Tag: ವಿಯೆನ್ನಾ

  • ಲಸಿಕೆ ಪಡೆಯದವರ ವಿರುದ್ಧ ವಿಭಿನ್ನ ಕ್ರಮಕ್ಕೆ ಮುಂದಾದ ಆಸ್ಟ್ರಿಯಾ

    ಲಸಿಕೆ ಪಡೆಯದವರ ವಿರುದ್ಧ ವಿಭಿನ್ನ ಕ್ರಮಕ್ಕೆ ಮುಂದಾದ ಆಸ್ಟ್ರಿಯಾ

    ವಿಯೆನ್ನಾ: ಕೊರೊನಾ ಲಸಿಕೆ ಪಡೆಯಲು ಉಪೇಕ್ಷಿಸುವ ಜನರ ಮೇಲೆ ವಿಶ್ವದಲ್ಲೇ ಅತ್ಯಂತ ಕಠಿಣ ಕ್ರಮವೊದನ್ನು ಯುರೋಪ್‍ನ ಆಸ್ಟ್ರೀಯಾ ದೇಶ ಕೈಗೊಳ್ಳುವ ಮೂಲಕವಾಗಿ ಸುದ್ದಿಯಾಗಿದೆ.

    ಕೋವಿಡ್ 5ನೇ ಅಲೆಯ ಭೀತಿಯಲ್ಲಿರುವ ಆಸ್ಟ್ರಿಯಾ ಲಸಿಕೆ ಪಡೆಯದವರಿಗೆ ಲಾಕ್‍ಡೌನ್ ಘೋಷಣೆ ಮಾಡಿದೆ. ಕೋವಿಡ್ ಲಸಿಕೆ ಪಡೆಯದವರು ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಸಿಕ್ಕಸಿಕ್ಕಲ್ಲಿ ದಂಡ ವಿಧಿಸಲು ಮುಂದಾಗಿದೆ. ಇದನ್ನೂ ಓದಿ: ಕೋವ್ಯಾಕ್ಸಿನ್ ಪರೀಕ್ಷೆಗೆ 20 ಕೋತಿ ಹುಡುಕಿದ್ದು ಹೇಗೆ ಗೊತ್ತಾ?

    ಲಸಿಕೆ ಪಡೆಯದವರು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡರೆ 1450 ಯೂರೋ (1.23 ಲಕ್ಷ ರು.) ದಂಡ ವಿಧಿಸಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಆಸ್ಟ್ರಿಯಾದಲ್ಲಿ 89 ಲಕ್ಷ ಜನರಿದ್ದು, ಆ ಪೈಕಿ 20 ಲಕ್ಷ ಜನರು ಲಸಿಕೆ ಪಡೆದಿಲ್ಲ. ಅವರೆಲ್ಲರ ಮೇಲೆ ಸರ್ಕಾರದ ಹೊಸ ಆದೇಶ ಪರಿಣಾಮ ಬೀರಲಿದೆ. ಸಾರ್ವಜನಿಕರಿಗೆ ಲಸಿಕೆ ನೀಡಲು ಇಲ್ಲಿನ ಸರ್ಕಾರ ಉತ್ತೆಜನ ಕ್ರಮಗಳನ್ನು ಕೈಗೊಂಡಿದೆ. ಆದರೆ ಲಸಿಕೆ ಕುರಿತಾಗಿ ಸಂದೇಹ ಮತ್ತು ಅನುಮಾನ ಹೊಂದಿರುವ ಆಸ್ಟ್ರಿಯಾ ನಾಗರಿಕರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಯೂರೋಪ್ ರಾಷ್ಟ್ರಗಳು ಕೋವಿಡ್ ಹರಡುವಿಕೆಯ ಮೂಲವಾಗಿದೆ. ಈ ಹಿನ್ನೆಲೆಯಲ್ಲಿ ಲಾಕ್‍ಡೌನ್ ಕ್ರಮ ಕೈಗೊಳ್ಳಲಾಗಿದೆ.  ಇದನ್ನೂ ಓದಿ: ಇಂದಿನಿಂದ ಶಬರಿಮಲೆ ಯಾತ್ರೆ ಆರಂಭ – 2 ಡೋಸ್ ಲಸಿಕೆ ಕಡ್ಡಾಯ

