Tag: ವಿಪ್ರೋ

  • ವಿಪ್ರೋ ಕ್ಯಾಂಪಸ್‌ನಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಲ್ಲ-  ಸಿಎಂ ಮನವಿಯನ್ನು ತಿರಸ್ಕರಿಸಿದ ಅಜೀಂ ಪ್ರೇಮ್‌ಜಿ

    ವಿಪ್ರೋ ಕ್ಯಾಂಪಸ್‌ನಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಲ್ಲ- ಸಿಎಂ ಮನವಿಯನ್ನು ತಿರಸ್ಕರಿಸಿದ ಅಜೀಂ ಪ್ರೇಮ್‌ಜಿ

    ಬೆಂಗಳೂರು: ಕ್ಯಾಂಪಸ್‌ನಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಿಎಂ ಸಿದ್ದರಾಮಯ್ಯನವರ (CM Siddaramaiah) ಮನವಿಯನ್ನು ವಿಪ್ರೋ (Wipro) ಮುಖ್ಯಸ್ಥ ಅಜೀಂ ಪ್ರೇಮ್‌ಜಿ (Azim Premji) ತಿರಸ್ಕರಿಸಿದ್ದಾರೆ.

    ಇಬ್ಲೂರು ಜಂಕ್ಷನ್‌ನ ಔಟರ್ ರಿಂಗ್ ರೋಡ್ ಟ್ರಾಫಿಕ್ ಸಮಸ್ಯೆಗೆ (Traffic Problem) ಪರಿಹಾರ ಕಂಡುಕೊಳ್ಳಲು ವಿಪ್ರೋ ಕ್ಯಾಂಪಸ್‌ನಲ್ಲಿ ಸೀಮಿತ ವಾಹನಗಳ ಸಂಚಾರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದು ಮನವಿ ಮಾಡಿದ್ದರು

    ಈ ಪತ್ರಕ್ಕೆ ಉತ್ತರಿಸಿ ಪತ್ರ ಬರೆದ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ, ಸರ್ಜಾಪುರ ವಿಪ್ರೋ ಕ್ಯಾಂಪಸ್‌ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ದೀರ್ಘಕಾಲಿಕ ಪರಿಹಾರ ಅಲ್ಲ. ಸರ್ಜಾಪುರದ ವಿಪ್ರೋ ಕ್ಯಾಂಪಸ್ ಜಾಗತಿಕ ಗ್ರಾಹಕರಿಗೆ ಸೇವೆಗಳನ್ನು ಒದಗಿಸುವ ವಿಶೇಷ ಆರ್ಥಿಕ ವಲಯ. ನಮ್ಮ ಒಪ್ಪಂದದ ನಿಯಮಗಳು ಆಡಳಿತ, ಪ್ರವೇಶ ನಿಯಂತ್ರಣ ಮಾನದಂಡಗಳು ಕಡ್ಡಾಯಗೊಳಿಸಿದೆ. ಖಾಸಗಿ ಆಸ್ತಿಯ ಮೂಲಕ ಸಾರ್ವಜನಿಕ ವಾಹನ ಸಂಚಾರವು ಸುಸ್ಥಿರ, ದೀರ್ಘಕಾಲೀನ ಪರಿಹಾರವಲ್ಲ ಎಂದು ಅಜೀಂ ಪ್ರೇಮ್‌ಜೀ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ:  ಬುರುಡೆ ಗ್ಯಾಂಗ್‌ ಪಿಐಎಲ್ ವಜಾ| ಇದೊಂದು ಬೇಜವಾಬ್ದಾರಿ ಸರ್ಕಾರ, ವಕೀಲ ಧನಂಜಯ್ ಕ್ಷಮೆಗೆ ಆಗ್ರಹಿಸಿದ ಸೂಲಿಬೆಲೆ

     

    ಶಾಶ್ವತ ಪರಿಹಾರಕ್ಕೆ ರಾಜ್ಯ ಸರ್ಕಾರದ ಜೊತೆ ವಿಪ್ರೋ ಮಾತುಕತೆ, ಪಾಲುದಾರಿಕೆಗೆ ಸಿದ್ಧ. ಶೀಘ್ರ ರಾಜ್ಯ ಸರ್ಕಾರದ ಅಧಿಕಾರಿಗಳ ಜೊತೆ ನಮ್ಮ ತಂಡ ಚರ್ಚಿಸಲಿದೆ ಎಂದು ತಿಳಿಸಿದ್ದಾರೆ.

