Tag: ವಿಪಕ್ಷ ನಾಯಕ

  • ಲೋಕಸಭೆಯ ವಿಪಕ್ಷ ನಾಯಕನಾಗಿ ರಾಹುಲ್‌ ಗಾಂಧಿ ನೇಮಕಕ್ಕೆ CWC ನಿರ್ಣಯ ಅಂಗೀಕಾರ

    ಲೋಕಸಭೆಯ ವಿಪಕ್ಷ ನಾಯಕನಾಗಿ ರಾಹುಲ್‌ ಗಾಂಧಿ ನೇಮಕಕ್ಕೆ CWC ನಿರ್ಣಯ ಅಂಗೀಕಾರ

    ನವದೆಹಲಿ: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ವಹಿಸಿಕೊಳ್ಳುವಂತೆ ರಾಹುಲ್ ಗಾಂಧಿ (Rahul Gandhi) ಅವರಿಗೆ ಮನವಿ ಮಾಡುವ ನಿರ್ಣಯವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಅಂಗೀಕರಿಸಿದೆ ಎಂದು ಪಕ್ಷದ ಹಿರಿಯ ನಾಯಕ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.

    ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ವಹಿಸಿಕೊಳ್ಳಬೇಕು ಎಂದು ರಾಹುಲ್ ಗಾಂಧಿಗೆ CWC ಸದಸ್ಯರು ಸರ್ವಾನುಮತದಿಂದ ವಿನಂತಿಸಿದ್ದಾರೆ. ಸಂಸತ್ತಿನ ಒಳಗೆ ವಿಪಕ್ಷ ನಾಯಕ ಸ್ಥಾನಕ್ಕೆ ರಾಹುಲ್‌ ಅವರು ಅತ್ಯುತ್ತಮ ವ್ಯಕ್ತಿ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಪ್ರಮಾಣವಚನಕ್ಕೆ ವಿದೇಶಿ ಗಣ್ಯರು, ಪೌರಕಾರ್ಮಿಕರು- ಕಾರ್ಯಕ್ರಮಕ್ಕೆ ಯಾರಿಗೆಲ್ಲ ಆಹ್ವಾನ?

    ವಿಪಕ್ಷ ನಾಯಕ ಸ್ಥಾನ ವಹಿಸಿಕೊಳ್ಳಲು ರಾಹುಲ್‌ ಗಾಂಧಿ ಒಪ್ಪಿದ್ದಾರೆಯೇ ಎಂಬ ಪ್ರಶ್ನೆಗೆ, ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಮಾಹಿತಿ ನೀಡಿದ್ದಾರೆ.

    ನಮ್ಮ ನಾಯಕರು ಮತ್ತು ಕಾರ್ಯಕರ್ತರು ಹುಮ್ಮಸ್ಸಿನಿಂದ ಕಾಂಗ್ರೆಸ್ ಪುನಶ್ಚೇತನ ಕೆಲಸ ಆರಂಭಿಸಿದ್ದಾರೆ. ಸಿಡಬ್ಲ್ಯುಸಿಯಲ್ಲಿನ ವಾತಾವರಣವು ನಾಲ್ಕು ತಿಂಗಳ ಹಿಂದೆ ಇದ್ದದ್ದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾವು ಶಿಸ್ತುಬದ್ಧವಾಗಿ, ಒಗ್ಗಟ್ಟಿನಿಂದ ಇರಬೇಕು- CWC ಸಭೆಯಲ್ಲಿ ಖರ್ಗೆ ಮಾತು

    ರಾಹುಲ್ ಗಾಂಧಿಯೇ ವಿಪಕ್ಷ ನಾಯಕ ಆಗಬೇಕು ಎಂಬ ಆಗ್ರಹ ಕೇಳಿಬಂದಿದೆ. ರಾಹುಲ್‌ ಗಾಂಧಿ ಕಾರಣದಿಂದಲೇ ಹೆಚ್ಚು ಸ್ಥಾನ ಬಂದಿದೆ. ಭಾರತ್‌ ಜೋಡೋ ಯಾತ್ರೆ ನಡೆದಲ್ಲೆಲ್ಲ ನಾವು ಹೆಚ್ಚು ಸ್ಥಾನ ಗೆದ್ದಿದ್ದೇವೆ. ಮಣಿಪುರದಲ್ಲೂ ಎರಡು ಸ್ಥಾನ ಗೆಲ್ಲಲು ರಾಹುಲ್‌ ಕಾರಣ. ಹೀಗಾಗಿ ರಾಹುಲ್‌ ಗಾಂಧಿಯೇ ವಿರೋಧ ಪಕ್ಷದ ನಾಯಕ ಆಗಬೇಕು ಎಂದು ಸಭೆಯಲ್ಲಿ ಕಾಂಗ್ರೆಸ್‌ ಹಿರಿಯ ನಾಯಕರು, ಸಿಡಬ್ಲ್ಯೂಸಿ ಸದಸ್ಯರು ಒತ್ತಾಯಿಸಿದ್ದಾರೆ.

  • ವಿಪಕ್ಷ ನಾಯಕನ ಆಯ್ಕೆಯ ಹಿಂದಿನ ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವೇನು..?

    ವಿಪಕ್ಷ ನಾಯಕನ ಆಯ್ಕೆಯ ಹಿಂದಿನ ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವೇನು..?

    ಬೆಂಗಳೂರು: ರಾಜ್ಯ ಬಿಜೆಪಿ ಮೇಲೆ ಬಿಎಸ್‍ವೈ ಸ್ಪಷ್ಟ ಹಿಡಿತ ಸಾಧಿಸಿದೆ. ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ವಿಜಯೇಂದ್ರರನ್ನು (BY Vijayendra) ಪಟ್ಟು ಹಿಡಿದು ಕೂರಿಸಿದ್ದ ಮಾಜಿ ಸಿಎಂ ಯಡಿಯೂರಪ್ಪ (bS Yediyurappa) ಇದೀಗ ವಿಪಕ್ಷ ನಾಯಕ್ ಆಯ್ಕೆಯಲ್ಲೂ ಮೇಲುಗೈ ಸಾಧಿಸಿದ್ದಾರೆ. ಮಾಜಿ ಡಿಸಿಎಂ ಆರ್ ಅಶೋಕ್‍ರನ್ನು ವಿಪಕ್ಷ ನಾಯಕರನ್ನಾಗಿಸುವಲ್ಲಿ ಯಡಿಯೂರಪ್ಪ ಸಫಲರಾಗಿದ್ದಾರೆ.

