಲೆ. ಚುಮು ಚುಮು ಚಳಿ. ಅದಕ್ಕೆ ಹಿತವಾದ ಅನುಭವ ನೀಡೋ ಕಾಫಿ ವಾಹ್, ಸ್ವರ್ಗ ಅಂತೇನಾದ್ರೂ ಇದ್ರೆ ಇದೇ ಕಣ್ರೀ..ಮಡಿಕೇರಿಯ ಸೌಂದರ್ಯ ಒಂದು ರೀತಿಯಲ್ಲಿ ವರ್ಣನಾತೀತ ಅನುಭವ ಕೊಡುತ್ತೆ. ಇಂತಿಪ್ಪ ಮಡಿಕೇರಿಯಲ್ಲಿ ಈಗ ಚುನಾವಣೆಯಿಂದಾಗಿ ಬಿಸಿ ಏರಿದೆ.

    ಕೆಚ್ಚೆದೆಯ ಸಿಪಾಯಿಗಳಿಗೆ ಜನ್ಮವಿತ್ತ ವೀರಭೂಮಿ ಮಡಿಕೇರಿ..!
    ಮುತ್ತಿನ ಹಾರ ಸಿನಿಮಾದ ಮಡಿಕೇರಿ ಸಿಪಾಯಿ ಅನ್ನೋ ಹಾಡನ್ನು ಕೇಳದೇ ಇದ್ದವರು ಬಹಳ ವಿರಳ ಅನ್ಸುತ್ತೆ. ಇದೇ ಕೊಡಗಿನ ವೀರ ಯೋಧನ ಸುತ್ತ ಸುತ್ತೋ ಕಥೆ ಹೃದಯ ಕಲಕಿ ಬಿಡುತ್ತೆ. ಹೌದು.. ಕೊಡಗು ಅನ್ನೋ ಕರ್ನಾಟಕದ ಕಾಶ್ಮೀರದಲ್ಲಿ ಇಂದಿಗೂ ಮನೆ ಮನೆಗೊಬ್ಬರಂತೆ ಸೇನೆ ಸೇರುವವರನ್ನು ಕಾಣಬಹುದು. ಫೀಲ್ಡ್ ಮಾರ್ಷಲ್ ಕಾರಿಯಪ್ಪ, ಜನರಲ್ ತಿಮ್ಮಯ್ಯ ಹೀಗೆ ಅನೇಕ ವೀರರನ್ನ ಕೊಟ್ಟ ಕೊಡಗು ದೇಶ ರಕ್ಷಣೆಯ ವಿಚಾರ ಬಂದಾಗ ಸದಾ ಸಿದ್ಧ.

    ರಾಷ್ಟ್ರ ಕ್ರೀಡೆ ಹಾಕಿಯೇ ಕೊಡವರ ಹಾಟ್ ಫೇವರೇಟ್..!
    ನಮ್ಮ ದೇಶದ ಕ್ರೀಡೆ ಆಗಿದ್ರೂ ಕ್ರಿಕೆಟ್ ಬಗ್ಗೆಯೇ ನಮ್ಮ ಜನಕ್ಕೆ ಒಲವು ಜಾಸ್ತಿ. ಆದ್ರೆ, ಕೊಡವರು ಮಾತ್ರ ಇದ್ರಲ್ಲೂ ತಮ್ಮ ದೇಶಭಕ್ತಿಯನ್ನ ಮೆರೆದಿದ್ದಾರೆ. ಕ್ರಿಕೆಟ್‌, ವಾಲಿಬಾಲ್‌ ಟೂರ್ನಮೆಂಟ್ ಗಳು ಹೇಗೆ ನಡೆಯುತ್ವೋ ಕೊಡಗಿನಲ್ಲಿ ಮಾತ್ರ ಕೊಡವ ಮನೆತನಗಳ ನಡುವೆ ಹಾಕಿ ಟೂರ್ನಮೆಂಟ್ ಗಳು ನಡೆಯುತ್ತವೆ.

    ಚಾರಣಿಗರ ಪಾಲಿನ ಅಗಣಿತ ರಹಸ್ಯಗಳ ಹೂರಣ..ಪ್ರವಾಸಿಗರಿಗೆ ಇದು ನಿತ್ಯ ನೂತನ..!
    ಹನಿ ಮೂನ್ ಅಂದ್ರೆ ಇವತ್ತಿಗೂ ಕೊಡಗು ನವ ದಂಪತಿಗಳ ನೆಚ್ಚಿನ ತಾಣ. ಅದ್ರ ಹೊರತಾಗಿಯೂ ಚಾರಣಿಗರ, ಪ್ರವಾಸಿಗರ ಎಂದೂ ಮರೆಯಲಾಗದ ನೆನಪುಗಳ ಕಟ್ಟಿ ಕೊಡೋ ಸುಂದರ ಸ್ಥಳ. ಕೊಡಗಿನ ಜಿಲ್ಲಾ ಕೇಂದ್ರವಾದ ಮಡಿಕೇರಿಯಿಂದ ಎಂಟು ಕಿಲೋ ಮೀಟರ್ ದೂರದಲ್ಲಿದೆ ಅಬ್ಬಿ ಜಲಪಾತ. ಏಲಕ್ಕಿಯ ಹಾಗೂ ಕಾಫಿಯ ನವಿರಾದ ಘಮವನ್ನ ಆಸ್ವಾದಿಸುತ್ತಾ ಸ್ವಲ್ಪವೇ ದೂರ ನಡೆದರೆ ಸಿಗುತ್ತಾಳೆ ಹಾಲಿನ ಬಣ್ಣದ ಸುಂದರಿ ಅಬ್ಬಿ. ಬಿರು ಬೇಸಿಗೆಯಲ್ಲೂ ಅಬ್ಬಿ ಮಾತ್ರ ಸದಾ ತುಂಬಿ ಹರಿಯುತ್ತಾಳೆ.