    12 ವರ್ಷ ಮೇಲ್ಪಟ್ಟವರಿಗೆ ನಿಯಮ ಅನ್ವಯ: ಕೋವಿಡ್ ಲಸಿಕೆ ಪಡೆಯದ 12 ವರ್ಷ ಮೇಲ್ಪಟ್ಟದೇಶದ ಯಾವುದೇ ವ್ಯಕ್ತಿಯು ಅನಿವಾರ್ಯವಲ್ಲದ ಕಾರಣಕ್ಕೆ ಯಾವುದೇ ಕಾರಣಕ್ಕೂ ಮನೆಯಿಂದ ಹೊರಹೋಗುವಂತಿಲ್ಲ. ಒಂದು ವೇಳೆ ಹೊರಬಂದರೆ ಪೊಲೀಸರು ನಿಗಾ ವಹಿಸಲಿದ್ದಾರೆ. ಲಸಿಕೆ ಪಡೆಯದಿದ್ದರೆ ದಂಡ ವಿಧಿಸಲಿದ್ದಾರೆ. ವೈದ್ಯರ ಭೇಟಿ, ಲಸಿಕೆ ಪಡೆಯಲು ಹಾಗೂ ಆಹಾರ ಧಾನ್ಯ ಖರೀದಿಗೆ ಮಾತ್ರ ಮನೆಯಿಂದ ಹೊರಬರಬಹುದು ಎಂದು ಸರ್ಕಾರ ಹೇಳಿದೆ. ಎರಡೂ ಡೋಸ್ ಪಡೆಯದವರಿಗೆ ಈಗಾಗಲೇ ಮನರಂಜನಾ ಸ್ಥಳ, ರೆಸ್ಟೊರೆಂಟ್, ಸಲೂನ್ ಸೇರಿದಂತೆ ಸಾರ್ವಜನಿಕ ಪ್ರದೇಶದಲ್ಲಿ ನಿಷೇಧ ಹೇರಲಾಗಿದೆ. ಇದನ್ನೂ ಓದಿ: ಅಪ್ಪು ಮಾಡಿದ ಕೆಲಸಗಳನ್ನು ಮುಂದುವರಿಸಬೇಕು ಅಂದ್ಕೊಂಡಿದ್ದೇನೆ: ರಾಘವೇಂದ್ರ ರಾಜ್‍ಕುಮಾರ್

    ಈ ಬಗ್ಗೆ ವಿಯೆನ್ನಾದಲ್ಲಿ ಮಾತನಾಡಿದ ಚಾನ್ಸಲರ್ ಅಲೆಕ್ಸಾಂಡರ್ ಶಾಲೆನ್‍ಬರ್ಗ್ ಅವರು, ಕಳೆದ ಕೆಲ ದಿನಗಳಿಂದ ಕೋವಿಡ್ ಅಬ್ಬರ ತೀವ್ರವಾಗಿದ್ದು, ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ತುಳುಕುತ್ತಿವೆ. ರೋಗಿಗಳನ್ನು ಗುಣಪಡಿಸುವ ಕಾಯಕದಲ್ಲಿ ವೈದ್ಯ ಸಿಬ್ಬಂದಿ ಹೈರಾಣಾಗಿದ್ದಾರೆ. ಆದರೆ ಸೋಂಕು ಮತ್ತಷ್ಟು ತೀವ್ರವಾದರೆ ಅದನ್ನು ನಿಭಾಯಿಸಲು ವೈದ್ಯರಿಂದ ಸಾಧ್ಯವಿಲ್ಲ. ದೇಶದ ಸರ್ಕಾರವಾಗಿ ಜನತೆಯನ್ನು ಕೋವಿಡ್‍ನಿಂದ ರಕ್ಷಿಸುವುದು ನಮ್ಮ ಜವಾಬ್ದಾರಿ. ಹೀಗಾಗಿ ಲಸಿಕೆ ಪಡೆಯದವರ ಮೇಲೆ ನಿರ್ಬಂಧ ಹೇರಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ನಾಳೆ 3 ಗಂಟೆಗೆ ಅರಮನೆ ಮೈದಾನದಲ್ಲಿ ಪುನೀತ ನಮನ- 1,500 ಮಂದಿಗೆ ಮಾತ್ರ ಅವಕಾಶ

  • ಜೋರಾಗಿ ಹೂಸು ಬಿಟ್ಟು 43 ಸಾವಿರ ದಂಡ ತೆತ್ತ!