    ಚುನಾವಣೆ ನಡೆದ ಆರು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೀತು. ಈ ಸಭೆಯಲ್ಲಿ ವಿಪಕ್ಷ ನಾಯಕನ ಹುದ್ದೆಗೆ ಅಶೋಕ್ ಹೆಸರನ್ನು ಮಾಜಿ ಸಿಎಂ ಬೊಮ್ಮಾಯಿ ಸೂಚಿಸಿದ್ರೆ, ಸುನೀಲ್ ಕುಮಾರ್ (Sunil Kumar) ಅನುಮೋದಿಸಿದ್ರು. ಈ ಕ್ಷಣಕ್ಕೆ ಹೈಕಮಾಂಡ್ ಪ್ರತಿನಿಧಿಗಳಾದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಮತ್ತು ಇತರರು ಸಾಕ್ಷಿಯಾದ್ರು. ಇದನ್ನೂ ಓದಿ: ವಿಪಕ್ಷ ನಾಯಕನ ಆಯ್ಕೆಗೆ ಕೈ ಟೀಕೆ- ನಾನು ಗಟ್ಟಿ ಕಮಲ, ತರಗೆಲೆ ಅಲ್ಲ ಅಂದ್ರು ಅಶೋಕ್

    ಈ ಸಭೆಗೆ ಅಸಮಾಧಾನಿತ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal), ರಮೇಶ್ ಜಾರಕಿಹೊಳಿ (Ramesh Jarakiholi), ಎಸ್‍ಟಿ ಸೋಮಶೇಖರ್ (ST Somashekhar), ಶಿವರಾಮ್ ಹೆಬ್ಬಾರ್ (Shivaram Hebbar) ಗೈರಾದರು. ಉಳಿದಂತೆ ಸಭೆಯಲ್ಲಿ ಪಾಲ್ಗೊಂಡಿದ್ದವರಿಂದ ಒಮ್ಮತ ವ್ಯಕ್ತವಾಯ್ತು. ಯಡಿಯೂರಪ್ಪ ಮಾರ್ಗದರ್ಶನ, ಬೊಮ್ಮಾಯಿ ಸಹಕಾರ ಪಡೆದು ಮುನ್ನಡೆಯೋದಾಗಿ ವಿಪಕ್ಷ ನಾಯಕ ಅಶೋಕ್ ಹೇಳಿದ್ರು. ತಮ್ಮ ಮೇಲೆ ನಂಬಿಕೆ ಇಟ್ಟು ಜವಾಬ್ದಾರಿ ನೀಡಿರೋದಕ್ಕೆ ಧನ್ಯವಾದ ಹೇಳಿದ್ರು. ಅಶೊಕ್ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ರು. ಇದ್ರೊಂದಿಗೆ ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿ ಲಿಂಗಾಯಿತ ಮತ್ತು ಒಕ್ಕಲಿಗ ಜಾತಿ ಸೂತ್ರದ ಮೊರೆ ಹೋಗಿದೆ.

    ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ ಏನು?: ಲೋಕಸಮರಕ್ಕೆ ಬಿಜೆಪಿ ಎಲ್+ಜಿ ಸೂತ್ರದ ಮೊರೆ ಹೋಗಿದೆ. ರಾಜ್ಯಾಧ್ಯಕ್ಷ ಸ್ಥಾನ ಲಿಂಗಾಯತರಿಗೆ ಕೊಟ್ಟು ವಿಪಕ್ಷ ನಾಯಕ ಸ್ಥಾನ ಒಕ್ಕಲಿಗ ಸಮುದಾಯಕ್ಕೆ ನೀಡಿದೆ. ಜೆಡಿಎಸ್ ಮೈತ್ರಿಯಿಂದಲೂ ವರ್ಕೌಟ್ ನಿರೀಕ್ಷೆ ಇಟ್ಟಿದೆ. ಹಾಗೆಯೇ ಒಕ್ಕಲಿಗ-ಲಿಂಗಾಯತ ಮತ ಗಳಿಸೋ ವಿಶ್ವಾಸವನ್ನು ಕೂಡ ಹೈಕಮಾಂಡ್ ಹೊಂದಿದೆ. ವಿಪಕ್ಷ ನಾಯಕ ಸ್ಥಾನ ಒಬಿಸಿಗೆ ನೀಡಿದ್ರೆ ಒಕ್ಕಲಿಗ ಮತ ಕೈತಪ್ಪೋ ಭಯ ಬಿಜೆಪಿ ಹೈಕಮಾಂಡ್‍ಗಿದೆ. ಈ ಹಿನ್ನೆಲೆಯಲ್ಲಿ ಅಳೆದು ತೂಗಿ ವಿಪಕ್ಷ ನಾಯಕನ ಆಯ್ಕೆಯನ್ನು ಹೈಕಮಾಂಡ್ ಮಾಡಿದೆ.

    ಅಶೋಕ್ ಆಯ್ಕೆಗೆ ಕಾರಣವೇನು?: ಆರ್ ಅಶೋಕ್ (R Ashok) ಅವರು ಸತತ 7 ಬಾರಿಯ ಶಾಸಕರಾಗಿರುವ ಹಾಗೆಯೇ ಡಿಸಿಎಂ, ಮಂತ್ರಿಯಾಗಿದ್ದ ಅನುಭವವಿದೆ. ಪಕ್ಷದಲ್ಲಿ ಒಕ್ಕಲಿಗ ಸಮಯದಾಯದ ಮುಂಚೂಣಿ ನಾಯಕರಾಗಿದ್ದಾರೆ. ಸಂಘ ಪರಿವಾರದ ಹಿನ್ನೆಲೆಯ ನಾಯಕ, ಪಕ್ಷ ನಿಷ್ಠರಾಗಿದ್ದಾರೆ. ಸರ್ಕಾರದ ಮಂತ್ರಿಗಳನ್ನು ಸಮರ್ಥವಾಗಿ ಎದುರಿಸುವ ಸಾಮಥ್ರ್ಯವನ್ನು ಹೊಂದಿದ್ದಾರೆ. ಪಕ್ಷದಲ್ಲಿ ಎಲ್ಲರ ಜೊತೆ ಸಮನ್ವಯತೆ, ಹೊಂದಾಣಿಕೆ ಸ್ವಭಾವವಿದ್ದು, ಯಡಿಯೂರಪ್ಪ ಬಣ, ಸಂತೋಷ್ ಬಣದವರ ಜೊತೆಗೂ ಅಶೋಕ್ ಚೆನ್ನಾಗಿದ್ದಾರೆ. ನೂತನ ರಾಜ್ಯಾಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರ ಜೊತೆಗೂ ಒಳ್ಳೆಯ ಕೆಮಿಸ್ಟ್ರಿ ಇದೆ. ಇತ್ತ ದೋಸ್ತಿ ಜೆಡಿಎಸ್ ಜೊತೆಗೂ ಉತ್ತಮ ನಂಟು ಇರುವುದರಿಂದ ಆರ್ ಅಶೋಕ್ ಅವರನ್ನು ಬಿಜೆಪಿ ಹೈಕಮಾಂಡ್ ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿದೆ.

  • ವಿಪಕ್ಷ ನಾಯಕನ ಆಯ್ಕೆಗೆ ಕೈ ಟೀಕೆ- ನಾನು ಗಟ್ಟಿ ಕಮಲ, ತರಗೆಲೆ ಅಲ್ಲ ಅಂದ್ರು ಅಶೋಕ್

    ವಿಪಕ್ಷ ನಾಯಕನ ಆಯ್ಕೆಗೆ ಕೈ ಟೀಕೆ- ನಾನು ಗಟ್ಟಿ ಕಮಲ, ತರಗೆಲೆ ಅಲ್ಲ ಅಂದ್ರು ಅಶೋಕ್

    ಬೆಂಗಳೂರು: ವಿಪಕ್ಷ ನಾಯಕನ ಆಯ್ಕೆಗೆ ಕಾಂಗ್ರೆಸ್ (Congress) ಟೀಕೆ ವ್ಯಕ್ತಪಡಿಸಿದ್ದು, ಇದಕ್ಕೆ ಆರ್ ಅಶೋಕ್ (R Ashok) ಕೂಡ ತಿರುಗೇಟು ನೀಡಿದ್ದಾರೆ.

    ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆ ಶಿವಕುಮಾರ್ (DK Shivakumar) ಮುಂದೆ ಅಶೋಕ್ ತರಗೆಲೆ ಎಂದ ಕಾಂಗ್ರೆಸ್‍ಗೆ ನಾನು ಗಟ್ಟಿ ಕಮಲ ತರಗೆಲೆ ಅಲ್ಲ ಎಂದು ಹೇಳುವ ಮೂಲಕ ನೂತನ ವಿಪಕ್ಷ ನಾಯಕ ಟಾಂಗ್ ಕೊಟ್ಟರು. ಇದನ್ನೂ ಓದಿ: ವಿಪಕ್ಷ ನಾಯಕರಾಗಿ ಆರ್. ಅಶೋಕ್ ಆಯ್ಕೆ

    ಕಾಂಗ್ರೆಸ್ ಎಕ್ಸ್ ನಲ್ಲೇನಿದೆ..?: ಕನಕಪುರದಲ್ಲಿ ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋತಿರುವ ಬಿಜೆಪಿ ಅಭ್ಯರ್ಥಿ ಈಗ ವಿರೋಧ ಪಕ್ಷದ ನಾಯಕ! (Oppositon Party Leader). ವಿರೋಧ ಪಕ್ಷದ ನಾಯಕನಾಗಲು ಬೇಕಿರುವ ಜ್ಞಾನ, ಅರ್ಹತೆ ಯಾವುದೂ ಇಲ್ಲದ ನಕಲಿ ಸಾಮ್ರಾಟನೇ ಕೊನೆಯ ಆಯ್ಕೆಯಾಗಿದ್ದು ಬಿಜೆಪಿ ನಾಯಕರ ಬರಗಾಲ ಎದುರಿಸುತ್ತಿರುವುದಕ್ಕೆ ನಿದರ್ಶನ. ಸಿದ್ದರಾಮಯ್ಯ ಹಾಗೂ, ಡಿಕೆ ಶಿವಕುಮಾರ್ ಅವರಂತಹ ನಾಯಕರೆದುರು ತರಗೆಲೆಯಂತಹ ವ್ಯಕ್ತಿಯನ್ನು ತಂದು ಕೂರಿಸಿದೆ ಬಿಜೆಪಿ!

    ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿದ್ದೇ ಬಿಜೆಪಿಯ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಅರ್ಹತೆಯೇ?. ಈ ಆಯ್ಕೆ ಕುಮಾರಸ್ವಾಮಿಯವರ ನಿರ್ದೇಶನದ ಮೇರೆಗೆ ಆಗಿದ್ದೋ, ಜೆಡಿಎಸ್ ಶಾಸಕರ ಅಭಿಪ್ರಾಯದ ಆಧಾರದಲ್ಲಿ ಆಗಿದ್ದೋ, ಬಿಜೆಪಿ ಶಾಸಕರ ಅಭಿಪ್ರಾಯದಿಂದ ಆಗಿದ್ದೋ ಎಂದು ಬಿಜೆಪಿ ಕರ್ನಾಟಕಕ್ಕೆ ಟ್ಯಾಗ್ ಮಾಡಲಾಗಿದೆ. ಇದನ್ನೂ ಓದಿ: ದ್ವೇಷ ಭಾವನೆ ಮಾಡದೇ ಪ್ರೀತಿ ವಿಶ್ವಾಸದಿಂದ ಕೆಲಸ ಮಾಡ್ತೀನಿ: ಅಶೋಕ್ ಭರವಸೆ

    ಇತ್ತ ಕಾಂಗ್ರೆಸ್ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಆರ್. ಅಶೋಕ್, ನಾನು ಸಿದ್ದರಾಮಯ್ಯ ತರಹ ಎಲ್ಲಾ ಪಾರ್ಟಿ ಓಡಾಡಿಕೊಂಡು ಬಂದಿಲ್ಲ ಉದುರು ಹೋಗೋದಕ್ಕೆ. ನಮ್ಮದು ಒಂದೇ ಪಾರ್ಟಿ, ಒಂದೇ ಸಿದ್ದಾಂತ. ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಇದ್ದಾಗ, ಜೆಡಿಎಸ್ ನಲ್ಲಿ ಒಂದು ಸಿದ್ದಾಂತ. ನಾನು ಗಟ್ಟಿ ಕಮಲ. ತರಗೆಲೆ ಅಲ್ಲ ಎಂದು ತಿರುಗೇಟು ನೀಡಿದರು.

    ಇಂದು ಸಂಜೆ ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ನಡೆದ ಸಭೆಯಲ್ಲಿ ಅಂತಿಮವಾಗಿ ಆರ್ ಅಶೋಕ್ ಅವರ ಹೆಸರನ್ನು ವಿಪಕ್ಷ ನಾಯಕನ ಸ್ಥಾನಕ್ಕೆ ಸೂಚಿಸಲಾಯಿತು. ಈ ವೇಳೆ ನಿರ್ಮಲಾ ಸೀತಾರಾಮನ್, ಅಶ್ವತ್ಥ ನಾರಾಯಣ, ಮುನಿರತ್ನ, ಗೋಪಾಲಯ್ಯ, ವಿಜಯೇಂದ್ರ, ಅಶೋಕ್, ಎಸ್ ಆರ್ ವಿಶ್ವನಾಥ್ ಮತ್ತಿತರರು ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಗೂ ಮುನ್ನ ಹೈಡ್ರಾಮಾವೊಂದು ನಡೆದಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೆಶ್ ಜಾರಕಿಹೊಳಿಯವರು ಸಭೆಯಿಂದ ಹೊರ ನಡೆದಿದ್ದರು.