    ಕೊಡಗಿನ ಮತ್ತೊಂದು ಅಟ್ರಾಕ್ಟಿವ್ ಜಾಗ ಅಂದ್ರೆ ರಾಜಾ ಸೀಟ್. ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿರೋ ಕಥೆಯ ಪ್ರಕಾರ ರಾಜ ಮಹಾರಾಜರುಗಳು ಇಲ್ಲಿ ಸಂಜೆಯ ವಾಯುವಿಹಾರಕ್ಕೆ ಅಂತಾ ಬರ್ತಿದ್ರಂತೆ. ಹೀಗಾಗಿ ಇದಕ್ಕೆ ಮುಂದೆ ರಾಜಾಸ್ ಸೀಟ್ ಅನ್ನೋ ಹೆಸರು ಬಂತು. ಅದುವೇ ಮುಂದೆ ರಾಜಾ ಸೀಟ್ ಆಗಿದ್ದು ಈಗ ಇತಿಹಾಸ. ಇಲ್ಲಿನ ಸೂರ್ಯಾಸ್ತವನ್ನು ನೋಡೋದೇ ಮನಸ್ಸಿಗೆ ಮುದ ಕೊಡುತ್ತದೆ.

    ಕನ್ನಡನಾಡಿನ ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿ. ಏಳು ಪವಿತ್ರ ನದಿಗಳಲ್ಲಿ ಕಾವೇರಿಯ ಹೆಸರೂ ಉಲ್ಲೇಖವಾಗಿದೆ. ಬ್ರಹ್ಮಗಿರಿ ಬೆಟ್ಟ ಸಮುದ್ರ ಮಟ್ಟದಿಂದ 4500 ಅಡಿ ಎತ್ತರವಿದ್ದು ಇಲ್ಲೇ ಕಾವೇರಿ ಉಗಮವಾಗುತ್ತಾಳೆ. ತಲಕಾವೇರಿ ಉಗಮಸ್ಥಾನದ ದೊಡ್ಡ ಕೊಳದಲ್ಲಿ ಭಕ್ತರು ತೀರ್ಥ ಸ್ನಾನ ಮಾಡೋದು ಸರ್ವೇ ಸಾಮಾನ್ಯ. ತುಲಾ ಸಂಕ್ರಮಣದಂದು ತೀರ್ಥೋದ್ಭವವಾಗುತ್ತೆ. ಇನ್ನು, ಕಾವೇರಿ ಹುಟ್ಟಿದ ಜಾಗ ಬ್ರಹ್ಮಗಿರಿ, ಇಲ್ಲೇ ಸಪ್ತ ಋಷಿಗಳು ಯಜ್ಞ ಮಾಡಿದ್ರು ಅನ್ನೋ ಉಲ್ಲೇಖಗಳಿವೆ.

    ಮಡಿಕೇರಿಯ ಮಧ್ಯಭಾಗದಲ್ಲಿರೋ ಪ್ರಮುಖ ಆಕರ್ಷಣೆ ಅಂದ್ರೆ 19ನೇ ಶತಮಾನದ ಕೋಟೆ. ಒಂದು ಮಂದಿರ ಹಾಗೂ ಕಾರಾಗೃಹ ಈ ಕೋಟೆಯ ಒಳಗಿದೆ. 1814ರಲ್ಲಿ ಲಿಂಗರಾಜೇಂದ್ರ ಒಡೆಯರ್‌ ಈ ಕೋಟೆಯನ್ನು ಕಟ್ಟಿಸಿದರು. ಈ ಕೋಟೆಯ ಮೇಲೆ ನಿಂತು ನೋಡಿದ್ರೆ ಮಡಿಕೇರಿಯ ಸೌಂದರ್ಯ ಗೋಚರಿಸುತ್ತೆ.

    ಕಾವೇರಿ, ಕನ್ನಿಕಾ ಮತ್ತು ಸುಜ್ಯೋತಿ ಅನ್ನೋ ಮೂರು ನದಿಗಳು ಸಂಧಿಸೋ ಜಾಗ ಭಾಗಮಂಡಲ. ಈ ತ್ರಿವೇಣಿ ಸಂಗಮದಲ್ಲಿ ಕೇರಳ ಮಾದರಿಯ ಆಕರ್ಷಕ ದೇವಸ್ಥಾನವಿದೆ. ಭಾಗ ಮಂಡಲದ ತ್ರಿವೇಣಿ ಸಂಗಮದಲ್ಲಿ ಕೇರಳೀಯ ಶೈಲಿಯ ಆಕರ್ಷಕ ದೇವಸ್ಥಾನವಿದೆ. ಇನ್ನು, ಕುಶಾಲನಗರ ಸಮೀಪ ಕಾವೇರಿ ನದಿಗೆ ಕಟ್ಟಲಾದ ಹಾರಂಗಿ ಜಲಾಶಯವು ಮತ್ತೊಂದು ಪ್ರವಾಸಿ ಸ್ಥಳ.

