ಹಲವು ವರ್ಷಗಳಿಂದ ಸ್ನೇಹಿತರಾಗಿದ್ದ ನಟ ಭುವನ್ (Bhuvan) ಹಾಗೂ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಸಹವಾಜವಾಗಿಯೇ ಅಭಿಮಾನಿಗಳಿಗೆ ಸಂಭ್ರಮ ತಂದಿದೆ. ಈಗಾಗಲೇ ಬ್ಯಾಚುಲರ್ ಪಾರ್ಟಿ ಮುಗಿಸಿಕೊಂಡು ಬಂದಿರುವ ಈ ಜೋಡಿ, ಇದೀಗ ತಮ್ಮ ಮದುವೆಗೆ ಗಣ್ಯರನ್ನು ಆಹ್ವಾನಿಸುತ್ತಿದೆ.
ಆಗಸ್ಟ್ 24ರಂದು ವಿರಾಜಪೇಟೆಯಲ್ಲಿ (Virajpet) ಅದ್ದೂರಿಯಾಗಿ ವಿವಾಹ ಮಹೋತ್ಸವ ನಡೆಯಲಿದ್ದು, ಸಾಕಷ್ಟು ಸಿದ್ದತೆಗಳನ್ನು ಮಾಡಲಾಗುತ್ತಿದೆ. ಕೊಡವ (Kodava) ಶೈಲಿಯಲ್ಲಿ ಭುವನ್ ಹಾಗೂ ಹರ್ಷಿಕಾ ಮದುವೆಯಾಗುತ್ತಿದ್ದು (Marriage), ಅದಕ್ಕಾಗಿ ವಿರಾಜಪೇಟೆಯ ‘ಅಮ್ಮತಿ ಕೊಡವ ಸಮಾಜ’ ಸಿಂಗಾರಗೊಳ್ಳಲಿದೆ.
ಈಗಾಗಲೇ ಸಿನಿಮಾ ಹಾಗೂ ರಾಜಕೀಯ ಗಣ್ಯರಿಗೆ ಮದುವೆ ಆಮಂತ್ರಣ ನೀಡಿರುವ ಜೋಡಿ, ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ರಾಜಕೀಯ ಗಣ್ಯರನ್ನು ಮದುವೆಗೆ ಈ ಜೋಡಿ ಆಹ್ವಾನಿಸಿದೆ. ಇದನ್ನೂ ಓದಿ:ಫೋನ್ ಸ್ವಿಚ್ ಆಫ್ ಮಾಡಿಕೊಂಡ ನಟ: ಉಪೇಂದ್ರಗಾಗಿ ಪೊಲೀಸರಿಂದ ತೀವ್ರ ಶೋಧ
ಸಿನಿಮಾ ತಾರೆಯರಾದ ಶಿವರಾಜ್ ಕುಮಾರ್, ರವಿಚಂದ್ರನ್, ಗಣೇಶ್ , ದೊಡ್ಡಣ್ಣ, ಶ್ರೀನಾಥ್ ಜಯಮಾಲ, ಸುಧಾರಾಣಿ, ತಾರಾ, ಮಾಲಾಶ್ರೀ, ಅನುಪ್ರಭಾಕರ್, ಅಮೂಲ್ಯ, ದಿಗಂತ್, ಅಶ್ವಿನಿ ಪುನೀತ್ ರಾಜ್ ಕುಮಾರ್ , ರಾಘವೇಂದ್ರ ರಾಜ್ ಕುಮಾರ್, ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ, ದುನಿಯಾ ವಿಜಯ್ ಸೇರಿದಂತೆ ಅನೇಕ ಗಣ್ಯರಿಗೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದ್ದಾರೆ ಭುವನ್ ಮತ್ತು ಹರ್ಷಿಕಾ.
ಇಬ್ಬರೂ ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದಾರೆ ಮತ್ತು ರಾಜಕೀಯ ಗಣ್ಯರ ಜೊತೆಯೇ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹಾಗಾಗಿ ಎರಡೂ ಕ್ಷೇತ್ರಗಳಿಂದಲೇ ಅನೇಕ ಗಣ್ಯರು ಮದುವೆಗೆ ಬರುವ ಸಾಧ್ಯತೆಯಿದೆ.
ಮಡಿಕೇರಿ: ಹಳೇ ದ್ವೇಷದ ಹಿನ್ನೆಲೆ ಯುವಕನ ಮರ್ಮಾಂಗಕ್ಕೆ ಹೊಡೆದು ಹತ್ಯೆ ಮಾಡಿರುವ ಘಟನೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ (Virajpet) ತಾಲೂಕಿನ ಸಿದ್ದಾಪುರ ಗ್ರಾಮದ ಪಾಲಿಬೆಟ್ಟ ರಸ್ತೆಯಲ್ಲಿ ನಡೆದಿದೆ.
