Tag: ವಿಮಾನಯಾನ ಸಂಸ್ಥೆ

  • ಸ್ಪೇನ್, ಪೋರ್ಚುಗಲ್‌, ಫ್ರಾನ್ಸ್‌ನ ಬಹುತೇಕ ಕಡೆ ವಿದ್ಯುತ್ ಕಡಿತ – ರೈಲು ಸಂಚಾರದಲ್ಲಿ ವ್ಯತ್ಯಯ

    ಸ್ಪೇನ್, ಪೋರ್ಚುಗಲ್‌, ಫ್ರಾನ್ಸ್‌ನ ಬಹುತೇಕ ಕಡೆ ವಿದ್ಯುತ್ ಕಡಿತ – ರೈಲು ಸಂಚಾರದಲ್ಲಿ ವ್ಯತ್ಯಯ

    – ವಿಮಾನಗಳ ಹಾರಾಟಕ್ಕೂ ಸಮಸ್ಯೆ
    – ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿ ತಾತ್ಕಾಲಿಕ ಸ್ಥಗಿತ

    ಮ್ಯಾಡ್ರಿಡ್: ಫ್ರಾನ್ಸ್‌, ಪೋರ್ಚುಗಲ್‌ ಹಾಗೂ ದಕ್ಷಿಣ ಫ್ರಾನ್ಸ್‌ನಲ್ಲಿಂದು (Spain, Portugal, France) ಏಕಕಾಲಕ್ಕೆ ವಿದ್ಯುತ್‌ ಕಡಿತಗೊಂಡಿದ್ದು (Power Outage), ಲಕ್ಷಾಂತರ ಜನರು ಪರದಾಡುವಂತಾಗಿದೆ. ಅಲ್ಲದೇ ಈ ವಿದ್ಯುತ್‌ ಕಡಿತವು ರೈಲು (Train) ಸಂಚಾರ ಹಾಗೂ ವಿಮಾನ ಹಾರಾಟದ ಮೇಲೆ ಪರಿಣಾಮ ಬೀರಿದೆ ಎಂದು ವರದಿಗಳು ತಿಳಿಸಿವೆ.

    ಮೂರು ಯೂರೋಪಿಯನ್‌ ದೇಶಗಳಲ್ಲಿ (European countries) ವಿದ್ಯುತ್‌ ಕಡಿತ ಸಂಭವಿಸಿದ್ದು, ಲಕ್ಷಾಂತರ ಜನಕ್ಕೆ ಸಮಸ್ಯೆ ತಂದೊಡ್ಡಿದೆ. ಆದ್ರೆ ವಿದ್ಯುತ್‌ ಕಡಿತಕ್ಕೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಸ್ಪ್ಯಾನಿಷ್‌ ಪ್ರಧಾನಿ ಪೆಡ್ರೋ ಸ್ಯಾಂಚೆಜ್‌ ಪರಿಸ್ಥಿತಿ ಮೇಲ್ವಿಚಾರಣೆ ನಡೆಸಲು ಗ್ರಿಡ್‌ ಆಪರೇಟರ್‌ ತುರ್ತು ಸಭೆ ಕರೆದಿದ್ದಾರೆ. ಇಂಧನ ಸಚಿವೆ ಸಾರಾ ಆಗೆಸೆನ್ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇದನ್ನೂ ಓದಿ: ಫ್ಲೋರಿಡಾದಲ್ಲಿ 2 ದೋಣಿಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವ ಸಾವು, 12 ಮಂದಿಗೆ ಗಾಯ

    ಸದ್ಯ ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಸರ್ಕಾರಿ ಸ್ವಾಮ್ಯದ ವಿದ್ಯುತ್ ಕಂಪನಿ ರೆಡ್ ಎಲೆಕ್ಟ್ರಿಕಾ, ಶೀಘ್ರದಲ್ಲೇ ಸಮಸ್ಯೆ ಪರಿಹರಿಸಲು ನಮ್ಮ ತಂಡ ಕೆಲಸ ಮಾಡುತ್ತಿದೆ. ಜೊತೆಗೆ ವಿದ್ಯುತ್‌ ಕಡಿತಕ್ಕೆ ನಿಖರ ಕಾರಣವನ್ನೂ ಪರಿಶೀಲಿಸಲಾಗುತ್ತಿದೆ, ಅದಕ್ಕಾಗಿ ಯುರೋಪಿಯನ್ ನೆಟ್‌ವರ್ಕ್ ಆಫ್ ಟ್ರಾನ್ಸ್‌ಮಿಷನ್ ಸಿಸ್ಟಮ್ ಆಪರೇಟರ್‌ಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: 26 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಹಿ; ಭಾರತ-ಫ್ರಾನ್ಸ್ ಮಧ್ಯೆ 63,000 ಕೋಟಿ ಮೆಗಾ ಡೀಲ್‌