    ಕಾವೇರಿ ನದಿ ತಟದಲ್ಲಿರೋ ದುಬಾರೆ ಆನೆಗಳ ತರಬೇತಿ ಕೇಂದ್ರ ಬಹಳ ಆಕರ್ಷಿಸುತ್ತೆ. ಕಾಡಿನಿಂದ ನಾಡಿಗೆ ಬಂದು ತೊಂದರೆ ಕೊಡೋ ಆನೆಗಳನ್ನು ಇಲ್ಲಿಗೆ ಕರೆತಂದು ಪಳಗಿಸಲಾಗಿಸುತ್ತದೆ. ಪ್ರವಾಸೋಧ್ಯಮ ನಿಟ್ಟಿನಿಂದ ಇಲ್ಲಿ ಮಾವುತರ ಸಹಾಯದಿಂದ ಆನೆ ಸವಾರಿಗೂ ಕೂಡ ಸರ್ಕಾರ ಅನುಮತಿ ನೀಡಿದೆ. ಬೋಟಿಂಗ್‌ ಇಲ್ಲಿನ ವಿಶೇಷ. ಸಂಜೆ ವೇಳೆ ಆನೆಗಳು ಸ್ನಾನಕ್ಕೆ ಬರೋದನ್ನ ನೋಡೋದೇ ಚೆಂದ. ಅಂದ ಹಾಗೆ ಇದು ಸಿದ್ದಾಪುರ-ಕುಶಾಲನಗರ ರಸ್ತೆಯಲ್ಲಿದೆ.

    ಕೊಡವರ ಆಚರಣೆ, ಭಾಷೆ, ವೇಷ ಭೂಷಣ ಸಖತ್ ಡಿಫರೆಂಟ್..!
    ಕೊಡವರದ್ದು ಕ್ಷಾತ್ರ ಧರ್ಮ. ಹೀಗಾಗಿ ಧೈರ್ಯ ಅನ್ನೋದು ರಕ್ತದಲ್ಲೇ ಬಂದಿದೆ. ಪ್ರಕೃತಿ ಹಾಗೂ ಪೂರ್ವಜರನ್ನು ಪೂಜೆ ಮಾಡೋದನ್ನ ಇವರು ಪಾಲಿಸಿಕೊಂಡು ಬಂದಿರೋದು. ಮಾತೃ ಭಾಷೆ ಕೊಡವ ತಕ್ಕ್. ಕೈಲ್‌ ಪೊಳ್ದ್, ಕಾವೇರಿ ಸಂಕ್ರಮಣ ಹಾಗೂ ಪುತ್ತರಿ ಹಬ್ಬವನ್ನು ಇಲ್ಲಿ ಕೊಡವರು ಬಹಳ ಸಂಭ್ರಮದಿಂದ ಆಚರಿಸ್ತಾರೆ. ಕುಪ್ಯ, ಚೇಲೆ, ಪೀಚೆಕತ್ತಿ, ಮಂಡೆ ತುಣಿ ಅನ್ನೋ ವಿಭಿನ್ನ ಸಾಂಪ್ರದಾಯಿಕ ವಸ್ತ್ರವನ್ನ ಪುರುಷರು ತೊಡ್ತಾರೆ. ಮಹಿಳೆಯರು ಸೀರೆ ಉಡುವ ಶೈಲಿಗೆ ಕೊಡವ ಪೊಡೆಯ ಅನ್ನೋದಾಗಿ ಕರೆಯಲಾಗುತ್ತೆ. ಪತ್ತಾಕ್, ಜೋಮಾಲೆ, ಕೊಕ್ಕೆತತ್ತಿ, ಪೊಮ್ಮಾಲೆ, ಅಡ್ಡಿಗೆ ಹೀಗೆ ವಿವಿಧ ರೀತಿಯ ಆಭರಣಗಳಿಂದ ತಮ್ಮನ್ನ ತಾವು ಸಿಂಗರಿಸಿಕೊಳ್ತಾರೆ.

    ಬಾಯಲ್ಲಿ ನೀರೂರಿಸುತ್ವೆ ಕೊಡವರ ತಿಂಡಿ ತಿನಿಸುಗಳು
    ಅನ್ನ, ಗಂಜಿ, ಹಿಟ್ಟಿನಿಂದ ರೊಟ್ಟಿ ಮತ್ತು ನೂಪುಟ್ಟ್, ತರಿಯಿಂದ ಪಾಪುಟ್ಟ್ ಮತ್ತು ಕಡಂಬುಟ್ಟ್, ಇತ್ಯಾದಿಗಳಲ್ಲದೆ, ವಿಶೇಷ ಸಂದರ್ಭಗಳಲ್ಲಿ ತುಪ್ಪದನ್ನ ಮಾಡುತ್ತಾರೆ. ತಳಿಯಪುಟ್ಟ್ ಮತ್ತು ದೋಸೆ ಕೊಡವರ ಸಾಂಪ್ರದಾಯಿಕ ಸೈಡ್ ಢಿಶ್ ಜೊತೆ ಆಸ್ವಾದಿಸ್ಲೇಬೇಕು. ಇವರು ಶುದ್ಧ ಮಾಂಸಾಹಾರಿಗಳು. ಕೊಡವ ಶೈಲಿಯ ಪಂದಿಕರಿ ಹಾಗೂ ಅಕ್ಕಿ ರೊಟ್ಟಿ ಒಳ್ಳೇ ಕಾಂಬಿನೇಷನ್.

