Tag: ವಿಮಾನ ನಿಲ್ದಾಣದ

  • 5.48 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಸಾಗಾಟ- ಮಂಗ್ಳೂರಿನಲ್ಲಿ ಓರ್ವ ವಶಕ್ಕೆ

    5.48 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಸಾಗಾಟ- ಮಂಗ್ಳೂರಿನಲ್ಲಿ ಓರ್ವ ವಶಕ್ಕೆ

    ಮಂಗಳೂರು: 5.48 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಸಾಗಿಸುತ್ತಿದ್ದ ಪ್ರಯಾಣಿಕನೋರ್ವನನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಕೇರಳ ಮೂಲದ ಸಾಹುಲ್ ಹಮೀದ್ ವಿದೇಶಿ ಕರೆನ್ಸಿ ಸಾಗಿಸುತ್ತಿದ್ದ ವ್ಯಕ್ತಿ. ದುಬೈಗೆ ತೆರಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಸಾಹುಲ್ ಹಮೀದ್‍ನನ್ನು ಸಿಐಎಸ್‍ಎಫ್ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ 5.48 ಲಕ್ಷ ರೂ. ಮೌಲ್ಯದ ಬೇರೆ ಬೇರೆ ದೇಶಗಳ ಕರೆನ್ಸಿ ಸಿಕ್ಕಿವೆ.

    ಸಾಹುಲ್ ಹಮೀದ್ ಹ್ಯಾಂಡ್ ಬ್ಯಾಗ್‍ನಲ್ಲಿದ್ದ ಅಮೆರಿಕನ್ ಡಾಲರ್, ಚೀನಾ, ಮಲೇಷ್ಯಾ, ಟರ್ಕಿ ದೇಶಗಳ ಒಟ್ಟು 5.48 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಗಳು ಪತ್ತೆಯಾಗಿವೆ. ಸಿಐಎಸ್‍ಎಫ್ ಸಿಬ್ಬಂದಿ ಆತನನ್ನು ಕಸ್ಟಮ್ಸ್ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಸಾಹುಲ್ ಹಮೀದ್ ವಿದೇಶಿ ಕರೆನ್ಸಿ ಸಾಗಾಟ ಜಾಲದಲ್ಲಿ ಭಾಗಿಯಾಗಿದ್ದಾನೆ ಎಂಬ ಶಂಕೆ ವ್ಯಕ್ತಪಡಿಸಿರುವ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.