    ರೈಲು ಸಂಚಾರ, ವಿಮಾನ ಹಾರಾಟದಲ್ಲಿ ವ್ಯತ್ಯಯ:
    ಏಕಕಾಲಕ್ಕೆ ದೇಶದ ವಿವಿಧೆಡೆ ವಿದ್ಯುತ್‌ ಕಡಿತಗೊಂಡ ಪರಿಣಾಮ ಸ್ಪೇನ್‌ನಾದ್ಯಂತ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮ್ಯಾಡ್ರಿಡ್‌ನ ವಿಮಾನಗಳ ಹಾರಟದಲ್ಲೂ ಸಮಸ್ಯೆ ಉಂಟಾಗಿದೆ. ಪರಿಸ್ಥಿತಿ ಕುರಿತು ಬಜೆಟ್ ವಿಮಾನಯಾನ ಸಂಸ್ಥೆ ರಯಾನ್ಏರ್ ಮೇಲ್ವಿಚಾರಣೆ ನಡೆಸುತ್ತಿದೆ. ಅಲ್ಲದೇ ವಿದ್ಯುತ್ ಕಡಿತದಿಂದಾಗಿ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮೋದಿ-ರಾಜನಾಥ್ ಸಿಂಗ್ ಮಹತ್ವದ ಚರ್ಚೆ; ಉಗ್ರರ ವಿರುದ್ಧ ಮುಂದಿನ ಕ್ರಮಕ್ಕೆ ಮಾಸ್ಟರ್ ಪ್ಲ್ಯಾನ್

  • ಮತ್ತೆ 3 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ – ಬೆಂಗಳೂರಿಂದ ಮುಂಬೈಗೆ ಹೊರಟಿದ್ದ ಫ್ಲೈಟ್‌ಗೂ ಥ್ರೆಟ್ ಕಾಲ್

    ಮತ್ತೆ 3 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ – ಬೆಂಗಳೂರಿಂದ ಮುಂಬೈಗೆ ಹೊರಟಿದ್ದ ಫ್ಲೈಟ್‌ಗೂ ಥ್ರೆಟ್ ಕಾಲ್

    ನವದೆಹಲಿ: ಕಳೆದ 24 ಗಂಟೆಗಳಲ್ಲಿ 3 ವಿಮಾನಗಳಿಗೆ ಬಾಂಬ್ ಬೆದರಿಕೆ (Bomb Threat) ಕರೆಗಳು ಬಂದಿದೆ. ಆ ಮೂಲಕ ಒಂದು ವಾರದಲ್ಲಿ 35ಕ್ಕೂ ಹೆಚ್ಚು ವಿಮಾನಗಳು ಬೆದರಿಕೆ ಕರೆ ಸ್ವೀಕರಿಸಿರುವ ಬಗ್ಗೆ ವರದಿಯಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ (Ministry Of Civil Aviation) ತಿಳಿಸಿದೆ.

    ದೆಹಲಿಯಿಂದ ಲಂಡನ್‌ಗೆ ಹೊರಟಿದ್ದ ವಿಸ್ತಾರಾ ವಿಮಾನ (Vistara Flight) ಸೋಷಿಯಲ್ ಮೀಡಿಯಾದಲ್ಲಿ ಬಾಂಬ್ ಬೆದರಿಕೆಯ ಕರೆಯನ್ನು ಸ್ವೀಕರಿಸಿದ್ದು, ತಕ್ಷಣ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ, ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಫ್ರಾಂಕ್‌ಫರ್ಟ್‌ಗೆ ಕಳುಹಿಸುವಂತೆ ನಿರ್ಧರಿಸಲಾಯಿತು. ವಿಮಾನವನ್ನು ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ಕಳುಹಿಸಿ, ಬಳಿಕ ಅಲ್ಲಿಂದ ಲಂಡನ್‌ಗೆ ಕಳುಹಿಸಲಾಯಿತು.ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್‌ – ಹಿರಿಯ ಐಎಎಸ್‌ ಅಧಿಕಾರಿ, ಆರ್‌ಜೆಡಿ ಮಾಜಿ ಶಾಸಕ ಅರೆಸ್ಟ್‌

    ಜೈಪುರ್‌ನಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ (Air India) ಎಕ್ಸ್‌ಪ್ರೆಸ್‌ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಇದರಿಂದಾಗಿ ಸ್ವಲ್ವ ಸಮಯದ ಬಳಿಕ ವಿಮಾನ ಟೇಕ್‌ಆಫ್ ಆಯಿತು. ಇಂದು ಬೆಳಗ್ಗೆ 6:10ಕ್ಕೆ ಟೇಕ್ ಆಫ್ ಆಗಬೇಕಿದ್ದ ವಿಮಾನ ತಡವಾಗಿ 7:45ಕ್ಕೆ ಟೇಕ್ ಆಫ್ ಆಯಿತು.

    ಶುಕ್ರವಾರ ಬೆಂಗಳೂರಿನಿಂದ ಮುಂಬೈಗೆ ಹೊರಡಲು ಸಿದ್ಧವಾಗಿದ್ದ ಆಕಾಶ ಏರ್ (Akash Air) ವಿಮಾನಕ್ಕೆ ಬಾಂಬ್ ಬೆದರಿಕೆಯ ಕರೆ ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ಸಂಪೂರ್ಣ ಪರಿಶೀಲನೆ ನಡೆಸಲಾಯಿತು. ನೆಟ್‌ವರ್ಕ್ ಆಪರೇಷನ್ ಕಂಟ್ರೋಲ್ (NOC) ಒಪ್ಪಿಗೆ ನೀಡಿದ ಬಳಿಕ ಸಂಜೆ ಮುಂಬೈಗೆ ಹೊರಟಿತು.

    ಒಂದು ವಾರದಲ್ಲಿ ಸುಮಾರು 35 ವಿಮಾನಗಳು ಬೆದರಿಕೆಯ ಕರೆಗಳನ್ನು ಸ್ವೀಕರಿಸಿದ್ದು, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಅಧಿಕಾರಿಗಳು ಆ ಸಂದರ್ಭದಲ್ಲಿ ಭದ್ರತಾ ಪರಿಶೀಲನೆ ನಡೆಸಿ, ಕಠಿಣ ಕ್ರಮಗಳನ್ನು ಕೈಗೊಳ್ಳಲಾಯಿತು.