    ಜೋರಾಗಿ ಹೂಸು ಬಿಟ್ಟು 43 ಸಾವಿರ ದಂಡ ತೆತ್ತ!

    ವಿಯೆನ್ನಾ: ಜೋರಾಗಿ ಹೂಸು ಬಿಟ್ಟ ವ್ಯಕ್ತಿಯೊಬ್ಬ 43 ಸಾವಿರ ರೂ. ದಂಡ ಕಟ್ಟಿದ ಪ್ರಸಂಗವೊಂದು ಆಸ್ಪ್ರಿಯಾ ದೇಶದ ವಿಯೆನ್ನಾದಲ್ಲಿ ನಡೆದಿದೆ.

    ವಿಯೆನ್ನಾ ಪೊಲೀಸರು ಈ ತಿಂಗಳ ಆರಂಭದಲ್ಲಿ ನಾಕಾಬಂದಿ ವೇಳೆ ತಪಾಸಣೆ ನಡೆಸಿದ್ದರು. ಆಗ ಅಲ್ಲಿಗೆ ಬಂದಿದ್ದ ವ್ಯಕ್ತಿಯೊಬ್ಬ ಜೋರಾಗಿ ಹೂಸು ಬಿಟ್ಟಿದ್ದಾನೆ. ಪರಿಣಾಮ ವಾಸನೆ ತಡೆಯಲಾರದೇ ಕೋಪಗೊಂಡ ಪೊಲೀಸರು 500 ಯುರೋ (43 ಸಾವಿರ ರೂ.)  ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ಹೂಸಿನ ದುರ್ವಾಸನೆಯನ್ನು ಸುವಾಸನೆಯಾಗಿ ಮಾಡೋ ಮಾತ್ರೆ ಮಾರುಕಟ್ಟೆಗೆ ಎಂಟ್ರಿ

    ವ್ಯಕ್ತಿಯು ಉದ್ದೇಶಪೂರ್ವಕವಾಗಿ ಹೂಸು ಬಿಟ್ಟಿದ್ದಾನೆ. ಹೀಗಾಗಿ ದಂಡ ಹಾಕಲಾಗಿದೆ ಎಂದು ವಿಯೆನ್ನಾ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರವಾಗಿ ಕಿಡಿಕಾರಿರುವ ವ್ಯಕ್ತಿಯು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರ ಹಾಕಿದ್ದಾನೆ. ಆದರೆ ಕೆಲ ನೆಟ್ಟಿಗರು ವ್ಯಕ್ತಿಯ ಪರಿಸ್ಥಿತಿಯನ್ನು ಕಂಡು ನಕ್ಕು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಹೂಸು ವಾಸನೆ ತಾಳಲಾರದೆ ಕಲಾಪ ಮುಂದೂಡಿಕೆ

    ವ್ಯಕ್ತಿಯ ಆರೋಪಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿರುವ ವಿಯೆನ್ನಾ ಪೊಲೀಸರು, ವ್ಯಕ್ತಿ ಉದ್ದೇಶಪೂರ್ವಕವಾಗಿ ಅಸಭ್ಯವಾಗಿ ವರ್ತಿಸಿದ್ದಾನೆ. ಒಂದು ವೇಳೆ ದಂಡದ ಹಣವನ್ನು ವಾಪಸ್ ಪಡೆಬೇಕಿದ್ದರೆ ಕೋರ್ಟ್ ನಲ್ಲಿ ಪ್ರಶ್ನಿಸಿಕೊಳ್ಳಲಿ ಎಂದು ಹೇಳಿದ್ದಾರೆ.