Tag: ವಿಪಕ್ಷ

  • ವಿಪಕ್ಷಗಳ ಸಂಸದರ ನಿಯೋಗ ಶನಿವಾರ ಮಣಿಪುರಕ್ಕೆ ಭೇಟಿ

    ವಿಪಕ್ಷಗಳ ಸಂಸದರ ನಿಯೋಗ ಶನಿವಾರ ಮಣಿಪುರಕ್ಕೆ ಭೇಟಿ

    ನವದೆಹಲಿ: ಜನಾಂಗೀಯ ಸಂಘರ್ಷದ ಕುಲುಮೆಯಲ್ಲಿ ಬೇಯುತ್ತಿರುವ ಮಣಿಪುರಕ್ಕೆ (Manipur) ಶನಿವಾರ ವಿರೋಧ ಪಕ್ಷಗಳ (Opposition) ಸಂಸದರ ನಿಯೋಗ ಭೇಟಿ ನೀಡಲಿದೆ. 16 ಪಕ್ಷಗಳ 20 ಸಂಸದರು ನಿಯೋಗದಲ್ಲಿದ್ದು ಜನರನ್ನು ಭೇಟಿಯಾಗಿ ಪರಿಸ್ಥಿತಿಯ ಅವಲೋಕನ ನಡೆಸಲಿದ್ದಾರೆ.

    ಈ ಬಗ್ಗೆ ಎಐಸಿಸಿ (AICC) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಸಂಸದ ಡಾ. ನಾಸೀರ್ ಹುಸೇನ್, ಶನಿವಾರ ಬೆಳಗ್ಗೆ ಸಂಸದರ ನಿಯೋಗ ಮಣಿಪುರಕ್ಕೆ ತೆರಳಲಿದ್ದು, ಹಿಂಸಾಚಾರದಿಂದ ಹಾನಿಗೊಳಗಾದ ಗುಡ್ಡಗಾಡು ಪ್ರದೇಶಗಳು ಮತ್ತು ಕಣಿವೆಗಳಿಗೆ ಭೇಟಿ ನೀಡಲಿದೆ ಎಂದು ತಿಳಿಸಿದರು.

    ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಕ್ರಮವಾಗಿ 184 ಮತ್ತು 267 ನಿಯಮಗಳ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡದೆ ಭಾರತೀಯ ಜನತಾ ಪಕ್ಷವು ಹಠಮಾರಿ ವರ್ತನೆ ತೋರುತ್ತಿದ್ದು, ಪ್ರತಿಪಕ್ಷಗಳ ನಿರಂತರ ಬಳಿಕವೂ ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನೊಳಗೆ ಮಾತನಾಡಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

    ಸಂಸದರ ನಿಯೋಗವನ್ನು ಮಣಿಪುರಕ್ಕೆ ಕಳುಹಿಸುವ ಮೂಲಕ ಪ್ರತಿಪಕ್ಷಗಳು ಮಣಿಪುರದ ಸಂತ್ರಸ್ತ ಜನರು ಮತ್ತು ಅವರ ಸಂಕಷ್ಟದ ಬಗ್ಗೆ ಕಳವಳವಿದೆ ಮತ್ತು ಅವರ ಜೊತೆಗಿದ್ದೇವೆ ಎನ್ನುವ ಸಂದೇಶ ರವಾನಿಸುವ ಪ್ರಯತ್ನ ಎಂದು ಸಂಸದರು ಹೇಳಿದರು. ಇದನ್ನೂ ಓದಿ: ಲವ್ ಜಿಹಾದ್ ಮಹಾಭಾರತದಲ್ಲೂ ನಡೆದಿದೆ: ವಿವಾದಿತ ಹೇಳಿಕೆ ನೀಡಿದ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ

    ನಿಯೋಗವು ಮಣಿಪುರ ರಾಜ್ಯಪಾಲರಿಂದ ಸಮಯ ಕೇಳಿದೆ ಮತ್ತು ಭಾನುವಾರ ಬೆಳಗ್ಗೆ ಅವರನ್ನು ಭೇಟಿ ಮಾಡಲಿದೆ. ಸದಸ್ಯರು ತಮ್ಮ ಸಂಶೋಧನೆಗಳನ್ನು ಸಂಸತ್ತಿನಲ್ಲಿ ಚರ್ಚಿಸಲು ಬಯಸುತ್ತಾರೆ. ಆದರೆ ಸಂಸತ್ತಿನ ಒಳಗೆ ಚರ್ಚೆಗೆ ಅವಕಾಶ ನೀಡದಿದ್ದಲ್ಲಿ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ನಾಸೀರ್ ಹುಸೇನ್ ಹೇಳಿದರು.

    ನಿಯೋಗದಲ್ಲಿ ಅಧೀರ್ ರಂಜನ್ ಚೌಧರಿ, ಗೌರವ್ ಗೊಗೊಯ್, ರಾಜೀವ್ ರಂಜನ್ ಲಾಲನ್ ಸಿಂಗ್, ಎಂಎಸ್ ಸುಶ್ಮಿತಾ ದೇವ್, ಎಂಎಸ್ ಕನಿಮೋಳಿ ಕರುಣಾನಿಧಿ, ಸಂತೋಷ್ ಕುಮಾರ್, ಎಎ ರಹೀಮ್, ಪ್ರೊ. ಮನೋಜ್ ಕುಮಾರ್ ಝಾ, ಜಾವೇದ್ ಅಲಿ ಖಾನ್, ಮಹುವಾ ಮಜಿ, ಪಿಪಿ ಮೊಹಮ್ಮದ್ ಫೈಜಲ್, ಅನೀಲ್ ಪ್ರಸಾದ್ ಹೆಗ್ಡೆ, ಇಟಿ ಮೊಹಮ್ಮದ್ ಬಶೀರ್, ಎನ್‌ಕೆ ಪ್ರೇಮಚಂದ್ರನ್, ಸುಶೀಲ್ ಗುಪ್ತಾ, ಅರವಿಂದ್ ಸಾವಂತ್, ಡಿ ರವಿಕುಮಾರ್, ತಿರು ತೋಲ್ ತಿರುಮಾವಳವನ್, ಜಯಂತ್ ಸಿಂಗ್ ಮತ್ತು ಎಂಎಸ್ ಫುಲೋ ದೇವಿ ನೇತಮ್ ಇರಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಡ್ರೋನ್ ಮೂಲಕ ಪಂಜಾಬ್‌ಗೆ ಡ್ರಗ್ಸ್ ಸಪ್ಲೈ ಮಾಡಲಾಗ್ತಿದೆ: ಪಾಕ್ ಪ್ರಧಾನಿ ಆಪ್ತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಟ್ನಾದಲ್ಲಿ ವಿಪಕ್ಷ ನಾಯಕರ ಸಭೆ – ಮೋದಿ ಸರ್ಕಾರ ಗದ್ದುಗೆಯಿಂದಿಳಿಸಲು 15 ಪಕ್ಷಗಳ ಮಹತ್ವದ ಚರ್ಚೆ

    ಪಾಟ್ನಾದಲ್ಲಿ ವಿಪಕ್ಷ ನಾಯಕರ ಸಭೆ – ಮೋದಿ ಸರ್ಕಾರ ಗದ್ದುಗೆಯಿಂದಿಳಿಸಲು 15 ಪಕ್ಷಗಳ ಮಹತ್ವದ ಚರ್ಚೆ

    – ಅಧಿಕಾರಕ್ಕಾಗಿ ಅಲ್ಲ: ಸಭೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿದ ವಿಪಕ್ಷಗಳು

    ಪಾಟ್ನಾ: ಲೋಕಸಭಾ ಚುನಾವಣೆ (Lok Sabha Election) ಹತ್ತಿರವಾಗುತ್ತಿದ್ದಂತೆಯೇ ಪ್ರತಿಪಕ್ಷಗಳು (Opposition) ಮೈಕೊಡವಿ ಎದ್ದಿವೆ. ಬಿಜೆಪಿ (BJP) ವಿರುದ್ಧ ಪರಿಣಾಮಕಾರಿ ಒಕ್ಕೂಟ ರಚಿಸಿ ಹೋರಾಟ ನಡೆಸುವ ಕುರಿತು ಮೊದಲ ಹೆಜ್ಜೆ ಇಟ್ಟಿವೆ.

    ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಏಕೈಕ ಗುರಿಯೊಂದಿಗೆ ಬಿಹಾರ ರಾಜಧಾನಿ ಪಾಟ್ನಾದಲ್ಲಿ (Patna) ವಿಪಕ್ಷ ನಾಯಕರು ಸಭೆ ಸೇರಿದರು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ನಿತೀಶ್ ಕುಮಾರ್, ಲಾಲೂ ಪ್ರಸಾದ್ ಯಾದವ್, ಮಮತಾ ಬ್ಯಾನರ್ಜಿ, ಶರದ್ ಪವಾರ್, ಹೇಮಂತ್ ಸೊರೇನ್, ಉದ್ಧವ್ ಠಾಕ್ರೆ, ಸೀತಾರಾಂ ಯೆಚೂರಿ, ಅಖಿಲೇಶ್ ಯಾದವ್, ಎಎಪಿಯ ರಾಘವ್ ಚಡ್ಡಾ, ಮೆಹಬೂಬಾ ಮುಫ್ತಿ ಸೇರಿ 15 ಪಕ್ಷಗಳ ರಾಜಕೀಯ ಮುಖಂಡರು ಸಭೆ ಸೇರಿ, ಮೋದಿ ಸರ್ಕಾರವನ್ನು ಗದ್ದುಗೆಯಿಂದ ಇಳಿಸುವ ಬಗ್ಗೆ ಮಹತ್ವದ ಚರ್ಚೆ ನಡೆಸಿದರು.

    ಕರ್ನಾಟಕ ಗೆಲುವಿನ ಜೋಶ್‌ನಲ್ಲಿರುವ ಕಾಂಗ್ರೆಸ್ ನಾಯಕರು, ನಾವೆಲ್ಲಾ ಒಗ್ಗೂಡಿದಲ್ಲಿ ಮೋದಿಯನ್ನು ಮನೆಗೆ ಕಳಿಸೋದು ದೊಡ್ಡ ವಿಚಾರವಲ್ಲ. ನಾವೆಲ್ಲಾ ಒಗ್ಗೂಡಿ ಹೋರಾಟ ನಡೆಸೋಣ ಎಂದು ಕರೆ ನೀಡಿದರು. ಇದೇ ವೇಳೆ ಸಭೆಯಲ್ಲಿ ತಮ್ಮೊಳಗೆ ಇರುವ ತಿಕ್ಕಾಟದ ಬಗ್ಗೆಯೂ ಚರ್ಚೆ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ-ಕಾಂಗ್ರೆಸ್ ನಡುವೆ ಸೆಣಸಿದೆ. ದೆಹಲಿ, ಪಂಜಾಬ್‌ನಲ್ಲಿ ಎಎಪಿ ಮತ್ತು ಕಾಂಗ್ರೆಸ್ ನಡುವಿನ ತಿಕ್ಕಾಟದ ಬಗ್ಗೆ ಚರ್ಚೆ ನಡೆದಿದೆ. ಇದನ್ನೂ ಓದಿ: ಇನ್ಫೋಸಿಸ್ ಸುಧಾಮೂರ್ತಿಗೆ ಬಾಲ ಸಾಹಿತ್ಯ ಪುರಸ್ಕಾರ

    ಈ ಸಭೆಯಲ್ಲಿ ಯಾವುದೇ ಪ್ರಮುಖ ನಿರ್ಧಾರ ಹೊರಬಿದ್ದಿಲ್ಲ. ಶೀಘ್ರವೇ ಶಿಮ್ಲಾದಲ್ಲಿ 2 ದಿನಗಳ ಸಭೆ ನಡೆಸಲು ಇಂದಿನ ಮೀಟಿಂಗ್‌ನಲ್ಲಿ ತೀರ್ಮಾನಿಸಲಾಗಿದೆ. ಶಿಮ್ಲಾ ಸಭೆಯಲ್ಲಿ ಸಂಚಾಲಕರನ್ನು ಆಯ್ಕೆ ಮಾಡುವ ಸಂಭವ ಇದೆ. ಆದರೆ 80 ಲೋಕಸಭಾ ಸ್ಥಾನಗಳಿರುವ ಉತ್ತರ ಪ್ರದೇಶದಿಂದ ಕೇವಲ ಸಮಾಜವಾದಿ ಪಕ್ಷ ಮಾತ್ರ ಈ ಕೂಟದಲ್ಲಿ ಕಾಣಿಸಿಕೊಂಡಿರೋದು ಚರ್ಚೆಗೆ ಗ್ರಾಸವಾಗಿದೆ.

    ಈ ಸಭೆಗೆ ಬಿಎಸ್‌ಪಿ ನಾಯಕಿ ಮಾಯಾವತಿಯನ್ನು ಆಹ್ವಾನಿಸಿಲ್ಲ. ಕರ್ನಾಟಕದ ಜೆಡಿಎಸ್, ಆಂಧ್ರದ ವೈಎಸ್‌ಆರ್, ತೆಲುಗುದೇಶಂ, ತೆಲಂಗಾಣದ ಬಿಆರ್‌ಎಸ್, ಒಡಿಶಾದ ಬಿಜೆಡಿ ಈ ಕೂಟದಲ್ಲಿ ಕಾಣಿಸಿಕೊಂಡಿಲ್ಲ. ಇವರಿಗೆ ಜೆಡಿಯು ಕೂಡ ಆಹ್ವಾನ ನೀಡಿಲ್ಲ. ಈ ಪಕ್ಷಗಳನ್ನು ಹೊರಗಿಟ್ಟು ಬಿಜೆಪಿ ವಿರುದ್ಧ ಗೆಲ್ಲುವುದು ಸಾಧ್ಯವೇ ಎಂಬ ಪ್ರಶ್ನೆಯೂ ಈಗ ಎದ್ದಿದೆ. ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ – ಜಗದೀಶ್‌ ಶೆಟ್ಟರ್‌ ಸೇರಿ ಕಾಂಗ್ರೆಸ್‌ನ ಮೂವರೂ ಅವಿರೋಧ ಆಯ್ಕೆ

    ಇದು ಆರಂಭ ಮಾತ್ರ ಆಗಿದ್ದು, ಮುಂದಿನ ದಿನಗಳಲ್ಲಿ ಏನು ಬೇಕಾದರೂ ಆಗಬಹುದು. ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿದೆ.

  • ಮುಖ್ಯಮಂತ್ರಿ ಆಯ್ಕೆಗಿಂತಲೂ ಕಗ್ಗಂಟಾದ ವಿಪಕ್ಷ ನಾಯಕನ ಆಯ್ಕೆ

    ಮುಖ್ಯಮಂತ್ರಿ ಆಯ್ಕೆಗಿಂತಲೂ ಕಗ್ಗಂಟಾದ ವಿಪಕ್ಷ ನಾಯಕನ ಆಯ್ಕೆ

    ಬೆಂಗಳೂರು: ಬಿಜೆಪಿಯಲ್ಲಿ (BJP) ವಿಪಕ್ಷ ನಾಯಕನ ಆಯ್ಕೆ ಹೊಸ ಸರ್ಕಾರದ ಮುಖ್ಯಮಂತ್ರಿ ಆಯ್ಕೆಗಿಂತಲೂ ಕಗ್ಗಂಟಾಗಿ ಪರಿಣಮಿಸಿದೆ. ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದು 4 ದಿನಗಳಾದರೂ, ವಿರೋಧ ಪಕ್ಷದ ನಾಯಕರು ಯಾರಾಗುತ್ತಾರೆ ಎನ್ನುವ ಪ್ರಶ್ನೆಗೆ ಬಿಜೆಪಿಯಲ್ಲಿ ಉತ್ತರ ಸಿಕ್ಕಿಲ್ಲ.

    ಚುನಾವಣಾ ಫಲಿತಾಂಶ ಬಂದು 10 ದಿನಗಳು ಕಳೆದಿವೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲು ಈಗಾಗಲೇ ವಿಳಂಬವಾಗಿದೆ. ವಿಪಕ್ಷ ನಾಯಕ, ಉಪನಾಯಕ ಮತ್ತು ಸಚೇತಕನ ಆಯ್ಕೆಯಲ್ಲೂ ಜಾತಿ ರಾಜಕಾರಣ ಕೆಲಸ ಮಾಡುತ್ತಿದೆಯೇ? ಹೈಕಮಾಂಡ್ ನಿರ್ಣಯವೇ ಅಂತಿಮವೇ? ಅಲ್ಲದೆ ನಾಯಕರ ಸ್ಥಾನವನ್ನು ತುಂಬಲು ಯಾವೆಲ್ಲ ಲೆಕ್ಕಾಚಾರಗಳು ಮುಖ್ಯವಾಗುತ್ತವೆ ಎನ್ನುವ ಕುತೂಹಲ ರಾಜ್ಯದ ಜನತೆಯಲ್ಲಿ ಮೂಡಿದೆ. ಇದನ್ನೂ ಓದಿ: 500 ರೂ.ಗೆ ಗ್ಯಾಸ್‌ ಸಿಲಿಂಡರ್‌, ಕೃಷಿ ಸಾಲ ಮನ್ನಾ – 5 ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌

    ಚುನಾವಣೆಯಲ್ಲಿ ಹಲವು ಘಟಾನುಘಟಿ ನಾಯಕರ ಸೋಲಿಂದ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ. ಇದೇ ಆಘಾತದಲ್ಲಿ ವಿಪಕ್ಷ ನಾಯಕನ ಸ್ಥಾನಕ್ಕೆ ಬಿಜೆಪಿ ಇನ್ನೂ ಯಾರ ಹೆಸರನ್ನು ಸೂಚಿಸಿಲ್ಲ. ಅದರಲ್ಲೂ ಸದನದಲ್ಲಿ ಆಡಳಿತ ಪಕ್ಷವನ್ನು ಸಮರ್ಥವಾಗಿ ಕಟ್ಟಿ ಹಾಕುವ ಯಾವ ನಾಯಕರು ಇಲ್ಲದಂತಾಗಿದೆ.

    ರೇಸ್‍ನಲ್ಲಿ ಯಾರಿದ್ದಾರೆ?
    ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ಪಕ್ಷದ ಮುಖಂಡ ಸುನೀಲ್ ಕುಮಾರ್  (Sunil Kumar) ಹಾಗೂ ಯತ್ನಾಳ್ (Basanagouda Patil Yatnal) ಅವರ ಹೆಸರು ವಿಪಕ್ಷ ನಾಯಕನ ಸ್ಥಾನದ ರೇಸ್‍ನಲ್ಲಿವೆ. ಉಪನಾಯಕನ ಸ್ಥಾನಕ್ಕೆ ಮಾಜಿ ಸಚಿವ ಆರ್.ಅಶೋಕ್ (R Ashok), ಅಶ್ವತ್ಥ್ ನಾರಾಯಣ್ ಮತ್ತು ಅರವಿಂದ ಬೆಲ್ಲದ್ ಹೆಸರು ಕೇಳಿ ಬಂದಿವೆ.

    ವಿಪಕ್ಷ ಮುಖ್ಯ ಸಚೇತಕನ ಸ್ಥಾನಕ್ಕೆ ಅಭಯ್ ಪಾಟೀಲ್ ಹಾಗೂ ಸತೀಶ್ ರೆಡ್ಡಿ ಅವರ ಹೆಸರು ಕೇಳಿಬಂದಿದೆ. ಅಲ್ಲದೆ ವಿಪಕ್ಷ ನಾಯಕನ ಸ್ಥಾನ ಲಿಂಗಾಯತರಿಗೆ, ಉಪನಾಯಕನ ಸ್ಥಾನ ಒಕ್ಕಲಿಗರಿಗೆ ಹಾಗೂ ಸಚೇತಕನ ಸ್ಥಾನ ಒಬಿಸಿಗೆ ನೀಡಲು ಚರ್ಚೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಮತದಾರರಿಗೆ ನೀಡದೇ ಇಟ್ಟುಕೊಂಡ ನನ್ನ ಹಣ ವಾಪಸ್ ಕೊಡಿ: ಅಂಗಾಲಾಚಿದ ಕೆಸಿ ನಾರಾಯಣಗೌಡ

  • ರಾಜ್ಯಸಭೆಗೆ ನ್ಯಾ.ಗೊಗೋಯ್ ನೇಮಕ – ಬಿಜೆಪಿ, ವಿಪಕ್ಷಗಳ ನಡುವೆ ಗದ್ದಲ ಗಲಾಟೆ

    ರಾಜ್ಯಸಭೆಗೆ ನ್ಯಾ.ಗೊಗೋಯ್ ನೇಮಕ – ಬಿಜೆಪಿ, ವಿಪಕ್ಷಗಳ ನಡುವೆ ಗದ್ದಲ ಗಲಾಟೆ

    ಬೆಂಗಳೂರು: ರಾಜ್ಯಸಭೆಗೆ ನಿವೃತ್ತಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇಮಕ ವಿಚಾರ ವಿಧಾನ ಪರಿಷತ್‍ನಲ್ಲಿ ಗದ್ದಲ ಗಲಾಟೆ ಕಾರಣವಾಯಿತು. ನ್ಯಾ.ಗೊಗೋಯ್ ನೇಮಕವನ್ನ ಬಿಜೆಪಿ ಸದಸ್ಯರು ಸಮರ್ಥನೆ ಮಾಡಿಕೊಂಡರೆ, ವಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿದರು. ಮಾತು ಮಾತಿಗೆ ಬೆಳೆದು ಸದನದಲ್ಲಿ ಗದ್ದಲ ಗಲಾಟೆಗೆ ಕಾರಣವಾಯಿತು.

    ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸಂವಿಧಾನದ ಚರ್ಚೆ ವೇಳೆ ಮಾತನಾಡುತ್ತಾ, ಇವತ್ತಿನ ಆಡಳಿತ ವ್ಯವಸ್ಥೆ ಬಗ್ಗೆ ವಿರೋಧ ವ್ಯಕ್ತಪಡಿಸಿದರು. ಇವತ್ತು ಐಟಿ, ಸಿಬಿಸಿ, ಇಡಿ, ಚುನಾವಣೆ ಆಯೋಗದ ಮೇಲೆ ರಾಜಕೀಯ ಹಸ್ತಕ್ಷೇಪ ಆಗುತ್ತಿದೆ. ಇದು ಸರಿಯಾದ ವ್ಯವಸ್ಥೆ ಅಲ್ಲ ಅಂತ ಅಸಮಾಧಾನ ವ್ಯಕ್ತಪಡಿಸಿದರು. ಇದಲ್ಲದೆ RBI ಗವರ್ನರ್ ಕೂಡ ವ್ಯವಸ್ಥೆ ವಿರುದ್ಧ ಅಸಮಾಧಾಗೊಂಡು ರಾಜೀನಾಮೆ ಕೊಟ್ಟು ಹೋದರು ಅಂತ ವ್ಯವಸ್ಥೆ ವಿರುದ್ಧ ಕಿಡಿಕಾರಿದರು. ಈಗ ನಿವೃತ್ತ ಸಿಜೆಯೊಬ್ಬರಿಗೆ ರಾಜ್ಯ ಸಭಾ ಸದಸ್ಯ ಸ್ಥಾನ ನೀಡಿದ್ದಾರೆ. ಇದು ಯಾವ ಸಂದೇಶ ಜನರಿಗೆ ಹೋಗುತ್ತೆ ಎಂದ ಅಸಮಾಧಾನ ಹೊರ ಹಾಕಿದರು.

    ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತಿಗೆ ಕಾನೂನು ಮಂತ್ರಿ ಮಾಧುಸ್ವಾಮಿ ವಿರೋಧ ವ್ಯಕ್ತಪಡಿಸಿದರು. RBI ಗವರ್ನರ್ ರನ್ನ ದೇಶದ ಪ್ರಧಾನಿ ಮಾಡಲಿಲ್ಲವಾ? ಅಂತ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ನಿವೃತ್ತ ಅಧಿಕಾರಿಗಳು, ನ್ಯಾಯಮೂರ್ತಿಗಳನ್ನ ರಾಜ್ಯಸಭೆಗೆ ನೇಮಕ ಮಾಡದಂತೆ ನಿಯಮ ಇದೆಯಾ? ಕೊಟ್ಟರೆ ಏನು ತಪ್ಪಿದೆ. ಕಾನೂನಿನ ಅನ್ವಯ ನೇಮಕವಾಗಿದ್ದಾರೆ. ಚೆನ್ನಾಗಿ ಓದಿರೋರು ರಾಜ್ಯಸಭೆಗೆ ಬರೋದು ತಪ್ಪಾ? ಅಂತ ಗೊಗೋಯ್ ನೇಮಕವನ್ನ ಸಮರ್ಥನೆ ಮಾಡಿಕೊಂಡರು.

    ಬಿಜೆಪಿ ಸದಸ್ಯರ ಸಮರ್ಥನೆಗೆ ವಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿದರು. ಈ ನ್ಯಾಯಮೂರ್ತಿಗಳು ಹಿಂದೆ ಅನೇಕ ತೀರ್ಪು ಕೊಟ್ಟಿದ್ದಾರೆ. ಈಗ ಅವರನ್ನ ರಾಜ್ಯಸಭೆಗೆ ನೇಮಕ ಮಾಡಿರೋದು ಎಷ್ಟು ಸರಿ ಅಂತ ಆಕ್ರೋಶ ಹೊರ ಹಾಕಿದರು. ಈ ವಿಚಾರವಾಗಿ ಸದನದಲ್ಲಿ ಗದ್ದಲ ಗಲಾಟೆ ಆಯಿತು.

    ಕಾಂಗ್ರೆಸ್‍ನ ಸಿಎಂ ಇಬ್ರಾಹಿಂ ನ್ಯಾ.ಗೊಗೊಯ್ ನೇಮಕವನ್ನ ವಿಧವೆ ವಿವಾಹಕ್ಕೆ ಹೋಲಿಸಿ ಲೇವಡಿ ಮಾಡಿದರು. ವಿಧವೆ ಪುನರ್ ಮದುವೆ ಆಗೋದು ಸರಿ. ಆದರೆ ನಿನ್ನೆ ಮೊನ್ನೆ ಸತ್ತ ಗಂಡನ ಹೆಂಡತಿ ಮದುವೆ ಆಗೋದು ಎಷ್ಟು ಸರಿ. ನಿವೃತ್ತಿಯಾಗಿ 4 ತಿಂಗಳು ಆಗಿಲ್ಲ. ಆಗಲೇ ರಾಜ್ಯಸಭೆಗೆ ಅಯ್ಕೆ ಆದರೆ ಹೇಗೆ. ಇದು ಸುಪ್ರೀಂಕೋರ್ಟ್ ಸ್ಥಾನಕ್ಕೆ ಚ್ಯುತಿ ತಂದ ಹಾಗೆ ಅನ್ನಿಸುತ್ತೆ ಅಂತ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಮತ್ತೆ ವಿಪಕ್ಷ- ಆಡಳಿತ ಪಕ್ಷದ ನಡುವೆ ಗಲಾಟೆ ಆಯಿತು.