    ಬಾಂಬ್ ಬೆದರಿಕೆ ಸಂಬಂಧಿಸಿದಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು (Rammohan Naidu)  ಮಾತನಾಡಿ, ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಮೂರು ಸೇರಿದಂತೆ ಸೋಮವಾರ ನಾಲ್ಕು ವಿಮಾನಗಳಿಗೆ ಬೆದರಿಕೆ ಹಾಕಲಾಗಿದೆ. 17 ವರ್ಷದ ಹುಡುಗನನ್ನು ಮುಂಬೈ ಪೊಲೀಸರು ಬುಧವಾರ ಕಸ್ಟಡಿಗೆ ತೆಗೆದುಕೊಂಡಿದ್ದು, ಹೆಚ್ಚಿನ ಕರೆಗಳನ್ನು ಅಪ್ರಾಪ್ತರು ಮತ್ತು ಕುಚೇಷ್ಟೆಗಾರರು ಮಾಡಿದ್ದಾರೆ ಎಂದು ಹೇಳಿದರು.

    ಭವಿಷ್ಯದಲ್ಲಿ ಇಂತಹ ಹುಸಿ ಬಾಂಬ್ ಕರೆಗಳು ನಡೆಯದಂತೆ ನೋಡಿಕೊಳ್ಳಲು ಹಾಗೂ ಈ ರೀತಿಯ ಕುಚೇಷ್ಟೆಗಳನ್ನು ಮಾಡಲು ಪ್ರಯತ್ನಿಸುವ ಜನರಿಗೆ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಲು ನಮ್ಮ ಇಲಾಖೆಯ ನಿಯಮಗಳು ಮತ್ತು ಶಾಸನಗಳಲ್ಲಿ ಬದಲಾವಣೆ ತರಲು ಸೂಚಿಸಿದ್ದೇವೆ ಎಂದು ತಿಳಿಸಿದರು.ಇದನ್ನೂ ಓದಿ: ಬಿಬಿಎಂಪಿಯಿಂದ ತುರ್ತು ಇ-ಖಾತಾ ಪಡೆಯಲು ಮಾರ್ಗಸೂಚಿ ಬಿಡುಗಡೆ – ಗೈಡ್‌ಲೈನ್‌ನಲ್ಲಿ ಏನಿದೆ?

  • `ನೀವು ತುಂಬಾ ದಪ್ಪ’ – ಮಹಿಳೆಗೆ ವಿಮಾನ ಹತ್ತಲು ನಿರಾಕರಿಸಿದ ಕತಾರ್‌ ಏರ್‌ವೇಸ್‌ಗೆ 3 ಲಕ್ಷ ದಂಡ

    `ನೀವು ತುಂಬಾ ದಪ್ಪ’ – ಮಹಿಳೆಗೆ ವಿಮಾನ ಹತ್ತಲು ನಿರಾಕರಿಸಿದ ಕತಾರ್‌ ಏರ್‌ವೇಸ್‌ಗೆ 3 ಲಕ್ಷ ದಂಡ

    ಕತಾರ್: `ನೀವು ತುಂಬಾ ದಪ್ಪಗಿದ್ದೀರಾ (ಯುವರ್ ಟೂ ಫ್ಯಾಟ್)’ ಎಂದು ಸ್ಥೂಲಕಾಯದ ಮಹಿಳೆಯೊಬ್ಬರಿಗೆ (Brazil Women) ಬೋರ್ಡಿಂಗ್ ನೀಡಲು ನಿರಾಕರಿಸಿದ ಕತಾರ್ ಏರ್‌ವೇಸ್‌ಗೆ (Qatar Airways) 3 ಲಕ್ಷ ರೂ. ದಂಡ ವಿಧಿಸಿದ ಘಟನೆ ನಡೆದಿದೆ.

     

    View this post on Instagram

     

    A post shared by Juliana Nehme (@juliananehme)

    ಬೈರುತ್‌ನಿಂದ ದೋಹಾಗೆ ಹೊರಟಿದ್ದ 38 ವರ್ಷದ ಮಹಿಳೆಯೊಬ್ಬರು ತನ್ನನ್ನು ವಿಮಾನ ಹತ್ತಲು ಬಿಡದೆ ಸ್ಥೂಲಕಾಯವಿದ್ದ ಕಾರಣಕ್ಕೆ ಅಪಮಾನ ಎಸಗಿದ್ದಾರೆ ಎಂದು ವಿಮಾನಯಾನ ಸಂಸ್ಥೆ ವಿರುದ್ಧ ಸಂತ್ರಸ್ತೆ ಜುಲಿಯಾನಾ ನೆಹ್ಮಿ ನ್ಯಾಯಾಲಯದ (Brazil court) ಮೊರೆ ಹೋಗಿದ್ದರು. ಇದನ್ನೂ ಓದಿ: ಮದ್ಯ ಪ್ರಿಯರಿಗೆ 1 ಲಕ್ಷದ ಇನ್ಷೂರೆನ್ಸ್‌ ಸೌಲಭ್ಯ ಕಲ್ಪಿಸಿ – ಸರ್ಕಾರಕ್ಕೆ ಮದ್ಯಪಾನ ಪ್ರಿಯರ ಹೋರಾಟ ಸಂಘದ ಬೇಡಿಕೆಗಳೇನು?

