Tag: ವಿನೋದ್ ದಗಾ

  • ದೇವರಿಗೆ ನಮಿಸುತ್ತಲೇ ಪ್ರಾಣ ಬಿಟ್ಟ ಮಾಜಿ ಶಾಸಕ

    ದೇವರಿಗೆ ನಮಿಸುತ್ತಲೇ ಪ್ರಾಣ ಬಿಟ್ಟ ಮಾಜಿ ಶಾಸಕ

    – ಸಿಸಿಟಿವಿಯಲ್ಲಿ ಭಯಾನಕ ದೃಶ ಸೆರೆ

    ಭೋಪಾಲ್: ದೇವರಿಗೆ ಪೂಜೆ ಮಾಡುವಾಗಲೇ ಹೃದಯಾಘಾತವಾಗಿ ಮಧ್ಯಪ್ರದೇಶದ ಕಾಂಗ್ರೆಸ್ ಮಾಜಿ ಶಾಸಕ ವಿನೋದ್ ದಗಾ ನಿಧನರಾಗಿದ್ದಾರೆ.

    ನವೆಂಬರ್ 12ರಂದು ಈ ಘಟನೆ ನಡೆದಿದ್ದು, ಅವರು ಸಾವನ್ನಪ್ಪಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೊದಲಿಗೆ ಸರಿಯಾಗಿ ದೇವರಿಗೆ ನಮಸ್ಕಾರ ಮಾಡಿ ವಿಗ್ರಹದ ಹತ್ತಿರ ಹೋಗುವ ವಿನೋದ್ ಅವರು ನಂತರ ತಕ್ಷಣ ಹೃದಯಾಘಾತದಿಂದ ಎದೆಯನ್ನು ಹಿಡಿದುಕೊಂಡು ಕಳೆಗೆ ಬೀಳುತ್ತಾರೆ. ಈ ಎಲ್ಲ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಮಧ್ಯ ಪ್ರದೇಶ ಬೆತುಲ್ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕರಾಗಿರುವ ವಿನೋದ್ ದಗಾ, ಪ್ರತಿದಿನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುವ ಅಭ್ಯಾಸ ಇಟ್ಟಿಕೊಂಡಿದ್ದರು. ಘಟನೆ ನಡೆದ ದಿನವೂ ಕೂಡ ಅವರು ಪಂಚೆ ತೊಟ್ಟು ಜೈನರ ದೇವಸ್ಥಾನಕ್ಕೆ ಹೋಗಿದ್ದಾರೆ. ಈ ವೇಳೆ ದೇವರ ವಿಗ್ರಹದ ಹತ್ತಿರ ಹೋಗುತ್ತಿದ್ದಂತೆ ಅವರು ಹೃದಯಾಘಾತದಿಂದ ಕುಸಿದು ಬೀಳುತ್ತಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

    ಕಾಂಗ್ರೆಸ್ ಪಕ್ಷ ವಿನೋದ್ ದಗಾ ಅವರಗೆ ಇತ್ತೀಚೆಗೆ ಮೆಘಾನ್‍ನಲ್ಲಿ ನಡೆದ ಉಪಚುನಾವಣೆ ಉಸ್ತುವಾರಿ ನೀಡಿತ್ತು. ಗುರುವಾರ ಭೋಪಾಲ್‍ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ವಿನೋದ್ ದಗಾ, ನಂತರ ಮನೆಗೆ ಬಂದು ದೇವರಿಗೆ ಪೂಜೆ ಮಾಡಲು ತೆರೆಳಿದ್ದರು. ವಿನೋದ್ ದಗಾ ಅವರ ಸಾವಿಗೆ ಹಲವಾರು ಕಾಂಗ್ರೆಸ್ ಮುಖಂಡರು ಸಂತಾಪ ಸೂಚಿಸಿದ್ದಾರೆ.