Tag: ವಿಮಾನ

  • ಹಬ್ಬದ ಅವಧಿಯಲ್ಲಿ ಹೆಚ್ಚುವರಿ ವಿಮಾನದ ವ್ಯವಸ್ಥೆ, ದರ ನಿಯಂತ್ರಣಕ್ಕೆ ಡಿಜಿಸಿಎ ಸೂಚನೆ

    ಹಬ್ಬದ ಅವಧಿಯಲ್ಲಿ ಹೆಚ್ಚುವರಿ ವಿಮಾನದ ವ್ಯವಸ್ಥೆ, ದರ ನಿಯಂತ್ರಣಕ್ಕೆ ಡಿಜಿಸಿಎ ಸೂಚನೆ

    ನವದೆಹಲಿ: ಹಬ್ಬದ ಋತುವಿನಲ್ಲಿ ಪ್ರಯಾಣಿಕರ ಒತ್ತಡವನ್ನು ನಿರ್ವಹಿಸಲು ವಿಮಾನಯಾನ ಸಂಸ್ಥೆಗಳು ಹೆಚ್ಚಿನ ವಿಮಾನಗಳ ವ್ಯವಸ್ಥೆ ಮಾಡಲು ಮತ್ತು ಟಿಕೆಟ್ ದರಗಳನ್ನು ಸೀಮಿತಗೊಳಿಸಲು ಭಾರತೀಯ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಸೂಚಿಸಿದೆ.

    ದೀಪಾವಳಿ, ಛತ್ ಮತ್ತು ಇತರ ಹಬ್ಬಗಳ ಸಮಯದಲ್ಲಿ ವಿಮಾನಯಾನದ ಬೇಡಿಕೆಯ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು, ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ಟಿಕೆಟ್‌ಗಳು ಲಭ್ಯವಾಗುವಂತೆ ಮತ್ತು ಪ್ರಯಾಣದ ಅವಕಾಶಗಳು ಹೆಚ್ಚಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ. ಡಿಜಿಸಿಎ ತನ್ನ ಆದೇಶದಲ್ಲಿ, ವಿಮಾನಯಾನ ಸಂಸ್ಥೆಗಳು (MoCA) ತಮ್ಮ ಟಿಕೆಟ್ ದರಗಳನ್ನು ಸಮಂಜಸವಾಗಿಡಲು ಮತ್ತು ದರಗಳ ಏರಿಕೆಯನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ. ಅಲ್ಲದೆ ಹೆಚ್ಚಿನ ಬೇಡಿಕೆಯಿರುವ ಮಾರ್ಗಗಳಲ್ಲಿ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲು ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಕ್ರಿಮಿನಾಶಕ ಸಿಂಪಡಿಸಿದ್ದ ಆಹಾರ ಸೇವನೆ ಶಂಕೆ – 60ಕ್ಕೂ ಹೆಚ್ಚು ಕುರಿಗಳು ಸಾವು

    ಇದರಿಂದಾಗಿ ಪ್ರಯಾಣಿಕರಿಗೆ ಹೆಚ್ಚಿನ ಆಯ್ಕೆಗಳು ದೊರೆತು, ಟಿಕೆಟ್ ದರಗಳ ಮೇಲಿನ ಒತ್ತಡ ಕಡಿಮೆಯಾಗುವ ನಿರೀಕ್ಷೆಯಿದೆ. ಈ ಕ್ರಮವು ಪ್ರಯಾಣಿಕರಿಗೆ ಹಬ್ಬದ ಸಮಯದಲ್ಲಿ ತಮ್ಮ ಕುಟುಂಬದೊಂದಿಗೆ ಸೇರಿಕೊಳ್ಳಲು ತವರಿಗೆ ತೆರಳುವವರಿಗೆ ಸಹಾಯಕವಾಗಲಿದೆ. ಡಿಜಿಸಿಎ ಈ ಆದೇಶದ ಅನುಷ್ಠಾನವನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಿದ್ದು, ವಿಮಾನಯಾನ ಸಂಸ್ಥೆಗಳು ಈ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದೆ . ಇದನ್ನೂ ಓದಿ: ಒಂದು ತಿಂಗಳ ಒಳಗೆ ಫ್ರೆಂಚ್‌ ಪ್ರಧಾನಿ ಪಟ್ಟದಿಂದ ಇಳಿದ ಲೆಕೋರ್ನು – 3 ವರ್ಷದಲ್ಲಿ 7 ಮಂದಿ ರಾಜೀನಾಮೆ

  • ವಿಮಾನಕ್ಕೆ ಬಿಳಿ ಬಣ್ಣ ಹಚ್ಚೋದ್ಯಾಕೆ?

    ವಿಮಾನಕ್ಕೆ ಬಿಳಿ ಬಣ್ಣ ಹಚ್ಚೋದ್ಯಾಕೆ?

    ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ವಿಮಾನದ ಬಣ್ಣ ಬಿಳಿಯಾಗಿರುತ್ತದೆ. ಇನ್ನು ಕೆಲವು ವಿಮಾನಗಳು ಮಾತ್ರ  ಬೇರೆ ಬಣ್ಣಗಳದ್ದಾಗಿರುತ್ತದೆ. ಆದರೆ ಹೆಚ್ಚಿನ ವಿಮಾನಗಳು ಬಿಳಿ ಬಣ್ಣವನ್ನು ಹೊಂದಿರುತ್ತವೆ. ಯಾಕೆ ಬಿಳಿ ಬಣ್ಣವನ್ನೇ ಹೆಚ್ಚಾಗಿ ಬಳಸುತ್ತಾರೆ? ಇದರ ಹಿಂದೆ ಏನಾದರೂ ಕಾರಣವಿದ್ಯಾ? ಎಂಬ ಪ್ರಶ್ನೆ ಹಲವರಿಗೆ ಮೂಡಿರಬಹುದು. ನಿಜ ವಿಮಾನಕ್ಕೆ ಬಿಳಿ ಬಣ್ಣ ಬಳಿಯುವುದಕ್ಕೆ ಕೆಲವು ಕಾರಣಗಳಿವೆ. 

    ಬಿಳಿ ಬಣ್ಣ ಬಳಿಯುವುದು ಚಂದಕ್ಕೆ ಮಾತ್ರವಲ್ಲದೆ ವೈಜ್ಞಾನಿಕ, ಸುರಕ್ಷತಾ ದೃಷ್ಟಿಯಿಂದಾಗಿ ಈ ಬಣ್ಣವನ್ನು ಬಳಸಲಾಗುತ್ತದೆ. ವಿಮಾನದ ಸುರಕ್ಷತೆಯನ್ನು ಕಾಪಾಡುವುದು, ಜೊತೆಗೆ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಹಾಗೂ ಇನ್ನಿತರ ಕೆಲವು ಲಾಭಕ್ಕಾಗಿ ಬಿಳಿ ಬಣ್ಣವನ್ನು ಬಳಸುತ್ತಾರೆ.