    ಸಂತ್ರಸ್ತ ಮಹಿಳೆ ಜೂಲಿಯಾನ ತನ್ನ ಕುಟುಂಬದೊಂದಿಗೆ ಲೆಬನಾನ್‌ನಲ್ಲಿ ಪ್ರವಾಸಕ್ಕೆ ಬಂದಿದ್ದಳು. ಏರ್ ಫ್ರಾನ್ಸ್ ಮೂಲಕ ವಿದೇಶಕ್ಕೆ ಬಂದಿದ್ದಳು. ಪುನಃ ಬ್ರೆಜಿಲ್‌ಗೆ ಹಿಂದಿರುಗಲು ಮುಂದಾದಾಗ ಕತಾರ್ ಏರ್‌ವೇಸ್ ಸಿಬ್ಬಂದಿ, ʻನೀವು ತುಂಬಾ ದಪ್ಪಗಿದ್ದೀರಾʼ ಎಂದು ತಡೆದಿದ್ದಾರೆ. ಅಲ್ಲದೇ ತಾನು ಟಿಕೆಟ್‌ಗಾಗಿ ಪಾವತಿಸಿದ್ದ 1 ಸಾವಿರ ಡಾಲರ್ (82 ಸಾವಿರ ರೂಪಾಯಿ) ಹಣವನ್ನೂ ಮರುಪಾವತಿಸಲು ನಿರಾಕರಿಸಿದೆ. ಬದಲಿಗೆ 3 ಸಾವಿರ ಡಾಲರ್ (2.47 ಲಕ್ಷ ರೂ.) ನೀಡಿ ಬಿಸಿನೆಸ್ ಟಿಕೆಟ್ ಖರೀದಿಸುವಂತೆ ಕೇಳಿಕೊಂಡಿದೆ. ದೊಡ್ಡ ಹಾಸನಗಳಿಗೆ ಹೊಂದಿಕೊಳ್ಳಬಹುದು ಎಂದು ಹೇಳಿತು.

    ಇದರಿಂದ ಅಸಮಾಧಾನಗೊಂಡ ಜುಲಿಯಾನಾ, ವಿಮಾನದ ಸಿಬ್ಬಂದಿಯ ವರ್ತನೆಯಿಂದ ಮಾನಸಿಕ ಯಾತನೆಗೆ ಒಳಗಾಗಿದ್ದೇನೆ. ಸಂಸ್ಥೆ ನನ್ನ ವಿರುದ್ಧ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಜುಲಿಯಾನಾಳ ದೂರನ್ನು ಪರಿಗಣಿಸಿದ ಬ್ರೆಜಿಲ್ ಕೋರ್ಟ್ ನ್ಯಾಯಮೂರ್ತಿ ರೆನಾಟ ಮಾರ್ಟಿನ್ಸ್ ಡಿ ಕರ್ವಾಲ್ಹೊ, ವಾರಕ್ಕೊಂದು ಅಥವಾ ಎರಡರಂತೆ ಮಾನಸಿಕ ಪುನಶ್ಚೇತನ ಚಿಕಿತ್ಸೆಯನ್ನು ಕೊಡಿಸುವಂತೆ ವಿಮಾನಯಾನ ಸಂಸ್ಥೆಗೆ ಆದೇಶಿಸಿದೆ.

    ಪ್ರಸ್ತುತ ಮಹಿಳೆ ಪಡೆಯುತ್ತಿದ್ದ ಚಿಕಿತ್ಸೆ ದುಬಾರಿಯಾಗಿದೆ. ಪ್ರತಿ ಚಿಕಿತ್ಸೆಗೆ 400 ರಿಯಾಸ್ (6,389 ರೂ.) ತಗುಲುತ್ತದೆ. ಹಾಗೆಯೇ ಒಂದು ವರ್ಷದಲ್ಲಿ 19,200 ರಿಯಾಸ್ (3.07 ಲಕ್ಷ) ವೆಚ್ಚ ತಗುಲಲಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ಸ್ಟಾರ್ ನಟ ಕಮಲ್ ಹಾಸನ್ ಭಾಗಿ

    Live Tv
    [brid partner=56869869 player=32851 video=960834 autoplay=true]

  • ಆಕಾಶ ಏರ್ ಪ್ರಯಾಣಿಕರ ವೈಯಕ್ತಿಕ ಡೇಟಾಗೆ ಕನ್ನ – ಸಂಸ್ಥೆಯಿಂದ ಕ್ಷಮೆ

    ಆಕಾಶ ಏರ್ ಪ್ರಯಾಣಿಕರ ವೈಯಕ್ತಿಕ ಡೇಟಾಗೆ ಕನ್ನ – ಸಂಸ್ಥೆಯಿಂದ ಕ್ಷಮೆ

    ನವದೆಹಲಿ: ಈ ತಿಂಗಳ ಆರಂಭದಲ್ಲಷ್ಟೇ ಕಾರ್ಯಾಚರಣೆ ಆರಂಭಿಸಿದ್ದ ದೇಶೀಯ ವಿಮಾನಯಾನ ಸಂಸ್ಥೆ ಆಕಾಶ ಏರ್‌ನ ಡೇಟಾಗೆ ಹ್ಯಾಕರ್‌ಗಳು ಕನ್ನ ಹಾಕಿರುವುದಾಗಿ ವರದಿಯಾಗಿದೆ. ಪ್ರಯಾಣಿಕರ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿರುವುದಕ್ಕೆ ಸಂಸ್ಥೆ ಕ್ಷಮೆ ಕೇಳಿದೆ.