  • ದ್ವೇಷ ಭಾವನೆ ಮಾಡದೇ ಪ್ರೀತಿ ವಿಶ್ವಾಸದಿಂದ ಕೆಲಸ ಮಾಡ್ತೀನಿ: ಅಶೋಕ್ ಭರವಸೆ

    ದ್ವೇಷ ಭಾವನೆ ಮಾಡದೇ ಪ್ರೀತಿ ವಿಶ್ವಾಸದಿಂದ ಕೆಲಸ ಮಾಡ್ತೀನಿ: ಅಶೋಕ್ ಭರವಸೆ

    ಬೆಂಗಳೂರು: ಎಲ್ಲರ ಸಹಕಾರ, ವಿಶ್ವಾಸ ತೆಗೆದುಕೊಂಡು ಕೆಲಸ ಮಾಡ್ತೀನಿ. ದ್ವೇಷ ಭಾವನೆ ಮಾಡದೇ, ಪ್ರೀತಿ ವಿಶ್ವಾಸದಿಂದ ಕೆಲಸ ಮಾಡ್ತೀನಿ ಎಂದು ನೂತನವಾಗಿ ಆಯ್ಕೆಯಾದ ವಿಪಕ್ಷ ನಾಯಕ ಆರ್. ಅಶೋಕ್ (R Ashok) ಹೇಳಿದರು.

    ಶಾಸಕಾಂಗ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಆದೇಶ, ಎಲ್ಲರ ಸಹಕಾರದಿಂದ ನಾಯಕನಾಗಿ ಆಯ್ಕೆ ಮಾಡಿದ್ದಾರೆ. ನಾನು ನಾಯಕ ಆದರೂ 66 ಜನ ಶಾಸಕರು ನಾಯಕರೇ. ನೀವೆಲ್ಲರೂ ನನಗೆ ನಾಯಕರು. 66 ಶಾಸಕರು ಕಳೆದ ಅಧಿವೇಶನದಲ್ಲಿ ವಿಪಕ್ಷ ನಾಯಕರಾಗಿದ್ದರು. 10 ಜನ ಸಸ್ಪೆಂಡ್ ಮಾಡಿದ್ದರು ಎಂದರು.

    ಯಡಿಯೂರಪ್ಪ (BS Yediyurappa) ಮಾರ್ಗದರ್ಶನ, ಬೊಮ್ಮಾಯಿ (Basavaraj Bommai) ಸಹಕಾರ ಪಡೆದು ಮುನ್ನಡೆಯಬೇಕು. ಸೋತಿದ್ದೇವೆ ಅನ್ನೋದು ಬಿಟ್ಟು ಮತ್ತೆ ಕಮಲ ಅರಳುತ್ತೆ. ನಮಗೆ ಲೋಕಸಭಾ ಚುನಾವಣೆ, ಬಿಬಿಎಂಪಿ, ಸ್ಥಳೀಯ ಸಂಸ್ಥೆ ಚುನಾವಣೆ ನಮಗೆ ಟಾಸ್ಕ್ ಇದೆ. ನಾನು 40 ವರ್ಷಗಳಿಂದ ಹೋರಾಟ ಮಾಡಿದ್ದೇನೆ. ಇಂದಿರಾಗಾಂಧಿ ವಿರೋಧಿಸಿ ಜೈಲಿಗೆ ಹೋಗಿದ್ದೇನೆ. ನರೇಂದ್ರ ಮೋದಿಯಂತಹ ನಾಯಕತ್ವ ಸಿಕ್ಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ವಿಪಕ್ಷ ನಾಯಕರಾಗಿ ಆರ್. ಅಶೋಕ್ ಆಯ್ಕೆ

    ಕಳೆದ 6 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ (Congress Govt) ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಿಎಂ ಮಗನೇ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ. ಈ ಸ್ಥಿತಿಯಲ್ಲಿ 28 ಸ್ಥಾನ ಗೆಲ್ತೀವಿ. ಬೆಂಗಳೂರು ಗ್ರಾಮಾಂತರ ಸೇರಿ ಕನಕಪುರ ಸೇರಿ 28 ಕ್ಷೇತ್ರ ಗೆಲ್ತೀವಿ. ಎಲ್ಲರ ಸಹಕಾರ, ವಿಶ್ವಾಸ ತೆಗೆದುಕೊಂಡು ಕೆಲಸ ಮಾಡ್ತೀನಿ. ಬೆಳಗಾವಿ ಅಧಿವೇಶನದಲ್ಲಿ ನಮ್ಮ ಹೋರಾಟ ಶುರು ಮಾಡೋಣ. ದ್ವೇಷ ಭಾವನೆ ಮಾಡದೇ, ಪ್ರೀತಿ ವಿಶ್ವಾಸದಿಂದ ಕೆಲಸ ಮಾಡ್ತೀನಿ ಎಂದು ಹೇಳಿದರು.

    ಹಿರಿಯರ ಮಾರ್ಗದರ್ಶನದಲ್ಲಿ ಕೆಲಸ ಮಾಡೋಣ. ಸಬ್ ಕಾ ಸಾಥ್… ಸಬ್ ಕಾ ವಿಕಾಸ್ ಮೋದಿ (Narendra Modi) ಹೇಳಿಕೆಯಂತೆ ಕೆಲಸ ಮಾಡೋಣ. ಭ್ರಷ್ಟಾಚಾರ ಕಾಂಗ್ರೆಸ್ ತೊಲಗಿಸೋಣ. ಮತ್ತೆ ಬಿಜೆಪಿ ಅಧಿಕಾರಕ್ಕೆ ತರೋಕೆ ಕೆಲಸ ಮಾಡೋಣ. ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ (BJP Govt) ತರೋಕೆ ಕೆಲಸ ಮಾಡೋಣ ಎಂದು ಹೇಳಿ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಆರ್. ಅಶೋಕ್ ಅರ್ಪಿಸಿದರು.

  • ವಿಪಕ್ಷ ನಾಯಕರಾಗಿ ಆರ್. ಅಶೋಕ್ ಆಯ್ಕೆ

    ವಿಪಕ್ಷ ನಾಯಕರಾಗಿ ಆರ್. ಅಶೋಕ್ ಆಯ್ಕೆ

    ಬೆಂಗಳೂರು: ಅಳೆದು ತೂಗಿ ಕೊನೆಗೂ ಬಿಜೆಪಿ ಹೈಕಮಾಂಡ್ ವಿಪಕ್ಷ ನಾಯಕನನ್ನು(Opposition Leader)  ಆಯ್ಕೆ ಮಾಡಿದೆ. ಆರ್ ಅಶೋಕ್ (R Ashok) ಅವರು ವಿಪಕ್ಷ ನಾಯಕನ ಸ್ಥಾನವನ್ನು ಅಲಂಕರಿಸಲಿದ್ದಾರೆ.

    ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯ ನಂತರ ಆರ್.ಅಶೋಕ್ ಹೆಸರು ಘೋಷಣೆ ಮಾಡಲಾಗಿದೆ. ಅಶೋಕ್ ಹೆಸರಿಗೆ  ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಸೂಚನೆ‌ ಕೊಟ್ಟರೆ, ಶಾಸಕ ಸುನಿಲ್‌ ಕುಮಾರ್‌ (Sunil Kumar) ಅನುಮೋದನೆ ನೀಡಿದರು.

    ಬಿಜೆಪಿ ನಾಯಕರ ಸಭೆಯಲ್ಲಿ ಎಲ್ಲರೂ ಅಭಿಪ್ರಾಯ ಹೇಳಿದ್ದಾರೆ. ಯತ್ನಾಳ್ ಕೂಡ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ವೀಕ್ಷಕರ ಮುಂದೆ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ ಎಂದು ಆಯ್ಕೆಗೂ ಮುನ್ನ ಆರ್ ಅಶೋಕ್ ಅವರು ಸುದ್ದಿಗಾರರಿಗೆ ತಿಳಿಸಿದ್ದರು. ಇದನ್ನೂ ಓದಿ: Breaking: ಜೆಡಿಎಸ್‌ ಪಕ್ಷದಿಂದ ಸಿಎಂ ಇಬ್ರಾಹಿಂ ಅಮಾನತು – ದೊಡ್ಡಗೌಡರ ಆದೇಶ

    ಸಭೆಗೂ ಮುನ್ನ ಅಸಾಮಾಧಾನ ಸ್ಫೋಟಗೊಂಡಿತ್ತು. ಹಿರಿಯ ನಾಯಕರ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಹೊರ ನಡೆದಿದ್ದಾರೆ. ಹೈಕಮಾಂಡ್ ನಿಲುವು ಸ್ಪಷ್ಟವಾಗುತ್ತಿದ್ದಂತೆಯೇ ಆಮೇಲೆ ಮಾತಾಡ್ತೀವಿ ಎಂದು ಹೊರ ನಡೆದ ಯತ್ನಾಳ್‍ಗೆ ರಮೇಶ್ ಜಾರಕಿಹೊಳಿಯೂ ಸಾಥ್ ನೀಡಿದರು.

    ಇದಕ್ಕೂ ಮುನ್ನ ಹೈಕಮಾಂಡ್ ಸಂದೇಶ ಹೊತ್ತು ತಂದ ವೀಕ್ಷಕರ ಎದುರೇ ಶಾಸಕ ಯತ್ನಾಳ್ ಮೌನ ಮುರಿದಿದ್ದರು. ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕಕ್ಕೆ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಜೆಪಿ ಒಂದೇ ಕುಟುಂಬಕ್ಕೆ ಸೀಮಿತವಾಗಬಾರದು. ಬ್ಲಾಕ್‍ಮೇಲ್ ತಂತ್ರಗಳಿಗೆ ಹೈಕಮಾಂಡ್ ಮಣಿಯಬಾರದು. ಕೆಲವೇ ಚೇಲಗಳ ಮಾತು ಕೇಳಿ ಕೇಂದ್ರ ನಾಯಕರು ತೀರ್ಮಾನ ಮಾಡಬಾರದು. ನಾನು ಯಾವುದೇ ಕಾರಣಕ್ಕೂ ಕಾಂಪ್ರಮೈಸ್ ಆಗಲ್ಲ. ನನ್ನ ಖರೀದಿ ಮಾಡಲಾಗಲ್ಲ.. ಪ್ರತಿಪಕ್ಷದ ನಾಯಕ ಸ್ಥಾನ ಉತ್ತರ ಕರ್ನಾಟಕದವರಿಗೆ ಕೊಡಬೇಕು. ಉತ್ತರ ಕರ್ನಾಟಕಕ್ಕೆ ವಿಪಕ್ಷ ಸ್ಥಾನ ನೀಡದಿದ್ದರೆ ಜನ ತೀರ್ಮಾನಿಸುತ್ತಾರೆ ಎಂದು ಗುಡುಗಿದ್ದರು.

  • ಯಾರಿಗೂ ಬೇಸರ ಆಗಿಲ್ಲ, ಸಭೆ ಬಹಿಷ್ಕರಿಸಿಲ್ಲ: ಅರವಿಂದ್ ಬೆಲ್ಲದ್

    ಯಾರಿಗೂ ಬೇಸರ ಆಗಿಲ್ಲ, ಸಭೆ ಬಹಿಷ್ಕರಿಸಿಲ್ಲ: ಅರವಿಂದ್ ಬೆಲ್ಲದ್

    ಬೆಂಗಳೂರು: ಯಾರು ಕೂಡ ಸಭೆ ಬಹಿಷ್ಕರಿಸಿಲ್ಲ. ಯಾರಿಗೂ ಬೇಸರವಿಲ್ಲ ಎಂದು ಶಾಸಕ ಅರವಿಂದ್ ಬೆಲ್ಲದ್ (Aravind Bellad) ಹೇಳಿದ್ದಾರೆ.

    ಬಿಜೆಪಿ ಶಾಸಕಾಂಗ ಸಭೆಗೂ ಮುನ್ನ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಯಾರು ಸಭೆ ಬಹಿಷ್ಕರಿಸಿಲ್ಲ. ವೀಕ್ಷಕರು ಎಲ್ಲರ ಅಭಿಪ್ರಾಯ ಪಡೆಯುತ್ತಿದ್ದಾರೆ. ಬೇಸರ ಆಗಿಲ್ಲ ಎಂದರು.

    ವೀಕ್ಷಕರು ಒನ್ ಟು ಒನ್ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಯಾರಿಗೂ ಬೇಸರ ಆಗಿಲ್ಲ, ಬಹಿಷ್ಕಾರ ಮಾಡಿಲ್ಲ. ಉತ್ತರ ಕರ್ನಾಟಕ ಭಾಗದ ಕಡೆ ಹೆಚ್ಚು ಶಾಸಕರಿದ್ದಾರೆ. ಇನ್ನೂ ಏನೂ ನಿರ್ಧಾರ ಆಗಿಲ್ವಲ್ಲ. ಉ.ಕ ಭಾಗಕ್ಕೆ ಪರಿಗಣಿಸಿ ಅಂದಿದ್ದೇವೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಶಾಸಕಾಂಗ ಸಭೆಗೂ ಮುನ್ನ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ- ಸಭೆ ಬಹಿಷ್ಕರಿಸಿದ ಇಬ್ಬರು ಶಾಸಕರು

    ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ರಾಜ್ಯ ಬಿಜೆಪಿಯ ಪ್ರಮುಖ ನಾಯಕರ ಜೊತೆ ಹೈಕಮಾಂಡ್ ವೀಕ್ಷಕರ ಸಭೆ ಕರೆದಿತ್ತು. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪ್ರಮುಖ ನಾಯಕರ ಜೊತೆ ಚರ್ಚೆ ನಡೆಯುತ್ತಿದೆ. ನಿರ್ಮಲಾ ಸೀತಾರಾಮನ್, ಅಶ್ವತ್ಥ ನಾರಾಯಣ, ಮುನಿರತ್ನ, ಗೋಪಾಲಯ್ಯ, ವಿಜಯೇಂದ್ರ, ಅಶೋಕ್, ಎಸ್ ಆರ್ ವಿಶ್ವನಾಥ್ ಮತ್ತಿತರರು ಸಭೆಯಲ್ಲಿ ಭಾಗಿಯಾಗಿದ್ದಾರೆ.

