Tag: ವಿನೀಶ್

  • ಅಪ್ಪನಂತೆ ಕುದುರೆ ಸವಾರಿ ಮಾಡಿದ ವಿನೀಶ್ ದರ್ಶನ್- ಫೋಟೋ ವೈರಲ್

    ಅಪ್ಪನಂತೆ ಕುದುರೆ ಸವಾರಿ ಮಾಡಿದ ವಿನೀಶ್ ದರ್ಶನ್- ಫೋಟೋ ವೈರಲ್

    ಟ ದರ್ಶನ್ (Darshan) ಅವರಂತೆಯೇ ಪುತ್ರ ವಿನೀಶ್‌ಗೆ (Vineesh) ಪ್ರಾಣಿಗಳ ಮೇಲೆ ಪ್ರೀತಿಯಿದೆ. ಅಪ್ಪನಂತೆ ಕುದುರಿ ಸವಾರಿ ಮಾಡಿರುವ ವಿನೀಶ್ ಫೋಟೋ ಇದಕ್ಕೆ ಸಾಕ್ಷಿಯಾಗಿದೆ. ಇದನ್ನೂ ಓದಿ:ಕೊನೆಗೂ `ದಾಸ’ನಿಗೆ ವಿದೇಶಕ್ಕೆ ತೆರಳಲು ಅನುಮತಿ ಕೊಟ್ಟ ಕೋರ್ಟ್

    ದರ್ಶನ್ ಫಾರ್ಮ್‌ಹೌಸ್‌ನಲ್ಲಿ ಕುದುರೆ ಸೇರಿದಂತೆ ಕೆಲ ಪ್ರಾಣಿ, ಪಕ್ಷಿಗಳನ್ನು ಸಾಕಿದ್ದಾರೆ. ತಮ್ಮ ಬಿಡುವಿನ ಸಮಯದಲ್ಲಿ ಎತ್ತಿನ ಗಾಡಿ ಓಡಿಸೋದು, ಕುದುರೆ ಸವಾರಿ ಮಾಡೋದು ಮಾಡ್ತಿರುತ್ತಾರೆ. ಅದರಂತೆ ಈಗ ಪುತ್ರ ವಿನೀಶ್ ಕೂಡ ಕಪ್ಪು ಕುದುರೆ ಮೇಲೆ ಸವಾರಿ ಮಾಡಿದ್ದಾರೆ. ಕುದುರೆ ಸವಾರಿ ಮಾಡೋದು ಕಲಿತು ಫಾರ್ಮ್‌ಹೌಸ್‌ ಬಳಿ ಸುತ್ತಾಡಿದ್ದಾರೆ. ಈ ಫೋಟೋವನ್ನು ವಿಜಯಲಕ್ಷ್ಮಿ (Vijayalakshmi) ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕ್ಷಮೆ ಕೇಳದ ಕಮಲ್ ಹಾಸನ್‌ಗೆ ಬ್ಯಾನ್ ಬಿಸಿ..!

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೇಲ್ ಮೇಲೆ ದರ್ಶನ್ ಹೊರಬಂದ್ಮೇಲೆ ಪತಿಯ ವ್ಯವಹಾರವನ್ನು ವಿಜಯಲಕ್ಷ್ಮಿಯವರೇ ನೋಡಿಕೊಳ್ತಿದ್ದಾರೆ. ದರ್ಶನ್‌ಗೆ ಎಲ್ಲೇ ಶೂಟಿಂಗ್ ಇದ್ರೂ ಅಥವಾ ಯಾವುದೇ ಕಾರ್ಯಕ್ರಮ ಆಗಿದ್ರೂ ಪತ್ನಿ ಜೊತೆಯಲ್ಲಿ ಇರುತ್ತಾರೆ. ಬಿಡುವಿನ ಸಮಯದಲ್ಲಿ ಪತ್ನಿ ಮತ್ತು ಮಗನೊಂದಿಗೆ ಸಮಯ ಕಳೆಯುತ್ತಿದ್ದಾರೆ. ಇದು ಫಾನ್ಸ್‌ಗೆ ಖುಷಿ ಕೊಟ್ಟಿದೆ. ಈ ಜೋಡಿ ಮೇಲೆ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

    ಇದೆಲ್ಲದರ ನಡುವೆ, ‘ಡೆವಿಲ್’ ಸಿನಿಮಾದ ಚಿತ್ರೀಕರಣವು ಭರದಿಂದ ಸಾಗುತ್ತಿದೆ. ದರ್ಶನ್ ಜೊತೆ ರಚನಾ ರೈ, ವಿನಯ್ ಗೌಡ, ಶರ್ಮಿಳಾ ಮಾಂಡ್ರೆ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ತಾರಕ್ ಡೈರೆಕ್ಟರ್ ಮಿಲನಾ ಪ್ರಕಾಶ್ ಡೆವಿಲ್ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ.

