Tag: ವಿಯೇಟ್ನಾಂ

  • ಅಂತಾರಾಷ್ಟ್ರೀಯ ಮಾಡೆಲಿಂಗ್ ಸ್ಪರ್ಧೆಯಲ್ಲಿ ಭಾರತದಿಂದ ಸ್ಪರ್ಧಿಸಿದ್ದ ಕರ್ನಾಟಕದ ರಾಮು ರನ್ನರ್ ಅಪ್

    ಅಂತಾರಾಷ್ಟ್ರೀಯ ಮಾಡೆಲಿಂಗ್ ಸ್ಪರ್ಧೆಯಲ್ಲಿ ಭಾರತದಿಂದ ಸ್ಪರ್ಧಿಸಿದ್ದ ಕರ್ನಾಟಕದ ರಾಮು ರನ್ನರ್ ಅಪ್

    ಬೆಂಗಳೂರು: ವಿಯೇಟ್ನಾಂನಲ್ಲಿ ನಡೆದ ಅಂತಾರಾಷ್ಟ್ರೀಯ ಮಾಡೆಲಿಂಗ್ ಸ್ಪರ್ಧೆ For pan continental international 2022ನಲ್ಲಿ ಭಾರತದಿಂದ ಸ್ಪರ್ಧಿಸಿದ್ದ ರಾಮು ರನ್ನರ್ ಆಗಿ ಹೊರಹೊಮ್ಮಿದ್ದಾರೆ.

    ರಾಮು ಭಾರತದಿಂದ ಆಯ್ಕೆಯಾಗಿದ್ದ ಏಕೈಕ ಸ್ಪರ್ಧಾಳು ಆಗಿದ್ದರು. ಒಟ್ಟು 14 ದೇಶಗಳ ಸ್ಪರ್ಧಾಳುಗಳು ಭಾಗವಹಿಸಿದ್ದರು. ಇವರು ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ರನ್ನರ್ ಅಪ್(ದ್ವಿತೀಯ) ಆಗಿದ್ದಾರೆ.

    ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಫಿಲಿಪ್ಪೀನ್ಸ್‌ ಪಡೆದರೆ, ದ್ವಿತೀಯ ಸ್ಥಾನವನ್ನು ಭಾರತ ಅಲಂಕರಿಸಿದೆ. ಭಾರತದಿಂದ ಪ್ರತಿನಿಧಿಸಿದ್ದ ರಾಮು ಪಬ್ಲಿಕ್ ಟಿವಿಯಲ್ಲಿ ಕ್ಯಾಮೆರಾಮನ್ ಆಗಿ ಉದ್ಯೋಗದಲ್ಲಿದ್ದಾರೆ. ಇದನ್ನೂ ಓದಿ: ತಾಯಿ ಗರ್ಭದಷ್ಟೇ ಭೂಗರ್ಭಕ್ಕೆ ಮಹತ್ವವಿದೆ- ಮಣ್ಣು ಉಳಿಸಿ ಅಭಿಯಾನಕ್ಕೆ ಬೊಮ್ಮಾಯಿ ಚಾಲನೆ

  • ಊಟ ಮಾಡ್ತಿದ್ದಾಗ ಏಕಾಏಕಿ ಬಿದ್ದ ಫ್ಯಾನ್- ಮನೆ ಮಂದಿ ಗ್ರೇಟ್ ಎಸ್ಕೇಪ್

    ಊಟ ಮಾಡ್ತಿದ್ದಾಗ ಏಕಾಏಕಿ ಬಿದ್ದ ಫ್ಯಾನ್- ಮನೆ ಮಂದಿ ಗ್ರೇಟ್ ಎಸ್ಕೇಪ್

    ನವದೆಹಲಿ: ಕುಟುಂಬವೊಂದು ಹಾಲ್ ನಲ್ಲಿ ನೆಮ್ಮದಿಯಾಗಿ ಕುಳಿತುಕೊಂಡು ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಫ್ಯಾನ್ ಕೆಳಗೆ ಬಿದ್ದಿದ್ದು, ಮನೆ ಮಂದಿ ಭಾರೀ ಅವಘಡದಿಂದ ಪಾರಾದ ಘಟನೆ ನಡೆದಿದೆ.