  • ಶಾಸಕಾಂಗ ಸಭೆಗೂ ಮುನ್ನ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ- ಸಭೆ ಬಹಿಷ್ಕರಿಸಿದ ಇಬ್ಬರು ಶಾಸಕರು

    ಶಾಸಕಾಂಗ ಸಭೆಗೂ ಮುನ್ನ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ- ಸಭೆ ಬಹಿಷ್ಕರಿಸಿದ ಇಬ್ಬರು ಶಾಸಕರು

    ಬೆಂಗಳೂರು: ಬಿಜೆಪಿ ಶಾಸಕಾಂಗ ಸಭೆಗೂ (BJP Meeting) ಮುನ್ನ ಅಸಮಾಧಾನ ಸ್ಫೋಟಗೊಂಡಿದ್ದು, ಸಭೆಗೂ ಮುನ್ನವೇ ಇಬ್ಬರು ಶಾಸಕರು ಹೊರ ನಡೆದಿದ್ದಾರೆ.

    ಹೌದು. ಹಿರಿಯ ನಾಯಕರ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹಾಗೂ ರಮೇಶ್ ಜಾರಕಿಹೊಳಿ (Ramesh Jarakiholi) ಹೊರ ನಡೆದಿದ್ದಾರೆ. ಅಲ್ಲದೆ ಹೈಕಮಾಂಡ್ ನಿಲುವು ಸ್ಪಷ್ಟವಾಗುತ್ತಿದ್ದಂತೆಯೇ ಆಮೇಲೆ ಮಾತಾಡ್ತೀವಿ ಎಂದು ಹೊರ ನಡೆದ ಯತ್ನಾಳ್‍ಗೆ ರಮೇಶ್ ಜಾರಕಿಹೊಳಿಯೂ ಸಾಥ್ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್ ಮುಸ್ಲಿಂ ಸಮಾಜಕ್ಕೆ ಕೊಟ್ಟಿರುವ ಗೌರವದ ಬಗ್ಗೆ ಮಾತನಾಡಿದ್ದೇನೆ: ಜಮೀರ್

    ಇದಕ್ಕೂ ಮುನ್ನ ಹೈಕಮಾಂಡ್ ಸಂದೇಶ ಹೊತ್ತು ತಂದ ವೀಕ್ಷಕರ ಎದುರೇ ಶಾಸಕ ಯತ್ನಾಳ್ ಮೌನ ಮುರಿದಿದ್ದರು. ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ (BY Vijayendra) ನೇಮಕಕ್ಕೆ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಜೆಪಿ ಒಂದೇ ಕುಟುಂಬಕ್ಕೆ ಸೀಮಿತವಾಗಬಾರದು. ಬ್ಲಾಕ್‍ಮೇಲ್ ತಂತ್ರಗಳಿಗೆ ಹೈಕಮಾಂಡ್ ಮಣಿಯಬಾರದು. ಕೆಲವೇ ಚೇಲಗಳ ಮಾತು ಕೇಳಿ ಕೇಂದ್ರ ನಾಯಕರು ತೀರ್ಮಾನ ಮಾಡಬಾರದು. ನಾನು ಯಾವುದೇ ಕಾರಣಕ್ಕೂ ಕಾಂಪ್ರಮೈಸ್ ಆಗಲ್ಲ. ನನ್ನ ಖರೀದಿ ಮಾಡಲಾಗಲ್ಲ.. ಪ್ರತಿಪಕ್ಷದ ನಾಯಕ ಸ್ಥಾನ ಉತ್ತರ ಕರ್ನಾಟಕದವರಿಗೆ ಕೊಡಬೇಕು. ಉತ್ತರ ಕರ್ನಾಟಕಕ್ಕೆ ವಿಪಕ್ಷ ಸ್ಥಾನ ನೀಡದಿದ್ದರೆ ಜನ ತೀರ್ಮಾನಿಸುತ್ತಾರೆ ಎಂದು ಗುಡುಗಿದ್ದರು.

  • ಮುಂದಿನ ಶುಕ್ರವಾರ ವಿಪಕ್ಷ ನಾಯಕನ ಆಯ್ಕೆ: ವಿಜಯೇಂದ್ರ

    ಮುಂದಿನ ಶುಕ್ರವಾರ ವಿಪಕ್ಷ ನಾಯಕನ ಆಯ್ಕೆ: ವಿಜಯೇಂದ್ರ

    ಬೆಂಗಳೂರು: ಮುಂದಿನ ಶುಕ್ರವಾರ ಶಾಸಕಾಂಗ ಸಭೆ ನಡೆಯಲಿದ್ದು, ಈ ವೇಳೆ ವಿಪಕ್ಷ ನಾಯಕನ ಆಯ್ಕೆ ನಡೆಯಲಿದೆ ಎಂದು ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ಅಭಿಪ್ರಾಯ ಪಡೆದು ವಿಪಕ್ಷ ನಾಯಕನ ಆಯ್ಕೆ ಮಾಡಲಾಗುವುದು. ಯಡಿಯೂರಪ್ಪ (BS Yediyurappa) ಅವರು ನಡ್ಡಾ ಜೊತೆ ಚರ್ಚೆ ಮಾಡಿದ್ದಾರೆ ಎಂದರು.

    ಯಡಿಯೂರಪ್ಪನ ಮಗ ಎನ್ನುವ ಕಾರಣಕ್ಕೆ ನನಗೆ ಈ ಪೋಸ್ಟ್ ಕೊಟ್ಟಿಲ್ಲ. ಯಡಿಯೂರಪ್ಪ ಮಗ ಎನ್ನುವ ಹೆಮ್ಮೆ ಇದೆ. ಪಕ್ಷ ಬೀಡುವ ಯೋಚನೆಯಲ್ಲಿ ಇರೋರನ್ನು ಒಟ್ಟಿಗೆ ತಗೊಂಡು ಹೋಗುತ್ತೇನೆ. ದೆಹಲಿಯಿಂದ ವೀಕ್ಷಕರು ಬರಲಿದ್ದಾರೆ. ಸೋಮಣ್ಣ ಅಶೋಕ್ ಯತ್ನಾಳ್ ಬೊಮ್ಮಾಯಿ ಎಲ್ಲಾರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿದರು.