ಕ್ರಿಸ್ಟಲ್ (28) ಹತ್ಯೆಯಾದ ದುರ್ದೈವಿ. ಗುರುವಾರ ರಾತ್ರಿ ಸಿದ್ದಾಪುರ ಗ್ರಾಮದ ಪಾಲಿಬೆಟ್ಟ ರಸ್ತೆಯಲ್ಲಿರುವ ಬಾರ್‌ವೊಂದರಲ್ಲಿ (Bar) ಕ್ರಿಸ್ಟಲ್ ಸ್ನೇಹಿತರು ಹಾಗೂ ರಂಜಿತ್ ಸ್ನೇಹಿತರು ಇಬ್ಬರು ಒಂದೇ ಬಾರಿನಲ್ಲಿ ಮದ್ಯಪಾನ ಮಾಡುತ್ತಿದ್ದ ಸಂದರ್ಭ ರಂಜಿತ್ ಹಾಗೂ ಕ್ರಿಸ್ಟಲ್ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಇದನ್ನೂ ಓದಿ: ಮಕ್ಕಳಿಗೆ ಜಾಮೂನಿನಲ್ಲಿ ವಿಷ ಹಾಕಿದ ತಂದೆ – ಬಳಿಕ ತಾನೂ ಆತ್ಮಹತ್ಯೆಗೆ ಯತ್ನ
ಗಲಾಟೆಯನ್ನು ಗಮನಿಸಿದ ಬಾರ್ ಮ್ಯಾನೇಜರ್ ಸಿದ್ದಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಸ್ಥಳಕ್ಕೆ ಆಗಮಿಸುವ ವೇಳೆ ಕ್ರಿಸ್ಟಲ್ ತಂಡ ಹಾಗೂ ರಂಜಿತ್ ತಂಡದ ಯುವಕರು ಬಾರ್ ಒಳಗೆ ನುಗ್ಗಿ ಇನ್ನಷ್ಟು ಗಲಾಟೆ ಮಾಡಿಕೊಂಡು ಬಾರ್‌ನ ಶೌಚಾಲಯದ ಬಾಗಿಲು ಮುರಿದಿದ್ದಾರೆ. ಬಳಿಕ ಪೊಲೀಸರು ಕ್ರಿಸ್ಟಲ್‌ನ ಜೊತೆ ಇದ್ದ ಮೈಕೆಲ್ ಹಾಗೂ ಮತ್ತೊಬ್ಬರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಕೂರಿಸಿದ್ದಾರೆ. ಆದರೆ ಗಲಾಟೆ ಮಾಡಿದ ರಂಜಿತ್ ಹಾಗೂ ಕ್ರಿಸ್ಟಲ್ ಇಬ್ಬರಿಗೂ ಸ್ಥಳದಲ್ಲೇ ಬುದ್ದಿವಾದ ಹೇಳಿ ಮನೆಗೆ ಹೋಗುವಂತೆ ತಿಳಿಸಿದ್ದರು. ಇದನ್ನೂ ಓದಿ: ಕೊಂಬಿನಿಂದ ತಿವಿದು ಬಾಲಕಿಯನ್ನು ಬಿಸಾಕಿದ ಹಸು- ತಮಿಳುನಾಡಿನ ದೃಶ್ಯ ಭಾರೀ ವೈರಲ್
ಶುಕ್ರವಾರ ಬೆಳಗ್ಗೆ ಬಾರ್‌ನಲ್ಲಿ ಗಲಾಟೆ ಮಾಡಿಕೊಂಡಿದ್ದ ಕ್ರಿಸ್ಟಲ್ (28) ಮೃತದೇಹ ಪಾಲಿಬೆಟ್ಟ ರಸ್ತೆಯಲ್ಲಿ ಗೋಚರಿಸಿದೆ. ಯುವಕನ ಮರ್ಮಾಂಗಕ್ಕೆ ಹೊಡೆದು ಹತ್ಯೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಅಹಮದಾಬಾದ್‍ನಲ್ಲಿ ಭೀಕರ ಅಪಘಾತ – ಹತ್ತು ಮಂದಿ ಸಾವು
ಘಟನೆಯ ವಿವರ:
ಕಳೆದ ಎರಡು ಮೂರು ತಿಂಗಳ ಹಿಂದೆ ಕ್ರಿಸ್ಟಲ್ ಹಾಗೂ ರಂಜಿತ್ ತಂಡದ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಏರ್ಪಟ್ಟಿದ್ದು, ಇಬ್ಬರ ನಡುವೆ ನಡೆದ ಗಲಾಟೆ ನ್ಯಾಯಾಲಯದ ಮೆಟ್ಟಿಲೇರಿತ್ತು. ಗುರುವಾರವೂ ಹಳೆಯ ಗಲಾಟೆಗೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ವಿಚಾರಣೆಯನ್ನು ಮುಗಿಸಿಕೊಂಡು ಬಂದ ಇಬ್ಬರೂ ತಮ್ಮ ಸ್ನೇಹಿತರೊಂದಿಗೆ ರಾತ್ರಿ ಬಾರ್‌ನಲ್ಲಿ ಮುಖಾಮುಖಿ ಭೇಟಿಯಾಗಿ ಮತ್ತೊಮ್ಮೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಲಸಿಕೆ ಹಾಕ್ತಿದ್ದಾಗಲೇ ಕುಸಿದ ಅಂಗನವಾಡಿಯ ಮೇಲ್ಛಾವಣಿ- ಮಗುವಿನ ತಲೆಗೆ ಗಾಯ
ನಂತರ ಪೊಲೀಸರು ಬಂದು ಕ್ರಿಸ್ಟಲ್‌ನ ಜೊತೆಯಲ್ಲಿದ್ದ ಯುವಕರನ್ನು ಕರೆದುಕೊಂಡು ಹೋಗಿ ಕ್ರಿಸ್ಟಲ್‌ನನ್ನು ಮನೆಗೆ ಹೋಗುವಂತೆ ಹೇಳಿ ಹೋಗಿದ್ದಾರೆ. ಆದರೆ ಇಬ್ಬರ ನಡುವೆ ಗಲಾಟೆ ನಡೆದಿದ್ದು ಗೊತ್ತಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗದೆ ಪೊಲೀಸರು ಬಿಟ್ಟು ಹೋಗಿದ್ದರಿಂದ ರಾತ್ರಿ ಮತ್ತೊಮ್ಮೆ ರಸ್ತೆ ಮಧ್ಯದಲ್ಲೇ ಗಲಾಟೆ ನಡೆದು ಹತ್ಯೆ ಮಾಡಲಾಗಿದೆ. ಸಿದ್ದಾಪುರ ಪೊಲೀಸರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಕ್ರಿಸ್ಟಲ್ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಮಲಗಿದ್ದಲ್ಲೇ ಹೃದಯಾಘಾತ – ಪೊಲೀಸ್ ಕಾನ್ಸ್‌ಟೇಬಲ್ ನಿಧನ
