Tag: ವಿಯಟ್ನಾಂ

  • ಯೋಗ’ಯೋಗಾ’ – ವಿಯೆಟ್ನಾಂ  ಯುವತಿಯ ಕೈಹಿಡಿದ ಹಾವೇರಿಯ ಯುವಕ

    ಯೋಗ’ಯೋಗಾ’ – ವಿಯೆಟ್ನಾಂ ಯುವತಿಯ ಕೈಹಿಡಿದ ಹಾವೇರಿಯ ಯುವಕ

    – ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವದಂಪತಿ

    ಹಾವೇರಿ: ಇಂದು ಜಿಲ್ಲೆಯಲ್ಲೊಂದು ಅಪರೂಪದ ಮದುವೆ ನಡೆದಿದೆ. ವಿಯೆಟ್ನಾಂನ ಯುವತಿ ಜಿಲ್ಲೆಯ ಹಳ್ಳಿಯ ಯುವಕನನ್ನ ವರಿಸಿದ್ದಾಳೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ರಾಮತೀರ್ಥಹೊಸಕೊಪ್ಪ ಗ್ರಾಮದಲ್ಲಿ ಈ ಅಪರೂಪದ ಮದುವೆ ನಡೆಯಿತು.

    ವಿಯೆಟ್ನಾಂ ಯುವತಿಗೆ ತಾಳಿ ಕಟ್ಟಿ ಬಾಳಸಂಗಾತಿಯಾಗಿ ಸ್ವೀಕಾರ ಮಾಡಿದ ಯುವಕನ ಹೆಸರು ಪ್ರದೀಪ್ ಖಂಡನವರ. ಐಟಿಐ ಮುಗಿಸಿ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಯೋಗದಲ್ಲಿ ಪರಿಣಿತಿ ಪಡೆದಿದ್ದ ಪ್ರದೀಪ್ ಸ್ನೇಹಿತರ ಜೊತೆಗೂಡಿ ವಿಯೆಟ್ನಾಂಗೆ ಯೋಗ ಕಲಿಸೋಕೆ ಎಂದು ಹೋಗಿದ್ದರು. ಕಳೆದ ಎಂಟು ವರ್ಷಗಳಿಂದ ಯೋಗ ಶಿಕ್ಷಕನಾಗಿ ವಿಯೆಟ್ನಾಂನ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದರು. ಇದನ್ನೂ ಓದಿ: ‘ಸುಶಾಂತ್ ಸ್ಟಾರ್ ಅಲ್ಲ’ ಎಂದು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬಂದಿರಲಿಲ್ಲ: ಅಭಿಷೇಕ್ ಕಪೂರ್

    ಅದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಕುಯಾನ್ ತ್ರಾಂಗ್(ಪ್ರೀತಿ) ಯುವತಿಯೊಂದಿಗೆ ಪ್ರೇಮಾಂಕುರ ಆಗಿತ್ತು. ಕಳೆದ ಕೆಲವು ವರ್ಷಗಳಿಂದ ಇಬ್ಬರ ನಡುವೆ ಒಬ್ಬರನ್ನೊಬ್ಬರು ಬಿಟ್ಟಿಲಾರದಷ್ಟು ಪ್ರೀತಿ ಆಗಾದವಾಗಿ ಬೆಳೆದಿತ್ತು. ನಂತರ ಪ್ರದೀಪ್ ತನ್ನ ಪ್ರೀತಿ, ಪ್ರೇಮದ ವಿಚಾರವನ್ನ ಮನೆಯವರಿಗೆ ತಿಳಿಸಿ ಮನೆಯವರ ಅನುಮತಿ ಮೇರೆಗೆ ಇವತ್ತು ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

    ಹಿಂದೂ ಸಂಪ್ರದಾಯದಂತೆ ಪ್ರದೀಪ್ ಮನೆಯ ಮುಂದೆ ಚಪ್ಪರ ಹಾಕಿ ಸಂಭ್ರಮದಿಂದ ಮದುವೆ ಮಾಡಲಾಯಿತು. ಮನೆಯ ಮುಂದೆ ಹಾಕಿದ್ದ ಚಪ್ಪರದಲ್ಲಿ ವಧು-ವರರಿಗೆ ಸುರಿಗೆ ನೀರು ಹಾಕಿ, ಬಾಸಿಂಗ ಕಟ್ಟಿ ತಾಳಿ ಕಟ್ಟಿಸಲಾಯಿತು. ವಿಯಟ್ನಾಂ ಯುವತಿ ಪುರೋಹಿತರ ಮಂತ್ರ ಘೋಷಣೆಗಳೊಂದಿಗೆ ಪ್ರದೀಪ್ ಜೊತೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಳು.

    ಪ್ರೀತಿಗೆ ಓರ್ವ ಸಹೋದರಿ ಮತ್ತು ತಾಯಿ ಇದ್ದಾರೆ. ಆದರೆ ಸಹೋದರಿಗೆ ಹೆರಿಗೆ ಆಗಿದ್ದರಿಂದ ತಾಯಿ ಸಹೋದರಿಯ ಜೊತೆಗಿದ್ದಾರೆ. ಆದರೆ ಮದುವೆ ನಿಶ್ಚಯವಾಗಿ ದಿನಾಂಕ ಫಿಕ್ಸ್ ಆಗಿದ್ದರಿಂದ ಇವತ್ತು ಪ್ರದೀಪ್ ಮತ್ತು ಪ್ರೀತಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಿಂದೂ ಸಂಪ್ರದಾಯದಂತೆ ನಡೆದ ಮದುವೆ ಮಂಗಳವಾದ್ಯಗಳೊಂದಿಗೆ ಅದ್ಧೂರಿಯಾಗಿ ನಡೆಯಿತು. ಇದನ್ನೂ ಓದಿ: 263 ಪಾಸಿಟಿವ್, 7 ಸಾವು – ಇಂದು 2,25,152 ಜನರಿಗೆ ಲಸಿಕೆ

    ಪರಸ್ಪರ ಹಾರ ಬದಲಿಸಿಕೊಂಡು ದಾಂಪತ್ಯಕ್ಕೆ ಕಾಲಿಟ್ಟ ಇಬ್ಬರು ಅರುಂಧತಿ ನಕ್ಷತ್ರ ನೋಡಿ ಖುಷಿಪಟ್ಟರು. ಯುವಕನ ಸಂಬಂಧಿಕರು, ಸ್ನೇಹಿತರು ಹಾಗೂ ಗ್ರಾಮದ ನೂರಾರು ಜನರು ಮದುವೆಗೆ ಬಂದು ವಧು-ವರರಿಗೆ ಶುಭ ಹಾರೈಸಿದರು.