Tag: ವಿಮ್ಸ್ ಆಸ್ಪತೆ

  • ಮಳೆಗೆ ಸೋರುತ್ತಿದೆ ವಿಮ್ಸ್ ಆಸ್ಪತ್ರೆಯ ಆಪರೇಷನ್ ಕೊಠಡಿ

    ಮಳೆಗೆ ಸೋರುತ್ತಿದೆ ವಿಮ್ಸ್ ಆಸ್ಪತ್ರೆಯ ಆಪರೇಷನ್ ಕೊಠಡಿ

    ಬಳ್ಳಾರಿ: ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ದುಸ್ಥಿತಿ ಮುಂದುವರಿದಿದೆ. ಶಿಥಿಲಾವಸ್ಥೆಯಲ್ಲಿರುವ ಶಸ್ತ್ರಚಿಕಿತ್ಸಾ ಕೊಠಡಿಗಳು ಮಳೆನೀರಿಗೆ ಸೋರುತ್ತಿವೆ.

    ಸೆಪ್ಟಂಬರ್ 12ರಂದು ವಿಮ್ಸ್ ಶಸ್ತ್ರಚಿಕಿತ್ಸೆಯ ನೆಲಮಹಡಿ ಸೀಲಿಂಗ್ ಸೋರಿಕೆಯಾಗಿ ಕುಸಿದುಬಿದ್ದಿತ್ತು. ಇದೀಗ ಆಸ್ಪತ್ರೆಯ ಎರಡನೇ ಮಹಡಿಯಲ್ಲಿರುವ ಯುರಾಲಜಿ ಶಸ್ತ್ರಚಕಿತ್ಸೆ ಕೊಠಡಿಯ ಛಾವಣಿ ಮಳೆ ನೀರಿನಿಂದ ಸೋರುತ್ತಿದ್ದು, ನೀರಿನಿಂದ ಆವೃತವಾಗಿದೆ. ಕೊಠಡಿಯಲ್ಲಿದ್ದ ಉಪಕರಣಗಳು ಹಾಗೂ ಇನ್ನಿತರ ವಸ್ತುಗಳ ಮೇಲೆ ಮಳೆ ನೀರು ಬಿದ್ದಿದ್ದು, ಓಟಿ ಕೊಠಡಿ ಸ್ವಚ್ಛವಾಗಿಡಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

    ದುಸ್ಥಿತಿಯಲ್ಲಿರುವ ಓಟಿ ಕೊಠಡಿಗಳಲ್ಲಿ ಕೆಲಸ ಮಾಡುವುದು ಕಷ್ಟವಾಗುತ್ತದೆ ಎಂದು ವಿಮ್ಸ್ ಪಿಜಿ ವಿದ್ಯಾರ್ಥಿಗಳು ವಿಮ್ಸ್ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಕಳೆದೆರಡು ದಿನಗಳ ಮಳೆಗೆ ವಿಮ್ಸ್ ಆಸ್ಪತ್ರೆಯ ಹಳೆಯ ಕಟ್ಟಡ ಇನ್ನಷ್ಟು ದುಸ್ಥಿತಿಯತ್ತ ತಲುಪಿದೆ.

  • ಏಕಕಾಲಕ್ಕೆ ಜನಿಸಿದ್ದ 4 ಶಿಶುಗಳು ಸಾವು- ಮುಗಿಲುಮುಟ್ಟಿದ ತಾಯಿಯ ಆಕ್ರಂದನ

    ಏಕಕಾಲಕ್ಕೆ ಜನಿಸಿದ್ದ 4 ಶಿಶುಗಳು ಸಾವು- ಮುಗಿಲುಮುಟ್ಟಿದ ತಾಯಿಯ ಆಕ್ರಂದನ

    ಬಳ್ಳಾರಿ: ಕಳೆದ ಶುಕ್ರವಾರ ಏಕಕಾಲಕ್ಕೆ ಜನಿಸಿದ್ದ ನಾಲ್ಕು ಮಕ್ಕಳು ನಗರದ ವಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿವೆ.

