Tag: ವಿಯು ಚಿತ್ರಮಂದಿರ

  • ಚಿತ್ರಮಂದಿರದಲ್ಲಿ ಸೀಟ್ ಅಡಿ ತಲೆ ಸಿಲುಕಿ ವ್ಯಕ್ತಿ ಸಾವು

    ಚಿತ್ರಮಂದಿರದಲ್ಲಿ ಸೀಟ್ ಅಡಿ ತಲೆ ಸಿಲುಕಿ ವ್ಯಕ್ತಿ ಸಾವು

    ಲಂಡನ್: ಸಿನಿಮಾ ವೀಕ್ಷಿಸಲು ಹೋದ ವ್ಯಕ್ತಿಯೊಬ್ಬರು ಸೀಟಿನ ಕೆಳಗೆ ಬಿದ್ದಿದ್ದ ಮೊಬೈಲ್ ಫೋನ್ ತೆಗೆಯಲು ಹೋಗಿ ಅವರ ತಲೆ ಸೀಟಿನ ಅಡಿ ಸಿಲುಕಿಕೊಂಡ ಪರಿಣಾಮ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಇಂಗ್ಲೆಂಡ್‍ನ ಬರ್ಮಿಂಗ್‍ಹಾಮ್‍ನಲ್ಲಿ ನಡೆದಿದೆ.

    ಮಾರ್ಚ್ 9ರಂದು ವ್ಯಕ್ತಿ ಸ್ಟಾರ್ ಸಿಟಿ ಮನೊರಂಜನೆ ಮಳಿಗೆಯ ವಿಯು ಚಿತ್ರಮಂದಿರಕ್ಕೆ ಸಿನಿಮಾ ವೀಕ್ಷಿಸಲು ಬಂದಿದ್ದರು. ಎರಡು ಗೋಲ್ಡ್ ಕ್ಲಾಸ್ ಸೀಟುಗಳ ಮಧ್ಯೆ ತನ್ನ ಮೊಬೈಲ್ ಫೋನ್ ಬೀಳಿಸಿಕೊಂಡಿದ್ದರಿಂದ ಸೀಟಿನ ಅಡಿ ಹುಡುಕಲು ಹೋದಾಗ ಎಲೆಕ್ಟ್ರಾನಿಕ್ ಫುಟ್‍ರೆಸ್ಟ್ ತಲೆಯ ಮೇಲೆ ಬಿದ್ದಿದೆ. ಇದರ ಪರಿಣಾಮ ಅವರು ನೆಲಕ್ಕುರುಳಿದ್ದರು.

    ಚಿತ್ರಮಂದಿರದ ಸಿಬ್ಬಂದಿಗಳು ಸೀಟ್‍ನ ಅಡಿ ಸಿಲುಕಿಕೊಂಡ ವ್ಯಕ್ತಿಯನ್ನ ಹೊರ ತೆಗೆಯಲು ಸಾಕಷ್ಟು ಪ್ರಯತ್ನ ಮಾಡಿದರು. ಕೊನೆಯಲ್ಲಿ ಆ ಸೀಟಿನ ಎಲೆಕ್ಟ್ರಾನಿಕ್ ಫುಟ್‍ರೆಸ್ಟ್ ಮುರಿದು ವ್ಯಕ್ತಿಯನ್ನ ಹೊರತರಲಾಗಿದೆ.

    ಕುರ್ಚಿಯಿಂದ ಹೊರ ಬಂದ ವ್ಯಕ್ತಿಯು ನಿತ್ರಾಣವಾಗಿ ಹೃದಯಾಘಾತ ಸಂಭವಿಸಿದ್ದರಿಂದ ಅವರನ್ನ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಅವರು ಮಾರ್ಚ್ 16 ರಂದು ಮೃತಪಟ್ಟಿದ್ದಾರೆ.

    ವಿಯು ಚಿತ್ರಮಂದಿರವು ವ್ಯಕ್ತಿಯ ಸಾವನ್ನ ಖಚಿತಪಡಿಸಿದ್ದು, ಮಾರ್ಚ್ 9ರಂದು ಘಟನೆ ನಡೆದ ಕೂಡಲೇ ವ್ಯಕ್ತಿಯನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಶುಕ್ರವಾರ ಮೃತಪಟ್ಟಿರುವುದು ಬೇಸರದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.