  • ಕುದುರೆ ಹಿಡಿದು ಓಡಿದ ವಿನೀಶ್‌ – ದರ್ಶನ್‌ ಮನೆಯ ಸಂಕ್ರಾಂತಿ ಸಂಭ್ರಮದ ವಿಡಿಯೋ ನೋಡಿ

    ಕುದುರೆ ಹಿಡಿದು ಓಡಿದ ವಿನೀಶ್‌ – ದರ್ಶನ್‌ ಮನೆಯ ಸಂಕ್ರಾಂತಿ ಸಂಭ್ರಮದ ವಿಡಿಯೋ ನೋಡಿ

    ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ದರ್ಶನ್‌ಗೆ (Darshan) ಜಾಮೀನು (Bail) ಸಿಕ್ಕಿದ ಹಿನ್ನೆಲೆಯಲ್ಲಿ ರಿಲೀಫ್ ಆಗಿದ್ದಾರೆ. ಇದೇ ಖುಷಿಯಲ್ಲಿ ಕುಟುಂಬದ ಜೊತೆ ಜ.14ರಂದು ಸಂಕ್ರಾಂತಿ ಹಬ್ಬ ಆಚರಿಸಿದ್ದರು. ಆಚರಣೆಯ ಸುಂದರ ಕ್ಷಣಗಳು ಹೇಗಿತ್ತು ಎಂಬ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಸಂಗೀತ ಕಾರ್ಯಕ್ರಮದಲ್ಲೇ ಸೋನು ನಿಗಮ್ ಒದ್ದಾಟ- ಆಸ್ಪತ್ರೆಗೆ ದಾಖಲು

    ಇತ್ತೀಚೆಗೆ ಸಂಕ್ರಾಂತಿ ಹಬ್ಬ ದರ್ಶನ್ ಜೊತೆ ಆಚರಿಸಿದ್ದ ಫೋಟೋವನ್ನು ವಿಜಯಲಕ್ಷ್ಮಿ ಹಂಚಿಕೊಂಡಿದ್ದರು. ದಿನಕರ್ ತೂಗುದೀಪ ಕುಟುಂಬ ಕೂಡ ಮೈಸೂರಿನಲ್ಲಿರುವ ದರ್ಶನ್ ಫಾರ್ಮ್ ಹೌಸ್‌ಗೆ ಆಗಮಿಸಿ ಹಬ್ಬ ಆಚರಿಸಿದ್ದರು.

    ಜೋಡೆತ್ತುಗಳನ್ನು ಕಿಚ್ಚು ಹಾಯಿಸಿ ಸಂಭ್ರಮಿಸಿದರೆ ದರ್ಶನ್‌ ಮಗ ವಿನೀಶ್‌ ಕುದುರೆಯನ್ನು ಓಡಿಸಿ ಸಂಭ್ರಮಿಸಿದ್ದರು. ಈಗ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೋಡುಗರ ಗಮನ ಸೆಳೆದಿದೆ. ಸಂಕ್ರಾಂತಿ ಹಬ್ಬ (Sankranti Festival) ಆಚರಿಸಿದ ರೀತಿ ಹೇಗಿತ್ತು? ಎಂಬುದರ ಝಲಕ್ ಡಿಬಾಸ್ ಫ್ಯಾನ್ಸ್ ಪೇಜ್‌ನಲ್ಲಿ ಸದ್ದು ಮಾಡುತ್ತಿದೆ.

    ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಂಚ ಆರೋಗ್ಯದಲ್ಲಿ ಚೇತರಿಕೆ ಕಂಡ ಮೇಲೆ ‘ಡೆವಿಲ್’ ಚಿತ್ರೀಕರಣದಲ್ಲಿ ಅವರು ಭಾಗಿಯಾಗಲಿದ್ದಾರೆ.

  • ಜೈಲಿನಿಂದ ದರ್ಶನ್‌ ರಿಲೀಸ್‌ ಬೆನ್ನಲ್ಲೇ ಎಮೋಷನಲ್‌ ಪೋಸ್ಟ್‌ ಹಂಚಿಕೊಂಡ ಪುತ್ರ ವಿನೀಶ್

    ಜೈಲಿನಿಂದ ದರ್ಶನ್‌ ರಿಲೀಸ್‌ ಬೆನ್ನಲ್ಲೇ ಎಮೋಷನಲ್‌ ಪೋಸ್ಟ್‌ ಹಂಚಿಕೊಂಡ ಪುತ್ರ ವಿನೀಶ್

    ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್ (Darshan) ಬಳ್ಳಾರಿ ಜೈಲಿನಿಂದ ಬಿಡುಗಡೆಯಾದ ಹಿನ್ನೆಲೆ ಪುತ್ರ ವಿನೀಶ್ (Vinish Darshan) ರಿಯಾಕ್ಷನ್ ಕೊಟ್ಟಿದ್ದಾರೆ. ಕಿಂಗ್ ಇಮೋಜಿ ಹಾಕಿ ಅಪ್ಪನ ಆಗಮನದ ಸಂತಸವನ್ನು ಸೋಶಿಯಲ್‌ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ:ದರ್ಶನ್‌ಗೆ ಜಾಮೀನು ಸಿಕ್ಕ ಬೆನ್ನಲ್ಲೇ ವಿಜಯಲಕ್ಷ್ಮಿ ಟೆಂಪಲ್ ರನ್

    ದರ್ಶನ್ 6 ವಾರಗಳ ಕಾಲ ಮಧ್ಯಂತರ ಜಾಮೀನು (Bail) ಸಿಕ್ಕ ಹಿನ್ನೆಲೆ ಜೈಲಿನಿಂದ ರಿಲೀಸ್ ಆಗಿದ್ದಾರೆ. ಇದೇ ಖುಷಿಯಲ್ಲಿ ಕಿಂಗ್ ಇಮೋಜಿ ಹಾಕಿ ತಂದೆ ಮತ್ತು ಮಗನ ಬಾಂಧವ್ಯದ ಸಾಂಗ್ ಅನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ದರ್ಶನ್ ಪುತ್ರ ವಿನೀಶ್ ಹಂಚಿಕೊಂಡಿದ್ದಾರೆ. ತಂದೆಯ ಆಗಮನದ ಸಂಭ್ರಮದಲ್ಲಿದ್ದಾರೆ.

