Tag: ವಿಮಾನ ಅಪಹರಣ

  • IC 814: The Kandahar Hijack : ಮುಸ್ಲಿಂ ಬದಲು ಹಿಂದೂಗಳ ಹೆಸರು | ಕೇಂದ್ರದ ಕ್ಲಾಸ್‌, ಅಪಹರಣಕಾರರ ನಿಜವಾದ ಹೆಸರು ಹಾಕಲು ಒಪ್ಪಿಕೊಂಡ ನೆಟ್‌ಫ್ಲಿಕ್ಸ್‌

    IC 814: The Kandahar Hijack : ಮುಸ್ಲಿಂ ಬದಲು ಹಿಂದೂಗಳ ಹೆಸರು | ಕೇಂದ್ರದ ಕ್ಲಾಸ್‌, ಅಪಹರಣಕಾರರ ನಿಜವಾದ ಹೆಸರು ಹಾಕಲು ಒಪ್ಪಿಕೊಂಡ ನೆಟ್‌ಫ್ಲಿಕ್ಸ್‌

    ನವದೆಹಲಿ: IC 814: ದಿ ಕಂದಹಾರ್ ಹೈಜಾಕ್ (IC 814: The Kandahar Hijack) ವೆಬ್‌ಸೀರೀಸ್ ಸಂಬಂಧ ಕೇಂದ್ರ ಸರ್ಕಾರದ ಸಮನ್ಸ್ ಬಿಸಿ ನೆಟ್‌ಫ್ಲಿಕ್ಸ್ (Netflix) ಸಂಸ್ಥೆಗೆ ತಾಕಿದೆ. ಅಪಹರಣಕಾರರ ನಿಜವಾದ ಹೆಸರನ್ನು ನಮೂದಿಸಲು ನೆಟ್‌ಫ್ಲಿಕ್ಸ್ ಒಪ್ಪಿಕೊಂಡಿದೆ.

    ಇಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳ ಮುಂದೆ ಹಾಜರಾದ ನೆಟ್‌ಫ್ಲಿಕ್ಸ್ ಕಂಟೆಂಟ್ ವಿಭಾಗದ ಮುಖ್ಯಸ್ಥೆ ಮೋನಿಗಾ ಶರ‍್ಗಿಲ್ (Monika Shergill) ವಿಚಾರಣೆ ಎದುರಿಸಿದ್ದರು. ಹೈಜಾಕರ್‌ಗಳ ಹೆಸರುಗಳು ಸ್ಪಷ್ಟವಾಗಿ ಕಾಣಿಸುವ ರೀತಿಯಲ್ಲಿ ಸ್ಕ್ರೀನ್‌ ಮೇಲೆ ಹಾಕಿಲ್ಲ ಯಾಕೆ? ಅಪಹರಣಕಾರರಿಗೆ ಮಾನವೀಯತೆ ಇದೆ ಎಂಬರ್ಥದಲ್ಲಿ ಏಕೆ ಚಿತ್ರಿಸಿದ್ದೀರಿ? ಸಂಧಾನಕ್ಕೆ ಮುಂದಾದವರನ್ನು ದುರ್ಬಲರಂತೆ ಏಕೆ ಚಿತ್ರಿಸಿದ್ದೀರಿ? ಸರಣಿಯನ್ನು ಪ್ರಸಾರ ಮಾಡುವ ಮೊದಲು ಸತ್ಯ ಪರಿಶೀಲನೆಯನ್ನು ಮಾಡಲಿಲ್ಲ ಯಾಕೆ ಎಂದು ಪ್ರಶ್ನಿಸಿ ಎಂದು ಕ್ಲಾಸ್ ತೆಗೆದುಕೊಂಡಿದೆ.

    ಈ ಹಂತದಲ್ಲಿ ಕಂಟೆಂಟ್‌ ವಿಚಾರದಲ್ಲಿ ಮರುಸಮೀಕ್ಷೆ ಮಾಡುತ್ತೇವೆ ಎಂಬ ಭರವಸೆಯನ್ನು ಮೋನಿಕಾ ಶರ‍್ಗಿಲ್ ನೀಡಿದ್ದಾರೆ. ಭವಿಷ್ಯದಲ್ಲಿ ದೇಶದ ಪ್ರಜೆಗಳ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಕಂಟೆಂಟ್ ನೀಡುತ್ತೇವೆ. ಮಕ್ಕಳ ವಿಚಾರದಲ್ಲೂ ಜಾಗ್ರತೆ ವಹಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರು ಡೇಸ್ ಹೀರೋ ನಿವಿನ್ ಪೌಲಿ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲು

    ಸೂಕ್ಷ್ಮ ಮತ್ತು ಆಕ್ಷೇಪಾರ್ಹ ಭಾಗಗಳನ್ನು ಪರಿಶೀಲಿಸುವುದಾಗಿ ಮತ್ತು ಬಹುಶಃ ಅವುಗಳನ್ನು ತೆಗೆದುಹಾಕುವುದಾಗಿ ನೆಟ್‌ಫ್ಲಿಕ್ಸ್ ಸಚಿವಾಲಯಕ್ಕೆ ಭರವಸೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

    1999ರಲ್ಲಿ ತಾಲಿಬಾನ್ ಉಗ್ರರು ನಡೆಸಿದ್ದ ಇಂಡಿಯನ್‌ ಏರ್‌ಲೈನ್ಸ್‌ ವಿಮಾನದ ಅಪಹರಣದ ಕಥೆಯನ್ನು ಆಧರಿಸಿ ನಿರ್ಮಾಣವಾಗಿದ್ದ ಸೀರಿಸ್‌ ಆ.29 ರಂದು ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಂಡಿತ್ತು. ದಿ ಕಂದಹಾರ್ ಹೈಜಾಕ್’ ಐಸಿ 814 (The Kandahar Hijack IC 814) ಸರಣಿಯಲ್ಲಿ ಅಪಹರಣಕಾರರ ಹೆಸರನ್ನು ಹಿಂದೂ ಹೆಸರುಗಳಿಗೆ ಬದಲಾಯಿಸಿದ ಆರೋಪದ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.

    ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಹರ್ಕತ್-ಉಲ್-ಮುಜಾಹಿದ್ದೀನ್‌ನಿಂದ 1999ರಲ್ಲಿ ನಡೆದ ಏರ್ ಇಂಡಿಯಾ ವಿಮಾನದ ಅಪಹರಣದಲ್ಲಿ ಮುಸ್ಲಿಂ ಉಗ್ರರ ಹೆಸರನ್ನು ಬದಲಿಸಿ ಹಿಂದೂ ಹೆಸರನ್ನು ಬಳಸಿದ್ದಕ್ಕೆ ಟೀಕೆ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೇ ಕೃತ್ಯದಲ್ಲಿ ಪಾಕಿಸ್ತಾನದ ಪಾತ್ರ ಇಲ್ಲ ಎಂಬಂತೆ ತೋರಿಸಲಾಗಿತ್ತು. ಇದನ್ನೂ ಓದಿ: ಬಳ್ಳಾರಿ ಜೈಲಲ್ಲಿ ಟಿವಿಗಾಗಿ ದರ್ಶನ್ ಮೊರೆ

    ವಿಮಾನ ಅಪಹರಣದಲ್ಲಿ ಇಬ್ರಾಹಿಂ ಅಖ್ತರ್, ಶಾಹಿದ್ ಅಖ್ತರ್‌ಸೈದ್, ಸನ್ನಿ ಸಹ್ಮದ್ ಖಾಜಿ, ಜಹೂರ್ ಮಿಸ್ತ್ರೀ ಮತ್ತು ಶಾಖೀರ್ ಭಾಗಿಯಾಗಿದ್ದರು. ಈ ಉಗ್ರರ ಹೆಸರನ್ನು ಬದಲಿಸಿ ಡಾಕ್ಟರ್, ಬರ್ಗರ್, ಭೋಲಾ ಮತ್ತು ಶಂಕರ್ ಎಂದು ಬದಲಾಯಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿತ್ತು.

     

  • ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎನ್‌ಎಸ್‌ಜಿಯಿಂದ ಆ್ಯಂಟಿ- ಹೈಜಾಕ್‌ ಅಣುಕು ಪ್ರದರ್ಶನ

    ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎನ್‌ಎಸ್‌ಜಿಯಿಂದ ಆ್ಯಂಟಿ- ಹೈಜಾಕ್‌ ಅಣುಕು ಪ್ರದರ್ಶನ

    ಬೆಂಗಳೂರು: ಭದ್ರತೆ ಮತ್ತು ತುರ್ತು ಪ್ರತಿಕ್ರಿಯೆಯ ಪ್ರೋಟೋಕಾಲ್‌ನ ಭಾಗವಾಗಿ ರಾಷ್ಟ್ರೀಯ ಭದ್ರತಾ ಪಡೆ (NSG) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Airport) ಆ್ಯಂಟಿ-ಹೈಜಾಕ್ ಅಣುಕು ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಿತು.