    ಕರ್ನಾಟಕದ ಕಾಶ್ಮೀರದಲ್ಲಿ ಬೊಂಬಾಟ್ ರಾಜಕೀಯ..!
    ಕಳೆದ ಹಲವಾರು ದಶಕಗಳಿಂದ ಕೊಡಗು ಪ್ರತ್ಯೇಕ ರಾಜ್ಯವಾಗಬೇಕು ಅನ್ನೋ ಕೂಗು ಕೇಳ್ತಾನೇ ಇದೆ. ಇದಕ್ಕೆ ಸಂಬಂಧ ಪಟ್ಟಂತೆ ಹಲವಾರು ಹೋರಾಟಗಳೂ ನಡೆದು ಹೋಗಿವೆ. ಇದೂ ಕೂಡಾ ಇಲ್ಲಿ ರಾಜಕೀಯದ ಅಸ್ತ್ರವಾಗಿ ದಶಕಗಳೇ ಕಳೆದಿವೆ. ಅಂದ ಹಾಗೆ, ಕೊಡಗಿನಲ್ಲಿ ಕಾಫಿ ಹಾಗೂ ಕಾಳು ಮೆಣಸು ಪ್ರಧಾನ ಬೆಳೆ. ಆದ್ರೆ, ಇವೆಲ್ಲದ್ರ ನಡುವೆ ಅನೇಕ ಸಮಸ್ಯೆಗಳು ಇಲ್ಲಿ ಬಾಧಿಸ್ತಿವೆ. ಕಾಡಾನೆ ಹಾವಳಿ, ಬೇಸಿಗೆಯಲ್ಲಿ ಕುಡಿಯೋ ನೀರಿನ ಸಮಸ್ಯೆ, ಮಲ್ಲಳ್ಳಿ ಜಲಪಾತದ ತೂಗು ಸೇತುವೆ ಬೇಡಿಕೆ,

    ಕೊಡಗಿನಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿವೆ. ಮಡಿಕೇರಿ ಹಾಗೂ ವಿರಾಜ ಪೇಟೆ. ಮಾಜಿ ಮುಖ್ಯಮಂತ್ರಿ ದಿ. ಆರ್ ಗುಂಡೂರಾವ್ ಇಲ್ಲಿಂದ ಗೆದ್ದು ಮುಂದೆ ಸಿಎಂ ಆಗಿದ್ದು ಇತಿಹಾಸ. ಇಲ್ಲಿ ಅರೆ ಒಕ್ಕಲಿಗ ಗೌಡ್ರು ಪ್ರಾಬಲ್ಯ ಹೊಂದಿದ್ರೂ ಕೊಡವ, ಬ್ರಾಹ್ಮಣ ಹಾಗೂ ಇತರರೇ ಗೆದ್ದಿದ್ದಾರೆ.

    ಮಡಿಕೇರಿಯ ಕೇರಿ ಏರೋ ದಿಲ್ ದಾರ್ ಯಾರು..?
    2013ರಲ್ಲಿ ಬಿಜೆಪಿಯಿಂದ ಕಂಟೆಸ್ಟ್ ಮಾಡಿದ್ದ ಅಪ್ಪಚ್ಚು ರಂಜನ್ 56,696 ಮತಗಳನ್ನು ಗಳಿಸಿ ಮಡಿಕೇರಿ ಜನರ ಕೃಪೆಗೆ ಪಾತ್ರರಾಗಿದ್ರು. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಜೀವಿಜಯ 4000 ಮತಗಳ ಅಂತರದಿಂದ ಸೋತರೂ ಟಫ್ ಫೈಟ್ ಕೊಟ್ಟಿದ್ರು. ಕಾಂಗ್ರೆಸ್ ನ ಕೆ.ಎಂ ಲೋಕೇಶ್ 21% ವೋಟು ಗಳಿಸಿದ್ರು. ಈ ಬಾರಿ ಬಿಜೆಪಿ ಗೆಲ್ಲೋ ಲಕ್ಷಣಗಳಿದ್ರೂ ಜೆಡಿಎಸ್ ನಿಂದ ಮತ್ತೆ ಬಲವಾದ ಸ್ಪರ್ಧೆ ಒಡ್ಡೋ ಎಲ್ಲಾ ನಿರೀಕ್ಷೆಗಳೂ ಕಾಣಿಸ್ತಿವೆ. ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣ, ಟಿಪ್ಪು ಜಯಂತಿ ಆಚರಣೆ ವಿವಾದಗಳು ತನಗೆ ಪ್ಲಸ್ ಆಗಬಹುದು ಅನ್ನೋ ನಿರೀಕ್ಷೆ ಬಿಜೆಪಿಯದ್ದು. ಹಾಗಾಗಿ ಈ ಬಾರಿ ಬಿಜೆಪಿ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದೆ. ಈ ಬಾರಿ ಕಾಂಗ್ರೆಸ್ ನಿಂದ  ಕೆಪಿ ಚಂದ್ರಕಲಾ ಅಖಾಡದಲ್ಲಿದ್ದಾರೆ.