    ಇನ್ನೂ ನಾಳೆ (ಅ.31) ವಿನೀಶ್ ಹುಟ್ಟುಹಬ್ಬದ ಸಂಭ್ರಮ. ದೀಪಾವಳಿ ಹಬ್ಬ ಮತ್ತು ಹುಟ್ಟುಹಬ್ಬವನ್ನು ಎರಡನ್ನು ತಂದೆಯ ಜೊತೆ ವಿನೀಶ್ ಆಚರಿಸಿಕೊಳ್ಳಲಿದ್ದಾರೆ.

  • ದರ್ಶನ್ ಪುತ್ರನಿಗೆ ದೀಪಾವಳಿ ಗಿಫ್ಟ್- ತಂದೆ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ವಿನೀಶ್

    ದರ್ಶನ್ ಪುತ್ರನಿಗೆ ದೀಪಾವಳಿ ಗಿಫ್ಟ್- ತಂದೆ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ವಿನೀಶ್

    ಕೊಲೆ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದ ದರ್ಶನ್‌ಗೆ (Darshan) ಇಂದು (ಅ.30) 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕಿದೆ. ಇದರಿಂದ ದರ್ಶನ್ ಪುತ್ರನಿಗೆ ದೀಪಾವಳಿ ಸಂದರ್ಭದಲ್ಲಿ ಭರ್ಜರಿ ಗಿಫ್ಟ್ ಸಿಕ್ಕಿದೆ. ಅ.31ರಂದು ವಿನೀಶ್ (Vineesh Darshan) ಹುಟ್ಟುಹಬ್ಬವನ್ನು (Birthday) ತಂದೆಯ ಜೊತೆ ಆಚರಿಸುವ ಅವಕಾಶ ಸಿಕ್ಕಿದೆ. ಇದನ್ನೂ ಓದಿ:ಜಾಮೀನು ಸಿಕ್ಕ ಬೆನ್ನಲ್ಲೇ ದರ್ಶನ್ ಭೇಟಿಗೆ ಬಂದ ಪತ್ನಿ ವಿಜಯಲಕ್ಷ್ಮಿ

    ದರ್ಶನ್‌ಗೆ ಜಾಮೀನು ಸಿಕ್ಕಿರೋದು ಕುಟುಂಬಸ್ಥರಿಗೆ, ಫ್ಯಾನ್ಸ್‌ಗೆ ಖುಷಿ ಆಗಿದೆ. ಇದೇ ವೇಳೆ, ದರ್ಶನ್ ಪುತ್ರ ವಿನೀಶ್‌ಗೆ ಡಬಲ್ ಧಮಾಕ ಸಿಕ್ಕಂತಾಗಿದೆ. ಅ.31ರಂದು ವಿನೀಶ್ ಹುಟ್ಟುಹಬ್ಬ ಜೊತೆಗೆ ತಂದೆಯೊಂದಿಗೆ ದೀಪಾವಳಿ ಹಬ್ಬ ಆಚರಿಸುವ ಚಾನ್ಸ್ ಸಿಕ್ಕಿದೆ. ನಾಳೆ ತಂದೆಯ ಜೊತೆ ವಿನೀಶ್‌ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.

    ಅಂದಹಾಗೆ, ದರ್ಶನ್‌ಗೆ ಬೇಲ್ ಸಿಕ್ಕಿದ್ದಕ್ಕೆ ಕಾಮಾಕ್ಯ ದೇವಿಗೆ ವಿಜಯಲಕ್ಷ್ಮಿ ಧನ್ಯವಾದ ತಿಳಿಸಿದರು. ಸೋಶಿಯಲ್ ಮೀಡಿಯಾದಲ್ಲಿ ಕಾಮಾಕ್ಯ ದೇವಸ್ಥಾನದ ಫೋಟೋ ಶೇರ್‌ ಮಾಡಿ ಥ್ಯಾಂಕ್‌ಫುಲ್, ಗ್ರೇಟ್‌ಫುಲ್, ಬ್ಲೆಸ್ಡ್ ಎಂದು ವಿಜಯಲಕ್ಷ್ಮಿ ಬರೆದು ಸಂತಸ ವ್ಯಕ್ತಪಡಿಸಿದ್ದಾರೆ.

  • ನನ್​ ತಂದೆ ಬಗ್ಗೆ ನಿಂದಿಸಿದ್ದಕ್ಕೆ ಥ್ಯಾಂಕ್ಸ್ – ದರ್ಶನ್‌ ಪುತ್ರ ವಿನೀಶ್‌ ಭಾವುಕ ಪೋಸ್ಟ್‌!

    ನನ್​ ತಂದೆ ಬಗ್ಗೆ ನಿಂದಿಸಿದ್ದಕ್ಕೆ ಥ್ಯಾಂಕ್ಸ್ – ದರ್ಶನ್‌ ಪುತ್ರ ವಿನೀಶ್‌ ಭಾವುಕ ಪೋಸ್ಟ್‌!