    ಈ ಘಟನೆ ಎಲ್ಲಿ ನಡೆದಿದೆ ಎಂಬುದು ವರದಿಯಾಗಿಲ್ಲ ಆದರೆ ಫ್ಯಾನ್ ಬೀಳುವ ವೀಡಿಯೋ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    1 ಸೆಕೆಂಡ್ ಇರುವ ವೀಡಿಯೋದಲ್ಲಿ ವಿಯೇಟ್ನಾಂ ಮೂಲದ ಕುಟುಂಬವೊಂದು ಒಟ್ಟಾಗಿ ಕುಳಿತು ಊಟ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಪತಿ, ಪತ್ನಿ ಹಾಗೂ ತಮ್ಮ ಮಕ್ಕಳು ಮಾತನಾಡುತ್ತಾ ಊಟ ಮಾಡುತ್ತಿದ್ದಾಗ ಫ್ಯಾನ್ ಏಕಾಏಕಿ ಪತಿ ಹಾಗೂ ಮಗುವಿನ ಮೇಲೆ ಬೀಳುತ್ತದೆ. ಇದರಿಂದ ಇಡೀ ಕುಟುಂಬ ಗಾಬರಿಗೊಳಗಾಗುತ್ತದೆ. ಅಲ್ಲದೆ ಮಹಿಳೆ ಕೂಡಲೇ ಎದ್ದು ಮಗನ ಎಳೆದುಕೊಂಡು ಕೈ, ತಲೆ ಉಜ್ಜುತ್ತಾರೆ. ಇತ್ತ ವ್ಯಕ್ತಿ ಬಿದ್ದ ಫ್ಯಾನ್ ಅನ್ನು ಪಕ್ಕದಲ್ಲಿ ಇಡುತ್ತಾರೆ. ಆದರೆ ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ. ಇದನ್ನೂ ಓದಿ: ಯೋಗಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ – ಉದ್ದವ್ ವಿರುದ್ಧ ದೂರು

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಹಲವಾರು ಕಾಮೆಂಟ್ ಗಳು ಬರುತ್ತಿದೆ. ಹಲವರು ಗ್ರೇಟ್ ಎಸ್ಕೇಪ್ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಅದೃಷ್ಟವಂತ ಫ್ಯಾಮಿಲಿ ಎಂದಿದ್ದಾರೆ. ಒಟ್ಟಿನಲ್ಲಿ ಯಾವುದೇ ಅಪಾಯವಿಲ್ಲದೆ ಪಾರಾದ ಕುಟುಂಬ ನೋಡಿ ಜನ ಸಂತಸಪಟ್ಟಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿನವರು ನನ್ನ ರೇಪ್ ಮಾಡಲು ಯತ್ನಿಸುತ್ತಿದ್ದಾರೆ: ಅರಗ ಜ್ಞಾನೇಂದ್ರ

  • ಕೊಡಗಿನ ಹೈ ಕ್ವಾಲಿಟಿ ಕಾಳುಮೆಣಸಿನ ಜೊತೆ ವಿಯೇಟ್ನಾಂ ಮೆಣಸು ಕಲಬೆರಕೆ- ಜಿಲ್ಲಾ ರೈತ ಸಂಘದ ಪ್ರತಿಭಟನೆ

    ಕೊಡಗಿನ ಹೈ ಕ್ವಾಲಿಟಿ ಕಾಳುಮೆಣಸಿನ ಜೊತೆ ವಿಯೇಟ್ನಾಂ ಮೆಣಸು ಕಲಬೆರಕೆ- ಜಿಲ್ಲಾ ರೈತ ಸಂಘದ ಪ್ರತಿಭಟನೆ