    ಈ ಬಿಳಿ ಬಣ್ಣ ವಿಮಾನವನ್ನು ಸೂರ್ಯನ ಬೆಳಕಿನಿಂದ ರಕ್ಷಣೆ ಮಾಡುವುದಲ್ಲದೆ, ರನ್ ವೇಯಲ್ಲಿ ವಿಮಾನಗಳ ಸುರಕ್ಷಿತ ಸಂಚಾರಕ್ಕಾಗಿ ಸಹಾಯ ಮಾಡುತ್ತದೆ. ಜೊತೆಗೆ ವಿಮಾನದ ಒತ್ತಡವನ್ನು ಕೂಡ ಇದು ಕಡಿಮೆ ಮಾಡುತ್ತದೆ. ವಿಮಾನದ ಮೇಲೆ ಉಂಟಾಗುವ ಬಿರುಕುಗಳು, ತುಕ್ಕು ಹಿಡಿಯುವುದು ಗುರುತಿಸಲು ಸಹಕಾರಿಯಾಗುತ್ತದೆ. ಅಲ್ಲದೆ ತಜ್ಞರು ಹೇಳುವ ಪ್ರಕಾರ ಅಪಘಾತಗಳ ಸಂಖ್ಯೆಯನ್ನು ಕೂಡ ಇದು ಕಡಿಮೆ ಮಾಡುವಲ್ಲಿ ಉಪಯುಕ್ತವಾಗುತ್ತದೆ ಎನ್ನಲಾಗಿದೆ. 

    ಇನ್ನು ವಿಮಾನಯಾನ ಸಂಸ್ಥೆಗಳು ತಮ್ಮ ಗುರುತನ್ನು ಪ್ರದರ್ಶಿಸಲು ಇದನ್ನು ಬಳಸುತ್ತಾರೆ ಎನ್ನಲಾಗುತ್ತದೆ. ಸಾಮಾನ್ಯವಾಗಿ ಈ ಬಣ್ಣವು ಹಣವನ್ನ ಉಳಿಸುತ್ತದೆ, ಪ್ರಯಾಣಿಕರನ್ನ ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ. 

    ಬಿಳಿ ಬಣ್ಣ ಬಳಿಯುವುದರಿಂದ ವಿಮಾನದ ಸುರಕ್ಷತೆ ಹೇಗೆ?

    • ಮೊದಲನೆಯದಾಗಿ ಪ್ರಮುಖವಾಗಿ ವಿಮಾನಕ್ಕೆ ಬಿಳಿ ಬಣ್ಣ ಬಳಿಯಲು ಕಾರಣವೆಂದರೆ ಅವುಗಳ ಗೋಚರತೆ ಸುಲಭವಾಗಿ ಎದ್ದು ಕಾಣಬೇಕು ಎಂಬುದಾಗಿರುತ್ತದೆ. 
    • ವಿಮಾನದ ಪರಿಶೀಲನೆ ವೇಳೆ ವಿಮಾನದ ಮೇಲಿನ ಬಿರುಕುಗಳು, ತುಕ್ಕು ಹಿಡಿದಿರುವುದು ಹಾಗೂ ತೈಲ ಸೋರಿಕೆಯಾಗುತ್ತಿರುವ ಕುರಿತು ಪತ್ತೆ ಹಚ್ಚಲು ಇದು ಸುಲಭವಾಗುತ್ತದೆ. ಇಂತಹ ಸಮಸ್ಯೆಗಳನ್ನು ವಿಮಾನಯಾನ ಶುರುವಾಗುವ ಮೊದಲೇ ಗುರುತಿಸುವುದರಿಂದ ಸಣ್ಣಪುಟ್ಟ ಸಮಸ್ಯೆಗಳು ದೊಡ್ಡದಾಗುವುದನ್ನು ತಡೆಯಬಹುದು ಹಾಗೂ ಪ್ರಯಾಣಿಕರ ಸುರಕ್ಷತೆಯನ್ನು ಇದು ಕಾಪಾಡುತ್ತದೆ. 
    • ಇನ್ನು ಬಿಳಿ ಬಣ್ಣವು ಪೈಲಟ್ ಸೇರಿದಂತೆ ವಿಮಾನ ನಿಲ್ದಾಣದಲ್ಲಿರುವ ಸಿಬ್ಬಂದಿಗೂ ಇದು ಸುಲಭವಾಗಿ ಗುರುತಿಸಲು ಸಹಾಯ ಮಾಡುತ್ತದೆ. 
    • ಮೂಲಗಳ ಪ್ರಕಾರ ಬಿಳಿ ಬಣ್ಣ ವಿಮಾನದ ಸುರಕ್ಷತೆಗೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ.

    ಬಿಳಿ ಬಣ್ಣ ಬಳಿಯುವುದರಿಂದ ವೆಚ್ಚ ಕಡಿಮೆಯಾಗುತ್ತದೆ ಹೇಗೆ? 

    • ವಿಮಾನಕ್ಕೆ ಬಣ್ಣ ಬಳಿಯುವುದೆಂದರೆ ಸುಲಭವಾದ ಕೆಲಸವಲ್ಲ. ಜೊತೆಗೆ ವಿಮಾನಯಾನ ಸಂಸ್ಥೆಗೂ ಇದು ಕಡಿಮೆ ವೆಚ್ಚದ್ದೇನು ಅಲ್ಲ. ಆದರೆ ಒಂದು ವಿಮಾನಕ್ಕೆ ಬಣ್ಣ ಬಳಿಯಬೇಕೆಂದರೆ ಒಂದು ನಿರ್ದಿಷ್ಟವಾದ ವೆಚ್ಚ ಉಂಟಾಗುತ್ತದೆ. ಹೀಗಿರುವಾಗ ವಿಮಾನಕ್ಕೆ ಬಿಳಿ ಬಣ್ಣ ಬಳಿಯುವುದು ಸಾಮಗ್ರಿ ಹಾಗೂ ಶ್ರಮ ಎರಡರಲ್ಲೂ ಅಗ್ಗವಾಗಿರುತ್ತದೆ. 
    • ಬಿಳಿ ಬಣ್ಣದ ಹೊರತಾಗಿ ಬೇರೆ ಬಣ್ಣವನ್ನ ಬಳಸುವುದಕ್ಕಿಂತ ಅಥವಾ ಬಳಿಯುವುದಕ್ಕಿಂತ ಇದು ತುಂಬಾ ಕಡಿಮೆ ವೆಚ್ಚವನ್ನ ಹೊಂದಿರುತ್ತದೆ. 
    • ಒಂದು ವೇಳೆ ಬೇರೆ ಬೇರೆ ಬಣ್ಣ ಹಚ್ಚುವುದಾದರೆ ಮೊದಲಿಗೆ ಬಿಳಿ ಬಣ್ಣ ಬಳಿದು ತದನಂತರ ಬೇರೆ ಬಣ್ಣದ ಕನಿಷ್ಠ ಎರಡು ಮೂರು ಪದರಗಳನ್ನ ಬಳಿಯಬೇಕಾಗುತ್ತದೆ. ಆದರೆ ಬಿಳಿ ಬಣ್ಣದ ವಿಷಯ ಬಂದಾಗ ಹೆಚ್ಚಿನ ಪದರಗಳ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ಇದು ತುಂಬಾ ಅಗತ್ಯವಾಗಿರುತ್ತದೆ. ಅಲ್ಲದೆ ಬಿಳಿ ಬಣ್ಣ ಸಮಯಕ್ಕೆ ತಕ್ಕಂತೆ ಮಸುಕಾಗುತ್ತದೆ. ಆದರೆ ಪದೇ ಪದೇ ಬಣ್ಣ ಬಳಿಯುವ ಅವಶ್ಯಕತೆ ಇರುವುದಿಲ್ಲ. 
    • ಇನ್ನು ವಿಮಾನವನ್ನು ರನ್ ವೇಯ ಮೇಲೆ ಬಿಳಿ ಬಣ್ಣ ತಂಪಾಗಿರುತ್ತದೆ. ಏಕೆಂದರೆ ತೀವ್ರ ಬಿಸಿಲಿನಿಂದಾಗಿ ಕಾದ ರನ್ ವೇನಲ್ಲಿ ವಿಮಾನ ಚಲಿಸಿದಾಗ ಅದರ ಶಾಖ ಇದಕ್ಕೆ ಪೂರ್ಣ ಪ್ರಮಾಣದಲ್ಲಿ ತಗುಲುವುದಿಲ್ಲ. ಅಲ್ಲದೆ ಬಿಳಿ ಬಣ್ಣದಿಂದಾಗಿ ವಿಮಾನಯಾನ ಸಂಸ್ಥೆಗಳು ಒಳ್ಳೆಯ ಉಳಿತಾಯವನ್ನು ಮಾಡುತ್ತವೆ. 