    ಇದಕ್ಕೂ ಮುನ್ನ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಅಚಲ ವಿಶ್ವಾಸವಿಟ್ಟು ಪಕ್ಷ ಸಂಘಟನೆಯ ಬಹುದೊಡ್ಡ ಜವಾಬ್ದಾರಿ ವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ, ಗೃಹ ಸಚಿವ ಅಮಿತ್ ಶಾ ಅವರಿಗೆ ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಬಿಎಲ್ ಸಂತೋಷ್ ಅವರುಗಳಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.

    ಸಂಘದ ಹಾಗೂ ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಸರ್ವರ ನಿರೀಕ್ಷೆ ಹಾಗೂ ಜನರ ಅಪೇಕ್ಷೆಗೆ ಪೂರಕವಾಗಿ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಗೆ ಹೊಸ ಚೈತನ್ಯ ತುಂಬಲು ಕಾರ್ಯಕರ್ತರೊಂದಿಗೆ ಕಾರ್ಯಕರ್ತನಾಗಿ ಅಹರ್ನಿಶಿ ದುಡಿಯುವ ಸಂಕಲ್ಪ ತೊಟ್ಟಿರುವೆ. ನಾಡಿನ ಜನರ ಆಶೀರ್ವಾದವೇ ನನಗೆ ಶ್ರೀರಕ್ಷೆ ಎಂದು ವಿಜಯೇಂದ್ರ ಹೇಳಿದ್ದಾರೆ.

  • ಶೀಘ್ರವೇ ವಿಪಕ್ಷ ನಾಯಕನ ಆಯ್ಕೆ: ಯಡಿಯೂರಪ್ಪ

    ಶೀಘ್ರವೇ ವಿಪಕ್ಷ ನಾಯಕನ ಆಯ್ಕೆ: ಯಡಿಯೂರಪ್ಪ

    ಶಿವಮೊಗ್ಗ: ವಿಪಕ್ಷ ನಾಯಕನ (Opposition Leader) ಆಯ್ಕೆ ಈಗಾಗಲೇ ವಿಳಂಬ ಆಗಿದೆ. ಎಲ್ಲರೂ ವಿಪಕ್ಷ ನಾಯಕನ ಆಯ್ಕೆ ಯಾವಾಗ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಆದಷ್ಟು ಬೇಗ ವಿಪಕ್ಷ ನಾಯಕನ ಆಯ್ಕೆ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ತಿಳಿಸಿದರು.

    ಶಿವಮೊಗ್ಗದಲ್ಲಿ (Shivamogga) ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಬಿಜೆಪಿ (BJP) ವತಿಯಿಂದ ಇಂದಿನಿಂದ ಬರ ಅಧ್ಯಯನ ಪ್ರವಾಸ ಆರಂಭವಾಗಿದೆ ಎಂದು ಹೇಳಿದರು.

    ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯ ಶತಮಾನೋತ್ಸವ ಸಮಾರಂಭ ಇರುವ ಹಿನ್ನೆಲೆಯಲ್ಲಿ ನಾನು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಹೀಗಾಗಿ ಬರ ಅಧ್ಯಯನ ಪ್ರವಾಸಕ್ಕೆ ಹೋಗಲಾಗಿಲ್ಲ. ಭಾನುವಾರದಂದು ಬರ ಅಧ್ಯಯನ ಪ್ರವಾಸದ ತಂಡವನ್ನು ಸೇರಿಕೊಳ್ಳುತ್ತೇನೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಪರಮೇಶ್ವರ್ ಸಿಎಂ ಆಗ್ತಾರೆ: ಕೆಎನ್ ರಾಜಣ್ಣ ಸಂಚಲನದ ಹೇಳಿಕೆ

    ಲೋಕಸಭಾ ಚುನಾವಣೆಗೆ ಪಕ್ಷ ತಯಾರಿ ನಡೆಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನ ಪಡೆಯಲಿದೆ. ಇನ್ನು ಈಶ್ವರಪ್ಪ ಸೇರಿದಂತೆ ಇತರೆ ಬಿಜೆಪಿ ನಾಯಕರು ದೆಹಲಿಗೆ ಭೇಟಿ ನೀಡಿದ್ದರ ಹಿಂದೆ ಅಂತಹ ವಿಶೇಷ ಏನಿಲ್ಲ. ಸಭೆಗೆ ಕರೆದಿದ್ದರು ಹೋಗಿದ್ದಾರೆ ಅಷ್ಟೇ ಎಂದರು. ಇದನ್ನೂ ಓದಿ: ಹೊಸದು ಬೇಡ, ಬೊಮ್ಮಾಯಿ ಮಂಜೂರುಗೊಳಿಸಿದ ಯೋಜನೆಯ ಅನುದಾನ ನೀಡಲಿ: ವೇದವ್ಯಾಸ ಕಾಮತ್

    Web Stories

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಟೆಂಡರ್: ತಂಗಡಗಿ ಲೇವಡಿ

    ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಟೆಂಡರ್: ತಂಗಡಗಿ ಲೇವಡಿ

    ಕೊಪ್ಪಳ: ಬಿಜೆಪಿಯಲ್ಲಿ (BJP) ವಿರೋಧ ಪಕ್ಷದ ನಾಯಕನ (Opposition Leader) ಸ್ಥಾನ ಖಾಲಿ ಇದ್ದು, ಹುದ್ದೆ ಭರ್ತಿಗೆ ಟೆಂಡರ್ (Tender) ಕರೆಯಬಹುದು. ಬಿಡ್‌ನಲ್ಲಿ ಹೆಚ್ಚಿನ ಬೆಲೆ ನೀಡಿದವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ಸಿಗಬಹುದು ಎಂದು ಸಚಿವ ಶಿವರಾಜ್ ತಂಗಡಗಿ (Shivaraj Tangadagi) ವ್ಯಂಗ್ಯವಾಡಿದ್ದಾರೆ