    ನಮ್ಮ ಸರ್ಜಾಪುರ ಕ್ಯಾಂಪಸ್ ಸಾರ್ವಜನಿಕ ರಸ್ತೆಗಳಿಗೆ ಉದ್ದೇಶಿಸದ ಪಟ್ಟಿ ಮಾಡಿದ ಕಂಪನಿ. ಅಲ್ಲದೇ ವಿಶೇಷ ಖಾಸಗಿ ಆಸ್ತಿಯಾಗಿದೆ. ಕಾನೂನು, ಆಡಳಿತ ಮತ್ತು ಶಾಸನಬದ್ಧ ಸವಾಲುಗಳನ್ನು ಎದುರಿಸುತ್ತೇವೆ. ಆದರೂ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಕರ್ನಾಟಕ ಸರ್ಕಾರದೊಂದಿಗೆ ಕೈ ಜೋಡಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ದತ್ತಾಂಶವನ್ನು ಸಂಪೂರ್ಣವಾಗಿ ರಕ್ಷಿಸಿ – ಜಾತಿ ಸಮೀಕ್ಷೆಗೆ ಷರತ್ತು, ಸರ್ಕಾರಕ್ಕೆ ಬಿಗ್‌ ರಿಲೀಫ್‌

    ಡೇಟಾ-ಚಾಲಿತ ವಿಧಾನವು ನಮ್ಮ ನಗರಕ್ಕೆ ಹೆಚ್ಚು ಪರಿಣಾಮಕಾರಿ ಫಲಿತಾಂಶಗಳನ್ನ ನೀಡುತ್ತದೆ ಎಂದು ನಾವು ನಂಬುತ್ತೇವೆ. ರೇಶ್ಮಿ ಶಂಕರ್ ನೇತೃತ್ವದ ನಮ್ಮ ತಂಡ ನಿಮ್ಮ ಅಧಿಕಾರಿಗಳೊಂದಿಗೆ ಸಾಧ್ಯವಾದಷ್ಟು ಬೇಗ ಮುಂದಿನ ದಾರಿಯ ಬಗ್ಗೆ ಚರ್ಚಿಸಲಿದೆ ಎಂದು ಉತ್ತರಿಸಿದ್ದಾರೆ.

  • ಸಿಎಂ, ಡಿಸಿಎಂ ಭೇಟಿಯಾದ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ

    ಸಿಎಂ, ಡಿಸಿಎಂ ಭೇಟಿಯಾದ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ

    ಬೆಂಗಳೂರು: ವಿಪ್ರೋ (Wipro) ಮುಖ್ಯಸ್ಥ ಅಜೀಂ ಪ್ರೇಮ್‌ಜಿ (Azim Hashim Premji) ಅವರು ಶುಕ್ರವಾರ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

    ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಅಜೀಂ ಪ್ರೇಮ್‌ಜಿ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ವಿಪ್ರೋ ಅಧ್ಯಕ್ಷರಾದ ರಿಷಾದ್ ಪ್ರೇಮ್‌ಜಿ (Rishad Premji) ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ.ಸುಧಾಕರ್  ಉಪಸ್ಥಿತರಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ (Congress) ಆಡಳಿತಕ್ಕೆ ಬಂದ ನಂತರ ಅಜೀಂ ಪ್ರೇಮ್‌ಜಿ ಅವರು ಸಿಎಂ ಹಾಗೂ ಡಿಸಿಎಂ ಅವರನ್ನು ಮೊದಲ ಬಾರಿಗೆ ಸೌಜನ್ಯಯುತವಾಗಿ ಭೇಟಿಯಾಗಿದ್ದು, ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್‌ ರಿಲೀಫ್‌

    ಸದಾಶಿವನಗರದಲ್ಲಿರುವ (Sadashivanagara) ಡಿಕೆಶಿ ಅವರ ಮನೆಗೆ ಅಜೀಂ ಪ್ರೇಮ್‌ಜಿ ಭೇಟಿ ನೀಡಿದ ಸಂದರ್ಭ ಡಿಕೆಶಿ ತಮ್ಮ ನಿವಾಸದಿಂದ ಹೊರಬಂದು ಪ್ರೇಮ್‌ಜಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಇದನ್ನೂ ಓದಿ: ಜಮೀರ್ ಅಹಮ್ಮದ್ ಮುಂದೆ ಕಣ್ಣೀರು ಹಾಕಿದ ಗುಡಿಸಲು ವಾಸಿಗಳು

    ಪ್ರೇಮ್‌ಜಿ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ವಿಪ್ರೋ ಸಂಸ್ಥೆ ದೇಶಕ್ಕೆ ಆಸ್ತಿ. ಈ ಸಂಸ್ಥೆ ಹಲವಾರು ಉದ್ಯೋಗ ಸೃಷ್ಟಿ ಮಾಡಿದೆ. ಈ ಮೂಲಕ ಸರ್ಕಾರದ ಹೊರೆ ಕಡಿಮೆ ಮಾಡಲು ಮುಂದಾಗಿದ್ದಾರೆ. ನಮ್ಮಿಂದ ಎಲ್ಲಾ ಸಹಕಾರ ಕೊಡಲಾಗುತ್ತಿದೆ. ನಾನು ಅವರಿಗೆ ಸಂಪೂರ್ಣ ಸಹಕಾರ ಕೊಡುತ್ತಿದ್ದೇನೆ. ಗ್ರಾಮೀಣ ಶಿಕ್ಷಣದ ವಿಚಾರವಾಗಿ ಅವರು ಹಾಕಿಕೊಂಡಿರುವ ಯೋಜನೆಗಳಿಗೆ ನಮ್ಮ ಸಹಕಾರ ಇದೆ. ನಾವೆಲ್ಲಾ ಸೇರಿ ಒಟ್ಟಿಗೆ ಕೆಲಸ ಮಾಡಲಿದ್ದೇವೆ ಎಂದರು. ಇದನ್ನೂ ಓದಿ: 4 ಸ್ಥಾನ ಬಿಟ್ಟುಕೊಡಲು ಅಮಿತ್ ಶಾ ಒಪ್ಪಿಗೆ- ಮೈತ್ರಿ ಖಚಿತತೆ ಬಗ್ಗೆ BSY ಸುಳಿವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಕ್ಟೋಬರ್ 8ಕ್ಕೆ ಪ್ರತಿಷ್ಠಿತ ಬೆಂಗಳೂರು ಮ್ಯಾರಥಾನ್