    ಮಡಿಕೇರಿ: ವಿಯೇಟ್ನಾಂನಿಂದ ಅತ್ಯಂತ ಕಳಪೆ ಗುಣಮಟ್ಟದ ಮೆಣಸು ಆಮದಾಗುತ್ತಿದ್ದು, ಉತ್ತಮ ಗುಣಮಟ್ಟದ ಕೊಡಗಿನ ಕಾಳುಮೆಣಸಿನೊಂದಿಗೆ ಕಲಬೆರಕೆಯಾಗಿ ಮಾರಾಟವಾಗುತ್ತಿದ್ದೆ. ಇದರಿಂದ ಕೊಡಗಿನ ಹೈ ಕ್ವಾಲಿಟಿ ಪೆಪ್ಪರ್ ತನ್ನ ಕ್ವಾಲಿಟಿ ಕಳೆದುಕೊಳ್ಳುತ್ತಿರೋದರಿಂದ ಮೆಣಸಿನ ಬೆಲೆ ಗಣನೀಯವಾಗಿ ಕುಸಿತ ಕಂಡಿದೆ.

    ಕಲಬೆರಕೆ ಮಾಡೋ ಕಾರ್ಯ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಡೆಯುತ್ತಿದೆ. ಇದಕ್ಕೆ ಪೂರಕ ಎಂಬಂತೆ ರೋಸ್‍ಮೇರಿ ಇಂಟರ್ ನ್ಯಾಷನಲ್ ಕಂಪೆನಿಗೆ ನೀಡುತ್ತಿರೋ ಗೋಣಿಕೊಪ್ಪ ಎಪಿಎಂಸಿ ಗೋಡೌನ್‍ ನಲ್ಲಿ ಕಲಬೆರಕೆ ಹುಡಿಗಳು, ಯಂತ್ರಗಳು ಹಾಗೂ ವಿಯೆಟ್ನಾಂ ಪೆಪ್ಪರ್ ಪತ್ತೆಯಾಗಿದೆ.

    ಎಪಿಎಂಸಿಗೆ ಸೇರಿದ ಗೋಡೌನ್ ಒಳಗೆ ಕಲಬೆರಕೆ ನಡೆಯುತ್ತಿರೋದ್ರಲ್ಲಿ ಆಡಳಿತ ಮಂಡಳಿ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದ್ದು, ಇದನ್ನು ಖಂಡಿಸಿ ಕೊಡಗು ಜಿಲ್ಲಾ ರೈತ ಸಂಘ ಬೃಹತ್ ಟ್ರ್ಯಾಕ್ಟರ್ ಜಾಥಾ ನಡೆಸಿ ವಿಯೆಟ್ನಾಂ ಪೆಪ್ಪರ್ ಆಮದು ನಿಷೇಧಕ್ಕೆ ಆಗ್ರಹಿಸಿದ್ರು.

    ಇದಕ್ಕೆಲ್ಲಾ ಎಪಿಎಂಸಿಯ ಬಿಜೆಪಿ ಹಿಡಿತದ ಆಡಳಿತ ಮಂಡಳಿಯೇ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದೇ ವಿಚಾರವಾಗಿ ಕೊಡಗು ಜಿಲ್ಲಾ ಪಂಚಾಯಿತಿ ಸಭೆಯಲ್ಲೂ ಪ್ರಸ್ತಾಪವಾಗಿ ಕೋಲಾಹಲಕ್ಕೆ ಕಾರಣವಾಯಿತು. ಎಪಿಎಂಸಿ ವಿಯೆಟ್ನಾಂ ಕಾಳುಮೆಣಸು ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಸಭೆಯಲ್ಲಿ ಪ್ರತಿಭಟನೆ ನಡೆಸಿದರು.

    ಒಟ್ಟಿನಲ್ಲಿ ವಿಯೇಟ್ನಾಂ ಕಾಳುಮೆಣಸು ಈಗ ಕೊಡಗಿನ ರೈತರನ್ನು ಕಂಗೆಡುವಂತೆ ಮಾಡಿದೆ.