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್‌ (Actor Darshan) ಅವರ ಪುತ್ರ ವಿನೀಶ್‌ (Vinish), ತಂದೆಯನ್ನು ನೆನೆದು ತಮ್ಮ ಇನ್‌ಸ್ಟಾಗ್ರಾಮ್‌ (Instagram Post) ಖಾತೆಯಲ್ಲಿ ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

    ನಾನು 15 ವರ್ಷದ ಹುಡುಗನಿದ್ದೇನೆ. ನನಗೂ ಮನಸ್ಸಿದೆ, ಭಾವನೆಗಳಿವೆ ಅನ್ನೋದನ್ನ ಪರಿಗಣಿಸದೇ ನನ್ನ ತಂದೆಯ ಬಗ್ಗೆ ಕೆಟ್ಟ ಕಾಮೆಂಟ್ಸ್ ಮತ್ತು ಆಕ್ಷೇಪಾರ್ಹ ಭಾಷೆಯಲ್ಲಿ ನಿಂದಿಸುತ್ತಿರುವವರಿಗೆ ಧನ್ಯವಾದಗಳು. ನನ್ನ ತಂದೆ ಮತ್ತು ತಾಯಿಯ ಬೆಂಬಲದ ಅಗತ್ಯವಿರುವ ಈ ಕಷ್ಟದ ಸಮಯದಲ್ಲಿಯೂ ನನ್ನನ್ನು ಶಪಿಸುವುದರಿಂದ ನೀವು ಬದಲಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

    ನಟರೂ ಆಗಿರುವ ಆರೋಪಿ ದರ್ಶನ್‌ ತೂಗುದೀಪ ವಿರುದ್ಧ ಕೇಳಿಬಂದಿರುವ ಕೊಲೆ ಆರೋಪ ಪ್ರಕರಣದಲ್ಲಿ ಕೆಲ ಪ್ರಭಾವಿಗಳು ದರ್ಶನ್ ರಕ್ಷಿಸಲು ಪ್ರಯತ್ನ ನಡೆಸಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಫನ್‌ ಕರೆಗಳನ್ನು ಮಾಡಿ ಒತ್ತಡ ಹೇರುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿವೆ. ಇದನ್ನೂ ಓದಿ: ಏನಿದು ಬಿಎಸ್‌ವೈ ವಿರುದ್ಧದ ಪೋಕ್ಸೊ ಕೇಸ್‌? – ಇಲ್ಲಿದೆ ನೋಡಿ ಟೈಮ್‌ಲೈನ್‌..

    ಈ ಬೆನ್ನಲ್ಲೇ ದರ್ಶನ್ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ನಡೆಗೆ ಬಿಜೆಪಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ. ನಾವು ಎಲ್ಲಿದೀವಿ? ಪಾಕಿಸ್ತಾನದಲ್ಲಿ ಇದೀವಾ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಮಾಧ್ಯಮ ನಿರ್ಬಂಧ, ಮಾಧ್ಯಮದವರ ಮೇಲಿನ ಹಲ್ಲೆ ಖಂಡನೀಯ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಪೊಲೀಸ್ ಠಾಣೆ ಬಳಿ ನಿಷೇಧಾಜ್ಞೆ ವಿಧಿಸಿದ್ದನ್ನು ಪಿ.ರಾಜೀವ್ ತೀವ್ರವಾಗಿ ಖಂಡಿಸಿದ್ದಾರೆ.

    ಈ ಎಲ್ಲಾ ಬೆಳವಣಿಗೆಯಿಂದ ರಾಜ್ಯ ಸರ್ಕಾರ ಮುಜುಗರಕ್ಕೀಡಾಗಿದೆ. ಈ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ಗೃಹ ಸಚಿವ ಪರಮೇಶ್ವರ್ ಹಿಂದೇಟು ಹಾಕಿದ್ದಾರೆ. ಅಭಿಮಾನಿಗಳು ಹೆಚ್ಚು ಬರಬಹುದು ಅಂತ ಪೊಲೀಸ್ರು ಹಾಗೆ ಮಾಡಿರಬಹುದು ಎಂದು ಡಿಸಿಎಂ ಹೇಳಿದ್ದಾರೆ. ಸಚಿವ ಹೆಚ್‌.ಕೆ ಪಾಟೀಲ್ ಮಾತ್ರ, ಇಂತಹ ಸ್ಥಿತಿ ಯಾಕೆ ಬಂತೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಟ್ರೇಲರ್‌ನಲ್ಲಿ ಆಕ್ಷೇಪಾರ್ಹ ಸಂಭಾಷಣೆಗಳಿವೆ: ‘ಹಮಾರೆ ಬಾರಹ್‌’ ಸಿನಿಮಾ ಬಿಡುಗಡೆಗೆ ಸುಪ್ರೀಂ ತಡೆ