    ಬಿಳಿ ಬಣ್ಣದಿಂದಾಗಿ ಪ್ರಯಾಣಿಕರ ಸುರಕ್ಷತೆ ಹೇಗೆ?

    • ಬಿಳಿ ಬಣ್ಣ ವಿಮಾನಕ್ಕೆ ಮಾತ್ರ ಪ್ರಯೋಜನವಾಗದೆ ಪ್ರಯಾಣಿಕರಿಗೂ ಇದು ಸಹಾಯ ಮಾಡುತ್ತದೆ. ವಿಮಾನಯಾನದ ಸಮಯದಲ್ಲಿ ಸೂರ್ಯನ ಬೆಳಕು ವಿಮಾನದ ಮೇಲೆ ಬೀಳುತ್ತದೆ. ಇದನ್ನ ಕಡಿಮೆ ಮಾಡಲು ಬಿಳಿ ಬಣ್ಣ ಸಹಾಯ ಮಾಡುತ್ತದೆ. ಹೌದು, ಬಿಳಿ ಬಣ್ಣ ಬಿಸಿಲಿನ ಸಮಯದಲ್ಲಿ ಹೆಚ್ಚಿನ ಬಿಸಿಲನ್ನು ಹೀರಿಕೊಳ್ಳುವುದಿಲ್ಲ. ಈ ಮೂಲಕ ವಿಮಾನದಲ್ಲಿರುವ ಪ್ರಯಾಣಿಕರಿಗೆ ಇದು ಸಹಾಯವಾಗುತ್ತದೆ ಹಾಗೂ ವಿಮಾನಯಾನವನ್ನು ಆರಾಮದಾಯಕವಾಗಿರಿಸುತ್ತದೆ. 
    • ಇನ್ನು ವಿಮಾನದ ಹೊರ ಭಾಗದಲ್ಲಿರುವ ಆನ್ ಬೋರ್ಡ್ ವ್ಯವಸ್ಥೆಗಳು ಶಾಖದಿಂದ ಹಾನಿಯಾಗುವ ಸಾಧ್ಯತೆ ಇರುತ್ತದೆ. ಇವುಗಳನ್ನು ಕೂಡ ಬಿಳಿ ಬಣ್ಣ ರಕ್ಷಿಸುತ್ತದೆ. 

    ಬಿಳಿ ಬಣ್ಣ ಬಳಿಯುವುದರಿಂದ ಹಕ್ಕಿ ಡಿಕ್ಕಿ ಕಡಿಮೆಯಾಗುವ ಸಾಧ್ಯತೆ ಹೇಗೆ?

    • ವಿಮಾನಕ್ಕೆ ಬಿಳಿ ಬಣ್ಣ ಬಳಿಯುವುದಕ್ಕೂ ಹಾಗೂ ಹಕ್ಕಿ ಡಿಕ್ಕಿಗೂ ಏನು ಸಂಬಂಧ? ಎನ್ನಿಸಬಹುದು. ಆದರೆ ಸಂಬಂಧವಿದೆ. ತಜ್ಞರು ಹೇಳುವ ಪ್ರಕಾರ ವಿಮಾನಕ್ಕೆ ಬಿಳಿ ಬಣ್ಣ ಬಳಿಯುವುದರಿಂದ ಪಕ್ಷಿ ಡಿಕ್ಕಿ ಆಗುವುದು ಕಡಿಮೆಯಾಗುತ್ತದೆ. ಬಣ್ಣವೂ ಕೂಡ ವನ್ಯಜೀವಿಗಳ ಮೇಲೆ ಪರಿಣಾಮ ಬೀರುತ್ತದೆ. ಹೌದು ಬಿಳಿ ಬಣ್ಣ ಅಥವಾ ತಿಳಿಯಾದ ಬಣ್ಣವನ್ನ ಪಕ್ಷಿಗಳು ನೋಡಿದಾಗ ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಹೀಗಾಗಿ ಪಕ್ಷಿ ಡಿಕ್ಕಿ ಆಗುವುದು ಕಡಿಮೆಯಾಗುತ್ತದೆ ಎನ್ನಲಾಗಿದೆ. 
    • ಅದಲ್ಲದೆ ವಿಮಾನಕ್ಕೆ ಬಿಳಿ ಬಣ್ಣ ಬಳಿಯುವುದರಿಂದ ವನ್ಯಜೀವಿಗಳು ಹಾಗೂ ಮಾನವರು ತಕ್ಷಣವೇ ಗುರುತಿಸುತ್ತಾರೆ. 

    ಇನ್ನು ಹೆಚ್ಚಿನ ವಿಮಾನಯಾನ ಸಂಸ್ಥೆಗಳು ತಮ್ಮ ಲೋಗೋಗಳ ಹಿನ್ನೆಲೆಯಾಗಿ ಬಿಳಿ ಬಣ್ಣವನ್ನು ಬಳಸುತ್ತವೆ. ಬಿಸಿಲಿನ ಪ್ರತಿಫಲನ, ಹಣದ ಉಳಿತಾಯ ಸೇರಿದಂತೆ ವಿಮಾನದ ಕಾರ್ಯ ಕ್ಷಮತೆ ಎಲ್ಲವನ್ನ ಉತ್ತಮವಾಗಿರಿಸಲು ಇದು ಸಹಾಯ ಮಾಡುತ್ತದೆ. ಇದು ಈಗಿನಿಂದಲ್ಲ. ಮೊದಲಿನಿಂದಲೂ ಇದನ್ನು ವಿಮಾನಯಾನ ಸಂಸ್ಥೆಗಳು ಅಳವಡಿಸಿಕೊಂಡು ಬಂದಿವೆ. ಅದಲ್ಲದೆ ಬಿಳಿ ಬಣ್ಣವು ಸರಳ ವಿನ್ಯಾಸವೆಂದು ನಂಬಲಾಗಿದೆ.