ಮಡಿಕೇರಿ: ಕಳೆದ ಎರಡು ದಿನಗಳ ಹಿಂದೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ (Virajpete) ತಾಲೂಕಿನ ಪಲಿಬೆಟ್ಟ ಗ್ರಾಮದ ಮಸ್ಕಲ್ ಕಾಫಿತೋಟದಲ್ಲಿ ಕಾಡಾನೆ (Wild Elephant) ದಾಳಿಗೆ ಒಳಗಾಗಿದ್ದ ಕಾರ್ಮಿಕ ಬಾಬಿ ಚಿಕಿತ್ಸೆ ಫಲಕಾರಿಯಾಗದೇ ಮೈಸೂರಿನ (Mysuru) ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಎರಡು ದಿನಗಳ ಹಿಂದೆ ಬಾಬಿ ಮಸ್ಕಲ್ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕಾಡಾನೆಯೊಂದು ಅವರ ಮೇಲೆ ದಾಳಿ ನಡೆಸಿತ್ತು. ಇದರಿಂದ ಗಂಭೀರ ಗಾಯಗೊಂಡಿದ್ದ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಬಾಬಿ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಇದೇ ತಿಂಗಳು ಉದ್ಘಾಟನೆಗೊಳ್ಳಬೇಕಿದ್ದ ಸಮುದಾಯ ಭವನದಲ್ಲಿ ಡಬಲ್ ಮರ್ಡರ್
ಮೃತ ಬಾಬಿ ಕುಟುಂಬಕ್ಕೆ ವಿರಾಜಪೇಟೆಯ ನೂತನ ಶಾಸಕ ಎ.ಎಸ್ ಪೊನ್ನಣ್ಣ (M.S.Ponnanna) ದೂರವಾಣಿ ಮೂಲಕ ಸಂಪರ್ಕ ಮಾಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ತಕ್ಷಣ ತುರ್ತು ಪರಿಹಾರ ನೀಡುವಂತೆ ಅರಣ್ಯ ಇಲಾಖೆಗೆ (Forest Department) ಸೂಚನೆ ನೀಡಿದ ಅವರು, ಸದ್ಯದಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾಡಾನೆಗಳ ಉಪಟಳದ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಆದಷ್ಟು ಬೇಗ ಸಭೆ ಕರೆಯಬೇಕು ಎಂದರು. ಇದನ್ನೂ ಓದಿ: ಮಹಿಳೆಯ ಕತ್ತು ಕೊಯ್ದು ಭೀಕರ ಹತ್ಯೆಗೈದ ಪತಿಯ ಅಣ್ಣ!
ಕಾಫಿ ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಕಳೆದ ಒಂದು ವಾರದಿಂದ ಕಾಫಿ ತೋಟಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದರು. ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡಾನೆಗಳನ್ನು ಬೇರೆಡೆಗೆ ಓಡಿಸುವ ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಅಪ್ರಾಪ್ತ ಮಕ್ಕಳ ಮದುವೆಗೆ ಮುಂದಾಗಿದ್ದ ಪತ್ನಿ ಕೊಂದು ಪೊಲೀಸರಿಗೆ ಶರಣಾದ ಪತಿ
ಕೊಡಗು: ಕೊಡಗು (Kodagu) ಕ್ಷೇತ್ರದಲ್ಲಿ ಎರಡು ಮತಕ್ಷೇತ್ರಗಳಿದ್ದು, ಎರಡಕ್ಕೆ ಎರಡರಲ್ಲೂ ಕಾಂಗ್ರೆಸ್ (Congress) ಭರ್ಜರಿ ಜಯಗಳಿಸಿ, ಬಿಜೆಪಿಯ (BJP) ಭದ್ರಕೋಟೆಯಾಗಿದ್ದ ಮಡಿಕೇರಿ (Madikeri) ಹಾಗೂ ವಿರಾಜಪೇಟೆ (Virajpete) ಕ್ಷೇತ್ರವನ್ನು ತನ್ನದಾಗಿಸಿಕೊಂಡಿದೆ.
