Tag: ವಿಮಾನದ ಟಾಯ್ಲೆಟ್

  • ವಿಮಾನದ ಟಾಯ್ಲೆಟ್‍ನಲ್ಲಿ ನವಜಾತ ಶಿಶು ಪತ್ತೆ

    ವಿಮಾನದ ಟಾಯ್ಲೆಟ್‍ನಲ್ಲಿ ನವಜಾತ ಶಿಶು ಪತ್ತೆ

    ಪೋರ್ಟ್ ಲೂಯಿಸ್: ಹೆತ್ತಮ್ಮನಿಗೆ ಬೇಡವಾದ ನವಜಾತ ಶಿಶುವೊಂದನ್ನು ವಿಮಾನದ ಟಾಯ್ಲೆಟ್‍ನಲ್ಲಿ ಪೇಪರ್‌ನಿಂದ ಸುತ್ತಿ ಅಲ್ಲಿದ್ದ ಕಸದ ಬುಟ್ಟಿಗೆ ಎಸೆದು ಹೋದ ಘಟನೆ ಮಾರಿಷಸ್‍ನಲ್ಲಿ ನಡೆದಿದೆ.

    ಏರ್‌ಮರಿಷಸ್ ಏರ್‌ಬಸ್ A330-900 ವಿಮಾನವನ್ನು ತಪಾಸಣೆ ನಡೆಸುವ ವೇಳೆ ಟಾಯ್ಲೆಟ್‍ನಲ್ಲಿ ನವಜಾತ ಶಿಶು ಪತ್ತೆಯಾಗಿತ್ತು. ಆ ಬಳಿಕ ಈ ಸಂಬಂಧ ಮಡಗಾಸ್ಕರ್‌ನ ಮಹಿಳೆಯನ್ನು(20) ಬಂಧಿಸಿ ವಿಚಾರಣೆ ನಡೆಸಲಾಗಿದೆ. ಬಂಧಿತ ಮಹಿಳೆ ಮಾರಿಷಸ್‍ನ ಸರ್ ಸೀವೂಸಗೂರ್ ರಾಮಗೂಲಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏರ್‌ಮರಿಷಸ್ ಏರ್‌ಬಸ್ A330-900 ವಿಮಾನದಲ್ಲಿ ಪ್ರಯಾಣಿಸಿದ್ದಳು. ಇದನ್ನೂ ಓದಿ: 22 ವರ್ಷಗಳ ಬಳಿಕ ತಾಯಿ ಮಡಿಲು ಸೇರಿದ ಮಗಳು- ತಬ್ಬಿ ಕಣ್ಣೀರಿಟ್ಟ ವೀಡಿಯೋ ವೈರಲ್

    ಬಂಧಿತ ಮಹಿಳೆ ನಾನು ಆ ಮಗವಿಗೆ ಜನ್ಮನೀಡಿಲ್ಲ ಎಂದು ವಾದಿಸುತ್ತಿದ್ದು, ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆ ಮಾಡಲು ಮುಂದಾಗಿದ್ದಾರೆ. ಅಂತರಾಷ್ಟ್ರೀಯ ವಿಮಾನ ಪ್ರಯಾಣದ ನಿಯಮದ ಪ್ರಕಾರ 28 ವಾರದ ಬಳಿಕ ಗರ್ಭಿಣಿ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ಇರುವುದಿಲ್ಲ. ಇದೀಗ ವಿಮಾನದಲ್ಲಿ ಸಿಕ್ಕ ನವಜಾತ ಶಿಶು ಆರೋಗ್ಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಇದನ್ನೂ ಓದಿ: ಒಂದೇ ದಿನದಲ್ಲಿ 100 ವೈದ್ಯರಿಗೆ ಕೋವಿಡ್ ಪಾಸಿಟಿವ್!