  • ಟ್ಯಾರಿಫ್‌ ವಾರ್‌ಗೆ ಸೆಡ್ಡು| P-8I ವಿಮಾನ ಖರೀದಿಸಲ್ಲ ಎಂದ ಭಾರತ

    ಟ್ಯಾರಿಫ್‌ ವಾರ್‌ಗೆ ಸೆಡ್ಡು| P-8I ವಿಮಾನ ಖರೀದಿಸಲ್ಲ ಎಂದ ಭಾರತ

    ನವದೆಹಲಿ: ಸುಂಕ ಸಮರ ಆರಂಭಿಸಿದ ಅಮೆರಿಕಕ್ಕೆ (USA) ಭಾರತ (India) ಮತ್ತೆ ತಿರುಗೇಟು ನೀಡಿದ್ದು, ಬೋಯಿಂಗ್‌ P-8I ವಿಮಾನವನ್ನು ಖರೀದಿಸದೇ ಇರಲು ನಿರ್ಧರಿಸಿದೆ ಎಂದು ವರದಿಯಾಗಿದೆ.

    6 ಪಿ-81 ವಿಮಾನ ಖರೀದಿಗೆ ಭಾರತ ಮುಂದಾಗಿತ್ತು. ಆದರೆ ಈಗ ಕಡಲಿನಲ್ಲಿ ಗಸ್ತು ಕಾಯುವ ಈ ವಿಮಾನ ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ.

    2009 ರಲ್ಲಿ ಭಾರತ 8 ವಿಮಾನ ಖರೀದಿಗೆ 2.2 ಬಿಲಿಯನ್ ಡಾಲರ್‌ ಒಪ್ಪಂದ ಮಾಡಿಕೊಂಡಿತ್ತು. 2016 ರಲ್ಲಿ 4 ವಿಮಾನ ಖರೀದಿಸಿತ್ತು. ಭಾರತದ ಸಮುದ್ರದ ಮೇಲೆ ನಿಗಾ ಇಡಲು ಭಾರತೀಯ ನೌಕಾ ಸೇನೆಗೆ ಒಟ್ಟು 18 ಪಿ-81 ವಿಮಾನಗಳ ಅಗತ್ಯವಿದೆ.  ಇದನ್ನೂ ಓದಿ: ಯಾವುದೇ ಕಾರಣಕ್ಕೂ ರಾಜಿಯಾಗಲ್ಲ, ನನಗೆ ರೈತರ ಹಿತವೇ ಮುಖ್ಯ: ಟ್ರಂಪ್‌ಗೆ ಮೋದಿ ಗುದ್ದು

    ಮೇ 2021 ರಲ್ಲಿ ಆರು ಹೆಚ್ಚುವರಿ ವಿಮಾನಗಳ ಮಾರಾಟಕ್ಕೆ ಅಮೆರಿಕ ಸರ್ಕಾರ ಅನುಮೋದನೆ ನೀಡಿತ್ತು. ಆರಂಭದಲ್ಲಿ ಈ ವಿಮಾನ ಖರೀದಿಗೆ 2.42 ಬಿಲಿಯನ್ ಡಾಲರ್‌ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಪೂರೈಕೆ ಸರಪಳಿಯಲ್ಲಿನ ಅಡಚಣೆಗಳು ಮತ್ತು ಇತರ ಜಾಗತಿಕ ಸಮಸ್ಯೆಯಿಂದ ಖರೀದಿ ವೆಚ್ಚ 3.6 ಬಿಲಿಯನ್‌ ಡಾಲರ್‌ಗೆ ಈಗ ಏರಿಕೆಯಾಗಿದೆ. ಇದನ್ನೂ ಓದಿ: ಟ್ರಂಪ್ಸುಂಕ ಶಾಕ್ಬೆನ್ನಲ್ಲೇವರ್ಷ ಭಾರತಕ್ಕೆ ಪುಟಿನ್‌ ಭೇಟಿ

    ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕದ್ದಕ್ಕೆ ಡೊನಾಲ್ಡ್‌ ಟ್ರಂಪ್‌ (Donald Trump) ಭಾರತದ ವಸ್ತುಗಳ ಮೇಲೆ 25% ತೆರಿಗೆ ವಿಧಿಸಿದ್ದರು. ಈಗ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ 25% ತೆರಿಗೆ ಹಾಕಿದ್ದಾರೆ. ಹೀಗಾಗಿ ಈಗ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಕೆಲ ವಸ್ತುಗಳ ಮೇಲೆ 50% ಸುಂಕ ವಿಧಿಸಲಾಗಿದೆ.

  • ದೆಹಲಿಯಲ್ಲಿ ಭಾರೀ ಮಳೆ – ರಸ್ತೆಯಲ್ಲಿ ಹೊಳೆಯಂತೆ ಹರಿದ ನೀರು, ಧರೆಗುರುಳಿದ ಮರಗಳು

    ದೆಹಲಿಯಲ್ಲಿ ಭಾರೀ ಮಳೆ – ರಸ್ತೆಯಲ್ಲಿ ಹೊಳೆಯಂತೆ ಹರಿದ ನೀರು, ಧರೆಗುರುಳಿದ ಮರಗಳು

    – ವಿಮಾನ ಹಾರಾಟದಲ್ಲಿ ವ್ಯತ್ಯಯ, ರೆಡ್ ಅಲರ್ಟ್ ಘೋಷಣೆ

    ನವದೆಹಲಿ: ದೆಹಲಿ(Delhi) ಮತ್ತು ಎನ್‌ಆರ್‌ಸಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ರಾತ್ರಿ ಇಡೀ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಹಲವೆಡೆ ರಸ್ತೆಗಳು ಜಲಾವೃತವಾಗಿ ಸಂಚಾರ ಅಸ್ತವ್ಯಸ್ತವಾಗಿದೆ.

    ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(Indira Gandhi International Airport) ಬೀಸಿದ ಬಿರುಗಾಳಿ ಮತ್ತು ಭಾರೀ ಮಳೆಯಿಂದಾಗಿ 100ಕ್ಕೂ ಹೆಚ್ಚು ವಿಮಾನಗಳ ಕಾರ್ಯಾಚರಣೆ ವಿಳಂಬವಾಗಿದೆ. ಅಲ್ಲದೇ ಭಾರೀ ಮಳೆಗೆ 25ಕ್ಕೂ ಹೆಚ್ಚು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಇದನ್ನೂ ಓದಿ: ಕೋವಿಡ್ ಆತಂಕ – ಬೆಂಗಳೂರಿನ ಮಲ್ಲೇಶ್ವರಂ, ರಾಜಾಜಿನಗರದ ಇಬ್ಬರಿಗೆ ಕೊರೊನಾ ಪಾಸಿಟಿವ್

    ದೆಹಲಿಯ ಮೋತಿ ಬಾಗ್, ಮಿಂಟೋ ರಸ್ತೆ, ದೆಹಲಿ ಕಂಟೋನ್ಮೆಂಟ್ ಮತ್ತು ದೀನ್ ದಯಾಳ್ ಉಪಾಧ್ಯಾಯ ಮಾರ್ಗಗಳು ಸಂಪೂರ್ಣ ಜಲಾವೃತವಾಗಿತ್ತು. ಮಹಿಪಾಲಪುರ ಮೇಲ್ಸೇತುವೆಯ ಕೆಳಗೆ ನೀರು ನಿಂತ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಇದನ್ನೂ ಓದಿ: ಕಾಲುಗಳಿಗೆ ಹಗ್ಗ ಕಟ್ಟಿ ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ ಆತ್ಮಹತ್ಯೆ

    ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳ ಮೇಲೆ ಮಳೆ ಪರಿಣಾಮ ಬೀರಿದೆ. ದೆಹಲಿಯ ಮೇಲಿನ ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಕಾರ್ಯಾಚರಣೆಗಳಲ್ಲಿ ತಾತ್ಕಾಲಿಕ ಅಡಚಣೆ ಉಂಟಾಗಿದೆ ಎಂದು ಇಂಡಿಗೋ(Indigo) ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಇದನ್ನೂ ಓದಿ: ‘ಬ್ರೋಕನ್‌ ಹಾರ್ಟ್‌ ಸಿಂಡ್ರೋಮ್‌’; ಇದು ಹೃದಯದ ಮಾತು – ಪುರುಷರೇ ಜೋಕೆ!