ಗೆದ್ದವರ ವಿವರ: 1) ಮಡಿಕೇರಿ:
ಮಂಥರ್ ಗೌಡ – ಕಾಂಗ್ರೆಸ್
ಪಡೆದ ಮತಗಳು – 83,949
ಅಪ್ಪಚ್ಚು ರಂಜನ್ – ಬಿಜೆಪಿ
ಪಡೆದ ಮತಗಳು – 79,429
ಗೆಲುವು: ಕಾಂಗ್ರೆಸ್
ಅಂತರ: 4,402
2)ವಿರಾಜಪೇಟೆ:
ಎಎಸ್ ಪೊನ್ನಣ್ಣ – ಕಾಂಗ್ರೆಸ್
ಪಡೆದ ಮತಗಳು – 83,128
ವಿರಾಜಪೇಟೆಯಲ್ಲಿ ಕೆ.ಜಿ ಬೋಪಯ್ಯ ವಿರುದ್ಧ ಕಾಂಗ್ರೆಸ್ (Congress) ಅಭ್ಯರ್ಥಿ ಪೊನ್ನಣ್ಣ ಗೆಲುವು ಸಾಧಿಸಿದ್ದರು. ಅಪ್ಪಚ್ಚು ರಂಜನ್ ವಿರುದ್ಧ ಮಂತರ್‌ಗೌಡ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಶ್ರೀರಾಮುಲುಗೆ ಹೀನಾಯ ಸೋಲು
ಮಡಿಕೇರಿ: ವಿರಾಜಪೇಟೆ ಕ್ಷೇತ್ರ (Virajpete Constituency) ದಲ್ಲಿ ಭಾರತೀಯ ಜನತಾ ಪಾರ್ಟಿ (BJP)- ಕಾಂಗ್ರೆಸ್ (Congress) ಅಭ್ಯರ್ಥಿಗಳು ಈ ಬಾರಿ ನೇರ ಸ್ಪರ್ಧಿಗಳಾಗಿ ಸೆಣಸುತ್ತಾರೆ. ಕಾಂಗ್ರೆಸ್‍ನಿಂದ ಈ ಬಾರಿ ಎ.ಎಸ್ ಪೊನ್ನಣ್ಣ ಸ್ಪರ್ಧಿಸಿದರೆ ಬಿಜೆಪಿಯಿಂದ ಎಂದಿನಂತೆ ಕೆ.ಜಿ ಬೋಪಯ್ಯ ಅಖಾಡದಲ್ಲಿದ್ದಾರೆ.
ಉತ್ಸಾಹಿ ರಾಜಕಾರಣಿ, ಕರ್ನಾಟಕ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ, ಸುಪ್ರೀಂಕೋರ್ಟ್ ವಕೀಲ ಎ.ಎಸ್ ಪೊನ್ನಣ್ಣ ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಕೊಡಗಿನಲ್ಲಿ ಚುನಾವಣೆಗೆ ಪೂರ್ವತಯಾರಿ ಮಾಡಿಕೊಂಡಿದ್ದು, ಕ್ಷೇತ್ರದಲ್ಲಿ ಅವರ ಪರವಾಗಿ ಮತದಾರರಲ್ಲಿ ಒಂದಿಷ್ಟು ಒಲವು ಮೂಡಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಕಾಂಗ್ರೆಸ್‍ನಿಂದ ಯಾವುದೇ ಬಂಡಾಯ ವಿರಾಜಪೇಟೆ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದೆ ಇರುವುದು ಪೊನ್ನಣ್ಣನವರಿಗೆ ಸಮಾಧಾನವನ್ನೂ ತಂದಿರುತ್ತದೆ.
ಎ.ಕೆ ಸುಬ್ಬಯ್ಯನವರ ಮಗ ಎ.ಎಸ್ ಪೊನ್ನಣ್ಣ: ಕೊಡಗಿನಿಂದ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ರಾಜಕಾರಣದಲ್ಲಿ ಹೆಸರುಗಳಿಸಿರುವ ಎ.ಕೆ ಸುಬ್ಬಯ್ಯನವರ ಶಿಷ್ಯ ಬಣ ರಾಜ್ಯದಾದ್ಯಂತ ಈಗಲೂ ಇದ್ದು ನೇರ ಹಾಗೂ ನಿಷ್ಠುರತೆಗೆ ಹೆಸರು ವಾಸಿಯಾಗಿದ್ದ ಸುಬ್ಬಯ್ಯನವರ ಪುತ್ರ ಈ ಬಾರಿ ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡುತ್ತಿರುವುದು ವಿಶೇಷ. ಸಾವಿರಾರು ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ಸುಬ್ಬಯ್ಯನವರಿಗೆ ಅಷ್ಟೇ ಸಂಖ್ಯೆಯ ವಿರೋಧಿಗಳು ಇದ್ದಾರೆ. ಹೋರಾಟ ಹಾಗೂ ಕೊಡಗಿನ ನಾಡು, ನುಡಿ, ವೈಚಾರಿಕತೆಗಳ ವಿಚಾರದಲ್ಲಿ ಇದ್ದ ಅವರ ನಿಲುವು ಈ ಚುನಾವಣೆಯಲ್ಲಿ ಪೊನ್ನಣ್ಣನವರಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತದಾ? ಅಥವಾ ಮತವಾಗಿ ಪರಿವರ್ತನೆ ಆಗುತ್ತದಾ ಎಂಬುದು ಯಕ್ಷಪ್ರಶ್ನೆಯಾಗಿದೆ. ನಯವಾದ ಮಾತುಗಾರಿಕೆ, ವಿನಯವಂತಿಕೆ ಹಾಗೂ ವೈಚಾರಿಕವಾಗಿ ಪೊನ್ನಣ್ಣನವರ ನಿಲುವು ತಂದೆಗಿಂತ ಭಿನ್ನವಾಗಿದೆ ಎಂದು ಈಗಾಗಲೇ ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇತ್ತ ಟಿಕೆಟ್‍ಗಾಗಿ ಭಾಜಪದಲ್ಲಿ ಈ ಹಿಂದೆ ಎಂದೂ ಕಾಣಿಸದಷ್ಟು ಪೈಪೋಟಿಯ ನಡುವೆಯೂ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿರುವ ಕೆ.ಜಿ ಬೋಪಯ್ಯನವರಿಗೆ ಈ ಬಾರಿಯೂ ಬಿಜೆಪಿ ಹೈಕಮಾಂಡ್ ಅಸ್ತು ಅಂದಿದೆ. ಆದರೂ ಇತರೆ ಟಿಕೆಟ್ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರು ಈ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಬೋಪಯ್ಯನವರಿಗೆ ಒಂದಿಷ್ಟು ತಲೆ ಬಿಸಿ ತಂದಂತೆ ಕಾಣುತ್ತಿದೆ. ಬೋಪಯ್ಯನವರು ಎಂದಿನಂತೆ ಗೆಲ್ಲುವ ವಿಶ್ವಾಸದಲ್ಲಿ ಇದ್ದಾರೆ. ಬೂತ್ ಮಟ್ಟದಲ್ಲಿ ಸಧೃಡವಾಗಿರುವ ಪಕ್ಷದ ಕಾರ್ಯಕರ್ತರೂ ಹಾಗೂ ಬಿಜೆಪಿಯ ಕಾಯಂ ಮತದಾರರು ಅವರನ್ನು ಗೆಲ್ಲಿಸುತ್ತಾರೆ ಅನ್ನುವುದು ಅವರ ನಂಬಿಕೆಯಾಗಿದೆ.
ಯಾರಿಗೆ ಪ್ಲಸ್:
ಹಿಂದೂ ಪರ ಸಂಘಟನೆಗಳು ಪ್ರಬಲವಾಗಿರುವ ಕೊಡಗಿನಲ್ಲಿ ಬಿಜೆಪಿ ಗೆಲುವಿಗೆ ಪ್ರತಿಬಾರಿಯಂತೆ ಈ ಬಾರಿಯೂ ಆಂತರಿಕ ಅಸಮಾಧಾನವನ್ನು ಬದಿಗಿಟ್ಟು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಪ್ರಯತ್ನ ಮಾಡುತ್ತಾರೆ ಅನ್ನುವುದು ಬಿಜೆಪಿಯ ಮಡಿಕೇರಿ ಹಾಗೂ ವಿರಾಜಪೇಟೆ ಈ ಎರಡೂ ಕ್ಷೇತ್ರದ ಅಭ್ಯರ್ಥಿಗಳ ನಂಬಿಕೆ. ಮೋದಿ ಅಲೆ ಕೊಡಗಿನಲ್ಲಿ ಒಂದಿಷ್ಟು ಕಡಿಮೆ ಆಗಿದೆ ಅನ್ನುವುದು ಬಿಟ್ಟರೆ ಮೋದಿ ಹೆಸರಿನಲ್ಲಿ ಬಿಜೆಪಿಗೆ ಮತಚಲಾವಣೆ ಮಾಡುವ ಮತದಾರರು ಅಧಿಕ ಸಂಖ್ಯೆಯಲ್ಲಿ ಕೊಡಗಿನಲ್ಲಿ ಇದ್ದು ಕೆ.ಜಿ ಬೋಪಯ್ಯ ಅವರು ಕಳೆದ 20 ವರ್ಷಗಳಿಂದ ಮಾಡಿರುವ ಅಭಿವೃದ್ಧಿ ಕಾರ್ಯಗಳು ಶ್ರೀ ರಕ್ಷೆಯಾಗುವ ಸಾಧ್ಯತೆಯು ಇದೆ. ಇದನ್ನೂ ಓದಿ: ಜಿದ್ದಾಜಿದ್ದಿನ ಹೋರಾಟಕ್ಕಿಳಿದ ಕೈ, ಬಿಜೆಪಿ ಅಭ್ಯರ್ಥಿಗಳು- ಯಾರಿಗೆ ಒಲಿಯಲಿದೆ ಮಡಿಕೇರಿ ಕ್ಷೇತ್ರ?