    ಅಕ್ಟೋಬರ್ 8ಕ್ಕೆ ಪ್ರತಿಷ್ಠಿತ ಬೆಂಗಳೂರು ಮ್ಯಾರಥಾನ್

    ಬೆಂಗಳೂರು: ಪ್ರತಿಷ್ಠಿತ ಬೆಂಗಳೂರು ಮ್ಯಾರಥಾನ್ (Bengaluru Marathon) 10ನೇ ಅವೃತ್ತಿ ಇದೇ ಅಕ್ಟೋಬರ್ 8 ರಂದು ನಡೆಯಲಿದೆ. ಅಂತಾರಾಷ್ಟ್ರೀಯ ಮ್ಯಾರಥಾನ್ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಮ್ಯಾರಥಾನ್ ನ ಮುಂದಿನ ಮೂರು ಆವೃತ್ತಿಗೆ ಹೆಸರಾಂತ ಸಂಸ್ಥೆ ವಿಪ್ರೋ (Wipro) ಲಿಮಿಟೆಡ್‌ ಶೀರ್ಷೀಕೆ ಪ್ರಾಯೋಜಕತ್ವ ಪಡೆದುಕೊಂಡಿದೆ. ಖಾಸಗಿ ಹೊಟೇಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ 10ನೇ ಆವೃತ್ತಿಯ ಹೊಸ ಲೋಗೋ ಕೂಡ ಬಿಡುಗಡೆ ಮಾಡಲಾಯಿತು.

    ಇದೇ ಅಕ್ಟೋಬರ್ 8 ರಿಂದ ನಡೆಯಲಿರುವ ಮ್ಯಾರಥಾನ್ (Marathon) ನಲ್ಲಿ 20 ಸಾವಿರಕ್ಕೂ ಹೆಚ್ಚು ಓಟಗಾರರು ಭಾಗಿಯಾಗಲಿದ್ದಾರೆ. ಕಳೆದ 10 ವರ್ಷಗಳಿಂದ ನಡೆಯುತ್ತಿರುವ ವಾರ್ಷಿಕ ಸಿಟಿ ರನ್ ಮೂರು ವಿಭಾಗಗಳಲ್ಲಿ ನಡೆಯಲಿದೆ. 42 ಕಿಮೀ ಪೂರ್ಣ ಮ್ಯಾರಥಾನ್, 21 ಕಿಮೀ ಹಾಫ್ ಮ್ಯಾರಥಾನ್, 5 ಕಿಮೀ ಹೋಪ್ ರನ್ ಇರಲಿದೆ.

    ಇನ್ನೂ ಕಾರ್ಯಕ್ರಮದಲ್ಲಿ ವಿಪ್ರೋ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಜತಿನ್ ದಲಾಳ್ ಮಾತನಾಡಿ, ಬೆಂಗಳೂರು ಮ್ಯಾರಥಾನ್ ಶೀರ್ಷಿಕೆ ಪ್ರಯೋಜಕರಾಗಿರೋದು ಸಂತಸ ತಂದಿದೆ. ಕಳೆದ 17 ವರ್ಷಗಳಿಂದ ಸ್ಪೀರಿಟ್ ಆಫ್ ವಿಪ್ರೋ ಹೆಸರಿನಲ್ಲಿ ನಮ್ಮ ಉದ್ಯೋಗಿಗಳಿಗೆ ಓಟವನ್ನ ಆಯೋಜಿಸುತ್ತಿದ್ದೇವೆ. ಸಮುದಾಯದಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಠಿಸುವ ನಿಟ್ಟಿನಲ್ಲಿ ಇದು ಮತ್ತೊಂದು ಮಹತ್ವದ ಹೆಜ್ಜೆ. ಆರೋಗ್ಯಕರ ಜೀವನ ಶೈಲಿ ರೂಪಿಸಿಕೊಳ್ಳುವಂತೆ ಜನರನ್ನ ಪ್ರೋತ್ಸಾಹಿಸಲು ಹಾಗೂ ಬೆಂಬಲಿಸಲು ಇದು ಉತ್ತಮ ಅವಕಾಶ ಎಂದು ಸಲಹೆ ನೀಡಿದರು.