    ಸಂಸ್ಥೆಯ ಲಾಗ್‌ಇನ್ ಹಾಗೂ ಸೈನ್ ಅಪ್ ಸೇವೆಗಳಿಗೆ ಸಂಬಂಧಿಸಿದ ದೋಷಗಳು ಉಂಟಾಗಿರುವುದು ತಿಳಿದುಬಂದಿದೆ ಎಂದು ಆಕಾಶ ಏರ್ ಭಾನುವಾರ ತಿಳಿಸಿದೆ. ಇದರ ಪರಿಣಾಮವಾಗಿ ಪ್ರಯಾಣಿಕರ ಹೆಸರು, ಲಿಂಗ, ಇ-ಮೇಲ್ ವಿಳಾಸ ಹಾಗೂ ಫೋನ್ ನಂಬರ್‌ಗಳು ಸೋರಿಕೆಯಾಗಿವೆ. ಈ ವಿವರಗಳನ್ನು ಹೊರತುಪಡಿಸಿ ಪ್ರಯಾಣಕ್ಕೆ ಸಂಬಂಧಿಸಿದ ಮಾಹಿತಿಗಳು ಅಥವಾ ಪಾವತಿಯ ಮಾಹಿತಿಗಳು ಸೋರಿಕೆಯಾಗಿಲ್ಲ ಎಂದು ಕಂಪನಿ ಖಚಿತಪಡಿಸಿದೆ. ಇದನ್ನೂ ಓದಿ: ಗಾಡಿ ಕದಿಯಲು ಹ್ಯಾಂಡಲ್‍ಗೆ ಒದ್ದು ಲಾಕ್ ಮುರಿಯಲು ಪ್ರಯತ್ನ!

     

    ಡೇಟಾ ಸೋರಿಕೆ ಬಗ್ಗೆ ನಮಗೆ ತಿಳಿದು ಬಂದ ತಕ್ಷಣವೇ ನಾವು ಸರಿಯಾದ ಕ್ರಮಗಳನ್ನು ತೆಗೆದುಕೊಂಡು ಅನಧಿಕೃತ ಪ್ರವೇಶವನ್ನು ನಿಲ್ಲಿಸಿದ್ದೇವೆ. ಹೆಚ್ಚಿನ ಭದ್ರತೆಗಳನ್ನು ಸೇರಿಸಿ, ಈಗ ನಾವು ಲಾಗ್ ಇನ್ ಹಾಗೂ ಸೈನ್ ಅಪ್ ಸೇವೆಗಳನ್ನು ಪುನರಾರಂಭಿಸಿದ್ದೇವೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಮುಂದಿನ 3 ಗಂಟೆಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ

    ಸುಮಾರು ಒಂದು ದಶಕದ ಬಳಿಕ ಪ್ರಾರಂಭವಾದ ಮೊದಲ ಭಾರತೀಯ ವಿಮಾನಯಾನ ಸಂಸ್ಥೆ ಆಕಾಶ ಏರ್ ಆಗಸ್ಟ್ 7 ರಂದು ಉದ್ಘಾಟನೆಗೊಂಡು ಮುಂಬೈನಿಂದ ಅಹಮದಾಬಾದ್‌ಗೆ ತನ್ನ ಮೊದಲ ಹಾರಾಟವನ್ನು ಪ್ರಾರಂಭಿಸಿತು. ಈ ತಿಂಗಳ ಆರಂಭದಲ್ಲಿ ನಿಧನರಾದ ಬಿಲಿಯನೇರ್ ಮತ್ತು ಷೇರು ಮಾರುಕಟ್ಟೆ ತಜ್ಞ ರಾಕೇಶ್ ಜುಂಜುನ್‌ವಾಲಾ ಅವರು ಆಕಾಶ ಏರ್‌ನಲ್ಲಿ ಗಣನೀಯ ಹೂಡಿಕೆ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

  • 3 ವರ್ಷಗಳ ಬಳಿಕ ಮತ್ತೆ ಹಾರಾಟ ಪ್ರಾರಂಭಿಸಲಿವೆ ಜೆಟ್ ಏರ್‌ವೇಸ್

    3 ವರ್ಷಗಳ ಬಳಿಕ ಮತ್ತೆ ಹಾರಾಟ ಪ್ರಾರಂಭಿಸಲಿವೆ ಜೆಟ್ ಏರ್‌ವೇಸ್

    ನವದೆಹಲಿ: ಜೆಟ್ ಏರ್‌ವೇಸ್ ವಿಮಾನಯಾನ ಸಂಸ್ಥೆ 3 ವರ್ಷಗಳ ಬಳಿಕ ಮತ್ತೆ ಹಾರಾಟಕ್ಕೆ ಸಿದ್ಧತೆ ನಡೆಸುತ್ತಿದೆ. ಜೆಟ್ ಏರ್‌ವೇಸ್‌ಗೆ ವಾಯುಯಾನ ನಿಯಂತ್ರಕ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್(ಡಿಜಿಸಿಎ) ವಾಣಿಜ್ಯ ವಿಮಾನಯಾನ ಪುನರಾರಂಭಿಸಲು ಪರವಾನಗಿ ನೀಡಿದೆ.