ಯಾರಿಗೆ ಮೈನಸ್:
ಎಎಸ್ ಪೊನ್ನಣ್ಣ ಕಳೆದ ನಾಲ್ಕು ವರ್ಷಗಳಿಂದ ವಿರಾಜಪೇಟೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಹಾಗೂ ಕೊಡಗಿನ ಕೋವಿ ಹಕ್ಕು ಜಮ್ಮಬಾಣೆ ಸಮಸ್ಯೆಗಳ ಬಗ್ಗೆ ನ್ಯಾಯಲಯದಲ್ಲಿ ಧ್ವನಿ ಎತ್ತಿ ಜಿಲ್ಲೆಯ ಸಮಸ್ಯೆಗಳಿಗೆ ಮುಕ್ತಿ ನೀಡಿದ್ದಾರೆ. ಅಲ್ಲದೇ ಯುವಕರ ಹಾದಿಯಾಗಿ ಹಿಂದುಳಿದ ವರ್ಗ ಹಾಡಿ ಜನರೊಂದಿಗೆ ಸೇರಿ ಪಕ್ಷ ಸಂಘಟನೆ ಮಾಡಿದ್ದಾರೆ ತನ್ನ ತಂದೆ ಹೆಸರಿನಲ್ಲಿ ಸಮಾಜ ಸೇವೆ ಮಾಡಿಕೊಂಡು ಬರುತ್ತಿರುವ ಪೊನ್ನಣ್ಣ ಅವರಿಗೆ ವಿರಾಜಪೇಟೆ ಕ್ಷೇತ್ರದಲ್ಲಿ ವರ್ಚಸ್ಸು ಜಾಸ್ತಿ ಅಗಿದೆ. ಕೊಡವ ಮತ್ತು ಅಲ್ಪಸಂಖ್ಯಾತ ಮತಗಳೇ ಈ ಬಾಗದಲ್ಲಿ ನಿರ್ಣಾಯಕವಾಗಿದು. ಕೊಡವ ಮತಗಳು ಬಿಜೆಪಿ ಕಾಂಗ್ರೆಸ್ ಗೆ ವಿಭಜನೆ ಅಗುವ ಲಕ್ಷಣಗಳು ಇರುವುದರಿಂದ ಪೊನ್ನಣ್ಣ ಅವರಿಗೆ ಸೋಲಿನ ಭೀತಿಯು ಎದುರಾಗಿದೆ.
ತಲಾ 269 ಮತಗಟ್ಟೆಗಳಲ್ಲಿ ಎರಡೂ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದ್ದು. 4,19,550 ಕ್ಕೂ ಹೆಚ್ಚು ಮತದಾರರು ಕೊಡಗಿನ ಎರಡೂ ಕ್ಷೇತ್ರದಲ್ಲಿ ಇದ್ದಾರೆ. ಈ ಬಾರಿ ಶೇಕಡಾ 80%ಕ್ಕಿಂತಲೂ ಹೆಚ್ಚಿನ ಮತದಾನ ಆಗುವ ಸಾಧ್ಯತೆಯೂ ಕೊಡಗಿನಲ್ಲಿ ಇದೆ. ಎರಡೂ ಕ್ಷೇತ್ರಗಳ ಅಷ್ಟೂ ಮತಗಟ್ಟೆಗಳಲ್ಲೂ ಭಾರತೀಯ ಜನತಪಾರ್ಟಿಯ ಸಕ್ರಿಯ ಕಾರ್ಯಕರ್ತರು ಇರುವುದು ಬಿ.ಜೆ.ಪಿಗೆ ವರದಾನ ಆಗುತ್ತಾ ಬಂದಿದೆ. ಇತ್ತ ಕಾಂಗ್ರೆಸ್, ಜೆಡಿಎಸ್ ಹಾಗೂ ಇತರೆ ಪಕ್ಷಗಳ ಸ್ಥಿತಿ ಹಾಗಿಲ್ಲ. ಕೆಲವೊಂದು ಮತಗಟ್ಟೆಗಳಲ್ಲಿ ಅವರು ಕಾರ್ಯಕರ್ತರ ಕೊರತೆಯನ್ನು ಈ ಹಿಂದೆಯೂ ಎದುರಿಸುತ್ತಾ ಬಂದಿದ್ದಾರೆ. ಅಂತಹಾ ಬೂತ್‍ಗಳಲ್ಲಿ ಅವರಿಗೆ ಮತ ಕಡಿಮೆ ಬೀಳುವ ಸಾಧ್ಯತೆ ಇದೆ. ಈ ಬಾರಿ ಅಭ್ಯರ್ಥಿಗಳು ಈ ನಿಟ್ಟಿನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ವಿರಾಜಪೇಟೆ ಕ್ಷೇತ್ರದ ಜಾತಿವಾರು ಲೆಕ್ಕಾಚಾರ ಇಂತಿದೆ:
ಲಿಂಗಾಯತ _22117
ಒಕ್ಕಲಿಗ ಹಾಗೂ ಅರೇಬಾಷೆ ಗೌಡ _27708
ಪ.ಪಂಗಡ _25469
ಕುರುಬ _440
ಮುಸಲ್ಮಾನ_37273
ಕ್ರೈಸ್ತ_8800
ಬ್ರಾಹ್ಮಣ_1800
ಕೊಡವ ಹಾಗೂ ಕೊಡವ ಬಾಷಿಕ_47543
ಮಲಯಾಳಿ_11508
ತಮಿಳ_7118
ಬಿಲ್ಲವ_6241
ಬಂಟ್ಸ್_2800
ವಿಶ್ವಕರ್ಮ_1274
ಮಡಿವಾಳ_1900
ದೇವಾಂಗ ಶೆಟ್ಟಿ_3476
ಸವಿತಾ ಸಮಾಜ_2441
ನಾಯಕ್_1034
ಜೈನರು,_273
ಇತರೆ_5472
ಮಡಿಕೇರಿ: ನಿವೃತ ಎಸ್ಪಿ ಪುತ್ರನೊಬ್ಬ ವರ್ತಕನ ಮೇಲೆ ರಿವಾಲ್ವಾರ್‌ನಿಂದ (Revolver) ಮೂರು ಸುತ್ತು ಗುಂಡು ಹಾರಿಸಿದ ಘಟನೆ ವಿರಾಜಪೇಟೆ (Virajpet) ತಾಲ್ಲೂಕಿನ ಅಮ್ಮತಿ (Ammathi) ಗ್ರಾಮದಲ್ಲಿ ನಡೆದಿದೆ.