    ಇದೀಗ ಭಾರೀ ಮಳೆಗೆ ರಾಜಧಾನಿ ನವದೆಹಲಿ ಸೇರಿ ಹಲವೆಡೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

  • ಟ್ರಂಪ್‌ಗೆ ಕತಾರ್‌ನಿಂದ 3,400 ಕೋಟಿ ಮೌಲ್ಯದ ಐಷಾರಾಮಿ ವಿಮಾನ ಗಿಫ್ಟ್ – ವಿಶೇಷತೆ ಏನು?

    ಟ್ರಂಪ್‌ಗೆ ಕತಾರ್‌ನಿಂದ 3,400 ಕೋಟಿ ಮೌಲ್ಯದ ಐಷಾರಾಮಿ ವಿಮಾನ ಗಿಫ್ಟ್ – ವಿಶೇಷತೆ ಏನು?

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ (Donald Trump) ಕತಾರ್ (Qatar) 3,400 ಕೋಟಿ ಮೌಲ್ಯದ ಐಷಾರಾಮಿ ವಿಮಾನವೊಂದನ್ನು ಉಡುಗೊರೆಯಾಗಿ ನೀಡಲು ಮುಂದಾಗಿದೆ. ಮುಂದಿನ ವಾರ ಟ್ರಂಪ್ ಮಧ್ಯಪ್ರಾಚ್ಯ ಪ್ರವಾಸದ ವೇಳೆ ಈ ವಿಮಾನ (Flight) ಹಸ್ತಾಂತರಿಸುವ ಸಾಧ್ಯತೆ ಇದೆ.

    ಉಡುಗೊರೆ ಏಕೆ?
    ಹಾಲಿ ಅಮೆರಿಕ ಅಧ್ಯಕ್ಷರು ಬಳಸುವ ಏರ್‌ಫೋರ್ಸ್-1 ಬಹಳ ಹಳೆಯದ್ದಾಗಿದೆ. ಮೊದಲ ಅವಧಿಗೆ ಅಧ್ಯಕ್ಷರಾಗಿದ್ದಾಲೇ ಟ್ರಂಪ್ ಹೊಸ ವಿಮಾನಕ್ಕೆ ಬೇಡಿಕೆಯಿಟ್ಟಿದ್ದರು. ಶ್ವೇತಭವನ ಬೇಡಿಕೆ ಅನ್ವಯ ಸಿದ್ಧಪಡಿಸಲು 2 ವಿಮಾನಕ್ಕೆ 17,000 ಕೋಟಿ ರೂ. ಅಂದಾಜಿಸಲಾಗಿತ್ತು. ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ ಕಾರಣ ವಿಳಂಬವಾಗಿತ್ತು. ಬೇಡಿಕೆ ಸಲ್ಲಿಸಲಾಗಿದೆಯಾದರೂ ಇದು 2029ರ ಹೊತ್ತಿಗೆ ಪೂರೈಕೆಯಾಗುತ್ತದೆ. ಹೀಗಾಗಿ ದುಬೈ ದೊರೆಗಳು ತಮ್ಮ ಬಳಕೆಗೆಂದು ಖರೀದಿಸಿದ್ದ 747-8 ಬೋಯಿಂಗ್ ಅನ್ನು ಟ್ರಂಪ್‌ಗೆ ಉಡುಗೊರೆಯಾಗಿ ಕೊಡಲು ಮುಂದಾಗಿದ್ದಾರೆ. ಕತಾರ್ 747-8 ಬೋಯಿಂಗ್ ವಿಮಾನವನ್ನು ಅಮೆರಿಕ ಅಧ್ಯಕ್ಷರ ಬೇಡಿಕೆಗೆ ಅನ್ವಯ ಮರು ವಿನ್ಯಾಸಗೊಳಿಸಲಾಗುತ್ತದೆ ಎನ್ನಲಾಗಿದೆ.

    ವಿಮಾನದ ವಿಶೇಷತೆ ಏನು?
    ಈ ವಿಮಾನವನ್ನು ಫ್ಲೈಯಿಂಗ್ ಪ್ಯಾಲೆಸ್ ಅಥವಾ ಹಾರುವ ಅರಮನೆ ಎಂದು ಕರೆಯಲಾಗುತ್ತದೆ. ಇದು ಅತ್ಯಾಧುನಿಕ ಸ್ನಾನಗೃಹಗಳು, ಖಾಸಗಿ ಮಲಗುವ ಕೋಣೆಗಳು, ಭವ್ಯವಾದ ಮೆಟ್ಟಿಲುಗಳಿಂದ ಕೂಡಿದ ಒಳಾಂಗಣವನ್ನು ಹೊಂದಿದೆ. ಇದನ್ನು ಆರಂಭದಲ್ಲಿ ಕತಾರ್ ರಾಜಮನೆತದವರು ಬಳಸುತ್ತಿದ್ದರು. ಆ ಬಳಿಕ ಟರ್ಕಿ ಇದನ್ನು ಬಳಸುತ್ತಿತ್ತು.

    13 ವರ್ಷ ಹಳೆಯದಾದ ಕತಾರ್‌ನ ಈ ವಿಮಾನವನ್ನು ಟ್ರಂಪ್ ಅವಧಿ ಮುಗಿದ ನಂತರ ಅಧ್ಯಕ್ಷೀಯ ಗ್ರಂಥಾಲಯ ಪ್ರತಿಷ್ಠಾನಕ್ಕೆ ಸ್ಥಳಾಂತರಿಸಲಾಗುತ್ತದೆ. ಉಚಿತವಾಗಿ ಸಿಕ್ಕ ಜೆಟ್ ಅನ್ನು ಬೇಡ ಎನ್ನುವಷ್ಟು ಮೂರ್ಖ ನಾನಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಇದು ಲಂಚ ಅಂತ ವ್ಯಾಪಕ ಚರ್ಚೆ ಆಗುತ್ತಿದೆ.

    ಟ್ರಂಪ್ ಬಳಸುತ್ತಿರುವ ಏರ್‌ಫೋರ್ಸ್-1 ಹೇಗಿದೆ?
    ಏರ್ ಫೋರ್ಸ್ 1 ಅಮೆರಿಕದ ಅಧ್ಯಕ್ಷ ಟ್ರಂಪ್ ಸದ್ಯ ಬಳಸುತ್ತಿರುವ ವಿಮಾನ. ಇದನ್ನು ‘ಹಾರಾಡುವ ಶ್ವೇತ ಭವನ’ ಎಂದು ಕರೆಯುತ್ತಾರೆ. ಈ ವಿಮಾನ ಶ್ವೇತಭವನದ ರೀತಿಯ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಒಂದು ಬಾರಿ ಇಂಧನ ತುಂಬಿದರೆ 20 ಗಂಟೆ ಹಾರಾಡುವ ಸಾಮರ್ಥ್ಯನ್ನು ಇದು ಹೊಂದಿದ್ದು, ಖಾಸಗಿ ಕಚೇರಿ, ಸೆಮಿನಾರ್ ಹಾಲ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒಳಗೊಂಡಿದೆ.

  • ಇನ್ನು ಮುಂದೆ ಪಿಯುಸಿಯಲ್ಲಿ ಕಲೆ, ವಾಣಿಜ್ಯ ಓದಿದವರೂ ಪೈಲಟ್‌ ಆಗಬಹುದು!

    ಇನ್ನು ಮುಂದೆ ಪಿಯುಸಿಯಲ್ಲಿ ಕಲೆ, ವಾಣಿಜ್ಯ ಓದಿದವರೂ ಪೈಲಟ್‌ ಆಗಬಹುದು!

    ನವದೆಹಲಿ: ಇನ್ನು ಮುಂದೆ ಪಿಯುಸಿಯಲ್ಲಿ ಕಲೆ (Arts) ಮತ್ತು ವಾಣಿಜ್ಯ (Commerce) ವಿಷಯವನ್ನು ಓದಿದವರೂ ವಾಣಿಜ್ಯ ಪೈಲಟ್‌ (Pilots) ಆಗಬಹುದು.

    ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ವಾಣಿಜ್ಯ ಪೈಲಟ್ ಪರವಾನಗಿ (CPL) ತರಬೇತಿಗಾಗಿ ವಿದ್ಯಾರ್ಥಿ 12ನೇ ತರಗತಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯವನ್ನು ಕಡ್ಡಾಯವಾಗಿ ಅಧ್ಯಯನ ಮಾಡಿರಬೇಕೆಂಬ ಷರತ್ತನ್ನು ತೆಗೆಯಲು ಮುಂದಾಗಿದೆ ಎಂದು ವರದಿಯಾಗಿದೆ.

    1990ರ ದಶಕದ ಮಧ್ಯದಿಂದ ಭಾರತದಲ್ಲಿ ಪೈಲಟ್‌ ಆಗಲು ವಿಜ್ಞಾನ ಮತ್ತು ಗಣಿತ ಓದಿರಬೇಕೆಂಬ ನಿಯಮ ತರಲಾಗಿತ್ತು. ಇದಕ್ಕೂ ಮೊದಲು 10ನೇ ತರಗತಿ ಉತ್ತೀರ್ಣ (ಮೆಟ್ರಿಕ್) ಮಾತ್ರ ಶೈಕ್ಷಣಿಕ ಅವಶ್ಯಕತೆಯಾಗಿತ್ತು. ಇದನ್ನೂ ಓದಿ: ಅಮೆರಿಕಕ್ಕೆ ಭಾರತದಿಂದ 5 ವಿಮಾನ ಭರ್ತಿ ಐಫೋನ್‌ ಕಳುಹಿಸಿದ ಆಪಲ್‌

    ಈಗ ವೈದ್ಯಕೀಯ ಫಿಟ್‌ನೆಸ್ ಮಾನದಂಡದ ಜೊತೆ ಯಾವುದೇ ಮಾಧ್ಯಮದಲ್ಲಿ 12ನೇ ತರಗತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪೈಲಟ್‌ ತರಬೇತಿ ಪಡೆಯಲು ಅವಕಾಶ ನೀಡಲು ಡಿಜಿಸಿಎ ಮುಂದಾಗುತ್ತಿದೆ.

    ಒಮ್ಮೆ ಅಂತಿಮಗೊಳಿಸಿದ ನಂತರ ಈ ಶಿಫಾರಸನ್ನು ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಸಚಿವಾಲಯ ಅನುಮೋದಿಸಿದಾಗ CPL ತರಬೇತಿಯು ಎಲ್ಲಾ ಸ್ಟ್ರೀಮ್‌ಗಳಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಮುಕ್ತವಾಗಿರುತ್ತದೆ ಎಂದು ಡಿಜಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಜಿಪಿಎಸ್ ಆಧಾರಿತ ಟೋಲ್ ಬಗ್ಗೆ ನಿರ್ಧಾರ ಕೈಗೊಂಡಿಲ್ಲ – ಹೆದ್ದಾರಿ ಸಚಿವಾಲಯ ಸ್ಪಷ್ಟನೆ

    ಅಲೈಯನ್ಸ್ ಏರ್‌ ಮತ್ತು ಇಂಡಿಗೋದಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ಪೈಲಟ್ ಕ್ಯಾಪ್ಟನ್‌ ಶಕ್ತಿ ಲುಂಬಾ ಪ್ರತಿಕ್ರಿಯಿಸಿ, ಭಾರತವನ್ನು ಹೊರತುಪಡಿಸಿ ಬೇರೆ ಯಾವುದೇ ದೇಶದಲ್ಲಿ ಸಿಪಿಎಲ್ ತರಬೇತಿಗೆ ಅರ್ಹತಾ ಮಾನದಂಡವಾಗಿ 12ನೇ ತರಗತಿ ಮಟ್ಟದಲ್ಲಿ ಭೌತಶಾಸ್ತ್ರ ಮತ್ತು ಗಣಿತದ ಅವಶ್ಯಕತೆಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

    ಹಲವರು ಮಂದಿ ಈ ನಿಯಮವನ್ನು ಪ್ರಶ್ನಿಸಿದ್ದಾರೆ. ನೀವು ಶ್ರೀಮಂತರಾಗಿದ್ದರೆ ಮತ್ತು ನಿಮ್ಮದೇ ಸ್ವಂತ ವಿಮಾನವನ್ನು ಹಾರಿಸಲು ಬಯಸಿದರೆ ಈ ನಿಯಮಗಳು ಅನ್ವಯವಾಗುವುದಿಲ್ಲ. ಹೀಗಾಗಿ ಗಣಿತ ಮತ್ತು ಭೌತಶಾಸ್ತ್ರ ಕಡ್ಡಾಯ ಮಾಡಿದ್ದು ಯಾಕೆ ಎಂದು ಕೇಳಿದ್ದಾರೆ. ಇದನ್ನೂ ಓದಿ: ಲೇಸರ್‌ ಲೈಟ್‌ ಎಫೆಕ್ಟ್‌, ಪಾಟ್ನಾ ಏರ್‌ಪೋರ್ಟ್‌ನಲ್ಲಿ ತಪ್ಪಿತು ದುರಂತ – ಪೈಲಟ್‌ ಸಾಹಸದಿಂದ ಉಳಿಯಿತು ನೂರಾರು ಜೀವ

    ವಾಣಿಜ್ಯ ಪೈಲಟ್‌ ಪ್ರಮಾಣಪತ್ರ ಪಡೆಯಲು ಭಾರತದಿಂದ ಹಲವು ಮಂದಿ ವಿದೇಶಕ್ಕೆ ತರಬೇತಿ ಪಡೆಯಲು ಹೋಗುತ್ತಿರುವ ಬೆನ್ನಲ್ಲೇ DGCA ನಿಯಮ ಬದಲಾವಣೆಗೆ ಮುಂದಾಗಿದೆ.