    2019ನೇ ಇಸವಿಯಲ್ಲಿ ಜೆಟ್ ಏರ್‌ವೇಸ್ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿತ್ತು. ಇದೀಗ ಜೆಟ್ ಆಪರೇಟರ್ ಪ್ರಮಾಣಪತ್ರ ಲಭಿಸಿರುವುದರಿಂದ ಜೆಟ್ ಏರ್‌ವೇಸ್ ಸಂಸ್ಥೆಗೆ ವಾಣಿಜ್ಯ ವಿಮಾನಯಾನ ಪುನರಾರಂಭಿಸಲು ಅನುಮತಿ ಸಿಕ್ಕಂತಾಗಿದೆ. ಇದನ್ನೂ ಓದಿ: ಬೀಳ್ಕೊಡುಗೆ ಸಮಾರಂಭದಲ್ಲಿ ಭಾವುಕರಾದ ಬ್ರೆಂಡನ್ ಮೆಕಲಮ್

    ಜೆಟ್ ಏರ್‌ವೇಸ್ ಈ ವರ್ಷ ಜುಲೈ ನಿಂದ ಸೆಪ್ಟೆಂಬರ್ ತಿಂಗಳ ಒಳಗಾಗಿ ವಾಣಿಜ್ಯ ಕಾರ್ಯಾಚರಣೆ ಪುನರಾರಂಭಿಸುವುದಾಗಿ ಸಂಸ್ಥೆ ಅಧಿಕೃತ ಮಾಹಿತಿ ನೀಡಿದೆ. ಇದನ್ನೂ ಓದಿ: ರಾಜ್ಯದಲ್ಲಿ 95 ಕೇಸ್ – ಇಂದು 20,444 ಕೋವಿಡ್ ಟೆಸ್ಟ್

    ನರೇಶ್ ಗೋಯಲ್ ಒಡೆತನದಲ್ಲಿದ್ದ ಜೆಟ್ ಏರ್‌ವೇಸ್ 2019ರ ಏಪ್ರಿಲ್ 17ರಂದು ಕೊನೆಯ ಬಾರಿ ಹಾರಾಟ ನಡೆಸಿತ್ತು. ಪ್ರಸ್ತುತ ಜಲನ್-ಕಾಲ್‌ರಾಕ್ ಒಕ್ಕೂಟ ಜೆಟ್ ಏರ್‌ವೇಸ್‌ಅನ್ನು ಮುನ್ನಡೆಸುತ್ತಿದೆ.

  • ಕನ್ನಡದಲ್ಲಿ ಸೇವೆ ನೀಡದ ವಿಮಾನಯಾನ ಸಂಸ್ಥೆ ವಿರುದ್ಧ ಐಎಎಸ್ ಅಧಿಕಾರಿ ಅಸಮಾಧಾನ

    ಕನ್ನಡದಲ್ಲಿ ಸೇವೆ ನೀಡದ ವಿಮಾನಯಾನ ಸಂಸ್ಥೆ ವಿರುದ್ಧ ಐಎಎಸ್ ಅಧಿಕಾರಿ ಅಸಮಾಧಾನ

    ಬೆಳಗಾವಿ: ಕನ್ನಡದಲ್ಲಿ ಸೇವೆ ನೀಡದ ವಿಮಾನಯಾನ ಸಂಸ್ಥೆಗಳ ವಿರುದ್ಧ ಐಎಎಸ್ ಅಧಿಕಾರಿ ಅಸಮಾಧಾನ ಹೊರಹಾಕಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್, ಕರ್ನಾಟಕದಲ್ಲಿ ವಿಮಾನಯಾನ ಕಂಪನಿಗಳಿಗೆ ಕನ್ನಡದಲ್ಲಿ ಸೇವೆ ಸಲ್ಲಿಸಲು ಇರುವ ಸಮಸ್ಯೆ ಏನು ಎಂದು ಇಂಡಿಗೋ ಸೇರಿ ಇತರೆ ವಿಮಾನಯಾನ ಸಂಸ್ಥೆಗಳನ್ನು ಪ್ರಶ್ನಿಸಿದ್ದಾರೆ.

    ಇಂಡಿಗೋ ವಿಮಾನಯಾನ ಸಂಸ್ಥೆ ಸಿಬ್ಬಂದಿ ಇಂಗ್ಲೀಷ್, ಹಿಂದಿ, ಮಳಯಾಳಂ ಭಾಷೆಯಲ್ಲಿ ಮಾಹಿತಿ ನೀಡುತ್ತಿದ್ದಾರೆ. ವಿದೇಶಿ ವಿಮಾನಯಾನ ಸಂಸ್ಥೆಗಳೇ ಕನ್ನಡದಲ್ಲಿ ಸೇವೆ ನೀಡುತ್ತಿವೆ. ಬ್ರಿಟಿಷ್ ಏರ್‍ವೇಸ್ ಎಮಿರೇಟ್ಸ್, ಸಿಂಗಾಪುರ್ ಏರ್‍ಲೈನ್ಸ್‍ನಿಂದ ಕನ್ನಡದಲ್ಲಿ ಸೇವೆ ನೀಡುತ್ತಿವೆ. ಆದರೆ ಇಂಡಿಗೋದಂತಹ ವಿಮಾನಯಾನ ಸಂಸ್ಥೆಗಳಿಗೀರುವ ತೊಂದರೆ ಏನು?, ಕನ್ನಡ ಮಾತನಾಡುವ ಸಿಬ್ಬಂದಿ ನೇಮಿಸಿಕೊಳ್ಳಲು ಇರುವ ಕಷ್ಟವೇನು ಎಂದು ಪ್ರಶ್ನಿಸುವ ಮೂಲ ಅಧಿಕಾರಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

    ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ಮತದಾರರ ಪಟ್ಟಿಯ ವೀಕ್ಷಕರಾಗಿರುವ ಎಲ್.ಕೆ ಅತೀಕ್ ಅವರು ಬೆಂಗಳೂರಿಂದ ಬೆಳಗಾವಿಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದರು. ಈ ವೇಳೆ ಕನ್ನಡದಲ್ಲಿ ಸೇವೆ ನೀಡದಿದ್ದರಿಂದ ಬೇಸರಗೊಂಡ ಅಧಿಕಾರಿ ಟ್ವೀಟ್ ಮಾಡುವ ಮೂಲಕ ಕನ್ನಡದಲ್ಲಿ ಸೇವೆ ನೀಡುವಂತೆ ಆಗ್ರಹಿಸಿದರು.

