Tag: ವಿಮಾನಯಾಣ

  • ಮೈಸೂರು- ಚೆನ್ನೈ ನಡುವೆ ಹಾರಾಡಲಿವೆ ಹೊಸ ವಿಮಾನಗಳು

    ಮೈಸೂರು- ಚೆನ್ನೈ ನಡುವೆ ಹಾರಾಡಲಿವೆ ಹೊಸ ವಿಮಾನಗಳು

    ಮೈಸೂರು: ನಾಡಹಬ್ಬ ದಸರೆಗೆ ಮುನ್ನ ಮೈಸೂರು ಮತ್ತು ಚೆನ್ನೈ ನಗರಗಳ ನಡುವೆ ವಿಶೇಷ ವಿಮಾನಗಳು ಹಾರಾಡಲಿವೆ. ಉಡೇ ದೇಶ್ ಕಾ ಆಮ್ ನಾಗರಿಕ್(ಉಡಾನ್) ಯೋಜನೆಯಡಿ ಮೈಸೂರು-ಚೆನ್ನೈ ನಡುವೆ ವಿಮಾನ ಸಂಪರ್ಕಕ್ಕೆ ನಿರ್ಧಾರ ಮಾಡಲಾಗಿದೆ.

    ಸೆಪ್ಟೆಂಬರ್ ಮೊದಲ ವಾರದಿಂದ ವಿಮಾನಗಳು ತಮ್ಮ ಹಾರಾಟ ಆರಂಭಿಸಲಿವೆ. ಹಗಲಿನ ವೇಳೆಯಲ್ಲಿ ಒಂದು ರಾತ್ರಿ ವೇಳೆಯಲ್ಲಿ ಮತ್ತೊಂದು ವಿಮಾನ ಹಾರಾಟ ನಡೆಸಲಿದೆ. ಹಗಲು ವೇಳೆ ಸಂಚರಿಸುವ ವಿಮಾನ ಒಟ್ಟು 72 ಆಸನಗಳ ಸಾಮರ್ಥ್ಯವನ್ನು ಹೊಂದಿದೆ. ರಾತ್ರಿ ವೇಳೆ 19 ಆಸನ ಸಾಮರ್ಥ್ಯದ ವಿಮಾನ ಹಾರಟ ನಡೆಸಲಿದೆ.

    ಸಮಯ ಹೀಗಿದೆ: ಬೆಳಗ್ಗೆ 10 ರಿಂದ 12 ಗಂಟೆ ಅವಧಿಯಲ್ಲಿ ಟ್ರೂಜೆಟ್ ಸಂಸ್ಥೆಯ ಒಂದು ವಿಮಾನ ಲಭ್ಯವಿರುತ್ತದೆ. ಇನ್ನೂ ರಾತ್ರಿ ವೇಳೆ 8.45 ರಿಂದ 9 ಗಂಟೆ ಅವಧಿಯಲ್ಲಿ ಏರ್ ಒಡಿಶಾ ಸಂಸ್ಥೆಯ ವಿಮಾನ ಲಭ್ಯವಿರುತ್ತದೆ. ಪ್ರತಿ ಪ್ರಯಾಣಕ್ಕೆ 2500 ರೂ.ಯನ್ನು ನಿಗದಿ ಮಾಡಲಾಗಿದೆ.

    ಈ ವಿಶೇಷ ವಿಮಾನಯಾಣ ದಸರೆಯ ನಂತರ ಸ್ಥಗಿತಗೊಳ್ಳುವುದಿಲ್ಲ. ಉಡಾನ್ ಯೋಜನೆಯಡಿಯಲ್ಲಿ ಈ ಎರಡು ವಿಮಾನಗಳು 3 ವರ್ಷಗಳ ಕಾಲ ಹಾರಾಟ ನಡೆಸಲಿವೆ ಎಂದು ಮೈಸೂರು ವಿಮಾನ ನಿಲ್ದಾಣ ನಿರ್ದೇಶಕ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

     

  • ಪೈಲಟ್ ಸಾಹಸದಿಂದ ತಪ್ಪಿತು ದುರಂತ: ಸನ್ನಿ ಲಿಯೋನ್ ಪಾರು

    ಪೈಲಟ್ ಸಾಹಸದಿಂದ ತಪ್ಪಿತು ದುರಂತ: ಸನ್ನಿ ಲಿಯೋನ್ ಪಾರು

    ಮುಂಬೈ: ಬಾಲಿವುಡ್‍ನ ಲೈಲಾ ಸನ್ನಿ ಲಿಯೋನ್ ಪ್ರಯಾಣಿಸುತ್ತಿದ್ದ ವಿಮಾನ ಅಪಾಯದಿಂದ ಪಾರಾಗಿದೆ. ವಿಮಾನದಲ್ಲಿದ್ದ ಸನ್ನಿ ಲಿಯೋನ್ ಸೇರಿದಂತೆ ಉಳಿದ ಎಲ್ಲ ಪ್ರಯಾಣಿಕರು ಸೇಫ್ ಆಗಿದ್ದಾರೆ.

    ಇನ್ನು ಸನ್ನಿ ಲಿಯೋನ್ ಜೊತೆ ಡೇನಿಯಲ್ ಸಹ ಅವರ ಜೊತೆಯಲ್ಲಿ ಪ್ರಯಾಣಿಸುತ್ತಿದ್ದರು. ಖಾಸಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸನ್ನಿ ಲಿಯೋನ್ ಮುಂಬೈಗೆ ತೆರಳುತ್ತಿದ್ದರು. ಈ ವೇಳೆ ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಪತನಗೊಳ್ಳುವ ಭೀತಿ ಎದುರಾಗಿತ್ತು. ಪೈಲಟ್‍ನ ಸಮಯಪ್ರಜ್ಞೆಯಿಂದಾಗಿ ವಿಮಾನವನ್ನು ಮಹಾರಾಷ್ಟ್ರದ ದುರ್ಗಮ ಪ್ರದೇಶದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

    ಈ ಕುರಿತು ಸನ್ನಿ ಲಿಯೋನ್ ಟ್ವೀಟ್ ಮಾಡಿದ್ದು, ನಾವು ಸೇಫ್ ಆಗಿದ್ದು, ರಸ್ತೆಯ ಮಾರ್ಗವಾಗಿ ಮನೆಗೆ ಹೋಗುತ್ತಿದ್ದೇವೆ ಎಂದು ವಿಡಿಯೋವನ್ನು ಹಾಕಿಕೊಂಡಿದ್ದಾರೆ. ಸನ್ನಿ ಜೊತೆ ಇನ್ನು ಕೆಲವರಿದ್ದು, ದೇವರ ಆಶೀರ್ವಾದದಿಂದ ಜೀವಂತವಾದ್ದೇವೆ ಎಂದು ತಿಳಿಸಿದ್ದಾರೆ.

     

    https://www.instagram.com/p/BUwXBahANVV/?taken-by=sunnyleone&hl=en

    https://www.instagram.com/p/BUyJYCXgkEC/?taken-by=sunnyleone&hl=en