    ಇನ್ನೂ ಕಾರ್ಯಕ್ರಮದಲ್ಲಿ ರೇಸ್ ನಿರ್ದೇಶಕ ನಾಗರಾಜ್ ಅಡಿಗ, ಅರ್ಜುನ ಪ್ರಶಸ್ತಿ ವಿಜೇತೆ ರೀತ್ ಅಬ್ರಾಹಂ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

  • ಕೊರೊನಾ ವಿರುದ್ಧದ ಹೋರಾಟಕ್ಕೆ ವಿಪ್ರೋದಿಂದ 1,125 ಕೋಟಿ ನೆರವು

    ಕೊರೊನಾ ವಿರುದ್ಧದ ಹೋರಾಟಕ್ಕೆ ವಿಪ್ರೋದಿಂದ 1,125 ಕೋಟಿ ನೆರವು

    ಬೆಂಗಳೂರು: ವಿಶ್ವವ್ಯಾಪಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಅನ್ನು ತಡೆಗಟ್ಟಲು ಹಲವು ದೇಶಗಳು ಒದ್ದಾಡುತ್ತಿವೆ. ಈ ಮಹಾಮಾರಿ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ವಿಪ್ರೋ ಲಿಮಿಟೆಡ್, ವಿಪ್ರೋ ಎಂಟರ್ಪ್ರೈಸಸ್ ಲಿಮಿಟೆಡ್ ಮತ್ತು ಅಜೀಮ್ ಪ್ರೇಮ್‍ಜಿ ಫೌಂಡೇಶನ್ ಕೈಜೋಡಿಸಿದ್ದು, ಬರೋಬ್ಬರಿ 1,125 ಕೋಟಿ ರೂ. ನೆರವನ್ನು ನೀಡಲು ಮುಂದಾಗಿದೆ.

    ಸಂಸ್ಥೆ ಈಗ ನೀಡುತ್ತಿರುವ ನೆರವು ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಡಲು ಉಪಯೋಗವಾಗಲಿದೆ. ವೈದ್ಯಕೀಯ ಸೌಲಭ್ಯ, ಸೋಂಕಿತರ ಚಿಕಿತ್ಸೆಗೆ ಸಹಾಯವಾಗಲಿದೆ ಎಂದು ವಿಪ್ರೋ ಪ್ರಕಟನೆಯಲ್ಲಿ ತಿಳಿಸಿದೆ.

    ಅಜೀಮ್ ಪ್ರೇಮ್‍ಜಿ ಫೌಂಡೇಶನ್ ವತಿಯಿಂದ 1,000 ಕೋಟಿ, ವಿಪ್ರೋ ಸಂಸ್ಥೆಯಿಂದ 100 ಕೋಟಿ ಹಾಗೂ ವಿಪ್ರೋ ಎಂಟರ್ಪ್ರೈಸಸ್ ಲಿಮಿಟೆಡ್ ವತಿಯಿಂತ 25 ಕೋಟಿ ರೂ. ಸೇರಿಸಿ ಒಟ್ಟು 1,125 ಕೋಟಿ ರೂ. ಕೊರೊನಾ ವಿರುದ್ಧ ಸಮರಕ್ಕೆ ನೀಡಲಾಗುತ್ತಿದೆ. ಈ ಮೊತ್ತವು ಅಜೀಮ್ ಪ್ರೇಮ್‍ಜಿ ಫೌಂಡೇಶನ್‍ನ ಸಾಮಾನ್ಯ ಜನೋಪಕಾರಿ ಸಮಾಜಮುಖಿ ಖರ್ಚುಗಳಲ್ಲಿ ಸೇರಿದ್ದು, ವಿಪ್ರೋದ ವಾರ್ಷಿಕ ಸಿಎಸ್‍ಆರ್ ಚಟುವಟಿಕೆಗಿಂತ ಹೆಚ್ಚುವರಿಯಾಗಿದೆ.

    ಅಜೀಮ್ ಪ್ರೇಮ್‍ಜಿ ಫೌಂಡೇಶನ್ 1,600 ಮಂದಿ ತಂಡವು ದೇಶಾದ್ಯಂತ 350ಕ್ಕೂ ಹೆಚ್ಚು ಪ್ರಬಲ ನಾಗರಿಕ ಸಮಾಜದ ಪಾಲುದಾರರ ಸಹಯೋಗದೊಂದಿಗೆ ಕಾರ್ಯಾಚರಣೆ ನಡೆಸುತ್ತದೆ ಎಂದು ವಿಪ್ರೋ ತಿಳಿಸಿದೆ.

  • ವಿಪ್ರೋಗೆ ನಿವೃತ್ತಿ ಹೇಳಲಿದ್ದಾರೆ ಅಜೀಂ ಪ್ರೇಮ್‍ಜಿ

    ವಿಪ್ರೋಗೆ ನಿವೃತ್ತಿ ಹೇಳಲಿದ್ದಾರೆ ಅಜೀಂ ಪ್ರೇಮ್‍ಜಿ

    ನವದೆಹಲಿ: ದೇಶದ ದೊಡ್ಡ ಐಟಿ ಕಂಪನಿಯ ಮಾಲೀಕ, ಶ್ರೀಮಂತ ಉದ್ಯಮಿ, ಅಜೀಂ ಪ್ರೇಮ್‍ಜಿ ವಿಪ್ರೋ ಕಂಪನಿಯಿಂದ ನಿವೃತ್ತರಾಗಲಿದ್ದಾರೆ.