    ವಿರಾಜಪೇಟೆಯಲ್ಲಿ ರಾರಾಜಿಸೋರು ಯಾರು..?
    ವಿರಾಜಪೇಟೆಯಿಂದ ಈ ಬಾರಿ ಜೆಡಿಎಸ್ ಮೊದಲೇ ಟಿಕೆಟ್ ಘೋಷಣೆ ಮಾಡಿಯಾಗಿತ್ತು. ರೈತ ಪರ ಹೋರಾಟಗಾರ ಸಂಕೇತ್ ಪೂವಯ್ಯ ಕಣದಲ್ಲಿದ್ದಾರೆ. ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಮಾದಪ್ಪ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯ್ತು. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹಾಲಿ ಶಾಸಕ ಕೆಜಿ ಬೋಪಯ್ಯ 67,250 ಮತಗಳನ್ನು ಗಳಿಸಿ ವಿಜಯದ ನಗೆ ಬೀರಿದ್ರು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಬಿಟಿ ಪ್ರದೀಪ್ ಎರಡನೇ ಸ್ಥಾನ ಪಡೆಯಲಷ್ಟೇ ಶಕ್ತರಾದ್ರು. ಈ ಬಾರಿ ಕಾಂಗ್ರೆಸ್ ನಿಂದ ಅರುಣ್ ಮಾಚಯ್ಯ ಸ್ಪರ್ಧಿಸ್ತಾ ಇದ್ದಾರೆ. ಹಾಗಾದ್ರೆ, ಈ ಬಾರಿ ವಿರಾಜ ಪೇಟೆಯ ಗದ್ದುಗೆಯಲ್ಲಿ ವಿರಾಜಮಾನರಾಗೋಕೆ ಯಾರಿಗೆ ಅವಕಾಶ ಮಾಡಿಕೊಡ್ತಾರೆ ಅನ್ನೋದಷ್ಟೇ ಕುತೂಹಲ.

  • ನಡುರಸ್ತೆಯಲ್ಲಿ ಕಿಸ್ಸಿಂಗ್ ಸೀನ್ – ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

    ನಡುರಸ್ತೆಯಲ್ಲಿ ಕಿಸ್ಸಿಂಗ್ ಸೀನ್ – ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

    ಮಡಿಕೇರಿ: ಪ್ರೇಮಿಗಳಿಬ್ಬರು ನಡುರಸ್ತೆಯಲ್ಲಿ ಬಲೂನ್ ಮರೆಮಾಡಿ ಕಿಸ್ ಕೊಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೊಡಗು ಜಿಲ್ಲೆ ವಿರಾಜಪೇಟೆಯ ಹೃದಯಭಾಗ ಗಡಿಯಾರ ಕಂಬದ ಬಳಿ ಈ ಘಟನೆ ನಡೆದಿದೆ. ಕಿಸ್ ಕೊಡೋದನ್ನ ನೋಡಲು ಜನ ಜಮಾಯಿಸಿದ್ದು, ಅಲ್ಲದೇ ಆ ದೃಶ್ಯವನ್ನು ಮೊಬೈಲ್‍ನಲ್ಲಿ ಚಿತ್ರಿಸಿಕೊಂಡಿದ್ದಾರೆ. ಈ ಕಿಸ್ಸಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಇದೊಂದು ಸಿನಿಮಾ ಚಿತ್ರೀಕರಣದ ಸೀನ್ ಅನ್ನೋದು ಮಾತ್ರ ಇದನ್ನ ಶೇರ್ ಮಾಡುತ್ತಿರೊ ಹಲವರಿಗೆ ಗೊತ್ತಿಲ್ಲ. ನಿರ್ದೇಶಕ ಓಂ ಪ್ರಕಾಶ್‍ರ ಹೊಸ ಸಿನಿಮಾ ಕೊಡಗಿನಲ್ಲಿ ಚಿತ್ರೀಕರಣವಾಗುತ್ತಿದೆ. ಈ ಸಿನಿಮಾಕ್ಕಾಗಿ ನಾಯಕ ಕೃಷ್ಣ, ನಾಯಕಿ ಕೃತಿಕಾ ರಸ್ತೆಯಲ್ಲಿ ಕಿಸ್ ಮಾಡಿದ್ದಾರೆ.