    ಜೂನ್ 24, ಸೋಮವಾರ ರಾತ್ರಿ 8 ಗಂಟೆಗೆ ಆರಂಭಗೊಂಡು, ಮಧ್ಯರಾತ್ರಿ ಮುಕ್ತಾಯಗೊಂಡ ಈ ಅಣುಕು ಪ್ರದರ್ಶನವು ನೈಜ-ಸಮಯದ ಸಂವಹನ ವ್ಯವಸ್ಥೆ, ಸುಧಾರಿತ ಕಣ್ಗಾವಲು ಉಪಕರಣಗಳು ಮತ್ತು ಅತ್ಯಾಧುನಿಕ ಭಯೋತ್ಪಾದನಾ-ವಿರೋಧಿ ಕ್ರಮಗಳಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವಲ್ಲಿ ಎನ್ಎಸ್‌ಜಿಯ ಸಮರ್ಪಣೆಯನ್ನು ಉದಾಹರಿಸುತ್ತದೆ.

    ಈ ಅಣುಕು ಪ್ರದರ್ಶನವು ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ನಿರ್ಣಾಯಕ ನಿಲುವು ಹೊಂದಿರುತ್ತದೆ. ವಿಮಾನ ನಿಲ್ದಾಣದ ಯುದ್ಧತಂತ್ರದ ಸಿದ್ಧತೆಯನ್ನು ನಿರ್ಣಯಿಸಲು ಮತ್ತು ಸುಧಾರಿಸಲು ವಿನ್ಯಾಸಗೊಳಿಸಲಾದ ವಿವಿಧ ಸನ್ನಿವೇಶಗಳನ್ನು ಒಳಗೊಂಡಿತ್ತು.

    ಅಪಹರಿಸಿದ ವಿಮಾನ ಏರ್‌ಪೋರ್ಟ್‌ಗೆ ಬಂದು ಇಳಿದ ಕೃತಕ ಸನ್ನಿವೇಶವನ್ನು ನಿರ್ಮಾಣ ಮಾಡಲಾಗಿತ್ತು. ಇದು ಏರೋಡ್ರೋಮ್ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಕಮಿಟಿ (ಎಇಎಂಸಿ) ಅನ್ನು ತಕ್ಷಣವೇ ಸಕ್ರಿಯಗೊಳಿಸಿತು. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಭಾರತ ಸರ್ಕಾರ, ಸಿಐಎಸ್‌ಎಫ್, ಗ್ರೌಂಡ್ ಹ್ಯಾಂಡ್ಲಿಂಗ್ ಏಜೆನ್ಸಿಗಳು, ಸಿಟಿ ಆಸ್ಪತ್ರೆಗಳು, ಭಾರತೀಯ ವಾಯುಪಡೆ (ಐಎಎಫ್), ಪೊಲೀಸ್, ಟ್ರಾಫಿಕ್ ಪೊಲೀಸ್, ಏರ್ ಟ್ರಾಫಿಕ್ ಸರ್ವೀಸಸ್ ಕಂಟ್ರೋಲ್ (ಎಟಿಸಿ), ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಸ್ಥಳೀಯ ಸಮುದಾಯಗಳು, ನಾಗರಿಕ ಸಂಘ ಸಂಸ್ಥೆಗಳು, ವಾಯುಯಾನ ಸಂಸ್ಥೆಗಳು ಮತ್ತು ಜಿಲ್ಲಾ ಆಡಳಿತ ಅಧಿಕಾರಿಗಳು ಸೇರಿದಂತೆ ಪ್ರಮುಖ ಪಾಲುದಾರರ ಸಹಯೋಗದಲ್ಲಿ ಈ ಅಣುಕು ಪ್ರದರ್ಶನವನ್ನು ಆಯೋಜಿಸಲಾಗಿತ್ತು.  ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್ – ನಾಲ್ವರು ಆರೋಪಿಗಳು ತುಮಕೂರು ಜೈಲಿಗೆ ಶಿಫ್ಟ್