    ಜುಲೈ 31 ರಂದು ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನದಿಂದ ಅಜೀಂ ಪ್ರೇಮ್‍ಜಿ ಹೊರ ಬಂದರೂ ಮುಂದಿನ 5 ವರ್ಷದ ಅವಧಿಗೆ ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಮುಂದುವರಿಯಲಿದ್ದಾರೆ.

    ಅಜೀಂ ಪ್ರೇಮ್ ಜಿ ಪುತ್ರ ಮುಖ್ಯ ಕಾರ್ಯತಂತ್ರ ಅಧಿಕಾರಿ ಮತ್ತು ಮಂಡಳಿಯ ಸದಸ್ಯರಾದ ರಷೀದ್ ಪ್ರೇಮ್ ಜಿ ತಂದೆ ನಂತರ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

    ಹಾಲಿ ಸಿಇಒ ಅಬಿದಾಲಿ ನೀಮುಚ್‍ವಾಲಾ ಅವರನ್ನು ಎಂಡಿಯಾಗಿಯೂ ವಿಪ್ರೋ ಆಡಳಿತ ಮಂಡಳಿ ನೇಮಿಸಿದೆ. ಅಜೀಂ ಪ್ರೇಮ್‍ಜಿ ಅವರು 1960ರಲ್ಲಿ ಬೆಂಗಳೂರಿನಲ್ಲಿ ವಿಪ್ರೋ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.

    ದೀರ್ಘವಾದ ಮತ್ತು ಸಂತೃಪ್ತ ಪಯಾಣ ನನ್ನದಾಗಿತ್ತು. ಮುಂದೆ ಸಾಮಾಜ ಸೇವೆ ಹೆಚ್ಚಿನ ಗಮನ ಹರಿಸುತ್ತೇನೆ. ರಿಷದ್ ಅವರ ನಾಯಕತ್ವದಲ್ಲಿ ವಿಪ್ರೋ ಕಂಪನಿ ಮತ್ತಷ್ಟು ಬೆಳವಣಿಗೆಯಾಗುತ್ತದೆ ಎನ್ನುವ ನಂಬಿಕೆ ಇದೆ ಎಂದು ಅಜೀಂ ಪ್ರೇಮ್‍ಜೀ ತಿಳಿಸಿದ್ದಾರೆ.

  • ಪತಿಯಿಂದಲೇ ವಿಪ್ರೋ ಮಾಜಿ ಉದ್ಯೋಗಿಯ ಬರ್ಬರ ಹತ್ಯೆ

    ಪತಿಯಿಂದಲೇ ವಿಪ್ರೋ ಮಾಜಿ ಉದ್ಯೋಗಿಯ ಬರ್ಬರ ಹತ್ಯೆ

    ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವಿಪ್ರೋ ಮಾಜಿ ಉದ್ಯೋಗಿಯನ್ನು ಪತಿಯೇ ಕೊಲೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಅಕ್ಷತಾ(30) ಕೊಲೆಯಾದ ಮಹಿಳೆ. ಪ್ರಕರಣದ ಸಂಬಂಧ ಪತಿ ಚಂದ್ರಕಾಂತ್ ಮತ್ತು ಕೃತ್ಯಕ್ಕೆ ಸಹಕರಿಸಿದ ಆರೋಪದ ಅಡಿ ರಾಜ್ ವೀರ್ ಸಿಂಗ್ ನನ್ನು ಸಂಪಂಗಿರಾಮ ನಗರ ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಶಾಂತಿನಗರದಲ್ಲಿ ಸಿಲ್ವರ್ ಸ್ಪೂನ್ ಹೋಟೆಲ್ ನಡೆಸುತ್ತಿದ್ದ ಚಂದ್ರಕಾಂತ್ ಮತ್ತು ಅಕ್ಷತಾಗೆ 10 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಹೆಬ್ಬಾಳ ಸಮೀಪದ ಅಪಾರ್ಟ್ ಮೆಂಟ್ ನಲ್ಲಿ ದಂಪತಿ ವಾಸವಿದ್ದು, ಇವರಿಗೆ ನಾಲ್ಕು ವರ್ಷದ ಗಂಡು ಮಗು ಇದೆ.