  • ಕತ್ತಲ ಕೋಣೆಯಲ್ಲಿ ಬೆತ್ತಲಾಗುತ್ತಿದ್ದ ಡೋಂಗಿ ಬಾಬಾ ಇದೀಗ ಪೊಲೀಸರ ಅತಿಥಿ

    ಕತ್ತಲ ಕೋಣೆಯಲ್ಲಿ ಬೆತ್ತಲಾಗುತ್ತಿದ್ದ ಡೋಂಗಿ ಬಾಬಾ ಇದೀಗ ಪೊಲೀಸರ ಅತಿಥಿ

    ಮಡಿಕೇರಿ: ಮೂರು ತಿಂಗಳ ಹಿಂದೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೊಂಡಂಗೇರಿ ಗ್ರಾಮಕ್ಕೆ ಆಗಮಿಸಿದ ಡೋಂಗಿ ಬಾಬಾ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ಈ ಡೋಂಗಿ ಬಾಬಾ ಇಕ್ಬಾಲ್ ಬಾಬಾ ಎಂದು ತನ್ನನ್ನು ಪರಿಚಯ ಮಾಡಿಕೊಂಡು ಬಾಡಿಗೆ ಕಟ್ಟಡವೊಂದರಲ್ಲಿ ತನ್ನ ಕಾರ್ಯ ಚಟುವಟಿಕೆ ಪ್ರಾರಂಭಿಸಿದ್ದ. ಕತ್ತಲು ಕವಿದ ಅಮಾಯಕರ ಬಾಳಿನಲ್ಲಿ ಬೆಳಕು ಚೆಲ್ಲುತ್ತೇನೆಂದು ಬೊಗಳೆ ಬಿಡುತ್ತಾ ಕತ್ತಲ ಕೋಣೆಯೊಂದರಲ್ಲಿ ಕುಳಿತು ಮಂತ್ರ ಮತ್ತು ಮೈ ಸವರುವ ತಂತ್ರ ಶುರುವಚ್ಚಿಕೊಂಡಿದ್ದ. ಮಹಿಳಾ ಗಿರಾಕಿಗಳೇ ಹೆಚ್ಚಾಗಿರುವ ಬಾಬಾ ತನ್ನ ಕತ್ತಲ ಕೋಣೆಯಲ್ಲಿ ಬೆತ್ತಲಾಗುತ್ತಿದ್ದಾನೆ ಎಂಬುವುದನ್ನರಿತ ಕೊಂಡಂಗೇರಿ ನಿವಾಸಿಗಳು, ಆತನ ಅರಮನೆ ಒಳಹೊಕ್ಕಾಗ ಬಾಬಾನ ಬೆತ್ತಲೆ ರಹಸ್ಯ ಬಯಲಾಗಿದೆ. ಬಳಿಕ ಬಾಬಾನನ್ನು ಹಿಡಿದು ಹಿಗ್ಗಾ-ಮುಗ್ಗಾ ಥಳಿಸಿದ ಗ್ರಾಮಸ್ಥರು ಆತನನ್ನು ಸಿದ್ದಾಪುರ ಪೊಲೀಸರಿಗೆ ಒಪ್ಪಿಸಿದ್ದಾರೆ.

    ನಮ್ಮ ದೇಶದಲ್ಲಿ ಮೂಢ ನಂಬಿಕೆಗಳ ಬೇರು ಗಟ್ಟಿ ಇರುವವರೆಗೂ ಬಾಬಾ ರಾಮ-ರಹೀಮರಂತಹ ಕಾಮುಕ ಮರಗಳು ಬೃಹದಾಕಾರವಾಗಿ ಬೆಳೆಯುತ್ತಿರುತ್ತವೆ. ಆದ್ದರಿಂದ ಇಂತಹ ಬಾಬಾರನ್ನು ಮೊಳಕೆಯಲ್ಲಿಯೇ ಚಿವುಟಬೇಕಾದ ಅನಿವಾರ್ಯತೆ ಇದೆ. ಅದನ್ನು ಮಾಡಿಸಬೇಕು ಅಂತ ಕೊಂಡಂಗೇರಿ ಗ್ರಾಮಸ್ಥರು ಹೇಳಿದ್ದಾರೆ.

    ಸದ್ಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಸೋಮವಾರ ಕಿರಿಕ್ ಜೋಡಿಗೆ ಎಂಗೇಜ್‍ಮೆಂಟ್:  ವಿರಾಜಪೇಟೆಯಲ್ಲಿ ಸಕಲ ಸಿದ್ಧತೆ

    ಸೋಮವಾರ ಕಿರಿಕ್ ಜೋಡಿಗೆ ಎಂಗೇಜ್‍ಮೆಂಟ್: ವಿರಾಜಪೇಟೆಯಲ್ಲಿ ಸಕಲ ಸಿದ್ಧತೆ

    ಮಡಿಕೇರಿ: ಸ್ಯಾಂಡಲ್‍ವುಡ್‍ಗೆ ಬಿಗ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದ ಕಿರಿಕ್ ಜೋಡಿಗಳಾದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಈಗ ತಾರಾ ಜೋಡಿಗಳಾಗುತ್ತಿದ್ದು, ಅವರ ಮದುವೆ ನಿಶ್ಚಿತಾರ್ಥ ಸಮಾರಂಭಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ.

    ರಶ್ಮಿಕಾ ಹುಟ್ಟೂರು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸೆರೆನಿಟಿ ಹಾಲ್ ನಲ್ಲಿ ಸೋಮವಾರ ಸಂಜೆ 6 ಗಂಟೆಯಿಂದ ನಿಶ್ಚಿತಾರ್ಥ ಕಾರ್ಯಕ್ರಮ ಆರಂಭವಾಗಲಿದೆ. ಕೊಡವ ಹಾಗೂ ಬಂಟ್ಸ್ ಶಾಸ್ತ್ರದ ಪ್ರಕಾರ ಸಮಾರಂಭ ನಡೆಯಲಿದೆ.

    ರಕ್ಷಿತ್ ಮತ್ತು ರಶ್ಮಿಕಾ ವಜ್ರದ ಉಂಗುರ ಬದಲಾಯಿಸಿಕೊಳ್ಳಲಿದ್ದಾರೆ. ಶ್ರದ್ಧಾ ಪೊನ್ನಪ್ಪ ವಿನ್ಯಾಸ ಮಾಡಿರುವ ಉಡುಗೆಯಲ್ಲಿ ರಶ್ಮಿಕಾ ಕಂಗೊಳಿಸಿದರೆ, ರಕ್ಷಿತ್ ತಾವೇ ಡಿಸೈನ್ ಮಾಡಿರುವ ವಿಶೇಷ ವಿನ್ಯಾಸದ ಸೂಟ್ ಧರಿಸಲಿದ್ದಾರೆ. ಈಗಾಗಲೇ ಕಿರಿಕ್ ಪಾರ್ಟಿ ಚಿತ್ರತಂಡ ವಿರಾಜಪೇಟೆಗೆ ಆಗಮಿಸಿದೆ. ಸೋಮವಾರ ಸಂಬಂಧಿಕರು ಆಗಮಿಸಲಿದ್ದಾರೆ.