  • ಎಂಜಿನ್ ವೈಫಲ್ಯ – ಬ್ರೆಜಿಲ್‌ನಲ್ಲಿ ನೇರವಾಗಿ ರಸ್ತೆಗೆ ಲ್ಯಾಂಡ್ ಆದ ವಿಮಾನ

    ಎಂಜಿನ್ ವೈಫಲ್ಯ – ಬ್ರೆಜಿಲ್‌ನಲ್ಲಿ ನೇರವಾಗಿ ರಸ್ತೆಗೆ ಲ್ಯಾಂಡ್ ಆದ ವಿಮಾನ

    ಬ್ರೆಜಿಲ್: ವಿಮಾನವೊಂದು ಎಂಜಿನ್ ವೈಫ್ಯಲ್ಯದಿಂದ ನೇರವಾಗಿ ರಸ್ತೆಗೆ ಲ್ಯಾಂಡ್ ಆಗಿರುವ ಘಟನೆ ಬ್ರೆಜಿಲ್‌ನ (Brazil) ಸಾಂತಾ ಕ್ಯಾಟರಿನಾದಲ್ಲಿ (Santa Catarina) ನಡೆದಿದೆ.

    ಗೌರಮಿರಿಮ್‌ನಲ್ಲಿರುವ ವಿಮಾನ ನಿಲ್ದಾಣದಿಂದ ಟೇಕ್ ಆಫ್ (Take Off) ಆದ ವಿಮಾನವು ಸ್ಪಲ್ಪ ದೂರ ಹಾರುತ್ತಿದ್ದಂತೆ ಎಂಜಿನ್‌ನಲ್ಲಿ ತೊಂದರೆ ಕಾಣಿಸಿಕೊಂಡಿದೆ. ತುರ್ತು ಕ್ರಮವಾಗಿ ಪೈಲಟ್ ಗುರುವದ ಬಿಆರ್-1010 ಹೆದ್ದಾರಿ ಮೇಲೆ ಲ್ಯಾಂಡ್ ಮಾಡಿದ್ದಾರೆ. ಇದನ್ನೂ ಓದಿ: ಒಮನ್‌ನಲ್ಲಿ ವಿಜಯ್, ರಶ್ಮಿಕಾ ಸುತ್ತಾಟ- ಬೀಚ್‌ ಫೋಟೋದಿಂದ ಸಿಕ್ಕಿಬಿದ್ದ ಜೋಡಿ

    ಸಿಂಗಲ್ ಎಂಜಿನ್ ಹೊಂದಿರುವ ಪೆಲಿಕನ್ 500ಬಿಆರ್ ವಿಮಾನದಲ್ಲಿ ಕಾಣಿಸಿಕೊಂಡ ಎಂಜಿನ್ ವೈಫಲ್ಯದಿಂದ ತುರ್ತು ಲ್ಯಾಂಡ್ ಮಾಡಲಾಯಿತು. ವಿಮಾನದಲ್ಲಿ ಇಬ್ಬರು ಪೈಲಟ್‌ಗಳಿದ್ದರು. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಭೋವಿ ನಿಗಮದಲ್ಲಿ 97 ಕೋಟಿ ರೂ. ಅಕ್ರಮ – ಇ.ಡಿಯಿಂದ ಅಧಿಕೃತ ಮಾಹಿತಿ

    ವಿಮಾನ ತುರ್ತು ಭೂಸ್ಪರ್ಶ ಮಾಡುತ್ತಿರುವ ದೃಶ್ಯವನ್ನು ಕಾರಿನಲ್ಲಿ ಹೋಗುತ್ತಿದ್ದ ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಅದೃಷ್ಟವಶಾತ್ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಯಾವುದೇ ವಾಹನಗಳಿಗೆ ಹಾನಿಯಾಗಿಲ್ಲ.

  • ಮೋದಿ ಪ್ರಯಾಣಿಸುವ ವಿಮಾನದ ಮೇಲೆ ಉಗ್ರರ ದಾಳಿ ಬೆದರಿಕೆ

    ಮೋದಿ ಪ್ರಯಾಣಿಸುವ ವಿಮಾನದ ಮೇಲೆ ಉಗ್ರರ ದಾಳಿ ಬೆದರಿಕೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಫ್ರಾನ್ಸ್‌ಗೆ (France) ತೆರಳುತ್ತಿದ್ದಾಗ (ಫೆ.11) ವಿಮಾನದ ಮೇಲೆ ಭಯೋತ್ಪಾದಕರು ದಾಳಿ ನಡೆಸಬಹುದು ಎಂದು ಅಪರಿಚಿತರೊಬ್ಬರು ಮುಂಬೈ ಪೊಲೀಸ್‌ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ. ಜೊತೆಗೆ, ಇತರ ಏಜೆನ್ಸಿಗಳಿಗೂ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

    ನರೇಂದ್ರ ಮೋದಿ ಅವರು ಮೂರು ದಿನಗಳ ಕಾಲ ಫ್ರಾನ್ಸ್ ಹಾಗೂ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಮೋದಿ ಅವರನ್ನು ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರನ್ ಮಂಗಳವಾರ ಆತ್ಮೀಯವಾಗಿ ಬರಮಾಡಿಕೊಂಡಿದ್ದರು. ಇದನ್ನೂ ಓದಿ: ಫ್ರಾನ್ಸ್‌ಗೆ ಪ್ರಯಾಣ ಬೆಳೆಸಿದ ಮೋದಿ – ಅಮೆರಿಕ ಭೇಟಿ ಬಗ್ಗೆ ಹೇಳಿದ್ದೇನು?

    ಪ್ಯಾರಿಸ್‌ನಲ್ಲಿ ಮಂಗಳವಾರ ನಡೆದ ‘ಎಐ ಆ್ಯಕ್ಷನ್’ ಶೃಂಗಸಭೆಯಲ್ಲಿ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಅವರೊಂದಿಗೆ ಸಹ ಅಧ್ಯಕ್ಷತೆ ವಹಿಸಿದ್ದರು. ಇದನ್ನೂ ಓದಿ: ವಿದೇಶಗಳಿಗೆ ಅಮೆರಿಕ ನೀಡುತ್ತಿದ್ದ ನೆರವಿಗೂ ಕೊಕ್ಕೆ ಹಾಕಿದ ಟ್ರಂಪ್‌ – ಭಾರತದ ಮೇಲೂ ಎಫೆಕ್ಟ್‌?

  • ವಿಮಾನ – ಹೆಲಿಕಾಪ್ಟರ್ ದುರಂತ; ಎಲ್ಲಾ 64 ಮಂದಿ ದುರ್ಮರಣ, 28 ಮೃತದೇಹ ಪತ್ತೆ

    ವಿಮಾನ – ಹೆಲಿಕಾಪ್ಟರ್ ದುರಂತ; ಎಲ್ಲಾ 64 ಮಂದಿ ದುರ್ಮರಣ, 28 ಮೃತದೇಹ ಪತ್ತೆ

    ವಾಷಿಂಗ್ಟನ್: ಸೇನಾ ಹೆಲಿಕಾಪ್ಟರ್‌ – ಅಮೆರಿಕರ ವಿಮಾನದ ನಡುವಿನ ದುರಂತದಲ್ಲಿ (Plane Helicopter Collision) ಎಲ್ಲಾ 64 ಮಂದಿ ದುರ್ಮರಣಕ್ಕೀಡಾಗಿದ್ದು, ಈವರೆಗೆ 28 ಮೃತದೇಹಗಳನ್ನು ಪೊಟೊಮ್ಯಾಕ್ ನದಿಯಿಂದ (Potomac River) ಹೊರತೆಗೆಯಲಾಗಿದೆ ಎಂದು ವರದಿಗಳು ತಿಳಿಸಿವೆ.