    ದಂಪತಿ ಮಧ್ಯೆ ಆಗಾಗ ಜಗಳವಾಗುತಿತ್ತು. ಜ.6 ರಂದು ಮನೆಯಲ್ಲಿ ಇಬ್ಬರ ಮಧ್ಯೆ ಜಗಳವಾಗಿದೆ. ಈ ವೇಳೆ ಪತಿ ಚಂದ್ರಕಾಂತ್ ಅಕ್ಷತಾ ಮೇಲೆ ಹಲ್ಲೆ ನಡೆಸಿ ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ತನ್ನ ಸ್ನೇಹಿತ ರಾಜ್ ವೀರ್ ಸಿಂಗ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದ. ರಾಜ್ ವೀರ್ ಸಿಂಗ್ ತಕ್ಷಣವೇ ತನ್ನ ಐ10 ಕಾರಿನಲ್ಲಿ ಅಪಾರ್ಟ್ ಮೆಂಟ್ ಬಳಿ ಬಂದಿದ್ದಾನೆ. ರಾತ್ರಿ ಯಾರಿಗೂ ತಿಳಿಯದಂತೆ ಅಕ್ಷತಾ ಮೊಬೈಲ್ ಜೊತೆ ಮೃತದೇಹವನ್ನು ಕಾರಿನಲ್ಲಿ ತುಂಬಿ ರಾಜ್‍ವೀರ್ ತಮಿಳುನಾಡಿಗೆ ಪ್ರಯಾಣಿಸಿದ್ದಾನೆ. ಶೂಲಗಿರಿ ಠಾಣಾ ವ್ಯಾಪ್ತಿಯ ಕಾಮನದೊಡ್ಡಿ ಅರಣ್ಯದಲ್ಲಿ ಶವ ಎಸೆದು, ಅದರ ಮೇಲೆ ಡೀಸೆಲ್ ಸುರಿದು ರಾಜ್‍ವೀರ್ ಬೆಂಕಿ ಹಚ್ಚಿದ್ದಾನೆ.

    ಪೋಷಕರಿಂದ ನಾಪತ್ತೆ ದೂರು:
    ಮಗಳ ನಂಬರ್ ರೀಚ್ ಆಗದ ಹಿನ್ನೆಲೆಯಲ್ಲಿ ಅಕ್ಷತಾ ಪೋಷಕರು ಸಂಪಂಗಿರಾಮ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸುತ್ತಾರೆ. ಪೊಲೀಸರು ಅಕ್ಷತಾ ಮೊಬೈಲ್ ನಂಬರ್ ಪರಿಶೀಲಿಸಿದಾಗ ಬೇರೆ ಬೇರೆ ರಾಜ್ಯದ ಟವರ್ ಗಳು ಪತ್ತೆಯಾಗಿದೆ. ಕರೆ ಮಾಡಿದರೆ ರಿಸೀವ್ ಮಾಡುತ್ತಿರಲಿಲ್ಲ. ಹೀಗಾಗಿ ಪೊಲೀಸರು ಹೊರರಾಜ್ಯಕ್ಕೆ ಹೋಗಿರಬಹುದು ಎಂದು ತಿಳಿದುಕೊಂಡಿದ್ದರು.

    ಪತಿ ಮತ್ತು ಪತ್ನಿಯ ನಡುವೆ ಆಗಾಗ ಜಗಳವಾಗುತ್ತಿದ್ದ ವಿಚಾರವನ್ನು ಅಕ್ಷತಾ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ. ಹೀಗಾಗಿ ಶಂಕೆಯ ಆಧಾರದಲ್ಲಿ ಪೊಲೀಸರು ಚಂದ್ರಕಾಂತ್ ನನ್ನು ಮತ್ತಷ್ಟು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಆತ ನೀಡಿದ ಮಾಹಿತಿ ಆಧರಿಸಿ ಶೂಲಗಿರಿ ಪೊಲೀಸರನ್ನು ಸಂಪರ್ಕಿಸಿದಾಗ ಅಲ್ಲಿ ಪತ್ತೆಯಾದ ಮೃತದೇಹ ಅಕ್ಷತಾಳದ್ದೇ ಎನ್ನುವುದು ಗೊತ್ತಾಗಿದೆ.

    ಕೊಲೆ ಮಾಡಿದ್ದು ಯಾಕೆ?
    ಪತ್ನಿಗೆ ಬೇರೊಬ್ಬ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಇತ್ತು. ಈ ವಿಚಾರ ಕುಟುಂಬದವರಿಗೆ ತಿಳಿದಿತ್ತು. ಅಷ್ಟೇ ಅಲ್ಲದೇ ಆಕೆ ವಿಪರೀತವಾಗಿ ಮದ್ಯವನ್ನು ಕುಡಿಯುತ್ತಿದ್ದಳು. ಹೀಗಾಗಿ ನಾನು ಆಕೆಯನ್ನು ಕೊಲೆ ಮಾಡಿದ್ದೇನೆ ಎಂದು ತನಿಖೆ ವೇಳೆ ಚಂದ್ರಕಾಂತ್ ತಪ್ಪೊಪ್ಪಿಕೊಂಡಿದ್ದಾನೆ.

  • ಬಿಟ್‍ಕಾಯಿನ್ ಮೂಲಕ 500 ಕೋಟಿ ಕೊಡಿ, ಇಲ್ಲವಾದ್ರೆ ರಿಸಿನ್ ವಿಷ ಹಾಕಿ ಕೊಲ್ತೀವಿ – ವಿಪ್ರೋ ಸಂಸ್ಥೆಗೆ ಬೆದರಿಕೆ

    ಬಿಟ್‍ಕಾಯಿನ್ ಮೂಲಕ 500 ಕೋಟಿ ಕೊಡಿ, ಇಲ್ಲವಾದ್ರೆ ರಿಸಿನ್ ವಿಷ ಹಾಕಿ ಕೊಲ್ತೀವಿ – ವಿಪ್ರೋ ಸಂಸ್ಥೆಗೆ ಬೆದರಿಕೆ

    ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಐಟಿ ಸಂಸ್ಥೆ ವಿಪ್ರೋಗೆ ಶುಕ್ರವಾರದಂದು ಅನಾಮಧೇಯ ಇ-ಮೇಲ್ ಮೂಲಕ ಬೆದರಿಕೆ ಬಂದಿದೆ.