  • ಹಾರಾಟ ನಿಲ್ಲಿಸಿದ ಜೆಟ್ ಏರ್‍ವೇಸ್?

    ಹಾರಾಟ ನಿಲ್ಲಿಸಿದ ಜೆಟ್ ಏರ್‍ವೇಸ್?

    ಮುಂಬೈ: ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್‍ವೇಸ್ ಬುಧವಾರ ರಾತ್ರಿಯಿಂದ ತನ್ನ ಹಾರಾಟವನ್ನು ನಿಲ್ಲಿಸಲಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ಸುದ್ದಿಯನ್ನು ಪ್ರಕಟಿಸಿವೆ.

    ಜೆಟ್ ಏರ್‍ವೇಸ್ ತಾತ್ಕಲಿಕ ನಿರ್ವಹಣೆಗಾಗಿ ತುರ್ತು 400 ಕೋಟಿ ರೂ. ಹಣವನ್ನು ಸಾಲವಾಗಿ ನೀಡಬೇಕೆಂದು ಸಾರ್ವಜನಿಕ ಬ್ಯಾಂಕ್‍ಗಳಲ್ಲಿ ಕೇಳಿಕೊಂಡಿತ್ತು. ಜೆಟ್ ಏರ್‍ವೇಸ್ ಅರ್ಜಿಯನ್ನು ಬ್ಯಾಂಕ್ ಗಳು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಇಂದು ರಾತ್ರಿಯಿಂದಲೇ ಹಾರಾಟವನ್ನು ತಾತ್ಕಲಿಕವಾಗಿ ನಿಲ್ಲಿಸಲಾಗುತ್ತಿದೆ ಎಂದು ವರದಿಯಾಗಿದೆ.

    ಇಂದು ನಡೆದ ಸಭೆಯಲ್ಲಿ ಹಣಕಾಸುವ ನೀಡುವ ವಿಚಾರವಾಗಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವಲ್ಲಿ ಸಾಧ್ಯವಾಗಲಿಲ್ಲ. ಒಂದು ವೇಳೆ ಗುರುವಾರ ಬ್ಯಾಂಕ್ ಗಳು ಹಣಕಾಸಿನ ನೆರವು ನೀಡದೇ ಇದ್ದಲ್ಲಿ ಜೆಟ್ ಏರ್‍ವೇಸ್ ತನ್ನ ಹಾರಾಟವನ್ನು ನಿಲ್ಲಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

    ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುವ ಜೆಟ್ ಏರ್‍ವೇಸ್ ಸಂಸ್ಥೆಗೆ ಸಾರ್ವಜನಿಕ ರಂಗದ ಬ್ಯಾಂಕ್‍ಗಳು 1500 ಕೋಟಿ ರೂ. ಹಣವನ್ನು ಸಾಲದ ರೂಪದಲ್ಲಿ ನೀಡಲು ಮುಂದಾಗಿದ್ದವು. ಆದರೆ ಇದೂವರೆಗೆ ಕೇವಲ 300 ಕೋಟಿಯನ್ನು ಮಾತ್ರ ಬಿಡುಗಡೆ ಆಗಿದೆ. ಸದ್ಯ ತುರ್ತು 400 ಕೋಟಿ ನೀಡಬೇಕೆಂದು ಕಂಪನಿಯ ಸಿಇಓ ವಿನಯ್ ದುಬೆ ಮನವಿ ಮಾಡಿದ್ದರು. ಮಂಗಳವಾರ ಬ್ಯಾಂಕ್‍ಗಳ ಜೊತೆ ನಡೆದ ಸಭೆಯ ವಿಫಲವಾಗಿತ್ತು. ಕಂಪನಿಯ ನಿರ್ವಹಣೆಗೆ ಹಣ ಸಮಸ್ಯೆ ಎದುರಾಗಿದ್ದರಿಂದ ಕೇವಲ ಆರೇಳು ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿವೆ. ಡಿಸೆಂಬರ್ ನಲ್ಲಿ 123 ವಿಮಾನಗಳ ಸೇವೆಯನ್ನು ಒದಗಿಸುತ್ತಿತ್ತು.

    ಸಂಸ್ಥೆಯಲ್ಲಿ 20 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಉದ್ಯೋಗಿಗಳ ಹಿತರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಮುಂದಾಗಬೇಕೆಂದು ನ್ಯಾಷನಲ್ ಏವಿಯೇಟರ್ಸ್ ಗಿಲ್ಡ್ ಉಪಾಧ್ಯಕ್ಷ ಆಸಿಂ ವಲೈನಿ ತಿಳಿಸಿದ್ದರು.