  • 15ನೇ ವರ್ಷಕ್ಕೆ ಕಾಲಿಟ್ಟ ದರ್ಶನ್ ಪುತ್ರ: ವಿಭಿನ್ನವಾಗಿ ವಿಶ್ ಮಾಡಿದ ವಿಜಯಲಕ್ಷ್ಮಿ

    15ನೇ ವರ್ಷಕ್ಕೆ ಕಾಲಿಟ್ಟ ದರ್ಶನ್ ಪುತ್ರ: ವಿಭಿನ್ನವಾಗಿ ವಿಶ್ ಮಾಡಿದ ವಿಜಯಲಕ್ಷ್ಮಿ

    ಟ ದರ್ಶನ್ (Darshan) ಪುತ್ರ ವಿನೀಶ್ ಇಂದು 15ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇಂದು ದರ್ಶನ್ ಅಭಿಮಾನಿಗಳು ಮತ್ತು ಕುಟುಂಬ ವಿನೀಶ್ (Vinesh) ಅವರ ಹುಟ್ಟು ಹಬ್ಬವನ್ನು (Birthday) ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ವಿನೀಶ್ ತಾಯಿ ವಿಜಯಲಕ್ಷ್ಮಿ ಪುತ್ರನಿಗೆ ವಿಭಿನ್ನವಾಗಿ ಶುಭಾಶಯಗಳನ್ನು ತಿಳಿಸಿದ್ದಾರೆ. ಚಾರ್ಟಡೆಡ್  ಫ್ಲೈಟ್ ಮುಂದೆ ವಿನೀಶ್ ನಿಂತಿರುವ ಫೋಟೋವನ್ನೂ ಅದರ ಜೊತೆ ಶೇರ್ ಮಾಡಿದ್ದಾರೆ.

    ‘ನನ್ನ ಲಿಟಲ್ ಬಾಯ್ ಗೆ 15 ತುಂಬುತ್ತಿದೆ. ಅವನು ಬೆಳೆಯುತ್ತಿರುವುದನ್ನು ನೋಡಿದಾಗ ಅವನೊಂದಿಗಿನ ಹಳೆ ನೆನಪುಗಳೆಲ್ಲ ಮರುಕಳಿಸುತ್ತಿವೆ. ಚುರುಕಾದ, ಹಾಸ್ಯ ಪ್ರಜ್ಞೆಯ ಮತ್ತು ಸುಂದರ ಮೊಗದ ಮಿಶ್ರಣದಂತೆ, ತರುಣನಾಗಿ ಬೆಳೆಯುತ್ತಿದ್ದಾನೆ. ಅವನ ಉತ್ಸಾಹವನ್ನು ಬಣ್ಣಿಸಲು ಸಾಧ್ಯವಾಗುವುದೇ ಇಲ್ಲ’ ಎಂದು ವಿನೀಶ್ ವ್ಯಕ್ತಿತ್ವವನ್ನು ಹಲವು ಸಾಲುಗಳಲ್ಲಿ ವಿಜಯಲಕ್ಷ್ಮಿ (Vijayalakshmi) ಬರೆದುಕೊಂಡಿದ್ದಾರೆ.

     

    ಸೋಷಿಯಲ್ ಮೀಡಿಯಾದಲ್ಲೂ ವಿನೀಶ್ ಕುರಿತಾಗಿ ಹಲವಾರು ಪೋಸ್ಟುಗಳು ಹರಿದಾಡುತ್ತಿವೆ. ದರ್ಶನ್ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ವಿನೀಶ್ ಗೆ ಹುಟ್ಟು ಹಬ್ಬದ ಶುಭಾಶಯ ಕೋರುತ್ತಿದ್ದಾರೆ. ದರ್ಶನ್ ಜೊತೆ ಮತ್ತೆ ಮತ್ತೆ ಸಿನಿಮಾಗಳಲ್ಲಿ ನಟಿಸಲಿ ಎಂದು ಹಾರೈಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪರಿಸರ ಕಾಳಜಿ ಮೆರೆದ ದರ್ಶನ್ ಪತ್ನಿ-ಮಗ

    ಪರಿಸರ ಕಾಳಜಿ ಮೆರೆದ ದರ್ಶನ್ ಪತ್ನಿ-ಮಗ

    ಬೆಂಗಳೂರು: ಕೊರೊನಾ ಮಧ್ಯೆ ಗಣೇಶ ಹಬ್ಬದ ಪ್ರಯುಕ್ತ ಕನ್ನಡ ಚಿತ್ರರಂಗದ ನಟ-ನಟಿಯರು, ನಿರ್ದೇಶಕರು ತಮ್ಮ ಅಭಿಮಾನಿಗಳಿಗೆ ಶುಭಕೋರಿದ್ದಾರೆ. ಜೊತೆಗೆ ತಮ್ಮ ಮನೆಯಲ್ಲಿ ಪರಿಸರ ಸ್ನೇಹಿ ಗಣೇಶನ ವಿಗ್ರಹ ಕೂರಿಸಿ ಪೂಜೆ ಮಾಡುತ್ತಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ತಮ್ಮ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. “ಶ್ರೀ ಗೌರಿ ಸುತನಾದ ಶ್ರೀ ಸಿದ್ಧಿ ವಿನಾಯಕನು, ನಿಮ್ಮ ಜೀವನದ ಎಲ್ಲಾ ಅಡೆತಡೆಗಳನ್ನು ದೂರಗೊಳಿಸಿ, ಮಂಗಳಕರ ಆರಂಭವನ್ನು ನೀಡಲೆಂದು ಹಾರೈಸುತ್ತೇನೆ. ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಪರಿಸರ ಸ್ನೇಹಿ ಗೌರಿ ಗಣೇಶ ಮೂರ್ತಿಗಳನ್ನು ಬಳಸಿ ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸಿ” ಎಂದು ಹಬ್ಬಕ್ಕೆ ವಿಶ್ ಮಾಡಿದ್ದಾರೆ.

    ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಹ ಗಣೇಶ ಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ್ದಾರೆ. ಅಲ್ಲದೇ ಪುತ್ರ ವಿನೀಶ್ ಜೊತೆ ಚಿಕ್ಕ ಗಣೇಶನ ವಿಗ್ರಹವನ್ನು ಹಿಡಿದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋವನ್ನು ಟ್ವಿಟ್ಟರಿನಲ್ಲಿ ಹಂಚಿಕೊಳ್ಳುವ ಮೂಲಕ ವಿಜಯಲಕ್ಷ್ಮಿ ಪರಿಸರ ಸ್ನೇಹಿ ಗಣೇಶನ ಬಳಕೆಗೆ ಬೆಂಬಲ ಸೂಚಿಸಿದ್ದಾರೆ.

    ವಿಜಯಲಕ್ಷ್ಮಿ ಸ್ವತಃ ತಾವೇ ತಯಾರಿಸುವ ಗಣೇಶನನ್ನು ತಮ್ಮ ಮನೆಯಲ್ಲಿ ಕೂರಿಸಿ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. “ಸುಂದರವಾದ ಗಣೇಶ ಮೂರ್ತಿಯನ್ನು ತಯಾರಿಸಲು ಸುಲಭವಿದ್ದಾಗ ಏಕೆ ಖರೀದಿಸಬೇಕು? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ನಾಳಿನ ಆರೋಗ್ಯಕ್ಕಾಗಿ ಇಂದು ಪರಿಸರ ಸ್ನೇಹಿ ಗಣೇಶ ಬಳಸುವುದು ಉತ್ತಮ” ಎಂದು ಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ್ದಾರೆ.

    ಫೋಟೋದಲ್ಲಿ ದರ್ಶನ್ ಪತ್ನಿ ಮತ್ತು ಮಗ ವಿನೀಶ್ ಪ್ರತ್ಯೇಕವಾಗಿ ಎರಡು ಗಣೇಶನ ವಿಗ್ರಹ ತಯಾರಿಸಿದ್ದಾರೆ. ಈ ಎರಡರಲ್ಲಿ ಯಾವುದು ಚೆನ್ನಾಗಿದೆ ಎಂದು ವಿಜಯಲಕ್ಷ್ಮಿ ಅಭಿಮಾನಿಗಳಿಗೆ ತಮಾಷೆಯಾಗಿ ಪ್ರಶ್ನೆ ಕೇಳಿದ್ದಾರೆ.

  • ಬಾಟಲ್ ಕ್ಯಾಪ್ ಚಾಲೆಂಜ್‍ನಲ್ಲಿ ಎಲ್ರಿಗೂ ಸೆಡ್ಡು ಹೊಡೆದ ದರ್ಶನ್ ಪುತ್ರ: ವಿಡಿಯೋ

    ಬಾಟಲ್ ಕ್ಯಾಪ್ ಚಾಲೆಂಜ್‍ನಲ್ಲಿ ಎಲ್ರಿಗೂ ಸೆಡ್ಡು ಹೊಡೆದ ದರ್ಶನ್ ಪುತ್ರ: ವಿಡಿಯೋ

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಈಗ ಬಾಟಲ್ ಕ್ಯಾಪ್ ಚಾಲೆಂಜ್ ಸದ್ದು ಮಾಡುತ್ತಿದೆ. ಹಲವು ಕಲಾವಿದರು ಈ ಚಾಲೆಂಜ್ ಸ್ವೀಕರಿಸುತ್ತಿದ್ದು, ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪುತ್ರ ವಿನೀಶ್ ಕೂಡ ಈ ಚಾಲೆಂಜ್‍ನಲ್ಲಿ ಗೆದಿದ್ದಾರೆ.

    ಹೌದು. ಇತ್ತೀಚೆಗೆ ದರ್ಶನ್ ಅವರ ಪುತ್ರ ವಿನೀಶ್ ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿದ್ದಾರೆ. ಈ ಚಾಲೆಂಜ್ ಮಾಡಿ ಅವರು ಗೆದ್ದಿದ್ದಾರೆ. ವಿನೀಶ್ ಬಾಟಲ್ ಚಾಲೆಂಜ್ ಮಾಡಿದ ವಿಡಿಯೋವನ್ನು ಅವರ ತಾಯಿ ವಿಜಯಲಕ್ಷ್ಮಿ ದರ್ಶನ್ ಅವರು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ.

    ವಿಜಯಲಕ್ಷ್ಮಿ ತಮ್ಮ ಟ್ವಿಟ್ಟರಿನಲ್ಲಿ ವಿಡಿಯೋ ಹಾಕಿ, ಬಾಟಲ್ ಕ್ಯಾಪ್ ಚಾಲೆಂಜ್, ವಿನೀಶ್ ಎಂದು ಹ್ಯಾಶ್‍ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋಗೆ ಇದುವರೆಗೂ 2 ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ 479 ರೀ-ಟೀಟ್ ಪಡೆದುಕೊಂಡಿದೆ.

    ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಮೊದಲಿಗೆ ಈ ಬಾಟಲ್ ಕ್ಯಾಪ್ ಚಾಲೆಂಜ್ ಪ್ರಾರಂಭಿಸಿದ್ದರು. ಇದೀಗ ಸ್ಯಾಂಡಲ್‍ವುಡ್‍ಗೂ ಈ ಚಾಲೆಂಜ್ ಲಗ್ಗೆ ಇಟ್ಟಿದ್ದು, ನಟ ಅರ್ಜುನ್ ಸರ್ಜಾ, ಗೋಲ್ಡನ್ ಸ್ಟಾರ್ ಗಣೇಶ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ನಟಿ ರಚಿತಾ ರಾಮ್ ಈ ಚಾಲೆಂಜ್ ಸ್ವೀಕರಿಸಿ ಗೆದ್ದಿದ್ದರು.

    https://twitter.com/vijayaananth2/status/1147752015558148096

    ಏನಿದು ಚಾಲೆಂಜ್?
    ಒಂದು ಟೇಬಲ್ ಮೇಲೆ ಒಂದು ಬಾಟಲಿ ಇಡಬೇಕು. ಅದರ ಮುಚ್ಚಳವನ್ನು ಬಾಟಲ್ ಮೇಲೆ ಸಡಿಲವಾಗಿ ತಿರುಗಿ ಇಡಬೇಕು. ನಂತರ ಚಾಲೆಂಜ್ ಸ್ವೀಕರಿಸಿದವರು ಸ್ವಲ್ಪ ದೂರದಲ್ಲಿ ನಿಂತು ಒಂದು ಸುತ್ತು ತಿರುಗಿ ಕಾಲಿನಿಂದ ಬಾಟಲಿ ಕ್ಯಾಪನ್ನು ಒದಿಯಬೇಕು. ಈ ಪ್ರಕ್ರಿಯೆಯಲ್ಲಿ ಬಾಟಲಿ ಕೆಳಗೆ ಬೀಳಬಾರದು. ಹೀಗೆ ಬಾಟಲ್ ಬೀಳದಂತೆ ಕ್ಯಾಪ್ ಮಾತ್ರ ಕೆಳಗೆ ಬೀಳಿಸಿದರೆ ಈ ಚಾಲೆಂಜ್ ಗೆದ್ದಂತೆ.

  • ಮಗನಿಗೆ ಹಸುಹಾಲು ಕರೆಯೋ ಟ್ರೈನಿಂಗ್  ಕೊಡೋದ್ರಲ್ಲಿ ಡಿ ಬಾಸ್ ಬ್ಯುಸಿ!

    ಮಗನಿಗೆ ಹಸುಹಾಲು ಕರೆಯೋ ಟ್ರೈನಿಂಗ್ ಕೊಡೋದ್ರಲ್ಲಿ ಡಿ ಬಾಸ್ ಬ್ಯುಸಿ!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಮಗ ವಿನೀಶ್‍ಗೆ ಹಸುಹಾಲು ಕರೆಯುವ ಟ್ರೈನಿಂಗ್  ಕೊಡುವುದರಲ್ಲಿ ಫುಲ್ ಬ್ಯುಸಿಯಗಿದ್ದಾರೆ. ಮೈಸೂರಿನ ಫಾರ್ಮ್‍ಹೌಸ್‍ನಲ್ಲಿ ದರ್ಶನ್ ಮತ್ತು ವಿನೀಷ್ ಹಸುಹಾಲು ಕರೆಯುತ್ತಿರುವ ವಿಡಿಯೋವನ್ನು ಅವರ ಫ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

    ಮಂಡ್ಯ ಎಲೆಕ್ಷನ್ ಪ್ರಚಾರದಲ್ಲಿ ಸಿಕ್ಕಪಟ್ಟೆ ಬ್ಯುಸಿಯಾಗಿದ್ದ ದಚ್ಚು ಈಗ ಮಗನ ಜೊತೆ ಕಾಲ ಕಳೆಯುತ್ತಿದ್ದಾರೆ. ಡಿ ಬಾಸ್‍ನ ಹೊಸ ಸಿನಿಮಾ ರಾಬರ್ಟ್ ಸದ್ಯದಲ್ಲೇ ಸೆಟ್ಟೇರಲಿದ್ದು, ಈ ಗ್ಯಾಪ್‍ನಲ್ಲಿ ಮಗನ ಜೊತೆ ದಚ್ಚು ತಮ್ಮ ಸಮಯ ಕಳೆಯುತ್ತಿದ್ದಾರೆ. ಅಪ್ಪನ ರೀತಿಯೇ ಮಗ ವಿನೀಶ್ ಕೂಡ ಪ್ರಾಣಿ ಪ್ರೇಮಿ. ಆದ್ದರಿಂದ ಮಗನಿಗೆ ದರ್ಶನ್ ಹಸುವಿನ ಹಾಲು ಹೇಗೆ ಕರೆಯಬೇಕು ಎನ್ನುವುದನ್ನು ಕಲಿಸುತ್ತಿದ್ದರೆ, ಇತ್ತ ಮಗ ಕೂಡ ಆಸಕ್ತಿಯೊಂದಿಗೆ ತಂದೆಯ ಜೊತೆ ಟ್ರೈನಿಂಗ್ ಪಡೆಯುತ್ತಿದ್ದಾರೆ.