    500 ಕೋಟಿ ರೂ. ಹಣವನ್ನು ಡಿಜಿಟಲ್ ಕರೆನ್ಸಿ- ಬಿಟ್‍ಕಾಯಿನ್ ಮೂಲಕ ನೀಡುವಂತೆ ಸರ್ಜಾಪುರದ ವಿಪ್ರೋ  ಸಂಸ್ಥೆಗೆ ಈ ಮೇಲ್ ಮೂಲಕ ಬೆದರಿಕೆ ಬಂದಿದೆ. 20 ದಿನಗಳ ಒಳಗೆ ಹಣವನ್ನು ನೀಡದಿದ್ರೆ ಬೆಂಗಳೂರಿನ ಎಲ್ಲಾ ವಿಪ್ರೋ ಸಂಸ್ಥೆಗಳ ಮೇಲೆ ಅಟ್ಯಾಕ್ ಮಾಡುವುದಾಗಿ ಹೇಳಿದ್ದು, ಮೇ 25ರ ಗಡವು ನೀಡಲಾಗಿದ್ದು, ramesh2@protomail.com ಎಂಬ ಮೇಲ್ ಐಡಿಯಿಂದ ಈ ಬೆದರಿಕೆ ಬಂದಿದೆ. ಈ ಸಂಬಂಧ ಸೈಬರ್ ಕ್ರೈಮ್ ಮತ್ತು ಸಿಸಿಬಿ ಯಲ್ಲಿ ಸೈಬರ್ ಭಯೋತ್ಪಾದನೆಯ ದೂರು ದಾಖಲಾಗಿದೆ.

    ಇ-ಮೇಲ್‍ನಲ್ಲೇನಿದೆ?: ಮೇ 25ರೊಳಗೆ ಕೇಳಿದಷ್ಟು ಹಣ ಕೊಡಲಿಲ್ಲವಾದ್ರೆ ಬೆಂಗಳೂರಿನ ವಿಪ್ರೋ ಕಂಪನಿಗಳ ಮೇಲೆ ರಿಸಿನ್ ಎಂಬ ವಿಷದಿಂದ ದಾಳಿ ಮಾಡುವುದಾಗಿ ಇ-ಮೇಲ್ ನಲ್ಲಿ ಹೇಳಲಾಗಿದೆ. ಸಂಸ್ಥೆಯ ಕೆಫೆಟೀರಿಯಾದಲ್ಲಿ ನೀಡಲಾಗುವ ಊಟದಲ್ಲಿ ರಿಸಿನ್ ವಿಷವನ್ನ ಬೆರೆಸಿ, ಡ್ರೋನ್ ಮೂಲಕ ಸಿಂಪಡಿಸಿ ಅಥವಾ ಟಾಯ್ಲೆಟ್ ಸೀಟ್ ಮೇಲೆ, ಟಾಯ್ಲೆಟ್ ಪೇಪರ್ ಮೇಲೆ ರಿಸಿನ್ ಹಾಕುವುದಾಗಿ ಬೆದರಿಕೆ ಹಾಕಲಾಗಿದೆ.

    ರಿಸಿನ್ ಸ್ಯಾಂಪಲ್ ಕಳಿಸ್ತೀನಿ: ನಾನು ಈಗಾಗಲೇ 1 ಕೆಜಿಯಷ್ಟು ಒಳ್ಳೆ ಗುಣಮಟ್ಟದ ರಿಸಿನ್ ಸಂಗ್ರಹಿಸಿದ್ದೀನಿ. ಈ ವಿಷಯದಲ್ಲಿ ತಮಾಷೆ ಮಾಡ್ತಿಲ್ಲ ಎಂಬುದನ್ನ ಸಾಬೀತುಪಡಿಸೋದಕ್ಕೆ ಬೇಕಾದ್ರೆ ಯಾವುದಾದ್ರೂ ವಿಪ್ರೋ ಕಚೇರಿಗೆ ಇನ್ನು ಕೆಲವು ದಿನಗಳಲ್ಲೇ 2 ಗ್ರಾಂನಷ್ಟು ರಿಸಿನ್ ಕಳಿಸ್ತೀನಿ. ಈ ಸ್ಯಾಂಪಲ್ ಡೋಸ್ ಪಡೆದಾಗ ಎಚ್ಚರವಾಗಿರಿ ಎಂದು ಇಮೇಲ್ ಕಳಿಸಿರುವ ವ್ಯಕ್ತಿ ಬೆದರಿಕೆ ಹಾಕಿದ್ದಾನೆ. ಬಿಟ್‍ಕಾಯಿನ್ ಮೂಲಕ ಸಂಸ್ಥೆ ಹಣ ಸಂದಾಯ ಮಾಡಲು ಲಿಂಕ್‍ಗಳನ್ನ ಕೂಡ ನೀಡಲಾಗಿದೆ. ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ಸೇರಿದಂತೆ ಹಲವರಿಗೆ ಈ ಇಮೇಲ್ ಬಂದಿದೆ.

