Tag: ವಿಮಾನ ಟಿಕೆಟ್‌ ದರ

  • ಮಹಾ ಕುಂಭಮೇಳ – ಬೆಂಗಳೂರು To ಪ್ರಯಾಗ್‌ರಾಜ್‌ ವಿಮಾನ ಟಿಕೆಟ್‌ ದರ ದುಬಾರಿಯೋ ದುಬಾರಿ

    ಮಹಾ ಕುಂಭಮೇಳ – ಬೆಂಗಳೂರು To ಪ್ರಯಾಗ್‌ರಾಜ್‌ ವಿಮಾನ ಟಿಕೆಟ್‌ ದರ ದುಬಾರಿಯೋ ದುಬಾರಿ

    – ಬುಧವಾರ ತ್ರಿವೇಣಿ ಸಂಗಮದಲ್ಲಿ ಭಕ್ತರಿಂದ ಮೌನಿ ಅಮವಾಸ್ಯೆ ಸ್ನಾನ
    – 10 ರಿಂದ 15 ಕೋಟಿಗೂ ಹೆಚ್ಚು ಜನ ಸೇರುವ ನಿರೀಕ್ಷೆ

    ಬೆಂಗಳೂರು: 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳ (Maha Kumbh 2025) ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಕುಂಭಮೇಳವನ್ನ ಕಣ್ತುಂಬಿಕೊಳ್ಳಲು ಕೋಟ್ಯಂತರ ಸಂಖ್ಯೆಯಲ್ಲಿ ಭಕ್ತರು ಪ್ರಯಾಗ್‌ರಾಜ್‌ಗೆ (Prayagraj) ಭೇಟಿ ಕೊಡ್ತಿದ್ದಾರೆ.

    ಬುಧವಾರ (ನಾಳೆ) ವಿಶೇಷವಾದ ಮೌನಿ ಅಮವಾಸ್ಯೆ ದಿನವಾಗಿರೋದ್ರಿಂದ ಪ್ರಯಾಗ್‌ರಾಜ್‌ನಲ್ಲಿರೋ ತ್ರಿವೇಣಿ ಸಂಗಮದಲ್ಲಿ ಸ್ನಾನ (Holy Bath) ಮಾಡಿದ್ರೇ ಎಲ್ಲವೂ ಒಳ್ಳೆಯದಾಗುತ್ತೆ, ಆರೋಗ್ಯ ವೃದ್ಧಿಸುತ್ತೆ, ಕಷ್ಟಕಾರ್ಪಣ್ಯಗಳು ನಶಿಸುತ್ತದೆ ಅನ್ನೋ ನಂಬಿಕೆ ಇದೆ. ಹೀಗಾಗಿ ಬುಧವಾರ ಕುಂಭಮೇಳದಲ್ಲಿ 10 ರಿಂದ 15 ಕೋಟಿ ಜನ ಸೇರುವ ನಿರೀಕ್ಷೆ ಇದೆ.

    ಬುಧವಾರ ಪ್ರಯಾಗ್‌ರಾಜ್‌ಗೆ ಹೋಗಲು ವಿಮಾನದ ಟಿಕೆಟ್‌ ಬುಕ್ (Flight Ticket Book) ಮಾಡಲು ಹೊರಟವರಿಗೆ ಡಬಲ್ ಶಾಕ್ ಆಗಿದೆ. ಹೌದು.. ಬುಧವಾರ ಬೆಂಗಳೂರಿನಿಂದ ಪ್ರಯಾಗ್‌ರಾಜ್‌ಗಿರುವ ಫ್ಲೈಟ್‌ ಟಿಕೆಟ್‌ ದರ 30 ರಿಂದ 39,000 ವರೆಗೆ ಏರಿಕೆಯಾಗಿದ್ದು, ಬೆಂಗಳೂರಿನಿಂದ ಪ್ರಯಾಗ್‌ರಾಜ್‌ಗೆ ಹೋಗುವ ಅಷ್ಟು ವಿಮಾನಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ.

    ಇದರಿಂದ ಟಿಕೆಟ್ ದರ ಹೆಚ್ಚಾಗಿದರೂ ಪರವಾಗಿಲ್ಲ, ಇತಂಹ ಮಹಾಪುಣ್ಯದ ದಿನ ಹೇಗಾದರೂ ಮಾಡಿ ಕುಂಭಮೇಳದ ಮಹಾ ಸ್ನಾನ ಮಾಡಬೇಕು ಅಂತಿದ್ದವರಿಗೆ ಫೈಟ್‌ಗಳು ಹೌಸ್ ಪುಲ್ ಆಗಿರೋದು ಬೇಸರ ತಂದಿದೆ.

    ವಿಮಾನ ಟಿಕೆಟ್‌ ದರ ಹೇಗಿದೆ?
    * ಬೆಂಗಳೂರು ಟು ಪ್ರಯಾಗ್ ರಾಜ್

    • ಸಾಮಾನ್ಯ ದಿನಗಳ ದರ 4 ರಿಂದ 8 ಸಾವಿರ ರೂ.
    • ಇಂದಿನ ದರ- 30 ರಿಂದ 45 ಸಾವಿರ ರೂ.
    • ಫೆಬ್ರವರಿ 26ರ ವರಗೆ ಕನಿಷ್ಠ ದರ 24 ಸಾವಿರ ರೂ.

    ದೆಹಲಿಯಿಂದ ಪ್ರಯಾಗ್‌ರಾಜ್‌ಗೆ

    • ಸಾಮಾನ್ಯ ದಿನಗಳ ದರ – 3 ರಿಂದ 6 ಸಾವಿರ ರೂ.
    • ಇಂದಿನ ದರ-20 ರಿಂದ 30 ಸಾವಿರ ರೂ.
    • ಫೆಬ್ರವರಿ 26ರ ವರೆಗೆ 18 ರಿಂದ 24 ಸಾವಿರದ ವರೆಗೆ ರೂ.