    ಈ ನಿಶ್ಚಿತಾರ್ಥ ಸಮಾರಂಭ ಎರಡೂ ಕುಟುಂಬಗಳ ಪರಿಚಯಕ್ಕಾಗಿಯೇ ಮಾಡಿರುವ ಪಾರ್ಟಿ ಆಗಿದ್ದು ಸಿನಿಮಾ ಗಣ್ಯರನ್ನು ಆಹ್ವಾನಿಸಿಲ್ಲ ಎಂದು ರಕ್ಷಿತ್ ಕುಟುಂಬಸ್ಥರು ತಿಳಿಸಿದ್ದಾರೆ. ರಕ್ಷಿತ್ ಅವರ ಅವರ ಊರಿನಿಂದ ಕುಟುಂಬಸ್ಥರು, ಸ್ನೇಹಿತರು ಭಾನುವಾರ ರಾತ್ರಿ ವಿರಾಜಪೇಟೆಗೆ ಆಗಮಿಸಿದ್ದು, ಅವರಿಗೆ ರೆಸಾರ್ಟ್ ಮತ್ತು ಹೋಮ್ ಸ್ಟೇ ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

    ಸುಮಾರು 1500 ಮಂದಿ ಅತಿಥಿಗಳನ್ನು ಆಹ್ವಾನಿಸಲಾಗಿದ್ದು ಎರಡೂ ಕುಟುಂಬಗಳ ಸಂಬಂಧಿಕರಿಗೆ ವಿಶೇಷ ಔತಣಕೂಟವನ್ನು ಏರ್ಪಡಿಸಲಾಗಿದೆ. ಕರಾವಳಿ ಖಾದ್ಯಗಳ ಜೊತೆಗೆ ಕೂರ್ಗ್‍ನ ಸ್ಪೆಷಲ್ ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತದೆ. ಎರಡೂ ಕಡೆಯ ಜನರು ಅವರಿಗೆ ಇಷ್ಟ ಬಂದ ಖಾದ್ಯಗಳನ್ನು ಸವಿಯಲು ಇಲ್ಲಿ ಅವಕಾಶವಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಇದನ್ನೂ ಓದಿ: ಮದ್ವೆಯಾದ ಬಳಿಕ ಆ್ಯಕ್ಟ್ ಮಾಡ್ತೀರಾ? ಲವ್ ಆಗಿದ್ದು ಹೇಗೆ? ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ರು ರಶ್ಮಿಕಾ

     

    https://www.youtube.com/watch?v=ESowcly8f7s

    https://www.youtube.com/watch?v=cfYkNs_ZyD0

    https://www.youtube.com/watch?v=uh5_9oujdto

    https://www.youtube.com/watch?v=rmB-D2bhHUM

    ರಷ್ಮಿಕಾ ಮಂದಣ್ಣ ಸಂದರ್ಶನದ ಫುಲ್ ವಿಡಿಯೋ ನೋಡಿ.

    ಲವ್ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದು ಹೀಗೆ…

    https://www.youtube.com/watch?v=jzSaQ0QLDCE

  • ವಿದ್ಯುತ್ ಸ್ಪರ್ಶಿಸಿ ಎರಡು ಆನೆ ಸಾವು-ಸಂಗಡಿಗರ ಸಾವಿನಿಂದ ಕೆಂಗೆಟ್ಟು ಘೀಳಿಡುತ್ತಿದೆ ಮತ್ತೊಂದು ಆನೆ

    ವಿದ್ಯುತ್ ಸ್ಪರ್ಶಿಸಿ ಎರಡು ಆನೆ ಸಾವು-ಸಂಗಡಿಗರ ಸಾವಿನಿಂದ ಕೆಂಗೆಟ್ಟು ಘೀಳಿಡುತ್ತಿದೆ ಮತ್ತೊಂದು ಆನೆ

    ಮಡಿಕೇರಿ: ವಿದ್ಯುತ್ ಸ್ಪರ್ಶದಿಂದ ಎರಡು ಕಾಡಾನೆಗಳು ಸಾವನಪ್ಪಿದ್ದು, ಮತ್ತೊಂದು ಆನೆ ತನ್ನ ಸಂಗಡಿಗರ ಸಾವಿನಿಂದ ಕೆಂಗೆಟ್ಟು ಘೀಳಿಡುತ್ತಿದೆ.

    ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಣ್ಣಂಗಾಲ ಗ್ರಾಮದ ತೋಟವೂಂದರಲ್ಲಿ ಬೈನೆ ಮರ ತಿನ್ನಲು ಬಂದು ವಿದ್ಯುತ್ ತಂತಿ ತಲುಗಿ ಸಾವನ್ನಪ್ಪಿದೆ. ಆನೆಗಳು ಗ್ರಾಮದ ಪಾಳುಬಿದ್ದ ತೋಟವೊಂದಕ್ಕೆ ಬಂದು ಬೈನೆಮರದ ಎಲೆಯನ್ನು ತಿನ್ನಲು ಮರವನ್ನು ಬೀಳಿಸಿವೆ. ಮರ ನೇರವಾಗಿ ವಿದ್ಯುತ್ ತಂತಿಗಳ ಮೇಲೆಯೇ ಬಿದ್ದಿದ್ದರಿಂದ ವಯರ್‍ಗಳು ತುಂಡಾಗಿ ನೆಲಕ್ಕೆ ಬಿದ್ದಿವೆ. ಈ ವೇಳೆ ಸ್ಥಳದಲ್ಲಿದ್ದ ಆನೆಗಳು ತಂತಿಯನ್ನು ತುಳಿದಿದ್ದರಿಂದ ಸಾವನ್ನಪ್ಪಿವೆ ಎಂದು ಕೆಇಬಿ ಸಹಾಯಕ ಇಂಜಿನೀಯರ್ ಸುರೇಶ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಆಹಾರಕ್ಕಾಗಿ ಒಟ್ಟು ನಾಲ್ಕು ಆನೆಗಳು ಬಂದಿದ್ದು, ಅವುಗಳಲ್ಲಿ ಎರಡು ಸಾವನ್ನಪ್ಪಿವೆ. ಒಂದು ಆನೆ ಸಂಗಡಿಗರ ಸಾವಿನಿಂದ ಘೀಳಿಡುವ ದೃಶ್ಯ ಮನಕಕುವಂತಿತ್ತು. ಮರಣೋತ್ತರ ಪರೀಕ್ಷೆಯ ನಂತರ ಆನೆಗಳ ಮೃತದೇಹವನ್ನು ಸ್ಥಳಾಂತರಿಸಲಾಗುತ್ತದೆ ಎಂದು ಅರಣ್ಯ ಅಧಿಕಾರಿ ಗೋಪಾಲ್ ತಿಳಿಸಿದ್ದಾರೆ.

    https://www.youtube.com/watch?v=pDw2yyYgAHI

     

  • ತಾಯಿಯಿಂದ ಬೇರ್ಪಟ್ಟ ಆನೆಮರಿಗೆ ಕೊನೆಗೂ ಸಿಕ್ತು ಆಶ್ರಯ

    ತಾಯಿಯಿಂದ ಬೇರ್ಪಟ್ಟ ಆನೆಮರಿಗೆ ಕೊನೆಗೂ ಸಿಕ್ತು ಆಶ್ರಯ

    ಕೊಡಗು: ತಾಯಿಯಿಂದ ಬೇರ್ಪಟ್ಟು ಅಡವಿಯ ಮಡಿಲಲ್ಲಿ ಒಂಟಿಯಾಗಿದ್ದ ಮುದ್ದಾದ ಮರಿಯಾನೆಗೆ ಕೊನೆಗೂ ಆಶ್ರಯ ಸಿಕ್ಕಿದೆ. ಅನಾಥವಾಗಿದ್ದ ಮರಿಯಾನೆಯನ್ನು ನಾಗರಹೊಳೆಯ ಅರಣ್ಯಾಧಿಕಾರಿಗಳು ಹಿಡಿದು ಕೊಡಗಿನ ತಿತಿಮತಿಯ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ನೀಡಿದ್ದಾರೆ. ಮುದ್ದಾದ ಮರಿಯಾನೆಯನ್ನು ಮಾವುತರು ಪಾಲನೆ ಪೋಷಣೆ ಮಾಡುತ್ತಿದ್ದಾರೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮೇಟಿಕೊಪ್ಪೆ ವನ್ಯಜೀವಿ ವಲಯದಲ್ಲಿ 20 ದಿನದ ಆನೆ ಮರಿಯೊಂದು ತಾಯಿಯಿಂದ ಬೇರ್ಪಟ್ಟು ಅನಾಥವಾಗಿ ಅಲೆದಾಡುತ್ತಿತ್ತು. ಸದ್ಯ ಮರಿ ಆನೆ ತಿತಿಮತಿಯ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಮಾವುತ ಶಿವು ಎಂಬವರ ಆರೈಕೆಯಲ್ಲಿದೆ. ದಿನಕ್ಕೆ 10 ಲೀಟರ್ ಹಾಲನ್ನು ನಿಪ್ಪಲ್ ಮೂಲಕ ಆನೆ ಮರಿಗೆ ನೀಡಲಾಗುತ್ತಿದೆ. ಮತ್ತಿಗೋಡು ಶಿಬಿರದ ಸಿಬ್ಬಂದಿ ಹಾಗೂ ಪಶುವೈದ್ಯರು ಮರಿಯಾನೆಯ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದಾರೆ. ಇದೀಗ ಮರಿಯಾನೆಗೆ 1.5 ತಿಂಗಳಾಗಿದೆ.

    ಒಟ್ಟಾರೆ ತಾಯಿಯಿಂದ ದೂರಾಗಿ, ತಾಯಿ ಪ್ರೀತಿ ಮರಿಚಿಕೆಯಾದ ಮುದ್ದಾದ ಆನೆಮರಿಗೆ ಮತ್ತಿಗೋಡು ಸಾಕಾನೆ ಶಿಬಿರದ ಅರಣ್ಯ ಇಲಾಖೆ ಸಿಬ್ಬಂದಿಯ ಪ್ರೀತಿ ಸಿಕ್ಕಿದೆ. ಎಲ್ಲರ ಪ್ರೀತಿಗೆ ಪಾತ್ರವಾಗಿರುವ ಮರಿಯಾನೆ ತುಂಟಾಟವಾಡುತ್ತಾ ಶಿಬಿರದಲ್ಲಿ ಕಾಲ ಕಳೆಯುತ್ತಿದೆ.