ರಂಜನ್‍ಗೆ ಸೇರಿದ ಮನೆಯ ಮುಂಭಾಗದ ಅಂಗಡಿ ಮಳಿಗೆಯಲ್ಲಿ ಬೊಪಣ್ಣ ಮತ್ತು ಆತನ ಪಾಲುದಾರರು ಅಡಿಕೆ ಮಂಡಿಯನ್ನು ನಡೆಸುತ್ತಿದ್ದರು. ಅಂಗಡಿ ಮಳಿಗೆಯನ್ನು ಖಾಲಿ ಮಾಡುವಂತೆ ಈ ಹಿಂದೆ ರಂಜನ್ ಸೂಚಿಸಿದ್ದ. ಇದಕ್ಕೆ ಬೋಪಣ್ಣ ಕಾಲಾವಕಾಶವನ್ನು ಕೇಳಿದ್ದರು ಎನ್ನಲಾಗಿದೆ. ಮತ್ತೆ ಪುನಃ ರಂಜನ್ ಬೊಪಣ್ಣರವರ ಅಂಗಡಿಗೆ ತೆರಳಿ ಖಾಲಿ ಮಾಡುವಂತೆ ಕೇಳಿಕೊಂಡಾಗ ಇಬ್ಬರ ನಡುವೆ ಮಾತಿನ ಚಕಮುಕಿ ನಡೆದಿದೆ. ಈ ವೇಳೆ ರಂಜನ್ ತನ್ನ ಬಳಿ ಇದ್ದ ರಿವಾಲ್ವಾರ್ ನಿಂದ ಏಕಾಏಕಿ ಗುಂಡು ಹಾರಿಸಿದ್ದಾನೆ.
ಬಳಿಕ ರಂಜನ್ ಮೇಲೆ ಕೂಡ ಹಲ್ಲೆ ನಡೆದಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ರಾಜನ್ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆ ಸಂಬಂಧಿಸಿದಂತೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸೈನಿಕರ ವಾಹನದ ಮೇಲೆ ದಾಳಿ ಪ್ರಕರಣ – 12 ಶಂಕಿತರು ವಶಕ್ಕೆ
ಮಡಿಕೇರಿ: ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಗುಂಡು ಹಾರಿಸಿ ಹತ್ಯೆಗೈದ ಘಟನೆ ಕೊಡಗಿನ (Kodagu) ವಿರಾಜಪೇಟೆಯ (Virajpet) ತೋರ ಗ್ರಾಮದಲ್ಲಿ ಶನಿವಾರ ತಡ ರಾತ್ರಿ ನಡೆದಿದೆ.
ಗ್ರಾಮದ ಬೈಮನ ನಾಣಯ್ಯ ಅವರ ಪುತ್ರ ಬಿ.ಎಂ ಮಧು (44) ಮೃತ ದುರ್ದೈವಿ. ರಾತ್ರಿ 12ರ ವೇಳೆಗೆ ಗ್ರಾಮದ ಪಡಚಿಕಾಡು ಕಾಲೋನಿಯಲ್ಲಿ ಈ ದುರ್ಘಟನೆ ನಡೆದಿದೆ. ತೋಟದ ರಸ್ತೆ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಹಲವಾರು ವರ್ಷಗಳಿಂದ ಮಧು ಹಾಗೂ ಊರಿನ ಕೆಲವರ ನಡುವೆ ಮನಸ್ತಾಪ ಇತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ಬಿಜೆಪಿಯ ಮತ್ತೊಂದು ವಿಕೆಟ್ ಪತನ – ಸಂಸದ ಸ್ಥಾನಕ್ಕೂ ರಾಜೀನಾಮೆಗೆ ಮುಂದಾದ ಕರಡಿ ಸಂಗಣ್ಣ
ಮಧು, ಶನಿವಾರ ಸಂಜೆ 7 ಗಂಟೆಯಿಂದ ಸ್ನೇಹಿತರೊಂದಿಗೆ ಸೇರಿಕೊಂಡು ಮದ್ಯಪಾನ ಮಾಡಿದ್ದರು. ರಾತ್ರಿ ವೇಳೆ ಮನೆಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿದೆ. ಈ ಮೊದಲು ಮಧು ಬೆಂಗಳೂರಿನಲ್ಲಿ (Bengaluru) ಉದ್ಯಮಿಯಾಗಿದ್ದರು. ಕಳೆದ ಒಂದು ವರ್ಷದ ಹಿಂದೆ ಊರಿಗೆ ಮರಳಿ ತೋಟವನ್ನು ನೋಡಿಕೊಂಡು, ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡಿದ್ದರು.