    ತಾಲೂಕಿನ ಎಮ್ಮಿಗನೂರು ಗ್ರಾಮದ ಗುಂಡೂರು ಹುಲಿಗೆಮ್ಮ(26) ತನ್ನ ಎರಡನೇ ಹೆರಿಗೆಯಲ್ಲಿ ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಆದ್ರೆ ಹುಲಿಗೆಮ್ಮ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದು ಪ್ರೀ ಮೆಚ್ಯೂರ್ ಡೆಲಿವರಿ ಆದ ಪರಿಣಾಮ ಮತ್ತು ಮಕ್ಕಳ ತೂಕ ಕಡಿಮೆಯಿದ್ದ ಪರಿಣಾಮ ನಾಲ್ಕು ಮಕ್ಕಳು ಕಳೆದ ರಾತ್ರಿ ವಿಮ್ಸ್ ನಲ್ಲಿ ಮೃತಪಟ್ಟಿವೆ.

    ವಿಮ್ಸ್ ವೈದ್ಯರು ಸುರಕ್ಷತೆ ದೃಷ್ಟಿಯಿಂದ ಮಕ್ಕಳನ್ನು ಎನ್‍ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ರು. ಆದ್ರೂ ಮಕ್ಕಳ ತೂಕ ಕಡಿಮೆ ಇದ್ದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟವೆ. ವೈದ್ಯರು ಸಾಕಷ್ಟು ಪ್ರಯತ್ನ ಪಟ್ಟರೂ ಮಕ್ಕಳನ್ನು ಉಳಿಸಿಕೊಳ್ಳಲು ವಿಫಲವಾಗಿದ್ದಾರೆ.

    ಈ ಮೂಲಕ ಏಕಕಾಲಕ್ಕೆ ಜನಿಸಿದ್ದ ನಾಲ್ಕು ಮಕ್ಕಳು ಬದುಕುಳಿಯದಿರುವುದು ವಿಪರ್ಯಾಸವಾಗಿದೆ. ಈ ನಾಲ್ಕು ಮಕ್ಕಳನ್ನ ಕಳೆದುಕೊಂಡ ಹುಲಿಗೆಮ್ಮ ಮನೆಯಲ್ಲೀಗ ಆಕ್ರಂದನ ಮುಗಿಲುಮುಟ್ಟಿದೆ.

     

    ಇದನ್ನೂ ಓದಿ:  2ನೇ ಹೆರಿಗೆ- 2 ಹೆಣ್ಣು, 2 ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

     

  • 2ನೇ ಹೆರಿಗೆ- 2 ಹೆಣ್ಣು, 2 ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    2ನೇ ಹೆರಿಗೆ- 2 ಹೆಣ್ಣು, 2 ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ಬಳ್ಳಾರಿ: ಜಿಲ್ಲೆಯ ವಿಮ್ಸ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ಬಳ್ಳಾರಿ ತಾಲೂಕಿನ ಎಮ್ಮಿಗನೂರು ಗ್ರಾಮದ 26 ವರ್ಷದ ಗುಂಡೂರು ಹುಲಿಗೆಮ್ಮ ತನ್ನ ಎರಡನೇ ಹೆರಿಗೆಯಲ್ಲಿ ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ.

    ಆರೋಗ್ಯ ದೃಷ್ಟಿಯಿಂದ ಮಕ್ಕಳನ್ನು ಎನ್‍ಐಸಿಯುನಲ್ಲಿ ಆರೈಕೆ ಮಾಡಲಾಗುತ್ತಿದೆ. ಹುಲಿಗೆಮ್ಮ ಅವರು ನಾಲ್ಕು ತಿಂಗಳ ಗರ್ಭಿಣಿಯಾಗಿರುವಾಗಲೇ ಗರ್ಭದಲ್ಲಿ ನಾಲ್ಕು ಮಕ್ಕಳು ಬೆಳೆಯುತ್ತಿರುವ ಬಗ್ಗೆ ವೈದ್ಯರಿಂದ ಮಾಹಿತಿ ತಿಳಿದಿತ್ತು. ಮೊದಲನೇ ಹೆರಿಗೆಯಲ್ಲಿ ಅವರಿಗೆ ಗಂಡು ಮಗು ಜನಿಸಿತ್ತು.

    ಹೀಗಾಗಿ ಹೆರಿಗೆಗೆ ಒಂದು ತಿಂಗಳ ಮುಂಚೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ತಿಂಗಳಿಂದ ವಿಮ್ಸ್ ನಲ್ಲಿ ಆರೈಕೆ ಬಳಿಕ ಶುಕ್ರವಾರ ಸಂಜೆ ಹೆರಿಗೆಯಾಗಿದೆ.