    ಅಮೆರಿಕದ (America) ವಾಷಿಂಗ್ಟನ್ ಡಿಸಿಯ ರೊನಾಲ್ಡ್ ರೇಗನ್ ವಿಮಾನ ನಿಲ್ದಾಣದ (Reagan National Airport) ಬಳಿ ದುರಂತ ನಡೆದಿದೆ. ಈ ವೇಳೆ ಅಮೆರಿಕನ್ ಏರ್‌ಲೈನ್ಸ್ ಫ್ಲೈಟ್-5342ರಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ 64 ಮಂದಿ ಸಾವನ್ನಪ್ಪಿದ್ದು, ಈವರೆಗೆ 28 ಮೃತದೇಹಳನ್ನು ಹೊರತೆಗೆಯಲಾಗಿದೆ. ಭೀಕರ ದುರಂತದಲ್ಲಿ ಬದುಕುಳಿದಿರುವ ಸಾಧ್ಯತೆಗಳು ಕಡಿಮೆ ಎಂದು ವಾಷಿಂಗ್ಟನ್ ಅಗ್ನಿಶಾಮಕ ಮುಖ್ಯಸ್ಥ ಜಾನ್ ಡೊನ್ನೆಲ್ಲಿಯನ್ನು ತಿಳಿಸಿದ್ದಾರೆ. ಇದನ್ನೂ ಓದಿ: AI ರಂಗದಲ್ಲಿ ಡೀಪ್‌ಸೀಕ್ ಸಂಚಲನ – ಅಮೆರಿಕ ಷೇರುಪೇಟೆ ಶೇಕ್!

    ಸದ್ಯ ನದಿಯಲ್ಲಿ ಉಳಿದ ಮೃತದೇಹಳಿಗಾಗಿ ಕಾರ್ಯಾಚರಣೆ ಮುಂದುವರಿದಿದೆ. ಆದ್ರೆ ಮಿಲಿಟರಿ ಬ್ಲಾಕ್‌ ಹಾಕ್ ಹೆಲಿಕಾಪ್ಟರ್‌ನಲ್ಲಿ ಮೂವರು ಸೈನಿಕರಿದ್ದು, ಅವರ ಬಗ್ಗೆ ಯಾವುದೇ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕಾಂಗೋದಲ್ಲಿ M23 ಬಂಡುಕೋರರ ಲೂಟಿ – 100ಕ್ಕೂ ಹೆಚ್ಚು ಬಲಿ, ಸಾವಿರಾರು ಜನರಿಗೆ ಗಾಯ

    ಅಪಘಾತ ಸಂಭವಿಸಿದ್ದು ಹೇಗೆ?
    ದುರಂತಕ್ಕೀಡಾದ ಅಮೆರಿಕನ್‌ ಏರ್‌ಲೈನ್ಸ್‌ (American Airlines) ವಿಮಾನವು ಕಾನ್ಸಾಸ್‌ನಿಂದ ಡಿ.ಸಿ.ಯ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಬುಧವಾರ ತಡರಾತ್ರಿ ಪೊಟೊಮ್ಯಾಕ್ ನದಿಯಲ್ಲಿ ವಿಮಾನ ಪತನಗೊಂಡಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದೆ. ವಿಮಾನ ನಿಲ್ದಾಣದಲ್ಲಿ ಎಲ್ಲಾ ಹಾರಾಟಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿನ ವಲಸಿಗರ ಕೈಗೆ ಕೋಳ – ಟ್ರಂಪ್ ಆದೇಶದ ವಿರುದ್ಧ ಸಿಡಿದೆದ್ದ ಸಿಖ್ಖರು

  • ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದು ನದಿಗೆ ಬಿದ್ದ ವಿಮಾನ -18 ಮಂದಿ ಸಾವು

    ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದು ನದಿಗೆ ಬಿದ್ದ ವಿಮಾನ -18 ಮಂದಿ ಸಾವು

    ವಾಷಿಂಗ್ಟನ್: ಸೇನಾ ಹೆಲಿಕಾಪ್ಟರ್‌ಗೆ (Military Helicopter) ಪ್ರಯಾಣಿಕರಿದ್ದ ವಿಮಾನವೊಂದು (Flight) ಡಿಕ್ಕಿ ಹೊಡೆದು ನದಿಗೆ ಬಿದ್ದ ಪರಿಣಾಮ 18 ಮಂದಿ ಸಾವನ್ನಪ್ಪಿದ ಘಟನೆ ಅಮೆರಿಕದ (America) ವಾಷಿಂಗ್ಟನ್ ಡಿಸಿಯ ರೊನಾಲ್ಡ್ ರೇಗನ್ ವಿಮಾನ ನಿಲ್ದಾಣದ (Reagan National Airport )ಬಳಿ ನಡೆದಿದೆ.

    ಅಮೆರಿಕ ಸೇನಾ ಹೆಲಿಕಾಪ್ಟರ್‌ಗೆ ವಿಮಾನ ಡಿಕ್ಕಿ ಹೊಡೆದ ಪರಿಣಾಮ ಪೋಟೋಮ್ಯಾಕ್ ನದಿಗೆ ವಿಮಾನ ಬಿದ್ದಿದೆ. ಸದ್ಯ ನದಿಯಿಂದ ವಿಮಾನದಲ್ಲಿದ್ದ ನಾಲ್ವರನ್ನು ರಕ್ಷಣೆ ಮಾಡಿದ್ದು, 18 ಮಂದಿಯ ಮೃತದೇಹಗಳನ್ನು ಮೇಲೆತ್ತಲಾಗಿದೆ. ಇದನ್ನೂ ಓದಿ: ಹಾಸನದಲ್ಲಿ ಪುಡಿ ರೌಡಿಯ ಕಾಟ | ಬೆಂಗಳೂರು – ಮಂಗಳೂರು ಬಸ್ಸು ತಡೆದು ಮಾರಕಾಸ್ತ್ರದಿಂದ ಹಲ್ಲೆ

    ಅಪಘಾತಕ್ಕೀಡಾದ ವಿಮಾನವು 60 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು. ಕಾನ್ಸಾಸ್‌ನಿಂದ ಡಿ.ಸಿ.ಯ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಬುಧವಾರ ತಡರಾತ್ರಿ ಪೊಟೊಮ್ಯಾಕ್ ನದಿಯಲ್ಲಿ ವಿಮಾನ ಪತನಗೊಂಡಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದೆ. ವಿಮಾನ ನಿಲ್ದಾಣದಲ್ಲಿ ಎಲ್ಲಾ ಹಾರಾಟಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಹೇಮಾವತಿ ನದಿಗೆ ಬಿದ್ದ ವಿದ್ಯಾರ್ಥಿ – ಪ್ರಾಣಾಪಾಯದಿಂದ ಪಾರು