    ಕೊಪ್ಪಳದಲ್ಲಿ (Koppal) ಮಾತನಾಡಿದ ಅವರು, ಬಿಜೆಪಿಯಲ್ಲಿ ಎಲ್ಲಾ ಸ್ಥಾನ, ಹುದ್ದೆ ಮಾರಾಟ ಆಗುತ್ತಿದ್ದವು. ಚೈತ್ರಾ ಕುಂದಾಪುರ (Chaithra Kundapura) ಪ್ರಕರಣದಲ್ಲಿ ಇದು ಮತ್ತೆ ಸಾಬೀತಾಗಿದೆ. ಹಿಂದಿನ ಸರ್ಕಾರದಲ್ಲಿ ಸಿಎಂ ಹುದ್ದೆ 2.5 ಸಾವಿರ ಕೋಟಿಗೆ, ಮಂತ್ರಿ ಸ್ಥಾನ 70 ರಿಂದ 80 ಕೋಟಿಗೆ ಮತ್ತು ಶಾಸಕರ ಟಿಕೆಟ್ 5 ರಿಂದ 7 ಕೋಟಿಗೆ ಮಾರಾಟ ಆಗಿದ್ದವು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  (Basanagouda Patil Yatnal) ಅವರೇ ಈ ಮಾತು ಹೇಳಿದ್ದರು. ಈಗ ವಿರೋಧ ಪಕ್ಷದ ಸ್ಥಾನ ಖಾಲಿ ಇದ್ದು, ಟೆಂಡರ್ ಕರೆದಿಲ್ಲ. ಬಿಜೆಪಿ ನಾಯಕರು ಟೆಂಡರ್ ಕರೆದು ರಾಜ್ಯ ವಿಧಾನಸಭೆ ವಿರೋಧ ಪಕ್ಷದ ಸ್ಥಾನ ತುಂಬಿಕೊಳ್ಳಬಹುದು. ಒಮ್ಮೆ ಟೆಂಡರ್ ಕರೆದಾಗ ಯಾರೂ ಭಾಗಿಯಾಗಿಲ್ಲ. ಮತ್ತೊಮ್ಮೆ ಟೆಂಡರ್ ಕರೆದು ಯಾರು ಹೆಚ್ಚು ಹಣ ಕೊಡುತ್ತಾರೋ ಅವರು ವಿರೋಧ ಪಕ್ಷದ ನಾಯಕ ಆಗಬಹುದು. ಎಂಪಿ ಟಿಕೆಟ್ ಕೂಡ ಮಾರಾಟ ಆಗಬಹುದು ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಚೈತ್ರಾ ಕುಂದಾಪುರ ಡೀಲ್ ಕೇಸ್- ಹಾಲಶ್ರೀ ಕಾರು ಚಾಲಕನ ವಿಚಾರಣೆ

    ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ (Congress) ಯಾವುದೇ ತೊಂದರೆ ಆಗುವುದಿಲ್ಲ. ಇದರಿಂದ ನಮಗೆ ಇನ್ನೂ ಹೆಚ್ಚು ಲಾಭ ಆಗುತ್ತೆ. ಜೆಡಿಎಸ್ (JDS) ಜಾತ್ಯಾತೀತ ಎಂದು ಹೆಸರು ಇಟ್ಟುಕೊಂಡು ಕೋಮುವಾದಿಗಳ ಜೊತೆ ಸೇರಿಕೊಂಡಿದ್ದಾರೆ. ಇದಕ್ಕೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಚೈತ್ರಾ ಕುಂದಾಪುರ ಪ್ರಕರಣದ ಶ್ರೀಕಾಂತ್ ಮನೆ ಜಾಲಾಡಿದ ಸಿಸಿಬಿ- ಬಾಕ್ಸ್‌ನಲ್ಲಿಟ್ಟಿದ್ದ 41 ಲಕ್ಷ ಪತ್ತೆ

    ರಾಜ್ಯದ 162 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರ ಗೈಡ್‌ಲೈನ್ಸ್ ಸಬಲೀಕರಣ ಮಾಡಲು ವಿಳಂಬ ಮಾಡಿತು. ಇದರಿಂದ ಬರ ಘೋಷಣೆ ಮಾಡಲು ತಡವಾಗಿದೆ. ಕೇಂದ್ರಕ್ಕೆ ನಮ್ಮ ಸಿಎಂ ಪತ್ರ ಬರೆದಿದ್ದಾರೆ. ಬರದ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡದೇ ಗೈಡ್‌ಲೈನ್ ಸಬಲೀಕರಣ ಮಾಡಬೇಕು. ರಾಜ್ಯದ 25 ಸಂಸದರೂ ಕೇಂದ್ರದ ಮೇಲೆ ಒತ್ತಡ ಹಾಕಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ವ್ಯಸನ ಮುಕ್ತನಾಗಲು ಬಂದು ಲಕ್ಷಗಟ್ಟಲೆ ಹಣ ಎಗರಿಸಿದ ಭೂಪ!

    ಬಿಜೆಪಿ ಟಿಕೇಟ್‌ಗಾಗಿ ಚೈತ್ರಾ ಕುಂದಾಪುರ ಕೋಟಿ ಡೀಲ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ಕೇಸ್‌ಗಳನ್ನು ಸಿಸಿಬಿಗೆ ವರ್ಗಾಯಿಸಬೇಕು. ಆಗ ಎಲ್ಲಾ ಸತ್ಯ ಹೊರಬರುತ್ತದೆ. ಯಾರೆಲ್ಲ ಹಣ ಕೊಟ್ಟು ಟಿಕೆಟ್ ಖರೀದಿ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಚಕ್ರವರ್ತಿ ಸೂಲಿಬೆಲೆ-ಚೈತ್ರಾ ಕುಂದಾಪುರ ಅಣ್ಣ-ತಂಗಿ ಇದ್ದಂತೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: 10 ಸಾವಿರಕ್ಕೂ ಕಷ್ಟಪಡ್ತಿದ್ದ ಚೈತ್ರಾ ಈಗ ಕೋಟ್ಯಧಿಪತಿ- 3 ಕೋಟಿ 6 ಭಾಗವಾಗಿ ಹಂಚಿದ್ದು ಹೇಗೆ?

    ಮೂರು ಡಿಸಿಎಂ ಸ್ಥಾನ ಸೃಷ್ಠಿಸಬೇಕು ಎಂಬ ಸಚಿವ ರಾಜಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅದು ಅವರ ವೈಯಕ್ತಿಕ ಹೇಳಿಕೆ. ಈ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುವ ಬಗ್ಗೆಯೂ ನಾನು ನಿರ್ಧಾರ ಮಾಡಲಾಗುವುದಿಲ್ಲ. ಈ ಬಗ್ಗೆ ಮಾತನಾಡುವಷ್ಟು ದೊಡ್ಡವ ನಾನಲ್ಲ ಎಂದರು. ಇದನ್ನೂ ಓದಿ: ಚೈತ್ರಾ ಕುಂದಾಪುರ ವಂಚನೆ ಪ್ರಕರಣ- ಇದುವರೆಗೂ 3 ಕೋಟಿಯಷ್ಟು ಮೌಲ್ಯದ ನಗದು, ಚಿನ್ನ ಜಪ್ತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]