    ಲೋಕಸಭಾ ಚುನಾವಣೆ ಹಿನ್ನೆಲೆ ಮಂಡ್ಯ ಪ್ರಚಾರದ ವೇಳೆ ಅಭಿಮಾನಿ ಚಂದ್ರು ಅವರ ಮನೆಗೆ ದರ್ಶನ್ ಆಗಮಿಸಿದ್ದರು. ಈ ವೇಳೆ ಅಲ್ಲಿದ್ದ ಹಸುವಿನ ಹಾಲು ಕರೆದು ಅಭಿಮಾನಿಗಳ ಮನ ಗೆದ್ದಿದ್ದರು. ದಚ್ಚು ಸ್ವಲ್ಪವು ಮುಜುಗರ ಮಾಡಿಕೊಳ್ಳದೇ ಜನರ ನಡುವೆ ಖುಷಿಯಿಂದ ಹಸುವಿನ ಹಾಲು ಕರೆದು ನಾನು ಯಾವುದರಲ್ಲೂ ಕಮ್ಮಿ ಇಲ್ಲ ಎನ್ನುವುದನ್ನು ಸಾಬೀತು ಮಾಡಿದ್ದರು. ಈ ದೃಶ್ಯ ಕೂಡ ಸಖತ್ ವೈರಲ್ ಆಗಿತ್ತು.

    ಈ ಹಿಂದೆ ವಿನೀಶ್ ಅವರು ಸಾಕುತ್ತಿರುವ ಕುದುರೆ ಮೇಲೆ ಸವಾರಿ ಮಾಡಿದ ಫೋಟೋ ಸಖತ್ ವೈರಲ್ ಆಗಿತ್ತು. ವಿನೀಶ್ ಕುದುರೆ ಸವಾರಿ ಮಾಡುತ್ತಿದ್ದ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅಭಿಮಾನಿಗಳು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡಿತ್ತು.

  • ದರ್ಶನ್ ಪುತ್ರ ವಿನೀಶ್ ನಟನೆಯ ಹಾಡು ಬಿಡುಗಡೆ

    ದರ್ಶನ್ ಪುತ್ರ ವಿನೀಶ್ ನಟನೆಯ ಹಾಡು ಬಿಡುಗಡೆ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಚಿತ್ರ ಬಿಡುಗಡೆಯಾಗಿ 15 ದಿನಗಳ ಬಳಿಕ ಚಿತ್ರದ ವಿಡಿಯೋ ಹಾಡು ಬಿಡುಗಡೆ ಆಗಿದೆ.

    ಈ ಬಗ್ಗೆ ದರ್ಶನ್ ತಮ್ಮ ಟ್ವಿಟ್ಟರಿನಲ್ಲಿ, “ನಿಮ್ಮ ಪ್ರೀತಿಯ `ಯಜಮಾನ’ ಚಿತ್ರದ ಶಿವನಂದಿ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ನೀವು ತೋರಿರುವ ಪ್ರೀತಿ-ಪ್ರೋತ್ಸಾಹಕ್ಕೆ ನಾನು ಸದಾ ಚಿರಋಣಿ” ಎಂದು ಟ್ವೀಟ್ ಮಾಡಿ ವಿಡಿಯೋ ಲಿಂಕ್ ಹಾಕಿದ್ದಾರೆ.

    ಚಿತ್ರ ಬಿಡುಗಡೆ ಮುನ್ನವೇ ಈ ಹಾಡಿನ ಲಿರಿಕಲ್ ವಿಡಿಯೋ ಯೂಟ್ಯೂಬ್‍ನಲ್ಲಿ ಟ್ರೆಂಡಿಂಗ್ ಆಗಿತ್ತು. ಈಗ ಈ ಹಾಡು ಬಿಡುಗಡೆ ಆಗಿದ್ದು, ಈ ಹಾಡಿನಲ್ಲಿ ಸ್ಯಾಂಡಲ್‍ವುಡ್ ನಟರಾದ ಪ್ರಜ್ವಲ್ ದೇವರಾಜ್, ಪ್ರೇಮ್, ವಿನೋದ್ ಪ್ರಭಾಕರ್, ಶರಣ್, ಚಿರಂಜೀವಿ ಸರ್ಜಾ ಹಾಗೂ ದರ್ಶನ್ ಅವರ ಮಗ ವಿನೀಶ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

    ಈ ಹಾಡಿನಲ್ಲಿ ಚಿತ್ರದ ನಾಯಕನ ವರ್ಣನೆಯನ್ನು ಹೇಳಲಾಗಿದೆ. ಶಿವನಂದಿ ಪಾತ್ರದಲ್ಲಿ ಕಾಣಿಸಿಕೊಂಡ ದರ್ಶನ್ ಇಂಟ್ರಡಕ್ಷನ್ ಹಾಡು ಇದಾಗಿದ್ದು, ಸಿನಿಮಾ ಟೈಟಲ್ ಗೆ ತಕ್ಕಂತೆ ಯಜಮಾನನ ಗುಣಗಳನ್ನು ಹಾಡಿನ ರೂಪದಲ್ಲಿ ತೋರಿಸಲಾಗಿದೆ.

    ಯಾಜಮಾನ ಚಿತ್ರಕ್ಕೆ ದರ್ಶನ್‍ಗೆ ನಾಯಕಿಯಾಗಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪ್ ನಟಿಸಿದ್ದಾರೆ. ಬಿ.ಸುರೇಶ್ ಹಾಗೂ ಶೈಲಜಾ ನಾಗ್ ಅವರ ಮಿಡಿಯಾ ಹೌಸ್ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬಂದಿದೆ. ನಿರ್ದೇಶಕ ಪೊನ್ನುಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv