Tag: ವಿನೀಶ್

  • ಮಗನ ಅಭಿನಯ ನೋಡಿ ಡಿ-ಬಾಸ್ ಜೋಡಿ ನೀಡಿದ ಪ್ರತಿಕ್ರಿಯೆ ವಿಡಿಯೋ ವೈರಲ್

    ಮಗನ ಅಭಿನಯ ನೋಡಿ ಡಿ-ಬಾಸ್ ಜೋಡಿ ನೀಡಿದ ಪ್ರತಿಕ್ರಿಯೆ ವಿಡಿಯೋ ವೈರಲ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ಯಜಮಾನ’ ಚಿತ್ರ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಈ ಚಿತ್ರದಲ್ಲಿ ಮಗನ ಅಭಿನಯ ನೋಡಿ ಡಿ-ಬಾಸ್ ಜೋಡಿ ಮನಸೋತಿದ್ದಾರೆ ಹಾಗೂ ಅವರು ಪ್ರತಿಕ್ರಿಯೆ ನೀಡಿದ ವಿಡಿಯೋ ಈಗ ವೈರಲ್ ಆಗಿದೆ.

    ಯಜಮಾನ ಚಿತ್ರದಲ್ಲಿ ವಿನೀಶ್ ತನ್ನ ತಂದೆ ದರ್ಶನ್ ಅವರ ಜೊತೆ ಎರಡನೇ ಬಾರಿ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿದ್ದಾನೆ. ಯಜಮಾನ ಚಿತ್ರದ ಚಿತ್ರೀಕರಣದ ವೇಳೆ ವಿನೀಶ್ ಜೊತೆ ತಾಯಿ ವಿಜಯಲಕ್ಷ್ಮೀ ಕೂಡ ಭೇಟಿ ನೀಡುತ್ತಿದ್ದರು.

    ಈಗ ಯಜಮಾನ ಚಿತ್ರದಲ್ಲಿ ವಿನೀಶ್ ನಟಿಸುತ್ತಿರುವಾಗ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ಅವರ ಪ್ರತಿಕ್ರಿಯೆ ಹೇಗಿತ್ತು ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿನೀಶ್ ಕ್ಯಾಮರಾ ಮುಂದೆ ನಟಿಸುತ್ತಿದ್ದರೆ, ದರ್ಶನ್ ಹಾಗೂ ವಿಜಯಲಕ್ಷ್ಮೀ ಅದನ್ನು ನೋಡಿ ಖುಷಿಪಡುತ್ತಿದ್ದಾರೆ.

    ಯಜಮಾನ ಚಿತ್ರ ಬಿಡುಗಡೆ ಆಗುವ ಮುನ್ನವೇ ನರ್ತಕಿ ಚಿತ್ರಮಂದಿರದಲ್ಲಿ ವಿನೀಶ್‍ನ 30 ಅಡಿ ಎತ್ತರದ ಕಟೌಟ್ ಹಾಕಲಾಗಿತ್ತು. ಈ ಚಿತ್ರದಲ್ಲಿ ವಿನೀಶ್ ಒಂದು ವಿಶೇಷ ಹಾಡಿನಲ್ಲಿ ನಟಿಸಿದ್ದಾನೆ. ಈ ಹಾಡಿನಲ್ಲಿ ಅಪ್ಪ- ಮಗ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. `ಐರಾವತ’ ಚಿತ್ರದ ನಂತರ ಯಜಮಾನ ಚಿತ್ರದಲ್ಲಿ ದರ್ಶನ್ ಹಾಗೂ ವಿನೀಶ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಗನ ಬರ್ತ್ ಡೇ ಪಾರ್ಟಿಯಲ್ಲಿ ಸಂಭ್ರಮಿಸಿದ ದಚ್ಚು ದಂಪತಿ

    ಮಗನ ಬರ್ತ್ ಡೇ ಪಾರ್ಟಿಯಲ್ಲಿ ಸಂಭ್ರಮಿಸಿದ ದಚ್ಚು ದಂಪತಿ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಗ ವಿನೀಶ್ ಬರ್ತ್ ಡೇ ಪಾರ್ಟಿಯನ್ನು ಶನಿವಾರ ಸಂಜೆ ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ.

    ಅಕ್ಟೋಬರ್ 31 ರಂದು ವಿನೀಶ್ ತನ್ನ 10ನೇ ವರ್ಷದ ಹುಟ್ಟುವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದನು. ಆದರೆ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಮಗ ವಿನೀಶ್ ಬರ್ತ್ ಡೇ ಪಾರ್ಟಿಯನ್ನು ಶನಿವಾರ ಸಂಜೆ ಆಯೋಜಿಸಿದ್ದರು. ವಿನೀಶ್ ಬರ್ತ್ ಡೇ ಪಾರ್ಟಿಯಲ್ಲಿ ದರ್ಶನ್ ಕುಟುಂಬದವರು ಮತ್ತು ಸಿನಿಮಾ ರಂಗದ ಆಪ್ತರು ಭಾಗಿಯಾಗಿದ್ದರು.

    ದರ್ಶನ್ ಸಹೋದರಿ ಸ್ಪೂರ್ತಿ ವಿಶ್ವಾಸ್, ಪತಿ ವಿಶ್ವಾಸ್ ತಮ್ಮ ಮಗುವಿನ ಜೊತೆ ಬಂದಿದ್ದರು. ಇನ್ನು ‘ಯಜಮಾನ’ ಸಿನಿಮಾ ನಿರ್ಮಾಪಕಿ ಶೈಲಜಾ ನಾಗ್ ಅವರು ಕೂಡ ಪಾರ್ಟಿ ಯಲ್ಲಿ ಭಾಗಿಯಾಗಿದ್ದರು. ಇನ್ನು ವಿನೀಶ್ ಸ್ನೇಹಿತರೆಲ್ಲರೂ ಬಂದು ಪಾರ್ಟಿಯಲ್ಲಿ ಎಂಜಾಯ್ ಮಾಡಿದ್ದಾರೆ.

    ಮಗನ ಬರ್ತ್ ಡೇ ಪಾರ್ಟಿಯಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರು ಸಂತಸದಿಂದ ಇದ್ದು, ಕುಟುಂಬದ ಮೂವರು ಸಂಭ್ರಮದಲ್ಲಿದ್ದ ಕ್ಷಣಗಳು ಫೋಟೋದಲ್ಲಿ ಸೆರೆಯಾಗಿದೆ. ಮಗನ ಜೊತೆ ನಿಂತು ಕೇಕ್ ಕಟ್ ಮಾಡಿಸಿ ತಿನ್ನಿಸಿದ್ದಾರೆ. ಕೇಕ್ ಕಟ್ ಮಾಡಿದ ನಂತರ ಪಾರ್ಟಿ ಗೆ ಬಂದಂತಹ ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ದಚ್ಚು ಕುಟುಂಬ ಸಮೇತ ಒಟ್ಟಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

    ನಟ ದರ್ಶನ್ ಕುಟುಂಬದವರ ಜೊತೆ ಕಳೆದ ಕ್ಷಣಗಳನ್ನು ಫೋಟೋ ಸಮೇತ ಅವರ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿ ‘ಎಕ್ಸ್ ಕ್ಲೂಸಿವ್ ಫೋಟೋ’ ಎಂದು ಬರೆದುಕೊಂಡಿದ್ದಾರೆ. ಡಿ ಕಂಪೆನಿಯವರು ವಿನೀಶ್ ಗೆ ಒಂದು ಅಪರೂಪದ ಫೋಟೋವನ್ನು ಉಡುಗೊರೆಯಾಗಿ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/DarshanFanz/status/1058925444613865472

  • ದರ್ಶನ್ ಮಗನಿಗೆ ಡಿ ಕಂಪನಿಯಿಂದ ಸಿಕ್ತು ಅಪರೂಪದ ಗಿಫ್ಟ್

    ದರ್ಶನ್ ಮಗನಿಗೆ ಡಿ ಕಂಪನಿಯಿಂದ ಸಿಕ್ತು ಅಪರೂಪದ ಗಿಫ್ಟ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪುತ್ರ ವಿನೀಶ್ ಗೆ ಹುಟ್ಟು ಹಬ್ಬದ ಪ್ರಯುಕ್ತ ಡಿ ಕಂಪನಿ ವತಿಯಿಂದ ಒಂದು ಅಪರೂಪದ ಉಡುಗೊರೆ ಸಿಕ್ಕಿದೆ.

    ಅಕ್ಟೋಬರ್ 31 ಬುಧವಾರ ವಿನೀಶ್ ತಮ್ಮ 10 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅಂದು ಅಭಿಮಾನಿಗಳು ಅವರ ಮನೆಯ ಬಳಿ ಕಾದು ಕೇಕ್ ಕಟ್ ಮಾಡಿಸಿ ಸನ್ಮಾನ ಮಾಡಿ ಶುಭಾಶಯವನ್ನು ತಿಳಿಸಿದ್ದರು. ಡಿ ಕಂಪನಿಯ ಅವರು ಬರ್ತ್ ಡೇ ಸ್ಪೆಷಲ್ ಆಗಿ ವಿನೀಶ್ ಗೆ ಅಪರೂಪದ ಗಿಫ್ಟ್ ಕೊಟ್ಟಿದ್ದಾರೆ.

    ಡಿ ಕಂಪನಿ ಅವರು ವಿನೀಶ್‍ಗೆ ಒಂದು ಫೋಟೋವನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಆ ಫೋಟೋದಲ್ಲಿ ಒಂದು ವಿಶೇಷತೆ ಇದೆ. ಅದೇನೆಂದರೆ ಗಂಧದ ಗುಡಿಯ ಒಂದು ಝಲಕನ್ನು ನೆನಪಿಸುವಂತಿದೆ. ಅಂದರೆ ದರ್ಶನ್ ಹೆಗಲ ಮೇಲೆ ವಿನೀಶ್ ಕೂತಿದ್ದು, ಇಬ್ಬರ ಒಂದು ಕೈಯನ್ನು ಮೇಲೆ ಎತ್ತಿ ಆಕಾಶವನ್ನು ತೋರಿಸುವಂತಿದೆ. ‘ಗಂಧದ ಗುಡಿ’ ಸಿನಿಮಾದಲ್ಲಿ ಹಾಡೊಂದರಲ್ಲಿ ದಿವಂಗತ ಡಾ. ರಾಜ್ ಕುಮಾರ್ ಹೇಗೆ ಪೋಸ್ ಕೊಟ್ಟಿದ್ದಾರೋ ಅದೇ ರೀತಿಯಾಗಿ ದರ್ಶನ್ ನಿಂತಿದ್ದಾರೆ.

    ತನ್ನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದವರಿಗೆ ವಿಡಿಯೋ ಮೂಲಕ ವಿನೀಶ್,”ನನ್ನ ಬರ್ತ್ ಡೇಗೆ ಶುಭಾಶಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಕ್ಸ್. ನಿಮ್ಮ ಪ್ರೀತಿ, ಆಶೀರ್ವಾದ ಸದಾ ಎಲ್ಲರ ಮೇಲು ಇರಲಿ. ನನ್ನ ಮೇಲು ಸ್ವಲ್ಪ ಇರಲಿ” ಎಂದು ಧನ್ಯವಾದಗಳನ್ನು ತಿಳಿಸಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮನೆಗೆ ಬಂದ ಅತಿಥಿಯ ಜೊತೆ ಪತ್ನಿಯ ತರ್ಲೆ ನೋಡಿ ನಸುನಕ್ಕ ಯಜಮಾನ

    ಮನೆಗೆ ಬಂದ ಅತಿಥಿಯ ಜೊತೆ ಪತ್ನಿಯ ತರ್ಲೆ ನೋಡಿ ನಸುನಕ್ಕ ಯಜಮಾನ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದ್ಯಕ್ಕೆ ಮೈಸೂರಿನ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಆದರೆ ಈಗ ಅವರ ಮನೆಗೆ ವಿಶೇಷ ಅತಿಥಿಯೊಬ್ಬರು ಆಗಮಿಸಿದ್ದಾರೆ.

    ದರ್ಶನ್ ಮನೆಗೆ ವಿಶೇಷ ಅತಿಥಿಯಾಗಿ ಬಂದಿರುವುದು ಮುದ್ದಾದ ಗಿಳಿ. ದರ್ಶನ್, ಪತ್ನಿ ವಿಜಯಲಕ್ಷ್ಮಿ ಮತ್ತು ಮುದ್ದಾದ ಗಿಣಿ ಜೊತೆಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಫೋಟೋದಲ್ಲಿ ವಿಜಯಲಕ್ಷ್ಮಿ ಅವರು ತಮ್ಮ ಕೈಯಲ್ಲಿ ಗಿಳಿಯನ್ನು ಕೂರಿಸಿಕೊಂಡು ಅದರ ಜೊತೆ ಮಾತನಾಡುತ್ತಿದ್ದಾರೆ. ಇದನ್ನು ನೋಡಿದ ದರ್ಶನ್ ನಕ್ಕು ಬೇರೆ ಕಡೆ ನೋಡುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದು.

    ಇಂದು ಕೂಡ ದರ್ಶನ್ ತಮ್ಮ ಮಗ ವಿನೀಶ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಆ ಚಿತ್ರವನ್ನು ವಿಜಯಲಕ್ಷ್ಮಿ ಅವರು ಟ್ವೀಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ದರ್ಶನ್ ಕುಟುಂಬದವರಿಗೆ ಪ್ರಾಣಿ-ಪಕ್ಷಿಗಳೆಂದರೆ ತುಂಬಾ ಪ್ರೀತಿ. ದರ್ಶನ್ ಅವರು ಕುದುರೆ, ಹುಲಿ, ಚಿರತೆಯನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಇನ್ನು ಮಗ ವಿನೀಶ್ ಕೂಡ ಒಂದು ಕುದುರೆಯನ್ನು ಸಾಕುತ್ತಿದ್ದು, ಇತ್ತೀಚೆಗೆ ಅದರಲ್ಲಿ ಸವಾರಿ ಕೂಡ ಮಾಡಿದ್ದರು. ಪತ್ನಿ ವಿಜಯಲಕ್ಷ್ಮಿ ಅವರು ಕೂಡ ಪ್ರಾಣಿ ಮತ್ತು ಪಕ್ಷಿಗಳ ಪ್ರೇಮಿಯಾಗಿದ್ದು, ಅವರು ತಮ್ಮ ಮನೆಯಲ್ಲಿ ಬೆಕ್ಕನ್ನು ಸಾಕಿದ್ದಾರೆ.

    ಇತ್ತೀಚೆಗೆ ದರ್ಶನ್ ಅವರು ತಮಿಳುನಾಡಿನ ತಿರುನಲ್ಲರ್ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮಗ ವಿನೀಶ್ ಮತ್ತು ಕೆಲವು ಸ್ನೇಹಿತರ ಜೊತೆ ಜನಸಾಮಾನ್ಯರಂತೆ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ್ ಪೂಜೆ ಸಲ್ಲಿಸಿ ಬಂದಿದ್ದಾರೆ.

    ಕಡು ನೀಲಿ ವರ್ಣದ ಉಡುಪು ಧರಿಸಿ ದೇವಸ್ಥಾನಕ್ಕೆ ತೆರಳಿದ್ದ ದರ್ಶನ್ ದೀಪದ ಎಣ್ಣೆಯ ತುಲಾಭಾರ ಹರಕೆಯನ್ನ ಪೂರೈಸಿದ್ದಾರೆ. ವರ್ಷಕ್ಕೊಮ್ಮೆ ಆದರೂ ದರ್ಶನ್ ತಿರುನಲ್ಲರ್ ಶನಿ ದೇವಸ್ಥಾನಕ್ಕೆ ಭೇಟಿ ನೀಡುವ ಪದ್ಧತಿಯನ್ನು ರೂಡಿಸಿಕೊಂಡು ಬಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಪ್ಪನ ಹಾದಿಯಲ್ಲಿ ಮಗ ವಿನೀಶ್ ದರ್ಶನ್

    ಅಪ್ಪನ ಹಾದಿಯಲ್ಲಿ ಮಗ ವಿನೀಶ್ ದರ್ಶನ್

    ಬೆಂಗಳೂರು: ಸಾಮಾನ್ಯವಾಗಿ ಸ್ಟಾರ್ ನಟರ ಮಕ್ಕಳು ಅವರ ತಂದೆಯನ್ನೇ ಹಿಂಬಾಲಿಸುತ್ತಾರೆ. ಅದೇ ರೀತಿ ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಯ ಪುತ್ರ ವಿನೀಶ್ ಕೂಡ ಅಪ್ಪನ ಹಾದಿಯಲ್ಲೇ ಹೋಗುತ್ತಿದ್ದಾರೆ.

    ನಟ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ. ಈಗಾಗಲೇ ಅವರು ಅನೇಕ ಪ್ರಾಣಿಗಳನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಅವರಿಗೆ ಕುದುರೆ ಅಂದರೆ ಅಚ್ಚುಮೆಚ್ಚು, ಅವರು ಸಾಕಿರುವ ಕುದುರೆ ಮೇಲೆ ಅನೇಕ ಬಾರಿ ಸವಾರಿಯನ್ನು ಕೂಡ ಮಾಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಸಿನಿಮಾದಲ್ಲು ಅವರ ಕುದುರೆಯಲ್ಲೇ ಸವಾರಿ ಮಾಡಿದ್ದಾರೆ.

    ದರ್ಶನ್ ಅವರ ಮಗ ವಿನೀಶ್ ಗೂ ಕೂಡ ಪ್ರಾಣಿಗಳ ಮೇಲೆ ತುಂಬಾ ಪ್ರೀತಿ. ಅವರು ಕೂಡ ಒಂದು ಕುದುರೆಯನ್ನು ಸಾಕುತ್ತಿದ್ದಾರೆ. ಈಗ ಅವರು ಸಾಕುತ್ತಿರುವ ಕುದುರೆ ಮೇಲೆ ವಿನೀಶ್ ಸವಾರಿ ಮಾಡಿದ್ದಾರೆ. ವಿನೀಶ್ ಸವಾರಿ ಮಾಡುತ್ತಿದ್ದ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅಭಿಮಾನಿಗಳು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈಗ ಈ ಫೋಟೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.

    ಇತ್ತೀಚೆಗೆ ನಟ ದರ್ಶನ್ ನಟಿಸುತ್ತಿರುವ ಬಹು ನಿರೀಕ್ಷಿತ `ಯಜಮಾನ’ ಚಿತ್ರದ ಶೂಟಿಂಗ್ ಸೆಟ್‍ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದರು. ಯಜಮಾನ ಚಿತ್ರದಲ್ಲಿ ಜೂನಿಯರ್ ದರ್ಶನ್, ವಿನೀಶ್ ಒಂದು ವಿಶೇಷ ಹಾಡಿನಲ್ಲಿ ನಟಿಸುತ್ತಿದ್ದಾರೆ. ಈ ಹಾಡಿನಲ್ಲಿ ಅಪ್ಪ ಮಗ ಒಟ್ಟಿಗೆ ಹೆಜ್ಜೆ ಹಾಕಲಿದ್ದಾರೆ. ಮಗನ ನಟನೆಯನ್ನು ನೋಡಲು ತಾಯಿ ವಿಜಯಲಕ್ಷ್ಮಿ ಚಿತ್ರೀಕರಣ ಸೆಟ್ ಗೆ ಭೇಟಿ ಕೊಟ್ಟಿದ್ದರು.

    `ಐರಾವತ’ ಚಿತ್ರದ ನಂತರ ಯಜಮಾನ ಚಿತ್ರದಲ್ಲಿ ದರ್ಶನ್ ಹಾಗೂ ವಿನೀಶ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕ ದರ್ಶನ್ ಅಪಘಾತದಲ್ಲಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆದು ಮೈಸೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಅಪ್ಪನಂತೆ ಸಕಲಕಲಾವಲ್ಲಭನಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ

    ಅಪ್ಪನಂತೆ ಸಕಲಕಲಾವಲ್ಲಭನಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ವಿನೀಶ್ ಅಪ್ಪನಂತೆ ಚಿಕ್ಕ ವಯಸ್ಸಿನಿಂದಲೇ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಅಪ್ಪ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದ್ದರೆ, ಮಗ ತನ್ನ ಟ್ಯಾಲೆಂಟ್ ನಿಂದ ಎಲ್ಲರನ್ನು ಇಂಪ್ರೆಸ್ ಮಾಡುತ್ತಿದ್ದಾರೆ.

    ಇತ್ತೀಚೆಗೆ ವಿನೀಶ್ ದರ್ಶನ್ ಕರಾಟೆಯಲ್ಲಿ ಚಿನ್ನದ ಪದಕವನ್ನು ಗೆದ್ದು ಅಪ್ಪ-ಅಮ್ಮ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದರು. ಈ ಮೂಲಕ ವಿನೀಶ್ ಕೇವಲ ಓದುವುದಷ್ಟೇ ಅಲ್ಲದೆ ಇತರೆ ಕೆಲಸಗಳಲ್ಲಿಯೂ ಸಖತ್ ಟ್ಯಾಲೆಂಟ್ ಎನ್ನುವುದು ಮತ್ತೊಮ್ಮೆ ಸಾಬೀತು ಮಾಡಿದ್ದರು.

    ವೀನಿಶ್ ತಾಯಿ ಕೂಡ ಮಗನನ್ನು ಎಲ್ಲಾ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದಾರೆ. ವಿನೀಶ್ ದರ್ಶನ್ ಹಾಗೂ ವಿಜಯಲಕ್ಷ್ಮೀ ಗಣಪನ ಮಾಡುವುದನ್ನು ಕಲಿತಿದ್ದಾರೆ. ಇತ್ತೀಚಿಗಷ್ಟೇ ಅಮ್ಮನ ಜೊತೆ ಸೇರಿ ಮಣ್ಣಿನಲ್ಲಿ ಗಣೇಶನನ್ನು ಮಾಡುವುದನ್ನು ಕಲಿತುಕೊಂಡಿದ್ದಾರೆ. ತಾವು ಮಾಡಿದ ಗಣಪನ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ.

    ಶಾಲೆಯಲ್ಲಿ ಏರ್ಪಡಿಸಿದ್ದ ಕರಾಟೆ ಸ್ಪರ್ಧೆಯಲ್ಲಿ ವಿನೀಶ್ ಚಿನ್ನದ ಪದಕವನ್ನ ಗೆದ್ದು ತಂದಿದ್ದರು. ಈ ವಿಚಾರವನ್ನ ತಿಳಿದ ದರ್ಶನ್ ತುಂಬಾ ಸಂತಸ ಪಟ್ಟಿದ್ದರು.  ವಿನೀಶ್ ದರ್ಶನ್ ರಾಜರಾಜೇಶ್ವರಿ ನಗರದ ಹಿಲ್ ವೀವ್ ಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

    ಜ್ಯೂನಿಯರ್ ಚಾಲೆಂಜಿಂಗ್ ಸ್ಟಾರ್ ಆಸೆಗಳಿಗೆ ಅಪ್ಪ-ಅಮ್ಮ ಇಬ್ಬರು ಸಾಥ್ ನೀಡುತ್ತಿದ್ದಾರೆ. ವಿನೀಶ್ ಆಸಕ್ತಿ ಇರೋ ವಿಚಾರದಲ್ಲಿ ತೊಡಗಿಕೊಳ್ಳಲು ದರ್ಶನ್ ಹಾಗೂ ವಿಜಯಲಕ್ಷ್ಮೀ ಅವಕಾಶ ಮಾಡಿಕೊಡುತ್ತಾರೆ. ಶಾಲೆಯ ರಜಾ ದಿನಗಳಲ್ಲಿ ಫಾರ್ಮ್ ಹೌಸ್ ನಲ್ಲಿ ಪ್ರಾಣಿಗಳ ಜೊತೆಯಲ್ಲಿ ಕಾಲಕಳೆಯುವುದರ ಜೊತೆಯಲ್ಲಿ ಕ್ಲೇ ಮೇಕಿಂಗ್, ಕೇಕ್ ಮೇಕಿಂಗ್ ಹೀಗೆ ಇನ್ನೂ ಅನೇಕ ಕಾರ್ಯಗಾರದಲ್ಲಿ ವಿನೀಶ್  ಭಾಗಿಯಾಗುತ್ತಾರೆ. ಇದನ್ನು ಓದಿ: ಕರಾಟೆಯಲ್ಲಿ ಚಿನ್ನದ ಪದಕ ಗೆದ್ದ ಚಾಲೆಂಜಿಂಗ್ ಸ್ಟಾರ್ ಪುತ್ರ

  • ಕರಾಟೆಯಲ್ಲಿ ಚಿನ್ನದ ಪದಕ ಗೆದ್ದ ಚಾಲೆಂಜಿಂಗ್ ಸ್ಟಾರ್ ಪುತ್ರ

    ಕರಾಟೆಯಲ್ಲಿ ಚಿನ್ನದ ಪದಕ ಗೆದ್ದ ಚಾಲೆಂಜಿಂಗ್ ಸ್ಟಾರ್ ಪುತ್ರ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ತಂದೆಯ ಸಾಗಿದ ರೀತಿಯಲ್ಲೇ ಬೆಳೆಯಲು ಆರಂಭಿಸಿದ್ದು, ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾನೆ.

    ದರ್ಶನ್ ಹಾಗೂ ವಿಜಯಲಕ್ಷ್ಮೀ ರವರ ಏಕೈಕ ಪುತ್ರ ವಿನೀಶ್ ಕರಾಟೆಯಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾನೆ. ರಾಜರಾಜೇಶ್ವರಿ ನಗರದ ಹಿಲ್ ವ್ಯೂವ್ ಸ್ಕೂಲ್ ನಲ್ಲಿ ವಿನೀಶ್ ದರ್ಶನ್ ವ್ಯಾಸಂಗ ಮಾಡುತ್ತಿದ್ದು, ಓದುವುದರಲ್ಲೂ ಮುಂಚೂಣಿಯಲ್ಲಿದ್ದಾನೆ.

    ಚಿನ್ನದ ಪದಕ ಗೆದ್ದ ಹಿನ್ನೆಲೆಯಲ್ಲಿ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿನೀಶ್ ಫೋಟೋವನ್ನು ಹಾಕಿ ಅಭಿನಂದಿಸಿದ್ದಾರೆ. ತಂದೆಯಂತೆ ಮಗ ವಿನೀಶ್ ಇದೇ ರೀತಿ ಮತ್ತಷ್ಟು ಸಾಧನೆ ಮಾಡುವಂತೆ ಶುಭ ಹಾರೈಸುತ್ತಿದ್ದಾರೆ.

    ದರ್ಶನ್ ಪುತ್ರನನ್ನು ಸಿನಿ ರಂಗಕ್ಕೆ ಈಗಾಗಲೇ ಪರಿಚಯಿಸಿದ್ದಾರೆ. ಐರಾವತ ಚಿತ್ರದಲ್ಲಿ ಮಗ ವಿನೀಶ್ ಬಣ್ಣ ಹಚ್ಚಿದ್ದ. ಈ ಮೂಲಕ ತೂಗುದೀಪ ಶ್ರೀನಿವಾಸ್ ಕುಟುಂಬದ ಮೂರನೇ ಕುಡಿಯಾಗಿ ವಿನೀಶ್ ಸಿನಿ ಲೋಕಕ್ಕೆ ಕಾಲಿಟ್ಟಿದ್ದ.