    1993ರಲ್ಲಿ ನರೇಶ್ ಮತ್ತು ಅನಿತಾ ಈ ಸಂಸ್ಥೆಯನ್ನು ಸ್ಥಾಪಿಸಿದ್ದರು. ಜೆಟ್ ಏರ್‍ವೇಸ್ ಸುಮಾರು 7 ಸಾವಿರ ಕೋಟಿಗೂ ಅಧಿಕ ಸಾಲವನ್ನು ಮಾಡಿಕೊಂಡಿದೆ. 2013ರಲ್ಲಿ ಸಾಲದ ಸುಳಿಯಲ್ಲಿ ಸಂಸ್ಥೆ ಸಿಲುಕಿದ್ದಾಗ, ಅಬುದಾಭಿಯ ಎತಿಹಾದ್ ಏರ್‍ವೇಸ್ ಸಂಸ್ಥೆ ಶೇ.24ರಷ್ಟು (ಸುಮಾರು 4 ಸಾವಿರ ಕೋಟಿ) ಪಾಲನ್ನು ಖರೀದಿಸಿತ್ತು.

  • ಫೇಸ್‍ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಸಹೋದರಿಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ

    ಫೇಸ್‍ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಸಹೋದರಿಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ

    ವಾಷಿಂಗ್ಟನ್: ಫೇಸ್‍ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‍ಬರ್ಗ್ ಸಹೋದರಿ ರಾಂಡಿ ಜುಕರ್‍ಬರ್ಗ್ ಇತ್ತೀಚೆಗೆ ಅಲಾಸ್ಕಾ ಏರ್‍ಲೈನ್ಸ್ ವಿಮಾನದಲ್ಲಿ ಅಮೆರಿಕದ ಲಾಸ್ ಏಂಜಲೀಸ್ ನಿಂದ ಮೆಕ್ಸಿಕೊಗೆ ಪ್ರಯಾಣಿಸುವ ವೇಳೆ ಸಹಪ್ರಯಾಣಿಕನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದಾಗಿ ಆರೋಪ ಮಾಡಿದ್ದಾರೆ.

    ಈ ಕುರಿತು ಸ್ವತಃ ಮಾರ್ಕ್ ಸಹೋದರಿ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬುಧವಾರ ಮಾಹಿತಿ ನೀಡಿದ್ದಾರೆ. ಪ್ರಯಾಣದ ವೇಳೆ ಪಕ್ಕದಲ್ಲಿ ಕುಳಿತ್ತಿದ್ದ ಸಹ ಪ್ರಯಾಣಿಕ ಮಹಿಳೆಯರ ಬಗ್ಗೆ ಅಶ್ಲೀಲ ಪದ ಬಳಕೆ ಮಾಡುತ್ತಿದ್ದ. ಸಹೋದ್ಯೋಗಿಯೊಂದಿಗೆ ಪ್ರಯಾಣಿಸುವಾಗ ನೀವು ಅವರ ಬಗ್ಗೆ ಆಸೆಪಟ್ಟಿದ್ದೀರಾ ಎಂದೆಲ್ಲಾ ಕೇಳಿದ. ಬೇರೆ ಹುಡುಗಿಯರ ಅಂಗಾಂಗದ ಬಗ್ಗೆ ಅಸಭ್ಯವಾಗಿ ಮಾತನಾಡುತ್ತಿದ್ದ. ಈ ಕುರಿತು ವಿಮಾನದಲ್ಲಿನ ಸಿಬ್ಬಂದಿಗಳಿಗೆ ಮಾಹಿತಿ ನೀಡಿದೆ. ಆದರೆ ಆತ ಖಾಯಂ ಪ್ರಯಾಣಿಕ ಎಂದು ಆತನ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಆತನ ಪಕ್ಕ ಕೂರಲು ಇಷ್ಟವಿಲ್ಲ ಎಂದಿದ್ದಕ್ಕೆ ಹಿಂದಿನ ಸೀಟ್‍ನಲ್ಲಿ ಕೂರುವಂತೆ ಹೇಳಿದರು ಎಂದು ರಾಂಡಿ ಜುಕರ್‍ಬರ್ಗ್ ತಿಳಿಸಿದ್ದಾರೆ. ಅಲ್ಲದೇ ಈ ಕುರಿತು ವಿಮಾನಯಾನ ಸಂಸ್ಥೆಯ ಕಾರ್ಯನಿರ್ವಹಕರಿಗೆ ತನಿಖೆ ನಡೆಸುವಂತೆ ಬರೆದಿರುವ ಪತ್ರವನ್ನೂ ಹಾಕಿದ್ದಾರೆ.

    ಅಲಾಸ್ಕಾ ಏರ್‍ಲೈನ್ಸ್ ಈ ಘಟನೆಯ ಬಗ್ಗೆ ಮಾಹಿತಿ ಪಡೆದು ರಾಂಡಿ ಅವರನ್ನು ಸಂಪರ್ಕಿಸಿದ್ದಾರೆ. ತನಿಖೆ ಮುಗಿಯುವವರೆಗೆ ಆರೋಪಿಯ ವಿಮಾನ ಪ್ರಯಾಣ ಹಕ್ಕನ್ನು ರದ್ದು ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ಹೇಳಿದ್ರು. ಮೊದಲಿಗೆ ಈ ರೀತಿ ನಡೆಯಲೇಬಾರದಿತ್ತು. ಇದನ್ನ ಗಂಭೀರವಾಗಿ ಪರಿಗಣಿಸಿರುವುದಕ್ಕೆ ಧನ್ಯವಾದ ಎಂದು ರಾಂಡಿ ಹೇಳಿದ್ದಾರೆ.

     

    https://www.facebook.com/photo.php?fbid=10104252140827491&set=a.616059824011.2209273.4617&type=3&theater