ಘಟನಾ ಸ್ಥಳಕ್ಕೆ ಕೊಡಗು ಎಸ್‍ಪಿ ರಾಜರಾಜನ್ ಹಾಗೂ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಸಿದ್ದುಗೆ `ಅಹಿಂದ’ ಪದದ ಅರ್ಥವೇ ಗೊತ್ತಿಲ್ಲ – ಕಣ್ಣೀರಿಟ್ಟ ಗೋಪಿಕೃಷ್ಣ ದಂಪತಿ
ಮಡಿಕೇರಿ: ಅಕ್ರಮವಾಗಿ ಗಾಂಜಾ (Ganja) ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ವಿರಾಜಪೇಟೆಯಲ್ಲಿ (Virajpet) ನಡೆದಿದೆ.
ವಿರಾಜಪೇಟೆ ತಾಲೂಕಿನ ಇಂಜಿಲಗೆರೆ ಗ್ರಾಮದ ಕಲ್ಲುಕೋರೆ ನಿವಾಸಿ ಪ್ರವೀಣ (31) ಹಾಗೂ ಗಾಂಧಿನಗರ ನಿವಾಸಿ ಇಮ್ರಾನ್ ಅಲಿಯಾಸ್ ಸೋನು (22) ಬಂಧಿತ ಆರೋಪಿಗಳು. ಪ್ರಕರಣದ ಎರಡನೇ ಆರೋಪಿಯಾಗಿರುವ ಸೋನು 2020ರಲ್ಲಿ ಗಾಂಜಾ ಪ್ರಕರಣದಲ್ಲಿ ಬಂಧಿತನಾಗಿ ಜೈಲುವಾಸ ಅನುಭವಿಸಿ ಹಿಂದಿರುಗಿದ್ದಾನೆ. ಅಲ್ಲದೇ ಜೈಲುವಾಸದ ಸಮಯದಲ್ಲಿ ಅನೇಕ ಮಂದಿಯ ಪರಿಚಯವಾಗಿದ್ದು, ಗಾಂಜಾ ಖರೀದಿ ಮತ್ತು ದೊರಕುವ ಸ್ಥಳದ ಬಗ್ಗೆ ಈತನಿಗೆ ಖಚಿತ ಮಾಹಿತಿ ಇತ್ತು ಎನ್ನಲಾಗಿದೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ- ಚೆನೈ ಕಲಾಕ್ಷೇತ್ರದ ಪ್ರೊಫೆಸರ್ ವಿರುದ್ಧ ದೂರು ದಾಖಲು
ಸೋನು ತನ್ನ ಸ್ನೇಹಿತನಾದ ಪ್ರವೀಣ್‌ಗೂ ಮಾಹಿತಿ ತಿಳಿಸಿ ಹಣ ಹೊಂದಿಸಿಕೊಂಡು ಮೈಸೂರಿಗೆ ತೆರಳಿದ್ದಾನೆ. ಮಾರ್ಚ್ 30ರ ರಾತ್ರಿ ವೇಳೆಯಲ್ಲಿ ಮೈಸೂರಿನ (Mysuru) ಹೊರವಲಯದಲ್ಲಿ ಗಾಂಜಾ ಖರೀದಿಸಿ ವಿರಾಜಪೇಟೆ ನಗರಕ್ಕೆ ಆಗಮಿಸಿದ್ದಾನೆ. ಮಾರ್ಚ್ 31ರಂದು ಬೆಳಗ್ಗೆ 11 ಗಂಟೆಯ ವೇಳೆಗೆ ಆರೋಪಿಗಳು ತಮ್ಮ ಬಳಿಯಿದ್ದ ಗಾಂಜಾವನ್ನು ಮಾರಾಟ ಮಾಡಲು ವಿರಾಜಪೇಟೆಯ ಕೆಎಸ್‌ಆರ್‌ಟಿಸಿ (KSRTC) ಬಸ್ ನಿಲ್ದಾಣದ ಮುಂಭಾಗದಲ್ಲಿ ಗಿರಾಕಿಗಳಿಗೆ ಹೊಂಚು ಹಾಕುತ್ತಿದ್ದರು. ಇದನ್ನೂ ಓದಿ: ಸಾಕುನಾಯಿಯ ಮೇಲೆ 2 ವರ್ಷ ಅತ್ಯಾಚಾರವೆಸಗಿದ 60ರ ವ್ಯಕ್ತಿ
ನಿಖರ ಮಾಹಿತಿಯ ಅನ್ವಯ ಪೊಲೀಸರು ಆರೋಪಿಗಳ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತರ ಕೈಯಲ್ಲಿ ಮಾರಾಟಕ್ಕೆ ಸಿದ್ಧಗೊಂಡಿದ್ದ 1.222 ಕೆಜಿ ಗಾಂಜಾ ಮತ್ತು 770 ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡಿರುವ ಗಾಂಜಾ ಸುಮಾರು 30 ಸಾವಿರ ರೂ. ಮೌಲ್ಯದ್ದು ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆಗೈದ ಪತ್ನಿಗೆ ಜೀವಾವಧಿ ಶಿಕ್ಷೆ