    ನಾಯಿಗಳ ಮೇಲೆ ಟೆಸ್ಟ್: ಅಲ್ಲದೆ ಕೋಲ್ಕತ್ತಾದ ಬಾರಾನಗರ್‍ನಲ್ಲಿ 22 ನಾಯಿಗಳು ನಿಗೂಢವಾಗಿ ಸಾವನ್ನಪ್ಪಿದ ಬಗ್ಗೆ ಆಂಗ್ಲ ಪತ್ರಿಕೆಯೊಂದರ ವರದಿಯ ಲಿಂಕ್ ಕೂಡ ಇ-ಮೇಲ್‍ನಲ್ಲಿ ಇದೆ. ಈ ಘಟನೆ ಜನವರಿ 21ರಂದು ಬಾರಾನಗರ್‍ನಲ್ಲಿ ನಡೆದಿದ್ದು, ಕಟ್ಟದ ನಿರ್ಮಾಣ ಸ್ಥಳದ ಬಳಿ ರಸ್ತೆಯಲ್ಲಿ 22 ನಾಯಿಗಳ ಮೃತದೇಹ ಪತ್ತೆಯಾಗಿದ್ದವು. ಇ-ಮೇಲ್ ಕಳಿಸಿರುವ ವ್ಯಕ್ತಿ ತಾನು ಒಳ್ಳೇ ಗುಣಮಟ್ಟದ ವಿಷದ ಬೀಟಾ ಸ್ಟ್ರೇನ್ ಹೊಂದಿದ್ದು ಈ ನಾಯಿಗಳ ಮೇಲೆ ಅದನ್ನು ಪರೀಕ್ಷೆ ಮಾಡಿದ್ದೆ ಎಂದು ಹೇಳಿಕೊಂಡಿದ್ದಾನೆ.

    ಇದನ್ನೂ ಓದಿ: ವಿಶ್ವದ ಡೆಡ್ಲಿ ವೆಪನ್: 10 ಮಿಲಿ ಗ್ರಾಂ ವಿಎಕ್ಸ್ ರಾಸಾಯನಿಕ ದೇಹಕ್ಕೆ ಸೇರಿದ್ರೆ ಸಾವು ನಿಶ್ಚಿತ!

    ಈ ಬಗ್ಗೆ ಸರ್ಜಾಪುರ ರಸ್ತೆಯ ವಿಪ್ರೋ ಸಂಸ್ಥೆ ಐಟಿ ಕಾಯ್ದೆಯ ಸೆಕ್ಷನ್ 66ಎಫ್ ಅಡಿ ಸಿಸಿಬಿಯಲ್ಲಿ ದೂರು ದಾಖಲಿಸಿದೆ. ಪ್ರಕರಣ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ರವಿ, ಶುಕ್ರವಾರ ವಿಪ್ರೋ ಕಂಪನಿಯವರು ದೂರು ಕೊಟ್ಟಿದ್ದಾರೆ. ನಾವು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

    ಏನಿದು ರಿಸಿನ್: ರಿಸಿನ್ ಒಂದು ಭಯಂಕರ ವಿಷ. ಹರಳೆಣ್ಣೆ ಮಾಡುವ ಬೀಜದಲ್ಲಿ ಇದು ಸಿಗುತ್ತದೆ. ಇದರ ವಾಸನೆ ತೆಗೆದುಕೊಂಡರೆ ಅಥವಾ ಇದನ್ನ ಸೇವಿಸಿದ್ರೆ ಅಥವಾ ಇನ್ಜೆಕ್ಟ್ ಮಾಡಿದ್ರೆ ಸಾವನ್ನಪ್ಪುತ್ತಾರೆ. ಕೆಜಿಬಿ(ಸೋವಿಯತ್ ಯೂನಿಯನ್‍ನ ಗುಪ್ತಚರ ಸಂಸ್ಥೆ) ಸೇರಿದಂತೆ ಅನೇಕ ಗುಪ್ತಚರ ಸಂಸ್ಥೆಗಳು ತಮ್ಮ ಶತ್ರುಗಳನ್ನ ಮುಗಿಸಲು ರಿಸಿನ್ ಬಳಕೆ ಮಾಡಿವೆ. ಬರಾಕ್ ಒಬಾಮಾ ಸೇರಿದಂತೆ ಅನೇಕ ಅಮೆರಿಕ ರಾಜಕಾರಣಿಗಳಿಗೆ ರಿಸಿನ್ ಪ್ಯಾಕೇಜ್‍ಗಳನ್ನ ಕಳಿಸಲಾಗಿತ್ತು. ಇದರಿಂದ 2013ರಲ್ಲಿ ಎಫ್‍ಬಿಐ ಈ ಬಗ್ಗೆ ತನಿಖೆ ಆರಂಭಿಸಿತ್ತು.