    ತರಬೇತಿ ಪಡೆದ ಸಮಾಲೋಚಕರು, ವಿಮಾನ ಆಗಮನದ ನಂತರ ಹೈಜಾಕರ್ಸ್‌ನೊಂದಿಗೆ ಸಂಧಾನ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಾರೆ. ಪರಿಸ್ಥಿತಿಯನ್ನು ಶಾಂತಿಯುತವಾಗಿ ನಿಭಾಹಿಸುವ ಗುರಿ ಹೊಂದಿರುತ್ತಾರೆ. ಒಂದು ವೇಳೆ ಮಾತುಕತೆ ವಿಫಲವಾದಲ್ಲಿ ರಾಷ್ಟ್ರೀಯ ಭದ್ರತಾ ಪಡೆಯು (NSG) ಮಧ್ಯಪ್ರವೇಶಿಸಲು ಮುಂದಾಗುತ್ತದೆ. ಬೆದರಿಕೆಯ ಮುಂಜಾಗರುಕತೆ ಮತ್ತು ಪರಿಣಾಮಕಾರಿ ನಿಯಂತ್ರಣದಲ್ಲಿ ಕಡಿಮೆ ಹಾನಿ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಪ್ರಮುಖವಾಗಿ ಇರಿಸಲಾಗುತ್ತದೆ.

    ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (ಬಿಐಎಎಲ್) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮರಾರ್ ಅವರು ಅಣುಕು ಪ್ರದರ್ಶನದ ಮಹತ್ವವನ್ನು ಉಲ್ಲೇಖಿಸುತ್ತಾ, “ಈ ನೈಜ-ಸಮಯದ ಸಿಮ್ಯುಲೇಟೆಡ್ ಆಂಟಿ-ಹೈಜಾಕ್ ಅಣುಕು ಪ್ರದರ್ಶನ ನಡೆಸುವುದು ಬಿಎಲ್‌ಆರ್ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಬಲಪಡಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಇದು ನಮ್ಮ ಪ್ರತಿಕ್ರಿಯೆ ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಪರೀಕ್ಷಿಸಲು, ಅಂತರ್‌-ಇಲಾಖೆಯ ಸಮನ್ವಯವನ್ನು ಹೆಚ್ಚಿಸಲು ಮತ್ತು ನೈಜ-ಜೀವನದ ಸನ್ನಿವೇಶಗಳಿಗೆ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಅಣುಕು ಪ್ರದರ್ಶನವನ್ನು ಸಾಧ್ಯವಾಗಿಸಿದ ಎಲ್ಲಾ ಆಂತರಿಕ ಮತ್ತು ಬಾಹ್ಯ ವ್ಯಕ್ತಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಅವರ ಸಾಮೂಹಿಕ ಪ್ರಯತ್ನ ನಮ್ಮ ಸಾಮರ್ಥ್ಯ ಮತ್ತು ಕಾರ್ಯಾಚರಣೆಯನ್ನು ಮೌಲ್ಯೀಕರಿಸುತ್ತದೆ. ಈ ನಿರಂತರ ಸುಧಾರಣೆ ಮತ್ತು ಬಿಕ್ಕಟ್ಟಿನ ಸಿದ್ಧತೆಗೆ ನಮ್ಮ ಬದ್ಧತೆ ತೋರುತ್ತದೆ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸಲು ಇಂತಹ ಪೂರ್ವಭಾವಿ ಉಪಕ್ರಮಗಳು ಅಗತ್ಯವಾಗಿದೆ ಎಂದರು.

    ಇಂಟರ್ನ್ಯಾಷನಲ್ ಸಿವಿಲ್ ಏವಿಯೇಷನ್ ಆರ್ಗನೈಸೇಶನ್ ಮತ್ತು ಡಿಜಿಸಿಎ ನಿಯಮಗಳಿಗೆ ಅನುಸಾರವಾಗಿ ಬೆಂಗಳೂರು ಏರ್‌ಪೋರ್ಟ್‌ನ ಭದ್ರತಾ ಕ್ರಮಗಳು ಮತ್ತು ತುರ್ತು ಪ್ರತಿಕ್ರಿಯೆ ಸಾಮರ್ಥ್ಯವನ್ನು ಹೆಚ್ಚಿಸಲು ನಡೆಯುತ್ತಿರುವ ಬದ್ಧತೆಯೊಂದಿಗೆ ಈ ಅಣುಕು ಪ್ರದರ್ಶನ ಹೊಂದಿಕೆಯಾಗುತ್ತಿದೆ. ಯಾವುದೇ ಪರಿಸ್ಥಿತಿ ಅಥವಾ ಸನ್ನಿವೇಶದಲ್ಲಿ ಎಲ್ಲಾ ವಿಮಾನ ನಿಲ್ದಾಣ ಬಳಕೆದಾರರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಸುರಕ್ಷಿತ ವಾತಾವರಣವನ್ನು ಒದಗಿಸುವ ಗುರಿಯನ್ನು ಹೊಂದಿದೆ.